ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಫೆ. 10 – 12: 5ನೇ ಕೃಷಿಯಂತ್ರ ಮೇಳ 2023, ಕನಸಿನ ಮನೆ ಬೃಹತ್ ಪ್ರದರ್ಶನ

Posted by Vidyamaana on 2023-01-21 08:13:39 |

Share: | | | | |


ಫೆ. 10 – 12: 5ನೇ ಕೃಷಿಯಂತ್ರ ಮೇಳ 2023, ಕನಸಿನ ಮನೆ ಬೃಹತ್ ಪ್ರದರ್ಶನ

ಪುತ್ತೂರು: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಕ್ಯಾಂಪ್ಕೋ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಇದರ ಆಶ್ರಯದಲ್ಲಿ ‘5ನೇ ಕೃಷಿ ಯಂತ್ರ ಮೇಳ-2023 ಹಾಗೂ ಕನಸಿನ ಮನೆ ಬೃಹತ್ ಪ್ರದರ್ಶನ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಫೆ. 10ರಿಂದ 12ರವರೆಗೆ ನಡೆಯಲಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

         ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ನಾಲ್ಕು ಯಂತ್ರಮೇಳಗಳು ಈ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದಿದ್ದು, ಈ ಹಿಂದೆ ನಡೆದ ಮೇಳವು ಅಭೂತಪೂರ್ವ ಯಶಸ್ಸನ್ನು ಕಂಡಿತ್ತು. ಸುಮಾರು ೨ ಲಕ್ಷದಷ್ಟು ಜನ ಭೇಟಿ ನೀಡಿದ್ದರು. 2023ರಲ್ಲಿ ನಡೆಯುವ ಯಂತ್ರಮೇಳವು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಸಂಸ್ಕಾರವನ್ನು ಕೃಷಿಕರಿಗೆ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇಲ್ಲಿ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿದೆ. ದೇಶ ವಿದೇಶಗಳ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ವೀಕ್ಷಿಸುವ ಅಪೂರ್ವ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಗತಿಪರ ಕೃಷಿಕರು ತಮ್ಮ ಅನುಭವದ ಆಧಾರದಲ್ಲಿ ತಾವೇ ತಯಾರಿಸಿದ ಯಂತ್ರಗಳನ್ನು ಇಲ್ಲಿ ಪ್ರದರ್ಶಿಸುತ್ತಾರೆ. ಕೃಷಿಕರ ಇಂದಿನ ಅವಶ್ಯಕತೆಗಳಿಗೆ ಸ್ಪಂದಿಸುವ ವಿಶೇಷ ಪ್ರಯತ್ನ ಇದಾಗಿದ್ದು, ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ನೀಡುವ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಟ್ಟಡ ನಿರ್ಮಾಣದ ತಾಂತ್ರಿಕತೆಯನ್ನು ಜನ ಸಾಮಾನ್ಯರಿಗೆ ತಲಪಿಸುವ ಉದ್ದೇಶದೊಂದಿಗೆ ಕನಸಿನ ಮನೆ ಎನ್ನುವ ಕಾರ್ಯಕ್ರಮ ನಡೆಸಲಾಗುತ್ತದೆ. ಸ್ಥಳೀಯವಾಗಿ ಸಿಗುವ ಸಾಮಗ್ರಿಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಮನೆಗಳ ನಿರ್ಮಾಣ, ಕಟ್ಟಡ ನಿರ್ಮಾಣದಲ್ಲಿನ ಹೊಸ ಹೊಸ ವಿನ್ಯಾಸಗಳ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುವುದು, ಹೊರಾಂಗಣ ಮತ್ತು ಒಳಾoಗಣ ಶೃಂಗಾರ ಸಾಧನಗಳ ಪ್ರದರ್ಶನ, ಬಳಸಬಹುದಾದ ಮತ್ತು ಬಳಸಬೇಕಾದ ಪರಿಕರಗಳ ಪ್ರದರ್ಶನವನ್ನು ಇಲ್ಲಿ ಏರ್ಪಡಿಸಲಾಗಿದೆ ಎಂದರು.

        ಯುವ ಜನತೆಯಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿರುವ ಸಲುವಾಗಿ ಹೈಸ್ಕೂಲು, ಕಾಲೇಜು ವಿದ್ಯಾರ್ಥಿಗಳು ಅನ್ವೇಷಿಸಿದ ಕೃಷಿ ಯಂತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಕೃಷಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಹೊಸತನವನ್ನು ಹುಡುಕಿ ಅದಕ್ಕೆ ಪೂರಕವಾದ ಯಂತ್ರವನ್ನು ಅನ್ವೇಷಿಸಿ ಅದನ್ನು ಬಳಸಿ ಯಶಸ್ವಿಯಾದ ರೈತರ ಯಂತ್ರಗಳನ್ನು ಪ್ರದರ್ಶಿಸುವುದಕ್ಕೆ ಉಚಿತವಾದ ವೇದಿಕೆಯನ್ನು ಇಲ್ಲಿ ನೀಡಲಾಗುತ್ತದೆ. ಅಲ್ಲದೆ ಉತ್ತಮ ಸಂಶೋಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ. ಅಲ್ಲದೇ, ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳು ನಡೆಯಲಿದೆ. ಕೃಷಿ ಯಂತ್ರ ವಿಭಾಗದಲ್ಲಿ 140 ಸ್ಟಾಲ್ ಗಳಿವೆ. ಆಟೋಮೊಬೈಲ್ ವಿಭಾಗದಲ್ಲಿ 10, ಕನಸಿನ ಮನೆ ವಿಭಾಗದಲ್ಲಿ 73, ನರ್ಸರಿಯ 4, ವ್ಯಾಪಾರಕ್ಕೆ ಸಂಬಂದಿಸಿದ 26, ಆಹಾರ ಮಳಿಗೆಗಳು 19, ಹಾಗೂ ಸಾವಯವ ಕೃಷಿ ಮಳಿಗೆಗಳು 20 ಹೀಗೆ ಒಟ್ಟು 292 ಮಳಿಗೆಗಳು ಈ ಮೇಳದಲ್ಲಿವೆ ಎಂದು ಮಾಹಿತಿ ನೀಡಿದರು.

         ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಎಂಡಿ ಕೃಷ್ಣ ಕುಮಾರ್ ರೈ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್, ಕೃಷಿ ಯಂತ್ರ ಮೇಳದ ಸಂಯೋಜಕ ರವಿಕೃಷ್ಣ ಡಿ. ಕಲ್ಲಾಜೆ, ಕ್ಯಾಂಪ್ಕೋ ನಿರ್ದೇಶಕರಾದ ರಾಘವೇಂದ್ರ ಭಟ್ ಕೆದಿಲ, ಕೃಷ್ಣ ಪ್ರಸಾದ್ ಮಡ್ತಿಲ ಉಪಸ್ಥಿತರಿದ್ದರು.

ಆರ್ಟಿಕಲ್ 370 ಸಿನಿಮಾಕ್ಕೆ ಪುತ್ತಿಲ ಪರಿವಾರದಿಂದ ಬೆಂಬಲ

Posted by Vidyamaana on 2024-02-27 21:02:57 |

Share: | | | | |


ಆರ್ಟಿಕಲ್ 370 ಸಿನಿಮಾಕ್ಕೆ ಪುತ್ತಿಲ ಪರಿವಾರದಿಂದ ಬೆಂಬಲ

ಪುತ್ತೂರು: ಆರ್ಟಿಕಲ್ 370 ವಿಧಿ ರದ್ದತಿಯ ನೈಜ ಚಿತ್ರಣದ ಸಿನಿಮಾ ಪುತ್ತೂರಿನಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಪುತ್ತಿಲ ಪರಿವಾರದಿಂದ ಒಂದು ಶೋ ಉಚಿತ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದೆ.

ಫೆ. 29ರಂದು ಸಂಜೆ 6ಕ್ಕೆ ಏಕಕಾಲಕ್ಕೆ 500 ಜನರಿಗೆ ಏಕಕಾಲದಲ್ಲಿ ಉಚಿತ ವೀಕ್ಷಣೆಯ ವ್ಯವಸ್ಥೆ ಮಾಡಲಾಗಿದೆ. 

ದೇಶದ ಸ್ವಾಭಿಮಾನದ ಮುಕುಟಶಿರ ಕಾಶ್ಮೀರದ ದೇವ ಭೂಮಿಗೆ ಕಳಂಕವಾಗಿದ್ದ ಆರ್ಟಿಕಲ್ 370 ವಿಧಿ ರದ್ಧತಿಯ ನೈಜ ಚಿತ್ರಣದ ಅದ್ಭುತ ದೃಶ್ಯ ಕಾವ್ಯ ಉಚಿತವಾಗಿ ನೋಡಲಿಚ್ಚಿಸುವವರು ಮುಂಚಿತವಾಗಿ ಬುಕ್ ಮಾಡಬೇಕು. ಸಂಪರ್ಕಕ್ಕೆ 9632636620, 81974 98978.

ಲಿಂಗಾಯತರಿಗೆ 7%, ಒಕ್ಕಲಿಗರಿಗೆ 6%, ದಲಿತರಿಗೆ ಒಳ ಮೀಸಲಾತಿ, ಹಿಂದುಳಿದ ವರ್ಗಗಳಿಗೆ ಮುಸ್ಲಿಮರ ಸೇರ್ಪಡೆ:ಸರ್ಕಾರ ಮಹತ್ವದ ಘೋಷಣೆ.

Posted by Vidyamaana on 2023-03-24 14:51:04 |

Share: | | | | |


ಲಿಂಗಾಯತರಿಗೆ 7%, ಒಕ್ಕಲಿಗರಿಗೆ 6%, ದಲಿತರಿಗೆ ಒಳ ಮೀಸಲಾತಿ, ಹಿಂದುಳಿದ ವರ್ಗಗಳಿಗೆ ಮುಸ್ಲಿಮರ ಸೇರ್ಪಡೆ:ಸರ್ಕಾರ ಮಹತ್ವದ ಘೋಷಣೆ.

ಬೆಂಗಳೂರು :ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಲಿಂಗಾಯತ ಸಮುದಾಯಕ್ಕೆ ಶೇ.7ರಷ್ಟು ಹಾಗೂ ದಲಿತರಿಗೆ ಒಳಮೀಸಲಾತಿ ನೀಡುವ ಘೋಷಣೆ ಮಾಡಿದೆ.

ಈ ಕುರಿತಂತೆ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai, ಆರ್ಟಿಕಲ್ 341 ಅನ್ವಯದಲ್ಲಿ ವರ್ಗೀಕರಣ ಮಾಡಿದ ಹಿಂದುಗಳಿದ ವರ್ಗಗಳಿಗೆ ಮೀಸಲಾತಿ ಘೋಷಣೆ ಮಾಡಲಾಗಿದೆ ಎಂದರು.

ಪ್ರಮುಖವಾಗಿ ಮುಸ್ಲಿಮರಿಗಿದ್ದ 2ಬಿ ಅಡಿ ಶೇ.4ರಷ್ಟಿದ್ದ ಮೀಸಲಾತಿಯನ್ನು ರದ್ದುಪಡಿಸಲಾಗಿದ್ದು, ಇವರನ್ನು ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಸೇರಿಸಲಾಗಿದೆ. ಇದೇ ವೇಳೆ ದಲಿತ ಸಮುದಾಯದ 102 ಒಳ ಪಂಗಡಗಳಿಗೆ ಮೀಸಲಾತಿ ನೀಡಲಾಗಿದೆ.

ಯಾರಿಗೆ ಎಷ್ಟು ಮೀಸಲಾತಿ?

ಲಿಂಗಾಯತ ಸಮುದಾಯಕ್ಕೆ ಶೇ. 7                  ಒಕ್ಕಲಿಗೆ ಸಮುದಾಯಕ್ಕೆ ಶೇ.6                     ದಲಿತ ಬಲ ಸಮುದಾಯಕ್ಕೆ ಶೇ.5.5               ದಲಿತ ಎಡ ಸಮುದಾಯಕ್ಕೆ ಶೇ.6               ದಲಿತ ಅಲೆಮಾರಿ ಸಮುದಾಯಕ್ಕೆ ಶೇ.1       ಆರ್ಥಿಕ ಹಿಂದುಳಿದ ಸಮುದಾಯಕ್ಕೆ ಶೇ.10 ಆರ್ಥಿಕ ಹಿಂದುಳಿದ ವರ್ಗಗಳಿಗೆ ಮುಸ್ಲಿಮರ ಸೇರ್ಪಡೆ.

ಇಂದು ಇಡೀ ದಿನ ಸಿಎಂ ಸಿದ್ದರಾಮಯ್ಯ ಜನತಾ ದರ್ಶನ ಅದ್ದೂರಿ ಸಿದ್ಧತೆ

Posted by Vidyamaana on 2023-11-27 08:46:27 |

Share: | | | | |


ಇಂದು ಇಡೀ ದಿನ ಸಿಎಂ ಸಿದ್ದರಾಮಯ್ಯ ಜನತಾ ದರ್ಶನ ಅದ್ದೂರಿ ಸಿದ್ಧತೆ

ಬೆಂಗಳೂರು (ನ.27): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಅಹವಾಲುಗಳಿಗೆ ತ್ವರಿತ ಪರಿಹಾರ ಒದಗಿಸುವ ಆಶಯದೊಂದಿಗೆ ಸೋಮವಾರ ಬೆಳಿಗ್ಗೆ 9.30 ರಿಂದ ಇಡೀ ದಿನ ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲಿದ್ದಾರೆ.ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ನಡೆಯುತ್ತಿರುವ ಮೊದಲ ಪೂರ್ಣಾವಧಿ ಜನತಾ ದರ್ಶನ ಆಗಿರುವುದರಿಂದ ಸಕಲ ಮುನ್ನೆಚ್ಚರಿಕೆಗಳೊಂದಿಗೆ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.ಸ್ಥಳದಲ್ಲೇ ಪರಿಹಾರ ಕಲ್ಪಿಸುವುದಕ್ಕೆ ಆದ್ಯತೆ ನೀಡಿ ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯನ್ನು ಹಾಜರಿರುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಹೆಚ್ಚು ಹೊತ್ತು ಸರತಿ ಸಾಲುಗಳಲ್ಲಿ ನಿಲ್ಲದಂತೆ ಮಾಡಲು 20 ಕೌಂಟರ್‌ಗಳನ್ನು ಸ್ಥಾಪಿಸಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ನೆರಳಿಗೆ ಟೆಂಟ್ ವ್ಯವಸ್ಥೆ, ನೂಕು ನುಗ್ಗಲು ಆಗದಂತೆ ಬ್ಯಾರಿಕೇಡ್ ವ್ಯವಸ್ಥೆ ಕಲ್ಪಿಸಲಾಗಿದೆ.ಇನ್ನು ವೃದ್ಧರು ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಜತೆಗೆ ಕೃಷ್ಣಾ ಸುತ್ತಮುತ್ತಲೂ ಕುಡಿಯುವ ನೀರು, ಆಹಾರ ಹಾಗೂ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಅವರು ಭಾನುವಾರ ಸಂಜೆ ಗೃಹ ಕಚೇರಿ ಕೃಷ್ಣಾಕ್ಕೆ ಭೇಟಿ ನೀಡಿ ಅಂತಿಮ ಸಿದ್ಧತೆಗಳನ್ನು ವೀಕ್ಷಿಸಿದರು ಎಂದು ತಿಳಿದುಬಂದಿದೆ.


ಇಲಾಖಾ ಮುಖ್ಯಸ್ಥರ ಕಡ್ಡಾಯ ಹಾಜರಿ:


ಸಾರ್ವಜನಿಕರಿಂದ ಸ್ವೀಕರಿಸಿದ ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಿ ತಂತ್ರಾಂಶದಲ್ಲಿ ದಾಖಲಿಸಿ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿದ ನಂತರ ಮುಖ್ಯಮಂತ್ರಿಯವರು ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸಲಿದ್ದಾರೆ.ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈಗಾಗಲೇ ಸುತ್ತೋಲೆ ಹೊರಡಿಸಿ ಸರ್ಕಾರದ ಎಲ್ಲ ಕಾರ್ಯದರ್ಶಿಗಳು / ಇಲಾಖಾ ಮುಖ್ಯಸ್ಥರು ಖುದ್ದು ಹಾಜರಿರುವಂತೆ ಹಾಗೂ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾ/ ಉಪವಿಭಾಗ/ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಹಾಜರಿರುವಂತೆ ಸೂಚಿಸಿದ್ದಾರೆ ಎಂದು ಸೂಚಿಸಿದ್ದಾರೆ.


ಆನ್‌ಲೈನಲ್ಲೂ ಅಹವಾಲು ಸಲ್ಲಿಕೆ:


ಸಾರ್ವಜನಿಕರು ದೂರು ಅಥವಾ ಅಹವಾಲು ಸಲ್ಲಿಕೆ ಮಾಡುವ ವ್ಯವಸ್ಥೆ ಸರಳೀಕರಣಗೊಳಿಸುವ ಸಲುವಾಗಿ ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಕಚೇರಿಯು ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಕ್ಯೂಆರ್ ಕೋಡ್‌ ಸ್ಕ್ಯಾನ್‌ ಮಾಡಿ ಆನ್‌ಲೈನ್ ಮೂಲಕ ದೂರು ಸಲ್ಲಿಸಬಹುದು. ಜತೆಗೆ 1902 ಗೆ ಕರೆ ಮಾಡಿ ದೂರವಾಣಿಮೂಲಕವೂ ಅಹವಾಲು ಸಲ್ಲಿಸಬಹುದು.ವೆಬ್‌ಸೈಟ್‌, ಫೋನ್‌ನಲ್ಲೂ ಅಹವಾಲು ಸಲ್ಲಿಸಬಹುದು


ಜನತಾದರ್ಶನ ಕುರಿತು ಹೆಚ್ಚಿನ ಮಾಹಿತಿಗೆ https://ipgrs.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.


* ದೂರು ಸಲ್ಲಿಸಲು ಸಹಾಯವಾಣಿ: 1902


ಹೆಚ್ಚಿನ ಮಾಹಿತಿಗೆ : https://ipgrs.karnataka.gov.in


ಆಧಾರ್ ಕಾರ್ಡ್, ಪಡಿತರ ಚೀಟಿ ತನ್ನಿ


ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸಲು ಆಗಮಿಸುವ ನಾಗರಿಕರು ತಮ್ಮ ಗುರುತಿಗಾಗಿ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ತರುವಂತೆ ಕೋರಲಾಗಿದೆ. ಇದರಿಂದ ತಂತ್ರಾಂಶದಲ್ಲಿ ದಾಖಲಿಸುವ ಅರ್ಜಿಗಳ ಸ್ಥಿತಿಗತಿಯನ್ನು ಪತ್ತೆಹಚ್ಚಲುಅನುಕೂಲವಾಗಲಿದೆ.


ಅಹವಾಲು ಆಲಿಕೆಗೆ 1000 ಸಿಬ್ಬಂದಿ: ಭದ್ರತೆಗೆ 550 ಪೊಲೀಸ್‌ ನಿಯೋಜನೆ


ಜನಸ್ಪಂದನ ಕಾರ್ಯಕ್ರಮದ ಭದ್ರತೆಗೆ ಒಬ್ಬರು ಡಿಸಿಪಿ, ಮೂರು ಮಂದಿ ಎಸಿಪಿ, 10 ಮಂದಿ ಇನ್‌ಸ್ಪೆಕ್ಟರ್, 15 ಮಂದಿ ಪಿಎಸ್‌ಐ, ಪಿಸಿ-ಗೃಹರಕ್ಷಕ ಸಿಬ್ಬಂದಿ ಸೇರಿದಂತೆ 550 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಜತೆಗೆ ಅಹವಾಲು ಸ್ವೀಕಾರ ಹಾಗೂ ಪರಿಶೀಲನೆಗೆ ವಿವಿಧ ಇಲಾಖೆಗಳಿಂದ 350 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಿಸಿದ್ದು, ಸಹಾಯಕ ಸಿಬ್ಬಂದಿ ಸೇರಿದಂತೆ ಒಟ್ಟು 1,000 ಸಿಬ್ಬಂದಿ ಕರ್ತವ್ಯದಲ್ಲಿ ಇರಲಿದ್ದಾರೆ ಎಂದು ತಿಳಿದುಬಂದಿದೆ.

ತೆವಳಿಕೊಂಡು ರಸ್ತೆ ದಾಟುತ್ತಿದ್ದ ವಿಕಲಚೇತನರ ಮೇಲೆ ಹರಿದ ಕಾರು; ಚಿಕಿತ್ಸೆ ಫಲಿಸದೆ ಮೃತ್ಯು

Posted by Vidyamaana on 2023-12-16 15:17:00 |

Share: | | | | |


ತೆವಳಿಕೊಂಡು ರಸ್ತೆ ದಾಟುತ್ತಿದ್ದ ವಿಕಲಚೇತನರ ಮೇಲೆ ಹರಿದ ಕಾರು; ಚಿಕಿತ್ಸೆ ಫಲಿಸದೆ ಮೃತ್ಯು

ಕಡಬ: ತೆವಳಿಕೊಂಡು ರಸ್ತೆ ದಾಟುತ್ತಿದ್ದ ವಿಕಲಚೇತನರೊಬ್ಬರ ಮೇಲೆ ಕಾರೊಂದು ಹರಿದ ಪರಿಣಾಮ ಗಂಭೀರ ಗಾಯಗೊಂಡು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಕಡಬದ ಮುಖ್ಯ ಪೇಟೆಯಲ್ಲಿ ಡಿ.15ರ ಶುಕ್ರವಾರ ರಾತ್ರಿ ನಡೆದಿದೆ.ಕಡಬದ ಅಂಗಡಿ ಮನೆ ನಿವಾಸಿ ಧರ್ಣಪ್ಪ ಮೃತಪಟ್ಟವರು.ವಿಕಲಚೇತನರಾಗಿದ್ದ ಅವರು ಶುಕ್ರವಾರ ಸಾಯಂಕಾಲ ರಸ್ತೆ ದಾಟಲು ಯತ್ನಿಸುತ್ತಿದ್ದಾಗ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.


ಅಪಘಾತದ ರಭಸಕ್ಕೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.ಮೃತರ ಸಹೋದರ ನೀಡಿದ ದೂರಿನಂತೆ ಕಾರು ಚಾಲಕನ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು : ಇಂದು (ಜು 13) ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ

Posted by Vidyamaana on 2023-07-12 23:15:01 |

Share: | | | | |


ಪುತ್ತೂರು : ಇಂದು (ಜು 13) ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11 ಕೆವಿ ಮತ್ತೂರ ವಿದ್ಯುತ್‌ ಕೇಂದ್ರದಿಂದ ರಾಮಕುಂಜ ಫೀಡರ್‌ನಲ್ಲಿ ಮತ್ತು 33/11 ಕೆವಿ ಕ್ಯಾಂಪೋ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮುಕ್ರಂಪಾಡಿ, ಮುಕ್ವೆಮುಂಡೂರು ಫೀಡರ್‌ಗಳಲ್ಲಿ ಜು.13ರಂದು ಪೂರ್ವಾಹ ಗಂಟೆ 10ರಿಂದ ಅಪರಾಹ್ನ 5ರವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು ಆದುದರಿಂದ, 10/33/11 ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಮತ್ತು 33/11ಕೆಎ ಕ್ಯಾಂಪ್ಕೋ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್ ಗಳಿ೦ದ ವಿದ್ಯುತ್‌ ಸರಬರಾಜಾಗುವ ರಾಮಕು೦ಜ, ಹಿರೇಬಂಡಾಡಿ, ಬೆಳ್ಳಿಪ್ಪಾಡಿ ಕೋಡಿಂಬಾಡಿ, ಕೂರ್ನಡ್ಕ, ಕೆಮ್ಮಿಂಜೆ, ಮರೀಲ್‌, ಮುಕ್ರಂಪಾಡಿ, ಮೊಟ್ಟೆತ್ತಡ ಮುಂಡೂರು ಮತ್ತು ಸಂಪ್ಯ ಪರಿಸರದ ವಿದ್ಯುತ್‌ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.



Leave a Comment: