ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಸುದ್ದಿಗಳು News

Posted by vidyamaana on 2024-07-23 21:09:49 |

Share: | | | | |


ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪ:ಅಣ್ಣಪ್ಪ ಮಾಲಕತ್ವದ  ಮಾರುತಿ ಡ್ರೈವಿಂಗ್ ಸ್ಕೂಲ್‌ನ ಪರವಾನಗಿ ರದ್ದು

ಬೆಂಗಳೂರು : ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ಪರವಾನಗಿ ಹಾಗೂ ಅದೇ ಶಾಲೆಯ ತರಬೇತುದಾರನ ಚಾಲನಾ ಪರವಾನಗಿಯನ್ನು (ಡಿಎಲ್‌) ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ರದ್ದುಗೊಳಿಸಿದೆ. 

ಯುವತಿಗೆ ಕಾರು ಚಾಲನೆಯ ತರಬೇತಿ ನೀಡುವ ವೇಳೆ ಅಸಭ್ಯವಾಗಿ ವರ್ತಿಸಿದ್ದ ಆರೋಪದ ಅಡಿ ಕಾರು ತರಬೇತಿದಾರನ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಸೂಚನೆಯಂತೆ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.

ನಗರದ ಯಾವುದೇ ಡ್ರೈವಿಂಗ್ ಶಾಲೆಯಲ್ಲೂ ಈ ರೀತಿಯ ಘಟನೆಗಳು ನಡೆಯಬಾರದು. ಈ ನಿಟ್ಟಿನಲ್ಲಿ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಹಾಲಕ್ಷ್ಮೀಪುರದ 18 ವರ್ಷದ ಯುವತಿ ನೀಡಿದ್ದ ದೂರು ಆಧರಿಸಿ, ಬಸವೇಶ್ವರನಗರದ ಮಾರುತಿ ಡ್ರೈವಿಂಗ್‌ ಸ್ಕೂಲ್‌ನ ತರಬೇತುದಾರ ಅಣ್ಣಪ್ಪ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?:‌

ದೂರು ನೀಡಿದ್ದ ಯುವತಿ ಕಾರು ಚಾಲನೆ ಕಲಿಯಲು ಮಾರುತಿ ಡ್ರೈವಿಂಗ್‌ ಸ್ಕೂಲ್‌ಗೆ ಸೇರಿದ್ದರು. ಅಣ್ಣಪ್ಪ ಎಂಬಾತ ಕಾರು ಚಾಲನೆ ಬಗ್ಗೆ ತರಬೇತಿ ನೀಡಿದ್ದರು. ಒಂದು ತಿಂಗಳ ಕೋರ್ಸ್‌ ಮುಕ್ತಾಯವಾದ ಮೇಲೆ ಅಣ್ಣಪ್ಪ, ನಿಮ್ಮ ಮನೆಯ ಕಾರಿನಲ್ಲೇ ಪರಿಪೂರ್ಣವಾಗಿ ಚಾಲನೆ ಬಗ್ಗೆ ಹೇಳಿಕೊಡುತ್ತೇನೆ. ಒಂದು ಗಂಟೆಯ ವಿಶೇಷ ಕ್ಲಾಸ್‌ಗೆ ₹750 ಕೊಡಬೇಕು ಎಂದು ಯುವತಿಯನ್ನು ಕೇಳಿಕೊಂಡಿದ್ದರು. ಯುವತಿ 15 ದಿನಗಳ ವಿಶೇಷ ಕ್ಲಾಸ್‌ಗೆ ಅಣ್ಣಪ್ಪ ಅವರಿಗೆ ₹10,500 ಪಾವತಿಸಿದ್ದರು. ಅದರಂತೆ ಅಣ್ಣಪ್ಪ ವಿಶೇಷ ತರಬೇತಿ ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

ಪ್ರತಿದಿನ ಯುವತಿಯ ಮನೆ ಬಳಿ ಬಂದು ಆಕೆಯ ಕಾರಿನಲ್ಲೇ ಅಣ್ಣಪ್ಪ ಚಾಲನೆ ತರಬೇತಿ ನೀಡುತ್ತಿದ್ದರು. ಜುಲೈ 7ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಯುವತಿ ಮನೆ ಬಳಿ ಬಂದಿದ್ದ ಅಣ್ಣಪ್ಪ, ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಚಾಲನೆ ಬಗ್ಗೆ ಹೇಳಿಕೊಡಲು ಮುಂದಾಗಿದ್ದರು. ಬಸವೇಶ್ವರ ನಗರದ ನ್ಯಾಷನಲ್‌ ಶಾಲೆಯ ಮೇಲ್ಸೇತುವೆಯಲ್ಲಿ ತೆರಳುವಾಗ, ಯುವತಿ ಕಾರು ಚಾಲನೆ ಮಾಡುತ್ತಿದ್ದರು. ಆಗ ಅಣ್ಣಪ್ಪ ಅಸಭ್ಯವಾಗಿ ವರ್ತಿಸಿದ್ದರು ಎಂದು ಪೊಲೀಸರು ತಿಳಿಸಿದರು.

ತರಬೇತುದಾರನ ಅಸಭ್ಯ ವರ್ತನೆಯಿಂದ ಗಾಬರಿಗೊಂಡಿದ್ದ ಯುವತಿ ಕಾರನ್ನು ಮನೆಯತ್ತ ತಿರುಗಿಸಿದ್ದರು. ಅದಾದ ಮೇಲೆ ತರಬೇತುದಾರ ಸುಮ್ಮನಾಗಿದ್ದರು. ಅಣ್ಣಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಯುವತಿ ಪೊಲೀಸರಿಗೆ ದೂರು ನೀಡಿದ್ದರು.

 Share: | | | | |


ಪುತ್ತೂರು : ಇಂದು (ಜು 13) ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ

Posted by Vidyamaana on 2023-07-12 23:15:01 |

Share: | | | | |


ಪುತ್ತೂರು : ಇಂದು (ಜು 13) ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11 ಕೆವಿ ಮತ್ತೂರ ವಿದ್ಯುತ್‌ ಕೇಂದ್ರದಿಂದ ರಾಮಕುಂಜ ಫೀಡರ್‌ನಲ್ಲಿ ಮತ್ತು 33/11 ಕೆವಿ ಕ್ಯಾಂಪೋ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮುಕ್ರಂಪಾಡಿ, ಮುಕ್ವೆಮುಂಡೂರು ಫೀಡರ್‌ಗಳಲ್ಲಿ ಜು.13ರಂದು ಪೂರ್ವಾಹ ಗಂಟೆ 10ರಿಂದ ಅಪರಾಹ್ನ 5ರವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು ಆದುದರಿಂದ, 10/33/11 ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಮತ್ತು 33/11ಕೆಎ ಕ್ಯಾಂಪ್ಕೋ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್ ಗಳಿ೦ದ ವಿದ್ಯುತ್‌ ಸರಬರಾಜಾಗುವ ರಾಮಕು೦ಜ, ಹಿರೇಬಂಡಾಡಿ, ಬೆಳ್ಳಿಪ್ಪಾಡಿ ಕೋಡಿಂಬಾಡಿ, ಕೂರ್ನಡ್ಕ, ಕೆಮ್ಮಿಂಜೆ, ಮರೀಲ್‌, ಮುಕ್ರಂಪಾಡಿ, ಮೊಟ್ಟೆತ್ತಡ ಮುಂಡೂರು ಮತ್ತು ಸಂಪ್ಯ ಪರಿಸರದ ವಿದ್ಯುತ್‌ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಪ್ರಸಾದ ವಿತರಣೆ ವಿಚಾರದಲ್ಲಿ ಜಗಳ ಬಿಜೆಪಿ ಯುವ ಮುಖಂಡ ಪ್ರವೀಣ್ ಕಮ್ಮಾರ ಹತ್ಯೆ.

Posted by Vidyamaana on 2023-04-19 15:55:32 |

Share: | | | | |


ಪ್ರಸಾದ ವಿತರಣೆ ವಿಚಾರದಲ್ಲಿ ಜಗಳ ಬಿಜೆಪಿ ಯುವ ಮುಖಂಡ ಪ್ರವೀಣ್  ಕಮ್ಮಾರ ಹತ್ಯೆ.

ಧಾರವಾಡ: ಗ್ರಾಮದ ಜಾತ್ರೆಯಲ್ಲಿ ಪ್ರಸಾದ ವಿತರಣೆಗೆ ನಡೆದ ಜಗಳ ಕೋಟೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ, ಬಿಜೆಪಿ ಯುವ ಮುಖಂಡ ಪ್ರವೀಣ ಕಮ್ಮಾರ ಹತ್ಯೆಯಲ್ಲಿ ಅಂತ್ಯ ಕಂಡಿದೆ.ಗ್ರಾಮದ ಇನ್ನೋರ್ವ ಬಿಜೆಪಿ ಕಾರ್ಯಕರ್ತ ರಾಘವೇಂದ್ರ ಪಟಾತ್ ಸೇರಿ ಆರು ಜನರ ಗುಂಪು ಈ ಕೃತ್ಯ ಎಸಗಿದೆ. ಪ್ರವೀಣ ಹತ್ಯೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಶೋಧ ಕಾರ್ಯವೂ ನಡೆದಿದೆ. ಮಂಗಳವಾರ ಗ್ರಾಮದ ಉಡಚಮ್ಮದೇವಿ ಜಾತ್ರೆಯಲ್ಲಿ ಪ್ರಸಾದ ವಿತರಣೆಗೆ ಎರಡು ಗುಂಪುಗಳ ಮಧ್ಯೆ ನಡೆದ ಜಗಳವನ್ನು ಕೋಟೂರು ಗ್ರಾಪಂ ಉಪಾಧ್ಯಕ್ಷ ಪ್ರವೀಣ ಮದ್ಯ ಪ್ರವೇಶಿಸಿ ಬಗೆ ಹರಿಸಿದ್ದರು ಎಂದು ಪ್ರತ್ಯಕ್ಷದರ್ಶಿ ಗ್ರಾಮಸ್ಥರು ತಿಳಿಸಿದ್ದಾರೆ.ಆದರೆ ನಂತರ ಕುಡಿದ ಅಮಲಿನಲ್ಲಿದ್ದ ರಾಘವೇಂದ್ರ ಪಟಾದ್ ಮತ್ತು ಸಹಚರರು ಪ್ರವೀಣಗೆ ಚಾಕುವಿನಿಂದ ಇರಿದಿದ್ದು, ತಕ್ಷಣ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಬುಧವಾರ ಪ್ರವೀಣ ಮೃತಪಟ್ಟಿದ್ದಾನೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಹಾಗೂ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತಂತೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಕೀಯ ತಿರುವು:

ಚುನಾವಣೆಯ ಹೊತ್ತಿನಲ್ಲಿ ಪ್ರವೀಣ ಕಮ್ಮಾರ ಹತ್ಯೆ ಪ್ರಕರಣ ಇದೀಗ ರಾಜಕೀಯ ತೀರುವು ಪಡೆದಿದೆ. ಹತ್ಯೆಯ ಪ್ರಮುಖ ಆರೋಪಿ ರಾಘವೇಂದ್ರ ಪಟಾತ್ ಬಿಜೆಪಿ ಕಾರ್ಯಕರ್ತನಾಗಿದ್ದಾನೆ. ಅಲ್ಲದೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಶಾಸಕ ಅಮೃತ ದೇಸಾಯಿ ಅವರಿಗೆ ಆಪ್ತನಾಗಿದ್ದಾನೆ ಎನ್ನಲಾಗಿದೆ. ಆದರೆ ಇತ್ತಿಚೇಗೆ ಬಿಜೆಪಿ ಪಕ್ಷ ತೊರೆದ ರಾಘವೇಂದ್ರ, ಬಸವರಾಜ ಕೊರವರ ನೇತೃತ್ವದ ಜನಜಾಗೃತಿ ಹೋರಾಟ ವೇದಿಕೆ ಸೇರಿದ್ದ ಎನ್ನಲಾಗುತ್ತಿದೆ. ಪಟಾತ್, ಧಾರವಾಡ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಓಬಿಸಿ ಘಟಕದ ಉಪಾಧ್ಯಕ್ಷನಾಗಿದ್ದಾನೆ. ಜಿಲ್ಲೆಯ ಎಲ್ಲಾ ಬಿಜೆಪಿ ಹಿರಿಯ ನಾಯಕರ ಜತೆ ಒಡನಾಟ ಹೊಂದಿದ್ದಾನೆ ಎನ್ನುತ್ತಿದ್ದಾರೆ ಕೋಟೂರು ಗ್ರಾಮಸ್ತರು. ಇನ್ನೊಂದೆಡೆ ಇದು ಜಾತಿ ಜಗಳ ಎಂದು ಕೂಡ ಚರ್ಚಿಸಲಾಗುತ್ತಿದೆ.

ಬಿಜೆಪಿ ಕಾರ್ಯಕರ್ತ ಪ್ರವೀಣ ಕಮ್ಮಾರ ಹತ್ಯೆ, ರಾಜಕೀಯ ಕೊಲೆ. ಸೂಕ್ತ ತನಿಖೆಗೆ ಪೊಲೀಸರಿಗೆ ಸೂಚಿಸಿದೆ. ಪ್ರವೀಣ ಕುಟುಂಬಕ್ಕೆ ಪರಿಹಾರ ನೀಡುವ ಜತೆ ನ್ಯಾಯ ಕೊಡಿಸಲಾಗುವುದು.

– ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವರು

ಕೋಟೂರು ಗ್ರಾಮದ ಜಾತ್ರೆಯಲ್ಲಿ ಕುಡಿದು ಕೆಲವರು ಗಲಾಟೆ ಮಾಡಿದ್ದು, ಗಲಾಟೆ ಬಿಡಿಸಲು ಹೋದ ಪ್ರವೀಣ ಕಮ್ಮಾರ ಅವರನ್ನೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಈ ಪ್ರಕರಣದಡಿ ಮೂವರನ್ನು ಬಂಧಿಸಿದ್ದು, ವಿಚಾರಣೆ ನಡೆದಿದೆ. ಇನ್ನೂ ಮೂವರ ಬಂಧನಕ್ಕೆ ಶೋಧ ನಡೆದಿದೆ.

– ಲೋಕೇಶ ಜಗಳಾಸರ, ಎಸ್ಪಿ,ಧಾರವಾಡ

ಗ್ರಾ.ಪಂ.ರಾಜಕೀಯಕ್ಕೆ ಕೊಲೆ

ಇನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷನಾಗಿದ್ದ ಪ್ರವೀಣ ಕಮ್ಮಾರ್ ಗುತ್ತಿಗೆ ಕಾಮಗಾರಿ ಮಾಡುತ್ತಿದ್ದ ರಾಘವೇಂದ್ರ ಪಠಾತ್‌ಗೆ ಕಾಮಗಾರಿ ಸರಿಯಾಗಿ ಮಾಡುತ್ತಿಲ್ಲ ಎಂದು ನೀಡಿರಲಿಲ್ಲ ಎನ್ನಲಾಗಿದೆ. ಅದೂ ಅಲ್ಲದೇ ಈ ಹಿಂದೆ ಗ್ರಾ.ಪಂ.ಅಧ್ಯಕ್ಷನಾಗಿದ್ದ ಶಂಕರಯ್ಯ ಮಠಪತಿ ಅವರು ಗ್ರಾ.ಪಂ.ನ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ನೇಮಿಸಿದ್ದ ಗೀತಾ ಬಾರಿಕೇರ ಎಂಬುವವರನ್ನು ಪ್ರವೀಣ ಕೆಲಸದಿಂದ ತೆಗೆದು ಹಾಕಿದ್ದ ಎನ್ನಲಾಗಿದೆ. ಇದರ ಇಂತಹ ಇನ್ನಿತರ ಗ್ರಾ.ಪಂ.ರಾಜಕೀಯ ವಿಚಾರಗಳು ಸೇಡಿನ ರೂಪತಾಳಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

Posted by Vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಲುಲೂ ಮಾಲ್‌ ಪಾಕಿಸ್ತಾನ ಧ್ವಜ ವಿವಾದ:ಸ್ಪಷ್ಟನೆ ನೀಡಿದ ಆಡಳಿತ ಮಂಡಳಿ

Posted by Vidyamaana on 2023-10-11 20:58:51 |

Share: | | | | |


ಲುಲೂ ಮಾಲ್‌ ಪಾಕಿಸ್ತಾನ ಧ್ವಜ ವಿವಾದ:ಸ್ಪಷ್ಟನೆ ನೀಡಿದ ಆಡಳಿತ ಮಂಡಳಿ

ಕೊಚ್ಚಿ (ಅ.10) ಶಾಪಿಂಗ್ ಮಾಲ್ ಪೈಕಿ ಇತ್ತೀಚೆಗೆ ಲುಲೂ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ದೇಶದ ಹಲವು ನಗರಗಳಲ್ಲಿ ಲುಲೂ ಮಾಲ್ ಶಾಖೆಗಳು ವಿಸ್ತರಣೆಗೊಂಡಿದೆ. ಇದೀಗ ಕೇರಳದ ಕೊಚ್ಚಿಯಲ್ಲಿರುವ ಲುಲೂ ಮಾಲ್ ವಿವಾದಕ್ಕೆ ಗುರಿಯಾಗಿದೆ. ವಿಶ್ವಕಪ್ ಟೂರ್ನಿ ಪ್ರಯುಕ್ತ ಲುಲೂ ಮಾಲ್‌ನಲ್ಲಿ ಕ್ರಿಕೆಟ್ ದೇಶಗಳ ಧ್ವಜಗಳನ್ನು ಹಾಕಿದ್ದಾರೆ .ಆದರೆ ಭಾರತದ ತ್ರಿವರ್ಣ ಧ್ವಜಕ್ಕಿಂದ ದೊಡ್ಡದಾಗಿ ಪಾಕಿಸ್ತಾನ ಧ್ವಜ ಇರುವ ಫೋಟೋ ಒಂದು ವೈರಲ್ ಆಗಿದೆ. ಭಾರತ ಹಾಗೂ ಇತರ ದೇಶಗಳ ಧ್ವಜಕ್ಕಿಂತ ಮೇಲೆ ಪಾಕ್ ಧ್ವಜ ಹಾಕಿರುವ ಫೋಟೋ ಇದಾಗಿದೆ. ಭಾರತದಲ್ಲಿ ಪಾಕ್ ಧ್ವಜವನ್ನು ದೊದ್ದ ಗಾತ್ರದಲ್ಲಿ ಹಾಕಿದ್ದಾರೆ ಎಂದು ಸಾಮಾಜಿಕ ಮಾಧ್ಯದಲ್ಲಿ ಆಕ್ರೋಶ ಶುರುವಾಗಿದೆ.

ಆದರೆ ಲುಲೂ ಮಾಲ್ ಈ ಕುರಿತು ಸ್ಪಷ್ಟನೆ ನೀಡಿದೆ. ಲೂಲ್ ಮಾಲ್‌ನಲ್ಲಿ ಎಲ್ಲಾ ಧ್ವಜಗಳು ಸಮನಾಗಿವೆ. ಕೆಲಭಾಗದಲ್ಲಿ ನಿಂತು ನೋಡಿದರೆ ಎಲ್ಲಾ ಧ್ವಜಗಳು ಸರಿಯಾಗಿ ಕಾಣಲಿದೆ. ಆದರೆ ಒಂದೊಂದು ಭಾಗದಲ್ಲಿ ಒಂದೊಂದು ಧ್ವಜಗಳು ದೊಡ್ಡ ಗಾತ್ರದಲ್ಲಿ ಕಾಣಿಸಲಿದೆ. ಹೀಗಾಗಿ ಲೂಲು ಮಾಲ್ ಯಾವುದೇ ರೀತಿ ಭಾರತದ ಧ್ವಜಕ್ಕೆ ಅಪಮಾನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ.ಲುಲೂ ಮಾಲ್ ಧ್ವಜ ನಿಯಮ ಉಲ್ಲಂಘಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭಗೊಳ್ಳುತ್ತಿದ್ದಂತೆ ವಿವಾದವೂ ಭುಗಿಲೆದ್ದಿದೆ.


ಭಾರತದ ಧ್ವಜವನ್ನು ಚಿಕ್ಕದಾಗಿ, ಕೆಳಮಟ್ಟದಲ್ಲಿ ಹಾಕಿ, ಪಾಕಿಸ್ತಾನ ಧ್ವಜವನ್ನು ವಿಜ್ರಂಭಿಸುವ ಅವಶ್ಯಕತೆ ಏನಿತ್ತು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಪ್ರಶ್ನಿಸಿದ್ದಾರೆ. ಎಲ್ಲಾ ಧ್ವಜಗಳು ಒಂದೇ ಗಾತ್ರದ್ದಾಗಿದೆ. ತಪ್ಪು ಮಾಹಿತಿಗಳನ್ನು ಹರಡಿದರೆ ಕ್ರಮ ಕೈಗೊಳ್ಳುವುದಾಗಿ ಲೂಲು ಮಾಲ್ ಎಚ್ಚರಿಸಿದೆ.ಐಸಿಸಿ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವಹಿಸಿದೆ. ತಿರುವನಂತಪುರಂನಲ್ಲೂ ವಿಶ್ವಕಪ್ ಪಂದ್ಯ ಆಯೋಜಿಸಲಾಗಿದೆ. ಲೂಲು ಮಾಲ್‌ನಲ್ಲಿ ವಿಶ್ವಕಪ್ ಟೂರ್ನಿಗೆ ವಿಶೇಷ ರೀತಿಯಲ್ಲಿ ಸಜ್ಜಾಗಿದೆ. ಅಭಿಮಾನಿಗಳು, ಗ್ರಾಹಕರನ್ನು ಸೆಳೆಯಲು ಹಲವು ಆಫರ್‌ಗಳನ್ನು ಘೋಷಿಸಿದೆ. ಇದರ ಜೊತೆಗೆ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕ್ರಿಕೆಟ್ ರಾಷ್ಟ್ರಗಳ ಧ್ವಜಗಳನ್ನು ಹಾಕಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋಗೆ ತಪ್ಪು ಮಾಹಿತಿ ಸೇರಿಸಿ ಹಂಚಿಕೊಳ್ಳಲಾಗುತ್ತಿದೆ. ಇದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗಿದೆ. ತಪ್ಪು ಮಾಹಿತಿಗಳನ್ನು ಹಂಚಿಕೊಂಡರೆ ಲೂಲು ಮಾಲ್ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಲೂಲು ಮಾಲ್ ಹೇಳಿದೆ.

ಪುತ್ತೂರಿನ ಬಹುತೇಕ ಏರಿಯಾಗಳಲ್ಲಿ ಪವರ್ ಕಟ್ ನಿಮ್ಮ ಏರಿಯಾದಲ್ಲಿ ಕರೆಂಟ್ ಇರುತ್ತಾ

Posted by Vidyamaana on 2023-08-19 02:43:09 |

Share: | | | | |


ಪುತ್ತೂರಿನ ಬಹುತೇಕ ಏರಿಯಾಗಳಲ್ಲಿ ಪವರ್ ಕಟ್ ನಿಮ್ಮ ಏರಿಯಾದಲ್ಲಿ ಕರೆಂಟ್ ಇರುತ್ತಾ

ಪುತ್ತೂರು: ಶಾಂತಿಗೋಡು, ಉಪ್ಪಿನಂಗಡಿ ಎಕ್ಸ್‌ಪ್ರೆಸ್, ಕಾಂಚನ, ಉಪ್ಪಿನಂಗಡಿ, ರಾಮಕುಂಜ, ಕೆದಿಲ, ಕಬಕ ಮತ್ತು ವಾಟರ್ ಸಪ್ಲೈ ಪೀಡರ್‌ನಲ್ಲಿ ಆ. 19ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.


110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಲ್ಲಿ ಯುಜಿ ಕೇಬಲ್ ಕಾಮಗಾರಿ ಹಾಗೂ ವಿದ್ಯುತ್‌ ಮಾರ್ಗ ನಿರ್ವಹಣೆ ಹಿನ್ನೆಲೆಯಲ್ಲಿ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಶಾಂತಿಗೋಡು, ಉಪ್ಪಿನಂಗಡಿ ಎಕ್ಸ್‌ಪ್ರೆಸ್, ಕಾಂಚನ, ಉಪ್ಪಿನಂಗಡಿ, ರಾಮಕುಂಜ, ಕೆದಿಲ, ಕಬಕ ಮತ್ತು ವಾಟರ್ ಸಪ್ಲೈ ಪೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.


ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು, ಕೊಯಿಲ, ರಾಮಕುಂಜ, ನೆಕ್ಕಿಲಾಡಿ, ಶಾಂತಿಗೋಡು, ಬಲ್ನಾಡು, ಬನ್ನೂರು, ಕಬಕ, ಪಡ್ನೂರು, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಚಿಕ್ಕಮುಡ್ನೂರು, ನರಿಮೊಗರು, ಕೊಡಿಪ್ಪಾಡಿ ಮತ್ತು ಕಸಬಾ ಗ್ರಾಮಗಳ ವಿದ್ಯುತ್‌ ಬಳಕೆದಾರರು ಗಮನಿಸುವಂತೆ ಪ್ರಕಟಣೆ ತಿಳಿಸಿದೆ.

ಮಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ಕಾರ್ಪೋರೇಟರ್ ಚೇತರಿಕೆ

Posted by Vidyamaana on 2024-01-05 07:15:35 |

Share: | | | | |


ಮಂಗಳೂರು: ಆತ್ಮಹತ್ಯೆಗೆ ಯತ್ನಿಸಿದ್ದ ಕಾರ್ಪೋರೇಟರ್ ಚೇತರಿಕೆ

ಮಂಗಳೂರು: ನಗರದ ಬೋಳೂರು ವಾರ್ಡ್ ನ ಕಾರ್ಪೋರೇಟರ್ ಜಗದೀಶ್ ಶೆಟ್ಟಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಚೇತರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ನಗರ ಸ್ಟೇಟ್ ಬ್ಯಾಂಕ್ ಬಳಿ ಕಾರಿನಲ್ಲಿ ಕುಳಿತು ಜಗದೀಶ್‌ ಶೆಟ್ಟಿ ವಿಷ ಸೇವನೆ ಮಾಡಿದ್ದರು. ಕಾರಿನೊಳಗೆ ಇದ್ದ ಅವರನ್ನು ಗಮನಿಸಿದ ಸ್ಥಳೀಯರು ಮತ್ತು ಪೊಲೀಸರು ಗಾಜು ಒಡೆದು ಹೊರ ತೆಗೆದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮೊದಲಾದವರು ಭೇಟಿ‌ ನೀಡಿದ್ದು, ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ.

Recent News


Leave a Comment: