ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಸ್ವೀಕರಿಸಿದ ಪ್ರಧಾನಿ ಮೋದಿ

Posted by Vidyamaana on 2024-03-22 22:08:17 |

Share: | | | | |


ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಸ್ವೀಕರಿಸಿದ ಪ್ರಧಾನಿ ಮೋದಿ

ಥಿಂಪು ಮಾರ್ಚ್ 22: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಭೂತಾನ್‌ನ (Bhutan) ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋವನ್ನು (Order of the Druk Gyalpo) ಸ್ವೀಕರಿಸಿದ್ದು, ಈ ಗೌರವವನ್ನು ಪಡೆದ ಮೊದಲ ಭೂತನ್ ದೇಶದ ಹೊರಗಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಧಾನಿ ಮೋದಿ ಭೂತಾನ್‌ನ ಪ್ರತಿಷ್ಠಿತ ನಾಗರಿಕ ಗೌರವವನ್ನು ಪಡೆದ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಉಭಯ ನಾಯಕರು ರಾಜಧಾನಿಯಲ್ಲಿ ಭೇಟಿಯಾದ ನಂತರ ಭೂತಾನ್‌ನ ರಾಜ ಜಿಗ್ಮೆ ಅವರು ಪಿಎಂ ಮೋದಿಯವರಿಗೆ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋ ಪ್ರಶಸ್ತಿಯನ್ನು ನೀಡಿದರು. ಸ್ಥಾಪಿತವಾದ ಶ್ರೇಯಾಂಕ ಮತ್ತು ಪ್ರಾಶಸ್ತ್ಯದ ಪ್ರಕಾರ, ಆರ್ಡರ್ ಆಫ್ ದ ಡ್ರುಕ್ ಗ್ಯಾಲ್ಪೋ ಅನ್ನು ಜೀವಮಾನದ ಸಾಧನೆಗಾಗಿ ನೀಡುವ ಪ್ರಶಸ್ತಿಯಾಗಿ ಸ್ಥಾಪಿಸಲಾಯಿತು. ಇದು ಭೂತಾನ್‌ನಲ್ಲಿ ಅತ್ಯುನ್ನತ ಗೌರವವಾಗಿದೆ.

ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ

Posted by Vidyamaana on 2023-12-27 13:57:43 |

Share: | | | | |


ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ

ಪುತ್ತೂರು: ರಾಜ್ಯದ ಎಂಟು ಉಪ ವಿಭಾಗಗಳಿಗೆ ನೂತನ ಸಹಾಯಕ ಆಯಕ್ತರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ದ.ಕ. ಜಿಲ್ಲೆಯ ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ,  ಕೊಡಗು ಜಿಲ್ಲೆಯ ಮಡಿಕೇರಿ ಉಪ ವಿಭಾಗದ ಸಹಾಯಕ ಆಯಕ್ತರಾಗಿ ನಾರ್ವಡೆ ವಿನಾಯಕ ಕರ್ಭರಿ ಅವರನ್ನು ನೇಮಕಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಹೊಸದಾಗಿ ನೇಮಕಗೊಂಡ ಎಲ್ಲಾ ಎಂಟು ಸಹಾಯಕ ಆಯುಕ್ತರು 2021ನೇ ಬ್ಯಾಚ್ ನ ಐಎಎಸ್‌ ಅಧಿಕಾರಿಗಳಾಗಿದ್ದಾರೆ.

ಮೇ 19 :ಬಪ್ಪಳಿಗೆ ಮಸ್ಜಿದುನ್ನೂರು ಜುಮಾ ಮಸೀದಿಯಲ್ಲಿ ಪಳ್ಳಿದರ್ಸ್ ಉದ್ಘಾಟನೆ

Posted by Vidyamaana on 2024-05-19 10:07:18 |

Share: | | | | |


ಮೇ 19 :ಬಪ್ಪಳಿಗೆ ಮಸ್ಜಿದುನ್ನೂರು ಜುಮಾ ಮಸೀದಿಯಲ್ಲಿ ಪಳ್ಳಿದರ್ಸ್ ಉದ್ಘಾಟನೆ

ಪುತ್ತೂರು : ಪವಿತ್ರ ಇಸ್ಲಾಮಿನ ಧಾರ್ಮಿಕ ಶಿಕ್ಷಣ ನೀಡುವ ಪರಂಪರಾಗತ ವಿದ್ಯಾಭ್ಯಾಸ ಪದ್ಧತಿಯಾದ ಪಳ್ಳಿ ದರ್ಸ್  ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿ ಅಧೀನದ ಬಪ್ಪಳಿಗೆ ಮಸ್ಜಿದುನ್ನೂರು ಮೊಹಲ್ಲಾ ಸಮಿತಿ ಆಶ್ರಯದಲ್ಲಿ ಮೇ 19 ಆದಿತ್ಯವಾರ ಮಗ್ರಿಬ್ ನಮಾಝಿನ ಬಳಿಕ ಉದ್ಘಾಟನೆಗೊಳ್ಳಲಿದೆ.ಬಹು| ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ರವರು ದರ್ಸ್ ಸಂಪ್ರದಾಯದ ಪಾರಂಪರ್ಯ ಗ್ರಂಥಗಳ ಕರ್ಮ ಶಾಸ್ತ್ರದ ಅಧ್ಯಾಯದ ಭಾಗಗಳನ್ನು ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಹೇಳಿ ಕೊಡುವ ಮೂಲಕ ದರ್ಸ್ ಗೆ ಚಾಲನೆ ನೀಡಲಿದ್ದಾರೆ. 

ದ.ಕ. ಜಿಲ್ಲೆಯ ಪ್ರಖಾಂಡ ವಿದ್ವಾಂಸರುಗಳಲ್ಲೋರ್ವರೂ ಹಿರಿಯ ಮುದರ್ರಿಸರೂ ಬಹು ಇಸ್ಮಾಯಿಲ್ ಫೈಝಿ ಮುದರ್ರಿಸ್ ಸೂರಿಂಜೆಯವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.ತೋಡಾರು ಶಂಸುಲ್ ಉಲಮಾ ಅರೇಬಿಕ್ ಕಾಲೇಜಿನ ಪ್ರಾಂಶುಪಾಲರಾದ ಬಹು ರಫೀಕ್ ಹುದವಿ ಕೋಲಾರ ಸೇರಿದಂತೆ ಹಲವು ಉಲಮಾ ಗಣ್ಯರು ಆಗಮಿಸಲಿದ್ದಾರೆ.

ಪುತ್ತೂರು: ಪೈಂಟರ್ ಬಾಲಕೃಷ್ಣ ಆತ್ಮಹತ್ಯೆ

Posted by Vidyamaana on 2024-03-01 14:05:03 |

Share: | | | | |


ಪುತ್ತೂರು: ಪೈಂಟರ್ ಬಾಲಕೃಷ್ಣ ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ಸಾಮೆತ್ತಡ್ಕ ನಿವಾಸಿ ಬಾಲಕೃಷ್ಣ (48) ಮೃತರು ಬಾಲಕೃಷ್ಣ ಅವರು ಪೈಂಟರ್ ಕೆಲಸ ನಿರ್ವಹಿಸುತ್ತಿದ್ದು, ಸಾಮೆತ್ತಡ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

ಚೂರಿ ಇರಿತ ಪ್ರಕರಣ: ಆರೋಪಿ ರವಿ ನಾವೂರು ಪೊಲೀಸ್ ವಶಕ್ಕೆ

Posted by Vidyamaana on 2024-04-18 13:21:16 |

Share: | | | | |


ಚೂರಿ ಇರಿತ ಪ್ರಕರಣ: ಆರೋಪಿ ರವಿ ನಾವೂರು ಪೊಲೀಸ್ ವಶಕ್ಕೆ

ಬಂಟ್ವಾಳ: ಬಂಟ್ವಾಳ ಬಡ್ಡಕಟ್ಟೆ ಯಲ್ಲಿ ವ್ಯಕ್ತಿಯೋರ್ವರಿಗೆ ಚೂರಿ ಇರಿದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ರವಿ ನಾವೂರು ಬಂಧಿತ ಆರೋಪಿ. ಆತ ಎ. 14ರ ರಾತ್ರಿ ಜಕ್ರಿಬೆಟ್ಟು ನಿವಾಸಿ ಪುಷ್ಪರಾಜ್‌ ಅವರ ಕುತ್ತಿಗೆಯ ಭಾಗಕ್ಕೆ ಚೂರಿಯಿಂದ ಇರಿದು ಪರಾರಿಯಾಗಿದ್ದ.

ಲಿಟ್ಲ್ ಫ್ಲವ‌ರ್ ಶಾಲೆಯಲ್ಲಿ ಮೇಲೈಸಿದ ಶಾಲಾ ಸ್ಕೌಟ್ ಗೈಡ್, ಕಬ್, ಬುಲ್ ಬುಲ್ ದಳದ ವಾರ್ಷಿಕ ಮೇಳ

Posted by Vidyamaana on 2024-02-18 07:45:15 |

Share: | | | | |


ಲಿಟ್ಲ್  ಫ್ಲವ‌ರ್ ಶಾಲೆಯಲ್ಲಿ ಮೇಲೈಸಿದ ಶಾಲಾ ಸ್ಕೌಟ್  ಗೈಡ್, ಕಬ್, ಬುಲ್ ಬುಲ್ ದಳದ ವಾರ್ಷಿಕ ಮೇಳ

ಪುತ್ತೂರು: ದರ್ಬೆ ಲಿಟ್ಲ್  ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸ್ಕೌಟ್ , ಗೈಡ್, ಕಬ್ ಮತ್ತು ಬುಲ್ ಬುಲ್ ದಳದ ವಾರ್ಷಿಕ ಮೇಳ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಶಾಲಾ ಸೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ಮಕ್ಕಳಿಂದ ಗೂಡುದೀಪ ರಚನೆ, ನಕ್ಷತ್ರ ರಚನೆ, ರಾಷ್ಟ್ರಧ್ವಜದ ಚಿತ್ರ ರಚನೆ, ಎಲೆಗಳಿಂದ ಆಕೃತಿ ತಯಾರಿ ನಡೆಯಿತು. ರಂಗಬೆಳಕು ತಂಡ ಪುತ್ತೂರು ವತಿಯಿಂದ ಕೃಷ್ಣಪ್ಪ ಬಂಬಿಲ ನೇತೃತ್ವದಲ್ಲಿ ಜಾಗೃತಿ ಗೀತೆಗಳ ಗಾಯನ ನಡೆಯಿತು. ದರ್ಬೆ ವೃತ್ತದಿಂದ 352 ವಿದ್ಯಾರ್ಥಿಗಳು, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಆಕರ್ಷಕ ಪಥಸಂಚಲನವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್ ಉದ್ಘಾಟಿಸಿದರು. ನಂತರ ಶಾಲಾ ಸ್ಕೌಟ್ , ಗೈಡ್, ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಕರೋಕೆ ಹಾಡುಗಳ ಸುಮಧುರ ಗಾಯನ ನೆರವೇರಿತು.ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ. ಎಸ್., ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್‌, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ಸತೀಶ್‌ ಆ‌ರ್, ಶಾಲಾ ಸೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ದಳದವರು, ಶಿಕ್ಷಕ ಶಿಕ್ಷಕಿಯರ ಉಪಸ್ಥಿತಿಯೊಂದಿಗೆ ಧ್ವಜಾರೋಹಣ ನೆರವೇರಿತು. ಬಳಿಕ ನಡೆದ ಸಮಾರಂಭವನ್ನು ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಉದ್ಘಾಟಿಸಿದರು. ಶಾಲಾ ಸಂಚಾಲಕಿ ವಂದನೀಯ ಭಗಿನಿ ಪ್ರಶಾಂತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ಧೇಶಕ ಡಾ. ಯು. ಪಿ ಶಿವಾನಂದ, ಪುತ್ತೂರು ನಗರ ಸಭೆಯ ಸ್ಥಳೀಯ ಸದಸ್ಯೆ ಶಶಿಕಲಾ, ನಿವೃತ್ತ ಸೈನಿಕರ ಸಂಘದ ಗೌರವಾಧ್ಯಕ್ಷ ಕರ್ನಲ್ ಡಿ. ಜಿ. ಭಟ್‌, ನಿವೃತ್ತ ಶಿಕ್ಷಕಿ ಮೇರಿ ಡಿಸಿಲ್ವ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷ ಸತೀಶ್‌ ಆ‌ರ್. ಉಪಸ್ಥಿತರಿದ್ದರು.ಬಳಿಕ ಕೆಮ್ಮಿಂಜೆ ಅಗ್ನಿಶಾಮಕ ದಳದ ವತಿಯಿಂದ ಅಗ್ನಿಶಾಮಕ ಪ್ರಾತ್ಯಕ್ಷಿಕೆ ಅಗ್ನಿಶಾಮಕ ದಳದ ಮುಖ್ಯಸ್ಥ ರುಕ್ಕಯ ಗೌಡ ಅವರ ನೇತೃತ್ವದಲ್ಲಿ ನೆರವೇರಿತು. ಬಳಿಕ ಪುತ್ತೂರು ಸೌಟ್, ಗೈಡ್, ಸ್ಥಳೀಯ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ವೇದಾವತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಶಾಲಾ ಸಂಚಾಲಕಿ ವಂದನೀಯ ಭಗಿನಿ ಪ್ರಶಾಂತಿ ಬಿ. ಎಸ್. ಅಧ್ಯಕ್ಷತೆಯಲ್ಲಿ, ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾನ್ಯ ಲೋಕೇಶ್ ಎಸ್‌. ಆ‌ರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಪುತ್ತೂರು ಸೈಟ್, ಗೈಡ್, ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ವಿದ್ಯಾ ಆರ್. ಗೌರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು ಇಲ್ಲಿನ ಶಿಕ್ಷಕಿ ಶ್ರೀಮತಿ ಮೇಬಲ್ ಡಿಸೋಜ, ಪುತ್ತೂರು ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಶಿಕಲಾ, ಅಮ‌ರ್ ಅಕ್ಟ‌ರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿಯ ಸ್ಥಾಪಕಾಧ್ಯಕ್ಷರಾದ ರಝಾಕ್ ಬಪ್ಪಳಿಗೆ, ಶಾಲಾ ದಾನಿಗಳಾದ ಶ್ರೀಮತಿ ಸುನೀತಾ ರಕ್ಷಕ ಶಿಕ್ಷಕ ಸಂಘದ ನಿಕಟಪೂರ್ವ ಉಪಾಧ್ಯಕ್ಷರಾದ ಶ್ರೀಯುತ ರಘುನಾಥ ರೈ, ಪುತ್ತೂರು ಸ್ಕೌಟ್ , ಗೈಡ್, ಸ್ಥಳೀಯ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ವೇದಾವತಿ, ಪುತ್ತೂರು ಸ್ಕೌಟ್  ಗೈಡ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಶ್ರೀಮತಿ ಡೋರತಿ ಮೇರಿ ಡಿಸೋಜ, ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಮೇರಿ ಡಿಸಿಲ್ವ, ಶ್ರೀಮತಿ ಲಿಡಿಯಾ ಮರಿಯಾ ರಸ್ಕಿನ್ಹ, ಶ್ರೀಮತಿ ಐರಿನ್ ವೇಗಸ್, ಹಿರಿಯ ವಿದ್ಯಾರ್ಥಿ ಡಾ. ಶ್ರೀಪ್ರಕಾಶ್‌, ಪೋಷಕರಾದ ಶ್ರೀಮತಿ ಡಾ. ವಿಜಯ ಸರಸ್ವತಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ರಾಮಚಂದ್ರ ಭಟ್, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಸತೀಶ್ ಆರ್, ಹಾಗೂ ಭಗಿನಿ ಫೆಲ್ಸಿ ಡಿಸೋಜ ಉಪಸ್ಥಿತರಿದ್ದರು. ಬಳಿಕ 352 ವಿದ್ಯಾರ್ಥಿಗಳ ಭಾಗವಹಿಸುವಿಕೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.ಮರುದಿನ ಬಿ ಪಿ ಸಿಕ್ಸ್ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆ ನಡೆಯಿತು. ಉಪಾಹಾರದ ಬಳಿಕ ಬೆಂಕಿ ಬಳಸದ ಅಡುಗೆ ಗಮನ ಸೆಳೆಯಿತು. ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕ ಪ್ರವೀಣ್‌ ವರ್ಣಕುಟೀರ ಅವರಿಂದ ಮುಖವಾಡ ತಯಾರಿ, ಗೊಂಬೆ ತಯಾರಿ, ಕರಕುಶಲ ವಸ್ತುಗಳ ಪ್ರಾತ್ಯಕ್ಷಿಕೆ ನೆರವೇರಿತು.


ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಶಿಕ್ಷಕಿ ಭಗಿನಿ ವೆನಿಶಾ ಬಿ. ಎಸ್. ವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಶಾಲಾ ಸ್ಕೌಟ್ಸ್ , ಗೈಡ್, ಕಬ್ ಮತ್ತು ಬುಲ್ ಬುಲ್ ದಳದ ವಾರ್ಷಿಕ ಮೇಳದ ನಾಯಕಿ ವಿಲ್ಮಾ ಫೆರ್ನಾಂಡಿಸ್, ಸ್ಕೌಟ್ಸ್  ಶಿಕ್ಷಕರಾದ ಬಾಲಕೃಷ್ಣ ಪೊರ್ದಾಲ್, ಭವ್ಯ, ಬುಲ್ ಬುಲ್ ಶಿಕ್ಷಕಿಯರಾದ ಜೋಸ್ಲಿನ್ ಪಾಯಸ್, ಮಮತಾ, ದೀಕ್ಷಾ, ಕಬ್ ಶಿಕ್ಷಕಿಯರಾದ ಸುಶ್ಮಿತಾ, ದಿವ್ಯ, ಗೈಡ್ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Recent News


Leave a Comment: