ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಸುಪ್ರೀಂ ಕೋರ್ಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿ

Posted by Vidyamaana on 2023-09-26 09:59:36 |

Share: | | | | |


ಸುಪ್ರೀಂ ಕೋರ್ಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿ

ನವದೆಹಲಿ: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಲ್ಲಿ ವಾಕ್ ಶ್ರವಣ ದೋಷವುಳ್ಳ ಮೂಕ ವಕೀಲೆಯೊಬ್ಬರು ಸಂಕೇತ ಭಾಷೆಯನ್ನು ಬಳಸುವ ಮೂಲಕ ವಾದ ಮಂಡಿಸಿದ್ದಾರೆ. ಈ ಮೂಲಕ ಹೊಸ ಇತಿಹಾಸವನ್ನು ದಾಖಲು ಮಾಡಲಾಗಿದೆ.ಹೌದು ಭಾರತದ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರಿದ್ದ ನ್ಯಾಯಪೀಠವು ವರ್ಚುವಲ್ ಆಗಿ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವೇಳೆ ಸಾರಾ ಸನ್ನಿ ಎಂಬ ಮೂಕ ವಕೀಲೆ ತಮ್ಮ ವ್ಯಾಖ್ಯಾನಕಾರ ಸೌರಭ್ ರಾಯ್ ಚೌಧರಿ ಮೂಲಕ ವಾದವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮುಂದೆ ಮಂಡಿಸಿದ್ದಾರೆ.ಸಾರಾ ಅವರ ಸಂಕೇತ ಭಾಷೆಯನ್ನು ಸೌರಭ್ ಅವರು ಬಾಯಿ ಮಾತಿನಲ್ಲಿ ಹೇಳುವ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ತಿಳಿಸಿಕೊಟ್ಟಿದ್ದಾರೆ. ಈ ಪ್ರಯತ್ನವನ್ನು ಅನೇಕ ಗಣ್ಯರು, ಹಿರಿಯ ವಕೀಲರು ಶ್ಲಾಘಿಸಿದ್ದಾರೆ.


ನಡೆದಿದ್ದೇನು.?


ಅರ್ಜಿಯೊಂದರ ವಿಚಾರಣೆಯ ಆರಂಭದ ವೇಳೆ ವರ್ಚುವಲ್ ವಿಚಾರಣೆಯ ತಾಂತ್ರಿಕ ತಂಡವು ಸಾರಾಗೆ ಸ್ಕ್ರೀನ್ ಮೇಲೆ ಬರಲು ಅನುತಿ ನೀಡದೇ ಕೇವಲ ವ್ಯಾಖ್ಯಾನಕಾರ ಸೌರಭ್ ಗೆ ಅನುಮತಿ ನೀಡಿತು. ಹೀಗಾಗಿ ಮೊದಲಿಗೆ ಸ್ಕ್ರೀನ್ ನಲ್ಲಿ ಸೌರಭ್ ಮಾತ್ರ ಕಾಣಿಸಿಕೊಂಡು ಸಾರಾ ತರೆಯ ಹಿಂದೆ ಸಂಜ್ಞೆಯ ಮೂಲಕ ಹೇಳುತ್ತಿದ್ದ ವಿವರವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಬಾಯಿ ಮಾತಿನ ಮೂಲಕ ತಿಳಿಸಿದರು.ಆಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರು, ವಕೀಲೆ ಸಾರಾ ಅವರಿಗೂ ಸ್ಕ್ರೀನ್ ಮೇಲೆ ಅವಕಾಶ ನೀಡಿ ಅಂತ ಆದೇಶಿಸಿದರು. ಆಗ ಸಾರಾ ಅವರು ಒಂದು ಸ್ಕ್ರೀನ್ ನಲ್ಲಿ ತಮ್ಮ ಸಂಜ್ಞೆ ವಾದವನ್ನು ಮಂಡಿಸಿದರು. ಅವರ ವ್ಯಾಖ್ಯಾನಕಾರ ಸೌರಭ್, ಅವರ ಸಂಜ್ಞೆಗಳನ್ನು ಬಾಯಿ ಮಾತಿನಲ್ಲಿ ನ್ಯಾಯಪೀಠದ ಗಮಕ್ಕೆ ತಿಳಿಸಿದರು.


ನ್ಯಾಯಮೂರ್ತಿ ಚಂದ್ರ ಚೂಡ ಅವರು ಮೊದಲಿನಿಂದಲೂ ನ್ಯಾಯಕ್ಕೆ ಸಮಾನ ನ್ಯಾಯದಾನ ಪ್ರತೀಕರಾಗಿದ್ದಾರೆ. ಇಬ್ಬರು ಅಂಗವಿಕಲ ಬಾಲಕಿಯರ ದತ್ತು ತಂದೆಯೂ ಹೌದು. ವರ್ಷಾರಂಭದಲ್ಲಿ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳ್ನು ತಮ್ಮ ಕಚೇರಿಗೆ ಪ್ರವಾಸಕ್ಕೆಂದು ಕರೆತಂದು ಎಲ್ಲರನ್ನು ಚಕಿತಗೊಳಿಸಿದ್ದರು.


ನ್ಯಾಯಾಲಯವು ಹೇಗೆ ಕೆಲಸ ಮಾಡುತ್ತದೆ. ಅಲ್ಲಿ ತಮ್ಮ ಕೆಲಸ ಏನು ಎಂಬುದನ್ನು ಅವರು ತಮ್ಮ ಹೆಣ್ಣುಮಕ್ಕಳಿಗೆ ವಿವರಿಸಿದ್ದರು. ಇಂತಹ ಅವರು ದೇಶದ ಇತಿಹಾಸದಲ್ಲಿಇದೇ ಮೊದಲು ಎನ್ನುವಂತೆ ಮೂಕ ವಕೀಲೆಯೊಬ್ಬರಿಗೆ ವಾದ ಮಂಡಿಸೋದಕ್ಕೆ ಅವಕಾಶ ಮಾಡಿಕೊಟ್ಟು, ಹೊಸ ಇತಿಹಾಸವನ್ನು ಇದೀಗ ಬರೆದಿದ್ದಾರೆ.

ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ

Posted by Vidyamaana on 2023-10-31 16:39:21 |

Share: | | | | |


ಮಿತ್ತೂರಿನಲ್ಲಿ ಭಾರತ್ ವೆಹಿಕಲ್ ಬಜಾರ್ ಶುಭಾರಂಭ

ಪುತ್ತೂರು: ಎಚ್.ಎಂ.ಎಸ್ ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್ ಅ.೩೦ರಂದು ಮಿತ್ತೂರಿನಲ್ಲಿ ಶುಭಾರಂಭಗೊಂಡಿತು.


ಸಂಸ್ಥೆಯ ಕಛೇರಿಯನ್ನು ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಯಾವುದೇ ವ್ಯವಹಾರದಲ್ಲಿ ಯಶಸ್ಸು ಕಾಣಬೇಕಾದರೆ ಪ್ರಾಮಾಣಿಕತೆ ಮುಖ್ಯ, ಪ್ರಾಮಾಣಿಕ ವ್ಯವಹಾರವನ್ನು ನಾವು ಮಾಡಿದಾಗ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತದೆ, ಜನರ ವಿಶ್ವಾಸವೇ ಉದ್ಯಮದ ಯಶಸ್ಸಿನ ಮೂಲ ಎಂದು ಅವರು ಹೇಳಿದರು.


ನಾವು ಮಾಡುವ ವ್ಯವಹಾರವನ್ನು ನಾವು ಪ್ರೀತಿಸಬೇಕು, ಆಗ ಆ ವ್ಯವಹಾರ ಯಶಸ್ಸು ಕಾಣುತ್ತದೆ ಎಂದು ಹೇಳಿದ ಶಾಸಕರು ಭಾರತ್ ವೆಹಿಕಲ್ ಬಜಾರ್ ಅತ್ಯುತ್ತಮ ವ್ಯವಹಾರದ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿದ ಸಂಸ್ಥೆಯಾಗಿ ಬೆಳಗಲಿ ಶುಭ ಹಾರೈಸಿದರು.

ಎಚ್.ಎಂ.ಎಸ್ ಗ್ರೂಪ್ ಬೆಂಗಳೂರು ಇದರ ಸುಭೋದ್ ಬಿ ಶೆಟ್ಟಿ ಮಾತನಾಡಿ ಭಾರತ್ ವೆಹಿಕಲ್ ಬಜಾರ್ ಮೂಲಕ ಉತ್ತಮ ವಿಶ್ವಾಸಾರ್ಹ ವ್ಯವಹಾರದ ಮೂಲಕ ವಾಹನಗಳ ಖರೀದಿ, ಮಾರಾಟ ವ್ಯವಹಾರ ನಡೆಯಲಿದ್ದು ಜನರು ಪೂರ್ಣ ವಿಶ್ವಾಸದೊಂದಿಗೆ ಇಲ್ಲಿ ವ್ಯವಹರಿಸಬಹುದಾಗಿದೆ ಎಂದು ಹೇಳಿ ಸಂಸ್ಥೆಗೆ ಶುಭ ಹಾರೈಸಿದರು.

ವಾಹನಗಳ ಮಾರಾಟ ಕೇಂದ್ರವನ್ನು ಉದ್ಘಾಟಿಸಿದ ಸಯ್ಯದ್ ಮಹಮ್ಮದ್ ಮಿಹ್ರಾಜ್ ಅಲ್ ಹಾದಿ ಅಲ್ ಅಶ್‌ಅರಿ ತಂಙಳ್ ಮಾತನಾಡಿ ವಿಶ್ವಾಸಾರ್ಹ ವ್ಯವಹಾರದ ಮೂಲಕ ಭಾರತ ವೆಹಿಕಲ್ ಬಜಾರ್ ಜನರ ಮೆಚ್ಚುಗೆ ಗಳಿಸಿದ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.

ಸರ್ವೀಸ್ ಘಟಕವನ್ನು ಉದ್ಘಾಟಿಸಿದ ತುಮಕೂರಿನ ಉದ್ಯಮಿ ಸುರೇಶ್ ಬಿ.ಎಸ್ ಮಾತನಾಡಿ ನೂತನವಾಗಿ ಶುಭಾರಂಭಗೊಂಡ ಭಾರತ್ ವೆಹಿಕಲ್ ಬಜಾರ್ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.


ನೆಟ್ಲಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಸಮಿತಾ ಡಿ ಪೂಜಾರಿ ಮಾತನಾಡಿ ಸೇವೆ, ವಿಶ್ವಾಸ, ವ್ಯವಹಾರ ಇದು ಉತ್ತಮವಾಗಿದ್ದಾಗ ಯಾವುದೇ ಸಂಸ್ಥೆ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.


ಪತ್ರಕರ್ತ ಲತೀಫ್ ನೇರಳಕಟ್ಟೆ ಮಾತನಾಡಿ ಭಾರತ್ ವೆಹಿಕಲ್ ಬಜಾರ್ ನಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಶುಭಾರಂಭಗೊಂಡಿರುವುದು ಅತೀವ ಸಂತಸ ತಂದಿದೆ. ಇದರ ಮಾಲಕರಾದ ಅಶ್ರಫ್ ಅವರು ವೆಹಿಕಲ್ ವ್ಯವಹಾರದಲ್ಲಿ ಈಗಾಗಲೇ ಛಾಪು ಮೂಡಿಸಿದ್ದು ಈ ಸಂಸ್ಥೆ ಯಶಸ್ಸು ಕಾಣಲಿದೆ ಎಂದು ಹೇಳಿ ಶುಭ ಹಾರೈಸಿದರು.

ಯುವ ಉದ್ಯಮಿ ಬಾತಿಷಾ ಅಳಕೆಮಜಲು ಮಾತನಾಡಿ ಭಾರತ್ ವೆಹಿಕಲ್ ಬಜಾರ್ ಪ್ರಾಮಾಣಿಕ ವ್ಯವಹಾರದ ಮೂಲಕ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.


ಸಂಸ್ಥೆಯ ಕಟ್ಟಡದ ಮಾಲಕ ಎ ವೆಂಕಪ್ಪ ನಾಯ್ಕ, ಕೊಡಾಜೆ ಮದ್ರಸದ ಅಧ್ಯಾಪಕ ಜಾಫರ್ ಸಾದಿಕ್ ಅರ್ಷದಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಎಚ್.ಎಂ.ಎಸ್ ಗ್ರೂಪ್‌ನ ಚೇರ್‌ಮೆನ್ ಹರೀಶ್ ಎಂ ಶೆಟ್ಟಿ ಮಾತನಾಡಿ ವ್ಯವಹಾರದಲ್ಲಿ ಹಣಕ್ಕಿಂತಲೂ ಹೆಚ್ಚಾಗಿ ವಿಶ್ವಾಸ ಮುಖ್ಯವಾಗಿದ್ದು ೨೦೦೬ರಲ್ಲಿ ಸಣ್ಣ ಮಟ್ಟಿನಲ್ಲಿ ಪ್ರಾರಂಭಿಸಿದ ನಮ್ಮ ಸಂಸ್ಥೆ ಜನರ ವಿಶ್ವಾಸ ಗಳಿಸಿದ ಸಂಸ್ಥೆಯಾಗಿದೆ. ಅಶ್ರಫ್ ಪುತ್ತೂರು ಮತ್ತು ನಮ್ಮದು ಆಕಸ್ಮಿಕ ಭೇಟಿಯಾಗಿದ್ದು ಅವರ ಆಲೋಚನೆಯಂತೆ ನಾವು ಗೂಡ್ಸ್ ಮತ್ತು ಕಾರು, ದ್ವಿಚಕ್ರ ವಾಹನಗಳ ಸೆಕೆಂಡ್ ಹ್ಯಾಂಡ್ ವೆಹಿಕಲ್ ಯಾರ್ಡ್ ಪ್ರಾರಂಭಿಸಿದ್ದೇವೆ. ನಾವು ಅಭಿವೃದ್ಧಿ ಆಗುವುದರ ಜೊತೆಗೆ ಗ್ರಾಹಕರು ಕೂಡಾ ಅಭಿವೃದ್ಧಿ ಕಾಣಬೇಕೆನ್ನುವುದು ನಮ್ಮ ಕನಸಾಗಿದ್ದು ಅದಕ್ಕೆ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದು ಹೇಳಿದರು.


ಖಾಝಿ ಝಯ್ನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಆಗಮಿಸಿ ಶುಭ ಹಾರೈಸಿದರು

ಗೌರವಾರ್ಪಣಾ ಕಾರ್ಯಕ್ರಮ

ಸಾನ್ವಿ ಇಂಜಿನಿಯರಿಂಗ್ ವರ್ಕ್ಸ್ ಕಬಕ ಇದರ ಮನೋಹರ ಶೆಟ್ಟಿ, ಪೈಂಟರ್ ಹರೀಶ್ ನಾಯ್ಕ ಹಾಗೂ ವಿನಾಯಕ ಬೆಸ್ಟ್ ಮಾರುತಿ ಪಾಯಿಂಟ್ ಕಬಕ ಇದರ ದಿನೇಶ್ ಪಿ ಅವರನ್ನು  ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಎಚ್.ಎಂ.ಎಸ್ ಗ್ರೂಪ್‌ನ ಚೇರ್‌ಮೆನ್, ಉದ್ಯಮಿ ಹರೀಶ್ ಎಂ ಶೆಟ್ಟಿ ಅವರನ್ನು ಇದೇ ವೇಳೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು


 


ಸಯ್ಯದ್ ಇಬ್ರಾಹಿಂ ಹಂಝ ತಂಙಳ್ ಪಾಟ್ರಕೋಡಿ ದುವಾ ನೆರವೇರಿಸಿದರು.


ವೇದಿಕೆಯಲ್ಲಿ ಶಾಂತ ಬಿ ಹರೀಶ್ ಶೆಟ್ಟಿ, ಕೊಡಾಜೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಡಾಜೆ(ರಾಜ್‌ಕಮಲ್), ಮಿತ್ತೂರು ಶುಭೋದಯ ಫ್ಯೂಯಲ್ಸ್‌ನ ಮಾಲಕ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲಾ ಕಾರ್ಯಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಹಾಗೂ ನ್ಯಾಯವಾದಿ ರಮಾನಾಥ ರೈ ಆಗಮಿಸಿ ಶುಭ ಹಾರೈಸಿದರು.


ಭಾರತ್ ವೆಹಿಕಲ್ ಬಜಾರ್‌ನ ಮಾಲಕ ಅಶ್ರಫ್ ಪುತ್ತೂರು ಅತಿಥಿಗಳನ್ನು ಸತ್ಕರಿಸಿ ಸ್ಮರಣಿಕೆ ನೀಡಿ ಗೌರವಿಸಿದರು.


ಯೂಸುಫ್ ರೆಂಜಲಾಡಿ ಸ್ವಾಗತಿಸಿದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು. ಆಸಿಫ್ ಕಲ್ಲಡ್ಕ, ಶರೀಫ್ ಮಿತ್ತೂರು ಬಡಾಜೆ, ಆಸಿಫ್ ಮಠ, ಅಬ್ದುಲ್ ಖಾದರ್ ಕಬಕ ಸಹಕರಿಸಿದರು.

ಮೂರು ವಾಹನಗಳ ಮಾರಾಟ:

ಶುಭಾರಂಭ ದಿನದಂದೇ ಮೂರು ವಾಹನಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಯಿತು. ಖರೀದಿಸಿದ ಮೂವರಿಗೂ ಗಿಫ್ಟ್ ನೀಡಿ ಗೌರವಿಸಲಾಯಿತು

ಸುಳ್ಯ; ಖ್ಯಾತ ಐಸ್ ಕ್ರೀಂ ಉದ್ಯಮಿ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಐಶ್ವರ್ಯ ಆತ್ಮಹತ್ಯೆಗೆ ಶರಣು

Posted by Vidyamaana on 2023-10-27 12:05:25 |

Share: | | | | |


ಸುಳ್ಯ; ಖ್ಯಾತ ಐಸ್ ಕ್ರೀಂ ಉದ್ಯಮಿ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಐಶ್ವರ್ಯ ಆತ್ಮಹತ್ಯೆಗೆ ಶರಣು

ಸುಳ್ಯ ;ಡೈರಿ ರಿಚ್ ಐಸ್ ಕ್ರೀಂನ ಉದ್ಯಮಿ ಕನಕಮಜಲಿನ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಿರಿಯಪ್ಪ ಗೌಡ ಅವರ ಪುತ್ರ ರಾಜೇಶ್ ಇವರ ಪತ್ನಿ ಐಶ್ವರ್ಯ(26) ಆತ್ಮಹತ್ಯೆಗೆ ಶರಣಾದವರು.


ಉಬರಡ್ಕ ಮಿತ್ತೂರು ಗ್ರಾಮದ ಮದುವೆಗದ್ದೆ ಸುಬ್ರಹ್ಮಣ್ಯ ಗೌಡ ಹಾಗೂ ಉಷಾ ದಂಪತಿಯ ಪುತ್ರಿಯಾದ ಐಶ್ವರ್ಯ ನಾಲ್ಕು ವರ್ಷಗಳ ಹಿಂದೆ ರಾಜೇಶ್ ಅವರನ್ನು ವಿವಾಹವಾಗಿದ್ದರು. ಐಶ್ವರ್ಯ ರವರು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಪತಿ ರಾಜೇಶ್ ಸ್ವಂತ ಐಸ್ ಕ್ರೀಮ್ ಪಾರ್ಲರ್ ನಡೆಸಿಕೊಂಡು ಬೆಂಗಳೂರಿನಲ್ಲೇ ವಾಸವಾಗಿದ್ದರು.


ಐಶ್ವರ್ಯಳ ತಂದೆ ತಾಯಿ ಕೊಡ ಬೆಂಗಳೂರಿನಲ್ಲೇ ನೆಲೆಸಿದ್ದು, ಕೆಲ ಸಮಯಗಳಿಂದ ಐಶ್ವರ್ಯ ತನ್ನ ತಾಯಿ ಮನೆಗೆ ಬಂದಿದ್ದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಸುದ್ದಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Posted by Vidyamaana on 2023-08-19 15:35:23 |

Share: | | | | |


ಸುದ್ದಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಪುತ್ತೂರು: ಸುದ್ದಿ ಸೌಹಾರ್ದ ಸಹಕಾರಿ ಸಂಘ ವರದಿ ವರ್ಷದಲ್ಲಿ 41.65 ಕೋಟಿ ರೂ. ವ್ಯವಹಾರ ನಡೆಸಿದ್ದು, ಕಳೆದ ವರ್ಷಕ್ಕಿಂತ ಶೇ.23.40ರಷ್ಟು ಹೆಚ್ಚಳವನ್ನು ಸಾಧಿಸಿದೆ. ಇದರ ಜೊತೆಗೆ ಸಂಘವು ವರದಿ ವರ್ಷದಲ್ಲಿ ಒಟ್ಟು 38,41,294 ರೂ.ನಷ್ಟು ನಿವ್ವಳ ಲಾಭವನ್ನು ಗಳಿಸಿಕೊಂಡಿದ್ದು, ಶೇ. 11 ಡಿವಿಡೆಂಡ್ ನೀಡುವ ಘೋಷಣೆ ಮಾಡಲಾಗಿದೆ.

ಸಂಘದ ಅಧ್ಯಕ್ಷ ಡಾ. ಯು.ಪಿ.ಶಿವಾನಂದ ಅವರ ಅಧ್ಯಕ್ಷತೆಯಲ್ಲಿ ಆ.19ರಂದು ಪುತ್ತೂರು ಲಯನ್ಸ್ ಕ್ಲಬ್ ಸಭಾಭವನದಲ್ಲಿ ಸಂಘದ 8ನೇ ವಾರ್ಷಿಕ ಮಹಾಸಭೆ ಜರಗಿತು.

ಎಲ್ಲಾ ಸದಸ್ಯರ ಹಿತ ಕಾಪಾಡಲು ಪ್ರಯತ್ನ:

ಅಧ್ಯಕ್ಷತೆ ವಹಿಸಿದ್ದ ಸುದ್ದಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಡಾ. ಯು.ಪಿ.ಶಿವಾನಂದ ಅವರು ಮಾತನಾಡಿ ಕೇವಲ ಆರ್ಥಿಕ ವಿಚಾರಕ್ಕೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಕ್ಕೂ ಮುಂದಡಿ ಇಡಲಿದ್ದೇವೆ. ಸಂಘದ ಸದಸ್ಯರು ಉತ್ತಮ ಸಾಧನೆ ಮಾಡಿದಲ್ಲಿ ಮತ್ತು ಅವರ ಸಬಲೀಕರಣಕ್ಕೆ ವಿಶೇಷ ಕಾರ್ಯಕ್ರಮ, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸದ್ಯರಿಗೆ ಕ್ರೀಡೆ ಸಹಿತ ವಿವಿಧ ಕಾರ್ಯಕ್ರಮ ಮಾಡುವ ಮೂಲಕ ಸುದ್ದಿಯ ಸೌಹಾರ್ದ ಸದಸ್ಯರ ಕೂಟ ಮಾಡುವ ಕುರಿತು ಚಿಂತನೆ ಮಾಡುವ ಮೂಲಕ ಎಲ್ಲಾ ಸದಸ್ಯರ ಹಿತ ಕಾಪಾಡಲು ಪ್ರಯತ್ನ ಮಾಡಲಾಗುವುದು ಎಂದ ಅವರು ಸಾಮಾಜಿಕ ಬದಲಾವಣೆಯಾಗಿ ಭ್ರಷ್ಟಾಚಾರದ ವಿರೋಧ ಆಂದೋಲನ, ಬಂದ್, ರಸ್ತೆ ತಡೆಗಳ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ ಎಂದರು.

ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಅವರು ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು. 

ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಯಂ.ನರೇಂದ್ರರವರು 2022-23 ನೇ ಸಾಲಿನ ಆಡಳಿತ ಮಂಡಳಿಯ ವರದಿ ಮಂಡನೆ ಮಾಡಿದರು.ಸಹಕಾರಿಯು ವರ್ಷಾಂತ್ಯಕ್ಕೆ ಎ ತರಗತಿಯ 2848 ಮಂದಿ ಸದಸ್ಯರನ್ನು ಹೊಂದಿದ್ದು ರೂ 56,12,300 ಪಾಲು ಬಂಡವಾಳವನ್ನು ಹೊಂದಿದೆ. ರೂ.9,77,22,300 ಒಟ್ಟು ಠೇವಣಾತಿಗಳನ್ನು ಹೊಂದಿದ್ದು ಕಳೆದ ವರ್ಷಕ್ಕಿಂತ ಶೇ.29 ರಷ್ಟು ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗಿದೆ. ಸಂಘವು ನಿರಖು ಠೇವಣಾತಿಗಳಿಗೆ ಒಂದು ವರ್ಷದ ಅವಧಿಗೆ ಶೇ. 9 ಹಾಗೂ ಹಿರಿಯ ನಾಗರಿಕರಿಗೆ ಶೇ. 0.5 ಹೆಚ್ಚು ಬಡ್ಡಿ ನೀಡಲಾಗುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ಯು.ಪಿ. ರಾಮಕೃಷ್ಣ, ನಿರ್ದೇಶಕರುಗಳಾದ ಡಾ| ಜೆ.ಸಿ ಅಡಿಗ, ಜೋಹರಾ ನಿಸಾರ್ ಅಹಮ್ಮದ್, ಎ.ವಿ ನಾರಾಯಣ, ಹರೀಶ್ ಬಂಟ್ವಾಳ, ಮೋಹನ್ ರೈ ಕೆ.ಎಂ, ರಾಜೇಶ್ ಎಂ.ಎಸ್, ಸಿ.ಶೇಷಪ್ಪ ಕಜೆಮಾರ್, ಪಾರೂಕ್ ಶೇಖ್, ಈಶ್ವರ ವಾರಣಾಸಿ ಉಪಸ್ಥಿತರಿದ್ದರು. ಸಹಕಾರಿಯ ನಿರ್ದೇಶಕ ಎನ್.ಕೆ ಜಗನ್ನಿವಾಸ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

 ನಿತ್ಯ ನಿಧಿ ಸಂಗ್ರಾಹಕ ಕೆ.ಸುಬ್ರಹ್ಮಣ್ಯ ಪ್ರಾರ್ಥಿಸಿದರು. ನಿರ್ದೇಶಕಿ ಸ್ವಾತಿ ಮಲ್ಲಾರ, ವಂದಿಸಿದರು. ಸುದ್ದಿ ಚಾನೆಲ್‌ನ ಆಂಕರ್ ಗೌತಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳಾದ ಕೆ.ಅನಂತರಾಮ, ಅಶ್ವಿನಿ ಎನ್.ಎಸ್, ನಿತ್ಯನಿಧಿ ಸಂಗ್ರಾಹಕರಾದ ಸತೀಶ್ ಪ್ರಭು, ಶ್ರೀಧರ್, ಶಿವರಾಮ ಅಮೈ, ಸುಳ್ಯ ಶಾಖೆಯ ವ್ಯವಸ್ಥಾಪಕ ಚೇತನ್ ಎ.ವಿ, ಅನ್ವಿತಾ, ಪಿಗ್ನಿ ಸಂಗ್ರಹಕರಾದ ಪವಿತ್ರ ಸಹಕರಿಸಿದ್ದರು

ಲೀಲಣ್ಣೆ ದಾಯೆ ಇಂಚ ಮಲ್ತೊಂಡೆರ್..? ಎಲ್ಲರಲ್ಲೂ ಇದೊಂದೇ ಪ್ರಶ್ನೆ

Posted by Vidyamaana on 2023-12-15 08:30:29 |

Share: | | | | |


ಲೀಲಣ್ಣೆ ದಾಯೆ ಇಂಚ ಮಲ್ತೊಂಡೆರ್..? ಎಲ್ಲರಲ್ಲೂ ಇದೊಂದೇ ಪ್ರಶ್ನೆ

ಉಡುಪಿ: ಹೆಸರಾಂತ ರಂಗಕರ್ಮಿ, ಸಮಾಜ ಸೇವಕರಾಗಿದ್ದ ಕಾಪು ಲೀಲಾಧರ ಶೆಟ್ಟಿ (68) ತಮ್ಮ ಪತ್ನಿ ವಸುಂಧರಾ ಶೆಟ್ಟಿ(58) ಜೊತೆಗೆ ದಿಢೀರ್ ಸಾವಿಗೆ ಶರಣಾಗಿರುವುದಕ್ಕೆ ಕಾಪು ಭಾಗದಲ್ಲಿ ಮತ ಭೇದ ಇಲ್ಲದೆ ಜನಸಾಮಾನ್ಯರು ಕಣ್ಣೀರು ಸುರಿಸಿದ್ದಾರೆ. ಜನರ ಜೊತೆಗೆ ಲೀಲಾಧರ ಶೆಟ್ಟಿ ಎಷ್ಟು ಬಾಂಧವ್ಯ ಇಟ್ಟುಕೊಂಡಿದ್ದರು ಎನ್ನುವುದಕ್ಕೆ ಬುಧವಾರ ಸಂಜೆ ಅಂತ್ಯಕ್ರಿಯೆ ಸಂದರ್ಭದಲ್ಲಿ ಸೇರಿದ ಜನಸ್ತೋಮವೇ ಸಾಕ್ಷಿ.


ಇಬ್ಬರ ಮೃತದೇಹಗಳನ್ನೂ ತೆರೆದ ವಾಹನದಲ್ಲಿರಿಸಿ ಕಾಪು ಪೇಟೆಯಿಂದ ಮೆರವಣಿಗೆ ಮೂಲಕ ತಂದು ಕರಂದಾಡಿಯ ಶ್ರೀರಾಮ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಮೆರವಣಿಗೆ ಉದ್ದಕ್ಕೂ ಸಾವಿರಾರು ಮಂದಿ ಸೇರಿದ್ದಲ್ಲದೆ, ಎಲ್ಲರೂ ಕಣ್ಣಲ್ಲಿ ನೀರು ಸುರಿಸಿಕೊಂಡೇ ಹೆಜ್ಜೆ ಹಾಕಿದರು. ಕಾಪು ಪೇಟೆಯಲ್ಲಿ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ಮುಚ್ಚಿ ಗೌರವ ಸೂಚಿಸಿದರು. ಇಡೀ ಕಾಪು ಪೇಟೆಯೇ ಸ್ಮಶಾನ ಮೌನಕ್ಕೆ ಜಾರಿತ್ತು. ಬಳಿಕ ಕರಂದಾಡಿಯ ಮನೆಯ ಆವರಣದಲ್ಲಿ ಲೀಲಾಧರ ಶೆಟ್ಟಿ ದಂಪತಿ ಶವಗಳನ್ನು ಒಂದೇ ಚಿತೆಯಲ್ಲಿಟ್ಟು ಅಗ್ನಿಸ್ಪರ್ಶ ಮಾಡಲಾಯಿತು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಲಾಲಾಜಿ ಮೆಂಡನ್, ಐಕಳ ಹರೀಶ್ ಶೆಟ್ಟಿ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದ್ದರು.ಮರ್ಯಾದೆಗೆ ಅಂಜಿ ಸಾವಿಗೆ ಶರಣು


ಲೀಲಾಧರ ಶೆಟ್ಟಿ ಸಾವಿನ ಸುದ್ದಿ ಬರುತ್ತಲೇ, ದಿಢೀರ್ ಯಾಕೆ ಈ ರೀತಿ ಮಾಡಿಕೊಂಡರು, ಅವರು ಆತ್ಮಹತ್ಯೆ ಮಾಡಿಕೊಳ್ಳುವ ಜನವೇ ಅಲ್ಲ ಅನ್ನುವುದೇ ಎಲ್ಲರ ಮಾತಾಗಿತ್ತು. ಯಾಕಂದ್ರೆ, ಸಾವಿನ ದಾರಿ ಹಿಡಿದ ಹಲವಾರು ಮಂದಿಗೆ ಲೀಲಾಧರ ಶೆಟ್ಟಿ ಅವರೇ ದಿಕ್ಕು ತೋರಿಸಿದ್ದರು. ಎಷ್ಟೋ ಮಂದಿಗೆ ಉದ್ಯೋಗ, ಸಹಾಯ ಒದಗಿಸಿ ಜನರ ಪಾಲಿಗೆ ಕರುಣಾಮಯಿ ಆಗಿದ್ದರು. ಜಾತಿ ಭೇದ ಇಲ್ಲದೆ, ಸಮಾಜದಲ್ಲಿ ಸೇವೆಯನ್ನೇ ವೃಥವನ್ನಾಗಿಸಿಕೊಂಡಿದ್ದರು. ಈಗ ತಿಳಿದುಬರುತ್ತಿರುವ ಮಾಹಿತಿ ಪ್ರಕಾರ, ಲೀಲಾಧರ ಶೆಟ್ಟಿ ದಂಪತಿ ತಮ್ಮ ಸಾವಿನ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ತಮ್ಮ ಮರ್ಯಾದೆ ಹೋದ ಕಾರಣಕ್ಕೆ ಇಂತಹ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ.   ಇದೇ ವಿಚಾರದಲ್ಲಿ ಲೀಲಾಧರ ಶೆಟ್ಟಿ ಅವರ ಅಕ್ಕನ ಮಗ ಮೋಹನ್ ಕುಮಾರ್ ಶೆಟ್ಟಿ ಕಾಪು ಠಾಣೆಗೆ ನೀಡಿರುವ ದೂರಿನಲ್ಲಿ ಮಾಹಿತಿಗಳನ್ನು ಉಲ್ಲೇಖಿಸಿದ್ದಾರೆ. ಲೀಲಾಧರ ಶೆಟ್ಟಿ ದಂಪತಿ ಮಕ್ಕಳಿಲ್ಲದ ಕಾರಣ 16 ವರ್ಷಗಳ ಹಿಂದೆ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದರು. ಬೆಳೆದು ದೊಡ್ಡವಳಾಗಿದ್ದ ಆಕೆ ಪಿಯುಸಿ ಓದುತ್ತಿದ್ದಳು. ಇತ್ತೀಚೆಗೆ ಮನೆಯ ದುರಸ್ತಿ ಕಾರ್ಯಕ್ಕೆ ತಮಿಳುನಾಡು ಮೂಲದ ಯುವಕನೊಬ್ಬ ಬಂದಿದ್ದು ಆತನ ಜೊತೆಗೆ ಯುವತಿಗೆ ಪ್ರೀತಿಯಾಗಿತ್ತು. ಎರಡು ದಿನಗಳ ಹಿಂದೆ ಆಕೆ ಮನೆ ಬಿಟ್ಟು ಹೋಗಿದ್ದು, ತನ್ನನ್ನು ಹುಡುಕುವುದು ಬೇಡ. ತನ್ನ ಸ್ವಇಚ್ಛೆಯಿಂದ ತೆರಳುತ್ತಿರುವುದಾಗಿ ಪತ್ರ ಬರೆದಿಟ್ಟಿದ್ದಳು. ಆಕೆ, ತಮಿಳುನಾಡಿನ ಯುವಕನ ಜೊತೆಗೆ ತೆರಳಿರುವ ಶಂಕೆ ಇದೆ. ಮಗಳು ನಾಪತ್ತೆಯಾದ ಬಗ್ಗೆ ಲೀಲಾಧರ ಶೆಟ್ಟಿ ದಂಪತಿ ಹುಡುಕಾಡಿದ್ದು, ಸಿಗದೇ ಇದ್ದಾಗ ಮಾನಸಿಕವಾಗಿ ಕುಗ್ಗಿದ್ದರಿಂದ ಬದುಕು ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.


ದತ್ತು ಪುತ್ರಿ ಮನೆ ಬಿಟ್ಟು ಹೋಗಿದ್ದರಿಂದ ಮರ್ಯಾದೆಗೆ ಅಂಜಿ, ಸಮಾಜಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾವಿನಲ್ಲಿ ಬೇರೆ ಯಾವುದೇ ಸಂಶಯಗಳಿಲ್ಲ ಎಂದು ಮೋಹನ್ ಕುಮಾರ್ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. ಯುವತಿ ಕಾಣೆಯಾದ ಬಗ್ಗೆ ಮತ್ತು ದಂಪತಿ ಆತ್ಮಹತ್ಯೆ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಝಾಕ್ ಬಿ.ಎಚ್ ನೇತೃತ್ವದಲ್ಲಿ ನಡೆಯುವ ಅಮರ್ ಅಕ್ಟರ್ ಅಂತೋನಿ ಟ್ರೋಫಿ ಉದ್ಘಾಟನೆ

Posted by Vidyamaana on 2023-12-21 12:24:54 |

Share: | | | | |


ರಝಾಕ್ ಬಿ.ಎಚ್ ನೇತೃತ್ವದಲ್ಲಿ ನಡೆಯುವ ಅಮರ್ ಅಕ್ಟರ್ ಅಂತೋನಿ ಟ್ರೋಫಿ ಉದ್ಘಾಟನೆ

ಪುತ್ತೂರು: ಜಾತಿ-ಜಾತಿ ಮಧ್ಯೆ ಸೌಹಾರ್ದತೆಯ ಸಾಮರಸ್ಯ ಮೂಡಿಸುವ ಅಮರ್ ಅಕ್ಟ‌ರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ-2023 ಡಿ.19 ರಿಂದ 24ರ ತನಕ ಆರು ದಿನಗಳ ಕಾಲ ಕಿಲ್ಲೆ ಮೈದಾನದಲ್ಲಿ ಜರಗಲಿದ್ದು, ಈ ಕ್ರೀಡಾಕೂಟದ ಉದ್ಘಾಟನೆಯು ಡಿ.19 ರಂದು ಸಂಜೆ ನೆರವೇರಿತು.



ಸಿಟಿ ಫ್ರೆಂಡ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು, ಟೆನ್ ಗೈಯ್ಸ್ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಅಬುಧಾಬಿ, ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು, ಸೌದಿ ಅರೇಬಿಯಾ, ತುಳುನಾಡು ಫ್ರೆಂಡ್ಸ್ ಸೌದಿ ಅರೇಬಿಯಾ ಇವುಗಳ ಜಂಟಿ ಆಶ್ರಯದಲ್ಲಿ ಜರಗಲಿರುವ 11 ಜನರ ಅಂಡರ್ ಆರ್ಮ್ ಈ ಕ್ರಿಕೆಟ್ ಪಂದ್ಯಾಟಕ್ಕೆ ಪ್ರಸ್ತುತ 13ನೇ ವರ್ಷವಾಗಿದ್ದು ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಆಂಜನೇಯ ರೆಡ್ಡಿರವರು ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್, ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಮುಖ್ಯಸ್ಥ ಚೇತನ್ ಕಜೆ, ಬಾಂಧವ್ಯ ಟ್ರೋಫಿಯ ಸಂಯೋಜಕರಾದ ಸ್ಕರಿಯ ಯಂ ಎ - ಫಾರೂಕ್ ಶೇಖ್ , ಭರತ್ ಪ್ರಿಂಟರ್ಸ್ ನ ಭರತ್ ಕುಮಾರ್, ಪಿಪಿಎಲ್ ಆಯೋಜಕರಾದ ಭಾನುಪ್ರಕಾಶ್, ಸಾದಿಕ್ ಬಪ್ಪಳಿಗೆ, ಇಸ್ಮಾಯಿಲ್ ಎಂ.ಬಿ ಬಲ್ನಾಡು, ಜನತಾ ಸ್ಟೇಲ್ ಬಜಾರ್ ಆಶಿಕ್, ಶಾಫಿ ಮುಹಾದ್, ಅಬ್ಬಾಸ್ ಮದರ್ ಇಂಡಿಯ, ಇಬ್ರಾಹಿಂ ಇಬ್ಬ ಸಂಘಟಕ ಅರುಣ್ ಬಪ್ಪಳಿಗೆ ಸಾದಿಕ್ ಸಹಿತ ಹಲವರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಎಸ್.ಐ ಆಂಜನೇಯ ರೆಡ್ಡಿ, ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹ‌ರ್, ಧನ್ವಂತರಿ ಕ್ಲಿನಿಕಲ್‌ ಲ್ಯಾಬೋರೇಟರಿ ಮುಖ್ಯಸ್ಥ ಚೇತನ್ ಕಜೆ, ಬಾಂಧವ್ಯ ಟ್ರೋಫಿಯ ಸಂಯೋಜಕರಾದ ಸ್ಕರಿಯ ಯಂ ಎ ಹಾಗೂ ಫಾರೂಕ್ ಶೇಖ್ , ಭರತ್ ಪ್ರಿಂಟರ್ಸ್ ನ ಭರತ್ ಗೌಡ, ಕೇಬಲ್ ಆಪರೇಟರ್ ಪ್ರವೀಣ್ ಪ್ರಭು, ಇತ್ತೀಚೆಗೆ ಕಥೋಲಿಕ್ ಸಭಾ ಮಂಗಳೂರು ಇವರಿಂದ ಮಂಗಳೂರಿನ ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ.ಡಾ.ಪೀಟರ್ ಪಾವ್‌ ಸಲ್ದಾನ್ಹಾರವರಿಂದ ಸನ್ಮಾನಿತರಾದ ಪತ್ರಕರ್ತ ಸುದ್ದಿ ಬಿಡುಗಡೆಯ ವರದಿಗಾರ ಸಂತೋಷ್ ಮೊಟ್ಟೆತ್ತಡ್ಕರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.


ಪಂದ್ಯಾಕೂಟದಲ್ಲಿ ಹಳ್ಳಿ ಹುಡುಗ್ರು ಪೇಟೆ ಕಪ್ ಹೆಸರಿನಲ್ಲಿ 60 ತಂಡಗಳು, ಅಮರ್ ಅಕ್ಟರ್ ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿಗೆ 24 ತಂಡಗಳು, ಸ್ನೇಹ ಸೌಹಾರ್ದ ಟ್ರೋಫಿ ಹೆಸರಿನಲ್ಲಿ ವಿವಿಧ ಇಲಾಖೆಗಳ 12 ಕ್ರಿಕೆಟ್ ತಂಡಗಳು, ಕಿಲ್ಲೆ ಕಪ್‌ನಲ್ಲಿ 4 ತಂಡಗಳು ತೀವ್ರ ಹಣಾಹಣಿ ನಡೆಸಲಿದೆ.


ರಝಾಕ್ ಬಿ.ಎಚ್ ನೇತೃತ್ವದಲ್ಲಿ ನಡೆಯುವ ಈ ಕ್ರೀಡಾಕೂಟದಲ್ಲಿ ಪುತ್ತೂರಿನ ವೈದ್ಯರುಗಳು, ಪೊಲೀಸ್ ಇಲಾಖೆ,ಸುದ್ದಿ ಪುತ್ತೂರು ವಕೀಲರು, ಮೆಸ್ಕಾಂ ಉದ್ಯೋಗಿಗಳು, ಬ್ಯಾಂಕ್ ಉದ್ಯೋಗಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ಭಾಗವಹಿಸುತ್ತಿದ್ದಾರೆ.



Leave a Comment: