ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ಚುನಾವಣೆ ಮುಗಿಯುತ್ತಿದ್ದಂತೆ 2 ದಿನ ದೇಶದ ಈ ಸ್ಥಳದಲ್ಲಿ ಧ್ಯಾನ ಮಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

Posted by Vidyamaana on 2024-05-29 06:16:30 |

Share: | | | | |


ಚುನಾವಣೆ ಮುಗಿಯುತ್ತಿದ್ದಂತೆ 2 ದಿನ ದೇಶದ ಈ ಸ್ಥಳದಲ್ಲಿ ಧ್ಯಾನ ಮಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕೊನೆಯ ಹಂತದ ಮತದಾನಕ್ಕೆ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 30 ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಪ್ರಸಿದ್ಧ ವಿವೇಕಾನಂದ ರಾಕ್ ಮೆಮೋರಿಯಲ್ ಗೆ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಭೇಟಿ ನೀಡಲಿದ್ದಾರೆ.ಬಿಜೆಪಿಯ ಹಿರಿಯ ನಾಯಕರೊಬ್ಬರು ಮಂಗಳವಾರ ಈ ಮಾಹಿತಿಯನ್ನು ನೀಡಿದ್ದಾರೆ.

ಏ.10 ರಿಂದ 17 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ : ಗೊನೆ ಮುಹೂರ್ತ

Posted by Vidyamaana on 2023-04-01 05:58:56 |

Share: | | | | |


ಏ.10 ರಿಂದ 17 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ : ಗೊನೆ ಮುಹೂರ್ತ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ಬರ ದೇವಸ್ಥಾನದಲ್ಲಿ ಏ.10 ರಿಂದ 17 ರ ತನಕ ನಡೆಯುವ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಶನಿವಾರ ನಡೆಯಿತು.

ಬೆಳಿಗ್ಗೆ ಶ್ರೀ ದೇವಸ್ಥಾನದ ಗರ್ಭಗುಡಿ ಎದುರು ಪ್ರಾರ್ಥನೆ ನೆರವೇರಿಸಿದ ಬಳಿಕ ದೇವಸ್ಥಾನದ ಪಕ್ಕದ ತೋಟವೊಂದರಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ಗೊನೆ ಮುಹೂರ್ತ ನೆರವೇರಿಸಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ಡಾ.ಸುಧಾ ಎಸ್.ರಾವ್, ವೀಣಾ ಬಿ.ಕೆ., ಪ್ರಧಾನ ಅರ್ಚಕ ವಸಂತ ಕೆದಿಲಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಸಿಬ್ಬಂದಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

ಮಾರ್ಚ್‌ನಲ್ಲಿ ಸರಕಾರದಿಂದ 3೦೦೦ ಪವರ್‌ಮ್ಯಾನ್‌ಗಳ ನೇಮಕಾತಿ

Posted by Vidyamaana on 2024-02-06 07:20:05 |

Share: | | | | |


ಮಾರ್ಚ್‌ನಲ್ಲಿ  ಸರಕಾರದಿಂದ 3೦೦೦ ಪವರ್‌ಮ್ಯಾನ್‌ಗಳ ನೇಮಕಾತಿ

ಪುತ್ತೂರು: ಮಾರ್ಚ್ ತಿಂಗಳಲ್ಲಿ ೩೦೦೦ ಮೆಸ್ಕಾಂ ಪವರ್‌ಮ್ಯಾನ್‌ಗಳ ನೇಮಕಾತಿ ನಡೆಯಲಿದ್ದು ಇದಕ್ಕಾಗಿ ಅಭ್ಯರ್ಥಿಗಳಿಗೆ ತರಬೇತಿ ಸಜ್ಜುಗೊಳಿಸುವ ವ್ಯವಸ್ಥೆ ಮಾಡುವಂತೆ ಇಂಧನ ಸಚಿವ ಕೆ ಜೆ ಜಾರ್ಜ್ ರವರು ಪುತ್ತೂರು ಶಾಸಕರಾದ ಅಶೋಕ್ ರಐಯವರಲ್ಲಿ ವಿನಂತಿಸಿದ್ದಾರೆ.


ಮಂಗಳೂರು ಮೆಸ್ಕಾಂ ಭವನದಲ್ಲಿ ಫೆ. ೫ ರಂದು ನಡೆದ ಸಭೆಯಲ್ಲಿ ಸಚಿವರು ಈ ಸೂಚನೆಯನ್ನು ನೀಡಿದ್ದಾರೆ.


ಪವರ್‌ಮ್ಯಾನ್‌ಗಳ ಕೊರತೆಯ ಬಗ್ಗೆ ಸಚಿವರ ಗಮನಸೆಳೆದ ಪುತ್ತೂರು ಶಾಸಕರಾದ ಅಶೋಕ್ ರೈಯವರು ದ ಕ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಪುತ್ತೂರಿನಲ್ಲಿಯೂ ಪವರ್‌ಮ್ಯಾನ್‌ಗಳ ಕೊರತೆ ಇದೆ. ಪವರ್ ಮ್ಯಾನ್ ಕೆಲಸ ಪಡೆದುಕೊಂಡ ಘಟ್ಟದವರು ಇಲ್ಲಿ ಬಂದು ಎರಡರಿಂದ ಮೂರು ವರ್ಷ ಕೆಲಸ ಮಾಡಿ ಬಳಿಕ ಅವರ ಊರಿನ ಶಾಸಕರಿಂದ ಪತ್ರವನ್ನು ಪಡೆದು ಅವರ ಊರಿಗೆ ಮರಳುತ್ತಾರೆ. ಹೆಚ್ಚಿನವರು ಇದೇ ರೀತಿ ಮಾಡುವುದರಿಂದ ಈ ಭಾಗದಲ್ಲಿ ಪವರ್ ಮ್ಯಾನ್ ಕೊರತೆ ಉಂಟಾಗುತ್ತಿದೆ. ದ ಕ ಜಿಲ್ಲೆಯವರು ಪವರ್‌ಮ್ಯಾನ್ ಕೆಲಸಕ್ಕೆ ಅರ್ಜಿ ಹಾಕುವುದೇ ಕಡಿಮೆಯಾಗಿದೆ. ಈ ಕಾರಣಕ್ಕೆ ಅವರಿಗೆ ತರಬೇತಿ ನೀಡಿ ಅವರನ್ನು ಪವರ್ ಮ್ಯಾನ್ ಹುದ್ದಗೆ ನೇಮಕಾತಿ ಮಾಡಿಕೊಳ್ಳಬೇಕಿದೆ. ಆಸಕ್ತಿ ಇರುವ ಅಭ್ಯರ್ಥಿಗಳಿಗೆ ನಾನು ನನ್ನ ಟ್ರಸ್ಟ್ ಮೂಲಕ ತರಬೇತಿ ನೀಡುತ್ತೇನೆ ಇಲಾಖೆಯಿಂದ ತರಬೇತಿಗೆ ಬೇಕಾದ ವ್ಯವಸ್ಥೆಗಳನ್ನು ಜೋಡನೆ ಮಾಡಬೇಕು ಎಂದು ಸಚಿವರಲ್ಲಿ ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ಸಚಿವರು ಒಟ್ಟು ೬ ಸಾವಿರ ಪವರ್‌ಮ್ಯಾನ್‌ಗಳ ಬೇಡಿಕೆ ಇದೆ ಆದರೆ ಒಮ್ಮೆಲೆ ೬ ಸಾವಿರ ಮಂದಿಯನ್ನು ನೇಮಕಾತಿ ಮಾಡಲು ಕಾನೂನಿನ ತೊಡಕು ಇದೆ ಆರಂಭದಲ್ಲಿ ಮೂರು ಸಾವಿರ ಮಂದಿಯನ್ನು ನೇಮಕಾತಿ ಮಡುತ್ತೇವೆ, ನಿಮ್ಮ ಮೂಲಕವೇ ಕರಾವಳಿ ಯ ಅಭ್ಯರ್ಥಿಗಳಿಗೆ ತರಬೇತಿ ನೀಡಿ ಆ ಮೂಲಕ ನಿಮ್ಮ ಊರಿನವರನ್ನೇ ಇಲ್ಲಿಗೆ ಪವರ್ ಮ್ಯಾನ್‌ಗಳಾಗಿ ನೇಮಕ ಮಾಡೋಣ ಎಂದು ಸೂಚಿಸಿದರು.


 


ಶಾಸಕರಿಗೆ ಶಹಬ್ಬಾಸ್ ಎಂದ ಸಚಿವರು


ಇದೇ ಮೊದಲ ಬಾರಿಗೆ ಪವರ್‌ಮ್ಯಾನ್‌ಗಳಿಗೆ ಕಂಬ ಹತ್ತುವ ಮತ್ತು ಇತರೆ ಕೆಲಸಗಳಿಗೆ ತಮ್ಮ ಟ್ರಸ್ಟ್ ಮೂಲಕ ಉಚಿತ ತರಬೇತಿ ನೀಡಿ ಅವರಿಗೆ ಉದ್ಯೋಗ ನೀಡಲು ಮುಂದಾಗಿದ್ದೀರಿ ನಿಮ್ಮ ಈ ಉತ್ಸಾಹಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಕೆ ಜೆ ಜಾರ್ಜ್ ಹೇಳಿದರು. ನೀವು ಈಗಾಗಲೇ ಕೆಎಸ್‌ಆರ್‌ಟಿಸಿಯಲ್ಲಿ ಅನೇಕ ಮಂದಿಗೆ ತಾತ್ಕಾಲಿಕ ಚಾಲಕ ಕೆಲಸ ಕೊಡಿಸಿದ್ದೀರಿ ಎಂಬುದನ್ನು ತಿಳಿದುಕೊಂಡೆ ನಿಮ್ಮ ಕ್ಷೇತ್ರದ ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ನಿಮ್ಮ ಮುತುವರ್ಜಿಗೆ ಶಹಬ್ಬಾಸ್ ಎಂದು ಸಚಿವರು ಹೇಳಿದರು.


 


 


ಉಪ್ಪಿನಂಗಡಿಯ ಕರ್ವೆಲ್ ಮತ್ತು ಕೊಯಿಲದಲ್ಲಿ ಸಬ್‌ಸ್ಟೇಷನ್ ಗೆ ಸೂಚನೆ


ಉಪ್ಪಿನಂಗಡಿಯ ಕರ್ವೆಲ್ ಮತ್ತು ಕೊಯಿಲದಲ್ಲಿ ಸಬ್‌ಸ್ಟೇಷನ್ ನಿರ್ಮಾಣ ಮಾಡಲು ಜಾಗ ಮಂಜೂರು ಮಾಡಿಸಿಕೊಟ್ಟಿದ್ದೇನೆ, ಕಳೇದ ಎಂಟು ತಿಂಗಳಿನಿಂದ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಸಬ್‌ಸ್ಟೇಷನ್ ಶೀಘ್ರಗತಿಯಲ್ಲಿ ಮಾಡಿ ಎಂದು ಹೇಳಿದ್ದರೂ ಕೆಲಸ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಅಧಿಕಾರಿಗಳು ಉತ್ತರ ನೀಡಲು ಮುಂದಾದಾಗ ಶಾಸಕರು ನೀವು ಕಥೆ ಹೇಳುವುದು ಬೇಡ ಯಾಕೆ ತಡವಾಗಿದೆ ಎಂಬುದಕ್ಕೆ ಉತ್ತರ ಕೊಡಿ. ನಿಮ್ಮ ಕಥೆ ಕೇಳಲು ನಾನು ಪ್ರಶ್ನೆ ಕೇಳಿದ್ದಲ್ಲ ಎಂದು ಶಸಕರು ಖಾರವಾಗಿಯೇ ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವರು ವಾರದೊಳಗೆ ಸಬ್‌ಸ್ಟೇಷನ್ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡಿ, ಅಶೋಕ್ ರೈ ಏನೇ ಹೇಳಿದರೂ ತಕ್ಷಣ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆಯನ್ನು ನೀಡಿದರು.


 


 


ಬಡವರ ಮನೆ ಮೇಲಿರುವ ತಂತಿ ತೆರವು ಮಾಡಿ


ಅನೇಕ ಕಡೆಗಳಲ್ಲಿ ಬಡವರ ಮನೆಯ ಮೇಲೆ ವಿದ್ಯುತ್ ತಂತಿಗಳನ್ನು ಹಾಕಿದ್ದೀರಿ ಅದನ್ನು ತೆರವು ಮಾಡಬೇಕು. ಈಗಾಗಲೇ ಹಲವು ಮಂದಿ ಇಲಾಖೆಗೆ ಅರ್ಜಿ ಹಾಕಿದರೂ ನಿಮ್ಮ ಸ್ವಯಂ ಖರ್ಚಿನಿಂದ ತೆರವು ಮಡಿ ಎಂದು ಮೆಸ್ಕಾಂ ತಿಳಿಸಿದೆ. ಲೈನ್ ತೆರವು ಮಾಡಲು ಬಡವರ ಬಳಿ ಹಣವಿಲ್ಲ. ಮೂರು ಸೆಂಟ್ಸ್ ಜಾಗದಲ್ಲಿ ಮನೆ ಮಾಡಿಕೊಂಡು ಬಡತನದಿಂದ ಕಾಲ ಕಳೆಯುವ ಕುಟುಂಬಗಳಲ್ಲಿ ಲೈನ್ ಬದಲಾಯಿಸಿಕೊಳ್ಳಲು ಆರ್ಥಿಕಶಕ್ತಿಯಿಲ್ಲ. ಇಲಾಖೆಯೇ ಸ್ವಯಂ ಖರ್ಚು ಮಡಿ ಬಡವರ ಮನೆಯ ಮೇಲಿನ ಲೈನ್ ತೆಗೆಯಬೇಕು ಎಂದು ಸಚಿವರಲ್ಲಿ ಶಾಸಕರು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಕೆಪಿಟಿಸಿಎಲ್ ಎಂ ಡಿ ಪಂಕಜ್ ಪಾಂಡೆ ಕೆಲವರು ತಂತಿಯ ಅಡಿಯಲ್ಲೇ ಮನೆ ಕಟ್ಟಿಕೊಂಡಿದ್ದಾರೆ, ತಂತಿ ಮೊದಲೇ ಇತ್ತು. ಮನೆ ಕಟ್ಟಿದ ಮೇಲೆ ನಾವು ತಂತಿ ಎಳೆದಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು ನೀವು ಬಡವರ ಜಾಗದ ಮೇಲೆ ಯಾಕೆ ತಂತಿ ಎಳೆದಿದ್ದೀರಿ, ಅವರಿಗೆ ಇರುವ ಮೂರರಿಂದ ೫ ಸೆಂಟ್ಸ್ ಜಾಗದಲ್ಲಿ ತಂತಿ ಎಳೆದರೆ ಅವರು ಎಲ್ಲಿ ಮನೆ ಕಟ್ಟುವುದು? ಮನೆ ಕಟ್ಟಲು ಜಾಗವಿಲ್ಲದೆ ತಂತಿಯ ಅಡಿಯಲ್ಲೇ ಮನೆ ಕಟ್ಟಿದ್ದಾರೆ. ನಮಗೆ ಯಾವುದೇ ಕಾರಣ ಹೇಳಬೇಡಿ ತಂತಿಯನ್ನು ತೆರವು ಮಾಡಿ ಬಡವರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಕೂಡಲೇ ಇಂಥಹ ಮನೆಗಳ ಪಟ್ಟಿ ಮಾಡಿ ಅವುಗಳನ್ನು ತೆರವು ಮಾಡಿ ಎಂದು ಅಧಿಕರಿಗಳಿಗೆ ಸೂಚನೆ ನೀಡಿದರು.


 


 


ಜೋತು ಬಿದ್ದ ತಂತಿ ತೆರವು ಮಾಡಿ


ಪುತ್ತೂರು ನಗರ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಹಳೆಯ ಕಾಲದ ವಿದ್ಯುತ್ ತಂತಿಗಳು ಜೋತು ಬೀಳುತ್ತಿದೆ ಅವುಗಳನ್ನು ತೆರವು ಮಾಡಿ ಹೊಸ ತಂತಿಗಳನ್ನು ಅಳವಡಿಸುವಂತೆಯೂ ಶಾಸಕರು ಸಚಿವರಲ್ಲಿ ಮನವಿ ಮಾಡಿದರು.


ವೇದಿಕೆಯಲ್ಲಿ ಕೆಪಿಟಿಸಿಎಲ್ ಎಂ ಡಿ ಪಂಕಜಕುಮಾರ್ ಪಾಂಡೆ, ಮೆಸ್ಕಾಂ ಎಂ ಡಿ ಪದ್ಮಾವತಿ ಉಪಸ್ಥಿತರಿದ್ದರು.

ಟಿಕೆಟ್ ಕೈತಪ್ಪಿದ್ದಕ್ಕೆ ಎಂಡಿಎಂಕೆ ಸಂಸದ ಆತ್ಮಹತ್ಯೆಗೆ ಯತ್ನ ಪ್ರಕರಣ ; ಹೃದಯಘಾತದಿಂದ ಆಸ್ಪತ್ರೆಯಲ್ಲಿ ನಿಧನ

Posted by Vidyamaana on 2024-03-28 13:50:10 |

Share: | | | | |


ಟಿಕೆಟ್ ಕೈತಪ್ಪಿದ್ದಕ್ಕೆ ಎಂಡಿಎಂಕೆ ಸಂಸದ ಆತ್ಮಹತ್ಯೆಗೆ ಯತ್ನ ಪ್ರಕರಣ ; ಹೃದಯಘಾತದಿಂದ ಆಸ್ಪತ್ರೆಯಲ್ಲಿ ನಿಧನ

ತಮಿಳುನಾಡು, ಮಾ 29: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿದ್ದ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಸಂಸದ ಗಣೇಶಮೂರ್ತಿ ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಗಣೇಶ್ ಮೂರ್ತಿ ಅವರು ಎಂಡಿಎಂಕೆ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಈರೋಡೆ ಕ್ಷೇತ್ರದಲ್ಲಿ ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿದ್ದರು.2024ರ ಚುನಾವಣೆಯಲ್ಲಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು ಆದರೆ ಪಕ್ಷ ಯಾವುದೇ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆಗೆ ಇಳಿದಿದೆ ಇದರಿಂದ ಗಣೇಶ್ ಅವರು ಟಿಕೆಟ್ ವಂಚಿತರಾಗಿದ್ದರು ಇದರಿಂದ ಹತಾಶೆಗೊಳಗಾದ ಅವರು ಮಾರ್ಚ್ 24 ರಂದು ಆತ್ಮಹತ್ಯೆಗೆ ಯತ್ನಿಸಿದ್ದರು ಗಂಭೀರ ಸ್ಥಿತಿಯಲ್ಲಿದ್ದ ಅವರು ಇಂದು ಮುಂಜಾನೆ ಹಠಾತ್ ಹೃದಯಾಘಾತಗೊಂಡು ನಿಧನಹೊಂದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

ಆಕ್ರೋಶಕ್ಕೆ ಮಣಿದ ಸರ್ಕಾರ : ದೇವಸ್ಥಾನಗಳ ಅನುದಾನ ತಡೆ ಆದೇಶ ವಾಪಸ್

Posted by Vidyamaana on 2023-08-18 09:36:13 |

Share: | | | | |


ಆಕ್ರೋಶಕ್ಕೆ ಮಣಿದ ಸರ್ಕಾರ : ದೇವಸ್ಥಾನಗಳ ಅನುದಾನ ತಡೆ ಆದೇಶ ವಾಪಸ್

ಬೆಂಗಳೂರು : ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ದಾರ ಅನುದಾನ ತಡೆ ಹಿಡಿದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಮೂರು ವಿಷಯಗಳನ್ನು ಮುಂದಿಟ್ಟು ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳ ಜೀರ್ಣೋದ್ದಾರ ಅನುದಾನ ತಡೆ ಹಿಡಿದಿತ್ತು. ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಿಸದಿದ್ದರೆ ಮುಂದಿನ ಸೂಚನೆಯವರೆಗೂ ಹಣ ಬಿಡುಗಡೆ ಮಾಡಬಾರದು

 ಅನುದಾನ ಮಂಜೂರಾಗಿ ಈಗಾಗಲೇ ಶೇ.50ರಷ್ಟು ಹಣ ಬಿಡುಗಡೆ ಆಗಿದ್ದು, ಹಣ ಬಳಕೆ ಆಗದಿದ್ದಲ್ಲಿ ಉಳಿದ ಹಣ ಬಿಡುಗಡೆ ಮಾಡಬಾರದು ಹಾಗೂ ಕಾಮಗಾರಿ ಆರಂಭ ಆಗದಿದ್ದಲ್ಲಿ ಕಾಮಗಾರಿ ಪ್ರಾರಂಭ ಮಾಡದಂತೆ ತಡೆಯುಬೇಕು. 3. ಆಡಳಿತಾತ್ಮಕ ಮಂಜೂರಾತಿ ಸ್ವೀಕೃತವಾಗಿದ್ದರೆ ಮುಂದಿನ ನಿರ್ದೇಶನದವರೆಗೆ ತಡೆ ಹಿಡಿಯಬೇಕು ಎಂದು ಮುಜರಾಯಿ ಇಲಾಖೆ ಆದೇಶದಲ್ಲಿ ತಿಳಿಸಿತ್ತು.


ಇದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆ ದಿಢೀರ್ ಆದೇಶ ಹಿಂಪಡೆದಿದೆ. ಈ ಕುರಿತು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಊರಿಗೆ ತೆರಳಲು ಹಣ ಇಲ್ಲ ಎಂದು ಕಚೇರಿಗೆ ಬಂದ ಅಂಧ ಯುವಕ

Posted by Vidyamaana on 2023-08-03 03:50:29 |

Share: | | | | |


ಊರಿಗೆ ತೆರಳಲು ಹಣ ಇಲ್ಲ ಎಂದು ಕಚೇರಿಗೆ ಬಂದ ಅಂಧ ಯುವಕ

ಪುತ್ತೂರು: ನಾನು ಬೀದರ್ ಜಿಲ್ಲೆಯ ಬಾಲ್ಕಿ ನಿವಾಸಿ ಕಲ್ಲಪ್ಪ. ಊರು ಸುತ್ತುವ ಅಲೆಮಾರಿ ಯುವಕ, ನನ್ನಲ್ಲಿ ಉಚಿತ ಬಸ್ ಪಾಸ್ ಇತ್ತು ಅದನ್ನು ಕಳೆದುಕೊಂಡಿದ್ದೇನೆ.ನನಗೆ ಊರಿಗೆ ಹೋಗಲು ನನ್ನಲ್ಲಿ ನಯಾ ಪೈಸೆ ಇಲ್ಲ ನನಗೆ ಸಹಾಯ ಮಾಡಿ, ನೀವು ಬಡವರಿಗೆ ಸಹಾಯ ಮಾಡುತ್ತೀರಿ ಎಂದು ಯಾರೋ ನನ್ನನ್ನು ಇಲ್ಲಿಗೆ ತಂದು ಬಿಟ್ಟಿದ್ದಾರೆ. ದಯವಿಟ್ಟು ನನಗೆ ನೆರವು ನೀಡಿ ಎಂದು ಅಂಧ ಯುವಕ ಪುತ್ತೂರು ಶಾಸಕರ ಕಚೇರಿಯಲ್ಲಿ ಬಂದು ಕೇಳಿಕೊಂಡಿದ್ದಾನೆ.

ಯುವಕನ ನೋವನ್ನು ಆಲಿಸಿದ ಶಾಸಕರು ನಿನಗೆ ಎಷ್ಟು ಹಣ ಬೇಕು ನಾನು ಕೊಡುತ್ತೇನೆ, ಸುರಕ್ಷಿತವಾಗಿ ಊರಿಗೆ ಹೋಗಿ ಎಂದು ಅಂಧ ಯುವಕ ಊರಿಗೆ ಹೋಗಲು ಅವನು ಕೇಳಿದಷ್ಟು ಹಣ ನೀಡುವ ಮೂಲಕ ಮಾನವೀಯತೆ ಮೆರೆದರು. ಎಲ್ಲಿಂದಲೋ ಬಂದ ಯುವಕ ಶಾಸಕರ ಬಳಿ ಹಣ ಕೇಳಿದಾಗ ಆತನ ಪೂರ್ವಾ ಪರ ವಿಚಾರಿಸದೆ ಆತ ಬಡವನಾದ ಕಾರಣ ನನ್ನ ಬಳಿ ಬಂದಿದ್ದಲ್ವ ಆತನಿಗೆ ಸಹಾಯ ಮಾಡುವುದು ನನ್ನ ಧರ್ಮ ಎಂದು ಶಾಸಕರು ಈ ವೇಳೆ ಹೇಳಿದರು. ಕಚೇರಿಯಲ್ಲಿ ಸೇರಿದ್ದ ಸಾರ್ವಜನಿಕರು‌ ಶಾಸಕರ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.



Leave a Comment: