ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಸುದ್ದಿಗಳು News

Posted by vidyamaana on 2024-07-03 19:44:44 |

Share: | | | | |


ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಬುಧವಾರದಂದು ಬೆಂಗಳೂರಿನಲ್ಲಿ ಸಿ ಎಂ‌ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ‌ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

   ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿದರು. ಬಜೆಟ್ ನಲ್ಲಿ ಈ ಬಾರಿ ಅನುಮೋದನೆಯಾಗಬೇಕು ಮತ್ತು ತನ್ನ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ ನಲ್ಲಿ ಅನುಮೋದನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು‌ಎಂಬುದು‌ ನನ್ನ ಮತ್ತು ನನ್ನ ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು‌ಮಾಡಿಕೊಡಬೇಕು ಎಂದು ಸಿ ಎಂ ಅವರಲ್ಲಿ ಶಾಸಕರು ವಿನಂತಿಸಿದರು.

ಕಾಲೇಜು‌ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದೂ ಶಾಸಕರು ಸಿಎಂ ಅವರಲ್ಲಿ ತಿಳಿಸಿದರು.

ಹೆಚ್ಚು‌ಅನುದಾನ ಕೊಡಿ

ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಿದೆ. ರಸ್ತೆ, ಸರಕಾರಿ ಕಟ್ಟಡಗಳು, ಶಾಲಾ ,ಕಾಲೇಜು ಕಟ್ಟಡಗಳು, ತಡೆಗೋಡೆ ,ಬೃಹತ್ ಅಣೆಕಟ್ಟುಗಳು ಸೇರಿದಂತೆ ಕ್ಷೇತ್ರದ ಜನರಿಂದ ದಿನದಿಂದ ದಿನಕ್ಕೆ ಕಾಮಗಾರಿಯ ಬೇಡಿಕೆಗಳು ಬರುತ್ತಿದ್ದು ಈಗ ಬರುತ್ತಿರುವ ಅನುದಾನವನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ಇರುವ ಕೆಲವೊಂದು ಕಾಮಗಾರಿ ಬೇಡಿಕೆಗಳಿಗೆ ಅನುದಾನವನ್ನು‌ನೀಡಬೇಕಿದೆ ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಶಾಸಕರು‌ಮನವಿ ಸಲ್ಲಿಸಿದರು.

 Share: | | | | |


ಕುರಿಯ ಓಟಿತ್ತಿಮ್ಮಾರಿನಲ್ಲಿ ಪರಿಶಿಷ್ಟ ಜಾತಿ ಕಾಲನಿ ಅಭಿವೃದ್ಧಿಗೆ ಅನುದಾನ ಬಿಡುಗಡೆ

Posted by Vidyamaana on 2024-01-14 12:59:09 |

Share: | | | | |


ಕುರಿಯ ಓಟಿತ್ತಿಮ್ಮಾರಿನಲ್ಲಿ ಪರಿಶಿಷ್ಟ ಜಾತಿ ಕಾಲನಿ ಅಭಿವೃದ್ಧಿಗೆ ಅನುದಾನ ಬಿಡುಗಡೆ


ವರದಿ : ನಿಝರ್ ಅಜ್ಜಿಕಟ್ಟೆ

ಪುತ್ತೂರು ವಿಧಾನಸಭಾ ಕ್ಷೇತ್ರದ ಕುರಿಯ ಗ್ರಾಮದ ಓಟಿತ್ತಿಮ್ಮಾರು ಎಂಬಲ್ಲಿಯ ಪರಿಶಿಷ್ಟ ಜಾತಿ ಕಾಲೋನಿಗೆ ಶಾಸಕ ಅಶೋಕ್ ಕುಮಾರ್ ರೈ 5 ಲಕ್ಷ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಈ ಕಾಮಗಾರಿಯ ಗುದ್ದಲಿ ಪೂಜೆ ಜ.10ರಂದು ನಡೆಯಿತು 

ಗುದ್ದಲಿ ಪೂಜೆಯನ್ನು ಈ ಭಾಗದ ಹಿರಿಯರಾದ ರಾಮಕೃಷ್ಣ ಭಟ್ ಮತ್ತು ಮುಹಮ್ಮದ್  (ಮೋನು) ನೇರವೇರೆಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಬೂಡಿಯಾರ್ ಪುರುಷೋತ್ತಮ ರೈ ಕುರಿಯ ಗ್ರಾಮ ಪಂಚಾಯತ್  ಸದಸ್ಯರಾದ ಯಾಕೂಬ್, ನಾಗೇಶ ಎಂ ಹಾಗೂ ಬಸೀರ್ ಕರೆಜ್ಜ, ನೌಷಾದ್, ಸೇಲಿಂ ಕೊಟ್ರಾಸ್, ಕೊರಗ, ಶೀನಪ್ಪ ಗೌಡ, ನೆಬಿಸ, ಸೇಲಿನ, ಜುಬೈದ, ಕುಸುಮ, ಸುಂದರಿ, ಜಾನಕಿ ಮೊದಲಾದವರು ಉಪಸ್ಥಿತರಿದ್ದರು.

ಪುತ್ತೂರಿನಲ್ಲಿ ಇಂದು ಬೆಳಿಗ್ಗೆಯಿಂದ ಕರೆಂಟ್ ಕಟ್

Posted by Vidyamaana on 2023-08-02 23:19:34 |

Share: | | | | |


ಪುತ್ತೂರಿನಲ್ಲಿ ಇಂದು ಬೆಳಿಗ್ಗೆಯಿಂದ ಕರೆಂಟ್ ಕಟ್

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ದರ್ಬೆ ಫೀಡರ್‌ನಲ್ಲಿ ಆ.3ರಂದು ಗುರುವಾರ ಪೂರ್ವಾಹ್ನ ಗಂಟೆ 10:00 ರಿಂದ ಅಪರಾಹ್ನ 5:00 ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ, 110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಪ್ರೈವೇಟ್ ಬಸ್ ಸ್ಟಾಂಡ್, ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್, ನೆಲ್ಲಿಕಟ್ಟೆ, ಎಳ್ಳುಡಿ ಮತ್ತು ಕಲ್ಲಾರೆ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನವದೆಹಲಿಯಲ್ಲಿ ಬಿಜೆಪಿ ಹಿರಿಯ ಮುಖಂಡರನ್ನು ಭೇಟಿ ಮಾಡಿದ ಸಂಸದ ಬ್ರಿಜೇಶ್ ಚೌಟ

Posted by Vidyamaana on 2024-06-09 16:20:13 |

Share: | | | | |


ನವದೆಹಲಿಯಲ್ಲಿ ಬಿಜೆಪಿ ಹಿರಿಯ ಮುಖಂಡರನ್ನು ಭೇಟಿ ಮಾಡಿದ ಸಂಸದ ಬ್ರಿಜೇಶ್ ಚೌಟ

ನವದೆಹಲಿ: ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನವದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ.

ಮಾಜಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಜನರಲ್ ವಿ.ಕೆ. ಸಿಂಗ್ ಅವರನ್ನು ಸೌಹಾರ್ದ ಭೇಟಿ ಮಾಡಿದ ಬ್ರಿಜೇಶ್ ಚೌಟ ಕೆಲವು ಹೊತ್ತು ಮಾತುಕತೆ ನಡೆಸಿದ್ದಾರೆ.

BREAKING: ಬಿಜೆಪಿ ವಿರುದ್ಧ ಅಪಪ್ರಚಾರ:ರಾಹುಲ್‌ಗಾಂಧಿ ಗೆ ಜಾಮೀನು ಮಂಜೂರು...

Posted by Vidyamaana on 2024-06-07 11:19:08 |

Share: | | | | |


BREAKING: ಬಿಜೆಪಿ ವಿರುದ್ಧ ಅಪಪ್ರಚಾರ:ರಾಹುಲ್‌ಗಾಂಧಿ ಗೆ ಜಾಮೀನು ಮಂಜೂರು...

ಬೆಂಗಳೂರು  : ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿಗೆ ಜಾಮೂನು ಮಂಜೂರಾಗಿದೆ. 

2023ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ವಿರುದ್ಧ ಶೇಕಡಾ 40 ಕಮಿಷನ್ ಮಾಡಿದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಮುಂದೆ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿದ್ದರು

ವೇಣೂರು ಪಟಾಕಿ ಘಟಕದಲ್ಲಿ ಸ್ಫೋಟ ಪ್ರಕರಣ ; ಕೇರಳದ ಇಬ್ಬರು, ಹಾಸನದ ಒಬ್ಬ ಸಾವು, ಆರು ಮಂದಿಗೆ ಗಂಭೀರ ಗಾಯ

Posted by Vidyamaana on 2024-01-29 07:59:38 |

Share: | | | | |


ವೇಣೂರು ಪಟಾಕಿ ಘಟಕದಲ್ಲಿ ಸ್ಫೋಟ ಪ್ರಕರಣ ; ಕೇರಳದ ಇಬ್ಬರು, ಹಾಸನದ ಒಬ್ಬ ಸಾವು, ಆರು ಮಂದಿಗೆ ಗಂಭೀರ ಗಾಯ

ಬೆಳ್ತಂಗಡಿ : ವೇಣೂರಿನ ಪಟಾಕಿ ತಯಾರಿ ಘಟಕದಲ್ಲಿ ನಡೆದ ಸ್ಪೋಟ ಘಟನೆಯಲ್ಲಿ ಮೃತಪಟ್ಟ ಮೂವರ ಗುರುತು ಪತ್ತೆಯಾಗಿದೆ.  ಸ್ಪೋಟ ಘಟನೆಯಲ್ಲಿ ಆರು ಜನ ಕಾರ್ಮಿಕರು ಗಾಯಗೊಂಡಿದ್ದಾರೆ.


ಮೃತರನ್ನು ಕೇರಳ ಮೂಲದ ಸ್ವಾಮಿ(55), ವರ್ಗಿಸ್ (68),  ಹಾಸನದ ಅರಸೀಕೆರೆ ನಿವಾಸಿ ಚೇತನ್(25) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ದಿನೇಶ ಹಾಸನ, ಕಿರಣ ಹಾಸನ, ಕುಮಾರ ಅರಸೀಕೆರೆ, ಕಲ್ಲೇಶ ಚಿಕ್ಕಮಾರಹಳ್ಳಿ, ಪ್ರೇಮ್ ಕೇರಳ, ಕೇಶವ ಎಂಬವರು ಗಾಯಗೊಂಡಿದ್ದಾರೆ. ಸ್ಥಳೀಯ ಕುಕ್ಕೇಡಿ ಗ್ರಾಮದ ನಿವಾಸಿ ಬಶೀರ್ ಎಂಬವರಿಗೆ ಸೇರಿದ ಜಾಗದಲ್ಲಿ ಪಟಾಕಿ ತಯಾರಿಕೆ ನಡೆಸುತ್ತಿದ್ದರು.‌ ಒಟ್ಟು 9 ಮಂದಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದಾಗ ಸಂಜೆಯ ವೇಳೆಗೆ ಬ್ಲಾಸ್ಟ್ ಆಗಿದೆ. ಸಾಲಿಡ್ ಫೈರ್ ವರ್ಕ್ ಎಂದು ಹೆಸರಿನ ಈ ಘಟಕದಲ್ಲಿ ಸ್ಫೋಟಕ ತಯಾರಿಗೆ ಸಾಕಷ್ಟು ಕಚ್ಚಾ ಸಾಮಗ್ರಿ ತಂದಿಡಲಾಗಿತ್ತು. ಈ ವೇಳೆ, ಸ್ಫೋಟ ಸಂಭವಿಸಿದೆ. ಘಟನೆ ನಡೆದ ಜಾಗ ವೇಣೂರು ಠಾಣೆ ವ್ಯಾಪ್ತಿಯಲ್ಲಿ ಬರುತ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಸ್ಪಿ ರಿಷ್ಯಂತ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. 


ಸ್ಫೋಟ ಘಟನೆಯಲ್ಲಿ ಇಬ್ಬರು ಸೊಂಟದಿಂದ ಕೆಳಗಿನ ಭಾಗ ಪೂರ್ತಿ ಕರಕಲಾಗಿದೆ. ಕೈಕಾಲು ಛಿದ್ರಗೊಂಡು ಹೊರಗಡೆ ಬಿದ್ದಿದ್ದರು. ಕಟ್ಟಡದ ಹೊರಭಾಗದಲ್ಲಿ ಸ್ಫೋಟ ಸಂಭವಿಸಿದ್ದು ಒಳಗಿದ್ದ ಗೋದಾಮಿಗೆ ಬೆಂಕಿ ಹತ್ತಿಕೊಂಡಿಲ್ಲ.

ಬೊಳ್ಳಾಣ ಆಂಜನೇಯ ಭಜನಾಮಂದಿರ ಲೋಕಾರ್ಪಣಾ ಕಾರ್ಯಕ್ರಮ

Posted by Vidyamaana on 2024-01-23 08:46:16 |

Share: | | | | |


ಬೊಳ್ಳಾಣ ಆಂಜನೇಯ ಭಜನಾಮಂದಿರ ಲೋಕಾರ್ಪಣಾ ಕಾರ್ಯಕ್ರಮ

ಪುತ್ತೂರು: ರಾಜಕೀಯದವರು ತಮ್ಮ ಲಾಭಕ್ಕೋಸ್ಕರ ಯಾರದ್ದೋ ಮಕ್ಕಳನ್ನು ಬಲಿಪಶು ಮಾಡುವ ಚಾಲ್ತಿ ಇದ್ದು ಕೆಟ್ಟ ಚಟುವಟಿಕೆಯಲ್ಲಿ ನಿಮ್ಮ ಮಕ್ಕಳು ಭಾಗಿಗಳಾಗಿ ಅವರು ಜೀವನ ಪೂರ್ತಿ ಕೋರ್ಟು, ಕೇಸು ಅಲೆದಾಡದಂತೆ ನೋಡಿಕೊಳ್ಳಿ ಎಂದು ಪುತ್ತೂರು ಶಸಕರಾದ ಅಶೋಕ್ ರೈಯವರು ಪೋಷಕರಿಗೆ ಎಚ್ಚರಿಕೆ ಮಾತುಗಳನ್ನು ನೀಡಿದ್ದಾರೆ.


ರಾಜಕೀಯದವರು ತಮ್ಮ ಲಾಭಕ್ಕೆ ಏನು ಬೇಕಾದರೂ ಭಾಷಣ ಮಾಡಬಹುದು, ಅವರ ಭಾಷಣ ಕೇಳಿ ಯುವ ಸಮೂಹ ಹಾಳಾಗದಂತೆ ಎಚ್ಚರವಹಿಸಬೇಕು. ನೀವು ಒಂದು ಬಾರಿ ಕೇಸು ಮೈಮೇಲೆ ಹಾಕಿಕೊಂಡರೆ ಮತ್ತೆ ಜೀವನ ಪೂರ್ತಿ ನೀವಿ ಕೋರ್ಟಿಗೆ ಅಲೆದಾಡಬೇಕಾಗುತ್ತದೆ , ಸಮಾಜದಲ್ಲಿ ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಬಾಳಿ ಬದುಕುವ ಮೂಲಕ ಜೀವನ ರೂಪಿಸಿಕೊಳ್ಳಿ , ನೀವು ಜೀವನದಲ್ಲಿ ಸೋತಗ ನಿಮ್ಮ ಜೊತೆ ಯಾರೂ ಇರುವುದಿಲ್ಲ ಕೊನೆಯವರೆಗೂ ನಿಮ್ಮ ಜೊತೆ ಇರುವುದು ನಿಮ್ಮ ತಂದೆ ತಾಯಿ ಅವರ ಕಣ್ಣಲ್ಲಿ ನೀರು ಭರಿಸುವ ಕೆಲಸವನ್ನು ಯಾರೂ ಮಾಡಬರದು ಎಂದು ಹೇಳಿದರು.


ಅವರು ಬೊಳ್ಳಾಣ ಆಂಜನೇಯ ಭಜನಾಮಂದಿರದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಭಾತದಲ್ಲಿ ಎಲ್ಲಾ ಜಾತಿ, ಧರ್ಮದ ಜನರಿದ್ದಾರೆ, ದೇಶದಲ್ಲಿರುವ ಎಲ್ಲಾ ಧರ್ಮದ ಜನರೂ ಪರಸ್ಪರ ಅಣ್ಣ ತಮ್ಮಂದಿರಂತೆ ಬಾಳಿದರೆ ಮಾತ್ರ ದೇಶ ಅಭಿವೃದ್ದಿಯಾಗಲು ಸಾಧ್ಯ, ಭಾರತ ವಿಶ್ವಗುರುವಾಗಲು ಸಾಧ್ಯ ಭಾಷಣದಿಂದ ಭಾರತ ವಿಶ್ವಗುರುವಾಗಲು ಸಾಧ್ಯವೇ ಇಲ್ಲ ಎಂದು ಹೇಳಿದರು.ಜ.೨೨ ರಂದು ಶ್ರೀರಾಮಮಂದಿರ ಲೋಕಾರ್ಪಣೆಯಾಗಿದೆ, ದೇಶದಲ್ಲಿ ಅದಾಗ್ತದೆ, ಇದಾಗ್ತದೆ ಎಂದು ಆತಂಕದ ಮಾತುಗಳನ್ನು ಕೆಲವರು ಹೇಳಿದ್ದರು. ಆದರೆ ರಾಮಮಂದಿರ ಲೋಕಾರ್ಪಣೆ ದಿನ ದೇಶದಲ್ಲಿ ಎಲ್ಲೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ , ಅಹಿತಕರ ಘಟನೆ ನಡೆಯುವುದು ಯರಿಗೂ ಬೇಕಾಗಿಲ್ಲ, ಜನ ಪ್ರತೀ ದಿನವೂ ನೆಮ್ಮದಿಯನ್ನು ಬಯಸುತ್ತಾರೆ ಎಂದು ಹೇಳಿದರು. ದೇಶ ಅಭಿವೃದ್ದಿಯಗಬೇಕಾದರೆ ಇಲ್ಲಿರುವ ಪ್ರತೀಯೊಬ್ಬರೂ ಪರಸ್ಪರ ಸಾಹೋದರ್ಯತೆಯಿಂದ ಬಾಳಬೇಕಾದ ಅಗತ್ಯವಿದೆ ಎಂದು ಶಾಸಕರು ಹೇಳಿದರು.



Leave a Comment: