ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ಸುದ್ದಿಗಳು News

Posted by vidyamaana on 2024-07-03 10:25:40 |

Share: | | | | |


ಪೊಲೀಸರಿಂದ ಎಸ್ಕೆಪ್ ಆಗಲು ಹೋಗಿ ನೀರುಪಾಲಾದ ಇಬ್ಬರ ರಕ್ಷಣೆ : ಐವರು ನಾಪತ್ತೆ

ವಿಜಯಪುರ: ಇಸ್ಪೀಟ್ ಆಡುವಾಗ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಎಸ್ಕೇಪ್ ಆಗಲು ಹೋಗಿ ತೆಪ್ಪ ಮಗುಚಿದ ಘಟನೆ ನಿನ್ನೆ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಅಲ್ಲಿನ ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಎಂಟು ಜನ ತೆಪ್ಪದಲ್ಲಿ ಕೃಷ್ಣಾ ನದಿಯ ಮೂಲಕ ಎಸ್ಕೇಪ್ ಆಗುವ ವೇಳೆ ದುರಂತ ನಡೆದಿದೆ. ಇನ್ನು, ಮೀನುಗಾರರು ಹಾಗೂ ಸ್ಥಳೀಯರ ನೆರವಿನೊಂದಿಗೆ ಇಬ್ಬರ ರಕ್ಷಣೆ ಮಾಡಲಾಗಿದ್ದು ಇಬ್ಬರ ಇಬ್ಬರ ಮೃತದೇಹ ಸಿಕ್ಕಿದೆ.

ಪುಂಡಲೀಕ ಯಂಕಂಚಿ (35), ಮಹಮ್ಮದ್ ತೈಹದ್ ಚೌಧರಿ(45) ಸಾವನ್ನಪ್ಪಿದ್ದಾರೆ. ಸಚಿನ್ ಕಟಬರ್, ಫಾರೂಕ್ ಅಮದ ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಎಂಟು ಜನ ಕೊಲ್ಹಾರ ಪಟ್ಟಣದವರಾಗಿದ್ದು, ನೀರುಪಾಲಾದವರು ದಶರಥ( 58),ಮೈಬೂಬ್ ವಾಲಿಕಾರ (35), ರಫೀಕ್ ಬಾಂಬೆ ,(40), ರಫೀಕ ಜಾಲಗಾರರಿಗಾಗಿ(48) ಹುಡುಕಾಟ ನಡೆಯುತ್ತಿದೆ.

 Share: | | | | |


ಕುಸಿದು ಬಿದ್ದ ಬಿಜೆಪಿ ಫೈರ್ ಬ್ರ್ಯಾಂಡ್​ ಯತ್ನಾಳ್​ ಆಂಬುಲೆನ್ಸ್​​ ಮೂಲಕ ಆಸ್ಪತ್ರೆಗೆ ಶಿಫ್ಟ್

Posted by Vidyamaana on 2023-07-19 12:29:31 |

Share: | | | | |


ಕುಸಿದು ಬಿದ್ದ ಬಿಜೆಪಿ  ಫೈರ್ ಬ್ರ್ಯಾಂಡ್​  ಯತ್ನಾಳ್​ ಆಂಬುಲೆನ್ಸ್​​ ಮೂಲಕ ಆಸ್ಪತ್ರೆಗೆ ಶಿಫ್ಟ್

ಬೆಂಗಳೂರು : ಹತ್ತು ಶಾಸಕರನ್ನು ವಿಧಾನ ಸಭೆಯಿಂದ ಅಮಾನತ್ತು ಮಾಡಲಾದ ಹಿನ್ನೆಲೆಯಲ್ಲಿ ಮಾರ್ಷಲ್ ಗಳು ಶಾಸಕರನ್ನು ಹೊತ್ತು ಹೊರ ಹಾಕುವ ವೇಳೆ ಬಿಜೆಪಿ ಶಾಸಕರು ಪ್ರತಿಭಟನೆ ಮಾಡುತ್ತಿದ್ದರು, ಬಸವನಗೌಡ ಯತ್ನಾಳ್ ವಿಧಾನ ಸೌಧದ ಕಾರಿಡಾರ್‍ ನಲ್ಲಿ ಕುಸಿದು ಬಿದ್ದರು.ಗದ್ದಲದ ವೇಳೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಅಸ್ವಸ್ಥ, ಬಿಪಿ ಜಾಸ್ತಿಯಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರನ್ನು ತುರ್ತುವಾಹನದ ಮೂಲಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಸ್ಪೀಕರ್ ನಿಲುವು ಖಂಡಿಸಿ ಬಿಜೆಪಿ ಸದ್ಯಸರು ವಿಧಾನಸಭೆಯ ಬಾಗಿಲ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು, ಈ ವೇಳೆ ಬಿಪಿಯಲ್ಲಿ ಏಳಿರಿಳಿತವಾಗಿ ಬಸನಗೌಡ ಯತ್ನಾಳ್ ಅಸ್ವಸ್ಥರಾಗಿದ್ದು, ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ಅಂಬ್ಯುಲೆನ್ಸ್‌ ಮೂಲಕ ಶಿಫ್ಟ್‌ ಮಾಡಲಾಗಿದೆ ಅಂತ ತಿಳಿದು ಬಂದಿದೆ.

ಚಿಕ್ಕಮಗಳೂರು: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ

Posted by Vidyamaana on 2023-12-05 13:50:20 |

Share: | | | | |


ಚಿಕ್ಕಮಗಳೂರು: ನಾಯಿ ಬೊಗಳಿದ್ದಕ್ಕೆ ಮಾಲೀಕನ ಮೇಲೆ ಆಸಿಡ್ ದಾಳಿ

ಚಿಕ್ಕಮಗಳೂರು: ನಾಯಿ ಬೊಗಳಿದ್ದಕ್ಕೆ ಮನೆ ಮಾಲೀಕನ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಹಾಳ್ ಕರಗುಂದ ಗ್ರಾಮದಲ್ಲಿ ನಡೆದಿದೆ.


ಜೇಮ್ಸ್ ಆಸಿಡ್ ದಾಳಿ ಮಾಡಿದ ಆರೋಪಿಯಾದರೆ, ಸುಂದರ್ ರಾಜ್ ಆಸಿಡ್ ದಾಳಿಗೊಳಗಾದ ವ್ಯಕ್ತಿ. ಜೇಮ್ಸ್ ಹಾಗೂ ಸುಂದರ್ ರಾಜ್ ಅಕ್ಕಪಕ್ಕದ ಮನೆಯವರು. ಹಲವು ದಿನಗಳಿಂದ ಇಬ್ಬರ ನಡುವೆ ಗಲಾಟೆಯಾಗಿ, ಮನಸ್ಥಾಪವಿತ್ತು. ನಿನ್ನೆ ಸುಂದರ್ ರಾಜ್ ಮನೆಯ ಸಾಕು ನಾಯಿ ಬೊಗಳುತ್ತಿತ್ತು.


ಈ ವೇಳೆ ಮನೆ ಮಾಲೀಕ ಸುಂದರ್ ರಾಜ್ ನಾಯಿಗೆ ಬೈದಿದ್ದಾರೆ. ಆಗ ಜೇಮ್ಸ್ ನಾಯಿಗೆ ಬೈದಂತೆ ನನಗೆ ಬೈಯುತ್ತಿದ್ದಾನೆ ಎಂದು ಜಗಳವಾಡಿದ್ದಾನೆ. ಇಬ್ಬರು ಜಗಳವಾಡುವಾಗ ಜೇಮ್ಸ್ ಏಕಾಏಕಿ ಸುಂದರ್ ರಾಜ್ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ.

ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಮಗಳನ್ನು ಯಾರೋ ಕೊಲೆ ಮಾಡಿದ್ದಾರೆ-ತಾಯಿ

Posted by Vidyamaana on 2024-05-16 16:58:06 |

Share: | | | | |


ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು; ಮಗಳನ್ನು ಯಾರೋ ಕೊಲೆ ಮಾಡಿದ್ದಾರೆ-ತಾಯಿ

ಬೆಂಗಳೂರು (ಮೇ 16): ಬೆಂಗಳೂರಿನಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಕುತ್ತಿಗೆ ಸೀಳಿದ ರೀತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದ ಯುವತಿ ಅನುಮಾನಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾಳೆ. ಅದು ಕೂಡ ಕುತ್ತಿಗೆ ಹಾಗೂ ಕೈಗಳನ್ನು ಕತ್ತರಿಸಿಕೊಂಡು ಸಾವನ್ನಪ್ಪಿದ್ದಾಳೆ. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿದ್ದು, ಯುವತಿಯ ತಾಯಿ ಮಾತ್ರ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಯಾರೋ ಕಿಡಿಗೇಡಿಗಳು ಕೊಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ನೈಟಿ ಧರಿಸಿ ಕಳ್ಳತನಕ್ಕೆ ಬಂದ ವಿಚಿತ್ರ ಕಳ್ಳ ಸಿಸಿಟಿವಿಯಲ್ಲಿ ದೃಶ್ಯ ಸೆರೆ

Posted by Vidyamaana on 2024-02-21 16:39:35 |

Share: | | | | |


ನೈಟಿ ಧರಿಸಿ ಕಳ್ಳತನಕ್ಕೆ ಬಂದ ವಿಚಿತ್ರ ಕಳ್ಳ ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ (Bengaluru) ವಿಚಿತ್ರ ಕಳ್ಳನೊಬ್ಬ (Thief) ಪ್ರತ್ಯಕ್ಷವಾಗಿದ್ದಾನೆ. ರಾತ್ರಿ ಹೊತ್ತು ನೈಟಿ ಹಾಕ್ಕೊಂಡು ಅಪಾರ್ಟ್‌ಮೆಂಟ್‌ಗೆ (Apartment) ನುಗ್ಗಿ ಶೂ ಕಳ್ಳತನ ಮಾಡಿ ಪರಾರಿಯಾಗ್ತಿದ್ದಾನೆ

ನೈಟಿ ಧರಿಸಿ ಕಳ್ಳತನಕ್ಕೆ ಬಂದ ವಿಚಿತ್ರ ಕಳ್ಳ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ವಿಚಿತ್ರ ಕಳ್ಳನ ದೃಶ್ಯ ಸಿಸಿಟಿವಿಯಲ್ಲಿ (CCTV Visuals) ಸೆರೆಯಾಗಿದೆ.ಈ ಬಗ್ಗೆ ಅನಿಲ್ ಕುಮಾರ್ ಎಂಬುವವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಕಳ್ಳನನ್ನ ಅದಷ್ಟು ಬೇಗ ಹಿಡಿಯಿರಿ ಎಂದು ಒತ್ತಾಯಿಸಿದ್ದಾರೆ.

ಲಂಡನ್ ಡಾಕ್ಟರ್ ಎಂದು ಹೇಳಿ ಮಲ್ಪೆಯ ಮಹಿಳೆಗೆ 4.96 ಲಕ್ಷ ವಂಚನೆ

Posted by Vidyamaana on 2024-02-24 04:42:25 |

Share: | | | | |


ಲಂಡನ್ ಡಾಕ್ಟರ್ ಎಂದು ಹೇಳಿ ಮಲ್ಪೆಯ ಮಹಿಳೆಗೆ 4.96 ಲಕ್ಷ ವಂಚನೆ

ಉಡುಪಿ, : ಲಂಡನ್ ಮೂಲದ ಡಾಕ್ಟರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಮಲ್ಪೆಯ ಮಹಿಳೆಯೊಬ್ಬರನ್ನು ಯಾಮಾರಿಸಿ 4.96 ಲಕ್ಷ ರೂಪಾಯಿ ಪೀಕಿಸಿದ ಘಟನೆ ನಡೆದಿದೆ. ಹಣ ಕಳಕೊಂಡ ಮಹಿಳೆ ಮಲ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.


ಮಲ್ಪೆ ನಿವಾಸಿ ವಿನಿತಾ ಎಂಬ ಮಹಿಳೆಗೆ ಜನವರಿ 24ರಂದು ವಾಟ್ಸಪ್ ನಲ್ಲಿ ವ್ಯಕ್ತಿಯೊಬ್ಬ ಪರಿಚಯ ಆಗಿದ್ದು ನಿಮ್ಮ ಬಿಸಿನೆಸ್ನಲ್ಲಿ ಪಾಲುದಾರಿಕೆ ಮಾಡ್ತೀನಿ ಎಂದಿದ್ದ. ಅಲ್ಲದೆ, ತಾನು ಲಂಡನ್ನಲ್ಲಿ ಡಾಕ್ಟರ್ ಆಗಿದ್ದು, ಸದ್ಯದಲ್ಲೇ ಭಾರತಕ್ಕೆ ಬರಲು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದ. ಫೆ.2ರಂದು ಬೇರೊಂದು ನಂಬರಲ್ಲಿ ಫೋನ್ ಬಂದಿತ್ತು. ದೆಹಲಿ ಏರ್ಪೋರ್ಟ್ ಕಚೇರಿಯಿಂದ ಫೋನ್ ಮಾಡುತ್ತಿದ್ದೇನೆಂದು ಹೇಳಿದ್ದ ಆ ವ್ಯಕ್ತಿ, ಲಂಡನ್ ಡಾಕ್ಟರಿನ ಫ್ರೆಂಡ್ ಎಂದು ಹೇಳಿದ್ದ. ಡಾಕ್ಟರನ್ನು ಏರ್ಪೋರ್ಟ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅವರನ್ನು ಬಿಡಿಸಿ ತರಲು ದಂಡ ಕಟ್ಟಬೇಕಾಗಿದೆ ಎಂದಿದ್ದ.


ಆನಂತರವೂ ಫೋನ್ ಬಂದಿದ್ದು, ಡಾಕ್ಟರ್ ಏರ್ಪೋರ್ಟಲ್ಲಿ ಸಿಕ್ಕಿಬಿದ್ದಿದ್ದಾರೆ. ದಂಡ ಕಟ್ಟಲು ಹಣ ಇಲ್ಲ, ಸಹಾಯ ಮಾಡಬಹುದೇ ಎಂದು ಆ ವ್ಯಕ್ತಿ ಕೇಳಿಕೊಂಡಿದ್ದ. ಅದರಂತೆ, ವಿನಿತಾ ಅವರು ಫೆ.16ರಿಂದ 20ರ ನಡುವೆ ತನ್ನ ಕೆನರಾ ಬ್ಯಾಂಕ್ ಖಾತೆಯಿಂದ ಫೋನ್ ಪೇ ಮೂಲಕ 4.96 ಲಕ್ಷ ರೂ. ಹಣ ಕಳಿಸಿದ್ದರು. ಹಣ ಕಳಿಸಿದ ಬಳಿಕ ಫೋನ್ ಸಂಪರ್ಕ ಕಡಿತ ಆಗಿತ್ತು. ಇದರಿಂದ ಮೋಸದ ಅರಿವಾದ ಮಹಿಳೆ ಮಲ್ಪೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಗಿಡನೆಡುವುದು ಮಾತ್ರವಲ್ಲ ಅದನ್ನು ಪೋಷಣೆ ಮಾಡುವ ಜವಾಬ್ದಾರಿಯೂ ಇದೆ: ಶಾಸಕ ಅಶೋಕ್ ರೈ

Posted by Vidyamaana on 2024-06-24 13:44:56 |

Share: | | | | |


ಗಿಡನೆಡುವುದು ಮಾತ್ರವಲ್ಲ ಅದನ್ನು ಪೋಷಣೆ ಮಾಡುವ ಜವಾಬ್ದಾರಿಯೂ ಇದೆ: ಶಾಸಕ ಅಶೋಕ್ ರೈ

ಪುತ್ತೂರು: ಪ್ರತೀ ಮಳೆಗಾಲದಲ್ಲಿ ವನಮಹೋತ್ಸವ ಬಹಳ ಅಬ್ನರದಿಂದ ಆಚರಣೆ ಮಾಡುತ್ತೇವೆ, ಸಿಕ್ಕ ಸಿಕ್ಕಲ್ಲೆಲ್ಲ ಗಿಡ ನೆಡುತ್ತಾರೆ ಆದರೆ ಅದು ನೆಟ್ಟ ಬಳಿಕ ಏನಾಗಿದೆ ಎಂದು ನೋಡಬೇಕಾದ ಅಥವಾ ಅದನ್ನು ಆರೈಕೆ ಮಾಡಬೇಕಾದ ಜವಾವ್ದಾರಿಯೂ ನಮಗಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿಯಲ್ಲಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವ‌ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.

ಪುತ್ತೂರು ಉಪ್ಪಿನಂಗಡಿ ರಸ್ತೆ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ರಸ್ತೆ ಬದಿಗಳಲ್ಲಿಯೂ ಗಡಿಗಳನ್ನು ನೆಡುವಂತೆ ಸೂಚನೆ ನೀಡಿದ್ದೇನೆ. ಗಿಡಗಳನ್ನು ಪ್ರಾಣಿಗಳು ತಿನ್ನದಂತೆ ಅದಕ್ಕೆ ತಡೆ ಬೇಲಿ ಗೊಬ್ಬರ ಮತ್ತು ಕಾಲ ಕಾಲಕ್ಕೆ ಅದಕ್ಕೆ ಗೊಬ್ಬರವನ್ನೂ ಹಾಕುವಂತೆ ಸೂಚನೆ ನೀಡಿದ್ದೇನೆ. ಗಿಡ ನೆಟ್ಟು ಕಾರ್ಯಕ್ರಮ ಮಾಡಿ ಕೈ ತೊಳೆದುಕೊಂಡರೆ ಸಾಲದು ನೆಟ್ಟ ಗಿಡ ಮರವಾಗುವ ತನಕ ಅದನ್ನು ಉಳಿಸುವ ಜವಾಬ್ದಾರಿ ಇಲಾಖೆ ಮತ್ತು ಸಾರ್ವಜನಿಕರಿಗೆ. ರಸ್ತೆ ಬದಿ ನೆಟ್ಟ ಗಿಡ ನಮ್ಮ ಗಿಡ ಎಂಬ ಪ್ರೀತಿ ಸಾರ್ವಜನಿಕರಲ್ಲಿ‌ ಮೂಡಬೇಕಿದೆ.ಯಾವುದೇ ಕಾರಣಕ್ಕೂ ಸಾರ್ವಜನಿಕರು ನೆಟ್ಟ ಗಿಡವನ್ನು ಕೀಳಬೇಡಿ ಗಿಡಗಳು ಯಾರಿಗಾದರೂ ಬೇಕಾದಲ್ಲಿ ಇಲಾಖೆಯವರು ತಲುಪಿಸುವ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು.

ನಾಶವಾಗುತ್ತಿರುವ ಗಿಡಗಳ ಪೋಷಣೆ ಮಾಡಬೇಕು:

ಈಗಾಗಲೇ ಅನೇಕ ಕಾಟು ಹಣ್ಣಿನ ಗಿಡಗಳು‌ನಾಶವಾಗುತ್ತಿದೆ. ಕಾಟು ಮಾವು, ನೇರಳೆ ಸೇರಿದಂತೆ ಹೆಚ್ಚಿನ ಕಾಟು ಗಿಡಗಳು ವಿನಾಶದ ಅಂಚಿನಲ್ಲಿದೆ ಅದನ್ನು ರಸ್ತೆ ಬದಿಯಲ್ಲಿ ನೆಡುವ ಕೆಲಸ ನಡೆಯುತ್ತಿದೆ. ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ರೈ ಚಾರಿಟೇಬಲ್ ಟ್ರಸ್ಟ್ ವನಮಹೋತ್ಸವ ಕಾರ್ಯಕ್ರಮವನ್ನು ತಾಲೂಕಿನಾಧ್ಯಂತ ಜಂಟಿಯಾಗಿ  ನಡೆಸಲಾಗುತ್ತಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಈ ಬಾರಿ ವನಮಹೋತ್ಸವ ನಡೆಯಲಿದೆ ಎಂದು ಹೇಳಿದರು.



Leave a Comment: