ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಸುದ್ದಿಗಳು News

Posted by vidyamaana on 2024-07-03 16:20:08 |

Share: | | | | |


ಮಂಗಳೂರಲ್ಲಿ ಮಣ್ಣು ಕುಸಿತ ಪ್ರಕರಣ : ಓರ್ವ ಕಾರ್ಮಿಕನ ರಕ್ಷಣೆ

ಮಂಗಳೂರು : ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಣ್ಣು ಕುಸಿತದಿಂದ ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿದ್ದರು. ಇದೀಗ ಮಣ್ಣಿನ ಅಡಿ ಸಿಲುಕಿದ್ದ ಕಾರ್ಮಿಕರ ಪೈಕಿ ಒಬ್ಬನನ್ನು ರಕ್ಷಣೆ ಮಾಡಲಾಗಿದೆ.ಹೌದು ಇಂದು ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು

ಈ ವೇಳೆ 20 ಅಡಿ ಅಡಿ ಆಳದಲ್ಲಿ ಇಬ್ಬರು ಕಾರ್ಮಿಕರು ಇದ್ದು ತಕ್ಷಣ ಮಣ್ಣು ಕುಸಿತವಾಗಿದೆ. ಇವಳೇ ಇಬ್ಬರು ಕಾರ್ಮಿಕರು ಮಣ್ಣಿನ ಆಡಿ ಸಿಕ್ಕಿದ್ದಾರೆ ತಕ್ಷಣ ಘಟನಾ ಸ್ಥಳಕ್ಕೆ ಎಸ್‌ಡಿಆರ್‌ಎಫ್ ತಂಡ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಒಬ್ಬನನ್ನು ರಕ್ಷಣೆ ಮಾಡಿದ್ದಾರೆ.

ಆದರೆ ಇನ್ನೊಬ್ಬ ಕಾರ್ಮಿಕನ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದ್ದು ಈ ವೇಳೆ ಮಳೆ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದೆ. ಜೋರಾದ ಮಳೆಯಿಂದ ಇದೀಗ ಕಾರ್ಯಾಚರಣೆಗೆ ತೊಂದರೆ ಉಂಟಾಗುತ್ತಿದೆ. ರಕ್ಷಿತ ಕಾರ್ಮಿಕನನ್ನು ತಕ್ಷಣ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಡನಾಸ್ ತಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮುಲ್ಲೈ ಮುಗಿಲನ್   ಹಾಗೂ ಇತರೆ ಅಧಿಕಾರಿಗಳು ಸ್ಥಳದಲ್ಲಿ ಇದ್ದಾರೆ.

 Share: | | | | |


ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಪ್ರಕರಣ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಮೃತ್ಯು

Posted by Vidyamaana on 2024-07-03 20:52:26 |

Share: | | | | |


ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಪ್ರಕರಣ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಚಂದನ್ ಕುಮಾರ್ ಮೃತ್ಯು

ಮಂಗಳೂರು : ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿ ಮಣ್ಣಿನಡಿ ಸಿಲುಕಿದ್ದ ಓರ್ವ ಕಾರ್ಮಿಕ ಮೃತಪಟ್ಟ ಘಟನೆ ನಗರದ ಬಲ್ಮಠ ಬಳಿ ಬುಧವಾರ ಸಂಭವಿಸಿದೆ.ಮೃತ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ (30) ಎಂದು ತಿಳಿದು ಬಂದಿದೆ.ಮಧ್ಯಾಹ್ನ ಕಟ್ಟಡದ ಕಾಮಗಾರಿ ನಡೆಯುತಿದ್ದ ವೇಳೆ ಭೂಕುಸಿತ ಸಂಭವಿಸಿ ಮಣ್ಣಿನಡಿ ಇಬ್ಬರು ಕಾರ್ಮಿಕರು ಸಿಲುಕಿದ್ದರು.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

Posted by Vidyamaana on 2024-06-20 22:16:01 |

Share: | | | | |


ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

ನವದೆಹಲಿ: ಅಬಕಾರಿ ನೀತಿ ಪರಿಷ್ಕರಣೆ ಅಕ್ರಮದಲ್ಲಿ ಜೈಲುಪಾಲಾಗಿರುವಂತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯ ರೋಸ್ ಅವನೆನ್ಯೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಅರವಿಂದ್ ಕೇಜ್ರಿವಾಲ್ ಗೆ ಬಿಗ್ ರಿಲೀಫ್ ನೀಡಿದೆ.

ಇಂದು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದಂತ ಅಬಕಾರಿ ನೀತಿ ಪರಿಷ್ಕರಣೆ ಅಕ್ರಮ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು.

ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಸಭೆ

Posted by Vidyamaana on 2023-05-25 10:08:00 |

Share: | | | | |


ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಸಭೆ

ಉಪ್ಪಿನಂಗಡಿ: ಕಾಲೇಜು ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ. ದಾಖಲಾತಿಗಳು ಆರಂಭಗೊಂಡಿವೆ. ದಾಖಲಾತಿಗಾಗಿ ಬರುವ ಯಾವುದೇ ಅರ್ಜಿಗಳನ್ನು ತಿರಸ್ಕರಿಸಬಾರದು ಎಂದು ಅಶೋಕ್ ಕುಮಾರ್ ರೈ ಸೂಚನೆ ನೀಡಿದರು.

ಗುಜರಾತ್‌ : ಆರ್ಥಿಕ ಸಮಸ್ಯೆ ಸಾಮೂಹಿಕ ಆತ್ಮಹತ್ಯೆ

Posted by Vidyamaana on 2023-10-28 20:16:31 |

Share: | | | | |


ಗುಜರಾತ್‌ : ಆರ್ಥಿಕ ಸಮಸ್ಯೆ ಸಾಮೂಹಿಕ ಆತ್ಮಹತ್ಯೆ

ಸೂರತ್, ಅ 28: ಮೂವರು‌ ‌ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಶವವಾಗಿ ಪತ್ತೆಯಾಗಿರುವ ಘಟನೆ ಗುಜರಾತ್‌ ನ ಸೂರತ್‌ನಲ್ಲಿ ಶನಿವಾರ ನಡೆದಿದೆ.


ಸೂರತ್‌ನ ಪಾಲನ್‌ಪುರ ಜಕತ್ನಾಕ್ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಹೇಳಿದ್ದಾರೆ.


6 ಮಂದಿ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದು, ಒಬ್ಬರು ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.


ಮನೀಶ್ ಸೋಲಂಕಿ, ಅವರ ಪತ್ನಿ ರೀಟಾ, ಅವರ ತಂದೆ ಕಾನು, ಅವರ ತಾಯಿ ಶೋಭಾ ಮತ್ತು ಮೂವರು ಮಕ್ಕಳಾದ ದಿಶಾ, ಕಾವ್ಯ ಮತ್ತು ಕುಶಾಲ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.


ಕುಟುಂಬವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿತ್ತು ಎಂದು ಬರೆದಿರುವ ಪತ್ರವನ್ನು ಪೊಲೀಸರು ಘಟಾನ ಸ್ಥಳದಿಂದ ವಶಕ್ಕೆ ಪಡೆದುಕೊಂಡಿದ್ದಾರೆ.


ಆರ್ಥಿಕ ಸಮಸ್ಯೆಯಿಂದಲೇ ಈ ಹೆಜ್ಜೆಯನ್ನಿಟ್ಟಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಹಿಂದಿನ ನಿಖರ ಕಾರಣ ತನಿಖೆ ಬಳಿಕವಷ್ಟೇ ತಿಳಿದು ಬರಬೇಕಿದೆ.


ಫರ್ನಿಚರ್‌ ವ್ಯವಹಾರವನ್ನು ಮಾಡುತ್ತಿದ್ದ ಮನೀಶ್ ಸೋಲಂಕಿ ಅವರಿಗೆ ಶನಿವಾರ ಮುಂಜಾನೆ ಕೆಲಸಗಾರರು ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸದಿದ್ದಾಗ ಮನೆಯ ಬಳಿಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.


ಮಧ್ಯರಾತ್ರಿಯೇ ಕುಟುಂಬದ ಎಲ್ಲರಿಗೂ ವಿಷ ನೀಡಿ ಮನೀಶ್ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ಬಳಿಕ ಅವರ ಸಾವಿನ ಸಮಯ ಹಾಗೂ ಕಾರಣಗಳು ಸ್ಪಷ್ಟವಾಗಲಿದೆ

ಲುಲು ಗ್ರೂಪ್ ಇಂಟರ್‌ನ್ಯಾಶನಲ್‌ನ ಅಧ್ಯಕ್ಷ ಖ್ಯಾತ ಅನಿವಾಸಿ ಉದ್ಯಮಿ ಯೂಸುಫ್ ಅಲಿಗೆ ED ಸಮನ್ಸ್

Posted by Vidyamaana on 2023-03-14 08:29:22 |

Share: | | | | |


ಲುಲು ಗ್ರೂಪ್ ಇಂಟರ್‌ನ್ಯಾಶನಲ್‌ನ ಅಧ್ಯಕ್ಷ ಖ್ಯಾತ ಅನಿವಾಸಿ ಉದ್ಯಮಿ ಯೂಸುಫ್ ಅಲಿಗೆ ED ಸಮನ್ಸ್

ನವದೆಹಲಿ: ಲುಲು ಮಾಲ್ ಗುಂಪುಗಳ ಒಡೆಯ, ಯುಎಇ ನೆಲೆಯ ಉದ್ಯಮಿ ಎಂ. ಎ. ಯೂಸುಫ್ ಅಲಿ ಅವರಿಗೆ ಜಾರಿ ನಿರ್ದೇಶನಾಲಯ-ಇಡಿ ಅಕ್ರಮ ಹಣ ವರ್ಗಾವಣೆ ಸಂಬಂಧ ಸಮನ್ಸ್ ಜಾರಿ ಮಾಡಿದೆ.

ರೂ. 300 ಕೋಟಿಗಳಷ್ಟು ಹಣ ವರ್ಗಾವಣೆ ಮಾಡಿರುವುದಾಗಿ ಇ.ಡಿ. ಆರೋಪಿಸಿದೆ. ಯುನೈಟೆಡ್ ಅರಬ್’ನಲ್ಲಿದ್ದುಕೊಂಡು ಖಾಸಗಿ ಸಂಸ್ಥೆಗಳ ಮೂಲಕ ಕೇರಳ ಸರಕಾರದೊಂದಿಗೆ ಜಂಟಿ ಯೋಜನೆಯಾಗಿ ಲೈಫ್ ಮಿಶನ್ ಎಂಬ ಜನ ಮನೆ ನಿರ್ಮಾಣದಲ್ಲಿ ಅಲಿ ಅಕ್ರಮ ಎಸಗಿದ್ದಾರೆ ಎಂದು ಇ.ಡಿ.ಹೇಳಿದೆ.

ಮಾರ್ಚ್ 1ರಂದು ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಕೊಚ್ಚಿ ಕಚೇರಿಯು ಯೂಸುಫ್ ಅಲಿಯವರಿಗೆ ಹಿಂದೆ ನೋಟಿಸ್ ನೀಡಿತ್ತು. ಯುಎಇಯಲ್ಲಿರುವ ಅಲಿಯವರಿಗೆ ಬರಲಾಗಿಲ್ಲ. ಮಾರ್ಚ್ 16ರಂದು ಕೊಚ್ಚಿ ಇಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಅಕ್ರಮ ಹಣ ವರ್ಗಾವಣೆ ತಡೆ ಏಜೆನ್ಸಿಯು ಆಲಿಯವರಿಗೆ ಸಮನ್ಸ್ ನೀಡಿದೆ. ಚಿನ್ನದ ಅಕ್ರಮ ಸಾಗಣೆ ಸಂಬಂಧ ಬಂಧಿಸಲಾಗಿರುವ ತಿರುವನಂತಪುರದ ಯುಎಇ ರಾಯಭಾರಿ ಕಚೇರಿಯ ಹಿಂದಿನ ಉದ್ಯೋಗಿ ಸ್ವಪ್ನ ಸುರೇಶ್ ಪ್ರಕರಣದಲ್ಲಿ ಇತ್ತೀಚೆಗೆ ಅಲಿ ಹೆಸರು ಕೇಳಿ ಬಂದಿತ್ತು. ಹಿಂದೆ ಈಗಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮುಖ್ಯ ಕಾರ್ಯದರ್ಶಿಯಾಗಿದ್ದ ಐಎಎಸ್ ಅಧಿಕಾರಿ ಶಿವಶಂಕರನ್ ಕೂಡ ಈ ಚಿನ್ನದ ಕಳ್ಳ ಸಾಗಣೆ ವ್ಯವಹಾರದಲ್ಲಿ ಹುದ್ದೆ ದುರುಪಯೋಗಿಸಿಕೊಂಡುದಕ್ಕಾಗಿ ಬಂಧಿಸಲ್ಪಟ್ಟಿದ್ದಾರೆ.

ಶಿವಶಂಕರನ್ ಅವರು ಮನೆ ನಿರ್ಮಾಣದ ಕೇರಳದ ಲೈಫ್ ಮಿಶನ್ ಕಾರ್ಯಕ್ರಮದಲ್ಲಿ ಅಕ್ರಮ ಎಸಗಿರುವುದು ಸಹ ತಿಳಿದು ಬಂದಿದೆ. ಈ ವಿವಾದದ ಮನೆ ಯೋಜನೆಯನ್ನು ಖಾಸಗಿಯವರ ಪಾಲುದಾರಿಕೆಯಲ್ಲಿ ಮಾಡಲಾಗಿದೆ. ಈ ಖಾಸಗಿ ಪಾಲುದಾರ ಕಂಪೆನಿಗಳು ಯುಎಇ ಮೂಲದವಾಗಿದ್ದು, ಅವುಗಳಲ್ಲಿ ಕೆಲವು ಯೂಸುಫ್ ಅಲಿ ಒಡೆತನದವು ಎಂದು ಹೇಳಲಾಗಿದೆ. ಈ ಲೈಫ್ ಮಿಶನ್ ಯೋಜನೆಯಡಿ ಯೂಸುಫ್ ಅಲಿ 300 ಕೋಟಿ ರೂಪಾಯಿ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎನ್ನುವುದು ಇಡಿ ಆರೋಪ.

ಕಳೆದ 30 ವರ್ಷಗಳಿಂದ ಯುಎಇಯಲ್ಲಿ ಉದ್ಯಮಿಯಾಗಿರುವ ಕೇರಳ ಮೂಲದ ಯೂಸುಫ್ ಅಲಿಯವರು ಲುಲು ಮಾಲ್’ಗಳ ಸರಣಿಗಳನ್ನು ಸಾಕಷ್ಟು ಹೊಂದಿದ್ದಾರೆ. ಕೇರಳದ ಕಾಂಗ್ರೆಸ್ ಮತ್ತು ಸಿಪಿಎಂ ನಾಯಕರೊಂದಿಗೆ ಅಲಿಯವರಿಗೆ ಉತ್ತಮ ಸಂಬಂಧವಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಲಿಯವರು ಕಾಂಗ್ರೆಸ್, ಎಡ ಪಕ್ಷಗಳ ಜೊತೆಗಿರುವಂತೆಯೇ ಬಿಜೆಪಿ ನಾಯಕರ ಸಂಗಡವೂ ಸಂಬಂಧ ಕುದುರಿಸಿಕೊಂಡಿದ್ದಾರೆ.

ಯೂಸುಫ್ ಅಲಿಯವರ ಕಂಪೆನಿಗಳು 94% ಷೇರುಗಳು ಕೇಮನ್ ದ್ವೀಪದ ಸಂಸ್ಥೆಗಳೊಡನೆ ಸಂಬಂಧ ಹೊಂದಿದೆ. ಉಳಿಕೆ 6% ಷೇರುಗಳು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಿರಿಯ ಮಗ ವಿವೇಕ್ ದೋವಲ್ ಹೆಸರಿನಲ್ಲಿವೆ. 2018ರಲ್ಲಿ ಯೂಸುಫ್ ಅಲಿಯವರು ತನ್ನ ಯುಎಇ ಮನೆಯಲ್ಲಿ ರಾಹುಲ್ ಗಾಂಧಿಯವರಿಗೆ ಆತಿಥ್ಯ ನೀಡಿದ್ದರು.

ದೀಪಾವಳಿಗೆ ಮೈಸೂರು – ಮಂಗಳೂರು ನಡುವೆ ಓಡಲಿದೆ ವಿಶೇಷ ರೈಲು

Posted by Vidyamaana on 2023-11-10 07:26:53 |

Share: | | | | |


ದೀಪಾವಳಿಗೆ ಮೈಸೂರು – ಮಂಗಳೂರು ನಡುವೆ ಓಡಲಿದೆ ವಿಶೇಷ ರೈಲು

ಮಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿದೆ ಊರಿಗೆ ಬರಲು ಬಸ್ಸು, ರೈಲುಗಳಲ್ಲಿ ಟಿಕೆಟು ಸಿಗುತ್ತಿಲ್ಲ ಎಂದು ಟೆನ್ಷನ್ ಮಾಡುತ್ತಿರುವವರಿಗೆ ರೈಲ್ವೇ ಇಲಾಖೆ ಒಂದು ಗುಡ್ ನ್ಯೂಸ್ ನೀಡಿದೆ. ಹಬ್ಬದ ಪ್ರಯುಕ್ತ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿಗೆ ವಿಶೇಷ ರೈಲೊಂದನ್ನು ಇಲಾಖೆ ಬಿಟ್ಟಿದ್ದು ಅದರ ವೇಳಾಪಟ್ಟಿ ಇಂತಿದೆ.


ಬೆಳಕಿನ ಹಬ್ಬದ ಈ ವಿಶೇಷ ರೈಲು ಓಡಾಟದ ವೇಳಾಪಟ್ಟಿ ಇಂತಿದೆ.

ದಿನಾಂಕ 10/11/2023 ಶುಕ್ರವಾರ ರೈಲು ಸಂಖ್ಯೆ 07303 ಮೈಸೂರು ಜಂಕ್ಷನ್-ಮಂಗಳೂರು ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ರೈಲು ಮೈಸೂರಿನಿಂದ ರಾತ್ರಿ 8:30ಕ್ಕೆ ಹೊರಟು ರಾತ್ರಿ 11:25ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ ರಾತ್ರಿ 11:30ಕ್ಕೆ ಹೊರಟು ಮರುದಿನ ಅಂದರೆ ದಿನಾಂಕ 11/11/2023 ಶನಿವಾರದಂದು ಬೆಳಗ್ಗೆ 9:40ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.


ದಿನಾಂಕ 14/11/2023 ಬುಧವಾರ ರೈಲು ಸಂಖ್ಯೆ 07304 ಮಂಗಳೂರು ಜಂಕ್ಷನ್-ಮೈಸೂರು ಜಂಕ್ಷನ್ ವಿಶೇಷ ಎಕ್ಸ್ಪ್ರೆಸ್ ರೈಲು ಮಂಗಳೂರು ಜಂಕ್ಷನ್ನಿಂದ ಸಂಜೆ 5:15ಕ್ಕೆ ಹೊರಟು ಮರುದಿನ ಬೆಳಗ್ಗೆ 3:45ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ ಬೆಳಗ್ಗೆ 3:50ಕ್ಕೆ ಹೊರಡುವ ರೈಲು ಬೆಳಗ್ಗೆ 7:30ಕ್ಕೆ ಹುಬ್ಬಳ್ಳಿ ತಲುಪಲಿದೆ. 


ಈ ರೈಲಿಗೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯರೋಡ್, ಸಕಲೇಶಪುರ, ಹಾಸನ ಜಂಕ್ಷನ್, ಚನ್ನರಾಯಪಟ್ಟಣ, ಶ್ರವಣಬೆಳಗೊಳ, ಕುಣಿಗಲ್, ನೆಲಮಂಗಲ, ಯಶವಂತಪುರ, ಬೆಂಗಳೂರು, ಕೆಂಗೇರಿ, ಮಂಡ್ಯ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ.


ಈ ರೈಲಿನಲ್ಲಿ ಜನರಲ್, ಸ್ಲೀಪರ್ ಕ್ಲಾಸ್, 3 ಟೈರ್ ಎಸಿ, 2 ಟೈರ್ ಎಸಿ ಹಾಗೂ ಪ್ರಥಮ ದರ್ಜೆಯ ಕ್ಯಾಬಿನ್ ಕೋಚ್ಗಳು ಇರಲಿದೆ. ತಮ್ಮ ಕುಟುಂಬ ಸದಸ್ಯರೊಂದಿಗೆ ಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳಲು ಬಯಸುವವರು ಈ ವಿಶೇಷ ರೈಲಿನ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿರುತ್ತದೆ.



Leave a Comment: