ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಬೆಳ್ತಂಗಡಿ : ಕಬಡ್ಡಿ ಆಟಗಾರ ಸ್ವರಾಜ್ ಆತ್ಮಹತ್ಯೆ ಶರಣು

Posted by Vidyamaana on 2023-08-31 06:26:48 |

Share: | | | | |


ಬೆಳ್ತಂಗಡಿ : ಕಬಡ್ಡಿ ಆಟಗಾರ ಸ್ವರಾಜ್ ಆತ್ಮಹತ್ಯೆ ಶರಣು

ಬೆಳ್ತಂಗಡಿ : ಪುದುವೆಟ್ಟು ಕುಬಲ ನಿವಾಸಿ ಸ್ವರಾಜ್ (24) ರವರು ನೇಣುಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಆ.31 ರಂದು ಬೆಳಿಗ್ಗೆ ನಡೆದಿದೆ


ಇವರು ಪ್ರಸುತ್ತ ಧರ್ಮಸ್ಥಳದಲ್ಲಿ ವಾಸಾವಾಗಿದ್ದು ಇವರ ಹಳೆಮನೆಯಾದ ಪುದುವೆಟ್ಟುವಿನಲ್ಲಿ ಸ್ನಾನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಬಡ್ಡಿ ಆಟದಲ್ಲಿ ಅತ್ಯುತ್ತಮ ಆಟಗಾರನಾಗಿದ್ದು , ಉಜಿರೆಯ ಸಾನಿಧ್ಯ ಖಾಸಗಿ ಕಂಪನಿ ಒಂದರಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು.ತಂದೆ ಸತೀಶ್, ತಾಯಿ ಸ್ವಾತಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ

ಬಿಕಾಂ ಪದವೀಧರನ ಆಯುರ್ವೇದಿಕ್ ಕ್ಲಿನಿಕ್ ಮೇಲೆ ದಾಳಿ – ಕ್ಲಿನಿಕ್ ಸೀಝ್

Posted by Vidyamaana on 2023-12-17 16:18:09 |

Share: | | | | |


ಬಿಕಾಂ ಪದವೀಧರನ ಆಯುರ್ವೇದಿಕ್ ಕ್ಲಿನಿಕ್ ಮೇಲೆ ದಾಳಿ – ಕ್ಲಿನಿಕ್ ಸೀಝ್

ಉಡುಪಿ: ಆರೋಗ್ಯ ಇಲಾಖೆಯ ಅಧಿಕಾರಿಗಳು ರಾಜ್ಯದ ವಿವಿಧ ಜಿಲ್ಲೆಗಳ ಆಸ್ಪತ್ರೆ, ಕ್ಲಿನಿಕ್, ಲ್ಯಾಬ್ ಗಳ ಮೇಲೆ ದಾಳಿ ನಡೆಸಿ ಬಿಕಾಂ ಪದವೀಧರ ‘ಆಯುರ್ವೇದಿಕ್ ಡಾಕ್ಟರ್’ನ್ನು ಅರೆಸ್ಟ್‌ ಮಾಡಿದ್ದಾರೆ. ದಾಳಿಯಲ್ಲಿ ಇತರ ನಕಲಿ ವೈದ್ಯರು ಸಿಕ್ಕಿ ಬಿದ್ದಿದ್ದಾರೆ ಎಂದೂ ವರದಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ 7 ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಬಿಕಾಂ ಪದವೀಧರನೇ ಆಯುರ್ವೇದಿಕ್, ಆಲೋಪತಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದುದು ಬಯಲಾಗಿದೆ.


ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಂಜಾಲು ಎಂಬಲ್ಲಿ ಆಯುರ್ವೇದಿಕ್ ಕ್ಲಿನಿಕ್ ಮೇಲೆ ದಾಳಿ ನಡೆಸಿದಾಗ ಬಿಕಾಂ ಪದವೀಧರನಾಗಿರುವ ಸಂದೇಶ್ ರಾವ್ ತಾನು ಆಯುರ್ವೇದಿಕ್ ವೈದ್ಯ ಎಂದು ಆಯುರ್ವೇದಿಕ್ ಸೆಂಟರ್ ತೆಗೆದಿರುವುದು ಪತ್ತೆಯಾಗಿದೆ.ಆಯುರ್ವೇದಿಕ್ ಸೆಂಟರ್ ಸೀಜ್ ಮಾಡಿರುವ ಅಧಿಕಾರಿಗಳು ಬ್ರಹ್ಮಾವರ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ

ಕ್ರಿಕೆಟ್​ ಆಡಿ ಬಂದು ತಕ್ಷಣ ನೀರು ಕುಡಿದ ಬಾಲಕ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಸಾವು

Posted by Vidyamaana on 2023-12-31 16:02:08 |

Share: | | | | |


ಕ್ರಿಕೆಟ್​ ಆಡಿ ಬಂದು ತಕ್ಷಣ ನೀರು ಕುಡಿದ ಬಾಲಕ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಸಾವು

ಲಕ್ನೋ: ಕ್ರಿಕೆಟ್‌ ಆಡಿ ನೀರು ಕುಡಿದ ಬಳಿಕ ಬಾಲಕನೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಲ್ಮೋರಾ ಜಿಲ್ಲೆಯಲ್ಲಿ ನಡೆದಿದೆ.ಶನಿವಾರ(ಡಿ.30 ರಂದು) ನಡೆದಿದ್ದು, ಹಸನ್‌ಪುರದ ಕಾಯಸ್ತಾನ್‌ನ 10ನೇ ತರಗತಿ ವಿದ್ಯಾರ್ಥಿ ಪ್ರಿನ್ಸ್ ಸೈನಿ ಎಂಬ ಬಾಲಕ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.ಬಾಲಕ ಸೈನಿ ಕ್ರಿಕೆಟ್‌ ಆಡಿದ ಬಳಿಕ ನೀರು ಕುಡಿಯಲು ಬಂದಿದ್ದಾನೆ. ಕೋಲ್ಡ್‌ ನೀರು ಕುಡಿದಿದ್ದಾನೆ. ನೀರು ಕುಡಿದ ತಕ್ಷಣವೇ ಆತ ಪ್ರಜ್ಞೆ ತಪ್ಪಿದ್ದಾನೆ.


ಪ್ರಿನ್ಸ್‌ ಅವರ ಸ್ನೇಹಿತರು ವಿಚಾರವನ್ನು ಮನೆಯವರಿಗೆ ತಿಳಿಸಿದ್ದು,ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಪರೀಕ್ಷೆ ಮಾಡಿದ ವೈದ್ಯರು ಆದಾಗಲೇ ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ.ಬಾಲಕನ ಸಾವಿಗೆ ಹೃದಯಾಘಾತವೇ ಕಾರಣವಿರಬಹದೆಂದು ಶಂಕಿಸಲಾಗಿದೆ. ಸದ್ಯ ಈ ಬಗ್ಗೆ ಪೋಷಕರು ದೂರು ದಾಖಲಿಸಿಲ್ಲ ಎಂದು ವರದಿ ತಿಳಿಸಿದೆ.

ನಗರಸಭೆ ಉಪಚುನಾವಣೆ : ಪುತ್ತಿಲ ಪರಿವಾರದ ಅಭ್ಯರ್ಥಿಗಳಿಗೆ ಎರಡು ಕಡೆಯೂ ಮತ್ತೊಮ್ಮೆ ಬ್ಯಾಟ್ ಚಿಹ್ನೆ

Posted by Vidyamaana on 2023-12-18 20:14:00 |

Share: | | | | |


ನಗರಸಭೆ ಉಪಚುನಾವಣೆ : ಪುತ್ತಿಲ ಪರಿವಾರದ ಅಭ್ಯರ್ಥಿಗಳಿಗೆ ಎರಡು ಕಡೆಯೂ ಮತ್ತೊಮ್ಮೆ ಬ್ಯಾಟ್ ಚಿಹ್ನೆ

ಪುತ್ತೂರು: ನಗರಸಭೆಯ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎರಡೂ ಕಡೆಯೂ ಚುನಾವಣ ಆಯೋಗ ಬ್ಯಾಟ್ ಚಿಹ್ನೆಯನ್ನು ನೀಡಿದೆ. 



ರಕ್ತೇಶ್ವರಿ ಘಟಕ ಕಬಕ ವಾರ್ಡ್ -1 ರಲ್ಲಿ ಅನ್ನಪೂರ್ಣ ರಾವ್  ಮತ್ತು ಚಿಕ್ಕಪುತ್ತೂರು ನೆಲ್ಲಿಕಟ್ಟೆ ವಾರ್ಡ್ ನಂ. 11 ರಲ್ಲಿ  ಚಿಂತನ್.ಪಿ ಪುತ್ತಿಲ ಪರಿವಾರದ ವತಿಯಿಂದ ಪಕ್ಷೇತರ ಸ್ಪರ್ಧಿಸುತ್ತಿದ್ದು ಇಬ್ಬರಿಗೂ ಚುನಾವಣೆ ಆಯೋಗ ಬ್ಯಾಟ್ ಚಿಹ್ನೆ ನೀಡಿದೆ.


ಪುತ್ತೂರಿನ ವಿಧಾನಸೌಧ ಚುನಾವಣ ಸಂದರ್ಭ ಅರುಣ್ ಕುಮಾರ್ ಪುತ್ತಿಲರಿಗೂ ಇದೇ ಚಿಹ್ನೆ ಲಭಿಸಿತ್ತು.  ಪುತ್ತೂರು ನಗರಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸಂದರ್ಭ ಚಿಹ್ನೆ ಆಯ್ಕೆ ಸಂದರ್ಭ ಎರಡು ಕಡೆಯೂ ಅರ್ಜಿಯಲ್ಲಿ ಬ್ಯಾಟ್ ಗೆ ಮೊದಲ ಪ್ರಾಶಸ್ತ್ಯ ನೀಡಲಾಗಿತ್ತು. ಚುನಾವಣ ಆಯೋಗ ನಾಮಪತ್ರ  ಪರಿಶೀಲಿಸಿ ಬ್ಯಾಟ್ ಚಿಹ್ನೆಯನ್ನೇ ಅಧಿಕೃತಗೊಳಿಸಿದೆ.


ಡಿ.27ರಂದು ಎರಡು ತೆರವಾಗಿರುವ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ

Posted by Vidyamaana on 2023-12-27 13:57:43 |

Share: | | | | |


ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ

ಪುತ್ತೂರು: ರಾಜ್ಯದ ಎಂಟು ಉಪ ವಿಭಾಗಗಳಿಗೆ ನೂತನ ಸಹಾಯಕ ಆಯಕ್ತರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ದ.ಕ. ಜಿಲ್ಲೆಯ ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ,  ಕೊಡಗು ಜಿಲ್ಲೆಯ ಮಡಿಕೇರಿ ಉಪ ವಿಭಾಗದ ಸಹಾಯಕ ಆಯಕ್ತರಾಗಿ ನಾರ್ವಡೆ ವಿನಾಯಕ ಕರ್ಭರಿ ಅವರನ್ನು ನೇಮಕಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಹೊಸದಾಗಿ ನೇಮಕಗೊಂಡ ಎಲ್ಲಾ ಎಂಟು ಸಹಾಯಕ ಆಯುಕ್ತರು 2021ನೇ ಬ್ಯಾಚ್ ನ ಐಎಎಸ್‌ ಅಧಿಕಾರಿಗಳಾಗಿದ್ದಾರೆ.

ಬೆಂಗಳೂರು ಕಂಬಳ ಕರೆ ವೀಕ್ಷಿಸಿದ ಸಚಿವ ದಿನೇಶ್‌ ಗುಂಡೂರಾವ್

Posted by Vidyamaana on 2023-11-03 17:29:34 |

Share: | | | | |


ಬೆಂಗಳೂರು ಕಂಬಳ ಕರೆ ವೀಕ್ಷಿಸಿದ ಸಚಿವ ದಿನೇಶ್‌ ಗುಂಡೂರಾವ್

ಬೆಂಗಳೂರು : ಅರಮನೆ ಮೈದಾನದಲ್ಲಿ ನ.24,25,26 ರಂದು ನಡೆಯಲಿರುವ ಬೆಂಗಳೂರು ಕಂಬಳದ ಕರೆ ನಿರ್ಮಾಣ ಕಾಮಗಾರಿಯನ್ನು ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ವೀಕ್ಷಣೆ ಮಾಡಿದರು.


ಶುಕ್ರವಾರ ಮಧ್ಯಾಹ್ನ ಅರಮನೆ ಮೈದಾನಕ್ಕೆ ಭೇಟಿ ನೀಡಿದ ಅವರು ಕರೆ ವೀಕ್ಷಣೆ ಮಾಡಿ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರು, ಪುತ್ತೂರು ಶಾಸಕರಾದ ಅಶೋಕ್ ರೈ ಜೊತೆ ಚರ್ಚೆ ನಡೆಸಿದರು.


ಕಂಬಳ ವೀಕ್ಷಣೆಗೆ ಲಕ್ಷಾಂತರ ಮಂದಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಲ್ಲಿ ನಡೆಯುತ್ತಿರುವ ಇತರೆ ಕಾಮಗಾರಿಗಳನ್ನು ಸಚಿವರು ಪರಿಶೀಲನೆ ಮಾಡಿದರು.


ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ಉಮೇಶ್ ಶೆಟ್ಟಿ, ಪ್ರಮುಖರಾದ ಗುಣರಂಜನ್ ಶೆಟ್ಟಿ, ಮುರಳೀಧರ್ ರೈ ಮಠಂತಬೆಟ್ಟು ಸೇರಿದಂತೆ ಕಂಬಳ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.

Recent News


Leave a Comment: