ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಸುದ್ದಿಗಳು News

Posted by vidyamaana on 2024-07-08 11:07:30 | Last Updated by Vidyamaana on 2024-07-08 11:07:30

Share: | | | | |


ಉಳ್ಳಾಲ ಖಾಝಿ ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ನಿಧನ

ಮಂಗಳೂರು(ಇಟ್ಟಿಕುಳಂ): ಉಳ್ಳಾಲ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಜಳ್ ನಿಧನರಾಗಿದ್ದಾರೆ. ಕಣ್ಣೂರಿನ ಇಟ್ಟಿಕುಳಂ ನಿವಾಸಿಯಾಗಿರುವ ಹಾಗೂ ಉಳ್ಳಾಲ ಖಾಝಿಯಾಗಿದ್ದ ಇವರು ಕೂರ ತಂಜಳ್ ಎಂದೇ ಪ್ರಸಿದ್ದರಾಗಿದ್ದರು. ಅಲ್ಪಕಾಲದಿಂದ ಅನಾರೋಗ್ಯದಿಂದಿದ್ದ ಅವರು ಇಂದು ಬೆಳಿಗ್ಗೆ ನಿಧರಾಗಿದ್ದಾರೆ.

ಮೃತರು ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಇಂದು ರಾತ್ರಿ 9

ಗಂಟೆ ವೇಳೆಗೆ ಕೂರ ಮಸೀದಿ ವಠಾರದಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ. ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಇಂದು ಸಂಜೆ 5 ಗಂಟೆಗೆ ಕೂರ ಮಸೀದಿಯಲ್ಲಿ ನಡೆಯಲಿರುವ ಜನಾಝಾನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ನಮ್ಮೂರಿನ ನಮ್ಮ ಅಭ್ಯರ್ಥಿ -ಇಂದು ಸಂಜೆ ತವರೂರಲ್ಲಿ ಅಶೋಕ್ ರೈ ಭರ್ಜರಿ ಪ್ರಚಾರಕ್ಕೆ ಸಿದ್ಧತೆ

Posted by Vidyamaana on 2023-05-04 10:01:41 |

Share: | | | | |


ನಮ್ಮೂರಿನ ನಮ್ಮ ಅಭ್ಯರ್ಥಿ -ಇಂದು ಸಂಜೆ ತವರೂರಲ್ಲಿ ಅಶೋಕ್ ರೈ ಭರ್ಜರಿ ಪ್ರಚಾರಕ್ಕೆ ಸಿದ್ಧತೆ

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಶೋಕ್ ಕುಮಾರ್ ರೈ ಅವರ ತವರೂರು ಕೋಡಿಂಬಾಡಿ, ಬೆಳ್ಳಾಪ್ಪಾಡಿಯಲ್ಲಿ ಭರ್ಜರಿ ಪ್ರಚಾರಕ್ಕೆ ಸಿದ್ಧತೆ ನಡೆಯುತ್ತಿದೆ.

ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಶೋಕ್ ಕುಮಾರ್ ರೈ ಅವರ ಹಿತೈಷಿಗಳು ಈ ಕಾರ್ಯಕ್ರಮ ಆಯೋಜಿಸಿದ್ದಾರೆ.

ಕೋಡಿಂಬಾಡಿ ಹೋಟೆಲ್ ತುಳುನಾಡ್ ಹತ್ತಿರ ಮೇ ೪ರಂದು ಸಂಜೆ ೬ರಿಂದ ಪ್ರಚಾರ ಸಭೆ ನಡೆಯಲಿದೆ. ಅಶೋಕ್ ಕುಮಾರ್ ರೈ ಅವರ ಮನೆಯಿರುವ ಕೋಡಿಂಬಾಡಿ ಪ್ರದೇಶದಲ್ಲಿ ಈ ಸಭೆ ಆಯೋಜನೆಯಾಗಿರುವುದರಿಂದ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಪುತ್ತೂರಿನ ಬಲನಾಡು ನೆಟ್ ವರ್ಕಿಂದ ಹೊರನಾಡು

Posted by Vidyamaana on 2023-06-16 11:20:44 |

Share: | | | | |


ಪುತ್ತೂರಿನ ಬಲನಾಡು ನೆಟ್ ವರ್ಕಿಂದ ಹೊರನಾಡು

ಪುತ್ತೂರು: ಹೇಳಿಕೊಳ್ಳಲು ಪುತ್ತೂರು ಪೇಟೆಯ ತೀರಾ ಸಮೀಪದ ಗ್ರಾಮ. ಆದರೆ ಇಂದಿಗೆ ಅಗತ್ಯಾತಿ ಅಗತ್ಯ ಎನಿಸಿಕೊಳ್ಳುವ ನೆಟ್ ವರ್ಕೇ ಇಲ್ಲಿಲ್ಲ. ಹಾಗಾಗಿ ಇದು ನೆಟ್ ವರ್ಕ್ ವಿಚಾರದಲ್ಲಿ ಕುಗ್ರಾಮ ಎಂದೇ ಹೇಳಬಹುದು.

ಈ ಗ್ರಾಮದ ಹೆಸರು ಬಲ್ನಾಡು. ಒಂದು ಕಾಲದ ಬಲ ನಾಡು. ಅಂದರೆ ಬಲ್ಲಾಳರು ಅಧಿಕಾರ ನಡೆಸುತ್ತಿದ್ದ ಕೇಂದ್ರಸ್ಥಾನವಿದು. ಆದ್ದರಿಂದಲೇ ಇದು ಬಲಯುತವಾದ ನಾಡು. ಅಂದು ಅಧಿಕಾರದಲ್ಲಿ ಮೆರೆದ ನಾಡು, ಇಂದು ಮೂಲಸೌಕರ್ಯ ವಂಚಿತವಾಗಿದೆ.

ತುರ್ತು ಸಂದೇಶ ರವಾನಿಸಬೇಕಿದ್ದರೂ ಫೋನ್ ಮಾಡುವಂತಿಲ್ಲ. ರಾತ್ರಿ ಹೊತ್ತಾದರೂ ಸರಿ, ಮಾತನಾಡಬೇಕು ಎಂದರೆ ಬಾಂಬ್ ಸ್ಕ್ವಾಡ್ ನಂತೆ ಸಿಗ್ನಲ್ ಹುಡುಕುತ್ತಾ ಹೋಗಬೇಕು. ಆನ್ ಲೈನ್ ನಂಬಿಕೊಂಡು ಕ್ಲಾಸ್ ತೆಗೆದುಕೊಂಡರಂತೂ ನಾಪಾಸೇ ಗತಿ. ಪ್ರೇಮಿಗಳ ವಿರಹ ವೇದನೆಯಂತೂ ಹೇಳತೀರದು. ಹೀಗೇ ಇಲ್ಲಿನ ಜನರ ಕಷ್ಟ ಒಂದೇ ಎರಡೇ.

ಬಲ್ನಾಡು ಗ್ರಾಮದಲ್ಲಿ ಘಟಾನುಘಟಿ ನಾಯಕರಿದ್ದಾರೆ. ರಾಜಕೀಯದಲ್ಲೂ ಉನ್ನತ ಸ್ಥಾನ ಅಲಂಕರಿಸಿದವರಿದ್ದಾರೆ. ಆದರೆ ಇವರನ್ನು ಸಂಪರ್ಕಿಸಬೇಕಿದ್ದರೂ, ಹರಸಾಹಸ ಪಡಬೇಕು. ಎಲ್ಲದಕ್ಕೂ ಮೂಲಕಾರಣ ನೆಟ್ ವರ್ಕ್ ಸಮಸ್ಯೆ. ಹಾಗಾಗಿ ಬಲನಾಡಾದರೂ ನೆಟ್ ವರ್ಕಿಂದ ಹೊರನಾಡಾಗಿ ಪರಿಣಮಿಸಿದೆ. ಇದಕ್ಕೆ ಪರಿಹಾರ ನೀಡುವವರು ಯಾರು? ಸಂಬಂಧಪಟ್ಟವರು ನ ಹರಿಸುವಿರಾ.

ಪುತ್ತೂರಿಗೆ ಬಂತುMost Expected ಹ್ಯುಂಡೈ ಎಕ್ಸ್ ಟರ್

Posted by Vidyamaana on 2023-07-14 06:18:39 |

Share: | | | | |


ಪುತ್ತೂರಿಗೆ ಬಂತುMost Expected  ಹ್ಯುಂಡೈ ಎಕ್ಸ್ ಟರ್

ಪುತ್ತೂರು: ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) ತನ್ನ ಬಹುನಿರೀಕ್ಷಿತ ಹ್ಯುಂಡೈ ಎಕ್ಸ್‌ಟರ್ (Hyundai Exter) ಮೈಕ್ರೋ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರನ್ನು ಪುತ್ತೂರಿನ ಜನರಿಗೆ ಪರಿಚಯಿಸುವ ಹಿನ್ನೆಲೆಯಲ್ಲಿ ಜುಲೈ 14 ಶುಕ್ರವಾರ ಸಂಜೆ  4 ಗಂಟೆಗೆ ದರ್ಬೆಯಲ್ಲಿರುವ ಕಾಂಚನ‌ ಹುಂಡೈ ಶೋರೂಂನಲ್ಲಿ ಖ್ಯಾತ ಯೂಟ್ಯೂಬರ್ ಧನ್ರಾಜ್ ಆಚಾರ್ ಬಿಡುಗಡೆಗೊಳಿಸಲಿದ್ದಾರೆ.

ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5,99,900 ಆಗಿದೆ. ಈ ಹೊಸ ಹ್ಯುಂಡೈ ಎಕ್ಸ್‌ಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್, ಸಿಟ್ರನ್ ಸಿ3 ಮತ್ತು ಮಾರುತಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಇತ್ತೀಚೆಗೆ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಹ್ಯುಂಡೈನ ಘಟಕದಲ್ಲಿ ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ. ಹೊಸದಾಗಿ ಬಿಡುಗಡೆಯಾದ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ಕುರಿತು ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿಗಳು ಇಲ್ಲಿದೆ.


ಬೆಲೆ ರೂಪಾಂತರಗಳು: ಹೊಸ ಹ್ಯುಂಡೈ ಎಕ್ಸ್‌ಟರ್ ಮೈಕ್ರೋ-ಎಸ್‌ಯುವಿಯು EX , EX(O) , S , S (O) , SX , SX(O), ಮತ್ತು SX(O) Connect ಎಂಬ 7  ಟ್ರಿಮ್ ಹಂತಗಳಲ್ಲಿ ಹೊಸ ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿಯ ಆರಂಭಿಕ ಬೆಲೆಯು ರೂ.5,99,900 ಆದರೆ, ಇದರ ಟಾಪ್ ಸ್ಪೆಕ್ ಮಾದರಿಗೆ ರೂ.9.31,990 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.ಎಂಜಿನ್: ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನಲ್ಲಿ 1.2-ಲೀಟರ್, 4-ಸಿಲಿಂಡರ್ ಎಂಜಿನ್‌ನೊಂದಿಗೆ ಬಂದಿದೆ. ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಪೆಟ್ರೋಲ್ ರೂಪದಲ್ಲಿ, ಹುಂಡೈ ಎಕ್ಸ್‌ಟರ್‌ನ ಎಂಜಿನ್ 83 bhp ಪವರ್ ಮತ್ತು 114 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.ಎಕ್ಸ್‌ಟರ್ ಕಾರಿನ CNG ಆವೃತ್ತಿಯು 69bhp ಪವರ್ ಮತ್ತು 95 Nm ನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಕ್ಸ್‌ಟರ್ ಪೆಟ್ರೋಲ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‌ಟಿ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ. ಆದರೆ ಸಿಎನ್‌ಜಿ ಆವೃತ್ತಿಯಲ್ಲಿ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ನೀಡಲಾಗಿದೆ. ಎಕ್ಸ್‌ಟರ್ ಪೆಟ್ರೋಲ್ ಮಾದರಿಯು 19.4 ಕಿ.ಮೀ ಮೈಲೇಜ್ ನೀಡಿದರೆ, AMT ಮಾದರಿ 19.2 ಕಿ.ಮೀ ಮೈಲೇಜ್ ನೀಡುತ್ತದೆ.ಇನ್ನು CNG ಆವೃತ್ತಿಯು 27.1 ಕಿ.ಮೀ ಮೈಲೇಜ್ ನೀಡುತ್ತದೆ.


ವಿನ್ಯಾಸ:ಈ ಹೊಸ ಹ್ಯುಂಡೈ ಎಕ್ಸ್‌ಟರ್ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕಾರಿನ ಮುಂಭಾಗ ಪ್ಯಾರಾಮೆಟ್ರಿಕ್ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಕ್ಲಾಮ್‌ಶೆಲ್ ಬಾನೆಟ್ ಮತ್ತು ಎಚ್ ಆಕಾರದ ಎಲ್‌ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿವೆ. ಇನ್ನು ಈ ಮೈಕ್ರೋ ಎಸ್‍ಯುವಿಗೆ ಸುಲಭವಾಗಿ ಪ್ರವೇಶಿಸಲು ಮತ್ತು ಹೊರಬರಲು ಡೋರುಗಳು ವಿಶಾಲವಾಗಿ ತೆರೆದುಕೊಳ್ಳುತ್ತವೆ.ಬಣ್ಣಗಳ ಆಯ್ಕೆ: ಹ್ಯುಂಡೈ ಎಕ್ಸ್‌ಟರ್ ಕಾರ 6 ಮೊನೊಟೋನ್ ಮತ್ತು 3 ಡ್ಯುಯಲ್-ಟೋನ್ ಬಾಹ್ಯ ಬಣ್ಣ ಆಯ್ಕೆಗಳಲ್ಲಿ ನೀಡುತ್ತಿದೆ. ಈ ಬಣ್ಣದ ಆಯ್ಕೆಗಳಲ್ಲಿ, ರೇಂಜ್ ಕಾಫಿ ಮತ್ತು ಕಾಸ್ಮಿಕ್ ಬ್ಲೂ ಬಣ್ಣದ ಆಯ್ಕೆಗಳು ಹೊಸದಾಗಿ ಪರಿಚಯಿಸಲಾಗಿವೆ. ಗ್ರಾಹಕರು ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.


ಫಿಚರ್ಸ್: ಈ ಎಕ್ಸ್‌ಟರ್ ಕಾರಿನಲ್ಲಿ ಕೆಲವು ವಿಭಾಗ-ಮೊದಲ ಫೀಚರ್ಸ್ ಗಳಲ್ಲಿ, ಅಂತರ್ನಿರ್ಮಿತ ಡ್ಯಾಶ್‌ಕ್ಯಾಮ್, ಶಾರ್ಕ್ ಫಿನ್ ಆಂಟೆನಾ, ಫುಟ್‌ವೆಲ್ ಲೈಟಿಂಗ್, ಪ್ಯಾಡಲ್ ಶಿಫ್ಟರ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಆನ್‌ಬೋರ್ಡ್ ನ್ಯಾವಿಗೇಷನ್ ಮತ್ತು ಹೆಚ್ಚಿನವು ಸೇರಿವೆ. ಇತರ ಗಮನಾರ್ಹ ವೈಶಿಷ್ಟ್ಯಗಳೆಂದರೆ 4.2-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, Apple CarPlay ಮತ್ತು Android Auto ಜೊತೆಗಿನ 8-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್ ಅನ್ನು ಹೊಂದಿದೆ.


ಇದರೊಂದಿಗೆ ಪುಶ್-ಬಟನ್ ಸ್ಟಾರ್ಟ್, ಕೂಲ್ಡ್ ಗ್ಲೋವ್‌ಬಾಕ್ಸ್, ಹಿಂಭಾಗದ AC ವೆಂಟ್‌ಗಳು ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಹೊಂದಿದೆ. ಈ ಮಾದರಿಯು ಡ್ರೈವರ್, ಪ್ಯಾಸೆಂಜರ್, ಕರ್ಟನ್ ಮತ್ತು ಸೈಡ್ ಏರ್‌ಬ್ಯಾಗ್‌ಗಳು ಸೇರಿದಂತೆ ಆರು ಏರ್‌ಬ್ಯಾಗ್‌ಗಳನ್ನು ಹೊಂದಿರುವ ದೇಶದ ಮೊದಲ ಸಬ್-ಫೋರ್-ಮೀಟರ್ ಎಸ್‌ಯುವಿ ಆಗಲಿದೆ. ಒಟ್ಟಾರೆಯಾಗಿ, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), VSM ಮತ್ತು HAC (ಹಿಲ್ ಅಸಿಸ್ಟ್ ಕಂಟ್ರೋಲ್) ಸೇರಿದಂತೆ 26 ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.

ಹೆಚ್ಚಿನ ವಿವರ /ಮಾಹಿತಿಗಾಗಿ ಸಂಪರ್ಕಿಸಿ.....

RANJITH

Branch Manager

+91 97408 73450

Afwan

Sales Consultant M +91 9480389310

Kanchana Automobiles Private Limited. Opp St. Philomena School, Darbe, Puttur-574201 www.kanchana.hyundaimotor.in Hyundai Helpline :1800-1024645, 1800-114645

ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವುದು ತಪ್ಪು

Posted by Vidyamaana on 2023-07-28 14:57:50 |

Share: | | | | |


ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವುದು ತಪ್ಪು

ಬೆಂಗಳೂರು: ಸಿದ್ದರಾಮಯ್ಯ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರಿಗೆ ಸ್ಟೇಷನ್ ಜಾಮೀನು ಲಭಿಸಿದೆ.  


ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ ಬಳಿಕ ಶಕುಂತಲಾ ನಟರಾಜ್ ಅವರನ್ನು ಠಾಣಾ ಜಾಮೀನು(ಸ್ಟೇಷನ್ ಜಾಮೀನು) ನೀಡಿ ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.  


ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಚಿತ್ರೀಕರಣದ ಬಗ್ಗೆ ಟ್ವೀಟ್ ಮಾಡಿದ್ದ ಶಕುಂತಲಾ, “ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್​ನವರ ಪ್ರಕಾರ ಮಕ್ಕಳಾಟವಂತೆ. ಸಿದ್ದರಾಮಯ್ಯನವರ ಸೊಸೆ ಅಥವಾ ಹೆಂಡ್ತಿ ವಿಡಿಯೋವನ್ನು ಇದೇ ರೀತಿ ಮಾಡಿದ್ದಿದ್ರೆ ಅದನ್ನು ಮಕ್ಕಳಾಟ ಅಂತ ಒಪ್ಕೋತೀರಾ?” ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹನುಮಂತರಾಯ ಎಂಬವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಜು.27ರಂದು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಶಕುಂತಲಾ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು.ಶಕುಂತಲಾ ನಟರಾಜ್ ಅವರನ್ನು ಇಂದು ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಸ್ವೇಷನ್ ಜಾಮೀನಿನ ಮೇಲೆ ಮನೆಗೆ ಕಳುಹಿಸಿದ್ದಾರೆ.

‘ಸಿಎಂ ಕುಟುಂಬದ ಮಹಿಳೆಯರ ಬಗ್ಗೆ ವೈಯಕ್ತಿಕವಾಗಿ ಆ ರೀತಿ ಸೋಷಿಯಲ್ ಮೀಡಿಯಾದಲ್ಲಿ ಬರೆದಿರುವುದು ತಪ್ಪು. ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ’ ಎಂದು ಠಾಣೆಯಲ್ಲಿ ಶಕುಂತಲಾ ನಟರಾಜ್ ತಪ್ಪೊಪ್ಪಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಮತ್ತೆ ಬಂದಿದೆ ಒಂಭತ್ತು ದಿನಗಳ ಆಟಿ ಸೇಲ್

Posted by Vidyamaana on 2023-08-07 03:55:21 |

Share: | | | | |


ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಮತ್ತೆ ಬಂದಿದೆ ಒಂಭತ್ತು ದಿನಗಳ ಆಟಿ ಸೇಲ್

ಪುತ್ತೂರು:ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‌ನ ಪುತ್ತೂರು ಹಾಗೂ ಸುಳ್ಯ ಚಿನ್ನಾಭರಣ ಮಳಿಗೆಗಳಲ್ಲಿ ಆಗಸ್ಟ್ 7ರಿಂದ 15 ರವರೆಗೆ ‘ಆಟಿ ಸೇಲ್’ ಆಯೋಜಿಸಲಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷವಾಗಿ ಪುತ್ತೂರು ಮತ್ತು ಸುಳ್ಯ ಮಳಿಗೆಯಲ್ಲಿ ಈ ‘ಆಟಿ ಸೇಲ್’ ನ ಕೊಡುಗೆಯಾಗಿ ಚಿನ್ನಾಭರಣಗಳ ಪ್ರತೀ ಗ್ರಾಂ ಮೇಲೆ ರೂ.100 ರಿಯಾಯಿತಿ, ವಜ್ರಾಭರಣಗಳ ಪ್ರತೀ ಕ್ಯಾರೆಟ್ ಮೇಲೆ ರೂ.5,000ದವರೆಗೆ ರಿಯಾಯಿತಿ, ಬೆಳ್ಳಿಯ ಆಭರಣಗಳ ಮೇಲೆ ಪ್ರತಿ ಕಿಲೋ ಗ್ರಾಂಗೆ ರೂ.2,000 ರಿಯಾಯಿತಿ ಇದೆ.

ಪುತ್ತೂರಿನಲ್ಲಿ 6,000 ಚದರಡಿ ಬಹುಮಹಡಿ ಮಳಿಗೆಯಲ್ಲಿ ಝಗಮಗಿಸುವ ವಿನೂತನ ಶೈಲಿಯ ಚಿನ್ನಾಭರಣಗಳ ಶ್ರೇಣಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಸಾವಿರಾರು ಹೊಸ ಹೊಸ ಬಗೆಯ ವಿನ್ಯಾಸದ ನೆಕ್ಲೆಸ್ ಗಳು, ಪ್ರಾಚಿ ಎಂಬ ಹೆಸರಿನ ಆಂಟಿಕ್ ಆಭರಣಗಳು, ವಜ್ರಾಭರಣಗಳು, ಮಕ್ಕಳ, ಮಹಿಳೆಯರ ಹಾಗೂ ಪುರುಷರ ನಾನಾ ಅಭಿರುಚಿಗೆ ಒಪ್ಪುವ ಆಭರಣಗಳ ಅಪೂರ್ವ ಸಂಗ್ರಹ ಇಲ್ಲಿದೆ.

ವಿಶಾಲವಾದ ವಾಹನ ಪಾರ್ಕಿಂಗ್, ಸಿಬ್ಬಂದಿಗಳಿಂದ ನಗುಮೊಗದ ಸೇವೆ, ಸಂಪೂರ್ಣ ಪಾರದರ್ಶಕ ವ್ಯವಹಾರ, ನ್ಯಾಯೋಚಿತ ತಯಾರಿಕಾ ವೆಚ್ಚ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‌ನ ವೈಶಿಷ್ಟ್ಯ. ಎಲ್ಲಾ ಪೀಳಿಗೆಯ ಅಭಿರುಚಿಗೆ ತಕ್ಕಂತೆ ಚಿನ್ನದ ಆಭರಣಗಳ ವಿಶಿಷ್ಟ ಕಲೆಕ್ಷನ್ ಇಲ್ಲಿದೆ.

ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಆಭರಣಗಳ ಆರಾಮದಾಯಕ ಆಯ್ಕೆಗಾಗಿ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳಿಗೆ ಪ್ರತ್ಯೇಕ ವಿಭಾಗಗಳಿವೆ. ಗ್ರಾಹಕರ ಅನುಕೂಲಕ್ಕಾಗಿ ಪುತ್ತೂರು ಮಳಿಗೆ ಭಾನುವಾರಗಳಂದು ಕೂಡಾ ತೆರೆದಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ಹೆಚ್‌ಯುಐಡಿ ಮುದ್ರಿತ ಆಭರಣಗಳು: ಸಾಮಾನ್ಯ ಗ್ರಾಹಕನಿಗೂ ಚಿನ್ನಾಭರಣಗಳ ಶುದ್ಧತೆ, ತೂಕ ಮತ್ತು ಮೂಲವನ್ನು ನೇರವಾಗಿ ತಿಳಿದುಕೊಳ್ಳುವ ಸಲುವಾಗಿ ಭಾರತ ಸರಕಾರ ಜಾರಿಗೊಳಿಸಿದ ಹೆಚ್ ಯುಐಡಿ (hallmark unique identification) ಆಭರಣಗಳು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‌ನಲ್ಲಿದೆ.

huid ಎಂಬುದು ಎಲ್ಲಾ ಚಿನ್ನದ ಆಭರಣಗಳು 6 ಅಂಕಿಗಳ ಆಲ್ಫಾನ್ಯೂಮೆರಿಕ್ ವಿಶಿಷ್ಟ ಗುರುತಿನ ಕೋಡನ್ನು ಹೊಂದಿರುವುದಾಗಿದೆ. ಸ್ವರ್ಣೋದ್ಯಮದಲ್ಲಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ ಆರಂಭದಿಂದಲೂ ಪಾರದರ್ಶಕ ವ್ಯವಹಾರಕ್ಕೆ ಮನಸೋತ ಗ್ರಾಹಕರು ಇಂದಿಗೂ ಜಿ.ಎಲ್.ನಲ್ಲೇ ಚಿನ್ನಾಭರಣ ಖರೀದಿಸಿ ಸಂತೃಪ್ತರಾಗುತ್ತಿದ್ದಾರೆ.

ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ರೈ ರಾಯಚೂರಿನ ಸಿರಿವಾರಕ್ಕೆ ವರ್ಗಾವಣೆ

Posted by Vidyamaana on 2023-07-04 04:28:04 |

Share: | | | | |


ಪುತ್ತೂರು ಮೂಲದ ತಹಶೀಲ್ದಾರ್ ಅಜಿತ್ ರೈ ರಾಯಚೂರಿನ ಸಿರಿವಾರಕ್ಕೆ ವರ್ಗಾವಣೆ

ಬೆಂಗಳೂರು, ಜುಲೈ 3:  ಸರ್ಕಾರಿ ಸೇವೆ ಸಲ್ಲಿಸುವ ಅಧಿಕಾರಿ ಅಥವಾ ಯಾವುದೇ ನೌಕರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಎರಡಕ್ಕಿಂತ ಹೆಚ್ಚು ದಿನ ಬಂಧಿಸಿಟ್ಟಲ್ಲಿ ಆತನನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಬಹುದು. ‌ಆದರೆ, ಲೋಕಾಯುಕ್ತಕ್ಕೆ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿರುವ ಭ್ರಷ್ಟ ತಹಸೀಲ್ದಾರ್ ಅಜಿತ್ ರೈಯನ್ನು ಬಂಧನದಲ್ಲಿ ಇರುವಾಗಲೇ ರಾಜ್ಯ ಸರ್ಕಾರ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ‌


ಅಜಿತ್ ಕುಮಾರ್ ರೈ ಅವರನ್ನು ಬೆಂಗಳೂರು ಕೆಆರ್‌ ಪುರಂನಿಂದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಿದ್ದು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದರಿಂದ ಕಂದಾಯ ಇಲಾಖೆ ಅಜಿತ್ ರೈ ವಿರುದ್ಧ ಅಮಾನತು ಆದೇಶ ಹೊರಡಿಸಿತ್ತು. ಅಜಿತ್ ರೈ ಅಧಿಕಾರದಲ್ಲಿದ್ರೆ ಸಾಕ್ಷ್ಯನಾಶ, ಅಧಿಕಾರ ದುರ್ಬಳಕೆ, ತನಿಖೆಗೆ ಅಡ್ಡಿಯಾಗಬಹುದು ಎಂದು ಅಮಾನತಿನಲ್ಲಿಟ್ಟಿತ್ತು. ಅದ್ರೆ ಇದೀಗ ಅದೇ ಭ್ರಷ್ಟ ಅಧಿಕಾರಿ ಅಜಿತ್ ರೈಯನ್ನು ಬಂಧನದಿಂದ ಮುಕ್ತಗೊಳ್ಳುವ ಮೊದಲೇ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ. 


ಬೆಂಗಳೂರಿನ ತಹಸೀಲ್ದಾರ್ (ಗ್ರೇಡ್ 1) ಆಗಿದ್ದ ಅಜಿತ್ ರೈ ಬಳಿ ಅಪಾರ ಪ್ರಮಾಣದ ಬೇನಾಮಿ ಆಸ್ತಿ ಮತ್ತು ಅಕ್ರಮ ಹಣ ಪತ್ತೆಯಾಗಿತ್ತು. ಇದೀಗ ಗ್ರೇಡ್ -1 ಹುದ್ದೆಯಿಂದ ಗ್ರೇಡ್ - 2 ತಹಸೀಲ್ದಾರ್ ಆಗಿ ಹಿಂಬಡ್ತಿಗೊಳಿಸಿ ಸರ್ಕಾರ ವರ್ಗಾವಣೆ ಮಾಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾಗಿ ಸಾಕ್ಷ್ಯ ಸಮೇತ ಸಿಕ್ಕಿಬಿದ್ದಿದ್ರೂ ಸರ್ಕಾರ ಮಾತ್ರ ಅಮಾನತುಗೊಂಡ ತಹಸೀಲ್ದಾರರನ್ನ ತರಾತುರಿಯಲ್ಲಿ ರಾಯಚೂರಿಗೆ ವರ್ಗಾಯಿಸಿ ತನಿಖೆಗೆ ಅಡ್ಡಿ ಮಾಡದಂತಾಗಿದೆ



Leave a Comment: