ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಇಸ್ರೇಲ್ ಪರ ಪೋಸ್ಟ್ ; ಬೆಹ್ರೈನಲ್ಲಿ ಮಂಗಳೂರು ಮೂಲದ ಕನ್ನಡಿಗ ವೈದ್ಯ ಡಾ.ಸುನಿಲ್ ರಾವ್ ಅರೆಸ್ಟ್ ಕೆಲಸದಿಂದ ವಜಾ

Posted by Vidyamaana on 2023-10-20 12:51:56 |

Share: | | | | |


ಇಸ್ರೇಲ್ ಪರ ಪೋಸ್ಟ್ ; ಬೆಹ್ರೈನಲ್ಲಿ ಮಂಗಳೂರು ಮೂಲದ ಕನ್ನಡಿಗ ವೈದ್ಯ ಡಾ.ಸುನಿಲ್ ರಾವ್ ಅರೆಸ್ಟ್ ಕೆಲಸದಿಂದ ವಜಾ

ಮಂಗಳೂರು : ಇಸ್ರೇಲ್ ಪರ ಪೋಸ್ಟ್ ಹಾಕಿರುವ ಕಾರಣಕ್ಕೆ ಬೆಹ್ರೈನಲ್ಲಿ ಹತ್ತು ವರ್ಷಗಳಿಂದ ವೈದ್ಯರಾಗಿರುವ ಕನ್ನಡಿಗ, ಮಂಗಳೂರು ಮೂಲದ ವೈದ್ಯ ಡಾ.ಸುನಿಲ್ ರಾವ್ ಅವರನ್ನು ಬೆಹ್ರೈನ್ ಪೊಲೀಸರು ಬಂಧಿಸಿದ್ದಾರೆ. 


 ಇಸ್ರೇಲ್ ದೇಶದ ಪರವಾಗಿ ಡಾ.ಸುನಿಲ್ ರಾವ್ ಹಾಕಿದ್ದ ಟ್ವಿಟರ್ ಪೋಸ್ಟ್ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೆಲವರು ಈ ಪೋಸ್ಟ್ ಅನ್ನು ಬೆಹ್ರೈನ್ ಆಡಳಿತಕ್ಕೆ ಟ್ಯಾಗ್ ಮಾಡಿ, ಕ್ರಮಕ್ಕೆ ಆಗ್ರಹ ಮಾಡಿದ್ದರು. ಪ್ಯಾಲೆಸ್ತೀನ್ ವಿರೋಧಿಸಿ ಪೋಸ್ಟ್ ಹಾಕಿದ್ದಾರೆಂದು ಆಡಳಿತದ ಗಮನಕ್ಕೆ ತಂದಿದ್ದರು.


 ಮಂಗಳೂರಿನ ಕೆಎಂಸಿ ಕಾಲೇಜಿನಲ್ಲಿ ಎಂಡಿ ಮಾಡಿದ್ದ ಡಾ. ಸುನಿಲ್ ರಾವ್, ವಿಶಾಖಪಟ್ಟಣದಲ್ಲಿ ಎಂಬಿಬಿಎಸ್ ಪೂರೈಸಿದ್ದರು. ರಾಯಲ್ ಹಾಸ್ಪಿಟಲ್ ಬೆಹ್ರೈನ್ ಸಂಸ್ಥೆಯಲ್ಲಿ 10 ವರ್ಷಗಳಿಂದ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಸ್ಪೆಷಲಿಸ್ಟ್ ಆಗಿದ್ದರು. ಬೆಹ್ರೈನ್ ಪೊಲೀಸರು ಬಂಧಿಸಿದ ಬೆನ್ನಲ್ಲೇ ಆಸ್ಪತ್ರೆ ಹುದ್ದೆಯಿಂದ ತೆಗೆದು ಹಾಕಲಾಗಿದೆ. ಭಾರತೀಯ ಮೂಲದ ಡಾ.ಸುನಿಲ್ ರಾವ್ ಬಂಧನ ಆಗಿರುವ ಬಗ್ಗೆ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.  ವೈದ್ಯರ ವಿರುದ್ಧ ಕ್ರಮ ಕೈಗೊಂಡಿರುವುದನ್ನು ಖಂಡಿಸಿದ್ದಾರೆ.

ಪ್ರಿಯತಮನ ಜೊತೆ ಶೋಕಿಗಾಗಿ ಮನೆ ಮಾಲಕಿಯ ಕೊಲೆ ಮಾಡಿದ ಯುವತಿ ಸೆರೆ

Posted by Vidyamaana on 2024-05-15 11:37:56 |

Share: | | | | |


ಪ್ರಿಯತಮನ ಜೊತೆ ಶೋಕಿಗಾಗಿ ಮನೆ ಮಾಲಕಿಯ ಕೊಲೆ ಮಾಡಿದ ಯುವತಿ ಸೆರೆ

ಬೆಂಗಳೂರು : ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದ ಯುವತಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.ಮೋನಿಕಾ (24) ಬಂಧಿತ ಆರೋಪಿ. ಮೇ 10 ರಂದು ಕೆಂಗೇರಿ (women murder case) ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ಒಂಟಿ ಮಹಿಳೆಯ ಕೊಲೆ ನಡೆದಿತ್ತು.ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡಿದ್ದ ಮೋನಿಕಾ ಮೂಲತಃ ಕೋಲಾರ ಜಿಲ್ಲೆಯವಳಾಗಿದ್ದು, ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಗುರುಮೂರ್ತಿ ಎಂಬುವರ ಮನೆಯಲ್ಲಿ ಮೂರು ತಿಂಗಳ ಹಿಂದಷ್ಟೇ ಬಾಡಿಗೆಗೆ ಬಂದಿದ್ದಳು. ಈ ವೇಳೆ ಆಕೆ ಪ್ರಿಯಕರನನ್ನೇ ತನ್ನ ಗಂಡ ಎಂದು ಹೇಳಿ ಬಾಡಿಗೆ ಮನೆ ಗಿಟ್ಟಿಸಿದ್ದಳು. ಆದರೆ ಒಬ್ಬಂಟಿಯಾಗಿ ವಾಸವಿದ್ದ ಮೋನಿಕಾ ಮನೆಗೆ ಪ್ರಿಯಕರ ಆಗಾಗ ಬಂದು ಹೋಗುತ್ತಿದ್ದ.

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿಗೆ ಶಿಲಾನ್ಯಾಸ | 35 ಲಕ್ಷ ರೂ. ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಮಠಂದೂರು

Posted by Vidyamaana on 2023-03-11 09:04:59 |

Share: | | | | |


ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿಗೆ ಶಿಲಾನ್ಯಾಸ | 35 ಲಕ್ಷ ರೂ. ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಮಠಂದೂರು

ಪುತ್ತೂರು: ಅತ್ಯಂತ ಪಾವಿತ್ರ್ಯತೆ ಹೊಂದಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಅಭಿವೃದ್ಧಿ ಬಹುದಿನಗಳ ಬೇಡಿಕೆಯಾಗಿದ್ದು, ಇದೀಗ 35 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಅನುದಾನ ತರಿಸಿಕೊಂಡು, ಇನ್ನಷ್ಟು ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿ ಅಭಿವೃದ್ಧಿಗಾಗಿ ಪುಡಾದ 35 ಲಕ್ಷ ರೂ. ಅನುದಾನದ ಕಾಮಗಾರಿಗೆ ಶನಿವಾರ ತೆಂಗಿನಕಾಯಿ ಒಡೆಯುವ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರುಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಪುಷ್ಕರಿಣಿ ಧಾರ್ಮಿಕ ಮಹತ್ವವನ್ನು ಹೊಂದಿದೆ. ಆದ್ದರಿಂದ ಈ ಕೆರೆಯನ್ನು ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಹಂತಹಂತವಾಗಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದರು

.ಬನ್ನೂರು ಕೆರೆಗೆ 1.75 ಕೋಟಿ ಅಂದಾಜು ಪಟ್ಟಿ ತಯಾರಿ : ಭಾಮಿ ಅಶೋಕ್ ಶೆಣೈ

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್‍ ಶೆಣೈ ಮಾತನಾಡಿ, ನಗರ ಸೇರಿದಂತೆ ಹೊರವಲಯದ ಹಲವು ಕೆರೆಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಈಗಾಗಲೇ ಬನ್ನೂರು ಕೆರೆ ಅಭಿವೃದ್ಧೀಗೆ 1.75 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಲಾಗಿದೆ. ಈ ಪ್ರಕ್ರಿಯೆ ಕೇವಲ ನಾಲ್ಕು ದಿನಗಳಲ್ಲಿ ನಿರ್ಐಯ ತೆಗೆದುಕೊಂಡು ಮಾಡಲಾಗಿದೆ ಎಂದ ಅವರು, ದೇವಸ್ಥಾನದ ಕೆರೆ ಅಭಿವೃದ್ಧಿಗೆ 35 ಲಕ್ಷ ರೂ. ಅನುದಾನ ಪುಡಾ ವತಿಯಿಂದ ನೀಡಲಾಗಿದ್ದು, ಅನುದಾನ ನೀಡುವಲ್ಲಿ ಶಾಸಕ ಸಂಜೀವ ಮಠಂದೂರು ಅವರು ಪಾತ್ರ ಮಹತ್ವದ್ದಾಗಿದೆ. ಇನ್ನಷ್ಟು ಅನುದಾನ ಒದಗಿಸುವ ಭರವಸೆ ನೀಡಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಚಕ್ರದಿಂದ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಪುಷ್ಕರಣಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡುವಲ್ಲಿ ಪುತ್ತೂರು ಶಾಸಕರು ಸೇರಿದಂತೆ ಎಲ್ಲರೂ ಕೈಜೋಡಿಸುವಿಕೆಯಿಂದ ಆಗಿದೆ. ಒಟ್ಟಾರೆಯಾಗಿ ದೇವಸ್ಥಾನದ ಅಭಿವೃದ್ಧಿ ಕೆಲಸಗಳು ಸರಿಯಾದ ರೀತಿಯಲ್ಲಿ ಸಾಗುತ್ತಿದೆ ಎಂದರು.

ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್‍ ಮಾತನಾಡಿದರು. ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, , ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಲಾಷ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ರಮೇಶ್‍ ಭಟ್, ಜಯಶ್ರೀ ಶೆಟ್ಟಿ, ನ್ಯಾಯವಾದಿ ಚಿದಾನಂದ ಬೈಲಾಡಿ ಮತ್ತಿತರರು ಉಪಸ್ಥಿತರಿದ್ದರು.

ಅಪೂರ್ವ ಪ್ರಾರ್ಥನೆ ಹಾಡಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ವಂದಿಸಿದರು. ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ, ರಾಮದಾಸ್ ಗೌಡ, ವೀಣಾ ಬಿ.ಕೆ.ಶೇಖರ್ ನಾರಾವಿ, ಮ್ಯಾನೇಜರ್ ಹರೀಶ್‍ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು

ಯಾವುದೇ ಸಮಸ್ಯೆಯಾದರೂ ನನಗೆ ಅಥವಾ ನನ್ನ‌ಕಚೇರಿಗೆ ಮಾಹಿತಿ ಕೊಡಿ: ಶಾಸಕ ಅಶೋಕ್ ರೈ ಮನವಿ

Posted by Vidyamaana on 2024-06-27 21:21:41 |

Share: | | | | |


ಯಾವುದೇ ಸಮಸ್ಯೆಯಾದರೂ ನನಗೆ ಅಥವಾ ನನ್ನ‌ಕಚೇರಿಗೆ ಮಾಹಿತಿ ಕೊಡಿ: ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಅಲ್ಲಲ್ಲಿ ಮಳೆಯ ಕಾರಣಕ್ಕೆ ಅವಘಡಗಳು ಸಂಭವಿಸುತ್ತಲೇ ಇದೆ. ಸಾರ್ವಜನಿಕರು ಬಹಳ ಎಚ್ಚರದಿಂದ ಇರಬೇಕು. ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಬೇಡಿ. ಹೊಳೆ,ಕೆರೆ,ಭಾವಿಯ ಕಡೆ ಮಕ್ಕಳು ತೆರಳದಂತೆ ಎಚ್ಚರವಹಿಸಿ. ವಿದ್ಯುತ್ ಕಂಬ, ಮನೆಯ ವಿದ್ಯುತ್ ಮೀಟರ್, ಟ್ರಾನ್ಸ್ ಫಾರ್ಮರ್ ,ವಿದ್ಯುತ್ ಕಂಬ ಮುಟ್ಟಲು ಹೋಗಬೇಡಿ. ಬಾವಿ ಕುಸಿಯುತ್ತಿರುವ ಘಟನೆಗಳು ನಡೆದಿದ್ದು ಬಾವಿಯಿಂದ ದೂರ ಇರಿ. ಮನೆಯ ಬಳಿ ಧರೆ ಇದ್ದರೆ ಅದಕ್ಕೆ ಪ್ಲಾಸ್ಡಿಕ್ ಹೊದಿಕೆ ಹಾಕಿ ನೀರು ಇಂಗದಂತೆ ನೋಡಿಕೊಳ್ಳಿ. ಧರೆ ಕುಸಿಯುವ ಭೀತಿಯಲ್ಲಿದ್ದರೆ ತಕ್ಷಣ ನನಗೆ ಅಥವಾ ನನ್ನ ಕಚೇರಿಗೆ ಕರೆ ಮಾಡಿ ತಿಳಿಸಿ. 

ರನ್ ವೇ ನಲ್ಲಿ ಬದ್ಧ ವೈರಿಗಳ ಕಾಳಗ: ನಾಗರ ಹಾವಿನ ಮೇಲೆ 3 ಮುಂಗುಸಿಗಳ ದಾಳಿ, ಅಪರೂಪದ Video

Posted by Vidyamaana on 2024-08-13 07:51:26 |

Share: | | | | |


ರನ್ ವೇ ನಲ್ಲಿ ಬದ್ಧ ವೈರಿಗಳ ಕಾಳಗ: ನಾಗರ ಹಾವಿನ ಮೇಲೆ 3 ಮುಂಗುಸಿಗಳ ದಾಳಿ, ಅಪರೂಪದ Video

ಪಾಟ್ನಾ: ವಿಮಾನ ನಿಲ್ದಾಣದ ರನ್ ವೇ ನಲ್ಲಿಯೇ ಬದ್ಧ ವೈರಿಗಳಾದ ಹಾವು ಮತ್ತು ಮುಂಗುಸಿಗಳು ಕಾದಾಡಿರುವ ವಿಡಿಯೋ ವೈರಲ್ ಆಗುತ್ತಿದೆ.ಹಾವು ಮತ್ತು ಮುಂಗುಸಿ ಜೈವಿಕವಾಗಿ ಬದ್ಧವೈರಿಗಳು.. ಇವುಗಳ ಕದನ ಮನುಷ್ಯಕ ಕಣ್ಣಿಗೆ ಕಾಣಸಿಗುವುದು ಅಪರೂಪ. ಆದರೆ ಬಿಹಾರ ರಾಜಧಾನಿ ಪಾಟ್ನಾದ ವಿಮಾನ ನಿಲ್ದಾಣದ ರನ್ ವೇ ಮೇಲೆಯೇ ಇಂತಹ ಅಪರೂಪದ ದೃಶ್ಯ ಕಂಡಿದೆ.

ಉಳ್ಳಾಲ :ಸೇವಂತಿಗುಡ್ಡೆ ನಿವಾಸಿ ಮಾಜಿ ರೌಡಿ ಶಮೀರ್ ನೇಣಿಗೆ ಶರಣು

Posted by Vidyamaana on 2023-10-17 16:51:05 |

Share: | | | | |


ಉಳ್ಳಾಲ :ಸೇವಂತಿಗುಡ್ಡೆ ನಿವಾಸಿ  ಮಾಜಿ ರೌಡಿ ಶಮೀರ್ ನೇಣಿಗೆ ಶರಣು

ಉಳ್ಳಾಲ, ಅ.17: ಬಿಸಿ ರಕ್ತದಲ್ಲಿ ಮದ್ಯ, ಗಾಂಜಾ ಸೇದಿ ರೌಡಿಸಂ ನಡೆಸಿದ್ದ ಉಳ್ಳಾಲ ಪೊಲೀಸ್ ಠಾಣೆಯ ಮಾಜಿ ರೌಡಿ ಶೀಟರ್ ಓರ್ವ ಮನೆಯಲ್ಲಿ ಟಿ.ವಿ ನೋಡುತ್ತಲೇ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.


ಸೇವಂತಿಗುಡ್ಡೆ ನಿವಾಸಿ ಶಮೀರ್ (41)ಆತ್ಮಹತ್ಯೆಗೈದ ವ್ಯಕ್ತಿ. ಶಮೀರ್ ಕ್ಯಾನ್ಸರ್ ನಿಂದ ಮೃತಪಟ್ಟ ನಟೋರಿಯಸ್ ರೌಡಿ ಶಬರಿಯ ಸಹಚರನಾಗಿದ್ದು ಉಳ್ಳಾಲ ಠಾಣೆಯಲ್ಲಿ ಹಳೆಯ ರೌಡಿ ಶೀಟರ್ ಆಗಿದ್ದ. ಗಾಂಜಾ, ಮದ್ಯ ವ್ಯಸನಿಯಾಗಿದ್ದ ಶಮೀರ್ ಜೀವನ ನಿರ್ವಹಣೆಗೆ ಇತ್ತೀಚಿಗೆ‌ ಆಟೋ ರಿಕ್ಷಾ ಚಲಾಯಿಸುತ್ತಿದ್ದು ತೊಕ್ಕೊಟ್ಟಿನ ಒಳಪೇಟೆಯ ರಿಕ್ಷಾ ಪಾರ್ಕಲ್ಲಿ ದುಡಿಯುತ್ತಿದ್ದ. 


ನಿನ್ನೆ ಸಂಜೆ ಒಳಪೇಟೆಯ ರಿಕ್ಷಾ ಚಾಲಕರಲ್ಲಿ ಗಲಾಟೆ ನಡೆಸಿದ್ದ ಶಮೀರ್ ಯಾರೊಬ್ಬರಿಗೂ ಪಾರ್ಕಲ್ಲಿ ಆಟೋ ರಿಕ್ಷಾ ಪಾರ್ಕ್ ಮಾಡಲು ಬಿಡುವುದಿಲ್ಲವೆಂದು ಆವಾಝ್ ಹಾಕಿದ್ದನಂತೆ.




ಶಮೀರನ ತಾಯಿ ಒಂದು ತಿಂಗಳ ಹಿಂದಷ್ಟೆ ಮೃತಪಟ್ಟಿದ್ದರಂತೆ. ಮೂರು ದಿನಗಳ ಹಿಂದಷ್ಟೆ ಶಮೀರ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಪಲ್ಟಿ ಹೊಡೆದಿದ್ದು, ರಿಕ್ಷಾದ ಲೋನ್ ಬಾಕಿಯಿದ್ದು ಬ್ಯಾಂಕಿನ ಸೀಝರ್ ಗಳು ದಿನ ನಿತ್ಯವೂ ಶಮೀರ್ ಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರಂತೆ. ಮೃತ ಶಮೀರ್ ಗೆ ಎರಡು ಹೆಣ್ಣು, ಒಂದು ಗಂಡು ಮಕ್ಕಳಿದ್ದು ಪತ್ನಿಯೂ ಅನಾರೋಗ್ಯದಲ್ಲಿ ಬಳಲುತ್ತಿದ್ದಾರೆ ಎನ್ನಲಾಗಿದೆ. ನವರಾತ್ರಿ ರಜೆ ಸಿಕ್ಕ ಕಾರಣ ಪತ್ನಿ , ಮಕ್ಕಳು ತವರು ಸೇರಿದ್ದು,ಇಂದು ಬೆಳಗ್ಗೆ ಮನೆಯಲ್ಲಿ ಒಂಟಿಯಾಗಿದ್ದ ಶಮೀರ್ ಟಿ.ವಿ ನೋಡುತ್ತಲೇ ‌ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.


ಯೌವನದಲ್ಲಿ ಮದ್ಯ ,ಗಾಂಜಾದ ಅಮಲಿನಲ್ಲಿ ಉಳ್ಳಾಲದಲ್ಲಿ ಪುಡಿ ರೌಡಿಗಳಾಗಿ ಅಟ್ಟಹಾಸ ಮೆರೆದಿದ್ದ ಶಬರಿ, ಶಮೀರ್ ಇಬ್ಬರೂ ಅಕಾಲಿಕ ಸಾವು ಕಂಡಿದ್ದು ವಿಪರ್ಯಾಸ.

Recent News


Leave a Comment: