ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ಸುದ್ದಿಗಳು News

Posted by vidyamaana on 2024-07-03 10:25:40 |

Share: | | | | |


ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ವಿಜಯಪುರ: ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ಇನ್ನು, ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದ್ದು ಇಬ್ಬರ ಇಬ್ಬರ ಮೃತದೇಹ ಸಿಕ್ಕಿದೆ.

ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಸಾವನ್ನಪ್ಪಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಂಟು ಜನ ಕೊಲ್ಹಾರ ಪಟ್ಟಣದವರಾಗಿದ್ದು, ನೀರುಪಾಲಾದವರು ದಶರಥ( 58),ಮೈಬೂಬ್ ವಾಲಿಕಾರ (35), ರಫೀಕ್ ಬಾಂಬೆ ,(40), ರಫೀಕ ಜಾಲಗಾರರಿಗಾಗಿ(48) ಹುಡುಕಾಟ ನಡೆಯುತ್ತಿದೆ.

 Share: | | | | |


ಲೋಕಾಯುಕ್ತ ಕೇಸ್ ನಲ್ಲಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಬಂಧನ

Posted by Vidyamaana on 2023-03-27 15:03:02 |

Share: | | | | |


ಲೋಕಾಯುಕ್ತ ಕೇಸ್ ನಲ್ಲಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಬಂಧನ

ಬೆಂಗಳೂರು: ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದಂತ ವೇಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ರೆಡ್ ಹ್ಯಾಂಡ್ ಆಗಿಯೇ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಪುತ್ರ ಹಾಗೂ ಶಾಸಕರ ವಿರುದ್ಧ ದೂರು ದಾಖಲಾಗಿತ್ತು. ಬಂಧನದ ಭೀತಿಯಲ್ಲಿದ್ದಂತ ಅವರು ನಿರೀಕ್ಷಣಾ ಜಾಮೀನು ಪಡೆದಿದ್ದರು. ಇಂದು ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡ ಬೆನ್ನಲ್ಲೇ, ಲೋಕಾಯುಕ್ತ ಪೊಲೀಸರಿಂದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಲಾಗಿದೆ.

ಲೋಕಾಯುಕ್ತ ಕೇಸ್ ನಲ್ಲಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದಂತ ಹೈಕೋರ್ಟ್ ನಡೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರಬರೆದು ಬೆಂಗಳೂರು ವಕೀಲರ ಸಂಘವು ಆಘಾತ ವ್ಯಕ್ತ ಪಡಿಸಿತ್ತು.ಇಂದು ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಅವಧಿ ಕೊನೆಗೊಂಡಿದ್ದ ಕಾರಣ ಮತ್ತೆ ಜಾಮೀನು ಮುಂದುವರೆಸಲು ಮನವಿ ಮಾಡಲಾಗಿತ್ತು. ಆದ್ರೆ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠವು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದರು. ಅವರು ಚೆನ್ನಗಿರಿಯಿಂದಲೇ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಅರಿತಂತ ಲೋಕಾಯುಕ್ತ ಪೊಲೀಸರು ಮಾರ್ಗ ಮಧ್ಯೆ ಅವರನ್ನು ಪ್ರಕರಣ ಸಂಬಂಧ ಬಂಧಿಸಿದ್ದಾರೆ ಎನ್ನಲಾಗಿದೆ.

ಮಹಿಳೆಯರೇ ಗಮನಿಸಿ: ಗೃಹಲಕ್ಷ್ಮಿ ಯೋಜನೆಯ ಮತ್ತೊಂದು ಅಪ್ಡೇಟ್ : ಮಿಸ್‌ ಮಾಡ್ದೇ ಓದಿ!

Posted by Vidyamaana on 2024-03-08 12:49:54 |

Share: | | | | |


ಮಹಿಳೆಯರೇ ಗಮನಿಸಿ: ಗೃಹಲಕ್ಷ್ಮಿ ಯೋಜನೆಯ ಮತ್ತೊಂದು ಅಪ್ಡೇಟ್ : ಮಿಸ್‌ ಮಾಡ್ದೇ ಓದಿ!

ಬೆಂಗಳೂರು : ಮಹಿಳೆಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಗೃಹಲಕ್ಷ್ಮಿ ಯೋಜನೆಯ ಇನ್ನೊಂದು ಬಿಗ್ ಅಪ್ಡೇಟ್ ಸುದ್ದಿ ಮಿಸ್ ಏನಾಪ್ಪಾ ಅಂದ್ರೆ ಗೃಹ ಲಕ್ಷ್ಮಿ ಯೋಜನೆಯ ಹಣ ಯಾರ ಖಾತೆಗೆ ಜಮಾ ಆಗುತ್ತಿಲ್ಲವೋ ಅವರ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂತವರಿಗೆ ಅಂಚೆ ಇಲಾಖೆಯಲ್ಲಿ ಖಾತೆ ತೆರೆಸಿ ಆ ಖಾತೆಗೆ ಹಣ ಜಮಾ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇನ್ನು ಗೃಹಿಣಿಯ ಸಮಸ್ಯೆಯ ಪರಿಹಾರಕ್ಕೆ ಅಧಿಕಾರಿಗಳನ್ನು ನೇಮಿಸಿರುವುದರ ಜೊತೆಗೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರು ಗೃಹಿಣಿಯರ ಜೊತೆ ನಿಂತು ಅವರ ಸಮಸ್ಯೆ ನಿವಾರಿಸಿ ಹಣ ಜಮಾ ಮಾಡಿಕೊಡುವಂತೆ ಸರ್ಕಾರ ಸೂಚಿಸಿದೆ. ಆಯಾ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಮಸ್ಯೆ ಇದ್ದವರ ಜೊತೆಗೆ ಹೋಗಿ ಸಮಸ್ಯೆ ಪರಿಹರಿಸಲಿದ್ದಾರೆ.

ಆದಷ್ಟು ಬೇಗ ಗೃಹ ಲಕ್ಷ್ಮಿ ಯೋಜನೆಯ ಎಲ್ಲ ಲೋಪದೋಷಗಳು ನಿವಾರಣೆ ಆಗಲಿದೆ. ಫಲಾನುಭವಿಗಳ ಸಮಸ್ಯೆಯನ್ನು ಪರಿಹರಿಸಲು ಸದ್ಯ ಸರ್ಕಾರವೇ ಮುಂದೆ ಬಂದಿದೆ. ಫಲಾನುಭವಿಗಳ ಸಮಸ್ಯೆ ಪರಿಹಾರವಾದ ಎಲ್ಲ ಕಂತುಗಳ ಹಣವನ್ನು ಸರ್ಕಾರ ಒಂದೇ ಬಾರಿಗೆ ಜಮಾ ಮಾಡಲಿದೆ ಎನ್ನಲಾಗುತ್ತಿದೆ.

ಪುತ್ತಿಲ ಪರ ವಿಶ್ವಕರ್ಮ ಸಮುದಾಯದಿಂದ ವಿಶ್ವ ಸಂಕಲ್ಪ

Posted by Vidyamaana on 2023-04-29 12:21:46 |

Share: | | | | |


ಪುತ್ತಿಲ ಪರ ವಿಶ್ವಕರ್ಮ ಸಮುದಾಯದಿಂದ ವಿಶ್ವ ಸಂಕಲ್ಪ

ಪುತ್ತೂರು : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರ ಅಭಿಮಾನಿ ಬಳಗದಿಂದ ‘ವಿಶ್ವ ಸಂಕಲ್ಪ’ ಕಾರ್ಯಕ್ರಮ ಬೈಪಾಸ್ ರಸ್ತೆಯ ಆಶ್ಮಿ ಕಂಫರ್ಟ್ ನಲ್ಲಿ ನಡೆಯುತ್ತಿದ್ದು, ಹಲವಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆಮಹಿಳೆಯರು, ಕಾರ್ಯಕರ್ತರು ಹಾಗೂ ಪುತ್ತಿಲ ಅಭಿಮಾನಿ ಬಳಗದವರು ‘ವಿಶ್ವ ಸಂಕಲ್ಪ’ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.ಅರುಣ್ ಕುಮಾರ್ ಪುತ್ತಿಲ ರವರು ಈ ಬಾರಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೇನ್ನುವುದು ಕಾರ್ಯಕರ್ತರ ಆಶಯವಾಗಿತ್ತು. ಅದೇ ರೀತಿ ಅವರು ಚುನಾವಣಾ ಕಣಕ್ಕಿಳಿದಿದ್ದು, ಅವರು ಜಯಗಳಿಸಬೇಕೆನ್ನುವ ನಿಟ್ಟಿನಲ್ಲಿ ಕಾರ್ಯಕರ್ತರು ಹಗಲು ರಾತ್ರಿ ಶ್ರಮಿಸುತ್ತಿದ್ದು, ಮತಯಾಚನೆಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ..

ಬೆಳ್ತಂಗಡಿ; ಬಸ್‌ ಹತ್ತುವಾಗ ಮಹಿಳೆಯ ಚಿನ್ನದ ಸರ ಕಳ್ಳತನ

Posted by Vidyamaana on 2023-12-13 11:24:20 |

Share: | | | | |


ಬೆಳ್ತಂಗಡಿ; ಬಸ್‌ ಹತ್ತುವಾಗ ಮಹಿಳೆಯ ಚಿನ್ನದ ಸರ ಕಳ್ಳತನ

ಬೆಳ್ತಂಗಡಿ; ಬಸ್‌ ಹತ್ತುವಾಗ ಮಹಿಳೆಯ ಚಿನ್ನದ ಸರ ಕಳ್ಳತನ ಮಾಡಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ನಿವಾಸಿ ವಾರಿಜ ಅವರು ದಿನಾಂಕ 12.12.2023 ರಂದು ಸಂಜೆ ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಧರ್ಮಸ್ಥಳಕ್ಕೆ ಹೋಗುವ ಕೆ ಎಸ್ ಆರ್ ಟಿ ಸಿ ಬಸ್ಸು ಹತ್ತುವಾಗ ಯಾರೋ ಅವರ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದಿದ್ದಾರೆ. ಅಷ್ಟರಲ್ಲಿ ಅವರು ಜೋರಾಗಿ ಕಿರುಚಿದ್ದಾರೆ. ಆದರೆ ಯಾರು ಸರ ಕದ್ದಿದ್ದಾರೆ ಅನ್ನೋದು ಮಾತ್ರ ಗೊತ್ತಾಗಿಲ್ಲ. ಚಿನ್ನದ ಸರ 36 ಗ್ರಾಂ ಇದ್ದು ಅಂದಾಜು ಮೌಲ್ಯ 1.44 ಸಾವಿರ ಇರಬಹುದು ಎನ್ನಲಾಗಿದೆ. ಇನ್ನು ವಾರಿಜ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 120/2023 ಕಲಂ:392 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಈಶ್ವರಮಂಗಲ ಮುಂಡ್ಯ ನಿವಾಸಿ ಪ್ರಶಾಂತ್ ನೇಣಿಗೆ ಶರಣು

Posted by Vidyamaana on 2024-05-11 21:18:40 |

Share: | | | | |


ಈಶ್ವರಮಂಗಲ ಮುಂಡ್ಯ ನಿವಾಸಿ ಪ್ರಶಾಂತ್ ನೇಣಿಗೆ ಶರಣು

ಪುತ್ತೂರು: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಈಶ್ವರಮಂಗಲ ಸಮೀಪದ ಚಿಮಿಣಿಗುಡ್ಡೆಯಲ್ಲಿ ನಡೆದಿದೆ.

ಈಶ್ವರಮಂಗಲ ಮುಂಡ್ಯ ನಿವಾಸಿ ವೃತ್ತಿಯಲ್ಲಿ ಮರದ ಕೆಲಸ ನಿರ್ವಹಿಸುತ್ತಿದ್ದ ಪ್ರಶಾಂತ್ (38) ಮೃತ ವ್ಯಕ್ತಿ.

ಮಂಗಳೂರು ಮಾದಕ ವಸ್ತು ಕೊಕೇನ್ ಪತ್ತೆ: ಇಬ್ಬರು ಆರೋಪಿಗಳ ಬಂಧನ

Posted by Vidyamaana on 2024-03-19 08:03:50 |

Share: | | | | |


ಮಂಗಳೂರು ಮಾದಕ ವಸ್ತು ಕೊಕೇನ್ ಪತ್ತೆ: ಇಬ್ಬರು ಆರೋಪಿಗಳ ಬಂಧನ

ಮಂಗಳೂರು, ಮಾ.20: ಗೋವಾದಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಮಾದಕ ವಸ್ತುವಾದ ಕೊಕೇನ್ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪತ್ತೆ ಹಚ್ಚಿ 35 ಗ್ರಾಂ ಕೊಕೇನ್ ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಂಬ್ಲಮೊಗರು ಕೊಳಂಜಹಿಟ್ಟು ಸದಕತ್.ಯು ಯಾನೆ ಶಾನ್ ನವಾಝ್(31) ಮತ್ತು ಅಂಬ್ಲಮೊಗರು ಸೇನರಬೆಟ್ಟು ಅಶ್ಫಕ್ ಯಾನೆ ಅಶ್ಫಾ (25) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ವಶದಲ್ಲಿದ್ದ ದ್ವಿಚಕ್ರ ವಾಹನ ಮತ್ತು ಅದರಲ್ಲಿ ಸಾಗಾಟ ಮಾಡುತ್ತಿದ್ದ 2,72,000 ರೂ. ಮೌಲ್ಯದ 35 ಗ್ರಾಂ ನಿಷೇಧಿತ ಮಾದಕ ವಸ್ತು ಕೊಕೇನ್, 3 ಮೊಬೈಲ್ ಫೋನ್ ಗಳು, ಡಿಜಿಟಲ್ ತೂಕ ಮಾಪಕ, ನಗದು ರೂ. 5560 ನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 4,00,000 ಆಗಿರುತ್ತದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮಂಗಳೂರು ನಗರಕ್ಕೆ ಗೋವಾದಿಂದ ಮಾದಕ ವಸ್ತುವಾದ ಕೊಕೇನ್ ಅನ್ನು ಖರೀದಿಸಿಕೊಂಡು ಸಾಗಾಟ, ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ಶ್ಯಾಮ್ ಸುಂದರ್ ಎಚ್ ಎಂ ನೇತೃತ್ವದ ಸಿಸಿಬಿ ಪೊಲೀಸರು ಉಳ್ಳಾಲ ತಾಲೂಕು ಆಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಮೈದಾನದ ಬಳಿ ದ್ವಿಚಕ್ರ ವಾಹನದಲ್ಲಿ ಕೊಕೇನ್ ಮಾರಾಟ ಮತ್ತು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪತ್ತೆ ಹಚ್ಚಿದರು.

ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ನವಾಝ್ ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸಾಗಾಟದ ಪ್ರಕರಣ ಹಾಗೂ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ನಿರೀಕ್ಷಕರಾದ ಶ್ಯಾಮ್ ಸುಂದರ್ ಎಚ್ ಎಂ, ಪಿಎಸ್‌ಐ ಗಳಾದ ಶರಣಪ್ಪ ಭಂಡಾರಿ ಮತ್ತು ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.



Leave a Comment: