ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಸುದ್ದಿಗಳು News

Posted by vidyamaana on 2024-07-03 08:00:29 |

Share: | | | | |


ಎರಡು ವರ್ಷಗಳ ಹಿಂದಿನ ಮನೆ ಕಳವು ಪ್ರಕರಣವನ್ನು ಭೇದಿಸಿದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ : ಎರಡು ವರ್ಷಗಳ ಹಿಂದೆ ನಡೆದ ಮನೆ ಕಳ್ಳತನ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಭೇದಿಸಿದ್ದಾರೆ.


ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ ನಡೆದ ಸುಮಾರು 1,48,000 ರೂ. ಮೌಲ್ಯದ ಚಿನ್ನಾಭರಣಗಳು ಮತ್ತು ನಗದು ಹಣ 30,000 ರೂ. ಸೇರಿ ಒಟ್ಟು 1,78,000 ರೂ. ಮೌಲ್ಯದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಲ್ಲಿ ಅಪರಾಧ ಕ್ರಮಾಂಕ. 22/2022 ಕಲಂ 457,380 ಭಾ. ದಂ. ಸಂ ರಂತೆ ಪ್ರಕರಣ ದಾಖಲಿಸಿಕೊಂಡು, ಕಳೆದ ಎರಡು ವರ್ಷಗಳಿಂದ ತನಿಖೆ ನಡೆಸಿದ್ದು, ಪ್ರಸ್ತುತ ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ ನಿವಾಸಿ ಶರತ್ (24) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಕಳವು ಮಾಡಿದ ಸೊತ್ತುಗಳನ್ನು ಪತ್ತೆ ಮಾಡಿ ಸ್ವಾದೀನಪಡಿಸಿಕೊಳ್ಳಲಾಗಿದೆ.

ಸದ್ರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಸಿ ಬಿ ರಿಷ್ಯಂತ್ ಐಪಿಎಸ್ ರವರು, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಎಂ ಕೆ.ಎಸ್.ಪಿ.ಎಸ್ ಮತ್ತು ರಾಜೇಂದ್ರ ಕೆ.ಎಸ್.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ವಿಜಯ ಪ್ರಸಾದ್, ಪ್ರಭಾರ ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪವಿಭಾಗ ಮತ್ತು ಸುಳ್ಯ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ ಕೆ ರವರ ನೇತೃತ್ವದಲ್ಲಿ, ಸಂತೋಷ್ ಬಿ ಪಿ ಪೊಲೀಸ್ ಉಪನಿರೀಕ್ಷಕರು, ಬೆಳ್ಳಾರೆ ಪೊಲೀಸ್ ಠಾಣೆ ಹಾಗೂ ಬೆಳ್ಳಾರೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ನವೀನ ಕೆ. ಚಂದ್ರಶೇಖರ್ ಗೌಡ, ಸಂತೋಷ್ ಜಿ. ಜೀಪು ಚಾಲಕ ಪುರಂದರ ಹಾಗೂ ಬೆರಳುಮುದ್ರೆ ಘಟಕದ ಪ್ರಶಾಂತ್ ಹೊಸಮನಿ ಮತ್ತು ಸಚಿನ್ ಬಿ. ಬಿ ರವರನ್ನೊಳಗೊಂಡು ವಿಶೇಷ ತನಿಖಾ ತಂಡವು ಕರ್ತವ್ಯ ನಿರ್ವಹಿಸಿರುತ್ತದೆ.

ಸದ್ರಿ ತನಿಖಾ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯನ್ನು ವ್ಯಕ್ತವಾಗಿದೆ.

 Share: | | | | |


ಕಲಿತದ್ದು SSLC – ಪೋಸು ಕೊಟ್ಟಿದ್ದು MBBS ಡಾಕ್ಟರ್ ಎಂದು

Posted by Vidyamaana on 2023-12-02 17:41:05 |

Share: | | | | |


ಕಲಿತದ್ದು SSLC – ಪೋಸು ಕೊಟ್ಟಿದ್ದು MBBS ಡಾಕ್ಟರ್ ಎಂದು

ಬೆಂಗಳೂರು : ರಾಜಧಾನಿಯಲ್ಲಿ ಪತ್ತೆಯಾದ ಅತಿ ದೊಡ್ಡ ಹಸುಗೂಸು ಮಾರಾಟ ಹಗರಣದಲ್ಲಿ (Child Tr

non

e) ಈಗಾಗಲೇ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ, ಅವರಲ್ಲಿ ಒಬ್ಬ ನಕಲಿ ವೈದ್ಯನೂ (Fake Doctor) ಇದ್ದಾನೆ. ಅವನೇ ಕೆವಿನ್‌ ಅಲಿಯಾಸ್‌ ಕರಣ್‌.


ಬಡ ಕುಟುಂಬಗಳ ಗರ್ಭಿಣಿಯರನ್ನು ಮೊದಲೇ ಗೊತ್ತು ಮಾಡಿಕೊಂಡು ಅವರಿಗೆ ಹಣದ ಆಮಿಷ ಒಡ್ಡಿ, ಹೆರಿಗೆಯಾಗುತ್ತಿದ್ದಂತೆಯೇ ಮಗುವನ್ನು ಬೇರೆಯವರಿಗೆ ಮಾರಾಟ ಮಾಡುವ ಜಾಲ ಇದಾಗಿದೆ.ಐವಿಎಫ್‌ ನಂಥ ಕೃತಕ ಗರ್ಭಧಾರಣಾ ವಿಧಾನದ ಮೂಲಕವೂ ಮಕ್ಕಳನ್ನು ಸೃಷ್ಟಿಸಿ ಮಾರಾಟ ಮಾಡಲಾಗುತ್ತಿತ್ತು. ಪ್ರಕರಣದಲ್ಲಿ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಸುಹಾಸಿನಿ, ಶರಣ್ಯ, ಹೇಮಲತಾ, ಮಹಾಲಕ್ಷ್ಮಿ, ಗೋಮತಿ, ರಾಧಾಮಣಿ ಮೊದಲ ಹಂತದಲ್ಲಿ ಬಂಧಿತರಾದರೆ ಬಳಿಕ ಕೆವಿನ್‌ ಅಲಿಯಾಸ್‌ ಮತ್ತು ರಮ್ಯ ಎಂಬವರನ್ನು ಬಂಧಿಸಲಾಗಿತ್ತು.ಎರಡನೇ ಹಂತದಲ್ಲಿ ಸಿಕ್ಕಿಬಿದ್ದಿರುವ ಕೆವಿನ್‌ ಅಲಿಯಾಸ್‌ ಕರಣ್‌ ಒಬ್ಬ ನಕಲಿ ವೈದ್ಯ. ಅವನು ಓದಿದ್ದು ಬರೀ ಎಸ್‌ಎಸ್‌ಎಲ್‌ಸಿ. ಆದರೆ, ತಾನೊಬ್ಬ ಡಾಕ್ಟರ್‌ ಎಂದು ಪೋಸ್‌ ಕೊಟ್ಟು ಶಾಪ್‌ ಇಟ್ಟುಕೊಂಡಿದ್ದ. ಅವನ ಶೈಲಿ ನೋಡಿದರೆ ಥೇಟ್‌ ಮುನ್ನಾ ಭಾಯ್‌ ಎಂಬಿಬಿಎಸ್‌ ಥರಾನೇ ಇದ್ದಾನೆ.


ಡಾ. ಕೆವಿನ್‌ ಅಲಿಯಾಸ್‌ ಕರಣ್‌ನ ಶಾಪ್‌ ಇರುವುದು ರಾಜಾಜಿ ನಗರದಲ್ಲಿ. ಅವನು ಆ ಭಾಗದಲ್ಲಿ ದೊಡ್ಡ ಡಾಕ್ಟರ್‌ ನಂತೆ ಪೋಸು ಕೊಡುತ್ತಿದ್ದ. ಪೊಲೀಸರಿಗೆ ಆತನೂ ಹಸುಗೂಸು ಮಾರಾಟ ಜಾಲದಲ್ಲಿ ಭಾಗಿಯಾಗಿರುವ ಮಾಹಿತಿ ಸಿಗುತ್ತಿದ್ದಂತೆಯೇ ಆತನನ್ನು ಬಂಧಿಸಿದ್ದಾರೆ.


ವಿಚಾರಣೆಯ ವೇಳೆ ಆತನ ನಿಜವಾದ ಮುಖ ಬಯಲಾಗಿದೆ. ಅಸಲಿಗೆ ಅವನು ಎಂಬಿಬಿಎಸ್‌ ಓದೇ ಇಲ್ಲ. ನೀನು ಡಾಕ್ಟರ್‌ ಅಲ್ವಾ? ಎಲ್ಲಿದೆ ಸರ್ಟಿಫಿಕೇಟ್‌ ಎಂದು ಕೇಳಿದರೆ ಥರ್ಡ್‌ ಇಯರ್‌ ಆಗಿದೆ. ಈಗಲೂ ಕಲೀತಾ ಇದೇನೆ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ನಿಜವೆಂದರೆ, ಅವನು ಎಂಬಿಬಿಎಸ್‌ ಕಲಿತದ್ದೂ ಇಲ್ಲ, ವಿದ್ಯಾರ್ಥಿಯೂ ಅಲ್ಲ. ಅವನು ಓದಿದ್ದು ಬರೀ ಎಸ್‌ಎಸ್‌ಎಲ್‌ಸಿ ಮಾತ್ರ. ಅದೂ ಕೂಡಾ ಹೈಸ್ಕೂಲ್‌ಗೆ ಹೋಗಿ ಕಲಿತದ್ದೂ ಅಲ್ಲ ಅವನು ಓದಿದ್ದು ಬರೀ ಎಸ್‌ಎಸ್‌ಎಲ್‌ಸಿ ಮಾತ್ರ. ಅದೂ ಕೂಡಾ ಹೈಸ್ಕೂಲ್‌ಗೆ ಹೋಗಿ ಕಲಿತದ್ದೂ ಅಲ್ಲ. ಅವನು ಕರೆಸ್ಪಾಂಡೆನ್ಸ್‌ ನಲ್ಲಿ ಎಸ್ಸೆಸ್ಸೆಲ್ಸಿ ಮಾಡಿದ್ದು!


ಹಾಗಿದ್ದರೆ ಅವನು ಡಾಕ್ಟರ್‌ ಆಗಿದ್ದು ಹೇಗೆ?


ಎಸ್ಸೆಸ್ಸೆಲ್ಸಿಯನ್ನು ಹೇಗೋ ಪಾಸ್‌ ಮಾಡಿಕೊಂಡಿದ್ದ ಆತ ಬಳಿಕ ವಿಜಯನಗರದಲ್ಲಿ ಡಾಕ್ಟರ್ ಒಬ್ಬರ ಬಳಿ ಕಂಪೌಂಡರ್‌ ಕೆಲಸ ಮಾಡುತ್ತಿದ್ದ. ಈ ವೇಳೆ ಜ್ವರ ಕೆಮ್ಮು ನೆಗಡಿ, ಮೈ ಕೈ ನೋವು ಹೀಗೆ ಸಣ್ಣಪುಟ್ಟ ರೋಗಗಳಿಗೆ ಯಾವ ಮಾತ್ರೆ ನೀಡ್ತಾರೆ ಅಂತಾ ತಿಳ್ಕೊಂಡಿದ್ದ. ಅಸಲಿಗೆ ಡಾಕ್ಟರ್‌ ಬರೆದುಕೊಡುತ್ತಿದ್ದ ಮಾತ್ರೆಗಳನ್ನು ಇವನೇ ರೋಗಿಗಳಿಗೆ ನೀಡುತ್ತಿದ್ದ. ಬುದ್ಧಿವಂತನಾಗಿದ್ದ ಆತನಿಗೆ ಸಾಮಾನ್ಯ ಸಣ್ಣ ಪುಟ್ಟ ರೋಗಗಳಿಗೆ ಯಾವ ಔಷಧ ಕೊಡಬಹುದು ಎಂಬುದನ್ನು ನೋಡಿ ನೋಡಿಯೇ ಅರ್ಥ ಮಾಡಿಕೊಂಡಿದ್ದ.


ಅಲ್ಲಿ ಕೆಲಸ ಮಾಡಿಕೊಂಡಿದ್ದ ಆತ ಕೆಲವು ಸಮಯದಲ್ಲಿ ಕೆಲಸ ಬಿಟ್ಟಿದ್ದ. ಅಲ್ಲಿ ಕೆಲಸ ಬಿಟ್ಟವನೇ ನೇರವಾಗಿ ರಾಜಾಜಿ ನಗರದಲ್ಲಿ ಕ್ಲಿನಿಕ್ ಇಟ್ಟಿದ್ದ. ರೋಗಿಗಳು ಕೂಡಾ ನಿಜವಾದ ಡಾಕ್ಟರ್ ಇರಬಹುದು ಅಂತಾ ಚೆಕ್ ಮಾಡಿಸಿಕೊಳ್ತಿದ್ದರು.


ಕೇವಲ 100 ರೂ. ಪಡೆದು ಪರೀಕ್ಷೆ ಮಾಡಿ ಔಷಧ ಚೀಟಿ ಕೊಡುತ್ತಿದ್ದ ಆತನ ಬಗ್ಗೆ ಪ್ರದೇಶದಲ್ಲಿ ಒಳ್ಳೆಯ ಮಾತೇ ಇತ್ತು. ಯಾಕೆಂದರೆ, ಆತ ಕೊಡುತ್ತಿದ್ದುದು ಬರೀ ಜ್ವರ ಮತ್ತು ಶೀತಕ್ಕೆ ಮಾತ್ರ ಔಷಧ. ಮೈಕೈ ನೋವಿಗೆ ಪೇನ್‌ ಕಿಲ್ಲರ್‌ ಕೊಡ್ತಿದ್ದ.!


ಸಿಸಿಬಿ ವಿಚಾರಣೆಯಲ್ಲಿ ನಕಲಿ ಡಾಕ್ಟರ್ ನ ಅಸಲಿ ಮುಖ ಅನಾವರಣವಾಗಿದ್ದು, ಇದೀಗ ಆತನ ಬಂಧನದ ಜತೆಗೆ ಕ್ಲಿನಿಕ್‌ನ್ನು ಕೂಡಾ ಸೀಜ್‌ ಮಾಡಿದ್ದಾರೆ.

ನಾಸೀರ್ ತುಂಬೆ ಹೃದಯಾಘಾತದಿಂದ ನಿಧನ

Posted by Vidyamaana on 2023-10-28 17:15:24 |

Share: | | | | |


ನಾಸೀರ್ ತುಂಬೆ ಹೃದಯಾಘಾತದಿಂದ ನಿಧನ


ತುಂಬೆ :- ತುಂಬೆ ನಿವಾಸಿಯಾಗಿರುವ ಹಾಗೂ SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ರವರ ಸಹೋದರ ನಾಸೀರ್ ತುಂಬೆ ರವರು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಅ 28 ರಂದು ನಿಧನರಾದರು_*

ಮಾ. 24 : ವಿಟ್ಲದಲ್ಲಿ ಸೌಹಾರ್ದ ಬೃಹತ್ ಇಫ್ತಾರ್ ಕೂಟ

Posted by Vidyamaana on 2024-03-24 10:56:55 |

Share: | | | | |


ಮಾ. 24 : ವಿಟ್ಲದಲ್ಲಿ ಸೌಹಾರ್ದ ಬೃಹತ್ ಇಫ್ತಾರ್ ಕೂಟ

ವಿಟ್ಲ: ವಿ.ಫೌಂಡೇಶನ್ ವಿಟ್ಲ ವತಿಯಿಂದ ಮಾ. 24ರ ಭಾನುವಾರ ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ಬೃಹತ್ ಇಫ್ತಾರ್ ಕೂಟ ನಡೆಯಲಿದೆ. ಸುಮಾರು ಒಂದು ಸಾವಿರದಷ್ಟು ಮಂದಿಗೆ ಇಫ್ತಾರ್ ಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸರ್ವಧರ್ಮಿಯರಿಗೆ ಇಫ್ತಾರ್ ನಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ ಎಂದು ವಿ ಫೌಂಡೇಶನ್ ನ ಸಂಘಟಕರು ತಿಳಿಸಿದ್ದಾರೆ.

ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ವಿರುದ್ಧ ಫೊಕ್ಸೋ ಪ್ರಕರಣ ದಾಖಲಿಸಿದ್ದ ದೂರುದಾರೆ ಸಾವು!

Posted by Vidyamaana on 2024-05-27 14:28:13 |

Share: | | | | |


ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ವಿರುದ್ಧ ಫೊಕ್ಸೋ ಪ್ರಕರಣ ದಾಖಲಿಸಿದ್ದ ದೂರುದಾರೆ ಸಾವು!

ಬೆಂಗಳೂರು : ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ (BS Yediyurappa) ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ (Sexual Assault) ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದ ದೂರುದಾರೆ ಇಂದು ಸಾವನ್ನಪ್ಪಿದ್ದಾರೆ.ಕೆಲ ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವಿರುದ್ಧ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು.

ಎಸ್ ಡಿ ಪಿ ಐ ಕುರಿಯ ಬೂತ್ ಸಮೀತಿ ವತಿಯಿಂದ ರಂಝಾನ್ ಕಿಟ್ ವಿತರಣೆ

Posted by Vidyamaana on 2023-03-24 16:34:11 |

Share: | | | | |


ಎಸ್ ಡಿ ಪಿ ಐ ಕುರಿಯ ಬೂತ್ ಸಮೀತಿ ವತಿಯಿಂದ ರಂಝಾನ್ ಕಿಟ್ ವಿತರಣೆ

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುರಿಯ ಬೂತ್ ಸಮೀತಿ ವತಿಯಿಂದ ವರ್ಷಂಪ್ರತಿ ರಂಝಾನ್ ತಿಂಗಳಲ್ಲಿ ದಾನಿಗಳ‌ ನೆರವಿನಿಂದ ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ಗಳನ್ನು ನೀಡುತ್ತಿದ್ದು ಅದೇ ರೀತಿ ಈ ಬಾರಿ ಕೂಡ ಮಾ 24 ರಂದು ಶುಕ್ರವಾರ ಸುಮಾರು 120 ರಷ್ಟು ಆಹಾರ ಕಿಟ್ ಗಳನ್ನು ನೀಡಲಾಯಿತು..

 ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ SDPI ಪುತ್ತೂರು ವಿಧಾನಸಭಾ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಹಾಗೂ SDPI ಹಿರಿಯ ನಾಯಕರಾದ PBK ಮಹಮ್ಮದ್ ಹಾಗೂ ಆರ್ಯಾಪು ಚುನಾವಣಾ ಉಸ್ತುವಾರಿಯಾದ ಅಶ್ರಫ್ ಸಂಟ್ಯಾರ್ ರವರು ಆಗಮಿಸಿ, ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು...

ಹಾಜಿ ಇಬ್ರಾಹಿಂ ಸಾಗರ್ ಮಾತನಾಡಿ ಕುರಿಯ SDPI ಯ ಯುವಕರ ಈ ಉತ್ತಮ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.ಇಂತಹ ಮಾದರಿ ಕಾರ್ಯಗಳು ಹಾಗೂ ಸಾಮಾಜಿಕ ಸೇವೆಗಳು ತಾಲೂಕಿನ ‌ಪ್ರತಿಯೊಂದು ಕಡೆಗಳಲ್ಲಿ ಕೂಡ ನಡೆಯಬೇಕಿದೆ ಕುರಿಯದ ಎಸ್ಡಿಪಿಐ ಸದಸ್ಯರಿಗೆ ಹಾಗೂ ಕಿಟ್ ನೀಡಲು ಸಹಕಾರ ನೀಡಿದ ದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು...

ಈ ಸಂದರ್ಭದಲ್ಲಿ ಸ್ಥಳೀಯ ಎಸ್ಡಿಪಿಐ ಕಾರ್ಯಕರ್ತರಾದ ಅಶ್ರಫ್,ಝೈದ್, ಜಬ್ಬಾರ್ ಕುರಿಯ, ಜಬ್ಬಾರ್ ಅಜ್ಜಿಕಟ್ಟೆ, ಸಾದಿಕ್ ಕುರಿಯ , ಶಾಕಿರ್ ಮುಂಡೂರು,ನಿಝಾಂ ಪಂಜಳ, ಫಾರೂಕ್ ಎಸ್,,ರವುಫ್ ಕುರಿಯ,ಪವಾಝ್ ಕುರಿಯ  ಹಾಗೂ ಪಕ್ಷದ ಅಭಿಮಾನಿಗಳು ಹಾಗೂ, ಹಿತೈಷಿಗಳು ಉಪಸ್ಥಿತರಿದ್ದರು...

ದ.ಕ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿಲ್ಲ: ಜಿಲ್ಲಾಧಿಕಾರಿ

Posted by Vidyamaana on 2023-07-24 01:17:37 |

Share: | | | | |


ದ.ಕ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿಲ್ಲ: ಜಿಲ್ಲಾಧಿಕಾರಿ

ಮಂಗಳೂರು: ದ.ಕ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲಿನ್ ಹೇಳಿದ್ದಾರೆ.


ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ , ಪುತ್ತೂರು , ಬಂಟ್ವಾಳ, ಸುಳ್ಯ ತಾಲೂಕುಗಳಲ್ಲಿ ತಹಸೀಲ್ದಾರ್ ಹಂತದಲ್ಲಿ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ಆಯ್ದ ಶಾಲೆಗಳಿಗೆ ಸ್ಥಳೀಯವಾಗಿ ರಜೆ ಘೋಷಿಸಲು ಆಯಾ ತಾಲೂಕಿನ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.



Leave a Comment: