ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಸುದ್ದಿಗಳು News

Posted by vidyamaana on 2024-07-08 14:36:42 |

Share: | | | | |


ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಬೆಂಗಳೂರು : ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ದಿಯಾ ಮಂಡೋಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.ದಿಯಾ ಮಂಡೋಲ್ ಪಶ್ಚಿಮ ಬಂಗಾಳ‌ ಮೂಲದವಳಾಗಿದ್ದು, ಮದರ್ ಥೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು.

ಮೂರು ದಿನಗಳ ಹಿಂದೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ದಿಯಾ ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಪಾಠಿಗಳು ರೂಮಿಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

 Share: | | | | |


ಕೊನೆಗೂ ಪತ್ನಿ ಸಾವಿನ ನಿಗೂಢ ರಹಸ್ಯ ಬಿಚ್ಚಿಟ್ಟ ಬೋನಿ ಕಪೂರ್ - ಶ್ರೀದೇವಿ ಸತ್ತಿದ್ದು ಹೇಗೆ ಗೊತ್ತಾ?

Posted by Vidyamaana on 2023-10-03 15:33:22 |

Share: | | | | |


ಕೊನೆಗೂ ಪತ್ನಿ ಸಾವಿನ ನಿಗೂಢ ರಹಸ್ಯ ಬಿಚ್ಚಿಟ್ಟ ಬೋನಿ ಕಪೂರ್ -  ಶ್ರೀದೇವಿ ಸತ್ತಿದ್ದು ಹೇಗೆ ಗೊತ್ತಾ?

   ತಮ್ಮ ಅದ್ಭುತ ಅಭಿನಯದ ಮೂಲಕ ರಂಜಿಸಿದ ಅತಿಲೋಕ ಸುಂದರಿ ಶ್ರೀದೇವಿ ಅವರು ಐದು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಪತಿ ಜತೆ ದುಬೈಗೆ ತೆರಳಿದ್ದ ಶ್ರೀದೇವಿ ಅವರು ಆಕಸ್ಮಿಕವಾಗಿ ಬಾತ್‌ ಟಬ್‌ಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು ಎಂದು ಮರಣೋತ್ತರ ಪರೀಕ್ಷೆಯಲ್ಲಿ ಹೇಳಲಾಗಿತ್ತು.ಇನ್ನೂ ಶ್ರೀದೇವಿಯದ್ದು ಸಹಜ ಸಾವಲ್ಲ, ಅನುಮಾನಾಸ್ಪದವಾಗಿ ನಿಧನರಾಗಿದ್ದಾರೆ ಎಂದು ಕೆಲವರು ಪತಿ ಬೋನಿ ಕಪೂರ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲಿನ ಪೊಲೀಸರು ಕೂಡ ಬೋನಿ ಕಪೂರ್ ಮೇಲೆ ಅನುಮಾನಗೊಂಡು ಭಾರೀ ವಿಚಾರಣೆ ನಡೆಸಿದ್ದರು. ಇದೀಗ 5 ವರ್ಷಗಳ ಬಳಿಕ ಸಂದರ್ಶನವೊಂದರಲ್ಲಿ ಬೋನಿ ಕಪೂರ್ ಪತ್ನಿ ಶ್ರೀದೇವಿ ಸಾವಿನ ಬಗ್ಗೆ ಮಾತನಾಡಿದ್ದಾರೆ."ಶ್ರೀದೇವಿ ಸಾವಿನ ಬಗ್ಗೆ ಮಾತನಾಡದಿರಲು ನಿರ್ಧರಿಸಿದೆ. ಏಕೆಂದರೆ ಆಕೆ ಸಾವಿನ ಸಂಬಂಧ ನನ್ನನ್ನು 48 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಇಲ್ಲಿ ಯಾವುದೇ ಮೋಸದಾಟ ಇರಲಿಲ್ಲ. ನಾನು ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಎಲ್ಲಾ ತರಹದ ವಿಚಾರಣೆ ಎದುರಿಸಿದೆ. ಕೊನೆಗೆ ಬಂದ ವರದಿಯಲ್ಲಿ ಶ್ರೀದೇವಿ ಸಾವು ಆಕಸ್ಮಿಕ ಎಂದು ಸ್ಪಷ್ಟವಾಯಿತು.ಇನ್ನೂ ಶ್ರೀದೇವಿ ಅವರಿಗೆ ಸೌಂದರ್ಯ ಮೇಲಿದ್ದ ಹೆಚ್ಚಿನ ಕಾಳಜಿ ಅವರ ಸಾವಿಗೆ ಕಾರಣವಾಯಿತು ಎಂದು ಬೋನಿ ಕಪೂರ್ ಹೇಳಿದರು..


ಪಡೀಲ್ ಕೆಪುಳು ಬಳಿ ಬೈಕ್ ಸ್ಕೂಟರ್ ನಡುವೆ ನಡೆದ ಅಪಘಾತದ ಸಿ ಸಿ ಟಿವಿ ದೃಶ್ಯ!

ಉಪ್ಪು ಇಲ್ಲದ ಆಹಾರ ಸೇವನೆ ಮಾಡುತ್ತಿದ್ದ ಶ್ರೀದೇವಿ:

"ತೆರೆಮೇಲೆ ಅಂದವಾಗಿ ಕಾಣಿಸಬೇಕು ಎಂದು ಶ್ರೀದೇವಿ ಸ್ಟ್ರಿಕ್ಟ್ ಡಯೆಟ್ ಅನುಸರಿಸುತ್ತಿದ್ದಳು. ಮದುವೆ ನಂತರ ಈ ವಿಷಯ ನನಗೆ ತಿಳಿಯಿತು. ಉಪ್ಪು ಇಲ್ಲದೆ ಆಹಾರ ಸೇವನೆ ಮಾಡುತ್ತಿದ್ದರಿಂದ ಅನೇಕ ಬಾರಿ ಲೋ ಬಿಪಿಯಿಂದ ನಿತ್ರಾಣಗೊಳ್ಳುತ್ತಿದ್ದಳು. ವೈದ್ಯರು ಜಾಗೃತೆಯಿಂದ ಇರಲು ಹೇಳಿದ್ದರು. ಆದರೆ ಆಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಶ್ರೀದೇವಿಯದ್ದು ಸಹಜ ಸಾವಲ್ಲ. ಆಕಸ್ಮಿಕ ಸಾವು" ಎಂದಿದ್ದಾರೆ.


ಇನ್ನೂ ಶ್ರೀದೇವಿ ನಿಧನದ ಬಳಿಕ ನಟ ನಾಗಾರ್ಜುನ್‌ ಸಾಂತ್ವನ ಹೇಳಲು ಮನೆಗೆ ಬಂದಿದ್ದರು. ಈ ವೇಳೆ ತಮ್ಮ ಸಿನಿಮಾವೊಂದರ ಚಿತ್ರೀಕರಣದ ವೇಳೆಯೂ ಇದೇ ರೀತಿ ಶ್ರೀದೇವಿ ಡಯೆಟ್ ಮಾಡಿ ಬಾತ್ರೂಮ್‌ನಲ್ಲಿ ಬಿದ್ದು ಹಲ್ಲು ಮುರಿದುಕೊಂಡಿದ್ದಳು ಎಂದು ಅವರು ಹೇಳಿದ್ದರು" ಎಂದರು.ಇನ್ನೂ ವೈದ್ಯರ ಬಳಿ ನಾನು ಆಕೆಗೆ ಕೊಂಚ ಉಪ್ಪು ತಿನ್ನುವಂತೆ ಶಿಫಾರಸ್ಸು ಮಾಡುವಂತೆ ಮಾಡಿದ್ದೆ. ಊಟದ ಸಮಯದಲ್ಲಿ ನಾನು ಕೂಡ ಉಪ್ಪು ಬೆರಸಿ ಕೊಡುತ್ತಿದ್ದೆ. ಆದರೆ ಆಕೆ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ದುಬೈನಲ್ಲಿ ಕೊನೆಯುಸಿರೆಳೆದ ಶ್ರೀದೇವಿ

ದುಬೈನ ಎಮಿರೇಟ್ಸ್‌ ಟವರ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದ ನಟಿ ಶ್ರೀದೇವಿ ಬಾತ್‌ರೂಮ್‌ಗೆ ತೆರಳಿದಾಗ ಹೃದಯ ಸ್ತಂಭನವಾಗಿದ್ದು, ಬಾತ್‌ಟಬ್‌ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಫೋರೆನ್ಸಿಕ್ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ದುಬೈನ ಜನರಲ್‌ ಡಿಪಾರ್ಟ್‌ಮೆಂಟ್‌ ಆಫ್‌ ಫೋರೆನ್ಸಿಕ್‌ನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಪಾರ್ಥೀವ ಶರೀರವನ್ನು ಮುಂಬೈಗೆ ತಂದು ಅಂತ್ಯಕ್ರಿಯೆ ನಡೆಸಲಾಗಿತ್ತು.2018 ಫೆಬ್ರವರಿಯಲ್ಲಿ ಶ್ರೀದೇವಿ ಒಂದು ಮದುವೆಯಲ್ಲಿ ಭಾಗಿ ಆಗಲು ದುಬೈಗೆ ಹೋಗಿದ್ದರು. ಪತ್ನಿ ಶ್ರೀದೇವಿಗೆ ಸರ್‌ಪ್ರೈಸ್‌ ನೀಡಲು ಬಳಿಕ ಬೋನಿ ಕಪೂರ್ ಭಾರತದಿಂದ ದುಬೈಗೆ ತೆರಳಿದ್ದರು. ಇಬ್ಬರು ಹೊರಗೆ ಊಟಕ್ಕೆ ಹೋಗಲು ತಯಾರಾಗುತ್ತಿದ್ದರು. ಸ್ಥಳೀಯ ಕಾಲಮಾನ ಸಂಜೆ 5.30ರ ಸುಮಾರಿಗೆ, ತಯಾರಾಗಿ ಬರುತ್ತೇನೆಂದು ಶ್ರೀದೇವಿ ಬಾತ್ ರೂಮಿಗೆ ತೆರಳಿದ್ದಾರೆ.ಎಷ್ಟೆ ಹೊತ್ತು ಆದರೂ ಆಕೆ ಹೊರಗೆ ಬರದಿದ್ದಾಗ ಅನುಮಾನಗೊಂಡ ಬೋನಿ, ಬಲವಂತವಾಗಿ ಬಾಗಿಲು ತೆರೆದಾಗ ನಿಶ್ಚಲರಾಗಿ ನೀರು ತುಂಬಿದ್ದ ಬಾತ್ ಟಬ್‌ನಲ್ಲಿ ಬಿದ್ದಿದ್ದರು. ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಹನಟಿ ವಿದ್ಯಾ ಬರ್ಬರ ಕೊಲೆ

Posted by Vidyamaana on 2024-05-21 14:28:01 |

Share: | | | | |


ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಹನಟಿ ವಿದ್ಯಾ ಬರ್ಬರ ಕೊಲೆ

ಮೈಸೂರು: ಪತಿಯೇ ಪತ್ನಿಯನ್ನು (Husband and Wife) ಬರ್ಬರವಾಗಿ ಕೊಲೆ (Murder Case) ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರದ ತುರಗನೂರು ಗ್ರಾಮದಲ್ಲಿ ನಡೆದಿದೆ. ಮೈಸೂರು (Mysuru) ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿದ್ಯಾ ಕೊಲೆಯಾದ ದುರ್ದೈವಿಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ಗಂಡನೇ ವಿದ್ಯಾಳ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಮೃತ ವಿದ್ಯಾ ಅವರು ಭಜರಂಗಿ, ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲೂ ಸಕ್ರೀಯವಾಗಿದ್ದರು. ಸೋಮವಾರ ರಾತ್ರಿ ಗಂಡ ಹಾಗೂ ಪತ್ನಿ ನಡುವೆ ಜಗಳ ನಡೆದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿ ಹತ್ಯೆ ಪತಿ ನಂದೀಶ್ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿದ್ಯಾರ್ಥಿ ನಾಪತ್ತೆ

Posted by Vidyamaana on 2024-01-23 14:23:13 |

Share: | | | | |


ವಿದ್ಯಾರ್ಥಿ ನಾಪತ್ತೆ

ಸುಳ್ಯ ; ಕಾಣಿಯೂರು ಖಾಸಗಿ   ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಲೋಕನಾಥ್ ಎಂಬವರ ಮಗ ಶ್ರೇಯಸ್   (15 ವ ) ಜ .23 ರಂದು


 ಬೆಳಿಗ್ಗೆ 7.45 ಗಂಟೆಗೆ ಮನೆಯಿಂದ ಹೊರಟವನು ಶಾಲೆಗೆ ಹೋಗದೆ ಪುತ್ತೂರು ಬಸ್ಸು ನಿಲ್ದಾಣದಿಂದ ಕಾಣೆಯಾಗಿರುತ್ತಾನೆ.    ಎತ್ತರ 5 ಅಡಿ ,ಸಪೂರ ಶರೀರ, ಗೋಧಿ ಮೈಬಣ್ಣ.    ಗುಲಾಬಿ ಬಣ್ಣದ ಶರ್ಟು, ಕಪ್ಪು ಟೈ, ಕಂದು ಬಣ್ಣದ ಪ್ಯಾಂಟ್, ಕೈಯಲ್ಲಿ ಕೇಸರಿ ಬಣ್ಣದ ದಾರ ,ವಾಚ್, ಉಂಗುರ ಧರಿಸಿರುತ್ತಾನೆ


 ಈ ವಿದ್ಯಾರ್ಥಿಯ ಗುರುತು ಪರಿಚಯ ಯಾರಿಗಾದರೂ ಸಿಕ್ಕಲ್ಲಿ ಸ್ಥಳೀಯ ಪೊಲೀಸ್‌ ಠಾಣೆ  ಸಂಪರ್ಕಿಸಲು ಕೋರಲಾಗಿದೆ

ಉಜಿರೆ ಬಸ್ಸಿನಲ್ಲಿ ಪರಿಚಯದ ಯುವತಿಯೊಂದಿಗೆ ಮಾತನಾಡಿದ್ದಕೆ ಯುವಕನಿಗೆ ಹಲ್ಲೆನಡೆಸಿದ ತಂಡ

Posted by Vidyamaana on 2023-04-04 22:43:37 |

Share: | | | | |


ಉಜಿರೆ ಬಸ್ಸಿನಲ್ಲಿ ಪರಿಚಯದ ಯುವತಿಯೊಂದಿಗೆ ಮಾತನಾಡಿದ್ದಕೆ ಯುವಕನಿಗೆ ಹಲ್ಲೆನಡೆಸಿದ ತಂಡ

ಬೆಳ್ತಂಗಡಿ: ಯುವತಿಯೊಬ್ಬಳೊಂದಿಗೆ ಬಸ್ಸಿನಲ್ಲಿ ಮಾತನಾಡಿದ ಕಾರಣಕ್ಕೆ ಯುವಕನನ್ನು ತಂಡವೊಂದು ಬಸ್ಸಿನಿಂದ ಹೊರಗೆಳೆದು ಹಲ್ಲೆ ನಡೆಸಿದ ಘಟನೆ ಉಜಿರೆಯಲ್ಲಿ ಎ.4ರಂದು ನಡೆದಿದೆ. ಕಕ್ಕಿಂಜೆ ನಿವಾಸಿ ಸಾಹಿಲ್(22.ವ)ಹಲ್ಲೆಗೊಳಗಾದ ಯುವಕ.ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಸಾಹಿಲ್ ಇಂದು ಬಸ್ಸಿನಲ್ಲಿ ಬರುತ್ತಿದ್ದ ವೇಳೆ ತನ್ನ ಪರಿಚಯದ ಯುವತಿಯೊಂದಿಗೆ ಮಾತನಾಡಿದ್ದ ಎನ್ನಲಾಗಿದೆ. ಯುವತಿ ಬೆಳ್ತಂಗಡಿಯಲ್ಲಿ ಬಸ್ಸಿನಿಂದ ಇಳಿದಿದ್ದಾಳೆ.ಬಸ್ಸಿನಲ್ಲಿ ಇವರನ್ನು ಗಮನಿಸಿ ಯಾರೋ ಉಜಿರೆಯ ಯುವಕರಿಗೆ ಮಾಹಿತಿ ನೀಡಿದ್ದು, ಈತನನ್ನು ಉಜಿರೆಯಲ್ಲಿ ಕಾದು ನಿಂತಿದ್ದ ಯುವಕರ ತಂಡ ಬಸ್ಸಿನಿಂದ ಹೊರಗೆಳೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದೀಗ ಹಲ್ಲೆಗೆ ಒಳಗಾಗಿರುವ ಸಾಹಿಲ್ ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದು ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಯುವಕನಿಂದ ಮಾಹಿತಿ ಪಡೆದುಕೊಂಡಿದ್ದು,

ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕ ಟೈಲರ್‍ಸ್ ಎಸೋಸಿಯೇಶನ್ ಪುತ್ತೂರು ಕ್ಷೇತ್ರದ ಮಹಾಸಭೆ

Posted by Vidyamaana on 2023-07-31 03:13:10 |

Share: | | | | |


ಕರ್ನಾಟಕ ಟೈಲರ್‍ಸ್ ಎಸೋಸಿಯೇಶನ್ ಪುತ್ತೂರು ಕ್ಷೇತ್ರದ ಮಹಾಸಭೆ

ಪುತ್ತೂರು: ಆಧುನಿಕ ಜಗತ್ತಿನಲ್ಲಿ ಫ್ಯಾಷನ್ ಉಡುಗೆ ಬಂದರೂ ಜನರು ಮಾತ್ರ ತಮ್ಮ ಹಳೆಯ ಶೈಲಿಯ ಬಟ್ಟೆ ಧರಿಸುವುದನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದು ಇದು ಭಾರತೀಯ ಸಂಸ್ಕೃತಿಯ ಮೆರುಗಾಗಿದೆ, ಅನಾಧಿ ಕಾಲದಿಂದಲೂ ಟೈಲರಿಂಗ್ ವೃತ್ತಿ ಮಾಡಿಕೊಂಡೇ ಬದುಕನ್ನು ಕಟ್ಟಿದ ಅನೇಕರು ನಮ್ಮ ಸಮಾಜದಲ್ಲಿ ಇದ್ದಾರೆ. ಟೈಲರಿಂಗ್ ವೃತ್ತಿಯನ್ನು ಮಾಡಿಕೊಂಡು ಬಡತನದಲ್ಲೇ ಜೀವನ ಸಾಗಿಸುವ ಕುಟುಂಬಗಳೂ ಇದೆ, ಟೈಲರಿಂಗ್ ವೃತ್ತಿ ಮಾಡುವ ಬಡ ಟೈಲರ್‌ಗಳಿಗೆ ಜೀವನಕ್ಕೆ ಭದ್ರತೆ ನೀಡಬೇಕದ ಅವಶ್ಯಕತೆ ಇದ್ದು ನಿಮ್ಮ ಬೇಡಿಕೆಗಳ ಬಗ್ಗೆ ವಿಧಾನಸಭೆಯನ್ನು ಧ್ವನಿ ಎತ್ತುವ ಮೂಲಕ ಸರಕಾರದ ಗಮನಕ್ಕೆ ತರುತ್ತೇನೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಜು.3೦ ರಂದು ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಸ್ಟೇಟ್ ಟೈಲರ್‍ಸ್ ಎಸೋಸಿಯೇಶನ್ ಇದರ ಪುತ್ತೂರು ಕ್ಷೇತ್ರ ಸಮಿತಿಯ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಟೈಲರಿಂಗ್ ವೃತ್ತಿಗೆ ಇಂದು ಆಧುನಿಕತೆಯ ಟಚಪ್ ದಾಳಿ ಮಾಡಿದೆ. ಹೊರ ಜಿಲ್ಲೆಗಳಿಂದ ಬರುವ ಫ್ಯಾಷನ್ ಡಿಸೈನ್ ವೃತ್ತಿಯವರು ದುಬಾರಿ ಬೆಲೆಗೆ ಟೈಲರಿಂಗ್ ಕೆಲಸವನ್ನು ಮಾಡುತ್ತಿದ್ದಾರೆ, ಟೈಲರಿಂಗ್ ವೃತ್ತಿಯಲ್ಲೇ ಜೀವನ ಕಟ್ಟಿಕೊಂಡ ಅನೇಕರೂ ಇದ್ದಾರೆ. ಆದರೆ ಬಡ ಟೈಲರ್‌ಗಳು ಅಂದಿನಿಂದ ಇಂದಿನ ತನಕ ಬಡವನಾಗಿಯೇ ತನ್ನ ಕಸುಬನ್ನು ಮಾಡುತ್ತಿದ್ದು ಅವರಿಗೆ ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಟೈಲರಿಂಗ್ ಕಾರ್ಮಿಕರನ್ನು ಸೇರಿಸುವ ಬಗ್ಗೆ ತಾನು ಆ ಇಲಾಖೆಯ ಸಚಿವರ ಜೊತೆ ಮಾತುಕತೆ ನಡೆಸಿ ತನ್ನಿಂದಾಗುವ ಎಲ್ಲಾ ಸಹಾಯವನ್ನು ಮಾಡುವುದಾಗಿ ಶಾಸಕರು ಸಭೆಯಲ್ಲಿ ಭರವಸೆ ನೀಡಿದರು.

ಕಳೆದ ೨೪ ವರ್ಷಗಳಿಂದ ತಮ್ಮ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದರೂ ಇದುವರೆಗೂ ಅದನ್ನು ಯಾವುದೇ ಸರಕಾರ ಪರಿಗಣಿಸಿಲ್ಲ ಎಂದು ಸಮಿತಿಯ ಪ್ರಮುಖರು ಶಾಸಕರ ಗಮನಕ್ಕೆ ತಂದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಶಾಸಕರು ಸಭೆಯಲ್ಲಿ , ಸಾರ್ವಜನಿಕ ವೇದಿಕೆಯಲ್ಲಿ ನಾವು ಬೊಬ್ಬೆ ಹೊಡೆದರೆ ಯಾವುದೇ ಪ್ರಯೋಜನವಿಲ್ಲ ಮಾತನಾಡುವಲ್ಲಿ ಮಾತನಾಡಬೇಕು, ಕೇಳುವವರಲ್ಲಿ ಕೇಳಿದರೆ ಅದಕ್ಕೆ ಪರಿಹಾರ ಸಿಗಬಹುದು ಮತ್ತು ಬೇಡಿಕೆಯನ್ನು ಈಡೇರಿಸಿಕೊಳ್ಳಬಹುದು ಈ ನಿಟ್ಟಿನಲ್ಲಿ ತನು ಖಂಡಿತಾ ಪ್ರಯತ್ನ ಪಡುವುದಾಗಿ ಶಾಸಕರು ಹೇಳಿದರು.

ಪುತ್ತೂರು ಕ್ಷೆತ್ರ ಸಮಿತಿಯ ಅಧ್ಯಕ್ಷರಾದ ಜಯರಾಮ ಬಿ ಎನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆಎಸ್‌ಟಿ ರಾಜ್ಯ ಸಮಿತಿ ಅಧ್ಯಕ್ಷರಾದ ಬಿ ಎ ನಾರಾಯಣ, ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎ ಪ್ರಜ್ವಲ್‌ಕುಮಾರ್, ಜಿಲ್ಲಾ ಸಮಿತಿ ಅಧ್ಯಕ್ಷರಾದ ಜಯಂತ ಉರ್ಲಾಂಡಿ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಲಿಗೋಧರ ಆಚಾರ್ಯ, ಜಿಲ್ಲಾ ಸಮಿತಿ ಕೋಶಾಧಿಕಾರಿ ಈಶ್ವರಕುಲಾಲ್,ಪುತ್ತೂರು ಸಮಿತಿ ಕಾರ್ಯದರ್ಶಿ ಉಮಾ ಯು ನಾಯ್ಕ್, ಕೋಶಾಧಿಕಾರಿ ಸುಜಾತಾ ಮಂದಾರ, ಪ್ರೇಮಲತಾ ಶೆಟ್ಟಿ, ದಾಮೋದರ ಶೆಟ್ಟಿಗಾರ್, ಕೇಶವ ಕದ್ರಿ, ಯಶೋಧರ್ ಜೈನ್, ನಾಗೇಶ್ ಕುಲಾಲ್  ಉಪಸ್ಥಿತರಿದ್ದರು. ರಾಜ್ಯ ಸಮಿತಿ ಆಂತರಿಕ ಲೆಕ್ಕಪರಿಸೋಧಕರಾದ ಬಿ ರಘುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಉಮಾನಾಯ್ಕ್ ವಂದಿಸಿದರು. ಶಂಭು ಬಲ್ಯಾಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೆಎಸ್‌ಟಿ ವತಿಯಿಂದ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆ ಜ್ಞಾನ ಭಂಡಾರ ದ ಉಡುಗೊರೆ ನೀಡಿದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ

Posted by Vidyamaana on 2024-04-03 21:01:49 |

Share: | | | | |


ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆ ಜ್ಞಾನ ಭಂಡಾರ ದ ಉಡುಗೊರೆ ನೀಡಿದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ

ಮಂಗಳೂರು: ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರನ್ನು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ ನೀಡಿ ಆಶೀರ್ವಾದ ಪಡೆದರು.

Recent News


Leave a Comment: