ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ಜೂ 12 ರಂದು ನಡೆಯಬೇಕಿದ್ದ ಪುತ್ತೂರು-ವಿಟ್ಲ ಪಾದಯಾತ್ರೆ ಮುಂದೂಡಿಕೆ-ಅರುಣ್ ಕುಮಾರ್

Posted by Vidyamaana on 2023-06-11 08:11:41 |

Share: | | | | |


ಜೂ 12 ರಂದು ನಡೆಯಬೇಕಿದ್ದ ಪುತ್ತೂರು-ವಿಟ್ಲ ಪಾದಯಾತ್ರೆ ಮುಂದೂಡಿಕೆ-ಅರುಣ್ ಕುಮಾರ್

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದವರೆಗೆ ಜೂ12 ರಂದು ನಡೆಯಬೇಕಿದ್ದ ಪಾದಯಾತ್ರೆಯನ್ನು ಕಾರಣಾಂತರಗಳಿಂದ ಮುಂದೂಡಿರುವುದಾಗಿ ಪುತ್ತಿಲ ಪರಿವಾರದ ನಾಯಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ. ಪಾದಯಾತ್ರೆಯ ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.

ಮಾತು ಉಳಿಸಿಕೊಂಡ ಕಾಂಗ್ರೆಸ್ ಸರ್ಕಾರ – ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ

Posted by Vidyamaana on 2023-06-02 10:38:16 |

Share: | | | | |


ಮಾತು ಉಳಿಸಿಕೊಂಡ ಕಾಂಗ್ರೆಸ್ ಸರ್ಕಾರ – ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ

ಬೆಂಗಳೂರು- ಐದು  ಗ್ಯಾರೆಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು

ಗೃಹಜ್ಯೋತಿ ಯೋಜನೆ ಅಡಿ 200 ಯುನಿಟ್​ ವಿದ್ಯುತ್​ ಉಚಿತವಾಗಿ ನೀಡಲಾಗುವುದು. ಯಾರು 200 ಯುನಿಟ್​ ಒಳಗಡೆ ವಿದ್ಯುತ್​ ಬಳಸುತ್ತಾರೆ ಅವರು ಬಿಲ್​ ಕಟ್ಟಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಂತೆ ಪ್ರತಿ ತಿಂಗಳು ಮನೆಯ ಒಡತಿಗೆ 2 ಸಾವಿರ ರೂಪಾಯಿ ವಿಚಾರವಾಗಿ ಮಾತನಾಡಿ ಮನೆ ಯಜಮಾನಿಯ ಅಕೌಂಟ್​​ಗೆ ತಿಂಗಳಿಗೆ 2000 ಸಾವಿರ ರೂ. ಹಾಕುತ್ತವೇ. ಹೀಗಾಗಿ ಅವರು ಅರ್ಜಿ ಸಲ್ಲಿಸಬೇಕು. ಜೂನ್​ 15 ರಿಂದ ಜುಲೈ 15 ವರೆಗೆ ಅರ್ಜಿ ಸಲ್ಲಿಸಲು ಸಮಯವಾಕಶ ನೀಡಲಾಗುವುದು. ಮನೆ ಯಜಮಾನಿ ಕಡ್ಡಾಯವಾಗಿ ಆದಾರ್​ ಕಾರ್ಡ್​​, ಬ್ಯಾಂಕ್​ ಅಕೌಂಟ್​ ಪಾಸ್​ಬುಕ್​ ಜರಾಕ್ಸ್​ ನೀಡಬೇಕು. ಎಪಿಎಲ್​ ಮತ್ತು ಬಿಪಿಎಲ್​​ ಕಾರ್ಡ್​ದಾರರಿಗೂ ಕೂಡ ಈ ಯೋಜನೆ ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ಧಾರೆ.

ಜುಲೈ 1 ರಿಂದ ಬಿಪಿಎಲ್​ ಮತ್ತು ಅಂತ್ಯೋದಯ ಕಾರ್ಡ್​ದಾರರಿಗೆ ‘ಅನ್ನಭಾಗ್ಯ’ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಸುದೀರ್ಘ ಸಮಾಲೋಚನೆ ಮಾಡಿದ್ದೇವೆ. ಜಾತಿಧರ್ಮ ಭೇದವಿಲ್ಲದೆ ಕೊಡ್ತೀವಿ. ಈ ಆರ್ಥಿಕ ವರ್ಷದಲ್ಲೇ ಕೊಡ್ತೀವಿ. ಕೆಲ ತಾಂತ್ರಿಕ ಸಮಸ್ಯೆ ಇರುವುದರಿಂದ ಅರ್ಜಿ ಆಹ್ವಾನಿಸಿ ಪ್ರಕ್ರಿಯೆಗಳನ್ನು ನಡೆಸುತ್ತೇವೆ  ಮುಖ್ಯ ಮಂತ್ರಿಗಳು ವಿವರಣೆ ನೀಡಿದರು.


1. ಗೃಹಜ್ಯೋತಿ - 200 ಯುನಿಟ್ ವರೆಗೆ ಉಚಿತ ವಿದ್ಯುತ್.

ಯಾರು ಎಷ್ಟು ವಿದ್ಯುತ್ ಬಳಸ್ತಾರೆ ಎಂಬುದನ್ನು 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧರಿಸಿ, ಅದರ ಮೇಲೆ ಶೇ.10 ರಷ್ಟರವರೆಗಿನ ವಿದ್ಯುತ್ ಉಚಿತ. ಜು.1 ರಿಂದ ಆಗಸ್ಟ್ ಗರೆಗಿನ ಖರ್ಚಿಗೆ ಇದು ಲೆಕ್ಕ. ಜುಲೈನಿಂದ ಮಾಡಿರುವ ಖರ್ಚಿನ ಬಿಲ್ ಆಗಸ್ಟ್ ನಲ್ಲಿ ಬರಲಿದೆ. ಜುಲೈವರೆಗಿನ ಬಾಕಿ ಉಳಿಸಿಕೊಂಡವರಿಗೆ ಸಮಯ ಕೊಡುತ್ತೇವೆ ಅವರೇ ಕಟ್ಟಬೇಕು. ಸರ್ಕಾರ ಕಟ್ಟಲ್ಲ.

2. ಗೃಹಲಕ್ಷ್ಮೀ -

ಬ್ಯಾಂಕ್ ಖಾತೆ, ಆಧಾರ್ ವಿಲೀನ ಪ್ರಕ್ರಿಯೆ ಆಗಬೇಕಿದೆ. ಸಾಫ್ಟ್ವೇರ್ ಅಭಿವೃದ್ಧಿಪಡಿಸಬೇಕಿದೆ. ಮನೆಯ ಒಡತಿ ಖಾತೆಗೆ ಮಾಸಿಕ 2 ಸಾವಿರ ರೂ. ಜಮೆ. ಜೂ.15 ರಿಂದ ಜು.15 ರೊಳಗೆ ಆನ್ ಲೈನ್ ಅಲ್ಲಿ ಅರ್ಜಿ ಹಾಕಬೇಕು. ಬಿಪಿಎಲ್, ಎಪಿಎಲ್ ಎಲ್ಲರೂ ಅರ್ಜಿ ಹಾಕಬಹುದು. 18 ವರ್ಷ ತುಂಬಿದವರು. ಜು.15 ರಿಂದ ಆ.15 ರವರೆಗೆ ಪ್ರಕ್ರಿಯೆ ನಡೆಸಿ, ಆ.15 ರಿಂದ ಜಾರಿಗೆ ಬರಲಿದೆ. ಇದಕ್ಕೆ ಬೇರಾವುದೇ ಷರತ್ತುಗಳಿಲ್ಲ. ಸಾಮಾಜಿಕ ಭದ್ರತಾ ಸೇವೆಗಳಡಿ ಪಿಂಚಣಿಯ ಜೊತೆಗೆ ಇದೂ ಸಿಗಲಿದೆ. ಸರ್ಕಾರದ ನಿವೃತ್ತ ನೌಕರರ ಪಿಂಚಣಿ ಪಡೆಯುತ್ತಿರುವವರಿಗೆ ಇಲ್ಲ.

3. ಅನ್ನಭಾಗ್ಯ-

ನಾವು 7 ಕೆ.ಜಿ. ಕೊಡುತ್ತಿದ್ದೆವು. ಈ 5 ಕೆ.ಜಿ.ಗೆ ಇಳಿಸಿದ್ದಾರೆ. 10 ಕೆ.ಜಿ. ಆಹಾರಧಾನ್ಯ ಕೊಡುವುದಾಗಿ ನಾವೀಗ ಹೇಳಿದ್ದೆವು. ಈಗಾಗಲೇ ಆಹಾರಧಾನ್ಯ ಸರಬರಾಜಾಗಿದ್ದು, ದಾಸ್ತಾನು ಇಲ್ಲ. ಹೀಗಾಗಿ ಜು.1 ರಿಂದ ಬಿಪಿಎಲ್ + ಅಂತ್ಯೋದಯ ಅನ್ನ ಕಾರ್ಡುದಾರರಿಗೆ ತಲಾ 10 ಕೆ.ಜಿ. ಅಕ್ಕಿ. ನ್ಯಾಫೆಡ್, ಕೇಂದ್ರ, ಎನ್ ಸಿಸಿ ಎಫ್ ಎಲ್ಲಿಂದಲಾದರೂ ಸರಿ ತಂದು ಕೊಡುತ್ತೇವೆ.

4. ಶಕ್ತಿ

- ಸಮಾಜದಲ್ಲಿ ಶೇ.50 ರಷ್ಟು ಮಹಿಳೆಯರಿದ್ದಾರೆ. ಸ್ಥಾನಮಾನ ಪರಿಗಣಿಸದೆ ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂ.11 ರಿಂದ ರಾಜ್ಯದೊಳಗೆ ಸರ್ಕಾರದ ಸಾಮಾನ್ಯ ಬಸ್, ಎಕ್ಸ್ ಪ್ರೆಸ್,  (ಎಸಿ, ನಾನ್ ಎಸಿ ಸ್ಲೀಪರ್, ಲಕ್ಸ್ಯುರಿ, ರಾಜಹಂಸ ಬಸ್ ಬಿಟ್ಟು) ಉಚಿತ ಪ್ರಯಾಣ. ಕೆಎಸ್ಆರ್ಟಿಸಿಯಲ್ಲಿ ಶೇ.50 ರಷ್ಟು ಆಸನ ಮೀಸಲು. ಹೆಣ್ಣು ಮಕ್ಕಳಿಲ್ಲದಿದ್ದರೆ, ಗಂಡಸರು ಕುಳಿತು ಹೋಗಬಹುದು.

5. ಯುವನಿಧಿ -

2022-23 ರಲ್ಲಿ ತೇರ್ಗಡೆ ಹೊಂದಿದ ವೃತ್ತಿಶಿಕ್ಷಣವೂ ಸೇರಿ ಎಲ್ಲ ಪದವೀಧರರು ನೋಂದಣಿ ಮಾಡಿಕೊಂಡ ದಿನದಿಂದ 24 ತಿಂಗಳ(2 ವರ್ಷ)ವರೆಗೆ ಪ್ರತಿ ತಿಂಗಳು 3 ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ 1,500 ರೂಪಾಯಿ. ಅಷ್ಟರೊಳಗೆ ಉದ್ಯೋಗ ಪಡೆದವರು ಘೋಷಿಸಿಕೊಳ್ಳಬೇಕು. ಯುವಕ, ಯುವತಿ + ತೃತೀಯಲಿಂಗಿಗಳಿಗೂ ಅನ್ವಯ. ಇದಕ್ಕೆ ಅರ್ಜಿ ಹಾಕಬೇಕು.

ಕೈದಿಗಳಿಗೆ ಸಿಹಿ ಸುದ್ದಿ : ಸನ್ನಡತೆ ಆಧಾರದಲ್ಲಿ 67 ಕೈದಿಗಳ ಬಿಡುಗಡೆ : ಸಂಪುಟ ಸಭೆಯಲ್ಲಿ ಒಪ್ಪಿಗೆ

Posted by Vidyamaana on 2023-07-27 15:43:28 |

Share: | | | | |


ಕೈದಿಗಳಿಗೆ ಸಿಹಿ ಸುದ್ದಿ : ಸನ್ನಡತೆ ಆಧಾರದಲ್ಲಿ 67 ಕೈದಿಗಳ ಬಿಡುಗಡೆ : ಸಂಪುಟ ಸಭೆಯಲ್ಲಿ ಒಪ್ಪಿಗೆ

ಬೆಂಗಳೂರು : ಸನ್ನಡತೆ ಆಧಾರದ ಮೇಲೆ ವಿವಿಧ ಕಾರಾಗೃಹದಲ್ಲಿರುವ ಸುಮಾರು 67 ಕೈದಿಗಳನ್ನು ಬಿಡುಗಡೆ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.ಬೆಂಗಳೂರು ಕೇಂದ್ರ ಕಾರಾಗೃಹದ 24 ಕೈದಿಗಳು, ಮೈಸೂರಿನ 8, ಬೆಳಗಾವಿ 2, ಕಲಬುರ್ಗಿ 5 ಶಿವಮೊಗ್ಗ 6 ಬಳ್ಳಾರಿ ಜೈಲಿನ 8 ಕೈದಿಗಳು ಹಾಗೂ ಧಾರವಾಡ ಜಿಲ್ಲಾ ಕಾರಾಗ್ರಹದ ಇಬ್ಬರು ಕೈದಿಗಳ ಬಿಡುಗಡೆ ಸಂಪುಟ ಸಭೆ ತೀರ್ಮಾನಿಸಿದೆ.ಅಲ್ಲದೆ ಸಚಿವ ಸಂಪುಟ ಸಭೆಯಲ್ಲಿ 15 ಪ್ರಮುಖ ವಿಷಯಗಳು ಬಗ್ಗೆ ಚರ್ಚೆ ಮಾಡಲಾಗಿದೆ

ಅನೈತಿಕ ಸಂಬಂಧದ ಶಂಕೆ; ಮಾರಕಾಸ್ತ್ರಗಳಿಂದ ಕೊಚ್ಚಿ ಜೋಡಿ ಕೊಲೆ

Posted by Vidyamaana on 2024-03-19 20:24:07 |

Share: | | | | |


ಅನೈತಿಕ ಸಂಬಂಧದ ಶಂಕೆ; ಮಾರಕಾಸ್ತ್ರಗಳಿಂದ ಕೊಚ್ಚಿ ಜೋಡಿ ಕೊಲೆ

ವಿಜಯಪುರ, ಮಾ.19: ಜಿಲ್ಲೆಯ ನಿಡಗುಂದಿ(Nidagundi) ತಾಲೂಕಿನ ಗಣಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಓರ್ವ ಮಹಿಳೆ ಮತ್ತು ಪುರಷನನ್ನ ಕೊಲೆ ಮಾಡಲಾಗಿದ್ದು, ಮೃತರನ್ನ ಗ್ರಾಮದ ಸೋಮಲಿಂಗಪ್ಪ ಕುಂಬಾರ ಹಾಗೂ ಪಾರ್ವತಿ ತಳವಾರ ಎಂದು ಗುರುತಿಸಲಾಗಿದೆ. ಇನ್ನು ಸುದ್ದಿ ತಿಳಿದು ನಿಡಗುಂದಿ ಸಿಪಿಐ ಶರಣ ಗೌಡರ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.ಕೆಲ ಗ್ರಾಮಸ್ಥರು ನೀಡಿದ ಮಾಹಿತಿ ಪ್ರಕಾರ ಮೃತ ಪಾರ್ವತಿ ತಳವಾರ ಹಾಗೂ ಸೋಮಲಿಂಗಪ್ಪ ಪೂಜಾರ ಮಧ್ಯೆ ಕೆಳೆದ ಕೆಲ ವರ್ಷಗಳಿಂದಲೂ ಅಕ್ರಮ ಸಂಬಂಧವಿತ್ತಂತೆ. 13 ವರ್ಷಗಳ ಹಿಂದೆ ಬಸವನಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದ ಬೋರಮ್ಮ ಜೊತೆಗೆ ಸೋಮಲಿಂಗಪ್ಪ ಮದುವೆಯಾಗಿದ್ದ. ಜೊತೆಗೆ ಇವರಿಗೆ 9 ವರ್ಷದ ಮಗನಿದ್ದಾನೆ. ಇತ ಗಣಿ ಗ್ರಾಮದ ತನ್ನ ಮನೆಯ ಬಳಿ ಹಿಟ್ಟಿನ ಗಿರಣಿ ನಡೆಸುತ್ತಿದ್ದ. ಇತ್ತ ಪಾರ್ವತಿಗೆ, ಭೀಮಪ್ಪ ತಳವಾರ ಜೊತೆಗೆ 22 ವರ್ಷಗಳ ಹಿಂದೆ ಮದುವೆಯಾಗಿತ್ತು. ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಮಗಳಿದ್ದಾಳೆ. ಇಷ್ಟೆಲ್ಲ ಇದ್ದರೂ ಪಾರ್ವತಿ ಹಾಗೂ ಸೋಮಲಿಂಗಪ್ಪ ಮಧ್ಯೆ ಅಕ್ರಮ ಸಂಬಂಧ ಶುರುವಾಗಿದೆ.ಒಬ್ಬರ ಮನೆಗೆ ಒಬ್ಬರು ಬಂದು ಹೋಗುವುದನ್ನು ಮಾಡುತ್ತಿದ್ದರಂತೆ. ನಿನ್ನೆ(ಮಾ.18) ಸೋಮಲಿಂಪ್ಪ, ಕಿಡ್ನಿ ಸ್ಟೋನ್​ ಹಿನ್ನಲೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಪಾರ್ವತಿಯನ್ನು ಕರೆದುಕೊಂಡು ಹೋಗಿದ್ದನಂತೆ. ಆದರೆ, ಸಾಯಂಕಾಲ ಮನೆಗೆ ವಾಪಸ್ ಬಂದಿಲ್ಲ. ಇಂದು(ಮಾ.19) ಬೆಳಿಗ್ಗೆ ಗ್ರಾಮದ ಜನರು ಪಾರ್ವತಿ ಹಾಗೂ ಸೋಮಲಿಂಗಪ್ಪನನ್ನ ಕೊಲೆಯಾದ ಸ್ಥಿತಿಯಲ್ಲಿ ಕಂಡು ಮನೆಯವರಿಗೆ ತಿಳಿಸಿದ್ದಾರೆ. ಆಗಲೇ ಮನೆಯವರಿಗೆ ವಿಚಾರ ಗೊತ್ತಾಗಿದೆಯಂತೆ. ಆದರೆ, ಯಾರು ಕೊಲೆ ಮಾಡಿದರು? ಎಂಬುದು ಗೊತ್ತಿಲ್ಲ ಎಂದಿದ್ದಾರೆ. ಜೊತೆಗೆ ಪಾರ್ವತಿ ಹಾಗೂ ಸೋಮಲಿಂಗಪ್ಪನ ಮಧ್ಯದ ಅಕ್ರಮ ಸಂಬಂಧವೂ ಗೊತ್ತಿಲ್ಲವಂತೆ. ಜೊತೆಗೆ ಯಾರ ಮೇಲೂ ಸಂಶಯವಿಲ್ಲ ಎಂದು ಕೊಲೆಯಾದ ಸೋಮಲಿಂಗಪ್ಪನ ಪತ್ನಿ ಬೋರಮ್ಮ, ಸಹೋದರಿ ಹಾಗೂ ಸಂಬಂಧಿಕರು ಹೇಳಿದ್ದಾರೆ.ಇನ್ನು ಇತ್ತ ಮೃತ ಪಾರ್ವತಿ ಕುಟುಂಬದವರು, ನಿನ್ನೆ ಸೋಮಲಿಂಗಪ್ಪ ಹಾಗೂ ಪಾರ್ವತಿ, ಅನತಿ ದೂರದಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಬಂದಿದ್ದೇವೆ. ನಮ್ಮನ್ನು ಕರೆದುಕೊಂಡು ಹೋಗಲು ಬಾ ಎಂದು ಪಾರ್ವತಿ ತನ್ನ ಪುತ್ರ ಲಕ್ಷ್ಮಣನಿಗೆ ಕರೆ ಮಾಡಿದ್ದಾಳೆ. ಇವರನ್ನು ಕರೆಯಲು ಪಾರ್ವತಿಯ ಮಗಾ ಲಕ್ಷ್ಮಣ ತಳವಾರ ಹೋಗಿದ್ದಾನೆ. ಆದರೆ, ತಡರಾತ್ರಿ ಕಳೆದರೂ ಯಾರೂ ಮನೆಗೆ ಬಂದಿಲ್ಲ. ಪಾರ್ವತಿ ಮನೆಯವರು ಆಕೆಗೆ ಕರೆ ಮಾಡಿದರೂ ಸ್ವೀಕಾರ ಮಾಡಿಲ್ಲ. ಲಕ್ಷ್ಮಣನ ಮೊಬೈಲ್ ಕೂಡ ಸಹ ಸ್ವಿಚ್ ಆಫ್ ಆಗಿದೆ. ಆದರೆ, ಬೆಳಿಗ್ಗೆ ಗ್ರಾಮದ ಜನರು ಪಾರ್ವತಿ ಹಾಗೂ ಸೋಮಲಿಂಪ್ಪನ ಶವ ಕೊಲೆಯಾದ ಸ್ಥಿತಿಯಲ್ಲಿ ಬಿದ್ದಿವೆ ಎಂದಾಗಲೇ ವಿಚಾರ ತಿಳಿದಿದೆ. ಇಬ್ಬರನ್ನು ಕರೆದುಕೊಂಡು ಬರಲು ಹೋದ ಲಕ್ಷ್ಮಣ ಇನ್ನೂ ಮನೆಗೆ ಬಂದಿಲ್ಲ. ಇದು ಬಿಟ್ಟರೆ ನಮಗೆ ಏನೂ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ.ಸದ್ಯ ನಿಡಗುಂದಿ ಪೊಲೀಸರು ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಪ್ರಾಥಮಿಕ ತನಿಖೆ ಪೂರ್ಣಗೊಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಲಿದ್ದಾರೆ. ಮೇಲ್ಮೋಟಕ್ಕೆ ಪಾರ್ವತಿಯ ಮಗಾ ಲಕ್ಷ್ಮಣ ತನ್ನ ತಾಯಿಯ ಹಾಗೂ ಸೋಮಲಿಂಗಪ್ಪನ ಅಕ್ರಮ ಸಂಬಂಧದಿಂದ ರೋಸಿ ಹೋಗಿದ್ದನಂತೆ. ಹೇಗಾದರೂ ಮಾಡಿ ಇಬ್ಬರನ್ನೂ ಮುಗಿಸಿ ಬಿಡಬೇಕೆಂದು ಪ್ಲ್ಯಾನ್ ಮಾಡಿದ್ದನಂತೆ. ಆತನ ಪ್ಲ್ಯಾನ್ ಗೆ ಪೂರಕವಾಗಿ ನಿನ್ನೆ ಇಬ್ಬರನ್ನು ಕರೆದುಕೊಂಡು ಬರುವ ನೆಪದಲ್ಲಿ ಮಚ್ಚು ಹಾಗೂ ಕೊಡಲಿ ತೆಗೆದುಕೊಂಡು ಹೋಗಿದ್ದಾನೆ. ಇಬ್ಬರೂ ರೈಲು ಇಳಿದ ಬಳಿಕ ಊರಿಗೆ ಕರೆ ತರುವಾಗ ಮಾರ್ಗ ಮಧ್ಯೆ ಯಾರೂ ಇಲ್ಲದ್ದನ್ನು ಕಂಡು ಮಚ್ಚು ಹಾಗೂ ಕೊಡಲಿಯಿಂದ ಇಬ್ಬರನ್ನು ಕೊಚ್ಚಿ ಹಾಕಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸರ ತನಿಖೆಯಿಂದಷ್ಟೇ ನಿಖರ ಮಾಹಿತಿ ತಿಳಿದು ಬರಲಿದೆ.

ಅರೆಶಿರೂರು ಹೆಲಿಪ್ಯಾಡ್ ಬಳಿ ಆಕಸ್ಮಿಕ ಬೆಂಕಿ; ಅಪಾಯದಿಂದ ಪಾರಾದ ಸಿಎಂ ಬೊಮ್ಮಾಯಿ

Posted by Vidyamaana on 2023-04-13 07:08:47 |

Share: | | | | |


ಅರೆಶಿರೂರು ಹೆಲಿಪ್ಯಾಡ್ ಬಳಿ ಆಕಸ್ಮಿಕ ಬೆಂಕಿ; ಅಪಾಯದಿಂದ ಪಾರಾದ ಸಿಎಂ ಬೊಮ್ಮಾಯಿ

ಬೈಂದೂರು: ಹೆಲಿಕಾಪ್ಟರ್ ಟೆಕ್ ಆಫ್ ಆಗುವ ಸಂದರ್ಭ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡ ಘಟನೆ ಎ. 13ರ ಗುರುವಾರ ಅರೆಶಿರೂರಿನಲ್ಲಿ ನಡೆದಿದೆ.ಸಿಎಂ ಬೊಮ್ಮಾಯಿ ಅರೆಶಿರೂರು ಹೆಲಿಪ್ಯಾಡ್ ಮೂಲಕ ಕೊಲ್ಲೂರು ಅಗಮಿಸಿದ ಸಂದರ್ಭ ಈ ಘಟನೆ ಸಂಭವಿಸಿದೆ.ಸಿಎಂ ಎಸ್ಕಾರ್ಟ್ ಹೋದ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು, ಭಾರಿ ಅವಘಡ ತಪ್ಪಿದೆ.

ಹೆಲಿಕಾಪ್ಟರ್ ಫ್ಯಾನ್ ಗಾಳಿಗೆ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸ್ಥಳದಲ್ಲಿ  ಬೈಂದೂರು ಅಗ್ನಿಶಾಮಕ ದಳದವರಿಂದ ಕ್ಷೀಪ್ರ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಲಾಗಿದೆ. ‌ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದಂಪತಿ ಸಮೇತ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನದ ಪ್ರಾಂಗಣದ ಗರುಡಗಂಬಕ್ಕೆ ಪೂಜೆ ಸಲ್ಲಿಸಿದರು.

ಮುಕ್ರಂಪಾಡಿ : ಕೆ ಎಸ್ ಆರ್ ಟಿ ಸಿ ಬಸ್, ಆಟೋ ರಿಕ್ಷಾ ನಡುವೆ ಡಿಕ್ಕಿ - ರಿಕ್ಷಾ ಚಾಲಕ ಜೈಸನ್ ಮೃತ್ಯು

Posted by Vidyamaana on 2024-04-27 06:21:41 |

Share: | | | | |


ಮುಕ್ರಂಪಾಡಿ :  ಕೆ ಎಸ್ ಆರ್ ಟಿ ಸಿ ಬಸ್, ಆಟೋ ರಿಕ್ಷಾ ನಡುವೆ ಡಿಕ್ಕಿ - ರಿಕ್ಷಾ ಚಾಲಕ ಜೈಸನ್ ಮೃತ್ಯು

ಪುತ್ತೂರು: ಲೋಕಸಭಾ ಚುನಾವಣಾ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್‌ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಮುಕ್ರಂಪಾಡಿಯಲ್ಲಿ ಎ.27 ರ ನಸುಕಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ.



Leave a Comment: