ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

ಸುದ್ದಿಗಳು News

Posted by vidyamaana on 2024-07-03 08:24:56 |

Share: | | | | |


ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ

ಬೆಂಗಳೂರು : ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಕೆಲಸ ಮಾಡಲಾಗಿದೆ. ನಾಲ್ವರು ಕೆಎಎಸ್ ಅಧಿಕಾರಿ ಹಾಗೂ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ / ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.

ವರ್ಗಾವಣೆಗೊಂಡ ಕೆಎಎಸ್‌ ಅಧಿಕಾರಿಗಳು

ಡಾ. ಜಗದೀಶ್‌ ಕೆ. ನಾಯಕ್‌

ರಘುನಂದನ್‌ ಎ.ಎನ್‌

ಪ್ರಸನ್ನ ಕುಮಾರ್‌ ವಿ.ಕೆ

ಹುಲ್ಲುಮನಿ ತಿಮ್ಮಣ್ಣ

ವರ್ಗಾವಣೆಗೊಂಡ ಐಪಿಎಸ್‌ ಅಧಿಕಾರಿಗಳು

ಬಿ. ರಮೇಶ -ಡಿಐಜಿಪಿ, ಪೂರ್ವ ವಲಯ, ದಾವಣಗೆರೆ

ಎನ್. ವಿಷ್ಣು ವರ್ಧನ್ -ಎಸ್.ಪಿ. ಮೈಸೂರು ಜಿಲ್ಲೆ

ಸೀಮಾ ಲಾಟ್ಕರ್ -ಪೊಲೀಸ್ ಆಯುಕ್ತರು, ಮೈಸೂರು ನಗರ

ರೇಣುಕಾ ಸುಕುಮಾರ -ಎಐಜಿಪಿ ಬೆಂಗಳೂರು ಡಿಜಿ ಕಚೇರಿ

ಸಿ.ಕೆ. ಬಾಬಾ -ಎಸ್.ಪಿ. ಬೆಂಗಳೂರು ಗ್ರಾಮಾಂತರ

ಸುಮನ್ ಡಿ. ಪೆನ್ನೇಕರ್ -ಎಸ್‌ ಪಿ, ಬಿಎಂಟಿಎಫ್

ಸಿ.ಬಿ. ರಿಷ್ಯಂತ್ -ಎಸ್.ಪಿ

ಚನ್ನಬಸವಣ್ಣ - ಎಐಜಿಪಿ, ಆಡಳಿತ, ಡಿಜಿ ಕಚೇರಿ

ಲಾಬೂ ರಾಮ್ -ಐಜಿಪಿ ಕೇಂದ್ರ ವಲಯ

ರವಿಕಾಂತೇಗೌಡ -ಐಜಿಪಿ ಕೇಂದ್ರ ಕಚೇರಿ- ಒಂದು ಬೆಂಗಳೂರು ಡಿಜಿ ಕಚೇರಿ

ಕೆ. ತ್ಯಾಗರಾಜನ್ -ಐಜಿಪಿ, ಐ.ಎಸ್.ಡಿ.

ಎನ್. ಶಶಿಕುಮಾರ್ -ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್

ಪ್ರದೀಪ್‌ ಗುಂಡಿ - ಎಸ್‌ ಪಿ. ಬೀದರ್‌ ಜಿಲ್ಲೆ

ಯತೀಶ್‌ ಎನ್. - ಎಸ್‌ ಪಿ ದಕ್ಷಿಣ ಕನ್ನಡ ಜಿಲ್ಲೆ

ಮಲ್ಲಿಕಾರ್ಜುನ ಬಾಲದಂಡ ಎಸ್‌ ಪಿ ಮಂಡ್ಯ ಜಿಲ್ಲೆ

ಡಾ.ಟಿ. ಕವಿತಾ ಎಸ್.ಪಿ. ಚಾಮರಾಜನಗರ ಜಿಲ್ಲೆ

ಬಿ. ನಿಖಿಲ್‌ ಎಸ್‌ ಪಿ ಕೋಲಾರ ಜಿಲ್ಲೆ

 Share: | | | | |


ಅಯೋಧ್ಯೆ ಮಂಡಲ ಪೂಜೆ ಮುಗಿಸಿ ಉಡುಪಿಗೆ ಬಂದ ಪೇಜಾವರ ಶ್ರೀಗಳು: ಅದ್ದೂರಿ ಸ್ವಾಗತ

Posted by Vidyamaana on 2024-03-18 11:21:45 |

Share: | | | | |


ಅಯೋಧ್ಯೆ ಮಂಡಲ ಪೂಜೆ ಮುಗಿಸಿ ಉಡುಪಿಗೆ ಬಂದ ಪೇಜಾವರ ಶ್ರೀಗಳು: ಅದ್ದೂರಿ ಸ್ವಾಗತ

ಉಡುಪಿ : ಅಯೋಧ್ಯೆಯಲ್ಲಿ ರಾಮ ದೇವರಿಗೆ ಪ್ರಾಣ ಪ್ರತಿಷ್ಠೆ ಮಾಡಿದ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರಿಗೆ ಕೃಷ್ಣನೂರು ಉಡುಪಿಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

ರಾಮಮಂದಿರ ನಿರ್ಮಾಣದ ಪ್ರತಿ ಹಂತದಲ್ಲೂ ನಿರ್ಣಾಯಕ ಪಾತ್ರ ವಹಿಸಿದ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಇದೀಗ ಮಥುರಾ ಕೃಷ್ಣನ ವಿಮುಕ್ತಿಯ ಕನಸು ಕಾಣಲಾಗುತ್ತಿದೆ. ಮಥುರಾ ವಿಮುಕ್ತಿಯ ಬೇಡಿಕೆಗೆ ಅಭಿನಂದನಾ ಸಮಾರಂಭ ವೇದಿಕೆಯಾಯಿತು.ಮಂಡಲ ಪೂಜೆ ಮುಗಿಸಿ ಬಂದ ಪೇಜಾವರ ಶ್ರೀಗಳನ್ನು ನೂರಾರು ನಾಗರಿಕರು ವೈಭವದಿಂದ ಬರಮಾಡಿಕೊಂಡರು.

ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲಿ ನಿಂತು ಪ್ರತಿಮೆಗೆ ಪ್ರಾಣ ಪ್ರತಿಷ್ಠೆ ಮಾಡಿದ ಪೇಜಾವರ ಶ್ರೀಗಳನ್ನು ಕಂಡು ಕನ್ನಡಿಗರು ರೋಮಾಂಚನಗೊಂಡಿದ್ದರು. ಸಾಂಸ್ಕೃತಿಕ ಪುನರುತ್ಥಾನದ ಕಾಲಘಟ್ಟದಲ್ಲಿ ಶ್ರೀಗಳ ಈ ಮಹತ್ವದ ಪಾತ್ರ ಎಲ್ಲರ ಗಮನ ಸೆಳೆದಿತ್ತು.

ಮುಂದಿನ 48 ದಿನಗಳ ಕಾಲ ಅಲ್ಲೇ ಇದ್ದು, ರಾಮದೇವರ ಪೂಜೆ ಸಹಿತ ಮಂಡಲ ಪೂಜೆ ಮುಗಿಸಿ ಬಂದಿರುವ ವಿಶ್ವ ಪ್ರಸನ್ನತೀರ್ಥರನ್ನು, ತವರು ನೆಲದಲ್ಲಿ ಇಂದು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ಮಂಗಳೂರು ವಿಮಾನ ನಿಲ್ದಾಣದಿಂದ ನೂರಾರು ರಾಮಭಕ್ತರು ಬೈಕ್ ರ್‍ಯಾಲಿ ಮೂಲಕ ಅವರನ್ನು ಸ್ವಾಗತಿಸಿದರು. ಜಿಲ್ಲೆಯ ಗಡಿಭಾಗ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀಗಳನ್ನು ಗೌರವಿಸಲಾಯಿತು. ಬಳಿಕ ಉಡುಪಿಯ ಜೋಡುಕಟ್ಟೆಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಉಡುಪಿಗೆ ಬಂದ ಶ್ರೀಗಳು ಕೃಷ್ಣದೇವರನ್ನು ಕಂಡು, ತಮ್ಮ ರಾಮ ಸೇವೆಯನ್ನು ಕೃಷ್ಣಾರ್ಪಣ ಗೊಳಿಸಿದರು.


ರಥ ಬೀದಿಯ ಚಂದ್ರೇಶ್ವರ, ಅನಂತೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. ಇದು ತನ್ನ ಗುರುಗಳಾದ ಶ್ರೀ ವಿಶ್ವೇಶ ತೀರ್ಥರು ಹಾಗೂ ನಾಡಿನ ಸಂತರು ಕೊಟ್ಟ ಸೌಭಾಗ್ಯ! ಉಡುಪಿಯ ಆಂಜನೇಯನ ಸ್ಪೂರ್ತಿಯಿಂದ ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠೆಯಾಗಿದೆ. ಮಥುರಾ ಕ್ಷೇತ್ರದ ವಿಮುಕ್ತಿಯ ಕನಸು ಕೂಡ ಅದೆಷ್ಟು ಬೇಗ ನನಸಾಗಲಿ ಎಂದು ಆಶಿಸಿದರು.


ಸದ್ಯ ಪರ್ಯಾಯ ಪೀಠಸ್ಥರಾಗಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು, ಪೇಜಾವರ ಶ್ರೀಗಳನ್ನು ಸನ್ಮಾನಿಸಿದರು. ಅಯೋಧ್ಯೆಯಿಂದ ತಂದಿರುವ ಆಂಜನೇಯ ದೇವರ ಪ್ರೇರಣೆಯಿಂದಲೇ ಉಡುಪಿಯಲ್ಲಿ ಅನೇಕ ಪವಾಡಗಳು ನಡೆಯುತ್ತಿದೆ. ತಾಲಾ ಖೋಲೋ ಅಭಿಯಾನ ಹಾಗೂ ರಾಮಮಂದಿರ ನಿರ್ಮಾಣದ ಕನಸು ಕಟ್ಟಿದ್ದು ಉಡುಪಿಯಲ್ಲೇ. ಆಂಜನೇಯ ದೇವರು ಕನ್ನಡಿಗರಾಗಿದ್ದು, ರಾಮಮಂದಿರದ ಕನಸು ನನಸಾಗುವಲ್ಲಿ ಹನುಮಂತನ ಪ್ರೇರಣೆ ಮಹತ್ವದ್ದಾಗಿದೆ. ಹಾಗಾಗಿ ರಾಮ ಸೇವೆ ಮಾಡಿ ಬಂದ ಪೇಜಾವರ ಶ್ರೀಗಳನ್ನು ಅಭಿನವ ಆಂಜನೇಯ ಬಿರುದು ಕೊಟ್ಟು ಸನ್ಮಾನಿಸುತ್ತಿರುವುದಾಗಿ ಹೇಳಿದರು. ಹೈಕೋರ್ಟ್ ತೀರ್ಪು ಬಂದ ನಂತರ ಜೈಲಿನಲ್ಲಿ ಬಂದಿಯಾಗಿದ್ದ ರಾಮ ಲಲ್ಲಾನನ್ನು ತಾನೇ ಬೀಗ ಒಡೆದು ಹೊರತಂದು ಪೂಜೆಗೆ ಅನುವು ಮಾಡಿಕೊಟ್ಟ ದಿನವನ್ನು ಸ್ಮರಿಸಿದರು.


ಉಡುಪಿಯ ಮಠಗಳು ಸೇರಿದಂತೆ ನೂರಾರು ಅಭಿಮಾನಿಗಳು ಸಂಘಟನೆಗಳು ಪೇಜಾವರ ಶ್ರೀಗಳನ್ನು ಇದೇ ವೇಳೆ ಗೌರವಿಸಿದರು. ತನ್ನ ಸೇವಾ ಕಾರ್ಯಗಳನ್ನು ಕೃಷ್ಣನಿಗೆ ಅರ್ಪಿಸಿರುವ ಪೇಜಾವರ ಶ್ರೀಗಳು ಅಯೋಧ್ಯೆಯಲ್ಲಿ ನಡೆಯಬೇಕಾಗಿರುವ ರಾಮ ನವಮಿಯ ರೂಪರೇಷೆಗಳನ್ನು ನಿರ್ಧರಿಸಲು ಮತ್ತೊಮ್ಮೆ ಅಯೋಧ್ಯೆಗೆ ವಾಪಸ್ ಆಗಿದ್ದಾರೆ. ಈ ಮೂಲಕ ತಮ್ಮ ರಾಮ ಸೇವೆ ಮುಂದುವರಿಸಿದ್ದಾರೆ.

ಪುತ್ತೂರಿನ ಗಡಿಗ್ರಾಮಗಳಲ್ಲಿ ಬೇಟೆಗಾರನಿಗೆ ಬಲಿಯಾಗುತ್ತಿರುವ ಕಾಟಿಗಳು

Posted by Vidyamaana on 2023-09-29 12:00:28 |

Share: | | | | |


ಪುತ್ತೂರಿನ ಗಡಿಗ್ರಾಮಗಳಲ್ಲಿ ಬೇಟೆಗಾರನಿಗೆ ಬಲಿಯಾಗುತ್ತಿರುವ ಕಾಟಿಗಳು

ಪುತ್ತೂರು: ಕಾಡು ನಾಶವಾಗುತ್ತಿದ್ದಂತೆಯೇ ಆಹಾರ ಹರಿಸಿ ಕಾಡುಪ್ರಾಣಿಗಳು ನಾಡಿಗೆ ಬರುವುದು ಮತ್ತು ನಾಡಿಗೆ ಬಂದು ಕೃಷಿಗಳನ್ನು ನಾಶ ಮಾಡುವುದು ಪುತ್ತೂರು ತಾಲೂಕಿನ ಗಡಿಗ್ರಾಮಗಳಲ್ಲಿ ನಿತ್ಯದ ಪರಿಪಾಠವಾಗಿದೆ. ಕಾಡಿನಲ್ಲಿ ಆಹಾರದ ಕೊರತೆಯುಂಟಾದಾಗ ಮಾತ್ರ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತವೆ, ಆಹಾರ ಕೊರತೆಯಾಗಲು ಕಾಡುಗಳ ನಾಶವೂ ಕಾರಣವಾಗಿದೆ. ಕಾಡುಗಳ ರಕ್ಷಣೆಗೆ ಮತ್ತು ಕಾಡುಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಅದೆಷ್ಟೋ ಅಧಿಕಾರಿಗಳನ್ನು ಇರಿಸಿಕೊಂಡಿದೆ, ಆದರೆ ಕಾಡು ನಾಶವಾಗುತ್ತಲೇ ಇದೆ ಕಾಡುಪ್ರಾಣಿಗಳು ನಾಡಿಗೆ ಬರುತ್ತಲೇ ಇದೆ. ಇಲ್ಲಿ ವಿಶೇಷವೇನೆಂದರೆ ನಾಡಿಗೆ ಬಂದ ಕಾಡುಪ್ರಾಣಿಗಳು ಮರಳಿ ಕಾಡು ಸೇರುವುದೇ ಇಲ್ಲ ಅವು ಮಾನವ ಹೊಟ್ಟೆ ಪಾಲಾಗುತ್ತಿದೆ ಎಂಬ ಆತಂಕದ ವಿಚಾರ ಬೆಳಕಿಗೆ ಬಂದಿದೆ.

ಪುತ್ತೂರು ತಾಲೂಕಿನ ಕೇರಳ ಗಡಿಗ್ರಾಮಗಳಲ್ಲಿ ಇಂಥಹದೊಂದು ಅಮಾನವೀಯ ಕೃತ್ಯಗಳು ನಿತ್ಯವೂ ನಡೆಯುತ್ತಿದೆ. ನೆಟ್ಟಣಿಗೆ ಮುಡ್ನೂರು, ಪಾಣಾಜೆ, ಜಾಲ್ಸೂರು ಗಡಿಗ್ರಾಮಗಳಲ್ಲಿ ಕಾಡಾಣೆಗಳ ಹಾವಳಿ ಇಲ್ಲ. ಈ ಭಾಗದಲ್ಲಿ ಕಾಡುಕೋಣಗಳ ಹಾವಳಿ ಇದೆ. ಕಾಡುಕೋಣಗಳು ಗುಂಪುಗುಂಪಾಗಿ ರಾತ್ರಿ ವೇಳೆ ಕೆಲವೊಮ್ಮೆ ಹಗಲು ವೇಳೆಯೇ ನಾಡಿಗೆ ಬಂದು ಕೃಷಿಗಳನ್ನು ತಿಂದು ಹಾಕುತ್ತಿದೆ. ಈ ವಿಚಾರವನ್ನು ಗ್ರಾಮಸಭೆಗಳಲ್ಲಿ ಗ್ರಾಮಸ್ಥರು ಹೇಳುತ್ತಲೇ ಇದ್ದಾರೆ. ಮೇಲಧಿಕಾರಿಗಳ ಗಮನಕ್ಕೆ ತಂದರೆ ವ್ಯವಸ್ಥೆ ಮಾಡುವ ಎಂದು ತಲೆ ಆಡಿಸುತ್ತಲೇ ಕಾಲ ಕಳೆಯುತ್ತಿದ್ದಾರೆ. ಕಾಡು ಕೋಣಗಳು ನಾಡಿಗೆ ಬರದಂತೆ ತಡೆಗಟ್ಟುವುದು ಬಿಡಿ ಆ ಗ್ರಾಮಗಳಿಗೆ ತೆರಳಿ ಪರಿಶೀಲನೆ ಮಾಡಲು ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಸಮಯ ಕೂಡಿ ಬರುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.


ಕಾಡುಕೋಣ ಕೊಂದು ತಿನ್ನುತ್ತಾರೆ

ರಾತ್ರಿ ವೇಳೆ ಕೆಲವೊಂದು ಆಯಕಟ್ಟಿನ ಸ್ಥಳಗಳಿಂದಲೇ ಕಾಡುಕೋಣಗಳು ಬರುತ್ತದೆ ಎಂಬ ಮಾಹಿತಿ ತಿಳಿದುಕೊಳ್ಳುವ ಬೇಟೆಗಾರರು ರಾತ್ರಿ ವೇಳೆ ಅವುಗಳನ್ನು ಗುಂಡು ಹೊಡೆದು ಸಾಯಿಸುತ್ತಾರೆ. ಕಾಡು ಕೋಣಗಳ ಬರುತ್ತವೆ , ದಾಳಿ ಮಾಡುತ್ತದೆ ಎಂಬ ಕಾರಣಕ್ಕೆ ಸಂಜೆಯಾಗುತ್ತಲೇ ಗ್ರಾಮಸ್ಥರು ಮನೆ ಸೇರುವ ಕಾರಣ ಬೇಟೆಗಾರರಿಗೆ ಅವುಗಳನ್ನು ಹಿಡಿದು ಕೊಲ್ಲಲು ಸುಲಭವಾಗುತ್ತಿದೆ. ಯಾರ ಕಣ್ಣಿಗೂ ಬೀಳದ ರೀತಿಯಲ್ಲಿ ಅವುಗಳನ್ನು ಕೊಲ್ಲುವ ಮತ್ತು ಆ ಬಳಿಕ ಮಾಂಸ ಮಾಡಿ ಕೇರಳಕ್ಕೆ ಸಾಗಿಸುವ ದಂಧೆ ನಿರಂತರವಾಗಿ ನಡೆಯುತ್ತಲೇ ಇದೆ. ಈಗಾಗಲೇ ನೂರಾರು ಕಾಡುಕೋಣಗಳನ್ನು ಭೇಟೆಗಾರರು ಕೊಂದು ಮುಗಿಸಿದ್ದಾರೆ ಎಂಬ ಆತಂಕದ ಮಾಹಿತಿಯನ್ನು ಗ್ರಾಮಸ್ಥರು ಹೊರ ಹಾಕಿದ್ದಾರೆ. ಕಾಡುಪ್ರಾಣಿಗಳನ್ನು ಸಂರಕ್ಷಣೆ ಮಾಡಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಬೇಟೆಗಾರರ ಜೊತೆ ಕೆಲವೊಂದು ಮೇಲಧಿಕಾರಿಗಳಿಗೆ ನಿಟಕ ಕೃಪಾಕಟಾಕ್ಷ ಇರುವುದರಿಂದ ಇದೊಂದು ವ್ಯವಹಾರಿಕ ದಂಧೆಯಾಗಿ ಪರಿಣಮಿಸಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಕಾಡುಕೋಣಗಳೇ ನಾಶವಾದರೂ ಅಚ್ಚರಿಯಿಲ್ಲ. ಈ ಪರಿಸ್ಥಿತಿ ತಲೆದೋರುವ ಮುನ್ನ ಜಿಲ್ಲಾಮಟ್ಟದ ಅರಣ್ಯಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕಾಗಿದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ತುರ್ತು ಕ್ರಮ: ಡಿಸಿಎಫ್

ಈ ವಿಚಾರದಲ್ಲಿ ಯಾರೂ ನನ್ನ ಗಮನಕ್ಕೆ ತಂದಿಲ್ಲ. ಕಾಡುಕೋಣಗಳು ಸೇರಿದಂತೆ ಕಾಡುಪ್ರಾಣಿಗಳನ್ನು ಭೇಟೆಯಾಡುವುದು ಅಕ್ಷಮ್ಯ ಅಪರಾಧವಾಗಿದೆ. ಪಾಣಭಾಜೆ, ಜಾಲ್ಸೂರು ಹಾಗೂ ಕರ್ನೂರು ಗಡಿಗ್ರಾಮದಲ್ಲಿ ವಿಶೇಷ ತಪಾಸಣೆ ಮಾಡುವಂತೆ ಕ್ರಮಕೈಗೊಳ್ಳುತ್ತೇನೆ. ಸಾರ್ವಜನಿಕರು ಇಂಥಹ ಕೃತ್ಯಗಳು ಕಂಡು ಬಂದಲ್ಲ ನೇರವಾಗಿ ನನಗೆ ಕರೆ ಮಾಡಿ ತಿಳಿಸಬಹುದು.


ಆಂಟ್ಯನಿ ಮರಯಪ್ಪನ್, ಡಿಸಿಎಫ್ ಮಂಗಳೂರು

ಸಿ.ಟಿ.ರವಿ ಸಿಎಂ ಆಗಲಿ.. ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ಈಶ್ವರಪ್ಪ ಹೇಳಿಕೆ

Posted by Vidyamaana on 2023-04-25 12:40:04 |

Share: | | | | |


ಸಿ.ಟಿ.ರವಿ ಸಿಎಂ ಆಗಲಿ.. ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ಈಶ್ವರಪ್ಪ ಹೇಳಿಕೆ

ಚಿಕ್ಕಮಗಳೂರು: ಚುನಾವಣೆ ನಡೆಯುವ ಮೊದಲೇ ರಾಜಕೀಯ ಪಕ್ಷಗಳಲ್ಲಿ ಮುಂದಿನ ಸಿಎಂ ಚರ್ಚೆ ಜೋರಾಗಿದೆ. ಅಧಿಕಾರಕ್ಕೇರುವ ಮುನ್ನವೇ ಸಿಎಂ ಕೂಗು ಕೇಳಿ ಬರುತ್ತಿದೆ. ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪನವರು ಸಿಟಿ ರವಿ ಅವರು ಮುಂದಿನ ಸಿಎಂ ಆಗಲಿ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ನಿಡಘಟ್ಟದಲ್ಲಿ ನಡೆದ, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಸಿಟಿ ರವಿ ಅವರನ್ನು ದೊಡ್ಡ ಅಂತರದಿಂದ ಗೆಲ್ಲಿಸಿ ಅವರನ್ನು ಕರ್ನಾಟಕದ ಮುಂದಿನ ಸಿಎಂಯನ್ನಾಗಿ ಮಾಡಬೇಕೆಂದಿದ್ದಾರೆ.ಕಾಂಗ್ರೆಸ್‌ ನಲ್ಲಿ ಓಡಾಡುತ್ತಿದ್ದ ಸಿಎಂ ಕೂಗು ಇದೀಗ ಬಿಜೆಪಿಯಲ್ಲೂ ಕೇಳಿ ಬಂದಿದೆ. ಬಹಿರಂಗ ಸಭೆಯಲ್ಲೇ ಸಿ.ಟಿ.ರವಿ ಪರ ಈಶ್ವರಪ್ಪ ಅವರು ಒಲವು ತೋರಿದ್ದು, ಇದೀಗ ಈ ಸಂಬಂಧಿತ ವಿಡಿಯೋ ಸದ್ದು ಮಾಡುತ್ತಿದೆ.ನಿನ್ನೆಯಷ್ಟೇ ಸಿಟಿ ರವಿ ಅವರು ಮೈಸೂರಿನಲ್ಲಿ ಮಾತನಾಡುವ ವೇಳೆ ಸಿಎಂ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು.ಈಶ್ವರಪ್ಪ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ

ದೇಶದ ಐಸ್‌ಕ್ರೀಂ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದ ರಘುನಂದನ್ ಕಾಮತ್ ನಿಧನ

Posted by Vidyamaana on 2024-05-18 08:41:54 |

Share: | | | | |


ದೇಶದ ಐಸ್‌ಕ್ರೀಂ ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದ ರಘುನಂದನ್ ಕಾಮತ್ ನಿಧನ

ಮಂಗಳೂರು , ಮೇ 17: ಮೂಲತಃ ಮಂಗಳೂರು ನಿವಾಸಿ, ಮುಂಬೈಯ ನ್ಯಾಚುರಲ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ್ ಕಾಮತ್ (70) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ ಮುಂಬೈಯಲ್ಲಿ ನಿಧನರಾದರು.ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಕೆರೆ ಮೀನು ತಿಂದು ಇಬ್ಬರು ಮೃತ: ಹಲವರು ಅಸ್ವಸ್ಥ

Posted by Vidyamaana on 2024-05-04 11:37:44 |

Share: | | | | |


ಕೆರೆ ಮೀನು ತಿಂದು ಇಬ್ಬರು ಮೃತ: ಹಲವರು ಅಸ್ವಸ್ಥ

ಕೊಣನೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯಲ್ಲಿ ಕೆರೆ ಮೀನು ತಿಂದು ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಗ್ರಾಮದ ರವಿಕುಮಾರ್ (46) ಹಾಗೂ ಕೆ.ಆರ್. ನಗರ ತಾಲ್ಲೂಕಿನ ಸನ್ಯಾಸಿಪುರದ ಪುಟ್ಟಮ್ಮ (50) ಮೃತಪಟ್ಟವರು. ಅಲ್ಲದೆ,15 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

ನೀರಿಲ್ಲದೇ ಬತ್ತಿದ್ದ ಗ್ರಾಮದ ಕೆರೆ ಕೆಸರಿನಲ್ಲಿದ್ದ ಮೀನುಗಳನ್ನು ಗ್ರಾಮಸ್ಥರು ಹಿಡಿದು ಅಡುಗೆ ಮಾಡಿದ್ದರು. ಬಳಿಕ ಸಂತೋಷದಿಂದ ತಿಂದಿದ್ದಾರೆ

ಕಾಣಿಯೂರು ಎಲುವೆ ರಿಕ್ಷಾ ಚಾಲಕನ ಆತ್ಮಹತ್ಯೆ ಪ್ರಕರಣ ಸಾವಿನ ಬಗ್ಗೆ ಸಂಶಯ

Posted by Vidyamaana on 2023-12-29 21:51:48 |

Share: | | | | |


ಕಾಣಿಯೂರು ಎಲುವೆ ರಿಕ್ಷಾ ಚಾಲಕನ ಆತ್ಮಹತ್ಯೆ ಪ್ರಕರಣ  ಸಾವಿನ ಬಗ್ಗೆ ಸಂಶಯ

ಕಾಣಿಯೂರು: ಕಾಣಿಯೂರಿನ ಎಲುವೆ ಎಂಬಲ್ಲಿ ರಿಕ್ಷಾ ಚಾಲಕರೋರ್ವರ ಶವ ನೇಣು ಬಿಗಿದ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು, ಇದೀಗ ಸಾವಿನಲ್ಲಿ ಸಂಶಯ ವ್ಯಕ್ತಗೊಂಡು ದೂರು ದಾಖಲಾಗಿದೆ.


ಕಾಣಿಯೂರಿನ ಬೆದ್ರಾಜೆ ಮನೆ ವಸಂತ (42) ಅವರ ರಿಕ್ಷಾ ಕಾಣಿಯೂರು ರಸ್ತೆಯ ಎಲುವೆ ಎಂಬಲ್ಲಿ ನಿಲ್ಲಿಸಿತ್ತು. ಅಲ್ಲೇ ಸಮೀಪದ ಕಾಡಿನಲ್ಲಿ ವಸಂತ ಮರಕ್ಕೆ ನೈಲಾನ್‌ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.



ವಸಂತ ಅವರು ಕಾಣಿಯೂರು ಪೇಟೆಯಲ್ಲಿ ಆಟೋರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಡಿ. 27ರಂದು ಬೆಳಗ್ಗೆ 6 ಗಂಟೆಗೆ ಅವರ ಆಟೋರಿಕ್ಷಾದಲ್ಲಿ ಬಾಡಿಗೆಗೆಂದು ಮನೆಯಿಂದ ಹೋಗಿ ವಾಪಸು ಮನೆಗೆ ಬಂದವರು ಮನೆಯಲ್ಲಿನ ತೋಟದಲ್ಲಿ ಅಡಿಕೆ ಹೆಕ್ಕುವ ಕೆಲಸವನ್ನು ಮಾಡಿಕೊಂಡಿದ್ದರು.


ಮಧ್ಯಾಹ್ನ ವಸಂತ ಅವರು ಊಟ ಮಾಡಿ ಆಟೋರಿಕ್ಷಾದಲ್ಲಿ ಮನೆಯಿಂದ ಹೋದವರು ಏಲುವೆ ಎಂಬಲ್ಲಿಗೆ ಬಾಡಿಗೆಗೆ ಹೋಗುತ್ತಿರುವುದಾಗಿ ಅವರ ಅಣ್ಣ ಗಣೇಶ್‌ ಅವರಿಗೆ ತಿಳಿಸಿದ್ದರು. ಅಲ್ಲಿಂದ ಮತ್ತೆ ಕಾಲ್ ಮಾಡಿ ಪದ್ಮಯ ಗೌಡರ ಅಳಿಯ ಮೊಬೈಲನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಗಣೇಶರಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಮತ್ತೆ ಎರಡೂ ಪೋನ್ ಸ್ವಿಚ್ ಆಫ್ ಆಗಿತ್ತು.  



ಎಲುವೆ ಎಂಬಲ್ಲಿಯ ಕಾಡಿನ ಬಳಿ ಆಟೋ ರಿಕ್ಷಾ ರಸ್ತೆಯ ಬಳಿ ನಿಂತಿರುವುದು ಕಂಡುಬಂದಿದ್ದು, ಸ್ವಲ್ಪ ದೂರದಲ್ಲಿ ಮರವೊಂದಕ್ಕೆ ನೈಲಾನ್‌ ಹಗ್ಗದಿಂದ ವಸಂತ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡುಬಂದಿದ್ದರು. ಈ ಕುರಿತು ವಸಂತ ಅವರ ಸಹೋದರ ಗಣೇಶ್‌ ಅವರು ಮರಣದಲ್ಲಿ ಸಂಶಯವಿದ್ದು, ತನಿಖೆ ನಡೆಸುವಂತೆ ಬೆಳ್ಳಾರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.


ಮೃತದೇಹದ ಕಾಲುಗಳಲ್ಲಿ ಮಣ್ಣು ಮೆತ್ತಿಕೊಂಡಿದೆ. ಚಪ್ಪಲಿ ನಾಪತ್ತೆಯಾಗಿದ್ದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ.


ಪ್ರಕರಣಕ್ಕೆ ವೈರಲ್  ವಿಡಿಯೋ ಕಾರಣವೇ..? 

ಕೆಲ ದಿನಗಳ ಹಿಂದೆ 

 ವಿಡಿಯೋ ವೈರಲ್ ಆಗಿತ್ತು.  ಆ ವೀಡಿಯೋವನ್ನು ಆತ್ಮಹತ್ಯೆ ಮಾಡಿಕೊಂಡ ವಸಂತರು ಯಾರಿಗೋ ತೋರಿಸಿದ್ದರು ಎನ್ನಲಾಗಿದೆ.  


ನಂತರ ಅದೇ ವಿಷಯದಲ್ಲಿ ವಸಂತರಿಗೆ ಹಲ್ಲೆ ನಡೆದಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅದೇ ವಿಡಿಯೋ ಇದ್ದ ಮೊಬೈಲನ್ನು ಎಳೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.



Leave a Comment: