ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಸುದ್ದಿಗಳು News

Posted by vidyamaana on 2024-07-05 10:22:02 |

Share: | | | | |


ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಅಧಿಕಾರ ಸ್ವೀಕಾರ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿ ಯತೀಶ್ N. IPS ಇಂದು ಮಂಗಳೂರಿನ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರಿಷ್ಯಂತ್ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆಯಾಗಿದ್ದರು.

2016 ರ ಕರ್ನಾಟಕ ಕೇಡರ್ ನ IPS ಅಧಿಕಾರಿ ಯತೀಶ್ ಎನ್ ಈ ಹಿಂದೆ ಮಂಡ್ಯ ಎಸ್ಪಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. ಇನ್ನೂ ಹಲವಾರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 Share: | | | | |


ಕೇರಳದಲ್ಲಿ ಕೋವಿಡ್ ಸಬ್‌ವೇರಿಯಂಟ್ JN.1 ಪ್ರಕರಣ ಪತ್ತೆ: ಕರ್ನಾಟಕದಲ್ಲೂ ಹೆಚ್ಚಿದ ಆತಂಕ

Posted by Vidyamaana on 2023-12-16 15:11:46 |

Share: | | | | |


ಕೇರಳದಲ್ಲಿ ಕೋವಿಡ್ ಸಬ್‌ವೇರಿಯಂಟ್ JN.1 ಪ್ರಕರಣ ಪತ್ತೆ: ಕರ್ನಾಟಕದಲ್ಲೂ ಹೆಚ್ಚಿದ ಆತಂಕ

ತಿರುವನಂತಪುರಂ: ಕೋವಿಡ್ ಸಬ್‌ವೇರಿಯಂಟ್ ಜೆಎನ್.1, BA.2.86 ನ ತಳಿ ಕೇರಳದ ಕೆಲವು ಭಾಗಗಳಲ್ಲಿ ಪತ್ತೆಯಾಗಿದ್ದು, ಅದರ ಪರಿಣಾಮದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ. ಹೀಗಾಗಿ ಕರ್ನಾಟಕದಲ್ಲೂ ಕೋವಿಡ್ ಹೆಚ್ಚಳದ ಆತಂಕ ಶುರುವಾಗಿದೆ.ಇಂಡಿಯಾ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG), ಇದು ಬಹು-ಪ್ರಯೋಗಾಲಯ, ಬಹು-ಏಜೆನ್ಸಿ, ಪ್ಯಾನ್-ಇಂಡಿಯಾ ನೆಟ್‌ವರ್ಕ್ ಆಗಿದ್ದು, ಹೊಸ ಬೆದರಿಕೆಯ ಕೋವಿಡ್ -19 ರೂಪಾಂತರಗಳನ್ನು ಅನುಕ್ರಮ ಮತ್ತು ಗಮನದಲ್ಲಿರಿಸುವ ಕಾರ್ಯವನ್ನು ಹೊಂದಿದೆ, ಅಲ್ಲಿ JN.1 ರಂದು ಕಣ್ಗಾವಲು ಮಾಡಿದೆ.ಇದು ಕೇರಳದಲ್ಲಿ ಕಂಡುಬಂದಿದೆ.


INSACOG ಮುಖ್ಯಸ್ಥ ಎನ್‌ಕೆ. ಅರೋರಾ, "ಈ ರೂಪಾಂತರವನ್ನು ಪ್ರತ್ಯೇಕಿಸಲಾಗಿದೆ ಮತ್ತು ನವೆಂಬರ್‌ನಲ್ಲಿ ವರದಿ ಮಾಡಲಾಗಿದೆ; ಇದು BA.2.86 ರ ಉಪರೂಪವಾಗಿದೆ.ನಾವು JN.1 ರ ಕೆಲವು ಪ್ರಕರಣಗಳನ್ನು ನೋಡಿದ್ದೇವೆ".


"ಭಾರತವು ಜಾಗರೂಕತೆಯಿಂದ ಇದೆ ಮತ್ತು ಇದುವರೆಗೆ ಯಾವುದೇ ಆಸ್ಪತ್ರೆಗೆ ದಾಖಲು ಅಥವಾ ತೀವ್ರವಾದ ಕಾಯಿಲೆಗಳು ವರದಿಯಾಗಿಲ್ಲ" ಎಂದು ಅವರು ಹೇಳಿದರು.


JN.1 ಅನ್ನು ಮೊದಲು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸೆಪ್ಟೆಂಬರ್ 2023 ರಲ್ಲಿ ಪತ್ತೆ ಮಾಡಲಾಯಿತು.


ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘದ ಕೋವಿಡ್ ಕಾರ್ಯಪಡೆಯ ಸಹ-ಅಧ್ಯಕ್ಷ ರಾಜೀವ್ ಜಯದೇವನ್ ಪ್ರಕಾರ, "ಏಳು ತಿಂಗಳ ಅಂತರದ ನಂತರ, ಭಾರತದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಕೇರಳದಲ್ಲಿ ಕೋವಿಡ್ ವರದಿಗಳಿವೆ, ಆದರೆ ಇದುವರೆಗಿನ ತೀವ್ರತೆ ಮೊದಲಿನಂತೆಯೇ ಇದೆ."


"ಜೀನೋಮ್ ಸೀಕ್ವೆನ್ಸಿಂಗ್ ಪ್ರತಿ ಪ್ರದೇಶದಲ್ಲಿ ಯಾವ ರೀತಿಯ ವೈರಸ್ ಪರಿಚಲನೆಯಾಗುತ್ತದೆ ಎಂಬುದನ್ನು ಗುರುತಿಸುತ್ತದೆ. ಉದಾಹರಣೆಗೆ, ಭಾರತದಲ್ಲಿ, ಏಪ್ರಿಲ್ 2023 ರ ಅಲೆಯ ಸಮಯದಲ್ಲಿ, XBB ಉಪವರ್ಗಗಳು ಇದಕ್ಕೆ ಕಾರಣವೆಂದು ಕಂಡುಬಂದಿದೆ. ಆದಾಗ್ಯೂ, ಡಿಸೆಂಬರ್ ಜೀನೋಮ್ ಸೀಕ್ವೆನ್ಸಿಂಗ್ ಫಲಿತಾಂಶಗಳು ಇನ್ನೂ ಬರುತ್ತಿವೆ ಮತ್ತು ಆರಂಭಿಕ ಫಲಿತಾಂಶಗಳು ಕೇರಳದಲ್ಲಿ JN.1 ಪ್ರಕರಣವು ಕಂಡುಬಂದಿದೆ ಎಂದು ತೋರಿಸುತ್ತದೆ, "ಎಂದು ಅವರು ಹೇಳಿದರು.


ಜೆಎನ್.1 ರೂಪಾಂತರವು ವೇಗವಾಗಿ ಹರಡಲು ಮತ್ತು ರೋಗನಿರೋಧಕ ಶಕ್ತಿಯನ್ನು ತಪ್ಪಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಜಯದೇವನ್ ಹೇಳಿದರು.

ಬಸ್ - ಆ್ಯಕ್ಟೀವಾ ಡಿಕ್ಕಿ: ಮಾಸ್ಟರ್ ಪ್ಲಾನರಿ ಕಾರ್ಮಿಕ ಕ್ಲಿಫರ್ಡ್ ಮೋರಸ್ ರಾಜಾ ಮೃತ್ಯು

Posted by Vidyamaana on 2024-02-25 22:08:15 |

Share: | | | | |


ಬಸ್ - ಆ್ಯಕ್ಟೀವಾ ಡಿಕ್ಕಿ: ಮಾಸ್ಟರ್ ಪ್ಲಾನರಿ ಕಾರ್ಮಿಕ ಕ್ಲಿಫರ್ಡ್ ಮೋರಸ್ ರಾಜಾ ಮೃತ್ಯು

ಪುತ್ತೂರು:ಕಬಕ ಸಮೀಪದ ಪೋಳ್ಯದಲ್ಲಿ ಎವಿಯೇಟರ್ ಸ್ಕೂಟರ್ ಮತ್ತು ಮಿನಿ ಟೂರಿಸ್ಟ್ ಬಸ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ.25ರಂದು ನಡೆದಿದೆ.

ಮಾಸ್ಟರ್ ಪ್ಲಾನರಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಅಳಕೆಮಜಲು ನಿವಾಸಿ ಕ್ಲಿಫರ್ಡ್ ಮೊರಾಸ್  ರಾಜ(45ವ. )ಮೃತಪಟ್ಟವರು.ಸ್ಕೂಟರ್ ಸಹಸವಾರರಾಗಿದ್ದ, ಬಿಹಾರ ಮೂಲದವರಾಗಿದ್ದು ಮುರದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯ ಹೊಂದಿರುವ ಸುರೇಂದರ್ (29ವ) ಮತ್ತು ಸನ್ನೀಫ್ (28ವ)ಗಾಯಗೊಂಡಿದ್ದಾರೆ.ಕ್ಲಿಫರ್ಡ್ ಮೊರಾಸ್  ಅವರು ಆದಿತ್ಯವಾರ ಮಾಸ್ಟರ್ ಪ್ಲಾನರಿ ಸಂಸ್ಥೆಗೆ ರಜೆಯಾದ್ದರಿಂದ, ಅಳಕೆಮಜಲಿನಲ್ಲಿ ಖಾಸಗಿ ಕೆಲಸ ನಿರ್ವಹಿಸಲೆಂದು ಬಿಹಾರ ಮೂಲದ ಕಾರ್ಮಿಕರಾದ ಸುರೇಂದರ್ ಮತ್ತು ಸನ್ನೀಫ್‌ರನ್ನು ಕರೆಸಿಕೊಂಡಿದ್ದರು. ರಾತ್ರಿ ವೇಳೆ ಅವರನ್ನು ಮುರ ರೂಮ್ ಗೆ ಬಿಡಲೆಂದು ಸ್ಕೂಟರ್‌ನಲ್ಲಿ ಪುತ್ತೂರು ಕಡೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾಜ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಹಾಗೂ ಮಡಿಕೇರಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಮಿನಿ ಬಸ್ ನಡುವೆ ಪೋಳ್ಯ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಾಜ ಅವರ ತೊಡೆಯ ಮೇಲೆಯೇ ಬಸ್ ಹರಿದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟರ್ ಸಹ ಸವಾರರಾಗಿದ್ದ ಸುರೇಂದರ್ ಅವರ ಎಡ ಕಾಲು ಮುರಿತಕ್ಕೊಳಗಾಗಿದ್ದು, ಸನ್ನೀಫ್ ಅವರ ಮುಖಕ್ಕೆ ಗಾಯವಾಗಿದೆ. ಗಾಯಾಳುಗಳಿಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೃತ ರು  ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.


ಸಂಜೀವ ಮಠಂದೂರು ಘಟನಾ ಸ್ಥಳಕ್ಕೆ ಭೇಟಿ: ಮಾಜಿ ಶಾಸಕ ಸಂಜೀವ ಮಠಂದೂರು ಅನ್ಯ ಕಾರ್ಯನಿಮಿತ್ತ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ, ಅಪಘಾತ ನಡೆದ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದು ಗಾಯಾಳುವನ್ನು ವಿಚಾರಿಸಿದ್ದಾರೆಂದು ತಿಳಿದು ಬಂದಿದೆ.

ತನ್ನ ಹೆಸರಿನ ಟೀ ಶರ್ಟ್ ಧರಿಸಿದ್ದ ಅಭಿಮಾನಿಯ ಹಿಂಬಾಲಿಸಿ ಹೋಗಿ ಮಾತನಾಡಿಸಿದ ಸಚಿನ್‌: ವೀಡಿಯೋ ವೈರಲ್

Posted by Vidyamaana on 2024-02-05 07:24:24 |

Share: | | | | |


ತನ್ನ ಹೆಸರಿನ ಟೀ ಶರ್ಟ್ ಧರಿಸಿದ್ದ ಅಭಿಮಾನಿಯ ಹಿಂಬಾಲಿಸಿ ಹೋಗಿ ಮಾತನಾಡಿಸಿದ ಸಚಿನ್‌: ವೀಡಿಯೋ ವೈರಲ್

        ಕ್ರಿಕೆಟ್  ಹಾಗೂ ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಾರೆಯರಿಗೆ ತಮ್ಮದೇ ಆದ ಅಭಿಮಾನಿಗಳಿರುತ್ತಾರೆ. ತಮ್ಮ ನೆಚ್ಚಿನ ನಾಯಕಿ /ನಾಯಕಿಗಾಗಿ ಅಭಿಮಾನಿಗಳು ಏನೂ ಮಾಡಲು ಸಿದ್ಧರಿರುತ್ತಾರೆ. ಕೆಲವರು ದೇವಸ್ಥಾನ ಕಟ್ಟುತ್ತಾರೆ, ಇನ್ನು ಕೆಲವರು ದೇವರಂತೆ ಪೂಜೆ ಮಾಡುತ್ತಾರೆ.

ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ವ್ಯಕ್ತಿಯ ಹುಟ್ಟುಹಬ್ಬದಂದು ರಕ್ತದಾನ ಮಾಡುತ್ತಾರೆ. ಬಡವರಿಗೆ ಹಣ್ಣು ಹಂಪಲು ನೀಡುತ್ತಾರೆ, ವೃದ್ಧಾಶ್ರಮಗಳಲ್ಲಿ ಸೇವೆ ಮಾಡುತ್ತಾರೆ ಹೀಗೆ ವಿವಿಧ ರೀತಿಯಲ್ಲಿ ತಮ್ಮ ಅಭಿಮಾನವನ್ನು ಮೆರೆಯುತ್ತಾರೆ. ಹಾಗೆಯೇ ಭಾರತದಲ್ಲಿ ಕ್ರಿಕೆಟ್‌ಗೆ ಇರುವ ಅಭಿಮಾನಕ್ಕೆ ಬೇರೆಯದೇ ಸ್ಥಾನವಿದೆ. ಅನೇಕರು ತಮ್ಮ ನೆಚ್ಚಿನ ನಾಯಕನ ಹೆಸರಿರುವ ಟೀ ಶರ್ಟ್ ಧರಿಸಿ ಆ ಮೂಲಕ ಅಭಿಮಾನ ಮೆರೆಯುವುದನ್ನು ನೋಡಬಹುದು . ಹೀಗೆ ತಮ್ಮ ನೆಚ್ಚಿನ ಕ್ರಿಕೆಟಿಗನ ಟೀ ಶರ್ಟ್ ಧರಿಸಿ ರಸ್ತೆಯಲ್ಲಿ ಓಡಾಡ್ತಿರಬೇಕಾದರೆ ಅವರೇ ಬಂದು ನಿಮ್ಮನ್ನ ಮಾತನಾಡಿಸಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು. ಒಂದು ಕ್ಷಣ ಇದು ನಿಜನಾ ಕನಸಾ ಅಂತ ನಿಮ್ಮನೇ ನೀವು ಚಿವುಟಿ ನೋಡುವುದಂತೂ ಪಕ್ಕಾ ಅದೇ ರೀತಿಯ ಅನುಭವ ಈಗ ಇಲ್ಲಿ ವ್ಯಕ್ತಿಯೊಬ್ಬರಿಗೆ ಆಗಿದೆ. ಇವರನ್ನು ಭೇಟಿಯಾಗಿದ್ದು ಬೇರೆ ಯಾರು ಅಲ್ಲ, ಕ್ರಿಕೆಟ್ ಗಾಡ್ ಎಂದೇ ಖ್ಯಾತಿ ಗಳಿಸಿರುವ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌.


💥ವಿಡಿಯೋ ನೋಡಲು ಕ್ಲಿಕ್ ಮಾಡಿ!!!!

ಹೌದು, ತಮ್ಮ ಕಟ್ಟ ಅಭಿಮಾನಿಯನ್ನು ಆತನಿಗೆ ತಿಳಿಯದಂತೆ ಆತ ಊಹೆಯೂ ಮಾಡದಂತೆ ಸಡನ್ ಆಗಿ ಭೇಟಿ ಮಾಡಿ ಆತನ ಬದುಕಿನಲ್ಲಿ ಸಾರ್ಥಕ್ಯದ ಭಾವ ಮೂಡಿಸಿದ್ದಾರೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ತಾನೂ ಸ್ವಲ್ಪವೂ ನಿರೀಕ್ಷೆ ಮಾಡಿರದ ಈ ಕ್ಷಣ ನೋಡಿ ಅಭಿಮಾನಿ ಪೂರ್ತಿ ಭಾವುಕನಾಗಿದ್ದು ಕ್ರಿಕೆಟ್ ದೇವರಿಗೆ ದೊಡ್ಡ ನಮಸ್ಕಾರ ಮಾಡಿದ್ದಾನೆ ಈ ಅಭಿಮಾನಿ.ಹಾಗಿದ್ದರೆ ನಡೆದಿದ್ದೇನು?


ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ತಮ್ಮ ಕಾರಿನಲ್ಲಿ ಸಾಗುತ್ತಿದ್ದ ವೇಳೆ ಅವರ ಕಾರಿನ ಮುಂದೆಯೇ ಭಾರತ ಕ್ರಿಕೆಟ್ ಟೀಮ್‌ ಪ್ರತಿನಿಧಿಸುವ ನೀಲಿ ಬಣ್ಣದ ಟೀ ಶರ್ಟ್‌ ಮೇಲೆ ಸಚಿನ್ ತೆಂಡೂಲ್ಕರ್ ಐ ಮಿಸ್ ಯೂ ಎಂದು ಬರೆದಿರುವ ಟೀ ಶರ್ಟ್ ತೊಟ್ಟು ಸ್ಕೂಟರ್‌ನಲ್ಲಿ ವ್ಯಕ್ತಿಯೊಬ್ಬ ಸಾಗುತ್ತಿದ್ದು, ಇದನ್ನು ನೋಡಿದ ಸಚಿನ್ ತೆಂಡೂಲ್ಕರ್‌ ಕಾರಿನಲ್ಲಿ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಭೇಟಿ ಮಾಡಿದ್ದಾರೆ. ಆದರೆ ಇದನ್ನು ನಿರೀಕ್ಷೆ ಮಾಡಿರದ ಆತ ಕೆಲ ಕಾಲ ಶಾಕ್ ಆಗಿದ್ದಾನೆ. ಬಳಿಕ ನನಗೆ ನಿಜವಾಗಿಯೂ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ, ಇವತ್ತು ನನಗೆ ನನ್ನ ಭಗವಂತನ ದರ್ಶನವಾಯ್ತು ಎಂದು ಆತ ಹೇಳಿಕೊಂಡಿದ್ದಾನೆ. ಅಲ್ಲದೇ ತನ್ನ ಬಳಿ ಇದ್ದ ಸಚಿನ್ ತೆಂಡೂಲ್ಕರ್ ಅವರ ಸಾಧನೆಯ ಫೋಟೋಗಳ ಪೇಪರ್ ಕಟ್ಟಿಂಗ್ ಅಂಟಿಸಿ ಫೋಟೋಗಳನ್ನು ಅಂಟಿಸಿದ್ದ ಪುಸ್ತಕವನ್ನು ಸಚಿನ್‌ಗೆ ತೋರಿಸಿದ್ದಾರೆ. ತನ್ನ ನೆಚ್ಚಿನ ಅಭಿಮಾನಿ ಜೊತೆ ಮಾತನಾಡಿದ ಸಚಿನ್ ಟೀ ಶರ್ಟ್ ನೋಡಿ ನಿಮ್ಮನ್ನು ಮಾತನಾಡಿಸಬೇಕು ಎನಿಸಿತು ಅದಕ್ಕೆ ಗಾಡಿ ನಿಲ್ಲಿಸಿದೆವು ಎಂದು ಹೇಳಿದ್ದಾರೆ. ಜೊತೆಗೆ ಆತನಿಗೆ ಆಟೋಗ್ರಾಫ್ ನೀಡಿದರೆ, ಮೊದಲಿಗೆ ಸಚಿನ್ ಏರ್‌ಫೋರ್ಟ್‌ಗೆ ಹೋಗೋದು ಹೇಗೆ ಎಂದು ಕೇಳಿದ್ದಾರೆ. ಈ ವೇಳೆ ಇವರತ್ತ ತಿರುಗಿದ ಅಭಿಮಾನಿ ಶಾಕ್‌ನಿಂದ ನೋಡಿ ನಾನಿವತ್ತೂ ನಿಜವಾಗಿಯೂ ಭಗವಂತನನ್ನು ನೋಡಿದೆ ಎಂದು ಹೇಳಿದ್ದಾರೆ.ನೀವು ಹೆಲ್ಮೆಟ್ ಧರಿಸಿದ್ದೀರಿ ನಾನು ಸೀಟ್ ಬೆಲ್ಟ್ ಧರಿಸಿದ್ದೇನೆ, ಸದಾ ಹೆಲ್ಮೆಟ್ ಧರಿಸಿ ಪ್ರಯಾಣಿಸಿ ಚೆನ್ನಾಗಿರಿ ಎಂದು ಹಾರೈಸಿ ಸಚಿನ್ ಅಲ್ಲಿಂದ ಹೊರಟು ಹೋಗಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಸಚಿನ್ ಅಭಿಮಾನಿಗಳು ಕೂಡ ಭಾವುಕರಾಗಿದ್ದು, ಕೇವಲ ಕ್ರಿಕೆಟ್ ಗಾಡ್ ಈ ರೀತಿ ಮಾಡಲು ಸಾಧ್ಯ ಎಂದೆಲ್ಲಾ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಹೊಗಳಿದ್ದಾರೆ. ಆದರೆ ಮತ್ತೆ ಕೆಲವರು ಇದು ಸ್ಕ್ರಿಪ್ಟೆಡ್( ಪ್ಲಾನ್ ಮಾಡಿ ಮಾಡಿದ ವೀಡಿಯೋ) ಎಂದು ದೂರಿದ್ದಾರೆ. ಸ್ಕ್ರಿಫ್ಟ್ ಚೆನ್ನಾಗಿ ಬರೀತೀರಾ ಎಂದು ಟೀಕಿಸಿದ್ದಾರೆ.


ಆದರೆ ಸ್ವತಃ ಸಚಿನ್ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ನನ್ನ ಮೇಲೆ ಇಷ್ಟೊಂದು ಪ್ರೀತಿ ತೋರಿದ ಈ ವ್ಯಕ್ತಿಯ ಕಂಡು ನನ್ನ ಹೃದಯ ಖುಷಿಯಿಂದ ಭಾರವಾಯ್ತು. ನಾವು ನಿರೀಕ್ಷೆಯೇ ಮಾಡದ ಕಡೆಯಿಂದೆಲ್ಲಾ ಬರುವ ಈ ರೀತಿಯ ಅಗಾಧ ಪ್ರೀತಿಯಿಂದ ನಮಗೆ ಜೀವನ ತುಂಬಾ ವಿಶೇಷ ಎನಿಸುವುದು ಎಂದು ಸಚಿನ್ ತೆಂಡೂಲ್ಕರ್ ಬರೆದುಕೊಂಡಿದ್ದಾರೆ. ಸಚಿನ್ ಭೇಟಿ ಮಾಡಿದ ಈ ಅಭಿಮಾನಿಯ ಹೆಸರು ಹರೀಶ್‌ಒಟ್ಟಿನಲ್ಲಿ ಸಚಿನ್ ಭೇಟಿಯಿಂದ ಅಭಿಮಾನಿ ಒಂದು ಕ್ಷಣ ಮಾತೇ ಹೊರಡದಂತಾಗಿ ಭಾವುಕರಾಗಿದ್ದು ಈ ವೀಡಿಯೋದಲ್ಲಿ ಕಣ್ಣಿಗೆ ಕಟ್ಟಿದಂತಿದೆ

ನಿಜವಾದ ಸೇವಕ ಎಂದಿಗೂ ಅಹಂಕಾರಿಯಲ್ಲ. ಚುನಾವಣೆಗಳಲ್ಲಿ ಶಿಷ್ಟಾಚಾರವನ್ನು ಪಾಲಿಸಲಾಗಿಲ್ಲ: ಮೋಹನ್ ಭಾಗವತ್

Posted by Vidyamaana on 2024-06-11 10:17:17 |

Share: | | | | |


ನಿಜವಾದ ಸೇವಕ ಎಂದಿಗೂ ಅಹಂಕಾರಿಯಲ್ಲ. ಚುನಾವಣೆಗಳಲ್ಲಿ ಶಿಷ್ಟಾಚಾರವನ್ನು ಪಾಲಿಸಲಾಗಿಲ್ಲ: ಮೋಹನ್ ಭಾಗವತ್

ನವದೆಹಲಿ: ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆಯಾದ ಚುನಾವಣೆಯ ಫಲಿತಾಂಶದ ಬಗ್ಗೆ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ನಿಜವಾದ ಸೇವಕ ಅಹಂಕಾರ  ಹೊಂದಿರುವುದಿಲ್ಲ ಮತ್ತು ಇತರರಿಗೆ ಯಾವುದೇ ಹಾನಿಯಾಗದಂತೆ ಕೆಲಸ ಮಾಡುತ್ತಾನೆ ಎಂದು ಹೇಳಿದರು.

ಕಹಿ ಚುನಾವಣಾ ಪ್ರಚಾರವನ್ನು ಉಲ್ಲೇಖಿಸಿದ ಅವರು, ಶಿಷ್ಟಾಚಾರವನ್ನು ಕಾಪಾಡಿಕೊಳ್ಳಲಾಗಿಲ್ಲ ಎಂದು ಹೇಳಿದರು.


ಹೊಸ ಬಿಜೆಪಿ ನೇತೃತ್ವದ ಮೈತ್ರಿಕೂಟವು ತನ್ನ ಮೊದಲ ಕ್ಯಾಬಿನೆಟ್ ಸಭೆಯನ್ನು ನಡೆಸಿದ ದಿನದಂದು ನಾಗ್ಪುರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಆವರ್ತಕ ತರಬೇತಿ ಕಾರ್ಯಕ್ರಮವಾದ ಕಾರ್ಯಕರ್ತರ ವಿಕಾಸ್ ವರ್ಗ್ ಸಮಾರೋಪದ ನಂತರ ಆರ್‌ಎಸ್‌ಎಸ್ ನಾಯಕರು ಮತ್ತು ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್, ಒಮ್ಮತವನ್ನು ನಿರ್ಮಿಸುವ ಮಹತ್ವವನ್ನು ಒತ್ತಿ ಹೇಳಿದರು.

ಕೇಂದ್ರ ಜುಮ್ಮಾ ಮಸೀದಿ ಗೆ ಭೇಟಿ ನೀಡಿದ ಪುತ್ತೂರಿನ ನೂತನ ಶಾಸಕ ಅಶೋಕ್ ರೈ

Posted by Vidyamaana on 2023-05-13 16:12:12 |

Share: | | | | |


ಕೇಂದ್ರ ಜುಮ್ಮಾ ಮಸೀದಿ ಗೆ ಭೇಟಿ ನೀಡಿದ ಪುತ್ತೂರಿನ ನೂತನ ಶಾಸಕ ಅಶೋಕ್ ರೈ

ಪುತ್ತೂರು: ನೂತನ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕುಮಾರ್ ರೈ ಅವರು ಶನಿವಾರ ಸಂಜೆ ದರ್ಗಾ ಹಾಗೂ ಚರ್ಚಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು.

ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ವಠಾರ ದಲ್ಲಿರುವ ಪುತ್ತೂರು ತಂಙಳ್ ದರ್ಗಕ್ಕೆ  ಭೇಟಿ ನೀಡಿ ಪ್ರಾರ್ಥಿಸಿದರು. ಅವರ ಜೊತೆಗೆ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು

Posted by Vidyamaana on 2023-06-09 02:59:27 |

Share: | | | | |


ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು

ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೈಲೂರು ಪರಶುರಾಮ ಥೀಮ್ ಪಾರ್ಕ್ ಬಳಿ ನಡೆದಿದೆ. ನೆಲ್ಲಿಗುಡ್ಡೆ ನಿವಾಸಿ ಕಾರ್ತಿಕ್ (23) ಮೃತ ದುರ್ದೈವಿ.

ಕಾರ್ತಿಕ್ ಬೈಲೂರಿನಿಂದ ಹೋಗುತ್ತಿದ್ದಾಗ ಕಾರ್ಕಳದಿಂದ ಉಡುಪಿಗೆ ಹೋಗುತ್ತಿದ್ದ ಖಾಸಗಿ ಬಸ್ ಢಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ಕಾರ್ತಿಕ್ ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೃತ ಕಾರ್ತಿಕ್ ಪತ್ನಿ ಹಾಗೂ 10 ತಿಂಗಳ ಮಗುವನ್ನು ಅಗಲಿದ್ದಾರೆ. ಮೃತದೇಹವನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

Recent News


Leave a Comment: