ವಾಟ್ಸಾಪ್ ಚಾನೆಲ್ ಸೇರಿದ ಪ್ರಧಾನಿ ಮೋದಿ : ನಮೋ ಸಂಪರ್ಕಿಸೋದು ಈಗ ಇನ್ನಷ್ಟು ಸುಲಭ

ಸುದ್ದಿಗಳು News

Posted by vidyamaana on 2023-09-20 08:20:04 | Last Updated by Vidyamaana on 2023-09-20 08:20:04

Share: | | | | |


ವಾಟ್ಸಾಪ್ ಚಾನೆಲ್ ಸೇರಿದ ಪ್ರಧಾನಿ ಮೋದಿ : ನಮೋ ಸಂಪರ್ಕಿಸೋದು ಈಗ ಇನ್ನಷ್ಟು ಸುಲಭ

ನವದೆಹಲಿ: ಬುಧವಾರವಷ್ಟೇ ಮೆಟಾ ಕಂಪನಿ(Meta) ಲಾಂಚ್ ಮಾಡಿದ್ದ ವಾಟ್ಸಾಪ್‌ನ ಹೊಸ ಫೀಚರ್ ‘ಚಾನೆಲ್’ (WhatsApp Channel) ಈಗ ಜನಪ್ರಿಯವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೂ ಈಗ ವಾಟ್ಸಾಪ್‌ ಚಾನೆಲ್ ಆರಂಭಿಸಿದ್ದಾರೆ. ವಾಟ್ಸಾಪ್‌ ಚಾನೆಲ್‌ನಲ್ಲಿ ಅಡ್ಮಿನ್‌ಗಳು (WhatsApp Channel Admin), ತಮ್ಮ ಫಾಲೋವರ್ಸ್‌ಗೆ ಪಠ್ಯ, ಟೆಕ್ಸ್ಟ್, ಫೋಟೋ, ವಿಡಿಯೋ, ಸ್ಟಿಕರ್ಸ್ ಷೇರ್ ಮಾಡಬಹುದು. ಜತೆಗೆ ಸಮೀಕ್ಷೆ ಕೂಡ ಕೈಗೊಳ್ಳಬಹುದು.

Read more.....

ಜನ ಸಂಪರ್ಕಕ್ಕೆ ವಾಟ್ಸಪ್ ಚಾನೆಲ್ ಆರಂಭಿಸಿದ ದೇಶದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ


ಏನಿದು ವಾಟ್ಸಾಪ್ ಚಾನೆಲ್?

ವಾಟ್ಸಾಪ್ ಚಾನೆಲ್, ಇದು ಒನ್‌ ವೇ ಬ್ರಾಡಕಾಸ್ಟರ್ ಸಾಧನವಾಗಿದೆ. ಅಡ್ಮಿನ್‌ಗಳು ಫಾಲೋವರ್ಸ್‌ಗಳೊಂದಿಗೆ ಪಠ್ಯದಿಂದ ಮಲ್ಟಿಮೀಡಿಯಾ ಮತ್ತು ಸಮೀಕ್ಷೆಗಳವರೆಗೆ ವಿವಿಧ ರೀತಿಯ ವಿಷಯವನ್ನು ಹಂಚಿಕೊಳ್ಳಲು ಇದು ಅನುಮತಿಸುತ್ತದೆ. ವ್ಯಕ್ತಿಗತ ಬಳಕೆದಾರರು ತಮ್ಮ ನೆಚ್ಚಿನ ವ್ಯಕ್ತಿಗಳು ಮತ್ತು ಸಂಸ್ಥೆಗಳ ಚಟುವಟಿಕೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರಲು ಇದರಿಂದ ಸಾಧ್ಯವಾಗಲಿದೆ. ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳೊಂದಿಗೆ ನಿಮ್ಮ ನಿಯಮಿತ ಚಾಟ್‌ಗಳಿಂದ ಭಿನ್ನವಾಗಿರುವ “ಅಪ್‌ಡೇಟ್‌ಗಳು” ಹೆಸರಿನ ಮೀಸಲಾದ ಟ್ಯಾಬ್ ಮೂಲಕ ವಾಟ್ಸಾಪ್ ಚಾನೆಲ್‌ ಪ್ರವೇಶಿಸಬಹುದಾಗಿದೆ.


ವಾಟ್ಸಾಪ್ ಚಾನೆಲ್ ಕಾರ್ಯ ಹೇಗೆ?

ಚಾನೆಲ್‌ಗಳು ಒನ್‌ವೇ ಬ್ರಾಡ್‌ಕಾಸ್ಟ್ ಆಗಿರುವುದರಿಂದ ಅಡ್ಮಿನ್‌ಗೆ ಮಾತ್ರ ಷೇರ್ ಮಾಡುವ ಹಕ್ಕಿರುತ್ತದೆ. ಬಳಕೆದಾರರು ಎಮೋಜಿಗಳ ಮೂಲಕ ಮಾತ್ರವೇ ಪ್ರತಿಕ್ರಿಯೆ ನೀಡಬಹುದು. ಹಾಗೆಯೇ, ಚಾನೆಲ್ ಪೋಸ್ಟ್‌ಗೆ ಎಷ್ಟು ರಿಯಾಕ್ಷನ್‌ಗಳು ಬಂದಿವೆ ಎಂಬುದನ್ನು ಲೆಕ್ಕ ಹಾಕಬಹುದು.


30 ದಿನಗಳವರೆಗೆ ಮಾತ್ರ ಅಡ್ಮಿನ್‌ಗಳಿಗೆ ತಮ್ಮ ಕಂಟೆಂಟ್ ಅಪ್‌ಡೇಟ್ ಮಾಡುವ ಇಲ್ಲವೇ ಬದಲಾವಣೆ ಮಾಡುವ ಅವಕಾಶವನ್ನು ಈ ಹೊಸ ಫೀಚರ್ ಒದಗಿಸುತ್ತದೆ. ಅದರ ವಾಟ್ಸಾಪ್, ತನ್ನ ಪ್ಲಾಟ್‌ಫಾರ್ಮ್ ಸರ್ವರ್‌ಗಳಿಂದ ಹಳೆಯ ಅಪ್‌ಡೇಟ್‌ಗಳನ್ನು ಸ್ವಯಂಚಾಲಿತವಾಗಿ ಡಿಲಿಟ್ ಮಾಡುತ್ತದೆ.ಇದಲ್ಲದೆ, ನೀವು ಚಾಟ್‌ಗಳು ಅಥವಾ ಗ್ರೂಪ್‌ಗಳಿಗೆ ಅಪ್‌ಡೇಟ್ಸ್ ಫಾರ್ವರ್ಡ್ ಮಾಡಿದಾಗ, ಅದು ಸ್ವಯಂಚಾಲಿತವಾಗಿ ಮೂಲ ಚಾನಲ್‌ಗೆ ಲಿಂಕ್ ಒಳಗೊಂಡಿರುತ್ತದೆ. ಇದರಿಂದಾಗಿ ಚಾನೆಲ್‌ನ ಕಂಟೆಂಟ್ ಹುಡುಕುವ ಇತರರಿಗೆ ಸುಲಭ ಪ್ರವೇಶ ಒದಗಿಸಲು ಸಾಧ್ಯವಾಗುತ್ತದೆ.


ನರೇಂದ್ರ ಮೋದಿ ವಾಟ್ಸಾಪ್ ಚಾನೆಲ್‌ ಫಾಲೋ ಮಾಡುವುದು ಹೇಗೆ?

ಮೊದಲಿಗೆ ನಿಮ್ಮ ವಾಟ್ಸಾಪ್‌ ಅಪ್‌ಡೇಟ್ ಆಗಿದೆಯಾ ಚೆಕ್ ಮಾಡಿಕೊಳ್ಳಿ. ಒಂದೊಮ್ಮೆ ಆಗಿರದಿದ್ದರೆ ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ, ವಾಟ್ಸಾಪ್ ಅಪ್‌ಡೇಟ್ ಮಾಡಿಕೊಳ್ಳಿ. ಇಷ್ಟಾದ ಮೇಲೆ ಮೊದಲಿಗೆ ವಾಟ್ಸಾಪ್ ತೆರೆಯಿರಿ ಮತ್ತು ಅಪ್‌ಡೇಟ್‌ಗೆ ನ್ಯಾವಿಗೇಟ್ ಮಾಡಿ. ಬಳಿಕ, ನಿಮ್ಮ ಸ್ಕ್ರೀನ್‌ನ ಕೆಳಭಾಗದಲ್ಲಿ, ನೀವು “Find Channels” ಆಯ್ಕೆಯನ್ನು ಕಾಣುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಿ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಲಭ್ಯವಿರುವ ಚಾನೆಲ್‌ಗಳ ಪಟ್ಟಿ ನಿಮ್ಮ ಮುಂದೆ ಗೋಚರವಾಗುತ್ತದೆ. ಚಾನೆಲ್‌ ಸೇರಲು, ಚಾನೆಲ್ ಮುಂದೆ ಇರುವ plus icon ಮೇಲೆ ಟ್ಯಾಪ್ ಮಾಡಿ. ಮತ್ತೊಂದು ರೀತಿಯಲ್ಲೂ ನೀವು ಚಾನೆಲ್ ಜಾಯಿನ್ ಆಗಬಹುದು. ಇದಕ್ಕಾಗಿ ನೀವು, ನಿಮ್ಮ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ಹುಡುಕಾಟ ಐಕಾನ್ ಅನ್ನು ನೀವು ಬಳಸಬಹುದು ಅಥವಾ ಕ್ಲಿಕ್ ಮಾಡಿ ಮತ್ತು ಹುಡುಕಬಹುದು.

 Share: | | | | |


ತನ್ನದೇ ಬಸ್ಸಿನಡಿಗೆ ಬಿದ್ದು ಮಾಂಡವಿ ಬಸ್ ಮಾಲಕ ದಯಾನಂದ ಶೆಟ್ಟಿ ಮೃತ್ಯು

Posted by Vidyamaana on 2024-03-14 15:14:13 |

Share: | | | | |


ತನ್ನದೇ ಬಸ್ಸಿನಡಿಗೆ ಬಿದ್ದು ಮಾಂಡವಿ ಬಸ್ ಮಾಲಕ ದಯಾನಂದ ಶೆಟ್ಟಿ ಮೃತ್ಯು

ಉಡುಪಿ, ಮಾ.14: ತನ್ನದೇ ಬಸ್ಸಿನಡಿಗೆ ಬಿದ್ದು ಬಸ್ ಮಾಲಕರೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಮಣಿಪಾಲದಲ್ಲಿ ನಡೆದಿದೆ. ಮಾಂಡವಿ ಖಾಸಗಿ ಬಸ್ ಮಾಲೀಕ ದಯಾನಂದ ಶೆಟ್ಟಿ(65) ಮೃತರು. 

ಮಾಂಡವಿ ಸಂಸ್ಥೆ ಸುಮಾರು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಬಸ್‌ ಸೇವೆ ನೀಡುತ್ತಿದ್ದು, ಇತ್ತೀಚಿಗೆ ಒಂದು ಬಸ್‌ ಕೆಟ್ಟು ನಿಂತಿತ್ತು. ಈ ಹಿನ್ನೆಲೆಯಲ್ಲಿ ಮಾಲಕ ದಯಾನಂದ ಶೆಟ್ಟಿ ಬಸ್ಸನ್ನು ಮಣಿಪಾಲದ 80 ಬಡಗಬೆಟ್ಟುವಿನ ಗ್ಯಾರೇಜ್‌ ಒಂದರಲ್ಲಿ ರಿಪೇರಿಗೆ ನೀಡಿದ್ದರು. 


ಬಸ್‌ ರಿಪೇರಿಗೆ ನೀಡಿ ಕೆಲವು ದಿನ ಕಳೆದ ಹಿನ್ನೆಲೆಯಲ್ಲಿ ದಯಾನಂದ ಶೆಟ್ಟಿ ನಿನ್ನೆ ( ಮಾರ್ಚ್ 13 ) ಬಸ್‌ ನೋಡಲೆಂದು ಗ್ಯಾರೇಜ್‌ಗೆ ತೆರಳಿದ್ದು ಮುಂಭಾಗದಲ್ಲಿ ನಿಂತಿದ್ದರು. ಈ ವೇಳೆ ಅವರನ್ನು ನೋಡದೆ ಬಸ್ಸನ್ನು ಏಕಾಏಕಿ ಚಲಾಯಿಸಿದ್ದು ದಯಾನಂದ ಶೆಟ್ಟಿ ಬಸ್ಸಿನ ಚಕ್ರದಡಿಗೆ ಸಿಲುಕಿದ್ದಾರೆ. ಗ್ಯಾರೇಜ್​ನ ಮೆಕ್ಯಾನಿಕ್ ಅಜಾಗರೂಕತೆಯಿಂದ ಎಂಜಿನ್ ಸ್ಟಾರ್ಟ್ ಮಾಡಿದ್ದರಿಂದ ಬಸ್ ಮುಂದಕ್ಕೆ ಚಲಿಸಿದೆ ಎನ್ನುವ ಆರೋಪ ಕೇಳಿಬಂದಿದೆ. ಕೂಡಲೇ ಸ್ಥಳದಲ್ಲಿದ್ದವರು ದಯಾನಂದ ಶೆಟ್ಟಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಲೋಕ ಸಮರ ಶಾಕಿಂಗ್ ನ್ಯೂಸ್ - ರಾಜ್ಯದಿಂದ ಸ್ಪರ್ಧೆಗಿಳಿತಿದ್ದಾರೆ ಸೆಂಟ್ರಲ್ ಮಿನಿಸ್ಟರ್ಸ್

Posted by Vidyamaana on 2024-01-13 04:36:09 |

Share: | | | | |


ಲೋಕ ಸಮರ ಶಾಕಿಂಗ್ ನ್ಯೂಸ್ - ರಾಜ್ಯದಿಂದ ಸ್ಪರ್ಧೆಗಿಳಿತಿದ್ದಾರೆ ಸೆಂಟ್ರಲ್ ಮಿನಿಸ್ಟರ್ಸ್

ಬೆಂಗಳೂರು ಜನವರಿ 13: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ಈ ಬಾರಿ ಮ್ಯಾಜಿಕ್ ಮಾಡಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೇಂದ್ರ ನಾಯಕರನ್ನು ಕರ್ನಾಟಕದಿಂದ ಲೋಕಸಭೆ ಚುನಾವಣೆ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಹೌದು.... ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಬಹುದು ಎಂದು ಬಿಜೆಪಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ.ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರ ಸಚಿವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂದು ಬಿಜೆಪಿ ಬಯಸಿದೆ. ಅದರಂತೆ ನಿರ್ಮಲಾ, ಜೈಶಂಕರ್ ಅವರಂಥವರಿಗೆ ಸೂಕ್ತ ಸೀಟುಗಳನ್ನು ಹುಡುಕಲಾಗುತ್ತಿದೆ. ನಿರ್ಮಲಾ ಅವರು ಕರ್ನಾಟಕ ಮತ್ತು ಜೈಶಂಕರ್ ಬೆಂಗಳೂರು ದಕ್ಷಿಣದಿಂದ ಪ್ರತಿನಿಧಿಸುವ ಚಿಂತನೆಗಳು ನಡೆಯುತ್ತಿವೆ. ಮೂಲಗಳ ಪ್ರಕಾರ, ಪ್ರಸ್ತುತ ಕೇಸರಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಕ್ಷೇತ್ರದಿಂದ ನಿರ್ಮಲಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಜೊತೆಗೆ ಜೈಶಂಕರ್‌ಗೆ ಹಲವು ಆಯ್ಕೆಗಳಿವೆ. ಹಿಂದುತ್ವದ ಫೈರ್‌ಬ್ರಾಂಡ್ ಅನಂತಕುಮಾರ್ ಹೆಗಡೆ ಪ್ರಸ್ತುತ ಸಂಸದರಾಗಿರುವ ಉತ್ತರ ಕನ್ನಡ ಬಿಜೆಪಿಯ ಮತ್ತೊಂದು ಭದ್ರಕೋಟೆಯಾಗಿದ್ದು, ರಾಜತಾಂತ್ರಿಕ-ರಾಜಕಾರಣಿ ಇಲ್ಲಿ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆ ಪಕ್ಷ ಚಿಂತಿಸುತ್ತಿದೆ. BJP Candidate List: ಲೋಕಸಭೆ ಚುನಾವಣೆಗೆ ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ್ಯಾರು? ಇಲ್ಲಿದೆಸಂಭವನೀಯ ಪಟ್ಟಿ ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಸೆಂಟ್ರಲ್ ಕ್ಷೇತ್ರಗಳು ಜೈಶಂಕರ್‌ಗೆ ಸುರಕ್ಷಿತವಾಗಿರುತ್ತವೆ ಎಂದು ಬಿಜೆಪಿ ಭಾವಿಸಿದೆ. ಹೀಗಾಗಿ ಜೈಶಂಕರ್ ಅವರು ಬೆಂಗಳೂರಿಗೆ ಆಗಾಗ್ಗೆ ಬರುತ್ತಿದ್ದಾರೆ. ಈ ನಗರದೊಂದಿಗೆ ಅವರು ದೀರ್ಘ ವೈಯಕ್ತಿಕ ಒಡನಾಟ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಅವರು ಇಲ್ಲಿನ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಬಿಜೆಪಿಯ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಜೈಶಂಕರ್ ಬೆಂಗಳೂರಿಗೆ ಹಲವು ಬಾರಿ ಭೇಟಿ ನೀಡಿದ್ದರು. ಅವರು ಶಿಕ್ಷಣ ಸಂಸ್ಥೆಗಳು, ಕಬ್ಬನ್ ಪಾರ್ಕ್‌ಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿದ್ದರು ಮತ್ತು ಪ್ರಸಿದ್ಧ ವಿವಿ ಪುರಂ ಫುಡ್ ಸ್ಟ್ರೀಟ್‌ನಲ್ಲಿಯೂ ತಿನ್ನಲು ಅವರು ಹೋಗಿರುವುದಿದೆ. ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಅವರು ಕಳೆದ ವಾರ ಇಲ್ಲಿಗೆ ಬಂದಿದ್ದರು. ಬೆಂಗಳೂರು ದಕ್ಷಿಣಕ್ಕೆ ಕರ್ನಾಟಕ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೆಸರು ಕೇಳಿಬರುತ್ತಿದೆ ಎಂದುಹೇಳಲಾಗುತ್ತಿದೆ. ತೇಜಸ್ವಿನಿ ದಿವಂಗತ ಎಚ್‌ಎನ್ ಅನಂತಕುಮಾರ್ ಅವರು ಪತ್ನಿ, ಅನಂತಕುಮಾರ್ 1996 ರಿಂದ ಸತತ ಆರು ಅವಧಿಗೆ ಬೆಂಗಳೂರು ದಕ್ಷಿಣವನ್ನು ಪ್ರತಿನಿಧಿಸಿದ ಬಿಜೆಪಿ ಧೀಮಂತರು. 2018 ರಲ್ಲಿ ಅವರ ಅಕಾಲಿಕ ಮರಣದ ನಂತರ, ತೇಜಸ್ವಿನಿ ಅವರು 2019 ರ ಲೋಕಸಭಾ ಅಭ್ಯರ್ಥಿಯಾಗಿ ಉತ್ತರಾಧಿಕಾರಿಯಾಗುತ್ತಾರೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿಯು ರಾಜಕೀಯವಾಗಿ ಹಸಿರು ನಿಶಾನೆ ತೋರಿದ್ದ ಸೂರ್ಯ ಅವರನ್ನು ಕಣಕ್ಕಿಳಿಸುವ ಮೂಲಕ ಅಚ್ಚರಿ ಮೂಡಿಸಿತು.

ಗುಜರಾತ್‌ : ಆರ್ಥಿಕ ಸಮಸ್ಯೆ ಸಾಮೂಹಿಕ ಆತ್ಮಹತ್ಯೆ

Posted by Vidyamaana on 2023-10-28 20:16:31 |

Share: | | | | |


ಗುಜರಾತ್‌ : ಆರ್ಥಿಕ ಸಮಸ್ಯೆ ಸಾಮೂಹಿಕ ಆತ್ಮಹತ್ಯೆ

ಸೂರತ್, ಅ 28: ಮೂವರು‌ ‌ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಶವವಾಗಿ ಪತ್ತೆಯಾಗಿರುವ ಘಟನೆ ಗುಜರಾತ್‌ ನ ಸೂರತ್‌ನಲ್ಲಿ ಶನಿವಾರ ನಡೆದಿದೆ.


ಸೂರತ್‌ನ ಪಾಲನ್‌ಪುರ ಜಕತ್ನಾಕ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಹೇಳಿದ್ದಾರೆ.


6 ಮಂದಿ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದು, ಒಬ್ಬರು ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.


ಮನೀಶ್ ಸೋಲಂಕಿ, ಅವರ ಪತ್ನಿ ರೀಟಾ, ಅವರ ತಂದೆ ಕಾನು, ಅವರ ತಾಯಿ ಶೋಭಾ ಮತ್ತು ಮೂವರು ಮಕ್ಕಳಾದ ದಿಶಾ, ಕಾವ್ಯ ಮತ್ತು ಕುಶಾಲ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.


ಕುಟುಂಬವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿತ್ತು ಎಂದು ಬರೆದಿರುವ ಪತ್ರವನ್ನು ಪೊಲೀಸರು ಘಟಾನ ಸ್ಥಳದಿಂದ ವಶಕ್ಕೆ ಪಡೆದುಕೊಂಡಿದ್ದಾರೆ.


ಆರ್ಥಿಕ ಸಮಸ್ಯೆಯಿಂದಲೇ ಈ ಹೆಜ್ಜೆಯನ್ನಿಟ್ಟಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಹಿಂದಿನ ನಿಖರ ಕಾರಣ ತನಿಖೆ ಬಳಿಕವಷ್ಟೇ ತಿಳಿದು ಬರಬೇಕಿದೆ.


ಫರ್ನಿಚರ್‌ ವ್ಯವಹಾರವನ್ನು ಮಾಡುತ್ತಿದ್ದ ಮನೀಶ್ ಸೋಲಂಕಿ ಅವರಿಗೆ ಶನಿವಾರ ಮುಂಜಾನೆ ಕೆಲಸಗಾರರು ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸದಿದ್ದಾಗ ಮನೆಯ ಬಳಿಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.


ಮಧ್ಯರಾತ್ರಿಯೇ ಕುಟುಂಬದ ಎಲ್ಲರಿಗೂ ವಿಷ ನೀಡಿ ಮನೀಶ್ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ಬಳಿಕ ಅವರ ಸಾವಿನ ಸಮಯ ಹಾಗೂ ಕಾರಣಗಳು ಸ್ಪಷ್ಟವಾಗಲಿದೆ

ಬೆಟ್ಟಂಪಾಡಿ: ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಶಂಕುಸ್ಥಾಪನೆ

Posted by Vidyamaana on 2022-12-16 13:44:26 |

Share: | | | | |


ಬೆಟ್ಟಂಪಾಡಿ: ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಶಂಕುಸ್ಥಾಪನೆ


ಪುತ್ತೂರು: ಲೋಕೋಪಯೋಗಿ ವಿಶೇಷ ಅನುದಾನದಲ್ಲಿ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಚೆಲ್ಯಡ್ಕ ಪುಳಿತ್ತಡಿ ರಸ್ತೆ ಕಾಮಗಾರಿಗೆ 10 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಶಾಸಕ ಸಂಜೀವ ಮಠಂದೂರು ಅವರು ಡಿ. 16ರಂದು ಶಂಕುಸ್ಥಾಪನೆ ನೆರವೇರಿಸಿದರು. ಶಕ್ತಿ ಕೇಂದ್ರದ  ಅಧ್ಯಕ್ಷ ಜಗನಾಥ್ ರೈ ಕೋರ್ಮಂಡ, ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಬೆಂದ್ರ್ ತೀರ್ಥ ಶಿವಾಜಿ ಫ್ರೆಂಡ್ ಕಾರ್ಯಕರ್ತರು PLD ಬ್ಯಾಂಕ್ ಸದಸ್ಯ ಪ್ರವೀಣ್ ರೈ , ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.

ಪುತ್ತೂರು : ಪತ್ರಕರ್ತ ನಿಶಾಂತ್ ಬಿಲ್ಲಂಪದವು ಮೊಬೈಲ್ ಒಡೆದು ಹಾನಿ : ದೂರು ದಾಖಲು

Posted by Vidyamaana on 2023-07-16 15:35:23 |

Share: | | | | |


ಪುತ್ತೂರು : ಪತ್ರಕರ್ತ ನಿಶಾಂತ್ ಬಿಲ್ಲಂಪದವು ಮೊಬೈಲ್ ಒಡೆದು ಹಾನಿ : ದೂರು ದಾಖಲು

ಪುತ್ತೂರು : ಬಪ್ಪಳಿಕೆ ಎಂಬಲ್ಲಿ ಪತ್ರಕರ್ತ ನಿಶಾಂತ್ ಬಿಲ್ಲಂಪದವು ಎಂಬವರ ಮೊಬೈಲ್ ಅನ್ನು ಒಡೆದು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.


ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 427 ಐಪಿಸಿ ರನ್ವಯ ದಾಖಲಿಸಿಕೊಂಡು ಸದ್ರಿ ದೂರಿನಲ್ಲಿ ಸಲ್ಲಿಸಿರುವ ವಿಚಾರಗಳ ಕುರಿತು ಸೂಕ್ತ ಕಾನೂನು ಮತ್ತು ನಿಯಮಗಳ ಅನ್ವಯ ಕ್ರಮ ಕೈಗೊಳ್ಳಲಾಗಿದೆ ಮತ್ತು ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ನ್ಯಾಯಾಲಯದಲ್ಲಿ ವರದಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ.

ಬಪ್ಪಳಿಗೆ To ಬಲ್ನಾಡು ಅಪಾಯಕಾರಿ ಮರದ ಕೊಂಬೆ ತೆರವು ಮತ್ತು ರಸ್ತೆ ಸ್ವಚ್ಛತಾ ಕಾರ್ಯ

Posted by Vidyamaana on 2023-07-15 16:43:18 |

Share: | | | | |


ಬಪ್ಪಳಿಗೆ To ಬಲ್ನಾಡು ಅಪಾಯಕಾರಿ ಮರದ ಕೊಂಬೆ ತೆರವು ಮತ್ತು ರಸ್ತೆ ಸ್ವಚ್ಛತಾ ಕಾರ್ಯ

ಪುತ್ತೂರು: ಗೆಳೆಯರ ಬಳಗ ಬಪ್ಪಳಿಗೆ ಹಾಗೂ ಮೆಸ್ಕಾ ಸಿಬ್ಬಂದಿ ವರ್ಗದ ವತಿಯಿಂದ ನಮ್ಮ ಊರು ನಮ್ಮ‌ರಕ್ಷಣೆ ಧ್ಯೇಯದಡಿ ನಗರದ ಬಪ್ಪಳಿಗೆಯಿಂದ ಬಲ್ನಾಡುವರೆಗೆ ರಸ್ತೆ ಬದಿ ಇರುವ ಅಪಾಯಕಾರಿ ಮರದ ಕೊಂಬೆ ಹಾಗೂ ರಸ್ತೆ ಬದಿಯನ್ನು ಸ್ವಚ್ಛ ಮಾಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಚಾಲನೆ ನೀಡಿದ್ರು. ಬಳಿಕ ಮಾತನಾಡಿದ ಅವರು, ರಸ್ತೆ ಬದಿಗಳಲ್ಲಿ ಹಲವಾರು ಅಪಾಯಕಾರಿ ಮರಗಳು ಇರುತ್ತವೆ.‌ ಕೆಲವೊಮ್ಮೆ ಆ ಮರದ ಕೊಂಬೆಗಳು ಮಳೆಯ ಸಂದರ್ಭ ಅಪಾಯವನ್ನ ತಂದೊಡ್ಡುತ್ತವೆ. ಹೀಗಿರುವಾಗ ಅದನ್ನ ತೆರವುಗೊಳಿಸುವ ಕೆಲಸ ನಗರಸಭೆಯದ್ದಾಗಿದೆ. ಆದ್ರೆ ಇಲ್ಲಿ ಗೆಳೆಯರ ಬಳಗದ ತಂಡದವರು  ನಗರಸಭೆ ಹಾಗೂ ಮೆಸ್ಕಾಂ ಸಿಬ್ಬಂದಿಗಳನ್ನ ಸೇರಿಸಿಕೊಂಡು ಇಂತಹ ಒಂದು ಉತ್ತಮ ಕಾರ್ಯಕ್ಕೆ ಕೈಹಾಕಿರುವುದು ಮೆಚ್ಚುವಂತದ್ದು ಎಂದು ಹೇಳಿದರು. ಇಂತಹ ಅನೇಕ ಕಾರ್ಯ ವೈಖರಿಗಳು ನಡೆಯಬೇಕು. ಜೊತೆಗೆ ಅಪಾಯನ್ನರಿತು ಇನ್ನೊಬ್ಬರಿಗೆ ತೊಂದರೆ ಆಗದಿರಲಿ ಎಂಬ ದೃಷ್ಟಿಯಿಂದ ಇಂತಹ ಅಪಾಯಕಾರಿ ಮರದ ಕೊಂಬೆ  ತೆರವುಗೊಳಿಸುವಂತ ಕೆಲಸ ಉತ್ತಮವಾದುದು ಎಂದು ಈ ಸಂದರ್ಭ ತಿಳಿಸಿದರು. ಇನ್ನು ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಮುಂದಾಳು ರಝಾಕ್ ಬಿ.ಎಚ್, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಮೆಸ್ಕಾಂ ಅಧಿಕಾರಿಗೆ ಗೆಳೆಯರ ಬಳಗದ ವತಿಯಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಮೋನು ಬಪ್ಪಳಿಗೆ ರಝಾಕ್ ಬಿ.ಎಚ್, ರಮೀಝ್ ಬಪ್ಪಳಿಗೆ, ಶರೀಫ್ ಬಪ್ಪಳಿಗೆ, ಅಮನ್ ಬಪ್ಪಳಿಗೆ, ಉರೈಸ್ ಬಪ್ಪಳಿಗೆ, ಉಮ್ಮರ್ ಬಪ್ಪಳಿಗೆ, ಹುಸೈನ್ ಬಪ್ಪಳಿಗೆ, ಮಸೂದ್ ಬಪ್ಪಳಿಗೆ, ಹರೀಶ್ ಬಪ್ಪಳಿಗೆ, ಸುಭಾಷ್, ಅದ್ದು ಪಡೀಲ್, ಸಜಾಬ್ ಬಪ್ಪಳಿಗೆ, ಅಬ್ಬಾಸ್ ಬಪ್ಪಳಿಗೆ, ಅಲ್ತಾಫ್ ಎಸ್. ಕೆ...ಮೆಸ್ಕಾಂ ಸಿಬ್ಬಂದಿಗಳು, ನಗರಸಭೆ ಸಿಬ್ಬಂದಿಗಳು ಭಾಗಿಯಾದರು.



Leave a Comment: