ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಸುದ್ದಿಗಳು News

Posted by vidyamaana on 2024-07-08 15:11:53 |

Share: | | | | |


ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಕಲಬುರಗಿ: ಹೃದಯಾಘಾತವಾದ ಹಿನ್ನೆಲೆಯಲ್ಲಿ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ (35) ವಿಧಿವಶರಾಗಿದ್ದಾರೆ.

ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ವಿರಕ್ತ ಮಠದ್ದಲ್ಲಿ ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಮಹಾಸ್ವಾಮಿಗಳು ಇಹಲೋಕ ತ್ಯಜಿಸಿದ್ದಾರೆ.

ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ-ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ಭಾನುವಾರ ರಟಕಲ್ ಗ್ರಾಮದಲ್ಲಿ ನಡೆದ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು.

 Share: | | | | |


2ನೇ ರಾಜ್ಯಭಾಷೆಯಾಗಿ ತುಳು ಘೋಷಣೆಗೆ ಯತ್ನ

Posted by Vidyamaana on 2024-07-23 07:07:38 |

Share: | | | | |


2ನೇ ರಾಜ್ಯಭಾಷೆಯಾಗಿ ತುಳು ಘೋಷಣೆಗೆ ಯತ್ನ

ಪುತ್ತೂರು: ರಾಜ್ಯದಲ್ಲಿ ತುಳು ಭಾಷೆಯನ್ನು ೨ನೇ ಅಧಿಕೃತ ರಾಜ್ಯಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಶೀಘ್ರದಲ್ಲೇ ಈ ಪ್ರಯತ್ನ ಕೈಗೂಡುವ ವಿಶ್ವಾಸವಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ಇವರ ಸಹಯೋಗದಲ್ಲಿ ಪುತ್ತೂರಿನ ರೋಟರಿ ಮನೀಷಾ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ - ಉಪನ್ಯಾಸ- ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ದೀಪಿಕಾ ಸುಳ್ಯದಲ್ಲಿ ಪತ್ತೆ

Posted by Vidyamaana on 2024-05-10 07:20:16 |

Share: | | | | |


ನಾಪತ್ತೆಯಾಗಿದ್ದ ವಿದ್ಯಾರ್ಥಿನಿ  ದೀಪಿಕಾ ಸುಳ್ಯದಲ್ಲಿ ಪತ್ತೆ

ಮಂಗಳೂರು, ಮೇ 9: ರೋಶನಿ ನಿಲಯದಲ್ಲಿ ಎಂಎಸ್ಸಿ ಕಲಿಯುತ್ತಿದ್ದು ಪರೀಕ್ಷೆ ಹಾಲ್ ನಿಂದಲೇ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜ್ ಅವರನ್ನು ಪೊಲೀಸರು ಸುಳ್ಯದಲ್ಲಿ ಪತ್ತೆ ಮಾಡಿದ್ದಾರೆ.

ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್ ಸೈನ್ಸ್ ವಿಷಯದಲ್ಲಿ ಮೊದಲನೇ ವರ್ಷದ ಎಂಎಸ್ಸಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಮೇ 7ರಂದು ಎರಡನೇ ಸೆಮಿಸ್ಟರ್ ಪರೀಕ್ಷೆ ಮುಗಿಸಿ ಹೊರಗೆ ಬಂದವಳು ನಾಪತ್ತೆಯಾಗಿದ್ದಳು. ಮನೆಯವರು ಪಾಂಡೇಶ್ವರ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪುಸ್ತಕ ಮತ್ತು ಮೊಬೈಲನ್ನು ಕಾಲೇಜಿನಲ್ಲಿಯೇ ಬಿಟ್ಟು ತೆರಳಿದ್ದರಿಂದ ಭಾರೀ ಕುತೂಹಲ ಉಂಟಾಗಿತ್ತು.

ಕದ್ದ ಲಾರಿ ಯಲ್ಲಿ ಕುಡಿದು ಮಲಗಿ ಸಿಕ್ಕಿಬಿದ್ದ ಕಳ್ಳ ಆರೋಪಿ ದಯಾಳನ್ ಬಂಧನ.

Posted by Vidyamaana on 2023-04-07 15:26:04 |

Share: | | | | |


ಕದ್ದ ಲಾರಿ ಯಲ್ಲಿ ಕುಡಿದು ಮಲಗಿ ಸಿಕ್ಕಿಬಿದ್ದ ಕಳ್ಳ  ಆರೋಪಿ ದಯಾಳನ್  ಬಂಧನ.

ಬೆಂಗಳೂರು: ಲಾರಿ ಕಳವು ಪ್ರಕರಣ ದಾಖಲಾದ 11 ಗಂಟೆಯಲ್ಲಿ ಕಳ್ಳನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ತುಮಿಳುನಾಡಿನ ವೆಲ್ಲೂರು ಮೂಲದ ದೀನ್ ದಯಾಳನ್ (48) ಬಂಧಿತ. ಈತ ಕಳವು ಮಾಡಿದ್ದ 35 ಲಕ್ಷ ರೂ. ಮೌಲ್ಯದ ಲಾರಿಯನ್ನು ಜಪ್ತಿ ಮಾಡಲಾಗಿದೆ.ಬನ್ನೇರುಘಟ್ಟ ನಿವಾಸಿ ಲಾರಿ ಚಾಲಕ ನಾಗೇಂದ್ರ ನಾಯಕ್ ಏ.5ರ ಸಂಜೆ 5 ಗಂಟೆಗೆ ಲಾರಿಯನ್ನು ಬನ್ನೇರುಘಟ್ಟ ಮುಖ್ಯರಸ್ತೆಯ ಗೊಟ್ಟಿಗೆರೆಯ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿ ಮನೆಗೆ ಹೋಗಿದ್ದರು. ಮಾರನೇ ದಿನ ಬೆಳಗ್ಗೆ ಬಂದು ನೋಡಿದಾಗ ಲಾರಿ ಇರಲಿಲ್ಲ. ಈ ಸಂಬಂಧ ಚಾಲಕ ದೂರು ನೀಡಿದ್ದರು. ಇದರ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಚಾಲಕನಾಗಿದ್ದ ದೀನ್ ದಯಾಳನ್, ತಮಿಳುನಾಡಿನಿಂದ ನಗರಕ್ಕೆ ಬಂದು ಜೆಸಿಬಿ, ತರಕಾರಿ ವಾಹನ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಅದೇ ವಾಹನಗಳಲ್ಲಿ ರಾತ್ರಿ ಮಲಗುತ್ತಿದ್ದ. ಇತ್ತೀಚೆಗೆ ಕೆಲಸ ಮಾಡದೆ ಓಡಾಡುತ್ತಿದ್ದ. ಏ.5ರಂದು ಗೊಟ್ಟಿಗೆರೆಗೆ ಬಂದಿದ್ದು, ಲಾರಿ ನಿಂತಿರುವುದು ಕಂಡು ಹತ್ತಿರ ಹೋಗಿ ನೋಡಿದಾಗ ಚಾಲಕ ಇರಲಿಲ್ಲ. ಡ್ಯಾಶ್ ಬೋರ್ಡ್‌ನಲ್ಲಿ ಇದ್ದ ಕೀ ತೆಗೆದುಕೊಂಡು ತಮಿಳುನಾಡಿನತ್ತ ಲಾರಿ ಚಲಾಯಿಸಿಕೊಂಡು ಹೊರಟ್ಟಿದ್ದಾನೆ.ರಾತ್ರಿ ಮದ್ಯಪಾನ ಮಾಡಿದ್ದ ಆರೋಪಿಯು ಆನೇಕಲ್‌ನಲ್ಲಿ ಲಾರಿಯನ್ನು ನಿಲ್ಲಿಸಿ ಮಲಗಿದ್ದ. ಅಷ್ಟರಲ್ಲಿ ಲಾರಿ ಪತ್ತೆಗಾಗಿ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು, ಆನೇಕಲ್‌ನಲ್ಲಿ ಲಾರಿ ಇರುವುದನ್ನು ಪತ್ತೆಹಚ್ಚಿ ಕೂಡಲೇ ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಿಟ್ಲ್ ಫ್ಲವ‌ರ್ ಶಾಲೆಯಲ್ಲಿ ಮೇಲೈಸಿದ ಶಾಲಾ ಸ್ಕೌಟ್ ಗೈಡ್, ಕಬ್, ಬುಲ್ ಬುಲ್ ದಳದ ವಾರ್ಷಿಕ ಮೇಳ

Posted by Vidyamaana on 2024-02-18 07:45:15 |

Share: | | | | |


ಲಿಟ್ಲ್  ಫ್ಲವ‌ರ್ ಶಾಲೆಯಲ್ಲಿ ಮೇಲೈಸಿದ ಶಾಲಾ ಸ್ಕೌಟ್  ಗೈಡ್, ಕಬ್, ಬುಲ್ ಬುಲ್ ದಳದ ವಾರ್ಷಿಕ ಮೇಳ

ಪುತ್ತೂರು: ದರ್ಬೆ ಲಿಟ್ಲ್  ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸ್ಕೌಟ್ , ಗೈಡ್, ಕಬ್ ಮತ್ತು ಬುಲ್ ಬುಲ್ ದಳದ ವಾರ್ಷಿಕ ಮೇಳ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಶಾಲಾ ಸೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ಮಕ್ಕಳಿಂದ ಗೂಡುದೀಪ ರಚನೆ, ನಕ್ಷತ್ರ ರಚನೆ, ರಾಷ್ಟ್ರಧ್ವಜದ ಚಿತ್ರ ರಚನೆ, ಎಲೆಗಳಿಂದ ಆಕೃತಿ ತಯಾರಿ ನಡೆಯಿತು. ರಂಗಬೆಳಕು ತಂಡ ಪುತ್ತೂರು ವತಿಯಿಂದ ಕೃಷ್ಣಪ್ಪ ಬಂಬಿಲ ನೇತೃತ್ವದಲ್ಲಿ ಜಾಗೃತಿ ಗೀತೆಗಳ ಗಾಯನ ನಡೆಯಿತು. ದರ್ಬೆ ವೃತ್ತದಿಂದ 352 ವಿದ್ಯಾರ್ಥಿಗಳು, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ಆಕರ್ಷಕ ಪಥಸಂಚಲನವನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್ ಉದ್ಘಾಟಿಸಿದರು. ನಂತರ ಶಾಲಾ ಸ್ಕೌಟ್ , ಗೈಡ್, ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಕರೋಕೆ ಹಾಡುಗಳ ಸುಮಧುರ ಗಾಯನ ನೆರವೇರಿತು.ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ. ಎಸ್., ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್‌, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ಸತೀಶ್‌ ಆ‌ರ್, ಶಾಲಾ ಸೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ದಳದವರು, ಶಿಕ್ಷಕ ಶಿಕ್ಷಕಿಯರ ಉಪಸ್ಥಿತಿಯೊಂದಿಗೆ ಧ್ವಜಾರೋಹಣ ನೆರವೇರಿತು. ಬಳಿಕ ನಡೆದ ಸಮಾರಂಭವನ್ನು ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಉದ್ಘಾಟಿಸಿದರು. ಶಾಲಾ ಸಂಚಾಲಕಿ ವಂದನೀಯ ಭಗಿನಿ ಪ್ರಶಾಂತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ಧೇಶಕ ಡಾ. ಯು. ಪಿ ಶಿವಾನಂದ, ಪುತ್ತೂರು ನಗರ ಸಭೆಯ ಸ್ಥಳೀಯ ಸದಸ್ಯೆ ಶಶಿಕಲಾ, ನಿವೃತ್ತ ಸೈನಿಕರ ಸಂಘದ ಗೌರವಾಧ್ಯಕ್ಷ ಕರ್ನಲ್ ಡಿ. ಜಿ. ಭಟ್‌, ನಿವೃತ್ತ ಶಿಕ್ಷಕಿ ಮೇರಿ ಡಿಸಿಲ್ವ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷ ಸತೀಶ್‌ ಆ‌ರ್. ಉಪಸ್ಥಿತರಿದ್ದರು.ಬಳಿಕ ಕೆಮ್ಮಿಂಜೆ ಅಗ್ನಿಶಾಮಕ ದಳದ ವತಿಯಿಂದ ಅಗ್ನಿಶಾಮಕ ಪ್ರಾತ್ಯಕ್ಷಿಕೆ ಅಗ್ನಿಶಾಮಕ ದಳದ ಮುಖ್ಯಸ್ಥ ರುಕ್ಕಯ ಗೌಡ ಅವರ ನೇತೃತ್ವದಲ್ಲಿ ನೆರವೇರಿತು. ಬಳಿಕ ಪುತ್ತೂರು ಸೌಟ್, ಗೈಡ್, ಸ್ಥಳೀಯ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ವೇದಾವತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಶಾಲಾ ಸಂಚಾಲಕಿ ವಂದನೀಯ ಭಗಿನಿ ಪ್ರಶಾಂತಿ ಬಿ. ಎಸ್. ಅಧ್ಯಕ್ಷತೆಯಲ್ಲಿ, ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾನ್ಯ ಲೋಕೇಶ್ ಎಸ್‌. ಆ‌ರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಪುತ್ತೂರು ಸೈಟ್, ಗೈಡ್, ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ವಿದ್ಯಾ ಆರ್. ಗೌರಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು ಇಲ್ಲಿನ ಶಿಕ್ಷಕಿ ಶ್ರೀಮತಿ ಮೇಬಲ್ ಡಿಸೋಜ, ಪುತ್ತೂರು ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಶಿಕಲಾ, ಅಮ‌ರ್ ಅಕ್ಟ‌ರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿಯ ಸ್ಥಾಪಕಾಧ್ಯಕ್ಷರಾದ ರಝಾಕ್ ಬಪ್ಪಳಿಗೆ, ಶಾಲಾ ದಾನಿಗಳಾದ ಶ್ರೀಮತಿ ಸುನೀತಾ ರಕ್ಷಕ ಶಿಕ್ಷಕ ಸಂಘದ ನಿಕಟಪೂರ್ವ ಉಪಾಧ್ಯಕ್ಷರಾದ ಶ್ರೀಯುತ ರಘುನಾಥ ರೈ, ಪುತ್ತೂರು ಸ್ಕೌಟ್ , ಗೈಡ್, ಸ್ಥಳೀಯ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ವೇದಾವತಿ, ಪುತ್ತೂರು ಸ್ಕೌಟ್  ಗೈಡ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಶ್ರೀಮತಿ ಡೋರತಿ ಮೇರಿ ಡಿಸೋಜ, ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಮೇರಿ ಡಿಸಿಲ್ವ, ಶ್ರೀಮತಿ ಲಿಡಿಯಾ ಮರಿಯಾ ರಸ್ಕಿನ್ಹ, ಶ್ರೀಮತಿ ಐರಿನ್ ವೇಗಸ್, ಹಿರಿಯ ವಿದ್ಯಾರ್ಥಿ ಡಾ. ಶ್ರೀಪ್ರಕಾಶ್‌, ಪೋಷಕರಾದ ಶ್ರೀಮತಿ ಡಾ. ವಿಜಯ ಸರಸ್ವತಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ರಾಮಚಂದ್ರ ಭಟ್, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಸತೀಶ್ ಆರ್, ಹಾಗೂ ಭಗಿನಿ ಫೆಲ್ಸಿ ಡಿಸೋಜ ಉಪಸ್ಥಿತರಿದ್ದರು. ಬಳಿಕ 352 ವಿದ್ಯಾರ್ಥಿಗಳ ಭಾಗವಹಿಸುವಿಕೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.ಮರುದಿನ ಬಿ ಪಿ ಸಿಕ್ಸ್ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆ ನಡೆಯಿತು. ಉಪಾಹಾರದ ಬಳಿಕ ಬೆಂಕಿ ಬಳಸದ ಅಡುಗೆ ಗಮನ ಸೆಳೆಯಿತು. ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಸಂಚಾಲಕ ಪ್ರವೀಣ್‌ ವರ್ಣಕುಟೀರ ಅವರಿಂದ ಮುಖವಾಡ ತಯಾರಿ, ಗೊಂಬೆ ತಯಾರಿ, ಕರಕುಶಲ ವಸ್ತುಗಳ ಪ್ರಾತ್ಯಕ್ಷಿಕೆ ನೆರವೇರಿತು.


ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಶಿಕ್ಷಕಿ ಭಗಿನಿ ವೆನಿಶಾ ಬಿ. ಎಸ್. ವಹಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಶಾಲಾ ಸ್ಕೌಟ್ಸ್ , ಗೈಡ್, ಕಬ್ ಮತ್ತು ಬುಲ್ ಬುಲ್ ದಳದ ವಾರ್ಷಿಕ ಮೇಳದ ನಾಯಕಿ ವಿಲ್ಮಾ ಫೆರ್ನಾಂಡಿಸ್, ಸ್ಕೌಟ್ಸ್  ಶಿಕ್ಷಕರಾದ ಬಾಲಕೃಷ್ಣ ಪೊರ್ದಾಲ್, ಭವ್ಯ, ಬುಲ್ ಬುಲ್ ಶಿಕ್ಷಕಿಯರಾದ ಜೋಸ್ಲಿನ್ ಪಾಯಸ್, ಮಮತಾ, ದೀಕ್ಷಾ, ಕಬ್ ಶಿಕ್ಷಕಿಯರಾದ ಸುಶ್ಮಿತಾ, ದಿವ್ಯ, ಗೈಡ್ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಎ.23-24: ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದ ಪುನ‌ರ್ ಪ್ರತಿಷ್ಠಾಪನಾ ಮಹೋತ್ಸವ

Posted by Vidyamaana on 2024-04-23 08:15:59 |

Share: | | | | |


ಎ.23-24: ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದ ಪುನ‌ರ್ ಪ್ರತಿಷ್ಠಾಪನಾ ಮಹೋತ್ಸವ

ಪುತ್ತೂರು: ೧೯೬೪ರಲ್ಲಿ ಪುತ್ತೂರಿನ ಕೆಮ್ಮಿಂಜೆಯಲ್ಲಿ ನಿರ್ಮಿಸಲಾದ ಶ್ರೀ ರಾಮ ಭಜನಾ ಮಂದಿರವನ್ನು ನವೀಕರಿಸಲಾಗಿದ್ದುö,  ಇದರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮಗಳು ಏಪ್ರಿಲ್ ೨೩ ಮತ್ತು ೨೪ರಂದು  ನಡೆಯಲಿದೆ ಎಂದು ಶ್ರೀ ರಾಮ ಭಜನಾ ಮಂದಿರ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಚಂದ್ರಶೇಖರ ಕೆಮ್ಮಿಂಜೆ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ೨೩ರಂದು ಸಂಜೆ ೭ ಗಂಟೆಯಿAದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ 

ಲಿಟ್ಲ್ ಫ್ಲವರ್ ಫ್ಲವರ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಇನ್‌ಸ್ಪೈರ್‌ ಅವಾರ್ಡ್‌ಗೆ ಆಯ್ಕೆ

Posted by Vidyamaana on 2024-03-14 13:35:59 |

Share: | | | | |


ಲಿಟ್ಲ್ ಫ್ಲವರ್ ಫ್ಲವರ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಇನ್‌ಸ್ಪೈರ್‌ ಅವಾರ್ಡ್‌ಗೆ ಆಯ್ಕೆ

ಪುತ್ತೂರು: ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಲ್ಲಿ ಹುದುಗಿರುವ ವಿಜ್ಞಾನ ಪ್ರತಿಭೆ ಹೊರ ತರುವ ಉದ್ದೇಶದಿಂದ ಕೇಂದ್ರ ಸರಕಾರ ಆರಂಭಿಸಿರುವ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಯಕ್ರಮದಡಿ 7 ನೇ ತರಗತಿಯ ಭಾರವಿ ಕೆ ಭಟ್ (ಡಾ. ರವಿಪ್ರಕಾಶ್ ಮತ್ತು ಡಾ ವಿಜಯ ಸರಸ್ವತಿ ದಂಪತಿಗಳ ಸುಪುತ್ರ ) ರವರು "ಹೈ ವೋಲ್ಟೇಜ್ ಡಿಟೆಕ್ಟರ್" ಎನ್ನುವ ಪರಿಕಲ್ಪನೆಯನ್ನು ಮಂಡಿಸಿ ಹಾಗೂ 7ನೇ ತರಗತಿಯ ಗಗನ್ ( ಚಂದ್ರಶೇಖರ ಬೆದ್ರಾಳ ಹಾಗೂ ಜಯಲಕ್ಷ್ಮಿ ದಂಪತಿಗಳ ಸುಪುತ್ರ) ರವರು "ನೂಡಲ್ಸ್ ಮೇಕಿಂಗ್ ಮಷೀನ್ "ಎನ್ನುವ ಪರಿಕಲ್ಪನೆಯ ಸಲ್ಲಿಸಿ ಇನ್‌ಸ್ಪೈರ್‌ ಅವಾರ್ಡಿಗೆ ಆಯ್ಕೆಯಾಗಿದ್ದಾರೆ. ಎಂದು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recent News


Leave a Comment: