ಉಳಾಯಿಬೆಟ್ಟು ದರೋಡೆ ಪ್ರಕರಣ ; ಕೋಟ್ಯಾನ್ ಲಾರಿ ಚಾಲಕ ವಸಂತ ಸೂತ್ರಧಾರ, ಕೇರಳದ ತಂಡ ಸೇರಿ ಹತ್ತು ಮಂದಿ ಅರೆಸ್ಟ್

ಸುದ್ದಿಗಳು News

Posted by vidyamaana on 2024-07-05 07:31:37 |

Share: | | | | |


ಉಳಾಯಿಬೆಟ್ಟು ದರೋಡೆ ಪ್ರಕರಣ  ; ಕೋಟ್ಯಾನ್ ಲಾರಿ ಚಾಲಕ ವಸಂತ ಸೂತ್ರಧಾರ,  ಕೇರಳದ ತಂಡ ಸೇರಿ ಹತ್ತು ಮಂದಿ ಅರೆಸ್ಟ್

ಮಂಗಳೂರು: ಮಂಗಳೂರು ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಹೊರವಲಯದ ಪೆರ್ಮಂಕಿ ಪರಿಸರದಲ್ಲಿ ಉದ್ಯಮಿ ಹಾಗೂ ಸಾಮಾಜಿಕ ಮುಖಂಡ ಪದ್ಮನಾಭ ಕೋಟ್ಯಾನ್ ಮನೆ ದರೋಡೆ ನಡೆಸಿದ ಆರೋಪದಲ್ಲಿ ಮಂಗಳೂರು ಪೊಲೀಸರು 10 ಮಂದಿಯನ್ನು ಸೆರೆಹಿಡಿದಿದ್ದಾರೆ. ಇವರಲ್ಲಿ ಉದ್ಯಮಿಯ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ನೀರಮಾರ್ಗ ಗ್ರಾಮ ನಿವಾಸಿ ವಸಂತಕುಮಾರ್ (42) ಒಳಗೊಂಡಿದ್ದಾನೆ.

ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಬಂಧಿತರನ್ನು ನೀರಮಾರ್ಗದ ವಸಂತಕುಮಾರ್ (42), ನೀರಮಾರ್ಗದ ರಮೇಶ್ (42), ಬಂಟ್ವಾಳದ ಬಾಲಕೃಷ್ಣ ರೇಮಂಡ್ ಡಿಸೋಜಾ (47) ಎಂದು ಗುರುತಿಸಲಾಗಿದೆ. ಕಾಸರಗೋಡಿನಿಂದ (48), ತ್ರಿಶೂರಿನ ಜಾಕೀರ್ ಹುಸೇನ್ (56), ತ್ರಿಶೂರ್‌ನಿಂದ ವಿನೋಜ್ (38), ತ್ರಿಶೂರ್‌ನಿಂದ ಸಜೀಶ್ ಎಂಎಂ (32), ತಿರುವನಂತಪುರದಿಂದ ಬಿಜು ಜಿ (41), ತ್ರಿಶೂರ್‌ನಿಂದ ಸತೀಶ್ ಬಾಬು (44), ಮತ್ತು ಶಿಜೋ ದೇವಸಿ (38) ಇದರಲ್ಲಿ 7 ಮಂದಿ ಕೇರಳ ಮೂಲದವರಾಗಿದ್ದಾರೆ.

ಮಂಗಳೂರು ನಗರದ ಉಳಾಯಿಬೆಟ್ಟು ಪೆರ್ಮಂಕಿ ನಿವಾಸಿ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರು ಜೂನ್ 21ರಂದು ಸಂಜೆ ಸುಮಾರು 7.45ಕ್ಕೆ ಮನೆಯಲ್ಲಿದ್ದ ವೇಳೆ ಸುಮಾರು 10ರಿಂದ 12 ಮಂದಿ ಆರೋಪಿಗಳು ಆಗಮಿಸಿ, ಚೂರಿಯಿಂದ ಪದ್ಮನಾಭ ಕೋಟ್ಯಾನ್ ಮೇಲೆ ಹಲ್ಲೆ ನಡೆಸಿ, ನಂತರ, ಅವರ ಪತ್ನಿ ಮತ್ತು ಮಗನನ್ನು ಕಟ್ಟಿಹಾಕಿ, ನಗದು, ಹಣ, ಒಡವೆ ಸೇರಿ ಬೆಲೆಬಾಳುವ ಸೊತ್ತುಗಳನ್ನು ದರೋಡೆ ಮಾಡಿದ್ದರು.


ಘಟನೆಯಲ್ಲಿ ವಸಂತಕುಮಾರ್, ಉದ್ಯಮಿಯ ವ್ಯವಹಾರ ಮತ್ತು ಮನೆಯ ಮಾಹಿತಿಯನ್ನು ಇನ್ನೋರ್ವ ಆರೋಪಿ ರಮೇಶ್ ಪೂಜಾರಿಗೆ ನೀಡಿದ್ದು, ಆರೋಪಿ ರಮೇಶ್ ಪೂಜಾರಿ ಮತ್ತು ರೇಮಂಡ್ ಡಿಸೋಜಾ ಇನ್ನೋರ್ವ ಆರೋಪಿ ಬಾಲಕೃಷ್ಣ ಶೆಟ್ಟಿಗೆ ಉದ್ಯಮಿಯ ಮನೆಯ ಹಾಗೂ ವ್ಯವಹಾರದ ಮಾಹಿತಿ ನೀಡಿದ್ದಾರೆ. ಅದರಂತೆ ಬಾಲಕೃಷ್ಣ ಶೆಟ್ಟಿ ತನ್ನ ಸ್ನೇಹಿತ ಕೇರಳದ ವ್ಯಕ್ತಿಯೊಂದಿಗೆ ದರೋಡೆ ನಡೆಸಲು ಸಂಚು ರೂಪಿಸಿ,ಮನೆಯ ಮಾಹಿತಿಯನ್ನು ನೀಡಿ, ಆರೋಪಿಗಳನ್ನು ಮಂಗಳೂರಿಗೆ ಕರೆಯಿಸಿಕೊಂಡು ದರೋಡೆ ನಡೆಸಿದ್ದಾಗಿ ತಿಳಿದುಬಂದಿದೆ ಎಂದು ಕಮೀಷನರ್ ಹೇಳಿದ್ದಾರೆ.ಕೃತ್ಯದಲ್ಲಿ 15ಕ್ಕೂ ಅಧಿಕ ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ಕಂಡುಬಂದಿದೆ. ಆರೋಪಿಗಳ ಪೈಕಿ ಬಿಜು ಹಾಗೂ ಸತೀಶ್ ಬಾಬು ಎರಡು ತಂಡ ಗಳನ್ನು ಮಂಗಳೂರಿಗೆ ಕಳಿಸಿ, ದರೋಡೆಗೆ ಸಂಚು ರೂಪಿಸಿ ದರೋಡೆ ಕೃತ್ಯ ನಡೆಸಿದ್ದಾರೆ.

ಮೊದಲೇ ಕೇಸ್ ಇತ್ತು

ಆರೋಪಿಗಳ ಪೈಕಿ ವಸಂತ ಕುಮಾರ್ ವಿರುದ್ಧ 2011ನೇ ಇಸವಿಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿದ್ದರೆ, ಜಾಕೀರ್ ಎಂಬಾತನ ವಿರುದ್ಧ ಕೇರಳದಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಸತೀಶ್ ಬಾಬು ವಿರುದ್ಧ ತ್ರಿಶೂರ್ ಜಿಲ್ಲೆಯಲ್ಲಿ ಶಾಜಿ ಎಂಬಾತನ ಕೊಲೆ ಪ್ರಕರಣ ದಾಖಲಾಗಿದೆ. ಬಿಜು ವಿರುದ್ಧ ಅಬಕಾರಿ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.

ಜೂನ್ 21ರಂದು ಎಂಟರಿಂದ ಒಂಬತ್ತು ಮಂದಿ ಮುಸುಕುಧಾರಿಗಳು ಮನೆಗೆ ನುಗ್ಗಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ರವರನ್ನು ಕಟ್ಟಿ ಹಾಕಿ ಥಳಿಸಿದ್ದು ಹಾಗೂ ಪತ್ನಿ, ಮಕ್ಕಳನ್ನು ಬೆದರಿಸಿ 9 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿ ಮನೆಯ ವಾಹನದಲ್ಲೇ ಅಲ್ಪ ದೂರದ ವರೆಗೆ ಪ್ರಯಾಣಿಸಿ ನಂತರ ಅವರ ವಾಹನವನ್ನು ಮಧ್ಯದಲ್ಲೇ ಬಿಟ್ಟು ಇನ್ನೋವಾದಲ್ಲಿ ಪರಾರಿಯಾಗಿದರು. ನಾಲ್ವರು ಸ್ಥಳೀಯ ಆರೋಪಿಗಳಾದ ವಸಂತ್, ರಮೇಶ್, ರೇಮಂಡ್ ಮತ್ತು ಬಾಲಕೃಷ್ಣ ದರೋಡೆಗೆ ಯೋಜನೆ ರೂಪಿಸಿದ್ದರು. ಬಾಲಕೃಷ್ಣ ನಂತರ ಜಾನ್ ಬಾಸ್ಕೋ ನೇತೃತ್ವದ ಕೇರಳ ತಂಡದೊಂದಿಗೆ ಸಂಪರ್ಕ ಹೊಂದಿದ್ದರು.

ಎಂಟು ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಕೇರಳದ ತಂಡ ಮಂಗಳೂರಿಗೆ ಭೇಟಿ ನೀಡಿದ್ದು, ದರೋಡೆಗೆ ಪ್ರದೇಶದ ಸ್ಕೆಚ್ ಮತ್ತು ನಕ್ಷೆಯನ್ನು ಸಿದ್ಧಪಡಿಸುವಂತೆ ರಮೇಶ್ ಮತ್ತು ವಸಂತ್ ಅವರನ್ನು ಕೇಳಿದ್ದರು ಅದರಂತೆಯೇ ಗುತ್ತಿಗೆದಾರನ ಬಳಿ 100 ರಿಂದ 300 ಕೋಟಿ ರೂ.ಗೂ ಹೆಚ್ಚು ಹಣವಿದೆ ಎಂದು ಸ್ಥಳೀಯ ಆರೋಪಿಗಳು ಕೇರಳ ತಂಡಕ್ಕೆ ತಿಳಿಸಿದ್ದು ಲೂಟಿಹೊಡೆಯಲು ಎಲ್ಲಾ ರೀತಿಯ ಸ್ಕೆಚ್ ತಯಾರಿಸಿದ್ದರು.

ಈ ಪ್ರಕರಣದಲ್ಲಿ ಇನ್ನೂ 4-5 ಮಂದಿಯನ್ನು ಬಂಧಿಸಬೇಕಿದ್ದು 100ರಿಂದ 300 ಕೋಟಿ ಲೂಟಿ ಮಾಡಬಹುದೆಂದು ನಂಬಿಸಿ ಮಾಸ್ಟರ್‌ ಬೆಡ್‌ರೂಮ್‌ನ ಟೈಲ್ಸ್‌ ತೆಗೆಯಲು 20ಕ್ಕೂ ಹೆಚ್ಚು ಗೋಣಿ ಚೀಲಗಳು ಮತ್ತು ಸಲಕರಣೆಗಳನ್ನು ತಂದಿದ್ದರು. ಒಂದೇ ಒಂದು ಸುಳಿವೇ ಇಲ್ಲದ ಕುರುಡು ಪ್ರಕರಣವಾಗಿರುವುದರಿಂದ ಆರೋಪಿಗಳ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಕಳೆದ 15 ದಿನಗಳಿಂದ ಈ ಪ್ರಕರಣವನ್ನು ಭೇದಿಸಲು ಅವಿರತವಾಗಿ ಶ್ರಮಿಸಿದ ಡಿಸಿಪಿ, ಎಸಿಪಿ ಮತ್ತು ಸಿಸಿಬಿ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

 Share: | | | | |


ಚಿಕ್ಕಮಗಳೂರು: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ

Posted by Vidyamaana on 2023-12-05 13:50:20 |

Share: | | | | |


ಚಿಕ್ಕಮಗಳೂರು: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ

ಚಿಕ್ಕಮಗಳೂರು: ನಾಯಿ ಬೊಗಳಿದ್ದಕ್ಕೆ ಮನೆ ಮಾಲೀಕನ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಹಾಳ್ ಕರಗುಂದ ಗ್ರಾಮದಲ್ಲಿ ನಡೆದಿದೆ.


ಜೇಮ್ಸ್ ಆಸಿಡ್ ದಾಳಿ ಮಾಡಿದ ಆರೋಪಿಯಾದರೆ, ಸುಂದರ್ ರಾಜ್ ಆಸಿಡ್ ದಾಳಿಗೊಳಗಾದ ವ್ಯಕ್ತಿ. ಜೇಮ್ಸ್ ಹಾಗೂ ಸುಂದರ್ ರಾಜ್ ಅಕ್ಕಪಕ್ಕದ ಮನೆಯವರು. ಹಲವು ದಿನಗಳಿಂದ ಇಬ್ಬರ ನಡುವೆ ಗಲಾಟೆಯಾಗಿ, ಮನಸ್ಥಾಪವಿತ್ತು. ನಿನ್ನೆ ಸುಂದರ್ ರಾಜ್ ಮನೆಯ ಸಾಕು ನಾಯಿ ಬೊಗಳುತ್ತಿತ್ತು.


ಈ ವೇಳೆ ಮನೆ ಮಾಲೀಕ ಸುಂದರ್ ರಾಜ್ ನಾಯಿಗೆ ಬೈದಿದ್ದಾರೆ. ಆಗ ಜೇಮ್ಸ್ ನಾಯಿಗೆ ಬೈದಂತೆ ನನಗೆ ಬೈಯುತ್ತಿದ್ದಾನೆ ಎಂದು ಜಗಳವಾಡಿದ್ದಾನೆ. ಇಬ್ಬರು ಜಗಳವಾಡುವಾಗ ಜೇಮ್ಸ್ ಏಕಾಏಕಿ ಸುಂದರ್ ರಾಜ್ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ.

ಪುತ್ತೂರಿಗೆ ಭರ್ತಿದ್ದಾರೆ ಫೈರ ಬ್ರ್ಯಾಂಡ್ ಲೀಡರ್ ಯತ್ನಾಳ್

Posted by Vidyamaana on 2023-05-19 02:44:27 |

Share: | | | | |


ಪುತ್ತೂರಿಗೆ ಭರ್ತಿದ್ದಾರೆ ಫೈರ ಬ್ರ್ಯಾಂಡ್ ಲೀಡರ್ ಯತ್ನಾಳ್

ಪುತ್ತೂರು:ಬ್ಯಾನರ್ ಪ್ರಕರಣದಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಲು ಮತ್ತು ಪ್ರಕರಣದ ಕುರಿತು ಮಾಹಿತಿ ಪಡೆಯಲು ಬಿಜೆಪಿ ಶಾಸಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೇ 19ರಂದು ಪುತ್ತೂರಿಗೆ ಭೇಟಿ ನೀಡಲಿದ್ದಾರೆ. ಎಂದು ಅರುಣ್‌ ಕುಮಾರ್‌ ಪುತ್ತಿಲ ತಿಳಿಸಿದ್ದಾರೆ.ಯತ್ನಾಳ್ ಅವರು ನನಗೆ ದೂರವಾಣಿ ಕರೆ ಮಾಡಿ, ಪುತ್ತೂರಿನಲ್ಲಿ ಪೊಲೀಸರಿಂದ

ಹಲ್ಲೆಗೊಳಗಾದ ಹಿಂದು ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿದರಲ್ಲದೆ ನಾಳೆ ನಾನು

ಪುತ್ತೂರುಗೆ ಬರುತ್ತೇನೆಂದು ತಿಳಿಸಿರುವುದಾಗಿ ಅರುಣ್ ಕುಮಾರ್ ಪುತ್ತಿಲ ಅವರು ಮಾಹಿತಿ ನೀಡಿದರು.

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ.ನಾಳೆ ಬೆಳಿಗ್ಗೆ ಪುತ್ತೂರಿಗೆ ಭೇಟಿ ಕೊಟ್ಟು ನಮ್ಮ ಕಾರ್ಯಕರ್ತರ ಆರೋಗ್ಯ ವಿಚಾರಿಸಲಿದ್ದೇನೆ.ಹಿಂದೂ ಕಾರ್ಯಕರ್ತರೊಂದಿಗೆ ಸದಾ ನಿಲ್ಲಲಿದ್ದೇನೆ.ಧರ್ಮಕ್ಕಾಗಿ ಹೋರಾಟ ಮಾಡುವ ಕಾರ್ಯಕರ್ತರು ಯಾವುದೇ ಕ್ಷಣದಲ್ಲೂ ಎದೆಗುಂದಬೇಡಿ ನಿಮ್ಮೊಡನೆ ನಾವಿದ್ದೇವೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಂಟ್ವಾಳ: ಪ್ರಪಾತಕ್ಕೆ ಉರುಳಿ ಬಿದ್ದ ಬೈಕ್: ಸಿಟಿ ಸೆಂಟರ್ ಉದ್ಯೋಗಿ ಯಶೋದರ್ ಮೃತ್ಯು

Posted by Vidyamaana on 2023-04-10 05:53:42 |

Share: | | | | |


ಬಂಟ್ವಾಳ: ಪ್ರಪಾತಕ್ಕೆ ಉರುಳಿ ಬಿದ್ದ ಬೈಕ್: ಸಿಟಿ ಸೆಂಟರ್ ಉದ್ಯೋಗಿ ಯಶೋದರ್ ಮೃತ್ಯು

ಬಂಟ್ವಾಳ: ಬೈಕ್ ಪ್ರಪಾತಕ್ಕೆ ಬಿದ್ದು ಬೈಕಿನಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ಚಿಕ್ಕ ಮಂಗಳೂರು ಮೂಲದ ಯುವಕ ಮೃತಪಟ್ಟ ಘಟನೆ ಮುಂಜಾವಿನ ವೇಳೆ ಬಿಸಿರೋಡಿನ ಕೈಕಂಬ ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ.

ಚಿಕ್ಕಮಗಳೂರು ನಿವಾಸಿ ಮಂಗಳೂರು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯಶೋಧರ ಮೃತಪಟ್ಟ ದುರ್ದೈವಿ ಯುವಕ.ಈತನ ಸ್ನೇಹಿತ ಬೈಕ್ ಚಲಾಯಿಸುತ್ತಿದ್ದ ಅವಿನಾಶ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಯಾವುದೇ ಪ್ರಾಣಾಪಯವಿಲ್ಲದೆ ಪಾರಾಗಿದ್ದಾನೆ.

ಇವರಿಬ್ಬರೂ ಮಂಗಳೂರು ಸಿಟಿ ಸೆಂಟರ್ ನಲ್ಲಿ ಉದ್ಯೋಗಿಗಳಾಗಿದ್ದು, ಬೆಳ್ತಂಗಡಿಯಲ್ಲಿ ಸ್ನೇಹಿತನ ಮನೆಯಲ್ಲಿ ನಡೆಯುವ ಕೋಲಕ್ಕೆ ಹೋಗಿ ಅಲ್ಲಿಂದ ಸುಮಾರು 3.30 ಗಂಟೆ ವೇಳೆಗೆ ಬರುತ್ತಿರುವಾಗ ಬಿಸಿರೋಡಿನ ಕೈಕಂಬ ಸಮೀಪದ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೋ ದ ಬಳಿ ತಲಪಾಡಿ ಎಂಬಲ್ಲಿ ಸುಮಾರು ಹತ್ತಕ್ಕೂ ಅಧಿಕ ಅಡಿ ಇರುವ ಆಳಕ್ಕೆ ಬಿದ್ದು ಬೈಕಿನ ಹಿಂಬದಿಯಲ್ಲಿ ಇದ್ದ ಸಹಸವಾರ ಯಶೋಧರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಂಗಳೂರು ಕದ್ರಿ ಪಾರ್ಕಿನಲ್ಲಿ ನೈತಿಕ ಗೂಂಡಾಗಿರಿ ಮೂವರ ಅರೆಸ್ಟ್

Posted by Vidyamaana on 2024-01-20 07:27:01 |

Share: | | | | |


ಮಂಗಳೂರು ಕದ್ರಿ ಪಾರ್ಕಿನಲ್ಲಿ ನೈತಿಕ ಗೂಂಡಾಗಿರಿ  ಮೂವರ ಅರೆಸ್ಟ್

ಮಂಗಳೂರು; ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿಗಳಾದ ಯುವಕ- ಯುವತಿ ಕದ್ರಿ ಪಾರ್ಕಿಗೆ ಬಂದಿದ್ದಾಗ, ಯುವಕರ ಗುಂಪು ಯುವ ಜೋಡಿಯನ್ನು ಹಿಂದು- ಮುಸ್ಲಿಂ ಅನ್ಕೊಂಡು ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ನಡೆದಿದೆ.


ದೇರಳಕಟ್ಟೆಯ ಯೆನಪೋಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಮತ್ತು ನಂತೂರಿನ ಜಿಎನ್ಎಂ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಜೊತೆಗೆ ಶುಕ್ರವಾರ ಬೆಳಗ್ಗೆ ಕದ್ರಿ ಪಾರ್ಕಿಗೆ ಆಗಮಿಸಿದ್ದರು. ಅವರು ಬಸ್ಸಿನಲ್ಲಿ ಬರುತ್ತಿದ್ದಾಗಲೇ ಹಿಂಬಾಲಿಸಿದ್ದ ಇತರೇ ವಿದ್ಯಾರ್ಥಿಗಳ ತಂಡ ಕದ್ರಿ ಪಾರ್ಕ್ ಬರುತ್ತಲೇ ಅಡ್ಡಗಟ್ಟಿ ಪ್ರಶ್ನೆ ಮಾಡಿದ್ದಾರೆ. ಯುವಕ- ಯುವತಿ ಕೇರಳ ಮೂಲದವರಾಗಿದ್ದು ಮಲೆಯಾಳಂ ಮಾತನಾಡುತ್ತಿದ್ದರು. ಹಿಂದು ಯುವತಿ ಮತ್ತು ಮುಸ್ಲಿಂ ಯುವಕ ಅನ್ಕೊಂಡು ಪ್ರಶ್ನೆ ಮಾಡಿ, ಇಬ್ಬರ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ, ಅವರ ವಿಡಿಯೋ, ಫೋಟೋ ರೆಕಾರ್ಡ್ ಮಾಡಿದ್ದಾರೆ.


ಅಷ್ಟರಲ್ಲಿ ಕದ್ರಿ ಪೊಲೀಸರು ಸ್ಥಳಕ್ಕೆ ಬಂದು ಯುವಕ- ಯುವತಿಯನ್ನು ರಕ್ಷಿಸಿದ್ದು, ಹಲ್ಲೆಗೆ ಮುಂದಾಗಿದ್ದ ಮೂವರು ಯುವಕರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿತರನ್ನು ನಿತಿನ್(18) ಮತ್ತು ಹರ್ಷ (18) ಎಂದು ಗುರುತಿಸಿದ್ದು, ಇನ್ನೊಬ್ಬ 17 ವರ್ಷದವನು. ಈ ಮೂವರು ಕೂಡ ವಿದ್ಯಾರ್ಥಿಗಳಾಗಿದ್ದು, ಹಲ್ಲೆಗೆ ಯತ್ನಿಸಿ ಪೊಲೀಸ್ ಕೇಸು ಎದುರಿಸುತ್ತಿದ್ದಾರೆ. ಕದ್ರಿ ಠಾಣೆಯಲ್ಲಿ ಇವರ ವಿರುದ್ಧ 341, 504, 509, 354ಬಿ, 354ಡಿ ಸೆಕ್ಷನ್ ಅಡಿ ಕೇಸು ದಾಖಲಾಗಿದೆ.

ಕೆಎಂಎಫ್‌ ಅಧ್ಯಕ್ಷರಾಗಿ ಸಿದ್ದರಾಮಯ್ಯ ಆಪ್ತ ಭೀಮಾ ನಾಯ್ಕ್ ಆಯ್ಕೆ

Posted by Vidyamaana on 2023-06-21 09:50:57 |

Share: | | | | |


ಕೆಎಂಎಫ್‌ ಅಧ್ಯಕ್ಷರಾಗಿ ಸಿದ್ದರಾಮಯ್ಯ ಆಪ್ತ ಭೀಮಾ ನಾಯ್ಕ್ ಆಯ್ಕೆ

ಬೆಂಗಳೂರು : ಕರ್ನಾಟಕ ಹಾಲು ಮಾರಾಟ ಮಹಾಮಂಡಳ (ಕೆಎಂಎಫ್‌) ಅಧ್ಯಕ್ಷರಾಗಿ ಭೀಮಾ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಿದ್ದರಾಮಯ್ಯ ಅವರ ಆಪ್ತರಾಗಿರುವ ಮಾಜಿ ಶಾಸಕ ಭೀಮಾ ನಾಯ್ಕ್ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು.ನಿರೀಕ್ಷೆಯಂತೆ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್​ ಅವರಿಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಸ್ಥಾನ ಒಲಿದಿದೆ.


ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ, ಬಾಲಚಂದ್ರ ಜಾರಕಿಹೊಳಿ ಅವರ ಅಧ್ಯಕ್ಷ ಸ್ಥಾನ ತೆರವಾಗಿದ್ದು, ಚುನಾವಣೆ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ಯಾರು ನಾಮಪತ್ರ ಸಲ್ಲಿಸದಿರುವುದರಿಂದ ಭೀಮಾ ನಾಯ್ಕ್ ಅವರು ಅವಿರೋಧವಾಗಿ ಆಯ್ಕೆಯಾದರು.ಒಟ್ಟು 14 ಒಕ್ಕೂಟದ ಪ್ರತಿನಿಧಿಗಳು, ಪಶುಸಂಗೋಪನಾ ಇಲಾಖೆ ನಿರ್ದೇಶಕ, ಸಹಕಾರ ಇಲಾಖೆ ರಿಜಿಸ್ಟಾರ್‌, ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಒಬ್ಬರು ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 18 ಮಂದಿ ಮತದಾನ ಹೊಂದಿದ್ದರು, ಆದ್ರೆ, ಭೀಮಾ ನಾಯ್ಕ್​ಗೆ ಎದುರಾಳಿಯಾಗಿ ಯಾರೂ ನಾಮಪತ್ರ ಸಲ್ಲಿಸಿಲ್ಲ. ಇದರಿಂದ ಮತದಾನ ನಡೆಯದೇ ಭೀಮಾ ನಾಯ್ಕ್ ಅವರು​ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ಭೀಮಾ ನಾಯ್ಕ್. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು, ಆದರೆ ಸಿದ್ದರಾಮಯ್ಯ ಅವರ ಆಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

ಸುದ್ದಿಗಳುವಿಧಾನಸಭೆ ಚುನಾವಣೆ: ಕಾಂಗ್ರೆಸ್‌ ನ ಮೊದಲ ಪಟ್ಟಿ ರಿಲೀಸ್

Posted by Vidyamaana on 2023-03-25 03:19:12 |

Share: | | | | |


ಸುದ್ದಿಗಳುವಿಧಾನಸಭೆ ಚುನಾವಣೆ: ಕಾಂಗ್ರೆಸ್‌ ನ ಮೊದಲ ಪಟ್ಟಿ ರಿಲೀಸ್

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷದ ಮೊದಲ ಪಟ್ಟಿ ರಿಲೀಸ್‌ ಆಗಿದೆ. ಮೊದಲ ಪಟ್ಟಿಯಲ್ಲಿ 124 ಸ್ಥಾನಗಳಿಗೆ ಟಿಕೆಟ್‌ ಘೋಷಿಸಲಾಗಿದೆ.ಪ್ರಮುಖವಾಗಿ  ಕಾಪು ಕ್ಷೇತ್ರಕ್ಕೆ ಪುತ್ತೂರಿನವರಾದ ವಿನಯ್‌ ಕುಮಾರ್‌ ಸೊರಕೆ  ಸುಳ್ಯ ಕ್ಷೇತ್ರದಿಂದ ಕೃಷ್ಣಪ್ಪ ಮೂಡಬಿದ್ರೆ ಕ್ಷೇತ್ರದಿಂದ ಮಿಥುನ್ ರೈ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ನಂಜನಗೂಡು ಕ್ಷೇತ್ರಕ್ಕೆ ಧ್ರುವನಾರಾಯಣ್‌ ಅವರ ಪುತ್ರ ದರ್ಶನ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಕನಕಪುರ ಕ್ಷೇತ್ರದಿಂದ ಡಿಕೆಶಿ ಅವರು ಸ್ಪರ್ಧಿಸಲಿದ್ದಾರೆ. ದೇವನಹಳ್ಳಿ ಕ್ಷೇತ್ರದಿಂದ ಹೆಚ್.ಸಿ.ಮಹದೇವಪ್ಪ ಅವರಿಗೆ ಟಿಕೆಟ್‌ ನೀಡಲಾಗಿದೆ. ಗಾಂಧಿನಗರದಿಂದ ದಿನೇಶ್‌ ಗುಂಡೂರಾವ್‌, ಬಿಟಿಎಂ ಲೇಔಟ್‌ ನಿಂದ ರಾಮಲಿಂಗ ರೆಡ್ಡಿ, ರಾಮನಗರ ಕ್ಷೇತ್ರದಿಂದ ಇಕ್ಬಾಲ್‌ ಅವರಗೆ ಟಿಕೆಟ್‌ ನೀಡಲಾಗಿದೆ. ಸೊರಕೆ,ಕುಂದಾಪುರ ಕ್ಷೇತ್ರಕ್ಕೆ ಎಂ.ದಿನೇಶ್‌ ಹೆಗ್ಡೆ,ಬೈಂದೂರು ಕ್ಷೇತ್ರದಿಂದ ಗೋಪಾಲ್‌ ಪೂಜಾರಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಕೋಲಾರ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದನ್ನು ಇನ್ನು ರಿವೀಲ್‌ ಮಾಡಿಲ್ಲ.

Recent News


Leave a Comment: