ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಿ ಹೆತ್ತವರ ಆಶೀರ್ವಾದ ಪಡೆದ ಪುತ್ತಿಲ

Posted by Vidyamaana on 2023-04-18 12:40:41 |

Share: | | | | |


ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಿ ಹೆತ್ತವರ  ಆಶೀರ್ವಾದ ಪಡೆದ  ಪುತ್ತಿಲ

ಪುತ್ತೂರು : ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಮಂಗಳೂರು ಜಿಲ್ಲಾ ಘಟಕದ ಕಾರ್ಯಕಾರಿಣಿ ಸದಸ್ಯ ಪ್ರವೀಣ್‌ ನೆಟ್ಟಾರು ರವರ ಮನೆಗೆ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ರವರು ಭೇಟಿ ನೀಡಿದರು.ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿದ ಪುತ್ತಿಲ ರವರು ಪ್ರವೀಣ್ ತಂದೆ-ತಾಯಿಯ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಹಲವು ಮಂದಿ ಉಪಸ್ಥಿತರಿದ್ದರು.

ಲವ್‌ ಮಾಡ್ತಿದ್ದ ಹುಡ್ಗಿನ ಬೆಂಗ್ಳೂರಿಗೆ ಕರೆಸಿ, ಸ್ನೇಹಿತ ಚೇತನ್ ನೊಂದಿಗೆ ಸೇರಿ ಅತ್ಯಾಚಾರ ಮಾಡಿದ ಪ್ರಿಯಕರ ಪುರುಷೋತ್ತಮ್

Posted by Vidyamaana on 2023-06-08 16:48:08 |

Share: | | | | |


ಲವ್‌ ಮಾಡ್ತಿದ್ದ ಹುಡ್ಗಿನ ಬೆಂಗ್ಳೂರಿಗೆ ಕರೆಸಿ, ಸ್ನೇಹಿತ ಚೇತನ್ ನೊಂದಿಗೆ ಸೇರಿ ಅತ್ಯಾಚಾರ ಮಾಡಿದ ಪ್ರಿಯಕರ ಪುರುಷೋತ್ತಮ್

ಬೆಂಗಳೂರು: ಜೀವನದಲ್ಲಿ ಇನ್ನುಮುಂದೆ ಜೊತೆಯಾಗಿ ಇರ್ತೀನಿ, ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೋತೀನಿ ಎಂದು ಭರವಸೆ ನೀಡಿದ್ದ ಪ್ರೀತಿಸಿದ ಹುಡುಗನನ್ನು ನಂಬಿಕೊಂಡು ತುಮಕೂರಿನಿಂದ ಬೆಂಗಳೂರಿಗೆ ಬಂದ ಹುಡುಗಿಯ ಮೇಲೆ ಪ್ರೀತಿಸಿದ ಯುವಕ ಹಾಗೂ ಆತನ ಸ್ನೇಹಿತ ಸೇರಿಕೊಂಡು ಅತ್ಯಾಚಾರ ಮಾಡಿರುವ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಹೆಣ್ಣು ಮಕ್ಕಳಿಗೆ ಅಥವಾ ಮಹಿಳೆಯರಿಗೆ ಎಲ್ಲಿಗೆ ಹೋದರೂ ರಕ್ಷಣೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತಂದೆ- ತಾಯಿಯನ್ನು ಬಿಟ್ಟು ಮತ್ತೊಬ್ಬ ವ್ಯಕ್ತಿಯನ್ನು ಹೆಣ್ಣು ನಂಬುವುದಾದರೆ ಅದು ಪ್ರೀತಿಸಿದ ಹುಡುಗ ಅಥವಾ ಗಂಡ ಮಾತ್ರ. ಆದರೆ, ಇಲ್ಲಿ ಜೀವನಪೂರ್ತಿ ನಿನ್ನ ಜೊತೆಗಿರ್ತೀನಿ ಎಂದು ಭರವಸೆ ನೀಡಿದ ಪ್ರೀತಿಸಿದ ಯುವಕನನ್ನು ನಂಬಿಕೊಂಡು ಬಂದ ಯುವತಿಯ ಮೇಲೆ ಅತ್ಯಾಚಾರ ನಡೆದು ಹೋಗಿದೆ. ಅದು ಕೂಡ, ಪ್ರೀತಿಸಿದ ಯುವಕ ತಾನು ಮಾತ್ರವಲ್ಲದೇ ತನ್ನ ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರ ಮಾಡಿದ್ದು, ಸಂತ್ರಸ್ತ ಯವತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ಗಿರಿನಗರದಲ್ಲಿ ಸ್ನೇಹಿತನ ಜೊತೆಗೂಡಿ ಅತ್ಯಾಚಾರ: ಯುವತಿಯ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ ಘಟನೆ ನಡೆದಿರುವುದು ಬೆಂಗಳೂರಿನ ಗಿರಿನಗರದ ಈರಣ್ಣಗುಡ್ಡೆಯಲ್ಲಿ. ಅತ್ಯಾಚಾರಕ್ಕೊಳಗಾದ ಯುವತಿ ತುಮಕೂರು ನಗರದವಳಾಗಿದ್ದು, ಪ್ಯಾರಾಮೆಡಿಕಲ್‌ ಅಭ್ಯಾಸ ಮಾಡುತ್ತಿದ್ದಳು. ಪ್ರೀತಿಸಿದ ಹುಡುಗಿಯ ಮೇಲೆ ಪ್ರಿಯಕರ ಹಾಗು ಸ್ನೇಹಿತನಿಂದ ಅತ್ಯಾಚಾರ ನಡೆದಿದೆ. ಪುರುಷೋತ್ತಮ್ ಹಾಗು ಚೇತನ್ ಬಂಧಿತ ಆರೋಪಿಗಳು. ಪುರುಷೋತ್ತಮ್ ಹಾಗು ಯುವತಿ ಒಂದು ವರ್ಷದಿಂದ ಲವ್ ಮಾಡುತ್ತಿದ್ದರು. ಮೂಲತಃ ತುಮಕೂರಿನ ನಿವಾಸಿಯಾದ ಯುವತಿ ಕಾಲೇಜಿನಲ್ಲಿ ಓದುತ್ತಿದ್ದು, ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು.

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

Posted by Vidyamaana on 2024-05-26 06:37:52 |

Share: | | | | |


ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ಐದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ತುಮಕೂರು, ಕೊಡುಗು ಜಿಲ್ಲೆಗಳ ಧಾರಾಕಾರ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಳಿಯದಲ್ಲಿ ನನ್ನ ಪ್ರಥಮ ವಜ್ರಾಭರಣ ಡೈಮಂಡ್ ಫೆಸ್ಟ್ ಗೆ ಚಾಲನೆ

Posted by Vidyamaana on 2024-03-21 19:48:39 |

Share: | | | | |


ಮುಳಿಯದಲ್ಲಿ ನನ್ನ ಪ್ರಥಮ ವಜ್ರಾಭರಣ ಡೈಮಂಡ್ ಫೆಸ್ಟ್ ಗೆ ಚಾಲನೆ

ಪುತ್ತೂರು: ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನವನ್ನು ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಮುಳಿಯ ಜ್ಯುವೆಲ್ಸ್‌ನಲ್ಲಿ ಈ ವರ್ಷದ ಡೈಮಂಡ್ ಫೆಸ್ಟ್‌ಗೆ ಮಾ.20ರಂದು ಚಾಲನೆ ನೀಡಲಾಯಿತು. ಎಲ್ಲರ ಮನೆಯಲ್ಲೂ ವಜ್ರಾಭರಣ ಇರಬೇಕೆಂಬ ಪರಿಕಲ್ಪಣೆಯೊಂದಿಗೆ ಮುಳಿಯ ಸಂಸ್ಥೆ " ನನ್ನ ಪ್ರಥಮ ವಜ್ರಾಭರಣ” ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.

ಪ್ರತಿಯೊಬ್ಬರಿಗೂ ವಜ್ರಾಭರಣ ನೀಡುವ ಮುಳಿಯದ ಕನಸು ನನಸಾಗಲಿ:ಗೋಪಾಲಕೃಷ್ಣ ಭಟ್

ದ್ವಾರಕ ಕನ್ ಸ್ಟ್ರಕ್ಷನ್ ಮಾಲಕ ಗೋಪಾಲಕೃಷ್ಣ ಭಟ್ ಡೈಮಂಡ್ ಫೆಸ್ಟ್‌ಗೆ ಚಾಲನೆ ನೀಡಿ ಮಾತನಾಡಿ ಸುಮಾರು ದಶಕಗಳ ಆರಂಭದಲ್ಲಿ ಪುತ್ತೂರಿನಲ್ಲಿ ಗ್ರಾಹಕರ ವಿಶ್ವಾಸಾರ್ಹತೆಯೊಂದಿಗಿರುವ ಮುಳಿಯ ಜ್ಯುವೆಲ್ಸ್ ಎಲ್ಲರ ಮನೆಮಾತಾಗಿದೆ. ಸಂಸ್ಥೆಯ ಉದ್ಯಮ ಯಶಸ್ಸು ಇನ್ನು ಮುಂದಕ್ಕೂ ಇನ್ನೂ ಹೆಚ್ಚಾಗಲಿ. ಅವರ ಪ್ರತಿ ಮನೆಯಲ್ಲೂ ವಜ್ರಾಭ ರಣ ಇರಬೇಕೆಂಬ ಉದ್ದೇಶ ಏನಿದೆಯೋ ಅದು ಈಡೇರಿಸುವಂತೆ ಮಹಾಲಿಂಗೇಶ್ವರ ದೇವರ ಅಶೀರ್ವಾದ ಇರಲಿ. ಅದೇ ರೀತಿ ಪುತ್ತೂರಿನ ಪ್ರತಿಯೊಬ್ಬರಿಗೂ ವಜ್ರಾಭರಣ ನೀಡುವ ಅವರ ಕನಸು ನಸಾಗಲಿ ಎಂದರು


ಪುತ್ತೂರು ಸಹಿತ ನಮ್ಮ ಸಂಸ್ಥೆಯ ಶಾಖೆಗಳಲ್ಲಿ ಆ ಭಾಗದ ಪ್ರತಿಯೊಬ್ಬ ಗ್ರಾಹಕರು ವಜ್ರಾಭರಣ ಹೊಂದಿರಬೇಕೆಂಬ ಯೋಚನೆಯಲ್ಲಿ ಮತ್ತು ನನಗೊಂದು ವಜ್ರದ ಆಭರಣ ಮಾಡಬೇಕೆಂಬ ಎಲ್ಲರ ಮನಸಿನ ಇಚ್ಚೆ ಈಡೇರಬೇಕೆಂಬ ನಿಟ್ಟಿನಲ್ಲಿ ಈ ಡೈಮಂಡ್ ಫೆಸ್ಟ್ ಆಯೋಜಿಸಿದ್ದೇವೆ. ಒಂದು ಕಾಲದಲ್ಲಿ ವಜ್ರವನ್ನು ಖರೀದಿಸುವುದು ಕಷ್ಟ ಎಂಬ ಭಾವನೆ ಇತ್ತು. ಇವತ್ತು ನಮ್ಮ ಆದಾಯದ ಮಿತಿ, ಜನರ ಜೀವನ ಶೈಲಿ ಉತ್ತಮವಾದಂತೆ ಇವತ್ತು ವಜ್ರ ಎಲ್ಲರಿಗೂ ಕೈಗೆಟಕುವ ಸೊತ್ತು ಆಗಿದೆ. ಮೈ ಡೈಮಂಡ್ ಫೆಸ್ಟ್‌ನಲ್ಲಿ ಸಂಸ್ಥೆಯಿಂದ ಮನೆಗಳಿಗೆ ವಿಶೇಷ ಕಾರ್ಡ್ ಅನ್ನು ಕೊಡುತ್ತೇವೆ. ಅದರಲ್ಲಿ ವಜ್ರವನ್ನು ಹೊಂದಿರದ ಅಥವಾ ಹೊಂದಿರುವ ಕುರಿತು ಗುರುತು ಮಾಡಿಕೊಂಡಾಗ ಇಲ್ಲದವರು ವಜ್ರವನ್ನು ಖರೀದಿ ಮಾಡುವ ವ್ಯವಸ್ಥೆ ಇದೆ. ಈ ಯೋಜನೆಯಲ್ಲಿ ಶೇ.90 ಕ್ಯಾಶ್ ಬ್ಯಾಕ್ ಮತ್ತು ಶೇ. 95 ಎಕ್ಸೆಂಜ್ ಆಫರ್ ನೀಡಲಾಗಿದೆ. ಮೈ ಫೆಸ್ಟ್ ಡೈಮಂಡ್ ಯೋಜನೆಯಲ್ಲಿ ಯಾರು ಪ್ರಥಮವಾಗಿ ವಜ್ರ ಖರೀದಿ ಮಾಡುತ್ತಾರೋ ಅವರಿಗೆ ವಜ್ರ ಹಿಡಿಯುವುದಿಲ್ಲ ಎಂದಾದರೆ ಎರಡು ತಿಂಗಳೊಳಗೆ ಅವರು ಚಿನ್ನದೊಂದಿಗೆ ಅದನ್ನು ಯಾಥಾ ಸ್ಥಿತಿಯಲ್ಲಿ ಬದಲಾವಣೆಗೆ ಅವಕಾಶ ನೀಡಲಾಗಿದೆ ಎಂದು ಕೇಶವಪ್ರಸಾದ್ ಮುಳಿಯ ಹೇಳಿದರು 


ವಜ್ರಕ್ಕೆ ಹೂಡಿಕೆ ಲಾಭದಾಯಕ:


ಮುಳಿಯ ಜ್ಯುವೆಲ್ಸ್‌ನ ಮುಖ್ಯ ಆಡಳಿತಾಧಿಕಾರಿ ಕೇಶವಪ್ರಸಾದ್ ಮುಳಿಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಜ್ರ ಕೈ ಗೆಟಕದು ಎಂಬ ಭಾವನೆ ಗ್ರಾಹಕರಲ್ಲಿದೆ. ಆದರೆ ಪ್ರಸ್ತುತ ಕಾಲದಲ್ಲಿ ಬೆಲೆಬಾಳುವ ಆಂಡ್ರಾಯ್ಡ್ ಮೊಬೈಲ್ ಖರೀದಿಸುವ ಸಂದರ್ಭದ ದರ ಮತ್ತೆ ಮತ್ತೆ ಕಡಿಮೆ ಆಗುತ್ತಾ ಹೋಗುತ್ತದೆ. ಆದರೆ ವಜ್ರವನ್ನು ಇವತ್ತು ಕೊಂಡರೆ ನಾಳೆ ಅದರ ದರ ಜಾಸ್ತಿಯಾಗುತ್ತದೆ ಹೊರತು ಕಡಿಮೆ ಆಗುವುದಿಲ್ಲ. ಇವತ್ತು ವಜ್ರಕ್ಕೆ ಹೂಡಿಕೆ ಮಾಡುವುದು ಲಾಭದಾಯಕ. ಈ ನಿಟ್ಟಿನಲ್ಲಿ ಎಲ್ಲರ ಮನೆಯಲ್ಲೂ ವಜ್ರಾಭರಣ ಇರಬೇಕೆಂಬ ಪರಿಕಲ್ಪನೆಯ ಜೊತೆಗೆ ನನ್ನ ಪ್ರಥಮ ವಜ್ರಾಭರಣ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದೇವೆ. ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು. ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್, ಮಾರುಕಟ್ಟೆ ಮ್ಯಾನೇಜ‌ರ್ ಸಂಜೀವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಂಕ‌ರ್, ರಾಜೇಶ್ ಅತಿಥಿಗಳನ್ನು ಗೌರವಿಸಿದರು. ಪೂಜಿತ ಪ್ರಾರ್ಥಿಸಿದರು. ಪ್ಲೋರ್ ಮೇನೆಜರ್ ಯತೀಶ್ ಸ್ವಾಗತಿಸಿ, ಪ್ಲೋ‌ರ್ ಮೇನೆಜ‌ರ್ ಆನಂದ್ ವಂದಿಸಿದರು. ಉಪಶಾಖಾ ಪ್ರಬಂಧಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ರಮೇಶ್ ಭಟ್, ಇಂಜಿನಿಯರ್ ಸತ್ಯನಾರಾಯಣ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಗುರು-ಶಿಷ್ಯರ ಸಮಾಗಮ; ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡ ಸಿಎಂ ಸಿದ್ದರಾಮಯ್ಯ ಭೇಟಿ

Posted by Vidyamaana on 2023-10-09 07:21:55 |

Share: | | | | |


ಗುರು-ಶಿಷ್ಯರ ಸಮಾಗಮ; ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡ ಸಿಎಂ ಸಿದ್ದರಾಮಯ್ಯ ಭೇಟಿ

ಬೆಂಗಳೂರು : ಬಿಜೆಪಿ- ಜೆಡಿಎಸ್​ ಮೈತ್ರಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಿರೀಕ್ಷಿತವಾಗಿ ಭೇಟಿಯಾದರು.ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ , ಮಂಗಳೂರಿಗೆ ತೆರಳಲು ಆಗಮಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಇವರ ಧರ್ಮಪತ್ನಿ ಚನ್ನಮ್ಮ ಅವರು ಅನಿರೀಕ್ಷಿತವಾಗಿ ಮುಖಾಮುಖಿಯಾದರು.ಈ ವೇಳೆ ಮುಖ್ಯಮಂತ್ರಿಗಳು ದೇವೇಗೌಡರು ಮತ್ತು ಚನ್ನಮ್ಮ ಅವರ ಆರೋಗ್ಯ ವಿಚಾರಿಸಿದರು.‌ ಬಳಿಕ ದೇವೇಗೌಡರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದರು. ಕೆಲ ಕಾಲ ಕುಶಲೋಪರಿ, ಮಾತುಕತೆ ಬಳಿಕ ಪರಸ್ಪರರು ಬೀಳ್ಕೊಟ್ಟರು.

BREAKING : ನಟ ದರ್ಶನ್ ಫಾರ್ಮ್ ಹೌಸ್ ಮ್ಯಾನೇಜ‌ರ್ ವಿಷ ಸೇವಿಸಿ ಆತ್ಮಹತ್ಯೆ

Posted by Vidyamaana on 2024-06-18 12:03:08 |

Share: | | | | |


BREAKING : ನಟ ದರ್ಶನ್ ಫಾರ್ಮ್ ಹೌಸ್ ಮ್ಯಾನೇಜ‌ರ್ ವಿಷ ಸೇವಿಸಿ ಆತ್ಮಹತ್ಯೆ

ಬೆಂಗಳೂರು  : ಕಾಣೆಯಾಗಿದ್ದ ನಟ ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ಶ್ರೀಧರ್‌ ಎಂಬಾತನ ಶವ ಪತ್ತೆಯಾಗಿದ್ದು,‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ನಟ ದರ್ಶನ್‌ ಫಾರ್ಮ್‌ ಹೌಸ್‌ ಮ್ಯಾನೇಜರ್‌ ಶ್ರೀಧರ್‌ (35) ವಿಷ ಸೇವಿಸಿ ಏಪ್ರಿಲ್‌ 17 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಬರೆದಿಟ್ಟಿರುವ ಡೆತ್‌ ನೋಟ್‌ ಕೂಡ ಪತ್ತೆಯಾಗಿದೆ.

Recent News


Leave a Comment: