ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಸುದ್ದಿಗಳು News

Posted by vidyamaana on 2024-07-03 19:44:44 |

Share: | | | | |


ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಬುಧವಾರದಂದು ಬೆಂಗಳೂರಿನಲ್ಲಿ ಸಿ ಎಂ‌ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ‌ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

   ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿದರು. ಬಜೆಟ್ ನಲ್ಲಿ ಈ ಬಾರಿ ಅನುಮೋದನೆಯಾಗಬೇಕು ಮತ್ತು ತನ್ನ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ ನಲ್ಲಿ ಅನುಮೋದನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು‌ಎಂಬುದು‌ ನನ್ನ ಮತ್ತು ನನ್ನ ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು‌ಮಾಡಿಕೊಡಬೇಕು ಎಂದು ಸಿ ಎಂ ಅವರಲ್ಲಿ ಶಾಸಕರು ವಿನಂತಿಸಿದರು.

ಕಾಲೇಜು‌ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದೂ ಶಾಸಕರು ಸಿಎಂ ಅವರಲ್ಲಿ ತಿಳಿಸಿದರು.

ಹೆಚ್ಚು‌ಅನುದಾನ ಕೊಡಿ

ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಿದೆ. ರಸ್ತೆ, ಸರಕಾರಿ ಕಟ್ಟಡಗಳು, ಶಾಲಾ ,ಕಾಲೇಜು ಕಟ್ಟಡಗಳು, ತಡೆಗೋಡೆ ,ಬೃಹತ್ ಅಣೆಕಟ್ಟುಗಳು ಸೇರಿದಂತೆ ಕ್ಷೇತ್ರದ ಜನರಿಂದ ದಿನದಿಂದ ದಿನಕ್ಕೆ ಕಾಮಗಾರಿಯ ಬೇಡಿಕೆಗಳು ಬರುತ್ತಿದ್ದು ಈಗ ಬರುತ್ತಿರುವ ಅನುದಾನವನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ಇರುವ ಕೆಲವೊಂದು ಕಾಮಗಾರಿ ಬೇಡಿಕೆಗಳಿಗೆ ಅನುದಾನವನ್ನು‌ನೀಡಬೇಕಿದೆ ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಶಾಸಕರು‌ಮನವಿ ಸಲ್ಲಿಸಿದರು.

 Share: | | | | |


ನವಜಾತ ಶಿಶುವಿಗಾಗಿ ಮಿಡಿದ ಸಿದ್ದು ಹೃದಯ ಪ್ರಧಾನಿಗೆ ಮನವಿ

Posted by Vidyamaana on 2023-11-01 19:52:31 |

Share: | | | | |


ನವಜಾತ ಶಿಶುವಿಗಾಗಿ ಮಿಡಿದ ಸಿದ್ದು ಹೃದಯ  ಪ್ರಧಾನಿಗೆ ಮನವಿ

ಬೆಂಗಳೂರು : ರಾಜ್ಯದ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ಪ್ರಧಾನಮಂತ್ರಿಯವರಲ್ಲಿ ಕೆಲವೊಮ್ಮೆ ಮನವಿ ಮಾಡಿಕೊಳ್ಳುವುದಿರುತ್ತದೆ. ಆದರೆ ಈ ಸಲ ಒಂದು ವಿಶೇಷ ಕಾರಣಕ್ಕಾಗಿ ಪ್ರಧಾನಿ ಮೋದಿಯವರಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.


ಪ್ರಧಾನಿ ಮೋದಿಗೆ ಸಿಎಂ ಸಿದ್ದು ಮಾಡಿದ ಕಳಕಳಿಯ ಮನವಿ ಪತ್ರ

ರಾಜ್ಯದಲ್ಲಿನ 15 ತಿಂಗಳ ಮಗುವೊಂದರ ಚಿಕಿತ್ಸೆಗಾಗಿ ಔಷಧಕ್ಕೆ ಸಂಬಂಧಿಸಿದಂತೆ ಆಮದು ಸುಂಕ ವಿನಾಯಿತಿ ನೀಡುವಂತೆ ಸಿದ್ದರಾಮಯ್ಯ ಅವರು ಪ್ರಧಾನಿಯವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲೂ ಮಾಹಿತಿ ಹಂಚಿಕೊಂಡಿದ್ದಾರೆ.ಕರ್ನಾಟಕದ 15 ತಿಂಗಳ ಮೌರ್ಯ ಎಂಬ ಪುಟ್ಟ ಕಂದ ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈ ಮಗುವಿನ ಖಾಯಿಲೆ ಗುಣಪಡಿಸಬಹುದಾದ ಝೋಲ್ಗೆನ್‌ಸ್ಮ ಎಂಬ ಚುಚ್ಚುಮದ್ದನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದ್ದು, ಅದರ ಬೆಲೆ ರೂ. 17.5 ಕೋಟಿ ಇದೆ. ಕೇಂದ್ರ ಸರ್ಕಾರವು ಇದನ್ನು ಮಾನವೀಯ ನೆಲೆಗಟ್ಟಿನಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಆಮದು ಸುಂಕದಿಂದ ವಿನಾಯಿತಿ ನೀಡುವ ಮೂಲಕ ಕರುನಾಡಿನ ಪುಟ್ಟ ಕಂದನ ಪ್ರಾಣ ಉಳಿಸಲು ನೆರವಾಗಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂಬುದಾಗಿ ಸಿಎಂ ಮನವಿ ಮಾಡಿಕೊಂಡಿದ್ದಾರೆ.

ಆ 31 ರವರೆಗೆ ಕಾಂಗ್ರೆಸ್ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ

Posted by Vidyamaana on 2023-08-29 04:22:46 |

Share: | | | | |


ಆ 31 ರವರೆಗೆ ಕಾಂಗ್ರೆಸ್ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಸೇವಾ ದಳ ಯಂಗ್ ಬ್ರಿಗೇಡ್ ವಿಭಾಗದ ಸದ ಸ್ಯತ್ವ ಅಭಿಯಾನವನ್ನು ರಾಜ್ಯ ವ್ಯಾಪ್ತಿ ಆರಂ ಭವಾಗಿದ್ದು, ಆಸ ಕರು ನೋಂದಣಿ ಮಾಡಿಕೊಳ್ಳಬ ಹುದು ಎಂದು ಬ್ರಿಗೇಡ್ ರಾಜ್ಯಾ ಧ್ಯಕ್ಷ ಝುನೈದ್ ಪಿ.ಕೆ.ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನ್‌ಲೈನ್ ಮೂಲಕ ಸದಸ್ಯತ್ವ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9611140233 ಅನ್ನು ಸಂಪರ್ಕಿಸಬ ಹುದು. ಪ್ರತಿ ಗ್ರಾಮ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಯೂ ಈ ಅಭಿಯಾನ ನಡೆಸಲಾ ಗುತ್ತಿ ದ್ದು, 18 ವರ್ಷ ಮೇಲ್ಪಟ್ಟ ಹಾಗೂ 38 ವರ್ಷ ದೊಳಗಿನ ಯುವಕರು ಮಾತ್ರ ಸದಸ್ಯತ್ವವನ್ನು ದಾಗಿದೆ ಎಂದರು. ಪಡೆಯಬಹು


ಇದು ಸತತ ಒಂದು ತಿಂಗಳು ಕಾಲ ನಡೆ ಯಲಿದೆ. ಕಾಂಗ್ರೆಸ್‌ ಮತ್ತು ಜಾತ್ಯತೀತ ವಿಚಾರಧಾರೆ ಹೊಂದಿರುವ ಯುವ ಕರು ಬ್ರಿಗೇಡ್ ಸದಸ್ಯತ್ವವನ್ನು ಪಡೆದು ಕೊಳ್ಳಬಹುದಾಗಿದೆ.ಅಲ್ಲದೆ, ಯುವಕರು ಸಕ್ರಿಯ ರಾಜಕಾರಣ ಮತ್ತು ಮಾನ ವೀಯ ಸಿದ್ಧಾಂತಗಳಲ್ಲಿ ತೊಡಗಬೇಕು ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಶಯದಂತೆ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸೇವಾ ಮನೋ ಭಾವದಿಂದ ಎಲ್ಲರೂ ಕೆಲಸ ಮಾಡಲು ಮುಂದಾಗಬೇಕು. ಸೇವಾದಳವು ನಿಸ್ವಾ ರ್ಥ ಸೇವಾ ಸಂಘಟನೆ ಆಗಿದೆ. ಜಾತಿ ಭಾವನೆ ತ್ಯಜಿಸಿ ರಚನಾತ್ಮಕ ಕಾರ್ಯಕ್ರ ಮಗಳ ಮೂಲಕ ರಾಷ್ಟ್ರೀಯತೆಯನ್ನು ಮೂಡಿಸುವುದೇ ನಮ್ಮ ಗುರಿ ಎಂದು ಝುನೈದ್ ತಿಳಿಸಿದರು.

ಪುತ್ತೂರು ಮೆಸ್ಕಾಂ ತುರ್ತು ಕಾಮಗಾರಿ ಇಂದು (ಆಗಸ್ಟ್ 01) ವಿದ್ಯುತ್ ನಿಲುಗಡೆ

Posted by Vidyamaana on 2023-08-01 03:54:44 |

Share: | | | | |


ಪುತ್ತೂರು  ಮೆಸ್ಕಾಂ ತುರ್ತು  ಕಾಮಗಾರಿ ಇಂದು (ಆಗಸ್ಟ್ 01) ವಿದ್ಯುತ್ ನಿಲುಗಡೆ

ಪುತ್ತೂರು: 33ಕೆಪಿ ಮಾಡಾವು ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33ಕೆ.ವಿ. ಮಾಡಾವು -ಬೆಳ್ಳಾರೆ ವಿದ್ಯುತ್ ಮಾರ್ಗದ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಅ.1ರಂದು ಬೆಳಿಗ್ಗೆ 10 ರಿಂದ ಸಾಯಂಕಾಲ 5ಗಂಟೆಯವರೆಗೆ 33ಕೆವಿ ಮಾಡಾವು- ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33ಕೆವಿ ಮಾಡಾವು -ಬೆಳ್ಳಾರೆ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. 33/11 ಕೆವಿ ಬೆಳ್ಳಾರೆ ಮತ್ತು ಗುತ್ತಿಗಾರು ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಿಂದ ವಿದ್ಯುತ್‌ ಸರಬರಾಜಾಗುವ ವಿದ್ಯುತ್‌ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನೆಲಮಂಗಲ ಬಳಿ ಕೆಎಸ್‌ಆರ್‌ಟಿಸಿ ಬಸ್ ಭೀಕರ ಅಪಘಾತ

Posted by Vidyamaana on 2024-05-18 14:55:49 |

Share: | | | | |


ನೆಲಮಂಗಲ ಬಳಿ ಕೆಎಸ್‌ಆರ್‌ಟಿಸಿ ಬಸ್ ಭೀಕರ ಅಪಘಾತ

ಬೆಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮತ್ತು ನಿರ್ವಾಹಕ ಸೇರಿ 6 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅಡಕಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಲ್ಲಿ ಘಟನೆ ನಡೆದಿದ್ದು, 4 ಅಡಿ ಎತ್ತರದ ರಸ್ತೆ ವಿಭಜಕವನ್ನು ದಾಟಿ ಎದುರು ರಸ್ತೆಗೆ ಡಿವೈಡರ್‌ ಮೇಲೆ ಬಸ್‌ ಬಂದು ನಿಂತಿದೆ.ಬೆಂಗಳೂರು-ಸೋಮವಾರಪೇಟೆ ಬಸ್ ಅಪಘಾತಕ್ಕೀಡಾಗಿದ್ದು ಮುಂಭಾಗದಲ್ಲಿ ಕುಳಿತಿದ್ದವರಿಗೆ ಗಾಯಗಳಾಗಿದೆ ಎಂದು ವರದಿಗಳು ತಿಳಿಸಿವೆ.

ನವ ದಂಪತಿ ಗಳು ಚಿಲಿಸುತಿದ್ದ ಕಾರಿಗೆ ಟ್ಯಾಂಕರ್ ಢಿಕ್ಕಿ ಸ್ಥಳದಲ್ಲೇ ಇಬ್ಬರು ಮೃತ್ಯು

Posted by Vidyamaana on 2023-04-02 05:43:36 |

Share: | | | | |


ನವ ದಂಪತಿ ಗಳು ಚಿಲಿಸುತಿದ್ದ ಕಾರಿಗೆ ಟ್ಯಾಂಕರ್ ಢಿಕ್ಕಿ ಸ್ಥಳದಲ್ಲೇ  ಇಬ್ಬರು ಮೃತ್ಯು

ಮೂಡಲಗಿ: ತಾಲೂಕಿನ ಹಳ್ಳೂರ ಗ್ರಾಮದ ಗಾಂಧಿನಗರ ಬಳಿ ಇರುವ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಟ್ಯಾಂಕರ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವದಂಪತಿಗಗಳು ಸ್ಥಳದಲ್ಲೇ ಸಾವನ್ನಪಿದ್ದು, ಓರ್ವ ಮಹಿಳೆ ಹಾಗೂ ಓರ್ವ ಪುರಷ ಗಂಭೀರ ಗಾಯಗೊಂಡಿ ಘಟನೆ ಶನಿವಾರದ ಸಂಜೆ ನಡೆದಿದೆ.

ಪುತ್ತೂರು ಸೂಪರ್ ಟವರ್ನಲ್ಲಿ ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಉದ್ಘಾಟನೆ

Posted by Vidyamaana on 2023-03-23 11:14:38 |

Share: | | | | |


ಪುತ್ತೂರು ಸೂಪರ್ ಟವರ್ನಲ್ಲಿ ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಉದ್ಘಾಟನೆ

ಪುತ್ತೂರು: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದ ಸೂಪರ್ ಟವರ್ನಲ್ಲಿ ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಮಾ. 20ರಂದು ಉದ್ಘಾಟನೆಗೊಂಡಿತು.

ಮಧು ಮನೋಹರ್ ಹಾಗೂ ಉದ್ಯಮಿ ಅಬ್ಬಾಸ್  ಹಾಜಿ ಕೊಯಿಲ ಮಳಿಗೆಯನ್ನು ಉದ್ಘಾಟಿಸಿದರು.ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಮಾತನಾಡಿ, ಉದ್ಯಮ ಬೆಳೆದಾಗ ಪಟ್ಟಣ ಬೆಳೆಯುತ್ತದೆ. ಇದೀಗ 2ನೇ ಮಳಿಗೆಯನ್ನು ತೆರೆಯುತ್ತಿರುವ ಸಿಗ್ನೇಚರ್ ಮಳಿಗೆಗೆ ಉತ್ತಮ ಸ್ಪಂದನೆ ಜನರಿಂದ ಮೂಡಿಬರಲಿ ಎಂದು ಹಾರೈಸಿದರು.


ಉದ್ಯಮಿ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರಿನ ಹೃದಯ ಭಾಗದಲ್ಲಿರುವ ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ, ಪುರುಷರ ಅಭಿರುಚಿಗೆ ತಕ್ಕಂತಹ ಬಟ್ಟೆಗಳನ್ನು ನೀಡಲು ಉತ್ಸುಕವಾಗಿದೆ. ಪುತ್ತೂರಿನ ಜನರ ಅಭಿರುಚಿಗೆ ಪೂರಕವಾದಂತಹ ಬಟ್ಟೆಗಳನ್ನು ಒದಗಿಸುವ ಜೊತೆಗೆ, ಗ್ರಾಹಕರ ಮನೋಭಿಲಾಷೆಯನ್ನು ಈ ಸಂಸ್ಥೆ ಪೂರೈಸಲಿ. ಗ್ರಾಹಕರಿಂದಲೂ ಉತ್ತಮ ಸ್ಪಂದನೆ ಸಂಸ್ಥೆಗೆ ದೊರಕಲಿ ಎಂದು ಶುಭಹಾರೈಸಿದರು.


ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಬ್ರಾಂಡೆಡ್ ಉತ್ಪನ್ನಗಳ ಮಳಿಗೆ ಪುತ್ತೂರಿಗೆ ಅಗತ್ಯವಿತ್ತು. ಪುತ್ತೂರಿನ ಮುಖ್ಯಪೇಟೆಯಲ್ಲೇ ಸಿಗ್ನೇಚರ್ ಮೆನ್ಸ್ ವೆಡ್ಡಿಂಗ್ ಸ್ಟುಡಿಯೋ ಮೂಲಕ ಜನರ ಅಗತ್ಯತೆಯನ್ನು ಪೂರೈಸಲು ಮುಂದಾಗಿದೆ. ಪುತ್ತೂರಿನ ಹೃದಯ ಭಾಗದಲ್ಲಿ ಇಂತಹದ್ದೊಂದು ಬೃಹತ್ ಮಳಿಗೆಯನ್ನು ತೆರೆಯುವುದು ಸುಲಭದ ಮಾತಲ್ಲ. ಆದರೆ ಸಿಗ್ನೇಚರ್ ಮಳಿಗೆಯ ಪಾಲುದಾರರು ಸವಾಲಾಗಿ ಸ್ವೀಕರಿಸಿ, ಮುಂದಡಿ ಇಟ್ಟಿದ್ದಾರೆ. ಅವರಿಗೆ ಬೆಂಬಲ ನೀಡುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ಪುತ್ತೂರಿನ ಜನರು ನಮ್ಮೂರಿನ ಮಳಿಗೆಯಲ್ಲೇ ಉತ್ಪನ್ನಗಳನ್ನು ಖರೀದಿಸಬೇಕು. ಇದರಿಂದ ಖರೀದಿಗಾಗಿ ದೂರದ ಊರಿಗೆ ಹೋಗುವ ಪ್ರಮೇಯ ತಪ್ಪುತ್ತದೆ. ಮಾತ್ರವಲ್ಲ, ನಮ್ಮೂರಿನಲ್ಲೇ ಉದ್ಯಮವನ್ನು ಬೆಳೆಸಿದಂತಹ ತೃಪ್ತಿಯೂ ನಮಗೆ ಸಿಗುತ್ತದೆ ಎಂದರು.

ಎಸ್.ಡಿ.ಪಿ.ಐ. ರಾಜ್ಯ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಮಾತನಾಡಿ, ಪ್ರಾಮಾಣಿಕತೆ ಹಾಗೂ ಸೇವೆ ಉದ್ಯಮದ ಯಶಸ್ಸಿನ ಸೂತ್ರಗಳು. ಇವನ್ನು ಅಳವಡಿಸಿಕೊಂಡು ಉದ್ಯಮದಲ್ಲಿ ಯಶಸ್ವಿಯಾಗಿ ಎಂದು ಶುಭಹಾರೈಸಿದರು.

ವರ್ತಕ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ ಮಾತನಾಡಿ, ಉದ್ಯಮವಾದರೂ ಅದರ ಹಿಂದೆ ಸೇವೆಯ ರೂಪ ಇರುತ್ತದೆ. ಆದ್ದರಿಂದ ಪುತ್ತೂರಿನ ಜನರು ಇಂತಹ ಉದ್ಯಮಕ್ಕೆ ಬೆಂಬಲ ನೀಡಬೇಕು ಎಂದ ಅವರು, ಇಲ್ಲಿ ತಾನೊಬ್ಬನೇ ಬೆಳೆಯಬೇಕು ಎಂಬ ಭಾವನೆಯ ಬದಲಾಗಿ, ನಮ್ಮ ಜೊತೆಗಿರುವವರು ಬೆಳೆಯಬೇಕು ಎನ್ನುವ ಭಾವನೆಯೇ ಮುಖ್ಯವಾಗಿರುತ್ತದೆ. ಎಲ್ಲರೂ ಜೊತೆಗೆ ಬೆಳೆದಾಗ, ಸಂಸ್ಥೆಯೂ ಬೆಳೆಯುತ್ತದೆ ಎಂದರು.

ಡಾ. ನಝಿರ್ ಅಹಮದ್ ಕ್ಲಿನಿಕ್ನ ಡಾ. ನಝೀರ್ ಅಹಮದ್ ಮಾತನಾಡಿ, ಪುತ್ತೂರು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗದಲ್ಲೇ ಇಂತಹ ಬೃಹತ್ ಮಳಿಗೆ ತೆರೆಯುವುದು ಸುಲಭದ ಮಾತಲ್ಲ. ಆದರೆ ಸಿಗ್ನೇಚರ್ ಸಂಸ್ಥೆಯ ಮಾಲಕರು ಅಂತಹ ಧೈರ್ಯವನ್ನು ತೋರಿಸಿದ್ದಾರೆ. ಇದೀಗ ಸಿಗ್ನೇಚರ್ ಸಂಸ್ಥೆಯ 2ನೇ ಮಳಿಗೆಯನ್ನು ಪುತ್ತೂರಿನಲ್ಲಿ ಆರಂಭಿಸುತ್ತಿದ್ದು, ಪುರುಷರಿಗೆಂದೇ ವಿಶೇಷವಾಗಿ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಪುತ್ತೂರಿನ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ರಾಜ್ಯ ವಾಲಿಬಾಲ್ ಅಸೋಸಿಯೇಶನ್ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಎಸ್.ಡಿ.ಪಿ.ಐ. ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇಬ್ರಾಹಿಂ ಸಾಗರ್, ವಕೀಲರಾದ ನೂರುದ್ದೀನ್ ಸಾಲ್ಮರ, ಸಿದ್ದೀಕ್ ಕೆ.ಎಂ., ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಷದ್ ದರ್ಬೆ, ಉಪ್ಪಿನಂಗಡಿ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಯು.ಟಿ. ತೌಸೀಫ್, ಮದರ್ ಇಂಡಿಯಾದ ಮಾಲಕ ಅಬ್ದುಲ್ ರಝಾಕ್. ವರ್ತಕ ಸಂಘದ ಕಾರ್ಯದರ್ಶಿ ಉಲ್ಲಾಸ್ ಪೈ, ಡ್ಯಾಶ್ ಮಾರ್ಕೆಟಿಂಗಿನ ನಿಹಾಲ್ ಶೆಟ್ಟಿ, ಪ್ರಮುಖರಾದ ಇಸಾಕ್ ಸಾಲ್ಮರ, ಸಿದ್ದೀಕ್, ರಾಕೇಶ್ ರೈ ಪಡುಮಲೆ, ಉದ್ಯಮಿ ಶಬೀರ್ ಕೆಂಪಿ, ಉದ್ಯಮಿ ಹಸನ್ ಸಜ್ಜದ್ ಮೊದಲಾದವರು ಉಪಸ್ಥಿತರಿದ್ದರು.


ಸಿಯಾರಾಮ್, ಅರವಿಂದ್, ರೇಮಂಡ್, ಲಿನೆನ್ ಕ್ಲಬ್ ಬ್ರಾಂಡೆಡ್ ಕಂಪೆನಿಗಳ ಉಡುಗೆಗಳು ಇಲ್ಲಿ ಲಭ್ಯವಿದೆ. ಪುರುಷರ ಪ್ಯಾಂಟ್, ಶರ್ಟ್ಸ್, ಕುರ್ತಾ, ಪೈಜಾಮ್, ಕೋಟ್ಸ್, ಶೇರ್ವಾನಿ, ಸೂಟ್ಸ್, ಕಂದೂರ, ಜೋಧ್ ಪುರಿ, ಡ್ರೆಸ್ ಕೋಡ್ ಮೊದಲಾದ ಹಲವು ವಿನ್ಯಾಸದ ಬಟ್ಟೆಗಳು ಗ್ರಾಹಕರಿಗೆ ವಿಶೇಷ ದರದಲ್ಲಿ ಲಭ್ಯವಾಗಲಿದೆ ಎಂದು ಪಾಲುದಾರರಾದ ನಾಸಿರ್ ಕೊಯಿಲ, ಇಶಾಮ್ ಪರ್ಲಡ್ಕ, ಫಾರೂಕ್ ಸಾಲ್ಮರ, ಆಸೀಫ್ ಕೊಯಿಲ ತಿಳಿಸಿದ್ದಾರೆ.ರಿಯಾಜ್ ಇಂಡಿಯನ್ ಉಪ್ಪಿನಂಗಡಿ,ಹಮೀದ್ ಮುಕ್ವೆ,ಜಬ್ಬಾರ್ ಬೋಳುವರ್,ಉನೈಸ್ ಬಂಡಡ್,ರೆಹಮಾನ್ ಬಡಮೆ ಉಪ್ಪಿನಂಗಡಿ, ಹುಸೇನ್, ಹಂಝ, ಝಕರಿಯ,ಅಲಿ,ಸಿರಾಜ್,

ನವಾಜ್ ಪಿಎಸ್ ಕೆರೆಮೋಳೆ,ನೌಫಲ್ ಸಾಲ್ಮರ,ತಾಜು ಫಟಾಫಟ್,ಆದಿಲ್ ಪರ್ಲಡ್ಕ,ಸುಹೇಲ್ ಹುಬಿಯೋ ಇಂಟೀರಿಯರ್,ತ್ವಾಹಿರ್ ಸೈಮನ್,ಇಮ್ತಿಯಾಜ್,ಶಾಹಿರ್,ಫಾರೂಕ್ ಐ ಮ್ಯಾಕ್ಸ್, ಸೈಫ್ ಪರ್ದ್ ಪ್ಯಾಲೇಸ್ ಮೊದಲಾದವರು ಬಂದು ನೂತನ ಸಂಸ್ಥೆಗೆ ಶುಭ ಹಾರೈಸಿದರು.



Leave a Comment: