ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಎಲ್ಲ ಶಾಲೆಗಳಿಗೆ ನಾಳೆ (ಜು 9) ರಜೆ

ಸುದ್ದಿಗಳು News

Posted by vidyamaana on 2024-07-08 20:09:58 |

Share: | | | | |


ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಎಲ್ಲ ಶಾಲೆಗಳಿಗೆ ನಾಳೆ (ಜು 9) ರಜೆ

ಮಂಗಳೂರು: ದ‌.ಕ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಯ ಶಾಲಾ, ಪಿಯು ಕಾಲೇಜಿಗೆ ಜುಲೈ 09ರಂದು ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ದ. ಕ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ. ಪದವಿ ಪೂರ್ವ ಕಾಲೇಜು, (12 ನೇ ತರಗತಿವರೆಗೆ) ದಿನಾಂಕ: 09/07/224 ರಂದು ರಜೆಯನ್ನು ಘೋಷಿಸಲಾಗಿದೆ.

 Share: | | | | |


ಕೈರೋ:ಮಸೀದಿಗೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

Posted by Vidyamaana on 2023-06-27 07:44:29 |

Share: | | | | |


ಕೈರೋ:ಮಸೀದಿಗೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಕೈರೋ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಬೊಹ್ರಾ ಸಮುದಾಯದಿಂದ ಪುನಃಸ್ಥಾಪಿಸಲಾದ ಕೈರೋದಲ್ಲಿರುವ ಈಜಿಪ್ಟ್​ನ 11ನೇ ಶತಮಾನದ ಐತಿಹಾಸಿಕ ಅಲ್​-ಹಕೀಮ್​​ ಮಸೀದಿಗೆ ಭೇಟಿ ನೀಡಿದ್ದಾರೆ.ಅಮೆರಿಕದಿಂದ ನೇರವಾಗಿ ಈಜಿಪ್ಟ್‌ಗೆ 2 ದಿನ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಾವಿರ ವರ್ಷ ಹಳೆಯದಾದ ಅಲ್‌-ಹಕೀಮ್‌ ಮಸೀದಿಗೆ ಭೇಟಿ ನೀಡಿದರು. ಈ ಕುರಿತಾದ ಕೆಲವು ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿವೆಸಾವಿರಾರು ವರ್ಷಗಳಷ್ಟು ಹಳೆಯದಾದ ಅಲ್​​-ಹಕೀಮ್​​​ ಕೈರೋದಲ್ಲಿನ ನಾಲ್ಕನೇ ಅತ್ಯಂತ ಹಳೆಯ ಮಸೀದಿಯಾಗಿದೆ. ಮಸೀದಿಯು 13,560 ಚದರ ಮೀಟರ್‌ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ, ಸಾಂಪ್ರದಾಯಿಕ ಕೇಂದ್ರ ಪ್ರಾಂಗಣವು 5,000 ಚದರ ಮೀಟರ್‌ಗಳನ್ನು ಆಕ್ರಮಿಸಿಕೊಂಡಿದೆಈಜಿಪ್ಟ್‌ಗೆ ಅವರ ರಾಜ್ಯ ಭೇಟಿಯ ಎರಡನೇ ದಿನದಂದು, ಮೋದಿಯವರಿಗೆ ಮಸೀದಿಯ ಸುತ್ತಲೂ ತೋರಿಸಲಾಯಿತು. 1012 ರಲ್ಲಿ ನಿರ್ಮಿಸಲಾದ ಮಸೀದಿಯ ಗೋಡೆಗಳು ಮತ್ತು ದ್ವಾರಗಳ ಮೇಲಿನ ಕೆತ್ತನೆ ನೋಡಿ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದರುಭಾರತದಲ್ಲಿ ನೆಲೆಸಿರುವ ಬೋಹ್ರಾ ಸಮುದಾಯವು ಫಾತಿಮಿಡ್‌ಗಳಿಂದ ಹುಟ್ಟಿಕೊಂಡಿದೆ. ಅವರು 1970ರಿಂದ ಮಸೀದಿಯನ್ನು ನವೀಕರಿಸಿದರು ಮತ್ತು ಅಂದಿನಿಂದ ಅದನ್ನು ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ ಗುಜರಾತ್‌ನಲ್ಲಿರುವ ಬೊಹ್ರಾ ಸಮುದಾಯದೊಂದಿಗೆ ಪ್ರಧಾನಿಯವರು ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ. ಬೊಹ್ರಾ ಸಮುದಾಯದ ಪ್ರಮುಖ ಧಾರ್ಮಿಕ ಕ್ಷೇತ್ರಕ್ಕೆ ಮತ್ತೊಮ್ಮೆ ಭೇಟಿ ನೀಡುವ ಸಂದರ್ಭವಾಗಿದೆ ಎಂದು ಈಜಿಪ್ಟ್‌ನಲ್ಲಿರುವ ಭಾರತದ ರಾಯಭಾರಿ ಅಜಿತ್ ಗುಪ್ತೆ ಹೇಳಿದ್ದಾರೆ.  ಐತಿಹಾಸಿಕ ಮಸೀದಿಗೆ 16 ನೇ ಫಾತಿಮಿದ್ ಖಲೀಫ್ ಅಲ್-ಹಕೀಮ್ ಬೈ-ಅಮ್ರ್ ಅಲ್ಲಾ ಅವರ ಹೆಸರನ್ನು ಇಡಲಾಗಿದೆ ಮತ್ತು ದಾವೂದಿ ಬೊಹ್ರಾ ಸಮುದಾಯಕ್ಕೆ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ತಾಣವಾಗಿದೆ.

ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ ಅಶೋಕ್ ಕುಮಾರ್ ರೈ

Posted by Vidyamaana on 2023-05-22 13:24:27 |

Share: | | | | |


ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ ಅಶೋಕ್ ಕುಮಾರ್ ರೈ

ಪುತ್ತೂರು: ವಿಧಾನಸೌಧ ಶಾಸನ ರಚಿಸುವ ಪುಣ್ಯ ಸ್ಥಳ. ಅಂತಹ ವಿಧಾನಸೌಧಕ್ಕೆ ಶಾಸಕನಾಗಿ ಪ್ರವೇಶ ಮಾಡುವುದೇ ದೊಡ್ಡ ಸಂತೋಷದ ಭಾವನೆ. ಅದಕ್ಕೆ ಕಾರಣರು ನನ್ನ ಕ್ಷೇತ್ರದ ಜನರು. ಅವರಿಗೆ ಇದನ್ನು ಅರ್ಪಿಸಲು ಬಯಸುತ್ತೇನೆ.

ಇದು ಅಶೋಕ್ ಕುಮಾರ್ ರೈ ಅವರ ಫಸ್ಟ್ ರಿಯಾಕ್ಷನ್...

ಶಾಸಕನಾಗಿ ಸೋಮವಾರ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ವಿದ್ಯಮಾನಕ್ಕೆ ಫಸ್ಟ್ ರಿಯಾಕ್ಷನ್ ನೀಡಿದರು.

ಹೊಸ ಧಿರಿಸಿನಲ್ಲಿ ಮಿಂಚುತ್ತಿದ್ದ ಅಶೋಕ್ ಕುಮಾರ್ ರೈ ಅವರು, ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಮೆಟ್ಟಿಲುಗಳಿಗೆ ನಮಿಸಿ, ಮುಂದಡಿ ಇಟ್ಟರು.

ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಸರ್ಕಾರ ದಿಂದ WhatsApp ಚಾಟ್ ಸೇವೆ ಆರಂಭ: ಇಲ್ಲಿದೆ ಡೀಟೆಲ್ಸ್

Posted by Vidyamaana on 2024-03-07 04:37:01 |

Share: | | | | |


ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಸರ್ಕಾರ ದಿಂದ WhatsApp ಚಾಟ್ ಸೇವೆ ಆರಂಭ: ಇಲ್ಲಿದೆ ಡೀಟೆಲ್ಸ್

ಬೆಂಗಳೂರು : ರಾಜ್ಯದ ಗ್ರಾಮೀಣ ಕರ್ನಾಟಕಕ್ಕೆ ಸುಲಲಿತ ಜನಸೇವೆಯ ಗ್ಯಾರಂಟಿಯ ಯೋಜನೆಯಾಗಿ ಪಂಚಮಿತ್ರ ಪೋರ್ಟಲ್ ಮೂಲಕ ವಾಟ್ಸಾಪ್ ಚಾಟ್ ಸೇವೆಯನ್ನು ಆರಂಭಿಸಲಾಗಿದೆ. ಇದೇ ದೇಶದಲ್ಲೇ ಮೊದಲು ಜಾರಿಗೊಳಿಸಿದಂತ ಸೇವೆಯಾಗಿದೆ.ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಗ್ರಾಮ ಪಂಚಾಯ್ತಿಗಳ ಸಂಪೂರ್ಣ ಮಾಹಿತಿ ಈಗ ನಿಮ್ಮ ಅಂಗೈಯಲ್ಲೇ ಲಭ್ಯವಾಗಲಿದೆ.ಅದಕ್ಕಾಗಿ ಪಂಚಮಿತ್ರ ಪೋರ್ಟಲ್ ಮತ್ತು ದೇಶದಲ್ಲಿಯೇ ಮೊದಲ ಬಾರಿ ವಾಟ್ಸಾಪ್ ಚಾಟ್ ಲೋಕಾರ್ಪಣೆಗೊಳಿಸಲಾಗಿದೆ ಎಂದಿದ್ದಾರೆ.

ರಾಜ್ಯ ಸರ್ಕಾರಿ ಗ್ರಾಮೀಣ ಕರ್ನಾಟಕಕ್ಕೆ ಸುಲಲಿತ ಜನಸೇವೆಯ ಗ್ರಾರಂಟಿಯ ಯೋಜನೆ ಇದಾಗಿದೆ. ಗ್ರಾಮೀಣ ಜನರು ಜಸ್ಟ್ ವಾಟ್ಸಾಪ್ ಮಾಡಿ ಗ್ರಾಮ ಪಂಚಾಯ್ತಿಯ ಸೇವೆಗಳನ್ನು ಕುಳಿತಲ್ಲೇ ಪಡೆಯಬಹುಗಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಪಂಚಮಿತ್ರ ಪೋರ್ಟಲ್ ವಾಟ್ಸಾಪ್ ಚಾಟ್.?

ಗ್ರಾಮೀಣ ಪ್ರದೇಶದ ಜನರು ಕುಳಿತಲ್ಲೇ ನಾನಾ ಸೇವೆಗಳನ್ನು ಪಡೆಯಲು ಹಾಗೂ ತಮ್ಮ ಕುಂದು ಕೊರತೆಗಳನ್ನು ದಾಖಲಿಸುವ ಸಲುವಾಗಿ ನಮ್ಮ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಪಂಚಮಿತ್ರ ಪೋರ್ಟಲ್ ಹಾಗೂ ವಾಟ್ಸಾಪ್ ಚಾಟ್‌ ,ಲೋಕಾರ್ಪಣೆಗೊಳಿಸಿದ್ದು, https://panchamitra.karnataka.gov.in ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸೇವೆಗಳನ್ನು ಪಡೆಯಬಹುದಾಗಿದೆ. 

ಇನ್ನೂ ನೀವು 8277506000 ಮೊಬೈಲ್‌ ಸಂಖ್ಯೆಗೆ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಪುತ್ತೂರು : ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜುಲೈ 04) ವಿದ್ಯುತ್ ನಿಲುಗಡೆ!!!

Posted by Vidyamaana on 2023-07-03 23:42:26 |

Share: | | | | |


ಪುತ್ತೂರು : ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜುಲೈ 04) ವಿದ್ಯುತ್ ನಿಲುಗಡೆ!!!

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 33/11 ಕೆವಿ ಕ್ಯಾಂಪ್ಟ್ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮುಕ್ರಂಪಾಡಿ, ಮುಕ್ವೆ ಮತ್ತು ಮುಂಡೂರು ಫೀಡರ್‌ನಲ್ಲಿ ಜು.4ರಂದು ಪೂರ್ವಾಹ್ನ ಗಂಟೆ 10ರಿಂದ ಅಪರಾಹ್ನ 4ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 33/11ಕೆವಿ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಕೂರ್ನಡ್ಕ, ಕೆಮ್ಮಿಂಜೆ, ಮರೀಲ್, ಮುಕ್ರಂಪಾಡಿ, ಮೊಟ್ಟೆತ್ತಡ್ಕ, ಮುಂಡೂರು ಮತ್ತು ಸಂಪ್ಯ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ತುಂಬು ಗರ್ಭಿಣಿಯಾಗಿದ್ದ ಮಲಯಾಳಂ ಕಿರುತೆರೆ ನಟಿ ಡಾ. ಪ್ರಿಯಾ ಹೃದಯಾಘಾತಕ್ಕೆ ಬಲಿ

Posted by Vidyamaana on 2023-11-01 13:31:52 |

Share: | | | | |


ತುಂಬು ಗರ್ಭಿಣಿಯಾಗಿದ್ದ ಮಲಯಾಳಂ ಕಿರುತೆರೆ ನಟಿ ಡಾ. ಪ್ರಿಯಾ ಹೃದಯಾಘಾತಕ್ಕೆ ಬಲಿ

ಕೇರಳ : ನಟಿ ರೆಂಜೂಷಾ ಮೆನನ್ ಅವರ ನಿಧನದ ಆಘಾತದಿಂದ ಹೊರಬರುವ ಮುನ್ನವೇ ಮತ್ತೊಂದು ಸಾವಿನ ಸುದ್ದಿ ಮಲಯಾಳಂ ಕಿರುತೆರೆ ಉದ್ಯಮವನ್ನು ಬೆಚ್ಚಿಬೀಳಿಸಿದೆ. ಕರುತಮುತ್ತು ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಡಾ. ಪ್ರಿಯಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.ಪ್ರಿಯಾ ಅವರಿಗೆ 35 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರು ಮಂಗಳವಾರ (ಅಕ್ಟೋಬರ್ 31) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ನಟ ಕಿಶೋರ್ ಸತ್ಯ ಅಭಿಮಾನಿಗಳೊಂದಿಗೆ ಸುದ್ದಿ ಹಂಚಿಕೊಂಡಿದ್ದಾರೆ.


ಹೃದಯಾಘಾತದಿಂದ ಡಾ. ಪ್ರಿಯಾ ಕೊನೆಯುಸಿರೆಳೆದಿದ್ದಾರೆ. ಅವರು ಎಂಟು ತಿಂಗಳ ಗರ್ಭಿಣಿಯಾಗಿದ್ದರು. ನವಜಾತ ಶಿಶುವನ್ನು ಐಸಿಯುನಲ್ಲಿ ಇಡಲಾಗಿದೆ. ಪ್ರಿಯಾಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ತಮ್ಮ ದಿನನಿತ್ಯದ ಚೆಕಪ್ ಗಾಗಿ ಆಸ್ಪತ್ರೆಗೆ ಬಂದಿದ್ದ ಅವರಿಗೆ ಹೃದಯ ಸ್ತಂಭನವಾಗಿದೆ. ಕುಟುಂಬಕ್ಕೆ ಹೇಗೆ ಸಾಂತ್ವಾನ ಹೇಳಲಿ ಎಂದು ತಿಳಿಯುತ್ತಿಲ್ಲ ಎಂದು ನಟ ಕಿಶೋರ್ ಸತ್ಯ ದುಃಖ ಹಂಚಿಕೊಂಡಿದ್ದಾರೆ.ಡಾ. ಪ್ರಿಯಾ ಮಲಯಾಳಂ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿದ್ದರು. ಕಿಶೋರ್ ಅವರ ಜೊತೆ ಕರುತಮುತ್ತು ಕಾರ್ಯಕ್ರಮದಲ್ಲಿ ಅಭಿನಯಿಸಿದ್ದರು. ಮದುವೆ ಬಳಿಕ ಕಿರುತೆರೆ ಉದ್ಯಮದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದರು. ಅಷ್ಟೇ ಅಲ್ಲ ಪ್ರಿಯಾ ಅವರು ವೃತ್ತಿಯಲ್ಲಿ ವೈದ್ಯೆಯಾಗಿದ್ದರು.

ನಾಪತ್ತೆಯಾದವನು ಅಕ್ರಮ ಸಂಬಂಧಕ್ಕೆ ಬಲಿ; ಶವವನ್ನು ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಬಿಸಾಡಿದ ಹಂತಕ!

Posted by Vidyamaana on 2024-06-08 17:17:10 |

Share: | | | | |


ನಾಪತ್ತೆಯಾದವನು ಅಕ್ರಮ ಸಂಬಂಧಕ್ಕೆ ಬಲಿ; ಶವವನ್ನು ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಬಿಸಾಡಿದ ಹಂತಕ!

ಬೆಂಗಳೂರು : ರಾಜಧಾನಿ ಬೆಂಗಳೂರಿ‌ನಲ್ಲಿ (Bengaluru News) ಭಯಂಕರ ಕೊಲೆ (Bengaluru Murder) ಪ್ರಕರಣವನ್ನು ಸಂಪಿಗೇಹಳ್ಳಿ ಪೊಲೀಸರು ಬಯಲು ಮಾಡಿದ್ದಾರೆ. ಮನೆಗೆ ಬಂದಿದ್ದ ವ್ಯಕ್ತಿಗೆ ಜಾಕ್‌ ರಾಡ್‌ನಿಂದ ಹೊಡೆದು ಕೊಂದು, ನಂತರ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೋರಿಗೆ ಎಸೆದಿದ್ದಾನೆ.

ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Murder case) ಈ ಕೃತ್ಯ ನಡೆದಿದೆ. ಕೆ.ವಿ.ಶ್ರೀನಾಥ್ (34) ಕೊಲೆಯಾದವನು. ಮಾಧವ ರಾವ್ ಎಂಬಾತ ಕೊಲೆ ಆರೋಪಿಯಾಗಿದ್ದಾನೆ.

ಥಣಿಸಂದ್ರದ ಅಂಜನಾದ್ರಿ ಲೇಔಟ್ ನಿವಾಸಿಯಾದ ಕೆ.ವಿ. ಶ್ರೀನಾಥ್‌ ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಮಾರ್ಗದರ್ಶಿ ಚಿಟ್‌ ಫಂಡ್‌ನಲ್ಲಿ ಡೆವಲಪ್ಮೆಂಟ್ ಆಫೀಸರ್ ಆಗಿದ್ದ. ಹೀಗಿರುವಾಗ ಕಳೆದ ಮೇ.28ರ ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಶ್ರೀನಾಥ್‌ ವಾಪಸ್ ಆಗಿರಲಿಲ್ಲ. ಇದರಿಂದ ಹೆದರಿದ ಶ್ರೀನಾಥ್‌ ಪತ್ನಿ ಮೇ.29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಿಸಿದ್ದರು.

ದೂರು ದಾಖಲಿಸಿಕೊಂಡು ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಕೆ.ವಿ.ಶ್ರೀನಾಥ್ ಮೇ.28ರಂದು ಆರೋಪಿ ಮಾಧವರಾವ್ ಮನೆಗೆ ಹೋಗಿದ್ದು ಗೊತ್ತಾಗಿತ್ತು. ಕೆ.ಆರ್.ಪುರಂನ ವಿಜಿನಪುರದಲ್ಲಿರುವ ಮಾಧವರಾವ್ ಮನೆಗೆ ಶ್ರೀನಾಥ್‌ ಹೋಗುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಒಳಗೆ ಹೋದವನು ಹೊರಗೆ ಬಂದಿರಲಿಲ್ಲ. ಜತೆಗೆ ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ವು. ಇದರಿಂದ ಮಾಧವರಾವ್ ಬಗ್ಗೆ ವಿಚಾರಿಸಿದಾಗ ಆತನೂ ನಾಪತ್ತೆಯಾಗಿದ್ದ.

ಬಳಿಕ ಆತನ ಮೊಬೈಲ್‌ ಲೋಕೇಶನ್‌ ಪತ್ತೆ ಮಾಡಿದ ಪೊಲೀಸರಿಗೆ ಆರೋಪಿ ಆಂಧ್ರಪ್ರದೇಶದಲ್ಲಿಇದ್ದಾನೆ ಎಂದು ಗೊತ್ತಾಗಿತ್ತು. ನಂತರ ಮಾಧವರಾವ್‌ನನ್ನು ಕರೆತಂದು ಪೊಲೀಸರು ವಿಚಾರಣೆಯನ್ನು ನಡೆಸಿದಾಗ ಅಸಲಿ ಕಥೆಯನ್ನು ತೆರೆದಿಟ್ಟಿದ್ದ.

Recent News


Leave a Comment: