ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ದರ್ಬೆಯಲ್ಲಿ ಫಿಸಿಯೋಗ ಸೆಂಟರ್ ಮಾ‌ರ್ಚ್ 15ರಂದು ಶುಭಾರಂಭ

Posted by Vidyamaana on 2024-03-14 17:13:35 |

Share: | | | | |


ದರ್ಬೆಯಲ್ಲಿ ಫಿಸಿಯೋಗ ಸೆಂಟರ್ ಮಾ‌ರ್ಚ್ 15ರಂದು ಶುಭಾರಂಭ

ಪುತ್ತೂರು: ಇಲ್ಲಿನ ದರ್ಬೆ ಹಿತಾ ಆಸ್ಪತ್ರೆ ಮುಂಭಾಗದಲ್ಲಿ ಆಯು ಫಿಸಿಯೋಗ ಸೆಂಟರ್ ಮಾ. 15ರಂದು ಶುಭಾರಂಭಗೊಳ್ಳಲಿದೆ.

ಫಿಸಿಯೋ ಥೆರಪಿ, ಯೋಗ ಥೆರಪಿ, ಪಂಚಕರ್ಮ ಥೆರಪಿ, ಲೀಚ್ ಥೆರಪಿ, ಅಕ್ಯುಪಂಕ್ಚರ್ ಥೆರಪಿ, ಕಪ್ಪಿಂಗ್ / ಹಿಜಾಮ ಥೆರಪಿ, ಟ್ರಾಕ್ಷನ್ ಮಸಾಜ್, ವ್ಯಾಕ್ಸ್ ಥೆರಪಿ, ಕಾಸ್ಮೆಟಿಕ್ ಥೆರಪಿ, ಸೈಕ್ಯಾಟ್ರಿಕ್ ಕೌನ್ಸೆಲಿಂಗ್ ಮೊದಲಾದ ಸೌಲಭ್ಯಗಳನ್ನು ಸಂಸ್ಥೆ ನೀಡಲಿದೆ.

ಉತ್ತಮ ಸೇವೆಗಾಗಿ ಸಮರ್ಥ ಫ್ಯಾಕಲ್ಟಿಯನ್ನು ಸಂಸ್ಥೆ ಹೊಂದಿದೆ. ಡಾ. ಕ್ಷಮಾ ಕಶ್ಯಪ್, ಡಾ. ಶಿಲ್ಪ ಭಟ್ ಜಿ.ಎಸ್., ಡಾ. ಸುಶ್ಮಿತಾ ಎಂ.ಎಂ., ನಿತೇಶ್ ಕುಮಾರ್, ಎನ್. ಪೂಜಾ, ತುಳಸಿ ಎನ್., ಸಾನಿಯ ಯು. ಫ್ಯಾಕಲ್ಟಿಯಲ್ಲಿದ್ದಾರೆ.


ಪ್ರತಿದಿನ ಬೆಳಿಗ್ಗೆ 5.45ರಿಂದ 6.45ರವರೆಗೆ ಹಾಗೂ ಸಂಜೆ 5.45 6.45ರವರೆಗೆ ಯೋಗ ಕ್ಲಾಸ್ ಕೂಡ ನಡೆಯಲಿದೆ. ಇದರೊಂದಿಗೆ ಫಿಸಿಯೋ ಥೆರಪಿ ಹೋಮ್ ವಿಸಿಟ್ ಸೌಲಭ್ಯವೂ ಲಭ್ಯ ಎಂದು ಡಾ. ಪ್ರದೀಪ್ ಕುಮಾರ್ ಮಾಧ್ಯಮ ಪ್ರಕಟಣೆ ತಿಳಿಸಿದ್ದಾರೆ 

8ನೇ ಸುತ್ತಿನ ಫಲಿತಾಂಶ ಮುನ್ನಡೆಯಲ್ಲಿ ಪುತ್ತಿಲ ರೈಗೆ ಪ್ರಬಲ ಪೈಪೋಟಿ ನೀಡುತ್ತಿರುವ ಪುತ್ತಿಲ

Posted by Vidyamaana on 2023-05-13 05:59:37 |

Share: | | | | |


8ನೇ ಸುತ್ತಿನ ಫಲಿತಾಂಶ  ಮುನ್ನಡೆಯಲ್ಲಿ ಪುತ್ತಿಲ  ರೈಗೆ ಪ್ರಬಲ ಪೈಪೋಟಿ ನೀಡುತ್ತಿರುವ ಪುತ್ತಿಲ

ಪುತ್ತೂರು : ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ – 31670, ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ – 32,226 ಮತ ಪಡೆದಿದ್ದಾರೆ.


ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ ಪಡೆದಿದ್ದಾರೆ.


ಅಶೋಕ್ ರೈ – 31670 ಮತಗಳು


ಆಶಾ ತಿಮ್ಮಪ್ಪ ಗೌಡ – 20,126 ಮತಗಳು


ಅರುಣ್ ಕುಮಾರ್ ಪುತ್ತಿಲ – 32,226 ಮತಗಳು

ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ಸಿದ್ದರಾಮಯ್ಯ

Posted by Vidyamaana on 2023-06-22 00:55:18 |

Share: | | | | |


ದೆಹಲಿಯಲ್ಲಿ ಅಮಿತ್ ಶಾ ಭೇಟಿ ಮಾಡಿದ ಸಿದ್ದರಾಮಯ್ಯ

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬುಧವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಅವರು ಭೇಟಿ ಮಾಡಿದ್ದಾರೆ. ಕೇಂದ್ರದ ನೀತಿಯಿಂದ ಬಡವರ ಆಹಾರಕ್ಕೆ ಸಮಸ್ಯೆ ಆಗಿರುವ ಸಂಗತಿಯನ್ನು ಚರ್ಚಿಸಿದರು.ಇದು ಸೌಹಾರ್ದ ಭೇಟಿಯಾಗಿದ್ದು, ಈ ಸಂದರ್ಭದಲ್ಲಿ ರಾಜ್ಯದ ಕೆಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಪ್ರಮುಖವಾಗಿ ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. " ಕೇಂದ್ರದ ಇತ್ತೀಚಿನ ನೀತಿ ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿದೆ. ಇದು ನೇರವಾಗಿ ಬಡವರ ಎರಡು ಹೊತ್ತಿನ ಊಟಕ್ಕೂ ತೊಂದರೆ ಕೊಡುತ್ತದೆ. ಆದ್ದರಿಂದ ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಕೊಡದಿರುವ ಧೋರಣೆ ಬದಲಾದರೆ ಒಳ್ಳೆಯದು" ಎನ್ನುವ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗುರುವಾರ ಬೆಳಗ್ಗೆ ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯಲ್ ಅವರ ಜತೆ ಚರ್ಚಿಸುವುದಾಗಿ ಅಮಿತ್ ಶಾ ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. ಗೃಹ ಸಚಿವರಿಗೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪದಿ ಮರ್ಮು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಅಧಿಕಾರಿಗಳು ಉದ್ಯಮಿಗಳಲ್ಲಿ ಹಣದ ಬೇಡಿಕೆ ನನ್ನ ಹೆಸರಿನಲ್ಲಿ ಹಣ ಕೇಳಿದರೆ ಕೊಡುವ ಅಗತ್ಯವಿಲ್ಲ: ಶಾಸಕ ಅಶೋಕ್ ರೈ

Posted by Vidyamaana on 2023-09-07 12:33:10 |

Share: | | | | |


ಅಧಿಕಾರಿಗಳು ಉದ್ಯಮಿಗಳಲ್ಲಿ ಹಣದ ಬೇಡಿಕೆ ನನ್ನ ಹೆಸರಿನಲ್ಲಿ ಹಣ ಕೇಳಿದರೆ ಕೊಡುವ ಅಗತ್ಯವಿಲ್ಲ: ಶಾಸಕ ಅಶೋಕ್ ರೈ

ಪುತ್ತೂರು: ನನ್ನ ಹೆಸರು ಹೇಳಿಕೊಂಡು ಕೆಲವರು ಸರಕಾರಿ ಇಲಾಖೆಯ ಅಧಿಕಾರಿಗಳ ಬಳಿ, ಉದ್ಯಮಿಗಳ ಬಳಿ ಹಣ ಕೇಳುತ್ತಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದ್ದು ನನ್ನ ಹೆಸರು ಹೇಳಿ ಯಾರಾದರು ಹಣ ಕೇಳಿದರೆ ಕೊಡಬೇಕಾದ ಅವಶ್ಯಕತೆಯಿಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ತಿಳಿಸಿದ್ದಾರೆ.

ಕಳೆದ ಹಲವಾರು ದಿನಗಳಿಂದ ಈ ರೀತಿಯ ವಿಚಾರಗಳು ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ನಾನು ಯಾವುದೇ ಅಧಿಕಾರಿಗಳ ಬಳಿಯಾಗಲಿ, ಉದ್ಯಮಿಗಳ ಬಳಿಯಾಗಲಿ ಚುನಾವಣೆಗೆ ಮುನ್ನವೂ ಹಣ ಕೇಳಿಲ್ಲ ಆ ಬಳಿಕವೂ ಕೇಳಿಲ್ಲ ಇನ್ನು ಕೇಳುವುದೂ ಇಲ್ಲ ಅದರ ಅಗತ್ಯತೆ ನನಗಿಲ್ಲ. ನನ್ನ ಹೆಸರಿನಲ್ಲಿ ಯಾರಾದರೂ ಅಧಿಕಾರಿಗಳ ಬಳಿ , ಉದ್ಯಮಿಗಳ ಬಳಿ ಹಣ ಕೇಳಿದರೆ ಅವರು ಕೊಡಬೇಕಾದ ಅಗತ್ಯವಿಲ್ಲ. ಶಾಸಕರು ಹೇಳಿರಬಹುದೇ ಎಂಬ ಅನುಮಾನವೇ ಬೇಡ ನಾನು ಯಾರಲ್ಲೂ ಹಣ ಕಲೆಕ್ಷನ್ ಮಾಡಲು ಹೇಳಿಯೂ ಇಲ್ಲ , ಮುಂದಕ್ಕೆ ಹೇಳುವುದೂ ಇಲ್ಲಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.

ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ಹೇಳಿ ವಂಚನೆ

Posted by Vidyamaana on 2023-11-05 08:44:53 |

Share: | | | | |


ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ಹೇಳಿ ವಂಚನೆ

ಉಡುಪಿ: ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಬೆಂಗಳೂರು ಮೂಲದ ಭಕ್ತರ ಕುಟುಂಬಕ್ಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ 30.73 ಲಕ್ಷ ರೂ. ಹಣ ಪಡೆದು ವಂಚಿಸಿದ ಘಟನೆ ನಡೆದಿದೆ. 


ಕೊಲ್ಲೂರು ನಿವಾಸಿ ಸುಧೀರ್‌ ಕುಮಾರ್‌ ಎಂಬಾತ ವಂಚನೆ ಎಸಗಿದ ವ್ಯಕ್ತಿ. ಬೆಂಗಳೂರಿನ ದಿಲ್ನಾ ತನ್ನ ಗಂಡ ಮತ್ತು ಕುಟುಂಬ ಸದಸ್ಯರ ಜತೆ ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದ ವೇಳೆ ತನ್ನ ಅಣ್ಣ ದಿಲೀಶ್‌ ಅವರಿಗೆ ಪರಿಚಯವಿದ್ದ ಸುಧೀರ್‌ ಕುಮಾರ್‌ ಎಂಬಾತ ಪರಿಚಯ ಆಗಿದ್ದ. ತಾನು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ನಂಬಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿ ಹಣ ಹಾಕುವಂತೆ ಕೇಳಿಕೊಂಡಿದ್ದ.


ಅಲ್ಲದೆ, ದಿಲ್ನಾ ಅವರ ತಾಯಿಗೆ ಸಂಬಂಧಿಸಿದ ಜಾಗದ ಖಾತೆ ಬದಲಾವಣೆ ಮಾಡಿಸುವುದಾಗಿ ಹೇಳಿ ದಿಲ್ನಾ ಮತ್ತು ಅವರ ಅಣ್ಣ ದಿಲೀಶ್‌ ಅವರಿಂದ ಒಟ್ಟು 30,73,600 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಖಾತೆ ಬದಲಾವಣೆಗಾಗಿ ತಾಯಿಯ ಸಹಿ ಹಾಕಿಕೊಡುವಂತೆ ಕೇಳಿದ್ದರಿಂದ ಸಂಶಯಗೊಂಡು ದೇವಸ್ಥಾನಕ್ಕೆ ಬಂದು ವಿಚಾರಿಸಿದಾಗ ಸುಧೀರ್‌ ಎನ್ನುವ ವ್ಯಕ್ತಿ ಆಡಳಿತ ಮಂಡಳಿಯ ಸದಸ್ಯನಲ್ಲವೆಂಬುದು ತಿಳಿದುಬಂದಿತ್ತು. ಇದರಿಂದ ದಿಲ್ನಾ ಅವರು ಸುಧೀರ್‌ ಕುಮಾರ್‌ ವಿರುದ್ಧ ಹಣ ವಂಚನೆ ಮಾಡಿರುವ ಕುರಿತು ಕೊಲ್ಲೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ 2000 ಅಡಿ ಪ್ರಪಾತಕ್ಕೆ ಉರುಳಿದ ಟಿಪ್ಪರ್

Posted by Vidyamaana on 2024-01-13 12:07:06 |

Share: | | | | |


ಚಾಲಕನ ನಿಯಂತ್ರಣ ತಪ್ಪಿ 2000 ಅಡಿ ಪ್ರಪಾತಕ್ಕೆ ಉರುಳಿದ ಟಿಪ್ಪರ್

ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ಸೋಮನ ಕಾಡು ಸಮೀಪ ಟಿಪ್ಪರ್ ಲಾರಿ 2000 ಅಡಿ ಪ್ರಪಾತಕ್ಕೆ ಬಿದ್ದು ಚಾಲಕ ಅದೃಷ್ಟವಶಾತ್ ಸಾವಿನ ದವಡೆಯಿಂದ ಪಾರಾದ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.ಮೂಡಿಗೆರೆಯಿಂದ ಚಾರ್ಮಾಡಿಗೆ ಹೋಗುತ್ತಿದ್ದ ಟಿಪ್ಪರ್ ಮಂಜು ಕವಿದ ವಾತಾವರಣವಿದ್ದರಿಂದ ದಾರಿ ಕಾಣದೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಗುದ್ದಿ ಪ್ರಪಾತಕ್ಕೆ ಉರುಳಿ ಬಿದ್ದಿದೆ ಉರುಳಿ ಬಿದ್ದ ರಭಸಕ್ಕೆ ಟಿಪ್ಪರ್ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ ಚಾಲಕನಿಗೆ ಸೊಂಟಕ್ಕೆ ತುಂಬಾ ಪೆಟ್ಟಾಗಿದ್ದು ಅಂಬುಲೆನ್ಸ್ ಮೂಲಕ ಉಜಿರೆಯ ಧರ್ಮಸ್ಥಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿಗಳು ಸಮಾಜ ಸೇವಕ ಆರಿಫ್ ಹಾಗೂ ಅಬ್ದುಲ್ ರೆಹಮಾನ್ ಕಾರ್ಯಚರಣೆಯಲ್ಲಿ ಇದ್ದರು.



Leave a Comment: