ಜನ ಸಂಪರ್ಕಕ್ಕೆ ವಾಟ್ಸಪ್ ಚಾನೆಲ್ ಆರಂಭಿಸಿದ ದೇಶದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ

ಸುದ್ದಿಗಳು News

Posted by vidyamaana on 2023-09-19 21:51:51 | Last Updated by Vidyamaana on 2023-09-19 21:51:51

Share: | | | | |


ಜನ ಸಂಪರ್ಕಕ್ಕೆ ವಾಟ್ಸಪ್ ಚಾನೆಲ್ ಆರಂಭಿಸಿದ ದೇಶದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ


ವಿದ್ಯಮಾನದ ಗ್ರೂಪಿಗೆ ಸೇರಲು ಈ ಲಿಂಕ್ ಒತ್ತಿ*

ಬೆಂಗಳೂರು: ಜನರೊಟ್ಟಿಗೆ ಸಂಪರ್ಕವನ್ನು ಮತ್ತಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ವಾಟ್ಸಪ್ ಚಾನೆಲ್ ಆರಂಭಿಸಿದ್ದಾರೆ.ಈ ಮೂಲಕ ದೇಶದ ಸರ್ಕಾರವೊಂದರ ಮುಖ್ಯಸ್ಥರ ಪೈಕಿ ಮೊಟ್ಟಮೊದಲ ವಾಟ್ಸಪ್ ಚಾನೆಲ್ ಅನ್ನು ಆರಂಭಿಸಿದ ಹೆಗ್ಗಳಿಕೆಯು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಇನ್ನು ಜನ ಸಂಪರ್ಕ ಸಾಧನೆಯ ನಿಟ್ಟಿನಲ್ಲಿ ಮುಂದಡಿಯಿಟ್ಟವರು ಸಿಎಂ ಸಿದ್ದರಾಮಯ್ಯ ಅವರ ನಡೆಗೆ ನೆಟ್ಟಿಗರು ಅಭಿನಂದನೆ ಸಲ್ಲಿಸಿದ್ದಾರೆ.

ಸಿಎಂ ವಾಟ್ಸಪ್ ಚಾನೆಲ್‌ನಲ್ಲಿ ಏನೆಲ್ಲಾ ಸಿಗುತ್ತದೆ?

ಈ ಚಾನೆಲ್‌ನಲ್ಲಿ ಸಿಎಂ ದೈನಂದಿನ ಚಟುವಟಿಕೆ, ತೆಗೆದುಕೊಂಡ ಮಹತ್ವದ ನಿರ್ಧಾರಗಳು, ಸಭೆಗಳ ಪ್ರಮುಖ ಅಂಶಗಳು, ಹೊಸ ಯೋಜನೆ ಮಾಹಿತಿ, ಆರೋಪ ಅಥವಾ ಪ್ರಚಲಿತ ಘಟನೆಗಳಿಗೆ ಪ್ರತಿಕ್ರಿಯೆಗಳು ಸೇರಿದಂತೆ ಸಾಕಷ್ಟು ಮಾಹಿತಿಯ ನೇರವಾಗಿ ಸಿಗಲಿದೆ. ಇನ್ನು ಚಾನೆಲ್‌ಗಳಲ್ಲಿ ಬಂದ ಸಂದೇಶಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಇಮೋಜಿ ಬಳಸಿ ನೀಡುವ ಅವಕಾಶ ಇದೆ.

Readmore.....

ವಾಟ್ಸಾಪ್ ಚಾನೆಲ್ ಸೇರಿದ ಪ್ರಧಾನಿ ಮೋದಿ : ನಮೋ ಸಂಪರ್ಕಿಸೋದು ಈಗ ಇನ್ನಷ್ಟು ಸುಲಭ


ಚಾನೆಲ್ ಸೇರುವುದು ಹೇಗೆ?

ಸಿಎಂ ವಾಟ್ಸಪ್ ಚಾನೆಲ್ ಸೇರಬೇಕು ಎಂಬುವವರು ನಿಮ್ಮ ವಾಟ್ಸಪ್ ಚಾನಲ್ ಸೆಕ್ಷನ್‌ನಲ್ಲಿ Chief Minister of Karnataka ಎಂದು ಸರ್ಚ್ ಮಾಡಬೇಕು. ಬಳಿಕ ಸಿಎಂ ಅಧಿಕೃತ ಚಾನೆಲ್ ಕಾಣಿಸಲಿದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಮುಖ್ಯಮಂತ್ರಿಗಳ ಅಧಿಕೃತ ಚಾನಲ್ ಅನ್ನು ಸೇರಬಹುದು.


ಸದ್ಯ ವಾಟ್ಸಪ್ ಪರಿಚಯ ಮಾಡಿರುವ " ಚಾನೆಲ್ ಎಂಬ ಹೊಸ ಆಯ್ಕೆ ಸಿಗಬೇಕು ಎಂದರೆ ನಿಮ್ಮ ವಾಟ್ಸಪ್ ಅಪ್ಲೇಟ್ ಮಾಡಿಕೊಳ್ಳಬೇಕು. ಆ ಬಳಿಕ ಸ್ಟೇಟಸ್ ನೋಡುವ ಆಯ್ಕೆ ಬಳಿ ಬಂದರೆ ಅಲ್ಲಿಯೇ ಚಾನೆಲ್‌ಗಳು ಸಿಗುತ್ತವೆ. ಈಗಾಗಲೇ ಬಾಲಿವುಡ್ ತಾರೆಯರು, ಕ್ರಿಕೆಟ್ ಪಡುಗಳು ಸೇರಿದಂತೆ ಪ್ರಮುಖ ಸೆಲಿಬ್ರಿಟಿಗಳು ತಮ್ಮ ವ್ಯಾಟ್ಸಪ್ ಚಾನೆಲ್ ಆರಂಭಿಸಿದ್ದಾರೆ. ಇನ್ನು ಯಾರು ಬೇಕಾದರೂ ತಮ್ಮ ಹೆಸರಿನಲ್ಲಿ ಚಾನೆಲ್ ಆರಂಭಿಸುವ ಸೌಲಭ್ಯವನ್ನು ಮೇಟಾ ಕಂಪನಿ ನೀಡಿದೆ

*ವಿದ್ಯಮಾನದ ಗ್ರೂಪಿಗೆ ಸೇರಲು ಈ ಲಿಂಕ್ ಒತ್ತಿ*

 Share: | | | | |


ರಾತ್ರೋ ರಾತ್ರಿ ದೇವೇಗೌಡ್ರನ್ನು ಭೇಟಿಯಾದ ಸಿಪಿ ಯೋಗೀಶ್ವರ್..

Posted by Vidyamaana on 2024-02-13 07:22:18 |

Share: | | | | |


ರಾತ್ರೋ ರಾತ್ರಿ ದೇವೇಗೌಡ್ರನ್ನು ಭೇಟಿಯಾದ ಸಿಪಿ ಯೋಗೀಶ್ವರ್..

ಬೆಂಗಳೂರು : ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ, ಜೆಡಿಎಸ್ ನಾಯಕರು ಆಕ್ಟೀವ್ ಆಗಿದ್ದಾರೆ. ಅದರಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಬಿಜೆಪಿ ಹಿರಿಯರೆಲ್ಲಾ ದೇವೇಗೌಡರ ಮನೆ ಹಾಗೂ ಕುಮಾರಸ್ವಾಮಿ ಅವರ ತೋಟದ ಮನೆಗೆ ದಾಂಗುಡಿ ಇಡುತ್ತಿದ್ದಾರೆ.ಇದೀಗ ಸಿಪಿ ಯೋಗೀಶ್ವರ್ ದಿಢೀರನೆ ದೇವೇಗೌಡರ ಮನೆಗೆ ಭೇಟಿ ನೀಡಿ, ಚರ್ಚೆ ನಡೆಸಿ ಬಂದಿದ್ದಾರೆ.


ರಾಮನಗರದಲ್ಲಿ ಜೆಡಿಎಸ್ ಗೆ ಪ್ರಬಲ ಪೈಪೋಟಿ ನೀಡಿದ್ದೇ, ಸಿಪಿ ಯೋಗೀಶ್ವರ್ ಅವರು. ಸಿಕ್ಕ ಸಿಕ್ಕ ಸಮಯದಲ್ಲೆಲ್ಲಾ ಯೋಗೀಶ್ವರ್ ಅವರು, ಕುಮಾರಸ್ವಾಮಿ ಅವರನ್ನು, ಕುಮಾರಸ್ವಾಮಿ ಅವರು ಯೋಗೀಶ್ವರ್ ಅವರನ್ನು ಏಕವಚನದಲ್ಲಿಯೇ ದಾಳಿ ನಡೆಸಿದ್ದರು. ಈಗ ಮೈತ್ರಿಯಾದ ಮೇಲೆ ಎಲ್ಲವೂ ಉಲ್ಟಾ ಆಗಿದೆ. ಸಮಾಧಾನ ಹೆಚ್ಚಾಗಿದೆ. ಜೊತೆಗೂಡಿ ಕೆಲಸ ಮಾಡುವ ಮನಸ್ಥಿತಿ ನಿರ್ಮಾಣವಾಗಿದೆ. ಈ ಬೆನ್ನಲ್ಲೇ ಸಿಪಿ ಯೋಗೀಶ್ವರ್ ದೊಡ್ಡಗೌಡರ ಮನೆಗೆ ಬಂದಿದ್ದಾರೆ.ಪದ್ಮನಾಭನಗರದ ದೊಡ್ಡಗೌಡರ ನಿವಾಸಕ್ಕೆ ಭೇಟಿ ನೀಡಿದ ಯೋಗೀಶ್ವರ್, ಸುಮಾರು ಗಂಟೆಗಳ ಕಾಲ ದೇವೇಗೌಡರ ಬಳಿ ಚರ್ಚೆ ನಡೆಸಿದ್ದಾರೆ. ದೊಡ್ಡಗೌಡರು ಕೂಡ, ನಿನ್ನ ಜೊತೆಗೆ ನಾವಿದ್ದೀವಿ ಎಂದು ಹೇಳಿ ಕಳುಹಿಸಿದ್ದಾರಂತೆ. ಈ ಸಂಬಂಧ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಿಪಿ ಯೋಗೀಶ್ವರ್, ‘ಕರುನಾಡಿನ ಹೆಮ್ಮೆ, ಗೌರವಾನ್ವಿತ ಮಾಜಿ ಪ್ರಧಾನಿ ಶ್ರೀ ಹೆಚ್‌.ಡಿ. ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿಮಾಡಿ ಆಶೀರ್ವಾದ ಪಡೆಯಲಾಯಿತು. ನಾಡಿನ ರೈತರು, ಕೃಷಿ ಕಾರ್ಮಿಕರ ಬಗ್ಗೆ ಈ ಇಳಿ ವಯಸ್ಸಿನಲ್ಲೂ ದೇವೇಗೌಡರಿಗೆ ಇರುವ ಕಳಕಳಿ ಅನುಕರಣೀಯ. 6 ದಶಕಗಳ ಸುದೀರ್ಘ ಸಾರ್ವಜನಿಕ ಜೀವನ ಪೂರೈಸಿರುವ ಶ್ರೀ ದೇವೇಗೌಡರ ಜ್ಞಾನ, ಅನುಭವ ನಮ್ಮೆಲ್ಲರಿಗೂ ಪ್ರೇರಣಾದಾಯಿ’ ಎಂದು ಬರೆದುಕೊಂಡಿದ್ದಾರೆ.

ಆಸ್ಪತ್ರೆಗೆ ತೆರಳಿ ಮನೆಗೆ ಮರಳುತ್ತಿದ್ದ ದಂಪತಿಗೆ ಅಪಘಾತ – ಪತ್ನಿ ದಾರುಣ ಸಾವು

Posted by Vidyamaana on 2024-01-29 18:51:49 |

Share: | | | | |


ಆಸ್ಪತ್ರೆಗೆ ತೆರಳಿ ಮನೆಗೆ ಮರಳುತ್ತಿದ್ದ ದಂಪತಿಗೆ ಅಪಘಾತ – ಪತ್ನಿ ದಾರುಣ ಸಾವು

ಪುತ್ತೂರು:ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಬೈಕ್ ಹಾಗೂ ಟಿಪ್ಪರ್ ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್‌ನ ಹಿಂಬದಿ ಸವಾರೆ, ಮಾಣಿ ಖಾಸಗಿ ಶಾಲಾ ಶಿಕ್ಷಕಿ ಮೃತಪಟ್ಟಿರುವ ಘಟನೆ ಜ.29ರಂದು ಮಧ್ಯಾಹ್ನ ನಡೆದಿದೆ.ಬಂಟ್ವಾಳ ತಾಲೂಕು ಇಡಿದು ಗ್ರಾಮದ ಮಿತ್ತೂರು ಮದಕ ಸುರೇಶ್ ಕುಲಾಲ್ ಪತ್ನಿ ಅನಿತಾ(35ವ.) ಮೃತಪಟ್ಟವರು. ಮಾಣಿ ಸಮೀದ ಗಡಿಯಾರ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಅನಿತಾ ಕೆಲ ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಜ.29ರಂದು ಬೆಳಿಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಚಿಕಿತ್ಸೆ ಪಡೆದು ಬೈಕ್‌ನಲ್ಲಿ ಹಿಂತಿರುಗುವ ವೇಳೆ ಕಬಕ ಸಮೀಪ ಪೋಳ್ಯ ಎಂಬಲ್ಲಿ ಮಣ್ಣು ರಸ್ತೆಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿ ಏಕಾಏಕಿ ಡಂಬಾರು ರಸ್ತೆ ಗೆ ಬಂದಾಗ ಬೈಕ್ ಸಾವರನಿಗೆ ನಿಯಂತ್ರಣ ತಪ್ಪಿ  ಟಿಪ್ಪರ್ ಲಾರಿಗೆ  ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಿಂಬದಿ ಸವಾರೆ ಅನಿತಾ ಹಾಗೂ ಅವರು ಮಗು ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಬೊಳುವಾರು ಮಹಾವೀರ ಆಸ್ಪತ್ರೆಗೆ ಕರೆ ತರಲಾಗಿದ್ದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಮಗುವಿನ ಭುಜದ ಭಾಗಕ್ಕೆ ಸಣ್ಣ ಪುಟ್ಟ ಗಾಯವಾಗಿದ್ದು, ಸುರೇಶ್ ಕುಲಾಲ್ ಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.ಮೃತರ ಪತಿ ಸುರೇಶ್ ಕುಲಾಲ್ ನೀಡಿದ ದೂರಿನಂತೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತಿ ಸುರೇಶ್ ಕುಲಾಲ್, ಪುತ್ರಿ ಋತ್ವಿಯವರನ್ನು ಅಗಲಿದ್ದಾರೆ.

ಬೆಳ್ತಂಗಡಿ : ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ಶಿವಮೊಗ್ಗ ಮೂಲದ ಕಾರ್ತಿಕ್ ಆತ್ಮಹತ್ಯೆ

Posted by Vidyamaana on 2023-06-29 09:17:37 |

Share: | | | | |


ಬೆಳ್ತಂಗಡಿ : ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ಶಿವಮೊಗ್ಗ ಮೂಲದ ಕಾರ್ತಿಕ್ ಆತ್ಮಹತ್ಯೆ

ಬೆಳ್ತಂಗಡಿ : ಶಿವಮೊಗ್ಗದ ಅವಿವಾಹಿತ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಜಿರೆಯ ಖಾಸಗಿ ಲಾಡ್ಜ್ ನ ರೂಂನಲ್ಲಿ ನಡೆದಿದೆ.ಜೂನ್ 26 ರಂದು ಶಿವಮೊಗ್ಗ ಜಿಲ್ಲೆಯ ಅವಿವಾಹಿತ ಯುವಕ ಕಾರ್ತಿಕ್ (29) ಎಂಬಾತ ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದು. ರೂಂ ನಂಬರ್ 303 ರಲ್ಲಿ ರೂಂ ಪಡೆದುಕೊಂಡು ಉಳಿದುಕೊಂಡಿದ್ದು. ಜೂನ್ 28 ರಂದು ರೂಂ ಒಳಗೆ ಹಗ್ಗವನ್ನು ಪ್ಯಾನ್ ಗೆ ಹಾಕಿ ಪ್ಲಾಸ್ಟಿಕ್ ಚೆಯರ್ ನಲ್ಲಿ ನಿಂತುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಜೂನ್ 29 (ಇಂದು) ರೂಂ ನಿಂದ ಕಾರ್ತಿಕ್ ಹೊರಬಾರದೆ ಇದ್ದಾಗ ಲಾಡ್ಜ್ ಸಿಬ್ಬಂದಿ ಬಾಗಿಲು ಎಷ್ಟೇ ಬಡಿದರು  ಒಳಗಡೆಯಿಂದ ಮಾತನಾಡದೇ ಇದ್ದಾಗ ಅನುಮಾನದಿಂದ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು. ಅದರಂತೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ್ ಮತ್ತು ತಂಡ ಲಾಡ್ಜ್ ಗೆ ತೆರಳಿ ಬಾಗಿಲು ಮುರಿದು ಒಳಹೋದಾಗ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್ ಮನೆಯ ವಿಳಾಸ ಪತ್ತೆಯಾಗಿದ್ದು ಮನೆಯವರನ್ನು ಬೆಳ್ತಂಗಡಿ ಪೊಲೀಸರು ಸಂಪರ್ಕಿಸಿದ್ದು. ಸಂಜೆ ವೇಳೆಗೆ ಕಾರ್ತಿಕ್ ಮನೆಯವರು ಪೊಲೀಸ್ ಠಾಣೆಗೆ ತಲುಪಲಿದ್ದಾರೆ. ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರ ಪ್ರದೇಶ: ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌, ಸಹೋದರನ ಗುಂಡಿಕ್ಕಿ ಹತ್ಯೆ

Posted by Vidyamaana on 2023-04-16 02:53:05 |

Share: | | | | |


ಉತ್ತರ ಪ್ರದೇಶ: ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌, ಸಹೋದರನ ಗುಂಡಿಕ್ಕಿ ಹತ್ಯೆ

ಪ್ರಯಾಗ್‌ರಾಜ್: ಉತ್ತರಪ್ರದೇಶದ ಮಾಜಿ ಸಂಸದ, ಗ್ಯಾಂಗ್ ಸ್ಟರ್ ಅತೀಕ್‌ ಅಹ್ಮದ್‌ ಹಾಗೂ ಅವರ ಸಹೋದರ ಅಶ್ರಫ್‌ ಅಹ್ಮದ್‌ ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. 

ಉತ್ತರ ಪ್ರದೇಶದ ಪ್ರಯಾಗರಾಜ್ ನಗರದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದಾಗ ಅತೀಕ್‌ ಸಹೋದರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.  

ಫುಲ್ಪುರ್ ಕ್ಷೇತ್ರದ ಮಾಜಿ ಸಂಸದ ಅತೀಕ್ ಅಹ್ಮದ್ ಕೊಲೆ, ಸುಲಿಗೆ, ಅಪಹರಣ ಸೇರಿದಂತೆ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಬಿಗಿ ಭದ್ರತೆಯ ಜೈಲಿನಲ್ಲಿ ಇರಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆಗಾಗಿ ಅವರನ್ನು ಪೊಲೀಸ್ ರಕ್ಷಣೆಯಲ್ಲಿ ಪ್ರಯಾಗ್‌ರಾಜ್‌ಗೆ ಕರೆತರುವಾಗ ಅವರನ್ನು ಹತ್ಯೆಗೈಯಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಘಟನಾ ಸ್ಥಳದಿಂದ ಇಬ್ಬರು ಶೂಟರ್‌ ಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.

ಗುರುವಾರವಷ್ಟೇ, ಪೊಲೀಸರು ಎನ್‌ಕೌಂಟರ್‌ನಲ್ಲಿ ಅತೀಕ್‌ ಪುತ್ರನನ್ನು ಹತ್ಯೆಗೈದಿದ್ದರು.

ಅತಿಕ್‌ ಪುತ್ರ ಹಾಗೂ ಆತನ ಸಹಚರರನ್ನು ಪೊಲೀಸ್‌ ಕಾರ್ಯಾಚರಣೆ ವೇಳೆ ಎನ್‌ಕೌಂಟರ್‌ ಮಾಡಲಾಗಿದೆ ಎಂದು ಯುಪಿ ಪೊಲೀಸರು ತಿಳಿಸಿದ್ದರು. ಶನಿವಾರ ಪುತ್ರನ ಅಂತಿಮ ಸಂಸ್ಕಾರ ನಡೆದಿದ್ದು, ಅಂದೇ ಅತೀಕ್‌ ಅವರ ಹತ್ಯೆ ನಡೆದಿದೆ. ಈ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ

ಬಡಗನ್ನೂರು ಗ್ರಾ.ಪಂ. ಮಾಜಿ ಸದಸ್ಯರ ಮನೆಯಲ್ಲಿ ದರೋಡೆ

Posted by Vidyamaana on 2023-09-07 15:14:22 |

Share: | | | | |


ಬಡಗನ್ನೂರು ಗ್ರಾ.ಪಂ. ಮಾಜಿ ಸದಸ್ಯರ ಮನೆಯಲ್ಲಿ ದರೋಡೆ

ಪುತ್ತೂರು: ಬಡಗನ್ನೂರು ಗ್ರಾಪಂ ಸದಸ್ಯ ಗುರುಪ್ರಸಾದ್ ಅವರ ಮನೆಗೆ ತಡರಾತ್ರಿ ನುಗ್ಗಿದ ಮುಸುಕುಧಾರಿಗಳ ತಂಡ ನಡೆಸಿದ ದರೋಡೆ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗುವುದು ಎಂದು ಎಸ್ಪಿ ರಿಷ್ಯಂತ್ ಸಿ.ಬಿ. ತಿಳಿಸಿದ್ದಾರೆ.

ಬಡಗನ್ನೂರು ಗ್ರಾಪಂ ಮಾಜಿ ಸದಸ್ಯ ಗುರುಪ್ರಸಾದ್ ಅವರ ಮನೆ ಪರಿಶೀಲಿಸಿ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

ತಡರಾತ್ರಿ ಮನೆಯೊಳಗೆ ನುಗ್ಗಿದ ದರೋಡರಕೋರರ ಗುಂಪು, ಗುರುಪ್ರಸಾದ್, ಅವರ ತಾಯಿ ಹಾಗೂ ಮನೆಯವರನ್ನು ಕಟ್ಟಿ ಹಾಕಿದೆ. ಬಳಿಕ ಮೊಬೈಲ್ಗಳನ್ನು ನೀರಿಗೆ ಎಸೆದು, ದರೋಡೆ ನಡೆಸಿದೆ. ದರೋಡೆ ನಡೆಸಿದ ಬಳಿಕ ಬಂಧಮುಕ್ತಗೊಳಿಸಿ ತೆರಳಿದೆ. ಕೃತ್ಯ ಎಸಗಿದವರ ಬಗ್ಗೆ ಸುಳಿವು ಸಿಕ್ಕಿಲ್ಲ. ಹಾಗಾಗಿ ವಿಶೇಷ ತಂಡ ರಚಿಸಲಾಗುವುದು ಎಂದು ತಿಳಿಸಿದರು‌

ರಾತ್ರಿ ಸುಮಾರು 2 ಗಂಟೆ ವೇಳೆಗೆ ಕೃತ್ಯ ಎಸಗಿದ್ದು, 25 ಪವನ್ ಚಿನ್ನಾಭರಣ, 40 ಸಾವಿರ ರೂ. ನಗದು ಕಳವಾಗಿದೆ ಎನ್ನಲಾಗಿದೆ. ಈ ಬಗ್ಗೆ ಎಸ್ಪಿ ಅವರಲ್ಲಿ‌ ಪ್ರಶ್ನಿಸಿದಾಗ, ಇದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮುಂದೆ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಸ್ಥಳಕ್ಕೆ ಐಜಿ, ಎಸ್ಪಿ,ಡಿ ವೈ ಎಸ್ ಪಿ ಸಹಿತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳ, ಬೆರಳಚ್ಚುಗಾರರು ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ.

ಪುತ್ತೂರು ಶಾಸಕರು ಬೆಳ್ತಂಗಡಿಯನ್ನೂ ಕಂಟ್ರೋಲ್ ಮಾಡುವಷ್ಟು ಶಕ್ತರಿದ್ದಾರೆ: ಬಡಗನ್ನೂರು

Posted by Vidyamaana on 2023-05-19 06:25:18 |

Share: | | | | |


ಪುತ್ತೂರು ಶಾಸಕರು ಬೆಳ್ತಂಗಡಿಯನ್ನೂ ಕಂಟ್ರೋಲ್ ಮಾಡುವಷ್ಟು ಶಕ್ತರಿದ್ದಾರೆ: ಬಡಗನ್ನೂರು

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್‌ಕುಮಾರ್ ರೈಯವರು ಸಮರ್ಥ, ಪ್ರಾಮಾಣಿಕ, ಅಬಿವೃದ್ದಿಪರ ಶಾಸಕರಾಗಿದ್ದು ಪಕ್ಕದ ಬೆಳ್ತಂಗಡಿಯನ್ನೂ ಕಂಟ್ರೋಲ್ ಮಾಡುವಷ್ಟು ಶಕ್ತರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಮಹಮ್ಮದ್ ಬಡಗನ್ನೂರು ಹೇಳಿದರು.

ಪುತ್ತೂರಿಗೆ ಬಂದಿದ್ದ ಬೆಳ್ತಂಗಡಿ ಶಾಸಕರಾದ ಹರೀಶ್‌ಪೂಂಜಾರವರು ನಿಮಗೆ ಶಾಸಕರಿಲ್ಲದ ಕೊರಗು ಬೇಡ ನಾನೇ ನಿಮ್ಮ ಶಾಸಕರಂತೆ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಹಮ್ಮದ್ ಬಡಗನ್ನೂರು ಬೆಳ್ತಂಗಡಿಯಲ್ಲಿ ನೊಂದವರ ಪರವಾಗಿ, ಅಶಕ್ತರ ಪರವಾಗಿ, ಅನ್ಯಾಯಕ್ಕೊಳಗಾದವರ ಪರವಾಗಿ ನಮ್ಮ ಶಾಸಕರಾದ ಅಶೋಕ್ ರೈ ಕೆಲಸ ಮಾಡಲಿದ್ದು ಅವರಿಗೆ ಅಷ್ಟು ಸಾಮರ್ಥ್ಯ ಇದೆ ಎಂದು ಹೇಳಿದರು.ಚುನಾವಣೆಗೆ ಮೊದಲು ಆರಂಭಗೊಂಡ ಇವರೊಳಗಿನ ಯುದ್ದ ಚುನಾವಣೆ ಮುಗಿದ ಬಳಿಕ ಇನ್ನಷ್ಟು ಗಂಭೀರಾವಸ್ಥೆಗೆ ತಲುಪಿದೆ. ಅವರವರೇ ಹೊಡೆದಾಡಿಕೊಂಡು, ಬೈದಾಡಿಕೊಂಡು ಅದನ್ನು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ , ಇವೆಲ್ಲವನ್ನೂ ಜನ ಹತ್ತಿರದಿಂದ ಗಮನಿಸುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿಯೇ ಇಷ್ಟು ದಿನ ಇಲ್ಲಿನ ಜನರನ್ನು ಮಂಗ ಮಾಡುತ್ತಿದ್ದರು ಈಗ ಅದೆಲ್ಲವೂ ಒಂದೊಂದಾಗಿ ಬಯಲಾಗುತ್ತಿದೆ ಎಂದು ಲೇವಡಿ ಮಾಡಿದರು. ಪುತ್ತೂರಿನಿಂದ ಆರಂಭಗೊಂಡ ಇವರ ಈ ಗುಂಪುಗಾರಿಕೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟಕ್ಕೂ ವಿಸ್ತರಣೆಪಡೆದುಕೊಳ್ಳಬಹುದು. ಜನರ ಭಾವನೆಯನ್ನು ಕೆರಳಿಸಿ ಅಧಿಕಾರ ಪಡೆಯುತ್ತಿದ್ದ ಬಿಜೆಪಿಗೆ ಈ ಬಾರಿ ಜನರ ಶಾಪ ತಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಬಡ ಜನರಿಗೆ ನ್ಯಾಯ ಸಿಕ್ಕಿದಂತಾಗಿದೆ. ಸೋಲಿನಿಂದ ದೃತಿಗೆಟ್ಟ ಬಿಜೆಪಿ ಶಾಸಕರು ಪುತ್ತೂರಿಗೆ ಬಂದು ನಾನೇ ನಿಮ್ಮ ಶಾಸಕ ಎಂದು ಹೇಳುತ್ತಿರುವುದು ಅವರ ಹತಾಶಾ ಮನೋಭಾವವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಬೆಳ್ತಂಗಡಿ ಜನತೆಗೆ ತೊಂದರೆಯಾದಲ್ಲಿ, ಅನ್ಯಾಯವಾದಲ್ಲಿ ಪುತ್ತೂರು ಶಸಕರು ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲಿದ್ದಾರೆ ಎಂದು ಬಡಗನ್ನೂರು ಹೇಳಿದರು.



Leave a Comment: