ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಸುದ್ದಿಗಳು News

Posted by vidyamaana on 2024-07-03 07:52:29 |

Share: | | | | |


ಕಾಲೇಜಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಆರೋಪಿ ಮುಳಬಾಗಿಲಿನ ಅನಿಲ್ ಬಂಧನ

ಕೋಲಾರ: ನಗರ ಹೊರವಲಯದ ಖಾಸಗಿ ಕಾಲೇಜುವೊಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕಿಯೊಬ್ಬಳು (17) ಅದೇ ಕಾಲೇಜಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಯುವಕನನ್ನು ಬಂಧಿಸಲಾಗಿದೆ.ಮುಳಬಾಗಿಲಿನ ಅನಿಲ್‌ ಕುಮಾರ್‌ (21) ಬಂಧಿತ ಯುವಕ.ಕೋಲಾರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯು ಶ್ರೀನಿವಾಸಪುರ ತಾಲ್ಲೂಕಿನಿಂದ ಕಾಲೇಜಿಗೆ ಬರುತ್ತಿದ್ದಳು. ಸೋಮವಾರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಆಕೆ ಶೌಚಾಲಯಕ್ಕೆ ಹೋಗಿದ್ದಾಳೆ. ಈ ಸಮಯದಲ್ಲಿ ಮಗು ಜನನವಾಗಿದೆ. ಮಗುವಿನ ಅಳು ಸದ್ದು ಕೇಳಿ ಕಕ್ಕಾಬಿಕ್ಕಿಯಾದ ಕಾಲೇಜಿನ ಉಪನ್ಯಾಸಕಿಯರು, ಸಿಬ್ಬಂದಿ ಸ್ಥಳಕ್ಕೆ ಓಡಿ ಹೋಗಿದ್ದಾರೆ. ತಕ್ಷಣವೇ ಸಮೀಪದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಉಪನ್ಯಾಸಕರು ಬಾಲಕಿಯ ಪೋಷಕರಿಗೆ ವಿಚಾರ ಮುಟ್ಟಿಸಿದ್ದು, ಅವರೂ ಆಸ್ಪತ್ರೆಗೆ ಬಂದಿದ್ದಾರೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 Share: | | | | |


ಭಾರತ್ ಅಕ್ಕಿ ಪಡೆಯಲು ಮುಗಿ ಬಿದ್ದ ಜನರು; ಕೆಲವೇ ಕ್ಷಣಗಳಲ್ಲಿ ಖಾಲಿಯಾದ ಕ್ಯಾಂಟರ್

Posted by Vidyamaana on 2024-02-07 07:21:02 |

Share: | | | | |


ಭಾರತ್ ಅಕ್ಕಿ ಪಡೆಯಲು ಮುಗಿ ಬಿದ್ದ ಜನರು; ಕೆಲವೇ ಕ್ಷಣಗಳಲ್ಲಿ ಖಾಲಿಯಾದ ಕ್ಯಾಂಟರ್

ಕೋಲಾರ, ಫೆ.07: ಭಾರತ್ ಅಕ್ಕಿ(bharat brand rice) ಪಡೆಯಲು ಜನರು ಮುಗಿಬಿದ್ದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ(Bangarapet) ಪಟ್ಟಣದ ಬಸ್ ನಿಲ್ದಾಣದ ಬಳಿ ಕಂಡುಬಂದಿದೆ. ಒಬ್ಬೊಬ್ಬರು ಎರಡು ಮೂರು ಬ್ಯಾಗ್ ಅಕ್ಕಿ ಖರೀದಿ ಮಾಡಿದ್ದಾರೆ. ಹತ್ತು ಕೆ.ಜಿ ತೂಕದ ಬ್ಯಾಗ್​ಗಳನ್ನು ಕ್ಯಾಂಟರ್ ವಾಹನದಲ್ಲಿ ತುಂಬಿಕೊಂಡು ಬಂದು ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ನೋಡ‌ ನೋಡುತ್ತಲೇ ಭಾರತ್ ಅಕ್ಕಿ ಪಡೆಯಲು ಜನರ ನೂಕು ನುಗ್ಗಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಕ್ಯಾಂಟರ್ ಖಾಲಿಯಾಗಿದೆ.

ಬೆಳ್ತಂಗಡಿ: ಹಲ್ಲೆಗೊಳಗಾದ ಬಿಜೆಪಿ ಮುಖಂಡನ ಭೇಟಿ ಮಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

Posted by Vidyamaana on 2024-06-05 15:08:02 |

Share: | | | | |


ಬೆಳ್ತಂಗಡಿ: ಹಲ್ಲೆಗೊಳಗಾದ ಬಿಜೆಪಿ ಮುಖಂಡನ ಭೇಟಿ ಮಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ

ಬೆಳ್ತಂಗಡಿ, ಜೂ.5: ಕಳೆಂಜದ ಗ್ರಾಮದ ಬಿಜೆಪಿ ಮುಖಂಡ ರಾಜೇಶ್ ಎಂ.ಕೆ. ಮೇಲೆ ಜೂ.4ರಂದು ರಾತ್ರಿ ಮಾರಾಕಾಸ್ತ್ರಗಳಿಂದ ದಾಳಿಯಿಂದ ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಆಸ್ಪತ್ರೆಗೆ ದ.ಕ. ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

ಸೌಜನ್ಯ ಹೋರಾಟ ಸಮಿತಿಯಿಂದ ಲೋಕಸಭಾ ಚುನಾವಣೆಯಲ್ಲಿ ನೋಟಾ ಅಭಿಯಾನಕ್ಕೆ ಕರೆ

Posted by Vidyamaana on 2024-04-15 21:29:18 |

Share: | | | | |


ಸೌಜನ್ಯ ಹೋರಾಟ ಸಮಿತಿಯಿಂದ ಲೋಕಸಭಾ ಚುನಾವಣೆಯಲ್ಲಿ ನೋಟಾ ಅಭಿಯಾನಕ್ಕೆ ಕರೆ

ಪುತ್ತೂರು:  ಸುಮಾರು ಹನ್ನೆರಡು ವರ್ಷಗಳ ಹಿಂದೆ ಧರ್ಮಸ್ಥಳದ ಉಜಿರೆಯಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಪಕ್ಷದಿಂದ ನ್ಯಾಯ ಸಿಗಲಿಲ್ಲ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೋಟಾ ಚಲಾಯಿಸಬೇಕೆಂದು ಅಭಿಯಾನ ಮಾಡಲಿದ್ದೇವೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ತಿಮರೋಡಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ನೋಟ ಮತ ಪತ್ರ ಬಿಡುಗಡೆಗೊಳಿಸಲಾಯಿತು.

ನಾವು ಯಾವುದೇ ಪಕ್ಷವನ್ನು ದೂಷಣೆ ಮಾಡುವುದಿಲ್ಲ. ಯಾವುದೇ ರಾಜಕೀಯ ಪಕ್ಷ ಸೋಲಿಸಲು ಮತ್ತು ಯಾರನ್ನೋ ತೇಜೋವಧೆ ಮಾಡು ನೋಟ ಅಭಿಯಾನ ಮಾಡುತ್ತಿಲ್ಲ. ಧರ್ಮದ ಸತ್ಯದ ಚುನಾವಣೆಯಾಗಿ ನೋಟಾ ಅಭಿಯಾನ ಮಾಡಲಿದ್ದೇವೆ. ನಮಗೆ ಮೇಲಿನವರು ಯಾರು ಅರ್ಹರಲ್ಲ ಎಂಬ ಉದ್ದೇಶದಿಂದ ನೋಟಾ ಅಭಿಯಾನ ಮಾಡುತ್ತಿದ್ದೇವೆ. ೧೨ ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಹಲವು ಕೇಸು ಹಾಕಿದ್ದಾರೆ. ಇಲ್ಲಿ ಶಾಶಾಂಗ ಸತ್ತಿದೆ. ಹಾಗಾಗಿ ನಾವು ನೋಟಾ ಕ್ಕೆ ಮತ ಚಲಾಯಿಸಲಿದ್ದೇವೆ. ನಮಗೆ ಸುಮಾರು ಒಂದೂವರೆಯಿಂದ ಎರಡು ಲಕ್ಷ ನೋಟಾ ಮತ ಬರುವ ನಿರೀಕ್ಷೆಯಿದೆ ಎಂದರು. 

ಬೆಳ್ತಂಗಡಿ :ಸೋಮಾವತಿ ನದಿ ನೀರಿಗೆ ವಿಷಪ್ರಾಶನ- ಸಾವಿರಾರು ಮೀನುಗಳ ಮಾರಣಹೋಮ

Posted by Vidyamaana on 2023-04-27 03:08:16 |

Share: | | | | |


ಬೆಳ್ತಂಗಡಿ :ಸೋಮಾವತಿ ನದಿ ನೀರಿಗೆ ವಿಷಪ್ರಾಶನ- ಸಾವಿರಾರು ಮೀನುಗಳ ಮಾರಣಹೋಮ

ಬೆಳ್ತಂಗಡಿ: ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಶ್ರಯವಾಗಿದ್ದ ಸೋಮಾವತಿ ನದಿ ನೀರಿಗೆ ಕಿಡಿಕೇಡಿಗಳು ವಿಷ ಪದಾರ್ಥ ಹಾಕಿರುವ ಪರಿಣಾಮ ಸಾವಿರಾರು ಮೀನುಗಳ ಮಾರಹೋಮ ನಡೆದಿದೆ.ಇಂದು ಬೆಳ್ಳಂ ಬೆಳಗ್ಗೆ ಘಟನೆ ವರದಿಯಾಗಿದ್ದು, ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ನದಿಯಲ್ಲಿದ್ದ ಘಟಕಕ್ಕೆ ವಿಷ ಪ್ರಾಶಾನ ಮಾಡಿದ ಪರಿಣಾಮ ಸಾವಿರಾರು ಮೀನುಗಳ ಮಾರಣ ಸತ್ತುಬಿದ್ದಿವೆ.ನಗರಕ್ಕೆ ಪ್ರಸಕ್ತ ಪ್ರತಿ ದಿನ 10 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದ್ದು ಇದೇ ನೀರನ್ನು ಅವಲಂಬಿಸಲಾಗಿತ್ತು.  ಆದರೆ ವಿಷ ಪ್ರಾಶನವಾಗಿರುವ ಪರಿಣಾಮ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ.

ಕಳೆದ ಮೂರು ವರ್ಷ ಇದೇ ಸ್ಥಳದಲ್ಲಿ ಹಿಂದೊಮ್ಮೆ ಈ ರೀತಿಯ ಕೃತ್ಯ ನಡೆಸಲಾಗಿತ್ತು. ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಪಟ್ಟಣ ಪಂಚಾಯತ್ ಕೃತ್ಯದ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.

ನದಿಯಲ್ಲಿ ಸಂಪೂರ್ಣ ನೀರು ಬತ್ತಿ ಕುಡಿಯಲು ನೀರಿನ ಹಾಹಾಕಾರವಿರುವ ಸಮಯದಲ್ಲಿ ಕಿಡಿಗೇಡಿಗಳು ಇಂತಹ ಕೃತ್ಯ ನಡೆಸಿದವರ ವಿರುದ್ಧ ಜನರಿಂದ ಬಹಳಷ್ಟು ಆಕ್ರೋಶ ವ್ಯಕ್ತವಾಗಿದ್ದು ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ.

ಮೋದಿ 3.0 : ದೇವರ ಹೆಸರಲ್ಲಿ ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ

Posted by Vidyamaana on 2024-06-09 21:35:34 |

Share: | | | | |


ಮೋದಿ 3.0 : ದೇವರ ಹೆಸರಲ್ಲಿ ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ

ನವದೆಹಲಿ : ಈ ಬಾರಿ ಚಿಕ್ಕಮಂಗಳೂರು ಉಡುಪಿ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು ಇಂದು ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಶೋಭಾ ಕರಂದ್ಲಾಜೆ ಅವರು 2004ರಲ್ಲಿ ಬಿಜೆಪಿ ಎಂಎಲ್ಸಿಯಾಗಿ ಆಯ್ಕೆಯಾಗಿದ್ದಾರೆ. 2014ರಲ್ಲಿ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 2019 ರಲ್ಲಿ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾಗಿದ್ದು, ಶಾಸಕಿ,ಎಂಎಲ್ಸಿ ಹಾಗೂ ಸಂಸದರಾಗಿ ಆಯ್ಕೆಯಾಗಿದ್ದಾರೆ. 2018 ರಲ್ಲಿ ಬೆಂಗಳೂರಿನ ಯಶವಂತಪುರದ ಶಾಸಕಿಯಾಗಿದ್ದಾರೆ.

ಕಡಬ : ಮನೆ ಬೀಗ ಮುರಿದು ಲಕ್ಷಾಂತರ ಮೌಲ್ಯದ ನಗ,ನಗದು ಲೂಟಿ..!

Posted by Vidyamaana on 2024-01-05 08:04:40 |

Share: | | | | |


ಕಡಬ : ಮನೆ ಬೀಗ ಮುರಿದು ಲಕ್ಷಾಂತರ ಮೌಲ್ಯದ ನಗ,ನಗದು ಲೂಟಿ..!

ಕಡಬ,ಜ 04. ಮನೆಗೆ ಬೀಗ ಹಾಕಿ ಮನೆ ಮಂದಿ ಆತೂರು ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ, ನಗದನ್ನು ದೋಚಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಆತೂರು ಕೊಯಿಲ ಎಂಬಲ್ಲಿ  ಗುರುವಾರ ತಡರಾತ್ರಿ ನಡೆದಿದೆ.ಆತೂರು ಕೊಯಿಲ ಸಮೀಪದ ಕಲಾಯಿ ನಿವಾಸಿ ಯಾಕುಬ್ ಎಂಬವರ ಮನೆಯ ಬೀಗ ಮುರಿದ ಕಳ್ಳರು, ನಗದನ್ನು ದೋಚಿದ್ದಾರೆ. ಪಕ್ಕದಲ್ಲಿರುವ ಮನೆಯೊಂದರ ಬೀಗ ಮುರಿಯುವ ವೇಳೆ ಆಟೋ ರಿಕ್ಷಾ ಆಗಮಿಸುವುದನ್ನು ನೋಡಿದ ಕಳ್ಳರು ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ



Leave a Comment: