ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ಸುದ್ದಿಗಳು News

Posted by vidyamaana on 2024-07-24 23:15:54 |

Share: | | | | |


ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅಪ್ಪ-ಅಮ್ಮ ಆಟ ಆಡಲು ಬಂದ ಜೋಡಿ ಜನ ನೋಡಿ ಪರಾರಿ!

ವಿಟ್ಲ : ಕಳೆಂಜಿಮಲೆ ರಕ್ಷಿತಾರಣ್ಯಕ್ಕೆ ಯುವತಿಯೋರ್ವಳನ್ನು ಯುವಕನೋರ್ವ ಬೈಕ್ ನಲ್ಲಿ ಕಾಡಿಗೆ ಕರೆದುಕೊಂಡು ಬಂದಿದ್ದು, ಈ ಬಗ್ಗೆ ತಿಳಿಯುತ್ತಲೇ ಹಲವಾರು ಮಂದಿ ಕಾಡಿನಲ್ಲಿ ಹುಡುಕಾಡಿದ್ದಾರೆನ್ನಲಾಗಿದೆ.

ಜನ ಸೇರುತ್ತಿದ್ದಂತೆ ಅರೆ ನಗ್ನ ಸ್ಥಿತಿಯಲ್ಲಿ ಬೈಕ್, ಬಟ್ಟೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಯುವಕ-ಯುವತಿ ಪರಾರಿಯಾಗಿದ್ದಾರೆನ್ನಲಾಗಿದೆ.

ಸಾರ್ವಜನಿಕರ ಮಾಹಿತಿ ಹಿನ್ನಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆಗಳು, ಕಾಂಡೋಮ್, ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್‌ ಸಿಬ್ಬಂದಿಯ ಕಳ್ಳಾಟ ಬಯಲು

Posted by Vidyamaana on 2024-07-17 12:54:11 |

Share: | | | | |


ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್‌ ಸಿಬ್ಬಂದಿಯ ಕಳ್ಳಾಟ ಬಯಲು

ಬೆಂಗಳೂರು, ಜು.16: ಬೆಡ್ ಶೀಟ್ ಹಾಕಿಕೊಂಡು ಬಂದು ಬೆಂಗಳೂರಿನ ಬೆಳ್ಳಂದೂರು(Bellandur) ಎಟಿಎಂ ಕಳ್ಳತನ ಮಾಡಿದ್ದ ಕೇಸ್​ಗೆ ಮೇಜರ್ ಟ್ವಿಸ್ಟ್‌ ಸಿಕ್ಕಿದೆ. ಹೌದು, ಪೊಲೀಸರ ತ‌ನಿಖೆಯಲ್ಲಿ 16.5 ಲಕ್ಷ ರೂ. ಹಣ ಕಳ್ಳತನ ಆಗಿದೆ ಎಂದು ದೂರು ಕೊಟ್ಟ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬೆಳಕಿಗೆ ಬಂದಿದೆ. ಹಣ ಹಾಕದೆಯೇ ಎಟಿಎಂನಲ್ಲಿ ಕಳ್ಳತನ ಆಗಿದೆ ಎಂದು ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದ. ತನಿಖೆ ಕೈಗೊಂಡ ಪೊಲಿಸರು, ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ ವೇಳೆ ಏಜೆನ್ಸಿಯವರು ಸಿಕ್ಕಿಬಿದ್ದಿದ್ದಾರೆ.

ಐವರನ್ನು ಬಂಧಿಸಿದ ಬೆಳ್ಳಂದೂರು ಪೊಲೀಸರು

ಇದುವರೆಗೂ ಐವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಫೀಲ್ಡ್ ಆಪರೇಷನ್ ಮ್ಯಾನೇಜರ್ ಪ್ರತಾಪ್, ಎಟಿಎಂ ಆಫಿಸರ್ ಪವನ್ ಕಲ್ಯಾಣ್(28), ಸೆಕ್ಯೂರ್ ವ್ಯಾಲ್ಯೂ ಕಂಪನಿ ಬೆಂಗಳೂರು ನಗರ ಎಟಿಎಂ ಇನ್ ಚಾರ್ಜ್ ಧರ್ಮೇಂದ್ರ(52),

ಸೆಕ್ಯೂರ್ ವ್ಯಾಲ್ಯೂ ಕಂಪನಿ ಮಡಿವಾಳ ಏರಿಯಾ ಬ್ರಾಂಚ್ ಹೆಡ್ ರಾಘವೇಂದ್ರ ( 36) , ಸೆಕ್ಯೂರ್ ವ್ಯಾಲ್ಯೂ ಕಂಪನಿ ಅಸ್ಸಿಸ್ಟೆಂಟ್ ಮ್ಯಾನೇಜರ್ ಮಹೇಶ್(30) ಎಂಬುವವರು ಬಂಧಿತ ಆರೋಪಿಗಳು.

ಬೆಳ್ತಂಗಡಿ : ಸರಕಾರಿ ಬಸ್ - ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸಾವು

Posted by Vidyamaana on 2023-06-21 05:10:54 |

Share: | | | | |


ಬೆಳ್ತಂಗಡಿ : ಸರಕಾರಿ ಬಸ್ - ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸಾವು

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲೇ ಸಾವನ್ನಪ್ಪಿದ ಘಟನೆ ಜೂ 20 ಬೆಳಿಗ್ಗೆ ಗರ್ಡಾಡಿ ಬಳಿ ನಡೆದಿದೆ.ಪಡಂಗಡಿ ಸಮೀಪದ ಒಡಿಲು ಎಂಬಲ್ಲಿಯ ದಿಕ್ಷೀತ್ ತನ್ನ ಹುಟ್ಟು ಹಬ್ಬದ ಪ್ರಯುಕ್ತ ವೇಣೂರು ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ಧರ್ಮಸ್ಥಳದಿಂದ ಹುಬ್ಬಳ್ಳಿಗೆ ತೆರಳುತಿದ್ದ ಬಸ್ ಗರ್ಡಾಡಿ ಬಳಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.


ಕಳೆದ ಕೆಲವು ಸಮಯಗಳ ಹಿಂದೆ ಇದೇ ಜಾಗದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಸಯ್ಯದ್ ಸಾದಾತ್ ತಂಙಳ್ ಕರ್ವೇಲ್ ನಿಧನ

Posted by Vidyamaana on 2024-02-16 08:56:16 |

Share: | | | | |


ಸಯ್ಯದ್ ಸಾದಾತ್ ತಂಙಳ್ ಕರ್ವೇಲ್ ನಿಧನ

ಪುತ್ತೂರು : ಎಸ್.ಎಂ.ಎ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ಅಧ್ಯಕ್ಷರು, ಧಾರ್ಮಿಕ ಪಂಡಿತರೂ ಆಗಿದ್ದ ಸಯ್ಯದ್ ಸಾದಾತ್ ತಂಙಳ್ ಕರ್ವೇಲ್ ನಿಧನರಾದರು.

ಇತ್ತೀಚಿಗೆ ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅವರು ಫೆ.16 ರಂದು ನಿಧನರಾದರು.

ಧಾರ್ಮಿಕ ಕ್ಷೇತ್ರದದಲ್ಲಿ ತೊಡಗಿಕೊಂಡಿದ್ದ ತಂಙಳ್ ಸರಳ ಸ್ವಭಾವದವರಾಗಿದ್ದರು.

ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಕೋವಿಡ್ ಪಾಸಿಟಿವ್: ಎಲ್ಲಾ ಕಾರ್ಯಕ್ರಮಗಳು ರದ್ದು

Posted by Vidyamaana on 2024-01-09 21:01:47 |

Share: | | | | |


ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ಕೋವಿಡ್ ಪಾಸಿಟಿವ್: ಎಲ್ಲಾ ಕಾರ್ಯಕ್ರಮಗಳು ರದ್ದು

ಬೆಂಗಳೂರು : ಕರ್ನಾಟಕ ರಾಜ್ಯಪಾಲರಾಗಿರುವಂತ ಥಾವರ್ ಚಂದ್ ಗೆಹ್ಲೋಟ್ ( Thawar Chand Gehlot ) ಅವರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಮುಂದಿನ ದಿನಾಂಕದವರೆಗೆ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.ಈ ಕುರಿತಂತೆ ರಾಜಭವನದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೋವಿಡ್-19 ಪರೀಕ್ಷೆಗೆ ( Covid19 Test ) ಒಳಪಟ್ಟಿದ್ದರು. ಅವರ ಪರೀಕ್ಷೆ ವರದಿಯಲ್ಲಿ ಅವರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ತಿಳಿದು ಬಂದಿದೆ ಎಂದಿದೆ.


ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೋವಿಡ್-19 ಪಾಸಿಟಿವ್ ( Covid19 Positive ) ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟ ಕಾರಣ, ಮುಂದಿನ ದಿನಾಂಕದವರೆಗೆ ಅವರ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನು ರ್ದದುಗೊಳಿಸಿರೋದಾಗಿ ತಿಳಿಸಿದೆ.


ಇನ್ನೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಂಜಾಗ್ರತಾ ಕ್ರಮವಾಗಿ ರಾಜಭವನದಲ್ಲೇ ಕ್ವಾರಂಟೈನ್ ಆಗಲಿದ್ದಾರೆ. ಅವರು ಕೊರೋನಾ ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಆರೋಗ್ಯವಾಗಿದ್ದಾರೆ. ಅವರಿಗೆ ಕೋವಿಡ್ ಚಿಕಿತ್ಸೆಯು ಹೋಂ ಕ್ವಾರಂಟೈನ್ ನಲ್ಲಿ ಮುಂದುವರೆಯಲಿದೆ ಅಂತ ಹೇಳಿದೆ.

ಅಡ್ಕಾರಿನಲ್ಲಿ ಆಕ್ಸಿಡೆಂಟ್ ಫಿಲಂ ರೀತಿಯ ಭೀಕರ ಅಪಘಾತ – ಮೂವರ ದುರ್ಮರಣ

Posted by Vidyamaana on 2023-08-31 07:00:42 |

Share: | | | | |


ಅಡ್ಕಾರಿನಲ್ಲಿ ಆಕ್ಸಿಡೆಂಟ್ ಫಿಲಂ ರೀತಿಯ ಭೀಕರ ಅಪಘಾತ – ಮೂವರ ದುರ್ಮರಣ

ಸುಳ್ಯ : ಅಡ್ಕಾರಿನಲ್ಲಿ ಹೊಟೇಲ್ ಕರಾವಳಿ ಬಳಿ ಇಂದು ಬೆಳ್ಳಂಬೆಳಗ್ಗೆ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಹುಣಸೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ಗಾಯಗೊಂಡ ಕಾರ್ಮಿಕರ ಪೈಕಿ ಮೂವರು ಸಾವನ್ನಪ್ಪಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಕಾರ್ಮಿಕರು ಕೆಲಸದ ನಿಮಿತ್ತ ನಿನ್ನೆ ಅಸ್ಕಾರಿಗೆ ಆಗಮಿಸಿ ಕರಾವಳಿ ಹೋಟೆಲ್ ಎದುರುಗಡೆ ಇರುವ ಅಂಗಡಿಯೊಂದರ ವರಾಂಡದಲ್ಲಿ ಆಶ್ರಯ ಪಡೆದಿದ್ದರು. ಇಂದು ಬೆಳಿಗ್ಗೆ ಅವರಲ್ಲಿ ಚಂದ್ರಪ್ಪ, ರೇಗಪ್ಪ, ವೆಂಕಪ್ಪ, ಮಾಂತೇಶ್ ಎಂಬವರು ಕಾರ್ಮಿಕರು ರಸ್ತೆ ಬದಿ ನಿಂತಿದ್ದರೆನ್ನಲಾಗಿದೆ.


ಬೆಳಗ್ಗೆ ಹುಣಸೂರು ಕಡೆಯಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬಂದು ರಸ್ತೆ ಬದಿ ನಿಂತಿದ್ದ ಈ ಕಾರ್ಮಿಕರಿಗೆ ಡಿಕ್ಕಿ ಹೊಡೆದು ಪಕ್ಕದಲ್ಲಿ ನಿಂತಿದ್ದ ಲಾರಿಗೂ ಡಿಕ್ಕಿ ಹೊಡೆಯಿತು.


ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರಿಗೂ ಗಾಯಗಳಾಗಿದ್ದು ಮೂವರಿಗೆ ಗಂಭೀರ ಗಾಯಗಳಾಗಿತ್ತು. ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಈ ಪೈಕಿ ಚಂದ್ರಪ್ಪ ಅಲ್ಲಿ ಸಾವನ್ನಪ್ಪಿದ್ದರು. ವೆಂಕಪ್ಪರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದು ಅವರಿಗೆ ಸುಳ್ಯದಲ್ಲೇ ಚಿಕಿತ್ಸೆ ಕೊಡಿಸಲಾಯಿತು. ರೇಗಪ್ಪ, ಮಾಂತೇಶ್ ಅವರನ್ನು ಮಂಗಳೂರಿಗೆ ಕೊಂಡೊಯ್ಯಲಾಗಿದ್ದು, ಅವರಿಬ್ಬರೂ  ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ

ಗಂಭೀರ ಅಪರಾಧದ ಮಾಹಿತಿ ನೀಡಿದಾಗ ಎಫ್ಐಆರ್ ದಾಖಲು ಕಡ್ಡಾಯ: ಹೈಕೋರ್ಟ್ ಆದೇಶ

Posted by Vidyamaana on 2023-08-04 02:03:39 |

Share: | | | | |


ಗಂಭೀರ ಅಪರಾಧದ ಮಾಹಿತಿ ನೀಡಿದಾಗ ಎಫ್ಐಆರ್ ದಾಖಲು ಕಡ್ಡಾಯ: ಹೈಕೋರ್ಟ್ ಆದೇಶ

ಬೆಂಗಳೂರು: ಗಂಭೀರ ಅಪರಾಧದ ಮಾಹಿತಿ ನೀಡಿದಾಗ ಎಫ್ಐಆರ್ ದಾಖಲು ಕಡ್ಡಾಯ ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಲಲಿತಾ ಕುಮಾರಿ ಕೇಸ್​ನ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಬಗ್ಗೆ ಮಾರ್ಗಸೂಚಿ, ಸುತ್ತೋಲೆ ಹೊರಡಿಸಲು ಡಿಜಿ ಮತ್ತು ಐಜಿಪಿಗೆ ಸೂಚನೆ ನೀಡಲಾಗಿದೆ.


ಲಲಿತಾ ಕುಮಾರಿ ಪ್ರಕರಣದಲ್ಲಿ ಎಫ್​ಐಆರ್​ ದಾಖಲಿಸುವ ಬಗ್ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ತೀರ್ಪಿನ 120ನೇ ಪ್ಯಾರಾವನ್ನು ಕನ್ನಡ, ಆಂಗ್ಲ ಭಾಷೆಯಲ್ಲಿ ಸುತ್ತೋಲೆ ಹೊರಡಿಸಬೇಕು. ಎಫ್ಐಆರ್ ದಾಖಲಿಸಲು ವಿಳಂಬ ಮಾಡದಂತೆ ತಾಕೀತು ಮಾಡಲಾಗಿದೆ.


ಗಂಭೀರ ಅಪರಾಧದ ದೂರು ಬಂದಾಗ ಪ್ರಾಥಮಿಕ ತನಿಖೆ ಅಗತ್ಯವಿಲ್ಲ. ಅದೇ ರೀತಿಯಾಗಿ ಗಂಭೀರವಲ್ಲದ ಪ್ರಕರಣಗಳಲ್ಲಿ ಮಾತ್ರ ಪ್ರಾಥಮಿಕ ತನಿಖೆ ನಡೆಸಬಹುದು. 7 ದಿನದೊಳಗೆ ಪ್ರಾಥಮಿಕ ತನಿಖೆ ಮುಕ್ತಾಯಗೊಳಿಸಬೇಕು. ಗಂಭೀರ ಅಪರಾಧ ಕಂಡುಬಂದಾಗ ಎಫ್ಐಆರ್ ದಾಖಲಿಸಬೇಕು. ಪೊಲೀಸ್​ ಠಾಣೆಯ ಡೈರಿಯಲ್ಲಿ ತನಿಖೆಯ ಮಾಹಿತಿ ಉಲ್ಲೇಖಿಸಬೇಕು ಎಂದು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ

Recent News


Leave a Comment: