ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಉಡುಪಿ ನಾಲ್ವರ ಭೀಕರ ಕೊಲೆ ಪ್ರಕರಣ – ಆರೋಪಿ ಪ್ರವೀಣ್ ಚೌಗಲೆ ಬಲೆಗೆ ಬಿದ್ದಿದ್ದು ಹೇಗೆ?

Posted by Vidyamaana on 2023-11-15 18:00:55 |

Share: | | | | |


ಉಡುಪಿ ನಾಲ್ವರ ಭೀಕರ ಕೊಲೆ ಪ್ರಕರಣ – ಆರೋಪಿ ಪ್ರವೀಣ್ ಚೌಗಲೆ ಬಲೆಗೆ ಬಿದ್ದಿದ್ದು ಹೇಗೆ?

ಉಡುಪಿ: ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಏಕಮುಖ ಪ್ರೇಮವೇ ಕಾರಣ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.


ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿದ್ದ ಪ್ರವೀಣ್ ಅರುಣ್ ಚೌಗಲೆ(35) ಅದೇ ವಿಭಾಗದಲ್ಲಿ ಕೆಲಸ ನಿರ್ವಹಿಸುವ ಕೊಲೆಯಾದ ಐನಾಝಳೊಂದಿಗೆ ಪ್ರೇಮವಾಗಿತ್ತು. ಆದರೆ ಐನಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು ಎನ್ನಲಾಗಿದೆ.


ನ.12ರಂದು 36 ಬಾರಿ ಫೋನ್ ಮಾಡಿದ್ದ ಹಂತಕ ಕಳೆದ ಕೆಲವು ದಿನಗಳ ಹಿಂದೆ ಐನಾಝ್ ಹುಟ್ಟು ಹಬ್ಬಕ್ಕೆ ನೇಜಾರು ಮನೆಗೆ ಬಂದಿದ್ದ ಹಂತಕ ಆಕೆಗೆ ಉಂಗುರವನ್ನು ಎಲ್ಲರ ಮುಂದೆ ಹಾಕಿದ್ದ


ಇದರಿಂದ ಐನಾಝ್ ಮನೆಯವರ ಮುಂದೆ ಗಲಿಬಿಲಿಗೊಂಡಿದ್ದಳು. ಆ ಬಳಿಕ ಪ್ರವೀಣ್‌ನನ್ನು ದೂರ ಮಾಡಲು ಯತ್ನಿಸಿದ್ದಳು. ಇದರಿಂದ ಖಿನ್ನತೆಗೆ ಒಳಗಾದ ಪ್ರವೀಣ್ ಐನಾಝ್ಗೆ ನಿರಂತರ ಫೋನ್ ಮಾಡುತ್ತಿದ್ದ. ಐನಾಝ್ ಕೊಲೆಯಾದ ದಿನವೇ ಬೆಳಿಗ್ಗೆ 11 ಗಂಟೆಗೆ ದುಬೈಗೆ ಏರ್‌ಇಂಡಿಯಾ ವಿಮಾನದಲ್ಲಿ ಗಗನ ಸಖಿಯಾಗಿ ಕಾರ್ಯನಿರ್ವಹಿಸಲು ಹೋಗಬೇಕಿತ್ತು. ಆದರೆ ಅಂದೇ ಬೆಳಿಗ್ಗೆ ಯಮರೂಪಿಯಾಗಿ ಬಂದ ಪ್ರವೀಣ್ ಮನೆಯಲ್ಲಿದ್ದ ನಾಲ್ವರನ್ನು ಹತ್ಯೆಗೈದು ಪರಾರಿಯಾಗಿದ್ದ.


ನಾಲ್ವರನ್ನು ಹತ್ಯೆಗೈದು ಬಸ್ ಮೂಲಕ ಮಂಗಳೂರಿಗೆ ಹೋಗಿ ಅಲ್ಲಿಂದ ತನ್ನ ಹೆಕ್ಟರ್ ಕಾರಿನಲ್ಲಿ ಬೆಳಗಾವಿಗೆ ಹೋಗಿ ಪರಿಚಯದ ನೀರಾವರಿ ಇಲಾಖೆಯ ಅಧಿಕಾರಿ ಮನೆಯಲ್ಲಿ ಒಂದು ದಿನ ಅಡಗಿದ್ದ. ಅಲ್ಲಿಂದ ನೇರ ತನ್ನೂರು ಸಾಂಗ್ಲಿಗೆ ಹೋಗಿ ಅವಿತುಕೊಳ್ಳುವ ಪ್ಲಾನ್ ರೂಪಿಸಿದ್ದ ಹಂತಕ,


ಕೊಲೆಯಾದ ತಕ್ಷಣ ಎಲರ್ಟ್ ಆದ ಪೊಲೀಸರು ಐನಾಝ್ ದುಡಿಯುತ್ತಿದ್ದ ಏರ್‌ಪೋರ್ಟ್‌ಗೆ ಭೇಟಿ


ನೀಡಿ ಉದ್ಯೋಗಿಗಳ ಮಾಹಿತಿ ಕಲೆ ಹಾಕಿದ್ದಾರೆ ಅಲ್ಲಿ ರಜೆ ಹಾಕಿದ್ದ ಪ್ರವೀಣ್‌ ಮಾಹಿತಿ ಕಲೆ ಹಾಕಿ ಫೋನ್ ಟ್ಯಾಕ್ ಮಾಡಿದ್ದರು.


ಅದರಂತೆ ಬ್ರಹ್ಮಾವರ ಇಸ್ಪೆಕ್ಟರ್ ದಿವಾಕರ್ ಪಿ.ಎಂ ನೇತೃತ್ವದ ತಂಡ ಕುಡುಚಿ ಪೊಲೀಸರ ಸಹಾಯದಿಂದ ಹಂತಕನನ್ನು ವಶಕ್ಕೆ ಪಡೆದು ಉಡುಪಿಗೆ ಕರೆತಂದಿದ್ದಾರೆ.


ಆಂಧ್ರಪ್ರದೇಶಕ್ಕೆ ಸಾರಲು ಸಂಚು ರೂಪಿಸಿದ ಹಂತಕ

ಆರೋಪಿ ಪ್ರವೀಣ್ ಅರುಣ್‌ ಚೌಗಲೆ ಕುಡಚಿ ಮೂಲಕ ಮಹಾರಾಷ್ಟ್ರ ಅಥವಾ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಹೊಂಚು ಹಾಕಿದ್ದ ಎನ್ನುವುದು ಪೊಲೀಸರು ತಿಳಿಸಿದ್ದಾರೆ.


ಆರೋಪಿ ಈ ಹಿಂದೆ CISF ಸಿಬ್ಬಂದಿಯಾಗಿಯೂ ಕೆಲಸ ಮಾಡಿದ್ದ ಎಂದು ಹೇಳಲಾಗಿದೆ. ಬಳಿಕ ಏ‌ಪೋರ್ಟ್‌ ನ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.


ತನಿಖೆಗೆ ನೆರವಾದ ಆರೋಪಿಯ ನಡಿಗೆಯ ಶೈಲಿ : ಮಾಹಿತಿಗಳ ಪ್ರಕಾರ, ಘಟನೆಯ ಬಳಿಕ


ಲಭ್ಯವಿದ್ದ ಸಿಸಿಟಿವಿ ಸಾಕ್ಷ್ಯಗಳನ್ನು ಪರಿಶೀಲಿಸಿದ್ದ ಪೊಲೀಸರು ಆರೋಪಿಯ ನಡಿಗೆ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದರು ಎನ್ನಲಾಗಿದೆ. ಇದು ಆರೋಪಿಯು ರಕ್ಷಣಾ ಇಲಾಖೆಗಳಿಗೆ ಸಂಬಂಧಿಸಿದ ವ್ಯಕ್ತಿ ಎಂಬ ಸುಳಿವು ನೀಡಿತ್ತು. ಬಳಿಕ ಆರೋಪಿ, ಅರುಣ್ ಚೌಗಲೆ ಬೆನ್ನುಬಿದ್ದ ಪೊಲೀಸರು, ಆತನನ್ನು ಬೆಳಗಾವಿಯ ಕುಡಚಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.

ಸುಬ್ರಹ್ಮಣ್ಯ: ಬಸ್ – ಬೈಕ್ ನಡುವೆ ಢಿಕ್ಕಿ - ಸುಬ್ರಹ್ಮಣ್ಯ ಮೂಲದ ಪ್ರಶಾಂತ್ ಮೃತ್ಯು, ಮತ್ತೋರ್ವನಿಗೆ ಗಾಯ

Posted by Vidyamaana on 2023-03-10 16:52:56 |

Share: | | | | |


ಸುಬ್ರಹ್ಮಣ್ಯ: ಬಸ್ – ಬೈಕ್ ನಡುವೆ ಢಿಕ್ಕಿ - ಸುಬ್ರಹ್ಮಣ್ಯ ಮೂಲದ ಪ್ರಶಾಂತ್ ಮೃತ್ಯು, ಮತ್ತೋರ್ವನಿಗೆ ಗಾಯ

ಸುಬ್ರಹ್ಮಣ್ಯ : ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಲಬಾರ್ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸುಬ್ರಹ್ಮಣ್ಯದಲ್ಲಿ ನಡೆದಿದೆ.ಮೃತ ವ್ಯಕ್ತಿಯನ್ನು ಸುಬ್ರಹ್ಮಣ್ಯ ನಿವಾಸಿ ಪ್ರಶಾಂತ್ ಎಂದು ಗುರುತಿಸಲಾಗಿದೆ. ಸುಬ್ರಹ್ಮಣ್ಯದ ಇಂಜಾಡಿ ಸಮೀಪ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡ ಪ್ರಶಾಂತ್ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಗಾಯಾಳುವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. 

ಆಸಿಡ್ ದಾಳಿ ನಡೆದ ಕಡಬ ಕಾಲೇಜಿಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ

Posted by Vidyamaana on 2024-03-07 16:53:27 |

Share: | | | | |


ಆಸಿಡ್ ದಾಳಿ ನಡೆದ ಕಡಬ ಕಾಲೇಜಿಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ

ಪುತ್ತೂರು: ಮೂವರು ವಿದ್ಯಾರ್ಥಿನಿಯರ ಮೇಲೆ ದುಷ್ಕರ್ಮಿಯಿಂದ ಆಸಿಡ್ ದಾಳಿ ನಡೆದ ಕಡಬ ಸರಕಾರಿ ಪದವಿಪೂರ್ವ ಕಾಲೇಜಿಗೆ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಗುರುವಾರ ಮಧ್ಯಾಹ್ನ ಭೇಟಿ ನೀಡಿದರು.

ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿರುವ ಕಾರಣ ಮಧ್ಯಾಹ್ನ ಪರೀಕ್ಷೆ  ಮುಗಿದ ಬಳಿಕ ಕಾಲೇಜಿಗೆ ಭೇಟಿ ನೀಡಿದ ಶಕುಂತಳಾ ಶೆಟ್ಟಿ, ವಿದ್ಯಾರ್ಥಿನಿಯರ ಜತೆ ಸಮಾಲೋಚನೆ ನಡೆಸಿದರು. ಆಸಿಡ್ ದಾಳಿಯ ದಿನ ನಡೆದ ಘಟನಾವಳಿಗಳ ಬಗ್ಗೆ ವಿದ್ಯಾರ್ಥಿನಿಯರು ಮಾಜಿ ಶಾಸಕಿಯವರಿಗೆ ವಿವರಿಸಿದರು. ಸರಕಾರ ಮತ್ತು ಇಡೀ ಆಡಳಿತ ವ್ಯವಸ್ಥೆ ನಿಮ್ಮ ಜತೆಗಿದೆ. ನೀವು ಯಾವುದೇ ಕಾರಣಕ್ಕೆ ದೃತಿಗೆಡಬೇಡಿ. ಆರೋಪಿಗೆ ಕಠಿಣ ಶಿಕ್ಷೆಯಾಗಲಿದೆ. ಸರಕಾರಿ ಕಾಲೇಜಿನಲ್ಲಿ ಭದ್ರತೆಯಿಲ್ಲ ಎಂಬ ಭಾವನೆ ಬೇಡ. ಎಲ್ಲ ರೀತಿಯ ಸುರಕ್ಷತೆ ಒದಗಿಸಲಾಗುವುದು. ಆದರೂ ಕೆಲವೊಂದು ವಿಚಾರಗಳಲ್ಲಿ ವಿದ್ಯಾರ್ಥಿನಿಯರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದವರು ಹೇಳಿದರು. ಆಸಿಡ್ ಎರಚಿದ ದುಷ್ಕರ್ಮಿಯನ್ನು ತಕ್ಷಣ ಹಿಡಿದು ತಪ್ಪಿಸಿಕೊಳ್ಳದಂತೆ ನೋಡಿಕೊಂಡ ಕಾಲೇಜಿನ ವಿದ್ಯಾರ್ಥಿಗಳ ಸಾಹಸವನ್ನು  ಅವರು ಕೊಂಡಾಡಿದರು.

ಬೇಡಿಕೆ ಸಲ್ಲಿಕೆ

ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ೧೭೦ ವಿದ್ಯಾರ್ಥಿನಿಯರಿದ್ದಾರೆ. ಇಷ್ಟ ಹೆಣ್ಮಕ್ಕಳಿಗೆ ಕೇವಲ ಒಂದು ಶೌಚಾಲಯವಿರುವುದರಿಂದ ಬಹಳಷ್ಟು ಸಮಸ್ಯೆಯಾಗುತ್ತಿದೆ. ಹೆಚ್ಚುವರಿ ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕೆಂದು ವಿದ್ಯಾರ್ಥಿನಿಯರು ಮನವಿ ಮಾಡಿದರು. ಈ ಬಗ್ಗೆ ಸರಕಾರದ ಗಮನ ಸೆಳೆದು ವ್ಯವಸ್ಥೆ ಮಾಡುವುದಾಗಿ ಶಕುಂತಳಾ ಶೆಟ್ಟಿ ಭರವಸೆ ನೀಡಿದರು. ಕಾಲೇಜಿನ ಆವರಣಗೋಡೆ ಇಲ್ಲದಿರುವ ಬಗ್ಗೆಯೂ ವಿದ್ಯಾರ್ಥಿಗಳು ಗಮನ ಸೆಳೆದರು.

ಫಟಾಫಟ್ ಕಂಬ ತೆರವು ಗೊಳಿಸಿದ ಮೆಸ್ಕಾಂ

Posted by Vidyamaana on 2023-05-31 12:09:55 |

Share: | | | | |


ಫಟಾಫಟ್ ಕಂಬ ತೆರವು ಗೊಳಿಸಿದ ಮೆಸ್ಕಾಂ

ಪುತ್ತೂರು: ಕುಂಬ್ರದ ಶೇಖಮಲೆಯಲ್ಲಿ ಭಾರಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳನ್ನು ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳು ಫಟಾಫಟ್ ಬದಲಾಯಿಸಿ, ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಧರೆಗುರುಳಿದ ಮರಗಳನ್ನು ತಕ್ಷಣವೇ ತೆರವು ಮಾಡಲಾಯಿತು.

ಶೇಖಮಲೆಯಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ ಸಂಚಾರಕ್ಕೆ ಅಡಚಣೆಯಾಗಿತ್ತು. ಸ್ಥಳೀಯರು ವಿದ್ಯುತ್ ಸಮಸ್ಯೆಯಿಂದ ಸಂಕಷ್ಟಕ್ಕೀಡಾಗಿದ್ದರು. ತಕ್ಷಣ ಸ್ಪಂದಿಸಿದ ಮೆಸ್ಕಾಂ, ಧರೆಗುರುಳಿದ‌ ವಿದ್ಯುತ್ ಕಂಬಗಳನ್ನು ತೆರವು ಮಾಡಿ, ತಂತಿಗಳನ್ನು ತೆರವು ಮಾಡಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

ಧರೆಗುರುಳಿದ ಮರವನ್ನು ಸ್ಥಳೀಯರು ತೆರವು ಮಾಡಿದರು. ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಅಧಿಕಾರಿ, ಸಿಬ್ಬಂದಿಗಳಿಗೆ ಸ್ಥಳೀಯರು ಸಹಕಾರ ನೀಡಿದರು.

ಶಾಸಕ ಅಶೋಕ್ ರೈ ಸೂಚನೆ:

ಶಾಸಕ ಅಶೋಕ್ ಕುಮಾರ್ ರೈ ಅವರು ಇತ್ತೀಚೆಗೆ ನಡೆದ ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡುತ್ತಾ, ವಿದ್ಯುತ್ ಕಡಿತಗೊಂಡು 24 ಗಂಟೆಯೊಳಗೆ ವ್ಯವಸ್ಥೆ ಸರಿಪಡಿಸಬೇಕು ಎಂದಿದ್ದರು. ಅದರಂತೆ ಸಕ್ರೀಯರಾಗಿರುವ ಮೆಸ್ಕಾಂ ಅಧಿಕಾರಿ, ಸಿಬ್ಬಂದಿಗಳು ವಿದ್ಯುತ್ ತಂತಿ, ಕಂಬ ಧರೆಗುರುಳಿದ ಕೆಲವೇ ಕ್ಷಣಗಳಲ್ಲಿ ತೆರವು ಮಾಡಿದ್ದಾರೆ.

ಕಬ್ಬಡಿ ಸ್ಪರ್ಧಿಗಳ ನಡುವೆ ಮಾರಾಮಾರಿ: ಬೆಚ್ಚಿಬೀಳಿಸುವ ವಿಡಿಯೋ ವೈರಲ್!

Posted by Vidyamaana on 2023-10-09 12:10:54 |

Share: | | | | |


ಕಬ್ಬಡಿ ಸ್ಪರ್ಧಿಗಳ ನಡುವೆ ಮಾರಾಮಾರಿ: ಬೆಚ್ಚಿಬೀಳಿಸುವ ವಿಡಿಯೋ ವೈರಲ್!

ಲಕ್ನೋ ಅಕ್ಟೋಬರ್ 9: ಕಾನ್ಪುರದಲ್ಲಿ ಕಬ್ಬಡಿ ಆಡುವ ಸ್ಪರ್ಧಿಗಳ ನಡುವೆ ಭಯಾನಕವಾಗಿ ಘರ್ಷಣೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರನ್ನು ಬೆಚ್ಚಿ ಬೀಳಿಸಿದೆ.ಕಾನ್ಪುರದಲ್ಲಿ ನಡೆದ ಕಬಡ್ಡಿ ಪಂದ್ಯವು ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು ಕಂಡು ಬಂದಿದೆ.ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ವಿದ್ಯಾರ್ಥಿಗಳು ಕುರ್ಚಿಗಳನ್ನು ಎಸೆಯುವ ಮೂಲಕ ಪರಸ್ಪರ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.


ವಿಡಿಯೋ ನೋಡಲು ಕ್ಲಿಕ್ ಮಾಡಿ

ಬೆಚ್ಚಿಬೀಳಿಸುವ ವಿಡಿಯೋ ವೈರಲ್!


ಈ ವಿಡಿಯೋ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಘರ್ಷಣೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಹಿಂಸಾಚಾರದಿಂದಾಗಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಹೋರಾಟವನ್ನು ನಿಲ್ಲಿಸಲು ಯಾವುದೇ ಭದ್ರತೆಯಿಲ್ಲದೆ, ಅದು ಅನಿಯಂತ್ರಿತವಾಗಿ ಬೆಳೆದಿದೆ.


ಕೆಂಪು ಆಟದ ಉಡುಪು ಧರಿಸಿದ ಸ್ಪರ್ಧಿಗಳು ಪರಸ್ಪರ ಖುರ್ಚಿಗಳಿಂದ ಬಲವಾಗಿ ದಾಳಿ ಮಾಡಿದ್ದಾರೆ. ಕೆಲ ಸ್ಪರ್ಧಿಗಳು ಆತಂಕದಲ್ಲಿ ಸ್ಥಳದಿಂದ ಓಡಿಹೋಗುತ್ತಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಸ್ಥಳಿಯರು ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

Posted by Vidyamaana on 2023-07-14 03:02:36 |

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

Recent News


Leave a Comment: