ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಕಿಡ್ನಿ ವೈಫಲ್ಯದಿಂದ ವಿಚಲಿತನಾದ ಲಾರಿ ಡ್ರೈವರ್ ಹೆಂಡತಿಯನ್ನು ಕೊಚ್ಚಿಕೊಂದ: ಅವನ ಹತಾಶೆ ಏನಿತ್ತು? ಮುಂದೇನು?

Posted by Vidyamaana on 2023-12-07 04:46:25 |

Share: | | | | |


ಕಿಡ್ನಿ ವೈಫಲ್ಯದಿಂದ ವಿಚಲಿತನಾದ ಲಾರಿ ಡ್ರೈವರ್ ಹೆಂಡತಿಯನ್ನು ಕೊಚ್ಚಿಕೊಂದ: ಅವನ ಹತಾಶೆ ಏನಿತ್ತು? ಮುಂದೇನು?

ಎರಡೂ ಕಿಡ್ನಿ ವೈಫಲ್ಯವಾದಾಗ ವಿಚಲಿತನಾದ ಲಾರಿ ಡ್ರೈವರ್, ನಾನು ಹೇಗಿದ್ದರೂ ಸಾಯುತ್ತೇನೆ, ನನಗಿಂತ ಮೊದಲು ಹೆಂಡತಿ ಸಾಯಲಿ ಅಂತಾ ಹತಾಶೆಯಿಂದ ವಿಚಿತ್ರ ಬಯಸಿದ್ದಾನೆ. ಸಮಯಕ್ಕೆ ಕಾದಿದ್ದ ಆತ ಕೆಲಸದಿಂದ ಬಳಲಿಬಂದಿದ್ದ ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.ಆತ ಲಾರಿ ಡ್ರೈವರ್, ಬೆಂಗಳೂರಿನಲ್ಲಿ ಕೆಲ್ಸ ಮಾಡಿಕೊಂಡಿದ್ದ, ಚೆನ್ನಾಗಿ ದುಡ್ಡು ಕೂಡ ಮಾಡಿದ್ದ.. ಊರಲ್ಲಿ ಮಾಡಿರುವ ಸಾಲ ತೀರಿಸಬೇಕು, ಉತ್ತಮವಾಗಿ ಜೀವನ ಮಾಡಬೇಕು ಅಂತ ಸದುದ್ದೇಶದ ಯೋಚನೆ ಕೂಡ ಮಾಡಿದ್ದ.. ಆದರೆ ಇದ್ದಕ್ಕಿದ್ದಂತೆ ಅವನಿಗೆ ಕಿಡ್ನಿ ಸಮಸ್ಯೆ ಕಂಡು ಬಂದಿದೆ. ಆಗ ವೈದ್ಯರ ಬಳಿ ಹೋಗಿದ್ದಾನೆ. ಅವನಿಗೆ ಎರಡೂ ಕಿಡ್ನಿ ವೈಫಲ್ಯವಾಗಿರುವುದು ಗೊತ್ತಾಗುತ್ತೆ.. ಇದರಿಂದ ವಿಚಲಿತನಾಗಿದ್ದ ಆತ, ನಾನು ಹೇಗಿದ್ದರೂ ಸಾಯುತ್ತೇನೆ, ಆದರೆ ನನಗಿಂತ ಮೊದಲು ನನ್ನ ಹೆಂಡತಿ ಸಾಯಲಿ ಅಂತಾ ಹತಾಶೆಯಿಂದ ವಿಚಿತ್ರ ಬಯಸಿದ್ದಾನೆ. ಸಮಯಕ್ಕೆ ಕಾದಿದ್ದ ಆತ ಅವತ್ತು ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿಬಿಟ್ಟಿದ್ದಾನೆ… ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಅಂದಹಾಗೆ, ಈ ಕರುಣಾಜನಕ ಬೆಳವಣಿಗೆ ಕಂಡುಬಂದಿದ್ದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ (Siruguppa, Bellary) ತಾಲೂಕಿನ ಬಲಕುಂದಿ ಗ್ರಾಮದಲ್ಲಿ.ಕ್ಷುಲ್ಲಕ ಕಾರಣಕ್ಕೆ ಪತಿ ತನ್ನ ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ರಸೂಲ್ ಸಾಬ್ ಎಂಬ ವ್ಯಕ್ತಿಯು ತನಗೆ ಎರಡು ಕಿಡ್ನಿ ವೈಫಲ್ಯ ಆಗಿದೆ, ತನ್ನ ಹೆಂಡತಿ ಮೈಬುನಾ ಬಿ. (35) ತನಗೆ ಸರಿಯಾಗಿ ಆರೈಕೆ ಮಾಡುತ್ತಿಲ್ಲ, ನಾನು ದುಡಿಯುವಾಗ ಎಲ್ಲಾ ಚೆನ್ನಾಗಿತ್ತು. ಈಗ ಹಾಸಿಗೆ ಹಿಡಿದಿದ್ದೇನೆ ಅಂತಾ ನನ್ನ ಆರೈಕೆ ಮಾಡುತ್ತಿಲ್ಲ ಎಂದು ಕೋಪಗೊಂಡು ಆಕೆ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.


ತೆಲೆಗೆ, ಕುತ್ತಿಗೆಗೆ ಕೊಡಲಿಯಿಂದ ಜೋರಾಗಿ ಹೊಡೆದು ಕೊಲೆ ಮಾಡಿದ್ದಾನೆ. ನಡು ರಾತ್ರಿ ಕೊಲೆ ಮಾಡಿ ತನ್ನ ಎರಡು ಮಕ್ಕಳನ್ನ ಕರೆದುಕೊಂಡು ತೆಕ್ಕಲಕೋಟೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಇನ್ನು ಮೃತ ದೇಹ ಕಂಡು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗಂಡ ಹೆಂಡತಿ ತುಂಬಾ ಅನ್ಯೋನ್ಯವಾಗಿದ್ದರು. ಯಾಕೆ ಜಗಳ ಮಾಡಿಕೊಂಡರು ಅಂತ ಗೊತ್ತಿಲ್ಲ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾ ಸುಮ್ಮನಿದ್ವಿ.. ಆದರೆ ಆತ ಹೀಗೆ ಮಾಡುತ್ತಾನೆ ಅಂತ ಗೊತ್ತಿರಲಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ.


ಇನ್ನು ರಸೂಲ್ ಸಾಬ್ ಕಿಡ್ನಿ ಸಮಸ್ಯೆ ಆಗಿದ್ದರಿಂದ ದುಡಿಮೆ ಮಾಡುವುದನ್ನ ನಿಲ್ಲಿಸಿದ್ದ, ಹೀಗಾಗಿ ಸಂಸಾರ ಸಾಗಿಸುವುದು ಕಷ್ಟವಾಗಿತ್ತು.. ಆದ್ದರಿಂದ ಮೈಬುನಾ ಬಿ ನಿತ್ಯ ರೈತರ ಹೊಲಗಳಿಗೆ ಕೂಲಿ ಕೆಲಸ ಮಾಡಲು ಹೋಗುತ್ತಿದ್ದಳು.. ಬಂದ ಕೂಲಿಯಲ್ಲಿ ಗಂಡನ ಆರೈಕೆ ಜೊತೆಗೆ‌ ಮನೆಗೆ ರೇಷನ್ ತಂದು ಜೀವನ ಮಾಡುತ್ತಿದ್ದಳು.. ಆದರೆ ಮೂರು ತಿಂಗಳಿನಿಂದ ಡಯಾಲಿಸಿಸ್ ಮಾಡುವುದನ್ನ ನಿಲ್ಲಿಸಿದ್ದ ರಸೂಲ್ ಸಾಬ್. ಕಾರಣ ಮನೆಯಲ್ಲಿ‌ ಹಣದ ಸಮಸ್ಯೆ ಎದುರಾಗಿತ್ತು.ಒಂದು ಕಡೆ ಹಣ ಇಲ್ಲ ಮತ್ತೊಂದು ಕಡೆ ನಿತ್ಯ ಕೂಲಿ ಮಾಡಿ ಬಂದು ಗಂಡನ ಆರೈಕೆ ಮಾಡಬೇಕು ಅಂದ್ರೆ ಮೈಬುನಾ ಬಿ‌ ಗೂ ಬೇಸರ ತಂದಿತ್ತು. ಇದೆಲ್ಲವು ರಸೂಲ್‌ನಿಗೆ ಸಹಿಸಲು ಆಗಿಲ್ಲ.. ಜೊತೆಗೆ ನಾನು‌ ಹೇಗಿದ್ದರೂ ಸಾಯುತ್ತೇನೆ. ನನಗಿಂತ ಮೊದಲು ನನ್ನ ಹೆಂಡತಿ ಸಾಯಬೇಕು ಅಂತಾ ಯೋಚನೆ ಮಾಡಿದ್ದ ಕಿರಾತಕ ಸಮಯಕ್ಕೆ ಕಾಯುತ್ತಿದ್ದ. ನಿನ್ನೆ ಹೊಲಕ್ಕೆ ಹತ್ತಿ ಬಿಡಿಸಲು ಹೋಗಿದ್ದ ಮೈಬುನಾ ಬಿ ಸುಸ್ತಾಗಿ ಬಂದು ಮಲಗಿದ್ದಾಳೆ. ಇದನ್ನೆ ನೋಡಿದ ರಸೂಲ್ ಕೊಡಲಿ ತೆಗೆದುಕೊಂಡು ಕೊಚ್ಚಿ ಕೊಲೆ ಮಾಡಿದ್ದಾನೆ.


ಒಟ್ಟಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರೂ ಉತ್ತಮವಾಗಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಅನಾರೋಗ್ಯ ಸಮಸ್ಯೆ ಎದುರಾಗಿ. ಹೆಂಡತಿ ಸರಿಯಾಗಿ ಆರೈಕೆ ಮಾಡುತ್ತಿಲ್ಲ, ನಾ ಹೇಗಿದ್ದರೂ ಸಾಯುತ್ತೇನೆ, ನನಗಿಂತ ಮೊದಲು ನನ್ನ ಹೆಂಡತಿ ಸಾಯಲಿ ಅಂತಾ ಕೊಲೆ ಮಾಡಿದ ಹತಾಶ ಗಂಡ, ಜೈಲು ಸೇರಿದ್ದಾನೆ. ಮಕ್ಕಳು ಮಾತ್ರ ತಂದೆಯೂ ಇಲ್ಲದೆ, ತಾಯಿನೂ ಇಲ್ಲದೆ ಅನಾಥವಾಗಿವೆ.

ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಪ್ರಕರಣ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಮೃತ್ಯು

Posted by Vidyamaana on 2024-07-03 20:52:26 |

Share: | | | | |


ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಪ್ರಕರಣ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಮೃತ್ಯು

ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿ ಮಣ್ಣಿನಡಿ ಸಿಲುಕಿದ್ದ ಓರ್ವ ಕಾರ್ಮಿಕ ಮೃತಪಟ್ಟ ಘಟನೆ ನಗರದ ಬಲ್ಮಠ ಬಳಿ ಬುಧವಾರ ಸಂಭವಿಸಿದೆ.ಮೃತ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ (30) ಎಂದು ತಿಳಿದು ಬಂದಿದೆ.ಮಧ್ಯಾಹ್ನ ಕಟ್ಟಡದ ಕಾಮಗಾರಿ ನಡೆಯುತಿದ್ದ ವೇಳೆ ಭೂಕುಸಿತ ಸಂಭವಿಸಿ ಮಣ್ಣಿನಡಿ ಇಬ್ಬರು ಕಾರ್ಮಿಕರು ಸಿಲುಕಿದ್ದರು.

ಅಯೋಧ್ಯೆ ರಾಮ ಮಂದಿರ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚನೆ: ಯೋಗಿಗೆ ವಿಎಚ್‌ಪಿ ದೂರು

Posted by Vidyamaana on 2023-12-31 16:45:19 |

Share: | | | | |


ಅಯೋಧ್ಯೆ ರಾಮ ಮಂದಿರ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚನೆ: ಯೋಗಿಗೆ ವಿಎಚ್‌ಪಿ ದೂರು

ನವದೆಹಲಿ: ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ನ ಹೆಸರಿನಲ್ಲಿ ಕೆಲವರು ಯಾವುದೇ ಅನುಮೋದನೆ ಪಡೆಯದೆ ಹಣ ವಸೂಲಿ ಮಾಡುತ್ತಿದ್ದಾರೆ. ಈ ಸಂಬಂಧ ಉತ್ತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರಕ್ಕೆ ದೂರು ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಭಾನುವಾರ ಹೇಳಿದೆ.ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಹೆಸರಿನಲ್ಲಿ ಜನರನ್ನು ಮೋಸ ಮಾಡಲು ಪ್ರಯತ್ನಿಸಲಾಗುತ್ತಿದೆ. ಅವರ ಬಲೆಗೆ ಬೀಳದಂತೆ ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಜನರನ್ನು ಎಚ್ಚರಿಸಿದ್ದಾರೆ. ಅಲ್ಲದೇ ಉತ್ತರ ಪ್ರದೇಶ ಪೊಲೀಸರಿಗೆ ನೀಡಿದ ದೂರಿನ ಪ್ರತಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರ ಪ್ರತಿಯನ್ನು ಸಿಎಂ ಆದಿತ್ಯನಾಥ್ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್‌ ಮಾಡಿದ್ದಾರೆ.ಎಚ್ಚರ! ಕೆಲವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ನಕಲಿ ಗುರುತಿನ ಚೀಟಿ ಮೂಲಕ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬನ್ಸಾಲ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.


ಈ ಬಗ್ಗೆ ತಕ್ಷಣದ ಕ್ರಮ ಕೈಗೊಳ್ಳುವಂತೆ ನಾವು ಉತ್ತರ ಪ್ರದೇಶ ಡಿಜಿಪಿ, ಲಖನೌ ವಲಯ ಐಜಿಗೆ ಔಪಚಾರಿಕ ದೂರು ನೀಡಿದ್ದೇವೆ ಎಂದು ಬನ್ಸಾಲ್ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯುವ ರಾಮನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಹಣವನ್ನು ಸಂಗ್ರಹಿಸಲು ಯಾರಿಗೂ ಅನುಮತಿ ನೀಡಲಾಗಿಲ್ಲ ಎಂದು ವಿಎಚ್‌ಪಿ ಇತ್ತೀಚೆಗೆ ಹೇಳಿತ್ತು.


ಶ್ರೀರಾಮ ದೇಗುಲದಲ್ಲಿ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ನಿಧಿ ಸಂಗ್ರಹಿಸಲು, ಪ್ರತ್ಯೇಕ ಸಮಿತಿ ರಚಿಸಲು ಮತ್ತು ರಶೀದಿಗಳನ್ನು ಮುದ್ರಿಸಲು ಯಾರಿಗೂ ಅನುಮತಿ ನೀಡಲಾಗಿಲ್ಲ ಎಂದು ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದ್ದಾರೆ.

ಬೆಳ್ತಂಗಡಿ: ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಕೌಶಲ್ಯ ವಿಷ ಸೇವಿಸಿ ಆತ್ಮಹತ್ಯೆ.

Posted by Vidyamaana on 2023-04-23 09:29:21 |

Share: | | | | |


ಬೆಳ್ತಂಗಡಿ: ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಕೌಶಲ್ಯ  ವಿಷ ಸೇವಿಸಿ ಆತ್ಮಹತ್ಯೆ.

ಬೆಳ್ತಂಗಡಿ: ನವ ವಿವಾಹಿತೆ ಮಹಿಳೆಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯ ಇಂದಬೆಟ್ಟುವಿನಲ್ಲಿ ನಡೆದಿದೆ.ಇಂದಬೆಟ್ಟು ಗ್ರಾಮದ ಕೊಪ್ಪದಕೋಡಿ ನಿವಾಸಿ ದೇವಕಿಯವರ ಪುತ್ರಿ ಕೌಶಲ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ,

ಕೌಶಲ್ಯ ಅವರು ಇತ್ತೀಚೆಗಷ್ಟೇ ನೆರೆಯ ಸೂರ್ಯಬೆಟ್ಟು ನಿವಾಸಿ ಜೊತೆ ಪ್ರೀತಿಸಿ ಮದುವೆಯಾಗಿದ್ದರು. ಎರಡು ದಿನಗಳ ಹಿಂದೆ ವಿಷ ಸೇವಿಸಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿಸದುಬಂದಿಲ್ಲ. ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಉಪ್ಪಿನಂಗಡಿ : ಶಂಸುಲ್ ಉಲಮಾ ವುಮೆನ್ಸ್ ಶರೀಅತ್ ಕಾಲೇಜ್ ನಲ್ಲಿ ಟೈಲರಿಂಗ್ ತರಗತಿ ಉದ್ಘಾಟನೆ

Posted by Vidyamaana on 2023-07-19 16:03:08 |

Share: | | | | |


ಉಪ್ಪಿನಂಗಡಿ : ಶಂಸುಲ್ ಉಲಮಾ ವುಮೆನ್ಸ್ ಶರೀಅತ್ ಕಾಲೇಜ್ ನಲ್ಲಿ ಟೈಲರಿಂಗ್ ತರಗತಿ ಉದ್ಘಾಟನೆ

ಉಪ್ಪಿನಂಗಡಿ : ವಿದ್ಯೆ ಯಾವುದೇ ಇರಲಿ ಕಲಿತ ವಿದ್ಯೆಯನ್ನು ಬದುಕಿನಲ್ಲಿ ಉಪಯೋಗಕ್ಕೆ ತಂದರೆ ಮಾತ್ರ ಕಲಿಕೆಗೆ ಮಹತ್ವ ಬರುವುದು. ಕಲಿತಂತೆ  ಸರಳತೆಯಿಂದ ಬದುಕಿದರೆ ನೆಮ್ಮದಿಯ ಬದುಕು ಸಿಗುವುದು,ಕೆಲ ಮಹಿಳೆಯರು ಇಂದು ಆಡಂಬರದ ಬದುಕಿಗೆ ಜೋತು ಬಿದ್ದು ಕಡೆಗೆ ಕುಟುಂಬ ಕಲಹಕ್ಕೂ ಕಾರಣವಾಗುತ್ತಿರುವುದು ಕಾಣುತ್ತಿದ್ದೇವೆ. ಆದ್ದರಿಂದ ಶಿಸ್ತು ಹಾಗೂ ಸರಳತೆಯಿಂದ ಬದುಕುವ ಕಲೆಯನ್ನು ಪ್ರತಿಯೊಬ್ಬರೂ ಕಲಿತು ಕೊಳ್ಳಬೇಕು ಎಂದು ಕೆಮ್ಮಾರ ಶಂಸುಲ್ ಉಲಮಾ ವುಮೆನ್ಸ್ ಕಾಲೇಜ್ ಅಧ್ಯಕ್ಷ ಎಸ್.ಬಿ.ಮುಹಮ್ಮದ್ ದಾರಿಮಿ ಅವರು ಹೇಳಿದರು.

     ಅವರು ಕೆಮ್ಮಾರ ಶಕ್ತಿನಗರ ಶಂಸುಲ್ ಉಲಮಾ ವುಮೆನ್ಸ್ ಶರೀಅತ್ ಕಾಲೇಜ್ ನಲ್ಲಿ ವಿದ್ಯಾರ್ಥಿಗಳಿಗೆ ಟೈಲರಿಂಗ್ ತರಬೇತಿಯನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು.

      ಮಹಿಳೆಯರು ವಿದ್ಯಾರ್ಥಿ ಜೀವನದಲ್ಲೇ ಟೈಲರಿಂಗ್ ನಂತಹ ಕೌಶಲ್ಯ ಆಧಾರಿತ ಶಿಕ್ಷಣವನ್ನು ಕಲಿತು ಕೊಂಡರೆ ಮುಂದೆ ಮನೆಯಲ್ಲಿದ್ದು ಕೊಂಡೇ ಕೈ ತುಂಬಾ ಸಂಪಾದಿಸಲು ಸಾಧ್ಯವಾಗುವುದು. ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. 

    ಸಂಸ್ಥೆಯ ಉಸ್ತಾದರಾದ ಹನೀಫ್ ದಾರಿಮಿ ಪಡೀಲ್ ಮತ್ತು ಶೌಕತ್ತ್ ಫೈಝಿ ಗಂಡಿಬಾಗಿಲು ಸಮಾರಂಭದಲ್ಲಿ ಮಾತನಾಡಿದರು.ಶಿಕ್ಷಕಿಯರಾದ ಶಾಹಿರಾ ಮಾಹಿರ ಮತ್ತು ಸುಹೈಲಾ ಫಾಳಿಲಾ ಅವರು ವಿದ್ಯಾರ್ಥಿನಿಯರಿಗೆ ಟೈಲರಿಂಗ್ ತರಬೇತಿ ಯ ಬಗ್ಗೆ ಮಾಹಿತಿ ನೀಡಿದರು.

ಪ್ರವೀಣ್ ನೆಟ್ಟಾರು ಪತ್ನಿಯನ್ನು ಗ್ರೂಪ್-ಸಿ ಹುದ್ದೆಗೆ ಮರುನೇಮಕ - ಸಿಎಂ ಸಿದ್ಧರಾಮಯ್ಯ ಘೋಷಣೆ

Posted by Vidyamaana on 2023-05-27 15:51:17 |

Share: | | | | |


ಪ್ರವೀಣ್ ನೆಟ್ಟಾರು ಪತ್ನಿಯನ್ನು ಗ್ರೂಪ್-ಸಿ ಹುದ್ದೆಗೆ ಮರುನೇಮಕ - ಸಿಎಂ ಸಿದ್ಧರಾಮಯ್ಯ ಘೋಷಣೆ

ಬೆಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಯನ್ನು ಗ್ರೂಪ್ ಸಿ ಹುದ್ದೆಗೆ ಮರು ನೇಮಕ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದಾರೆ.ಈ ಕುರಿತಂತೆ ಇಂದು ಟ್ವಿಟ್ ಮಾಡಿರುವಂತ ಅವರು, ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ ಎಂದಿದ್ದಾರೆ.ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ.

Recent News


Leave a Comment: