ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಮುಳಿಯ ಪುತ್ತೂರು – ಬೆಳ್ತಂಗಡಿ ಶೋರೂಂಗಳಲ್ಲಿ ಡೈಮಂಡ್ ಪ್ರಭೆ

Posted by Vidyamaana on 2023-09-18 15:56:15 |

Share: | | | | |


ಮುಳಿಯ ಪುತ್ತೂರು – ಬೆಳ್ತಂಗಡಿ ಶೋರೂಂಗಳಲ್ಲಿ ಡೈಮಂಡ್ ಪ್ರಭೆ

ಪುತ್ತೂರು: ವೈವಿಧ್ಯಮಯ ಚಿನ್ನಾಭರಣಗಳಿಗೆ ಹೆಸರುವಾಸಿಯಾಗಿರುವ ಮುಳಿಯ ಜ್ಯುವೆಲ್ಲರ್ಸ್’ನ ಪುತ್ತೂರು ಹಾಗೂ ಬೆಳ್ತಂಗಡಿ ಮಳಿಗೆಯಲ್ಲಿ ಸೆ. 18ರಿಂದ ಅ. 5ರವರೆಗೆ ಡೈಮಂಡ್ ಫೆಸ್ಟ್ ಹಮ್ಮಿಕೊಳ್ಳಲಾಗಿದೆ.


ಕೈಗಟುಕು ವೈಭವ ಎನ್ನುವ ಸಾಲಿನೊಂದಿಗೆ ಗ್ರಾಹಕರ ಮುಂದೆ ಬಂದಿರುವ ಡೈಮಂಡ್ ಫೆಸ್ಟ್, ಹೆಸರಿನಂತೆ ಗ್ರಾಹಕರ ಕೈಗೆಟಕುವ ರೀತಿಯಲ್ಲಿದೆ. ಮಾತ್ರವಲ್ಲ ಗ್ರಾಹಕರಿಗಾಗಿ, ವಿಶೇಷ ಆಫರ್, ಗಿಫ್ಟ್’ಗಳನ್ನು ನೀಡಲಾಗಿದೆ.


ಡೈಮಂಡ್ ರಿಂಘ್ ಗೆಲ್ಲುವ ಅವಕಾಶದ ಜೊತೆಗೆ ನಿಮ್ಮ ಹಳೆ ಚಿನ್ನಾಭರಣಗಳನ್ನು ಹೊಸ ವಜ್ರಾಭರಣಗಳಿಗೆ ವಿನಿಮಯ ಮಾಡಿಕೊಳ್ಳುವ ಅವಕಾಶವನ್ನೂ ಕಲ್ಪಿಸಲಾಗಿದೆ. ಇದರಲ್ಲಿ ಪ್ರತಿ ಗ್ರಾಂ ಮೇಲೆ 100 ರೂ.ಗೂ ಅಧಿಕ ಪಡೆಯುವ ಸುವರ್ಣಾವಕಾಶ ಗ್ರಾಹಕರಿಗಿದೆ. ಹೆಚ್ಚಿನ ಮಾಹಿತಿಗೆ ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಮಳಿಗೆಯ 9844692916 ಹಾಗೂ ಬೆಳ್ತಂಗಡಿ ಮುಖ್ಯರಸ್ತೆಯಲ್ಲಿರುವ ಮುಳಿಯ ಮಳಿಗೆ 9343004916 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಮಂಗಳಮುಖಿಯರ ಕಾಟಕ್ಕೆ ಬೇಸತ್ತು ಅಪ್ರಾಪ್ತ ಬಾಲಕ ಆತ್ಮಹತ್ಯೆ

Posted by Vidyamaana on 2024-06-25 09:27:24 |

Share: | | | | |


ಮಂಗಳಮುಖಿಯರ ಕಾಟಕ್ಕೆ ಬೇಸತ್ತು ಅಪ್ರಾಪ್ತ ಬಾಲಕ ಆತ್ಮಹತ್ಯೆ

ಮೈಸೂರು ಜಿಲ್ಲೆಯ ಹುಣಸೂರು ಗ್ರಾಮಾಂತರದಲ್ಲಿ ಅಪ್ರಾಪ್ತ ಬಾಲಕನೊಬ್ಬ ಮಂಗಳಮುಖಿಯ ಕಾಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ರಾಹುಲ್ ಮೌರ್ಯ (17) ಮೃತ ದುರ್ದೈವಿ ಎನ್ನಲಾಗಿದೆ. ಹುಣಸೂರಿನ ಕಿರಾಜಾಜಿ ಸರ್ಕಲ್ ಬಳಿ ಎಳನೀರು ವ್ಯಾಪಾರ ಮಾಡುತ್ತಿದ್ದ ರಾಹುಲ್ ಮೌರ್ಯಗೆ ಎಳನೀರು ವ್ಯಾಪಾರ ಮಾಡಿ ಜೀವನ ಕಟ್ಟಿಕೊಂಡಿದ್ದನು.

ಲಿವಿಂಗ್ ಟುಗೆದರ್ ಕಿತಾಪತಿ : ಜಾವಿದ್ ನನ್ನುಕೊಂದ ರೇಣುಕಾ

Posted by Vidyamaana on 2023-09-07 13:26:08 |

Share: | | | | |


ಲಿವಿಂಗ್ ಟುಗೆದರ್ ಕಿತಾಪತಿ : ಜಾವಿದ್ ನನ್ನುಕೊಂದ ರೇಣುಕಾ

ಬೆಂಗಳೂರು: ಯುವತಿಯೊಬ್ಬಳು ಲಿವಿಂಗ್ ಟು ಗೆದರ್ ನಲ್ಲಿದ್ದ ಯುವಕನನ್ನು ಹತ್ಯೆಗೈದ ಪ್ರಕರಣ ಹುಳಿಮಾವಿನಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಬೆಳಗಾವಿ ಮೂಲದ ರೇಣುಕಾ (34) ಎಂದು ಗುರುತಿಸಲಾಗಿದೆ. ಯುವತಿ ಕೇರಳ ಮೂಲದ ಜಾವಿದ್ (24) ಎಂಬಾತನ ಜೊತೆ ಆಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದಳು. ಇಬ್ಬರೂ ಪರಸ್ಪರ ಸಂಶಯದಿಂದ ಆಗಾಗ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇಬ್ಬರ ನಡುವೆ ಹಣಕಾಸಿನ ವ್ಯವಹಾರ ಸಹ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕಾಗಿ ಆತನನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರೀತಿಸುವಂತೆ ವಿವಾಹಿತೆಗೆ ಜೈಲಿನಿಂದಲೇ ಪಾಗಲ್‌ ಪ್ರೇಮಿ ಬ್ಲ್ಯಾಕ್‌ಮೇಲ್‌

Posted by Vidyamaana on 2023-09-11 19:33:40 |

Share: | | | | |


ಪ್ರೀತಿಸುವಂತೆ ವಿವಾಹಿತೆಗೆ ಜೈಲಿನಿಂದಲೇ ಪಾಗಲ್‌ ಪ್ರೇಮಿ ಬ್ಲ್ಯಾಕ್‌ಮೇಲ್‌

ಬೆಂಗಳೂರು: ಜೈಲಿನಿಂದಲೇ ಫೋನ್‌ ಮಾಡಿ ವಿವಾಹಿತೆಗೆ ಪ್ರೀತಿಸುವಂತೆ (Love Case) ಪ್ರೇಮಿಯೊಬ್ಬ ಕೊಲೆ ಬೆದರಿಕೆ (Blackmailing) ಹಾಕಿರುವ ಘಟನೆ ವರದಿ ಆಗಿದೆ. ಅಕ್ರಮಗಳ ಅಡ್ಡೆಯಾಗಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳಿಗೆ ಸಲೀಸಾಗಿ ಮೊಬೈಲ್ ಸಿಗುತ್ತಿದೆ.ಶ್ರೀನಿವಾಸ ಎಂಬಾತ ಜೈಲು ಸೇರಿದ್ದರೂ, ಅಲ್ಲಿಂದಲೇ ಅಮಲಾ ಎಂಬಾಕೆಗೆ ಕೊಲೆ ಬೆದರಿಕೆ (Blackmail Case) ಹಾಕುತ್ತಿದ್ದಾನೆ.


ಜೈಲಿಗೆ ಕಳಿಸಿದ್ದೀಯಾ ಈಗ ನನ್ನ ನೋಡಲು ಜೈಲಿಗೆ ಬಾ, ಬರದಿದ್ದರೆ ಹೊರಗೆ ಬಂದು ಹತ್ಯೆ ಮಾಡುವುದಾಗಿ ಅಮಲಾಗೆ ಧಮ್ಕಿ ಹಾಕಿದ್ದಾನೆ. ಜೈಲಿನಲ್ಲಿ ತನ್ನೊಟ್ಟಿಗೆ ಇರುವಂತೆ ಹೇಳುತ್ತಿದ್ದಾನೆ ಎಂದು ಸಂತ್ರಸ್ಥೆ ಆರೋಪಿ ಶ್ರೀನಿವಾಸ ವಿರುದ್ಧ ಮತ್ತೊಮ್ಮೆ ದೂರು ನೀಡಿದ್ದಾರೆ.ಬ್ಯಾಟರಾಯನಪುರ ನಿವಾಸಿಯಾದ ಅಮಲಾ ಮದುವೆಯಾಗಿ ಪತಿಯಿಂದ ದೂರವಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಈ ಶ್ರೀನಿವಾಸ ಅಮಲಾಳನ್ನು ಮೋಹಿಸಿದ್ದ. ಆಕೆ ಹಿಂದೆ ಬಿದ್ದು ಪ್ರೀತಿಸು ಇಲ್ಲದಿದ್ದರೆ ಆಯಸಿಡ್ ಹಾಕುವೆ, ಚಾಕುವಿನಿಂದ ಚುಚ್ಚಿ ಕೊಲೆ ಮಾಡುವುದಾಗಿ ಆವಾಜ್ ಹಾಕುತ್ತಿದ್ದ.


ಆತನ ಹುಚ್ಚುತನಕ್ಕೆ ಮನಸೋತು ಅಮಲಾ ಶ್ರೀನಿವಾಸ್ ಪ್ರೀತಿಗೆ ಸಮ್ಮತಿಸಿದ್ದರು. ಕೆಲಕಾಲ ಇಬ್ಬರು ಪ್ರೀತಿಯ ಗುಂಗಲ್ಲಿ ತೇಲಾಡಿದ್ದರು. ಈ ನಡುವೆ ಅಮಲಾ ಮದುವೆ ವಿಚಾರ ಪ್ರಸ್ತಾಪ ಮಾಡಿದಾಗ ಶ್ರೀನಿವಾಸ ಉಲ್ಟಾ ಹೊಡೆಡಿದ್ದ. ನಿನ್ನನ್ನು ಮದುವೆ ಆಗಲ್ಲ, ಜತೆಯಲ್ಲೇ ಇರು ಸಾಕು ಎಂದಿದ್ದ. ಅಲ್ಲದೇ ಇದೇ ವಿಚಾರಕ್ಕೆ ಶ್ರೀನಿವಾಸ ಮತ್ತು ಆತನ ತಾಯಿ ಸೇರಿ ಅಮಲಾ ಮೇಲೆ ಹಲ್ಲೆ ನಡೆಸಿದ್ದರು.ಹೀಗಾಗಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಅಮಲಾ ಈ ಸಂಬಂಧ ದೂರು ದಾಖಲಿಸಿದ್ದರು. ಆರೋಪಿ ಶ್ರೀನಿವಾಸನನ್ನು ಬಂಧಿಸಿ ಜೈಲಿಗಟ್ಟಿದ್ದರು. ಜೈಲು ಸೇರಿದರೂ ಬುದ್ಧಿ ಕಲಿಯದ ಶ್ರೀನಿವಾಸ, ಅಲ್ಲಿಂದಲೇ ಅಮಲಾಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ. ಹೀಗಾಗಿ ಸಂತ್ರಸ್ಥೆ ಮಹಿಳೆ ಶ್ರೀನಿವಾಸ್‌ ವಿರುದ್ಧ ಮತ್ತೊಂದು ದೂರು ದಾಖಲಿಸಿದ್ದಾರೆ.

ಆಕರ್ಷಣ್ ಇಂಡಸ್ಟ್ರಿಸ್ ನಿಂದ ಕೃಷಿಕರಿಗೆ ಆಕರ್ಷಕ ಆಫರ್

Posted by Vidyamaana on 2024-02-23 12:38:43 |

Share: | | | | |


ಆಕರ್ಷಣ್ ಇಂಡಸ್ಟ್ರಿಸ್ ನಿಂದ ಕೃಷಿಕರಿಗೆ ಆಕರ್ಷಕ ಆಫರ್

ಪುತ್ತೂರು : ಕಾಂಕ್ರೀಟ್ ಉತ್ಪನ್ನಗಳ ಉತ್ಪಾದನಾ ಕ್ಷೇತ್ರದಲ್ಲಿ, ಅದರಲ್ಲೂ ವಿಶೇಷವಾಗಿ ಕೃಷಿಕರಿಗೆ ಅತೀ ಅಗತ್ಯವಿರುವ ಉತ್ಪನಗಳ ತಯಾರಿಕೆಯಲ್ಲಿ ಕಳೆದ 28 ವರ್ಷಗಳಿಂದ ಉತ್ತಮ ಗುಣಮಟ್ಟದ ಉತ್ಪನ್ನಗಳು, ತಂತ್ರಜ್ಞಾನ ಹಾಗೂ ಸೇವೆಯ ಮೂಲಕ ತನ್ನದೇ ಆದ ಛಾಪನ್ನು ಒತ್ತಿ ಯಶಸ್ಸಿನ ಹೆಜ್ಜೆ ಇಡುತ್ತಿರುವ ಪುತ್ತೂರಿನ ಆಕರ್ಷಣ್‌ ಇಂಡಸ್ಟ್ರಿಸ್ ಈ ಬಾರಿ ಕೃಷಿಕರಿಗೆ ವಿಶೇಷ ಕೊಡುಗೆಯೊಂದನ್ನು ಘೋಷಿಸಿದೆ.


ಸಂಸ್ಥೆಯೂ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಪ್ರತಿ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಲಕ್ಕಿ ಕೂಪನ್‌ಗಳನ್ನು ನೀಡಿದೆ. ಕೃಷಿಕರು ಈ ಕೂಪನ್‌ಗಳನ್ನು ಪಡೆದುಕೊಂಡು, ಮಾಹಿತಿಗಳನ್ನು ತುಂಬಿಸಿ ಹಿಂದಿರುಗಿಸಲು ಇಂದಿನಿಂದ ಫೆ. 29ರ ವರೆಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಮಾ. 4ರಂದು ಕೂಪನ್‌ನ ಲಕ್ಕಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಕೂಪನ್ ವಿಜೇತರಾದ ಕೃಷಿ ಮಿತ್ರರಿಗೆ 5 ಚಿನ್ನ ಹಾಗೂ 25 ಬೆಳ್ಳಿಯ ನಾಣ್ಯ ಗೆಲ್ಲುವ ಸುವರ್ಣಾವಕಾಶವನ್ನು ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಸಂಸ್ಥೆಯು ಒದಗಿಸಿದೆ.


ಅಲ್ಲದೆ ಫೆ.21ರಿಂದ ಕೃಷಿಕರ ಅನುಕೂಲಕ್ಕಾಗಿ ವಿವಿಧ ಕೃಷಿ ಉಪಯೋಗಿ ಉತ್ಪನ್ನಗಳಾದ ಡ್ರಾಗನ್ ಫುಟ್ ಸ್ಟಾಂಡ್, ಬೇಲಿ ಕಂಬ, ವೈ ಪೋಲ್ ಅಲ್ಲದೆ ಕಾಳುಮೆಣಸು ಫಾರ್ಮ್‌ಗಳಲ್ಲಿ ಬಳಕೆಯಾಗುವ ವಿಯೆಟ್ನಾಮ್ ಮಾಡೆಲ್‌ನ ಕಾಂಕ್ರೀಟ್ ಪೋಲ್‌ಗಳನ್ನು ನಿಗದಿಪಡಿಸಿದ ಅವಧಿಯೊಳಗೆ, ನಿಗದಿತ ಸ್ಥಳಗಳಿಗೆ ಕೃಷಿಕರ ಮನೆ ಬಾಗಿಲಿಗೆ ಉಚಿತವಾಗಿ ಸಾಗಾಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಉಚಿತ ಡೆಲಿವರಿ ಕೆಲವು ದಿನಗಳವರೆಗೆ ಮಾತ್ರ ಇರಲಿದ್ದೂ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.

1996ರ ಅ.21 ರಂದು ಸಿಮೆಂಟ್ ಇಟ್ಟಿಗೆ ತಯಾರಿ ಹಾಗೂ ಮಾರಾಟದ ಮೂಲಕ ಉದ್ಯಮ ಜಗತ್ತಿಗೆ ಕಾಲಿಟ್ಟ ಸಂಸ್ಥೆಯು ಇದೀಗ ಹತ್ತು ಹಲವು ಉತ್ಪನ್ನಗಳ ಮೂಲಕ ಜಿಲ್ಲೆಯಾದ್ಯಂತ ಮನೆ ಮಾತಾಗಿದೆ. ಈ ಸಂಸ್ಥೆಯು ಹಲವು ಉತ್ಪನ್ನಗಳು ರಾಜ್ಯಾದ್ಯಂತ ಸರಬರಜಾಗುತ್ತಿದ್ದು, ಡೀಲರ್ ಗಳ ಮೆಚ್ಚಿನ ಸಂಸ್ಥೆಯಾಗಿಯೂ ಬೆಳೆದಿದೆ.

ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯಿಂದ 300 ಕೋಟಿ ವಿಸ್ತೃತ ಯೋಜನೆ ; ಸಾರ್ವಜನಿಕರಿಂದ ಐದು ಲಕ್ಷ ಷೇರು ಸಂಗ್ರಹ ಗುರಿ : ಕುಸುಮಾಧರ ಎಸ್.ಕೆ

Posted by Vidyamaana on 2024-03-21 18:26:21 |

Share: | | | | |


ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯಿಂದ 300 ಕೋಟಿ ವಿಸ್ತೃತ ಯೋಜನೆ ; ಸಾರ್ವಜನಿಕರಿಂದ ಐದು ಲಕ್ಷ ಷೇರು ಸಂಗ್ರಹ ಗುರಿ : ಕುಸುಮಾಧರ ಎಸ್.ಕೆ

ಮಂಗಳೂರು: ತೆಂಗು ಬೆಳೆಗಾರರೇ ಸ್ಥಾಪಿಸಿ ಮುನ್ನಡೆಸುತ್ತಿರುವ ದೇಶದ ಅತೀ ದೊಡ್ಡ ಸಂಸ್ಥೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯು ತನ್ನ ಕಾರ್ಯ ವ್ಯಾಪ್ತಿ ಹಾಗೂ ಮಾರುಕಟ್ಟೆ ವಿಸ್ತರಣೆ ಉದ್ದೇಶದಿಂದ ಸಾರ್ವಜನಿಕರಿಂದ ಷೇರು ಸಂಗ್ರಹಕ್ಕೆ ಮುಂದಾಗಿದೆ.

15 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ತೆಂಗು ಬೆಳೆಗಾರರ ಕಂಪನಿ ಎಂಬ ಹೆಗ್ಗಳಿಕೆ ಹೊಂದಿರುವ ಈ ಸಂಸ್ಥೆ 300 ಕೋಟಿ ರೂ. ಮೌಲ್ಯದ ವಿಸ್ತೃತ ಯೋಜನೆ ಕೈಗೆತ್ತಿಕೊಂಡಿದ್ದು, ಮೊದಲ ಹಂತದಲ್ಲಿ 50 ಕೋಟಿ ರೂ. ಷೇರು ಸಂಗ್ರಹಿಸುವ ಗುರಿ ಹೊಂದಿದೆ. ಪ್ರತಿ ಷೇರಿನ ಮೌಲ್ಯವು ಒಂದು ಸಾವಿರ ರೂ. ಇದ್ದು ಕನಿಷ್ಠ ಎಂದರೆ ಐದು ಷೇರು ಹಾಗೂ ಗರಿಷ್ಠ ಎಂದರೆ 200 ಷೇರು ಖರೀದಿಸಿ ಸಾರ್ವಜನಿಕರು ಹೂಡಿಕೆ ಮಾಡಬಹುದಾಗಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕುಸುಮಾಧರ ಎಸ್.ಕೆ. ತಿಳಿಸಿದ್ದಾರೆ.ಕಳೆದ ಜೂನ್ ತಿಂಗಳಲ್ಲಿ ಆರಂಭಿಸಿದ ಕಲ್ಪ ಸಮೃದ್ಧಿ ಯೋಜನೆಯಡಿ ಷೇರು ಸಂಗ್ರಹಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಸಂಗ್ರಹವಾದ ಠೇವಣಿಯ ಮೊತ್ತವನ್ನು ತೆಂಗು ಖರೀದಿ ಮತ್ತು ಇತರ ಚಟುವಟಿಕೆಗೆ ಬಳಸಲಾಗಿದೆ. ಈ ಮೂಲಕ ಆರು ತಿಂಗಳಲ್ಲಿ ಸಂಸ್ಥೆಯ ಒಟ್ಟು ವ್ಯವಹಾರವು ಹತ್ತು ಪಟ್ಟು ಹೆಚ್ಚಾಗಿದ್ದು, ಜನರ ವಿಶ್ವಾಸ ಗಳಿಸುತ್ತಿದೆ. ತೆಂಗಿನ ಕಾಯಿಯಿಂದ ತಯಾರಿಸಿದ ರಸಗೊಬ್ಬರ, ಸಾವಯವ ಗೊಬ್ಬರ ಮತ್ತು ಆಹಾರ ಉತ್ಪನ್ನಗಳ ಅನೇಕ ಪ್ರಯೋಗಗಳು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸಿದೆ. ಇದಕ್ಕೆ ತಕ್ಕಂತೆ ಮಾರುಕಟ್ಟೆಗೆ ಹೆಚ್ಚಿನ ಉತ್ಪನ್ನ ಪೂರೈಕೆಗಾಗಿ ಹೊಸ ವಿಸ್ತೃತ ಘಟಕ ಆರಂಭಿಸಲು ಬಂಡವಾಳವಾಗಿ ಷೇರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಪ್ರಥಮ ಹಂಚದ ಯೋಜನೆ ಪೂರ್ಣಗೊಂಡಾಗ 300 ಮಂದಿಗೆ ನೇರ ಮತ್ತು 600ಕ್ಕೂ ಅಧಿಕ ಮಂದಿಗೆ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ ಎಂದವರು ತಿಳಿಸಿದ್ದಾರೆ.ಆಸಕ್ತ ಹೂಡಿಕೆದಾರರು ನೇರವಾಗಿ ಶಾಖೆಗೆ ಭೇಟಿ ನೀಡಿ, ಖುದ್ದಾಗಿ ಖರೀದಿ ಮಾಡಬಹುದು. ಶಾಖೆಗೆ ಭೇಟಿ ನೀಡಲು ಸಾಧ್ಯವಿಲ್ಲದ ಗ್ರಾಹಕರು ಸಂಸ್ಥೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಖರೀದಿ ಮಾಡಬಹುದಾಗಿದೆ. ಡಿಜಿಟಲ್ ನಲ್ಲಿ ಖರೀದಿ ಮಾಡಲು ಸಾಧ್ಯವಾಗದ ಗ್ರಾಹಕರು ಸಂಸ್ಥೆಗೆ ದೂರವಾಣಿ ಕರೆ ಮಾಡಿ, ನೋಂದಣಿ ಮಾಡಬಹುದು. ಮೊದಲ ಹಂತದಲ್ಲಿ ಒಟ್ಟು 50 ಕೋಟಿ ರೂ. ಮೌಲ್ಯದ ಐದು ಲಕ್ಷ ಷೇರುಗಳನ್ನು ಮಾತ್ರ ಬಿಡುಗಡೆ ಮಾಡಲಾಗುವುದು. ಈಗಾಗಲೇ ಕಲ್ಪವೃಕ್ಷ ಹಾಗೂ ಕಲ್ಪವೃಕ್ಷ ಯೋಜನೆಯಡಿ ಸಂಸ್ಥೆಯ ಉತ್ಪನ್ನಗಳಾದ ಐಸ್ ಕ್ರೀಂ, ತೆಂಗಿನೆಣ್ಣೆ, ವರ್ಜಿನ್ ತೆಂಗಿನೆಣ್ಣೆ, ಕೋಕೊ ಫೈಬರ್, ಕೊಬ್ಬರಿ ಚಟ್ನಿ, ಕೊಬ್ಬರಿ, ಉಪ್ಪಿನಕಾಯಿ, ತೆಂಗಿನ ಮೊಳಕೆ, ತೆಂಗಿನ ನೀರಿನಿಂದ ತಯಾರಿಸುವ ಜೈವಿಕ ರಸಗೊಬ್ಬರ, ಗೆರೆಟೆಯಿಂದ ಅಲಂಕಾರಿಕ ಹಾಗೂ ಗೃಹ ಬಳಕೆಯ ಉತ್ಪನ್ನ, ಹೈನುಗಾರರಿಗೆ ತೆಂಗಿನ ಹಿಂಡಿ, ತೆಂಗಿನ ಮರದ ಪೀಠೋಪಕರಣ, ಜೈವಿಕ ಕೀಟನಾಶಕ, ಎರೆಹುಳ ಗೊಬ್ಬರ ಹೀಗೆ ಹಲವಾರು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಇದಲ್ಲದೆ, ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪೂರೈಸುವ ಉದ್ದೇಶದಿಂದ ಮೊಬೈಲ್ ಅಪ್ಲಿಕೇಶನ್ ಹಾಗೂ ವೆಬ್ ಆಧರಿತ ಇ-ಕಾಮರ್ಸ್ ಪ್ಲಾಟ್ ಫಾರಂ ಅಭಿವೃದ್ಧಿ ಪಡಿಸಲಾಗಿದೆ. ಶೀಘ್ರದಲ್ಲೇ ಸಾರ್ವಜನಿಕರ ಉಪಯೋಗಕ್ಕೆ ಲಭಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ ಸೈಟ್ www.coconutfarmers.in ಭೇಟಿ ನೀಡಬಹುದು. ಟೋಲ್ ಫ್ರೀ ಸಂಖ್ಯೆ 18002030129 ಗೆ ಕರೆ ಮಾಡಬಹುದು. ದೂರವಾಣಿ ಸಂಖ್ಯೆ 8105487763 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಸುದ್ದಿಗೋಷ್ಟಿಯಲ್ಲಿ ಚೇತನ್, ಗಿರಿಧರ್ ಸ್ಕಂದ, ಕುಮಾರ್ ಪೆರ್ನಾಜೆ, ಲತಾ ಇದ್ದರು.



Leave a Comment: