ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ಮಂಗಳೂರಿನಲ್ಲಿ ಸ್ಪೀಕರ್ ಯುಟಿ ಖಾದರ್ ಅವರ ಕುಟುಂಬದ ಅದ್ದೂರಿ ಮದುವೆ ರಿಸೆಪ್ಶನ್ ; ಬರಲಿದ್ದಾರೆ ರಾಜ್ಯಪಾಲರು,ಸಿಎಂ, ಡಿಸಿಎಂ,ಕರ್ನಾಟಕ, ಕೇರಳ ಸಚಿವರ ದಂಡು , ನಗರದಲ್ಲಿ ಸಂಚಾರ ವ್ಯವಸ್ಥೆ ಬದಲಾವಣೆ

Posted by Vidyamaana on 2024-05-25 09:44:52 |

Share: | | | | |


ಮಂಗಳೂರಿನಲ್ಲಿ ಸ್ಪೀಕರ್ ಯುಟಿ ಖಾದರ್ ಅವರ ಕುಟುಂಬದ ಅದ್ದೂರಿ ಮದುವೆ ರಿಸೆಪ್ಶನ್ ; ಬರಲಿದ್ದಾರೆ ರಾಜ್ಯಪಾಲರು,ಸಿಎಂ, ಡಿಸಿಎಂ,ಕರ್ನಾಟಕ, ಕೇರಳ ಸಚಿವರ ದಂಡು , ನಗರದಲ್ಲಿ ಸಂಚಾರ ವ್ಯವಸ್ಥೆ ಬದಲಾವಣೆ

ಮಂಗಳೂರು, ಮೇ 24: ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರ ಹಿರಿಯ ಸೋದರನ ಮಗಳ ಮದುವೆಯ ಅದ್ದೂರಿ ರಿಸೆಪ್ಶನ್ ಸಮಾರಂಭವನ್ನು ಮಂಗಳೂರಿನ ಟಿಎಂಎ ಪೈ ಹಾಲ್ ನಲ್ಲಿ ಮೇ 25 ಮತ್ತು 26ರಂದು ಆಯೋಜಿಸಲಾಗಿದ್ದು ವಿವಿಧ ರಾಜ್ಯಗಳ ರಾಜ್ಯಪಾಲರು, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಕೇರಳ ಸರ್ಕಾರದ ಸಚಿವರು ಆಗಮಿಸಲಿದ್ದಾರೆ. 


ಪ್ರಮುಖ ವಿವಿಐಪಿಗಳು ಮಂಗಳೂರು ನಗರಕ್ಕೆ ಆಗಮಿಸಿ, ನಗರದ PVS ಹಾಗೂ ಲಾಲ್‌ಬಾಗ್ ಜಂಕ್ಷನ್‌ಗಳ ನಡುವೆ ಇರುವ ಎಂ.ಜಿ ರಸ್ತೆಯಲ್ಲಿನ ಟಿ.ಎಂ.ಎ.ಪೈ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಸದ್ರಿ ಪ್ರದೇಶಗಳಲ್ಲಿ ವಾಹನ ದಟ್ಟಣೆ ಅಧಿಕವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನವಭಾರತ ಸರ್ಕಲ್‌ನಿಂದ ಪಿವಿಎಸ್ ಮೂಲಕ ಲೇಡಿಹಿಲ್ ಸರ್ಕಲ್ ಕಡೆಗೆ ಹೋಗುವ ಎಂ.ಜಿ ರಸ್ತೆಯಲ್ಲಿನ ಎಲ್ಲಾ ಸಂಪರ್ಕಗಳನ್ನು ಮುಚ್ಚಬೇಕಾಗುತ್ತದೆ. ಬೆಸೆಂಟ್ ಜಂಕ್ಷನ್, ಕೋಡಿಯಾಲ್‌ಗುತ್ತು ಕ್ರಾಸ್, ಬಲ್ಲಾಳ್‌ಬಾಗ್ ಜಂಕ್ಷನ್, ನೆಹರೂ ಅವೆನ್ಯೂ ಜಂಕ್ಷನ್ ಸಂಪರ್ಕವೂ ಬಂದ್ ಆಗಲಿದೆ. ಸದ್ರಿ ರಸ್ತೆಯನ್ನು ಬಳಸುವ ಎಲ್ಲ ವಾಹನ ಚಾಲಕರಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಪೊಲೀಸರು ಸೂಚಿಸಿದ್ದಾರೆ. 

ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿರುವ ಸ್ಥಳಗಳು 

ಕೊಟ್ಟಾರ ಚೌಕಿ, ಕುಂಟಿಕಾನ, ಕೆ.ಪಿ.ಟಿ, ನಂತೂರು, ಕೆ.ಎಸ್.ಆರ್.ಟಿ.ಸಿ., ಬಂಟ್ಸ್ ಹಾಸ್ಟೆಲ್, ಡಾ. ಅಂಬೇಡ್ಕರ್ ಸರ್ಕಲ್, ಹಾರ್ಟಿಕಲ್ಚರ್ ಜಂಕ್ಷನ್, ಬಲ್ಮಠ, ಹಂಪನಕಟ್ಟೆ, ಕರಾವಳಿ ಸರ್ಕಲ್, ಕಂಕನಾಡಿ, ಪಂಪ್‌ವೆಲ್, ತೊಕ್ಕೊಟ್ಟು.

ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯ ರವೀಂದ್ರ ಕಬಕ ಅವರಿಗೆ ಶ್ರದ್ಧಾಂಜಲಿ ಸಭೆ

Posted by Vidyamaana on 2023-05-23 13:19:48 |

Share: | | | | |


ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯ ರವೀಂದ್ರ ಕಬಕ ಅವರಿಗೆ ಶ್ರದ್ಧಾಂಜಲಿ ಸಭೆ

ಪುತ್ತೂರು: ಇತ್ತೀಚೆಗೆ ನಿಧನರಾದ ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯ ರವೀಂದ್ರ ಕಬಕ ಅವರು ನಿಧನರಾಗಿದ್ದು, ಆ ಹಿನ್ನೆಲೆಯಲ್ಲಿ ಪುತ್ತೂರು ಮಾತೃಛಾಯಾ ಸಭಾಂಗಣದಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಭೆ ನಡೆಯಿತು.

ಪುತ್ತೂರು - ಪೊಲೀಸರಿಂದ ದೌರ್ಜನ್ಯ

Posted by Vidyamaana on 2023-05-18 06:51:04 |

Share: | | | | |


ಪುತ್ತೂರು - ಪೊಲೀಸರಿಂದ ದೌರ್ಜನ್ಯ

ಪುತ್ತೂರು : ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ್ದ ಪ್ರಕರಣದಲ್ಲಿ ಪುತ್ತೂರು ನಗರ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ ಆರೋಪಿತರಿಗೆ ಪೊಲೀಸರು ಹಲ್ಲೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

Dysp ಪುತ್ತೂರು, PSI ಪುತ್ತೂರು ಗ್ರಾಮಾಂತರ ಠಾಣೆ, PC, ಪುತ್ತೂರು ಗ್ರಾಮಾಂತರ ಠಾಣೆ

ರವರುಗಳ ವಿರುದ್ಧ ಪುತ್ತೂರು ನಗರ ಠಾಣೆ Cr no.39/23

u/s 323,324,506 r/w 34IPC ರಂತೆ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆಯನ್ನು Dysp ಬಂಟ್ವಾಳ ರವರಿಗೆ ವಹಿಸಲಾಗಿದೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕರ ವಿಚಾರಣೆ ವರದಿ ಆಧಾರದ ಮೇಲೆ

PSI ಪುತ್ತೂರು ಗ್ರಾಮಾಂತರ ಠಾಣೆ ಹಾಗೂ  PC ರವರುಗಳನ್ನು ಸೇವೆಯಿಂದ ಅಮಾನತ್ತು ಗೊಳಿಸಲಾಗಿದೆ ಹಾಗೂ DYSP ಪುತ್ತೂರು ರವರ ವಿರುದ್ಧ ಸೂಕ್ತ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲು ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ.

94ಸಿ ಗೆ ಪಿಡಿಒಗಳಿಂದ ದೃಡೀಕರಣ ಪತ್ರ ಕೇಳಬೇಡಿ ಮನೆ ಕಟ್ಟಿಕೊಂಡಿದ್ದಲ್ಲಿ ಅರ್ಜಿಯನ್ನು ಪುರಸ್ಕರಿಸಿ: ತಹಶಿಲ್ದಾರ್ ಗೆ ಶಾಸಕರ ಸೂಚನೆ

Posted by Vidyamaana on 2024-01-29 14:54:31 |

Share: | | | | |


94ಸಿ ಗೆ ಪಿಡಿಒಗಳಿಂದ ದೃಡೀಕರಣ ಪತ್ರ ಕೇಳಬೇಡಿ ಮನೆ ಕಟ್ಟಿಕೊಂಡಿದ್ದಲ್ಲಿ ಅರ್ಜಿಯನ್ನು ಪುರಸ್ಕರಿಸಿ: ತಹಶಿಲ್ದಾರ್ ಗೆ ಶಾಸಕರ ಸೂಚನೆ

ಪುತ್ತೂರು; ಗ್ರಾಮೀಣ ಭಾಗದ ಬಡ‌ವರು ಸರಕಾರಿ ಜಾಗದಲ್ಲಿ‌ಮನೆ ಕಟ್ಟಿಕೊಂಡಿದ್ದರೆ ಅವರಿಗೆ ಹಕ್ಕು ಪತ್ರ ಕೊಡಬೇಕು, 94 ಸಿ ಅರ್ಜಿ ಜೊತೆಗೆ ಗ್ರಾಮದ ಪಿಡಿಒಗಳಿಂದ ದೃಡೀಕರಣ ಪತ್ರ ಬೇಕು ಎಂದು ತಹಶಿಲ್ದಾರ್ ಹೇಳುತ್ತಿದ್ದು ಯಾವುದೇ ಕಾರಣಕ್ಕೂ ಪಿಡಿಒಗಳಿಂದ ದೃಡೀಕರಣ ಪತ್ರ ಕೇಳಬೇಡಿ‌ಎಂದು‌ಶಾಸಕರಾದ ಅಶೋಕ್ ರೈ ತಹಶಿಲ್ದಾರ್ ಗೆ ಸೂಚನೆ ನೀಡಿದರು.

ತಾಪಂ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ‌ಮಾತನಾಡಿದ ಶಾಸಕರು ಈ ಸೂಚನೆಯನ್ನು ನೀಡಿದ್ದಾರೆ.‌

ಹಕವಾರು 94 ಸಿ ಅರ್ಜಿಗಳು ಪಿಡಿಒ ದೃಡೀಕರಣ ಪತ್ರವಿಲ್ಲದ ಕಾರಣಕ್ಕೆ ವಿಲೇವಾರಿಯಾಗಿಲ್ಲ ಎಂದು ಸಭೆಗೆ ತಹಶಿಲ್ದಾರ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು ಎರಡು ವರ್ಷದ ಹಿಂದೆ ಬಂದ ಪಿಡಿಒಗೆ  ಹತ್ತು ವರ್ಷಗಳಿಂದ ಆ ಮನೆ ಅಲ್ಲಿದೆ ಎಂಬ ಮಾಹಿತಿ ಇರ್ಲಿಕ್ಕಿಲ್ಲ.‌ಅಕ್ಕಪಕ್ಕದ ಮನೆಯವರಲ್ಲಿ ಕೇಳಿ ದೃಡೀಕರಣ ಮಾಡಿ ದೃಡೀಕರಣ ಪತ್ರವಿಲ್ಲದೆ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ‌ಮಾಡಬೇಕು. ಬಡವರು ಮನೆ ಕಟ್ಟಿರುವ ಜಾಗಕ್ಕೆ ಅರ್ಜಿ ಹಾಕಿದ್ದಾರೆ, ಅವರಿಗೆ ಮನೆ ಕಟ್ಟಿಕೊಂಡ ಜಾಗ ಬಿಟ್ಟು ಬೇರೆ ಜಾಗ ಇಲ್ಲ.‌ಬಡವರಿಗೆ ತೊಂದರೆ ನೀಡುವ ಕೆಲಸವನ್ನು ಯಾರೂ ಮಾಡಬಾರದು. 94 ಸಿ ಯ ಎಷ್ಟು ಅರ್ಜಿ ಯಾವ ಕಾರಣಕ್ಕೆ ಬಾಕಿಯಾಗಿದೆ ಎಂಬುದನ್ನು ನನ್ನ‌ಗಮನಕ್ಕೆ ತರಬೇಕು ಎಂದು‌ಶಾಸಕರು ಸೂಚನೆ ನೀಡಿದರು.

ಡಿ.21-23: ಸುದಾನ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ

Posted by Vidyamaana on 2023-12-21 16:23:24 |

Share: | | | | |


ಡಿ.21-23: ಸುದಾನ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ

ಪುತ್ತೂರು: ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣದ ಜೊತೆಗೆ ಪರಿಸರದ ಶಿಕ್ಷಣವೂ ಮುಖ್ಯ ಎನ್ನುವ ವಿಶಾಲ ದೃಷ್ಟಿಯಿಂದ ಹಚ್ಚ ಹಸಿರಿನ ನಡುವೆ ರೂಪುಗೊಂಡಿರುವ ಪುತ್ತೂರಿನ ಸುದಾನ ವಸತಿಯುತ ಶಾಲೆಯಲ್ಲಿ ಡಿ.21,22 ಮತ್ತು 23ರಂದು ಮೂರು ದಿನಗಳ ಕಾಲ ಶಾಲಾ ವಾರ್ಷಿಕೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.


ಪ್ರತಿ ವರ್ಷ ಒಂದು ಧೈಯ ವಾಕ್ಯವನ್ನು ಇಟ್ಟುಕೊಂಡು ಕಾರ್ಯಾಚರಿಸುವ ಸಂಸ್ಥೆಯು 2023-24ರ ಈ ವರ್ಷ ಭಾರತದ ಕರಾವಳಿಯ ವೈಭವದ ಪರಂಪರೆ ಎಂಬ ಧೈಯ ದೃಷ್ಟಿಯನ್ನು ಅಳವಡಿಸಿಕೊಂಡಿದೆ. ಈ ವರ್ಷ ಎಲ್ಲಾ ಕಾರ್ಯಕ್ರಮಗಳೂ ಈ ಆಶಯದೊಂದಿಗೆ ನಡೆಯಲಿದ್ದು ವಾರ್ಷಿಕೋತ್ಸವದಲ್ಲಿ ಭಾರತದ ಕರಾವಳಿಯ ಸಾಂಸ್ಕೃತಿಕ ಸಿರಿಯ ಅನಾವರಣವು ನಡೆಯಲಿದೆ.


1991-92ರಲ್ಲಿ ಆರಂಭವಾದ ಸುದಾನ ವಸತಿ ಶಾಲೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಹಲವು ಕಾರ್ಯಕ್ರಮಗಳನ್ನು ಸೌಲಭ್ಯಗಳನ್ನು ಅಳವಡಿಸಿಕೊಂಡಿದ್ದು, ರಾಜ್ಯಮಟ್ಟದ ಪರಿಸರ ಮಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಶಾಲೆಯಲ್ಲಿ ಹೈನುಗಾರಿಕೆ, ಪಕ್ಷಿಧಾಮ, ಔಷಧೀಯ ಗಿಡಗಳ ವನ, ಗದ್ದೆ ಬೇಸಾಯ, ಅಲಂಕಾರಿಕ ಮತ್ತು ವಿವಿಧ ಹಣ್ಣುಗಳ ಗಿಡಗಳುಳ್ಳ ನರ್ಸರಿ, ಕಿಟ್ಟೆಲ್ ಲೈಬ್ರೇರಿ, ವಿಶಾಲವಾದ ಆಟದ ಮೈದಾನ ಮುಂತಾದ ಅನೇಕ ವಿನೂತನ ಸೌಲಭ್ಯಗಳನ್ನು ಹೊಂದಿದೆ.


ಶೈಕ್ಷಣಿಕವಾಗಿ ಅಭೂತಪೂರ್ವ ಸಾಧನೆಯನ್ನು ಮಾಡುತ್ತಾ ಸೃಜನಶೀಲತೆಯೊಂದಿಗೆ ಕಾರ್ಯಾಚರಿಸುತ್ತಿರುವ ಸುದಾನ ಶಾಲಾ ವಾರ್ಷಿಕೋತ್ಸವದ ಮೊದಲ ದಿನ, ಡಿ.21ರಂದು

ಶಾಲಾ ವಾರ್ಷಿಕೋತ್ಸವ ಉದ್ಘಾಟನೆ ಶಾಲಾಗೀತೆ  Sudana School Anthem ಬಿಡುಗಡೆ, ಶೈಕ್ಷಣಿಕ ವರ್ಷದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಾಧಕ ಪುರಸ್ಕಾರ ಮತ್ತು ಯುಕೆಜಿ ಮಕ್ಕಳ ಘಟಕೋತ್ಸವವು ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ ಡಾ। ಆಂಟನಿ ಪ್ರಕಾಶ್ ಮೊಂತೆರೋ, ಅಕ್ಷಯ ಕಾಲೇಜಿನ ಸಂಚಾಲಕರಾದ ಜಯಂತ ನಡುಬೈಲ್ ಅವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.


ಡಿ.22 ರಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಾರ್ಷಿಕೋತ್ಸವ ನಡೆಯಲಿದ್ದು ಶಾಲೆಯ ಹಿರಿಯ ವಿದ್ಯಾರ್ಥಿ ಡಾ. ಸಂಜನಾ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಲಿದ್ದು ಅವನಿ ಬೆಳ್ಳಾರೆ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಡಿ.23ರಂದು ಪ್ರೌಢಶಾಲಾ ವಾರ್ಷಿಕೋತ್ಸವವು ನಡೆಯಲಿದ್ದು ಸಾಹಿತಿ ಡಾ.ನರೇಂದ್ರ ರೈ ದೇರ್ಲರವರು ಸಭಾಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಸುಶಾಂತ ಹಾರ್ವಿನ್, ಡಾ. ವಿಖ್ಯಾತ್ ನಾರಾಯಣ್ ಸತ್ಯಾತ್ಮ, ಹರ್ಷಿತ್ ಎಂ.ಬಿ ಭಾಗವಹಿಸಲಿದ್ದಾರೆ. ಮೂರು ದಿನವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ವಿದ್ಯಾರ್ಥಿಗಳು, ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಭಾರತದ ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಲಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

ಪುತ್ತೂರು : ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

Posted by Vidyamaana on 2024-08-05 18:38:19 |

Share: | | | | |


ಪುತ್ತೂರು : ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

ಪುತ್ತೂರು : ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಮೀಸಲಾತಿ ಪ್ರಕಟಗೊಂಡಿದೆ.



Leave a Comment: