ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಪೆರಾಜೆ:ರಾಘವೇಶ್ವರ ಭಾರತೀ ಸ್ವಾಮೀಜಿಯ ಆಶೀರ್ವಾದ ಪಡೆದ ಕ್ಯಾಪ್ಟನ್ ಬ್ರಿಜೇಶ್ ಚೌಟ

Posted by Vidyamaana on 2023-10-15 14:23:19 |

Share: | | | | |


ಪೆರಾಜೆ:ರಾಘವೇಶ್ವರ ಭಾರತೀ ಸ್ವಾಮೀಜಿಯ ಆಶೀರ್ವಾದ ಪಡೆದ ಕ್ಯಾಪ್ಟನ್ ಬ್ರಿಜೇಶ್ ಚೌಟ

ಬಂಟ್ವಾಳ : ನವರಾತ್ರಿಯ ನಿಮಿತ್ತ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠಕ್ಕೆ ಆಗಮಿಸಿರುವ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರನ್ನು ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿಯಾಗಿ ಆಶೀರ್ವಾದ ಪಡೆದರು.

ಈ ವೇಳೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶೈಲಜಾ ಭಟ್ ಕೊಂಕೋಡಿ, ಹವ್ಯಕ ಪರಿಷತ್ತಿನ ಶ್ರೀಪ್ರಕಾಶ್ ಕುಕ್ಕಿಲ, ನೇರಳಕಟ್ಟೆ ಸಿಎ ಬ್ಯಾಂಕ್ ಅಧ್ಯಕ್ಷ ಪುಷ್ಪರಾಜ್ ಚೌಟ ಉಪಸ್ಥಿತರಿದ್ದರು.

ಬೆಳ್ತಂಗಡಿ : ಚಾರ್ಮಾಡಿ ಅಕ್ರಮ ಮರಳು ಸಾಗಾಟ

Posted by Vidyamaana on 2023-07-16 16:31:27 |

Share: | | | | |


ಬೆಳ್ತಂಗಡಿ : ಚಾರ್ಮಾಡಿ ಅಕ್ರಮ ಮರಳು ಸಾಗಾಟ

ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಪರವಾನಿಗೆ ಇಲ್ಲದೆ ಸಾಗಿಸುತಿದ್ದ ಅಕ್ರಮ ಮರಳು ಸಾಗಾಟದ ಲಾರಿಯನ್ನು ಧರ್ಮಸ್ಥಳ ಪೊಲೀಸರು ವಶ ಪಡಿಸಿಕೊಂಡ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ.


ಚಾರ್ಮಾಡಿಯಲ್ಲಿ  ವಾಹನಗಳನ್ನು  ತಪಾಸಣೆಗೈಯುತ್ತಿರುವ ವೇಳೆ ಮುನೀರ್ ಎಂಬತನಿಗೆ ಸೇರಿದ KA-19-AB-9516 ಸಂಖ್ಯೆಯ ಸುಲ್ತಾನ್ ಎಂಬ ಹೆಸರಿನ ಲಾರಿಯೊಂದನ್ನು ನಿಲ್ಲಿಸಿ ತಪಾಸಣೆ ಮಾಡುವಾಗ ಅದರಲ್ಲಿ ಯಾವುದೇ ಸರಕಾರಕ್ಕೆ ಉಪ ಖನಜ ಪಾವತಿ ಮಾಡದೆ ಪರವಾನಿಗೆ ಪಡೆಯದೆ ಅಕ್ರಮ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದೆ.


ಲಾರಿ ಚಾಲಕ ಅನ್ಸರ್ ಎಂಬಾತನಲ್ಲಿ ಮರಳು ಸಾಗಾಟದ ಪರವಾನಿಗೆ ಹಾಗೂ ದಾಖಲೆಗಳನ್ನು ಕೇಳಿದಾಗ ಯಾವುದೇ ದಾಖಲೆಗಳಿಲ್ಲ ಎಂದಿದ್ದು ಅದರಂತೆ ಲಾರಿಯನ್ನು ವಶಪಡಿಸಿಕೊಂಡ ಧರ್ಮಸ್ಥಳ ಪೊಲೀಸರು  ಮುಂದಿನ ಕ್ರಮಕ್ಕಾಗಿ ಗಣಿ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.


ತಪಾಸಣೆ ವೇಳೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಡಿ , ಸಿಬ್ಬಂದಿಗಳಾದ ಪ್ರಶಾಂತ್, ಮಲ್ಲಿಕಾರ್ಜುನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಪುತ್ತೂರು – ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ ಪರಶೀಲಿಸಿ ಶಾಸಕ ಅಶೋಕ್ ರೈ

Posted by Vidyamaana on 2023-05-25 16:13:40 |

Share: | | | | |


ಪುತ್ತೂರು – ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ ಪರಶೀಲಿಸಿ ಶಾಸಕ ಅಶೋಕ್ ರೈ

ಪುತ್ತೂರು: 20 ದಿನದೊಳಗೆ ಪುತ್ತೂರು – ಉಪ್ಪಿನಂಗಡಿ ಚತುಷ್ಪಥ ರಸ್ತೆಯ ಡಿವೈಡರ್ ಹಾಗೂ ಡ್ರೈನೇಜ್ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈಗ ಮೊದಲಿನ ಹಾಗಲ್ಲ, ಚೇಂಜಸ್ ಇರ್ತದೆ ಎನ್ನುವುದನ್ನು ಮರೆಯದಿರಿ ಎಂದು ಶಾಸಕ ಅಶೋಕ್ ಕುಮಾರ್ ರೈ ಗುತ್ತಿಗೆದಾರರಿಗೆ ಸೂಚನೆ ನೀಡಿದ ಘಟನೆ ಗುರುವಾರ ನಡೆಯಿತು.

ಪುತ್ತೂರು – ಉಪ್ಪಿನಂಗಡಿ ಚತುಷ್ಪಥ ಹೆದ್ದಾರಿಯ ಕಾಮಗಾರಿ ವೀಕ್ಷಣೆ ನಡೆಸುತ್ತಾ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು.

ಚತುಷ್ಪಥ ರಸ್ತೆಯ ಡಿವೈಡರ್ ಕಾಮಗಾರಿ ಅಪೂರ್ಣವಾಗಿರುವುದರಿಂದ ಎಲ್ಲರಿಗೂ ಸಮಸ್ಯೆಯಾಗಿದೆ. ಇದರಿಂದಾಗಿ ಡ್ರೈನ್ ಸಮಸ್ಯೆಯೂ ಎದುರಾಗಿದೆ. ರಸ್ತೆ ಮಧ್ಯದಲ್ಲಿ ಡಿವೈಡರ್ ಬದಲು ಕಲ್ಲುಗಳನ್ನು ಹಾಕಿರುವುದು ಎಷ್ಟು ಸರಿ. ಅದು ಸರಿಯಾಗಿ ಕಾಣುವುದೂ ಇಲ್ಲ. ದ್ವಿಚಕ್ರ ಸವಾರರು ರಾತ್ರಿ ವೇಳೆ ಬಂದು, ಢಿಕ್ಕಿ ಹೊಡೆದರೆ ಅವರ ಜೀವಕ್ಕೆ ಯಾರು ಗತಿ? ಎಂದು ಕ್ಲಾಸ್ ತೆಗೆದುಕೊಂಡರು.

ಆದ್ದರಿಂದ ಈ ಎಲ್ಲಾ ಕಾಮಗಾರಿಗಳನ್ನು ಯಾವಾಗ ಪೂರ್ಣಗೊಳ್ಳುತ್ತದೆ ಎನ್ನುವ ಮಾಹಿತಿ ಕೊಡಿ ಎಂದರು. ಇದಕ್ಕೆ ಉತ್ತರಿಸಿದ ಗುತ್ತಿಗೆದಾರರು ಮಳೆಗಾಲದ ಒಳಗಡೆ ಮುಗಿಸುತ್ತೇವೆ ಎಂದರು.

ಲೋಕೋಪಯೋಗಿ ಇಲಾಖೆಯ ರಾಜಾರಾಂ ಮಾತನಾಡಿ, ಅವರಿಗೆ ನೀಡಿರುವ ಸಮಯ ಮುಗಿದಿದೆ. ಆದರೆ ಕಾಮಗಾರಿ ಇನ್ನೂ ಇರುವುದರಿಂದ ಹೆಚ್ಚಿನ ಕಾಲಾವಕಾಶ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮೊದಲಿಗೆ ಡಿವೈಡರ್ ಹಾಗೂ ಡ್ರೈನ್ ಕೆಲಸ ಪೂರ್ಣಗೊಳಿಸಬೇಕು. ಇಲ್ಲವಾದರೆ ಜನಸಾಮಾನ್ಯರಿಗೆ ಸಮಸ್ಯೆ. ಅದನ್ನು ತಕ್ಷಣದಲ್ಲಿ ಪೂರ್ಣಗೊಳಿಸಿ. ಅದಕ್ಕೆ ಎಷ್ಟು ಸಮಯ ಬೇಕೆಂದು ತಿಳಿಸಿ ಎಂದರು.

ಉತ್ತರಿಸಿದ ಗುತ್ತಿಗೆದಾರರು 15 ದಿನಗಳ ಕಾಲಾವಕಾಶ ಕೇಳಿದರು.

ಪ್ರತಿಕ್ರಿಯಿಸಿದ ಶಾಸಕರು, 15 ದಿನವಲ್ಲ, ಇನ್ನೂ 5 ದಿನ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳಿ. ಆದರೆ ಮಾತಿಗೆ ತಪ್ಪದಿರಿ. ನೀವು ತೆಗೆದುಕೊಂಡ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಈಗ ಮೊದಲಿನ ಹಾಗಲ್ಲ. ಮೊದಲಿಗಿಂತ ಚೇಂಜಸ್ ಇರ್ತದೆ ಎಂದು ಖಡಕ್ ಎಚ್ಚರಿಕೆ ರವಾನಿಸಿದರು.

ಮನೆಯವರಿಗೆ ತೊಂದರೆ ಆಗಬಾರದು:

2-3 ಜನ ಹಾಕಿಕೊಂಡು ಕೆಲಸ ಮಾಡುವುದನ್ನು ಚತುಷ್ಪಥ ಹೆದ್ದಾರಿಯಲ್ಲಿ ಕಾಣುತ್ತಿದ್ದೇವೆ. ಇದು ಗುತ್ತಿಗೆದಾರರು ಮಾಡುವ ಕೆಲಸವಲ್ಲ. ಒಮ್ಮೆಗೆ ಕೆಲಸ ಮಾಡಿ ಬಿಡಬೇಕು. ಕಳೆದ 3 ವರ್ಷದಿಂದ ಕಾಮಗಾರಿ ನಡೆಯುತ್ತಿದೆ. ಇನ್ನೂ ಪೂರ್ಣಗೊಂಡಿಲ್ಲ ಎಂದರೆ ಏನರ್ಥ. ಇದರೊಂದಿಗೆ ನೆಕ್ಕಿಲಾಡಿವರೆಗೆ ಕಾಮಗಾರಿಯೂ ಆಗಬೇಕಿದೆ. ಪುತ್ತೂರಿನಿಂದ ಉಪ್ಪಿನಂಗಡಿವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಆಗಬೇಕಿದೆ. ಇದರ ನಡುವೆ ಕಾಮಗಾರಿಯಿಂದಾಗಿ ಕೆಲವು ಮನೆಗಳು ಕುಸಿತದ ಭೀತಿ ಎದುರಿಸುತ್ತಿದೆ. ಇದಕ್ಕೆಲ್ಲಾ ಎಸ್ಟಿಮೇಟೇ ಆಗಿಲ್ಲ. ಆದ್ದರಿಂದ ಸರಿಯಾದ ಕ್ರಮ ಕೈಗೊಳ್ಳಬೇಕು. ಒಂದು ಮನೆಯವರಿಗೂ ತೊಂದರೆ ಆಗಬಾರದು. ಮಳೆಗಾಲ ಮುಗಿದ ತಕ್ಷಣ ನಿರ್ದಿಷ್ಟ ಸಮಯದೊಳಗೆ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸಬೇಕು. ಇದರಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆ ಆಗಬಾರದು ಎಂದು ಶಾಸಕ ಅಶೋಕ್ ಕುಮಾರ್ ರೈ ಅವರು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಪುತ್ತೂರಿಗೆ ಭರ್ತಿದ್ದಾರೆ ಫೈರ ಬ್ರ್ಯಾಂಡ್ ಲೀಡರ್ ಯತ್ನಾಳ್

Posted by Vidyamaana on 2023-05-19 02:44:27 |

Share: | | | | |


ಪುತ್ತೂರಿಗೆ ಭರ್ತಿದ್ದಾರೆ ಫೈರ ಬ್ರ್ಯಾಂಡ್ ಲೀಡರ್ ಯತ್ನಾಳ್

ಪುತ್ತೂರು:ಬ್ಯಾನರ್ ಪ್ರಕರಣದಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಲು ಮತ್ತು ಪ್ರಕರಣದ ಕುರಿತು ಮಾಹಿತಿ ಪಡೆಯಲು ಬಿಜೆಪಿ ಶಾಸಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೇ 19ರಂದು ಪುತ್ತೂರಿಗೆ ಭೇಟಿ ನೀಡಲಿದ್ದಾರೆ. ಎಂದು ಅರುಣ್‌ ಕುಮಾರ್‌ ಪುತ್ತಿಲ ತಿಳಿಸಿದ್ದಾರೆ.ಯತ್ನಾಳ್ ಅವರು ನನಗೆ ದೂರವಾಣಿ ಕರೆ ಮಾಡಿ, ಪುತ್ತೂರಿನಲ್ಲಿ ಪೊಲೀಸರಿಂದ

ಹಲ್ಲೆಗೊಳಗಾದ ಹಿಂದು ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿದರಲ್ಲದೆ ನಾಳೆ ನಾನು

ಪುತ್ತೂರುಗೆ ಬರುತ್ತೇನೆಂದು ತಿಳಿಸಿರುವುದಾಗಿ ಅರುಣ್ ಕುಮಾರ್ ಪುತ್ತಿಲ ಅವರು ಮಾಹಿತಿ ನೀಡಿದರು.

ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆದಿರುವ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ.ನಾಳೆ ಬೆಳಿಗ್ಗೆ ಪುತ್ತೂರಿಗೆ ಭೇಟಿ ಕೊಟ್ಟು ನಮ್ಮ ಕಾರ್ಯಕರ್ತರ ಆರೋಗ್ಯ ವಿಚಾರಿಸಲಿದ್ದೇನೆ.ಹಿಂದೂ ಕಾರ್ಯಕರ್ತರೊಂದಿಗೆ ಸದಾ ನಿಲ್ಲಲಿದ್ದೇನೆ.ಧರ್ಮಕ್ಕಾಗಿ ಹೋರಾಟ ಮಾಡುವ ಕಾರ್ಯಕರ್ತರು ಯಾವುದೇ ಕ್ಷಣದಲ್ಲೂ ಎದೆಗುಂದಬೇಡಿ ನಿಮ್ಮೊಡನೆ ನಾವಿದ್ದೇವೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಾರ್ಚ್ 4: ಮೂಡೂರು – ಪಡೂರು ಬಂಟ್ವಾಳ ಕಂಬಳ

Posted by Vidyamaana on 2023-03-03 15:43:23 |

Share: | | | | |


ಮಾರ್ಚ್ 4: ಮೂಡೂರು – ಪಡೂರು ಬಂಟ್ವಾಳ ಕಂಬಳ

ರಮಾನಾಥ ರೈ ಸಾರಥ್ಯದಲ್ಲಿ 12ನೇ ವರ್ಷದ ಬಯಲು ಕಂಬಳ

 ಬಂಟ್ವಾಳ: ಇಲ್ಲಿನ ಮೂಡೂರು – ಪಡೂರು ಜೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ 12ನೇ ವರ್ಷದ ಹೊನಲು ಬೆಳಕಿನ ಮೂಡೂರು – ಪಡೂರು ಜೋಡುಕರೆ ಬಯಲು ಕಂಬಳ ಮಾರ್ಚ್ 4ರಂದು ಬೆಳಿಗ್ಗೆ 8.45ಕ್ಕೆ ನಾವೂರು ಗ್ರಾಮದ ಕೋಡಿಬೈಲಿನಲ್ಲಿ ಉದ್ಘಾಟನೆಗೊಳ್ಳಲಿದೆ.

ಸೋಲೂರು ಕರ್ನಾಟಕ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಧರ್ಮಗುರು ವಂ. ಫೆಡ್ರಿಕ್ ಮೊಂತೆರೊ, ಕಾವಳಕಟ್ಟೆ ಹಝ್ರತ್ ಡಾ. ಮುಹಮ್ಮದ್ ಫಾಝಿಲ್ ರಿಝ್ಜಿ ಕಂಬಳವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸುವರು.

ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವರಾದ ಯು.ಟಿ. ಖಾದರ್, ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಮೊದಲಾದವರು ಅತಿಥಿಗಳಾಗಿರುವರು ಎಂದು ಪ್ರಕಟಣೆ ತಿಳಿಸಿದೆ.

ತುಂಬೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತ

Posted by Vidyamaana on 2023-07-06 08:29:15 |

Share: | | | | |


ತುಂಬೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತ


ಪುತ್ತೂರು: ತುಂಬೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಮಂಗಳೂರು ಅಲೋಶಿಯಸ್ ವಿದ್ಯಾರ್ಥಿನಿ, ಪುತ್ತೂರಿನ ಕೂರ್ನಡ್ಕ ನಿವಾಸಿ ಹನಾ (19) ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಕೂರ್ನಡ್ಕ ನಿವಾಸಿ ಅಬ್ದುಲ್ ಮಜೀದ್ ಹಾಗೂ ಶಮೀಮಾ ದಂಪತಿ ಪುತ್ರಿ ಹನಾ (19) ಮೃತಪಟ್ಟವರು. ಇವರು ಅಲೋಶಿಯಸ್ ನಲ್ಲಿ ಬಿಬಿಎಂ ವಿದ್ಯಾರ್ಥಿನಿ.

ಪುತ್ತೂರಿನಿಂದ ಮಂಗಳೂರು ಕಡೆಗೆ ಐ20 ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ‌. ಚಾಲಕನ ನಿಯಂತ್ರಣ ತಪ್ಪಿದ ಕಾರು, ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ.



Leave a Comment: