ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಸುದ್ದಿಗಳು News

Posted by vidyamaana on 2024-07-03 13:36:16 |

Share: | | | | |


ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಬೆಂಗಳೂರು (ಜು.3): ಇಲ್ಲಿನ ಹೊರವಲಯದ ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಜುಲೈ 1ರಂದು ಪ್ರೇಮಿಗಳು ನಾಪತ್ತೆಯಾಗಿದ್ದರು.

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿನಿ ತಲಘಟ್ಟಪುರ ಸಮೀಪದ ಅಂಜನಾಪುರ ಬಳಿ ವಾಸವಿದ್ದಳು. ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿಯಾಗಿದ್ದ. ಇಬ್ಬರೂ ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನಲೆ ಎರಡೂ ಕಡೆಯವರ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

ಮದುವೆಯಾಗಿದ್ದ ಶ್ರೀಕಾಂತ್!

ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಅವಕಾಶ ಇಲ್ಲ ಎಂದು ಸಾಯೋ ನಿರ್ಧಾರ ಮಾಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ನಂತರ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರುದಿಲ್ಲ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಮೊಬೈಲ್ ನಲ್ಲಿ ವೀಡಿಯೊ ಮಾಡಿರುವ ಯುವತಿ ಅಂಜನಾ ಅದನ್ನ ಆಟೋದಲ್ಲಿ ಬಿಟ್ಟು ಶ್ರೀಕಾಂತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋ ಮಾಡಿದ್ದಾಳೆ. ಮೊಬೈಲ್ ವಶಕ್ಕೆ ಪಡೆದುಕೊಂಡಿರೊ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 Share: | | | | |


ಮಹಿಳೆಯ ಚಿನ್ನದ ಸರ ಎಗರಿಸಿದ್ದ ಬಿಸಿರೋಡ್ ಮೂಲದ ಜುಬೈರ್ ಸಹಿತ ಕುಖ್ಯಾತ ಕಳ್ಳರಿಬ್ಬರ ಸೆರೆ

Posted by Vidyamaana on 2024-02-24 21:28:02 |

Share: | | | | |


ಮಹಿಳೆಯ ಚಿನ್ನದ ಸರ ಎಗರಿಸಿದ್ದ ಬಿಸಿರೋಡ್ ಮೂಲದ ಜುಬೈರ್ ಸಹಿತ  ಕುಖ್ಯಾತ ಕಳ್ಳರಿಬ್ಬರ ಸೆರೆ

ಮಂಗಳೂರು, ಫೆ.24: ಬಜಾಲ್ ಜೆಎಂ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಕೇರಳ ಮೂಲದ ಅಂತಾರಾಜ್ಯ ಸರಗಳ್ಳರನ್ನು ಬಂಧಿಸಿದ್ದಾರೆ.

ಮೂಲತಃ ಕಾಸರಗೋಡು ಜಿಲ್ಲೆಯ ಚೆರ್ಕಳ ನಿವಾಸಿ, ಬಂಟ್ವಾಳದ ಮಿತ್ತಬೈಲ್ ಶಾಂತಿಯಂಗಡಿಯಲ್ಲಿ ನೆಲೆಸಿದ್ದ ಮೊಹಮ್ಮದ್ ಆಲಿ (32) ಮತ್ತು ಬಿಸಿ ರೋಡ್ ಶಾಂತಿಯಂಗಡಿ ನಿವಾಸಿ ಜುಬೈರ್ (32) ಬಂಧಿತರು.


ಇವರು ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ 16 ಗ್ರಾಮ್ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಆರೋಪಿಗಳನ್ನು ಬಂಧಿಸಿ, ಚಿನ್ನದ ಸರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಮೊಹಮ್ಮದ್ ಆಲಿ ವಿರುದ್ಧ ಕಾಸರಗೋಡು ಜಿಲ್ಲೆಯ ಬದಿಯಡ್ಕ, ಮಂಜೇಶ್ವರ, ಬಂಟ್ವಾಳ, ವಿಟ್ಲ, ಮಂಗಳೂರಿನ ಬರ್ಕೆ ಠಾಣೆಗಳಲ್ಲಿ ಮನೆ ಕಳವು., ಸರ ಸುಲಿಗೆ, ಜೈಲಿನಲ್ಲಿ ಹೊಡೆದಾಟ ಸೇರಿ 15 ಪ್ರಕರಣ ದಾಖಲಾಗಿದೆ. ಕಂಕನಾಡಿ ನಗರ ಠಾಣೆಯ ಇನ್ಸ್ ಪೆಕ್ಟರ್ ಟಿಡಿ ನಾಗರಾಜ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಕಲಾಪದಲ್ಲಿ ಎಡವಟ್ಟು ಮಾಡಿದ ಪ್ರದೀಪ್ ಈಶ್ವರ್

Posted by Vidyamaana on 2023-07-06 13:46:07 |

Share: | | | | |


ಕಲಾಪದಲ್ಲಿ ಎಡವಟ್ಟು ಮಾಡಿದ ಪ್ರದೀಪ್ ಈಶ್ವರ್

ಬೆಂಗಳೂರು : ಮಂಡ್ಯ ಜಿಲ್ಲೆ ನಾಗಮಂಗಲ ಡಿಪೋ ಎದುರು ಸಾರಿಗೆ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಎಡವಟ್ಟು ಮಾಡಿಕೊಂಡದ್ದು ಗಮನ ಸೆಳೆಯಿತು.ಒಂದು ಸಾವಿಗೆ ಇವರು ಇಷ್ಟೆಲ್ಲಾ ಹೋರಾಟ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡರು, ಅವರಿಗೂ ನ್ಯಾಯ ಕೊಡಿಸಲು ಹೋರಾಟ ಮಾಡಬೇಕಲ್ಲ ಎಂದರು. ಈ ವೇಳೆ ಸ್ಪೀಕರ್ ಯು.ಟಿ.ಖಾದರ್ , ಎ ..ಪ್ರದೀಪ್..ಸಾವು ಆಗಲಿಲ್ಲ ಮಾರಾಯ .ಕುತ್ಕೋ ನೀನು ಎಂದರುಸ್ಪೀಕರ್ ಯು.ಟಿ.ಖಾದರ್ ಅವರ ಮನವಿಯ ಬಳಿಕ ಪ್ರತಿಪಕ್ಷಗಳ ಶಾಸಕರು ಧರಣಿ ಕೈಬಿಟ್ಟು ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತುಕೊಂಡರು. ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿ ಸಾರಿಗೆ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಶಾಸಕರು ಸಚಿವ ಚೆಲುವರಾಯ ಸ್ವಾಮಿ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕ್ರಿಕೆಟ್ ಬ್ಯಾನರ್ ಕಟ್ಟುತ್ತಿದ್ದ ಯುವಕನಿಗೆ ವಿದ್ಯುತ್ ಶಾಕ್ ಮೂರ್ನಾಡಿನ ಆರಿಫ್ ದುರ್ಮರಣ!

Posted by Vidyamaana on 2024-05-11 13:39:56 |

Share: | | | | |


ಕ್ರಿಕೆಟ್ ಬ್ಯಾನರ್ ಕಟ್ಟುತ್ತಿದ್ದ ಯುವಕನಿಗೆ ವಿದ್ಯುತ್ ಶಾಕ್ ಮೂರ್ನಾಡಿನ ಆರಿಫ್ ದುರ್ಮರಣ!

ಮಡಿಕೇರಿ: ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮೂರ್ನಾಡು ಪಟ್ಟಣದಲ್ಲಿ ನಡೆದಿದೆ

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಮೂರ್ನಾಡಿನ ಆರಿಫ್ (34) ಮೃತ ದುರ್ದೈವಿ.

ಲೋಕಸಭಾ ಚುನಾವಣೆ ಹಿನ್ನೆಲೆ: ಪುತ್ತೂರು ತಹಸೀಲ್ದಾರ್ ವರ್ಗ

Posted by Vidyamaana on 2024-03-16 21:57:52 |

Share: | | | | |


ಲೋಕಸಭಾ ಚುನಾವಣೆ ಹಿನ್ನೆಲೆ: ಪುತ್ತೂರು ತಹಸೀಲ್ದಾರ್ ವರ್ಗ

ಪುತ್ತೂರು: ಚುನಾವಣಾ ಹಿನ್ನೆಲೆಯಲ್ಲಿ ತಹಸೀಲ್ದಾರ್ ವರ್ಗಾವಣೆಗೊಂಡಿದ್ದು, ಹೊಸ ತಹಸೀಲ್ದಾರ್ ಆಗಿ ಕುಂಞ ಅಹಮದ್ ಎನ್.ಎ. ನೇಮಕಗೊಂಡಿದ್ದಾರೆ.

ಈ ಮೊದಲು ಸುಳ್ಯ ತಾಲೂಕು ತಹಸೀಲ್ದಾರ್ ಆಗಿದ್ದ ಇವರು, ತಮ್ಮ ಕಾರ್ಯವೈಖರಿಯಿಂದ ಜನಮನ್ನಣೆ ಪಡೆದುಕೊಂಡಿದ್ದರು. ಉತ್ತಮ ಅಧಿಕಾರಿ ಎಂದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು.

ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಆದೇಶ ಜಾರಿಗೆ ಬರುವಂತೆ ತಿಳಿಸಲಾಗಿದೆ.

ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್ ಗೆ ನೀನಿನ್ನೂ ವಿಸಿಟ್ ಮಾಡಿಲ್ವಾ..

Posted by Vidyamaana on 2023-10-07 12:18:50 |

Share: | | | | |


ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್ ಗೆ ನೀನಿನ್ನೂ ವಿಸಿಟ್ ಮಾಡಿಲ್ವಾ..

ಪುತ್ತೂರು: ಪುತ್ತೂರಿನಲ್ಲಿ ಸುಮಾರು 43 ವರ್ಷಗಳಿಂದ ಕಾರ್ಯಾಚುಸುತ್ತಿರುವ ನ್ಯೂ ಮಂಗಳೂರು ಫರ್ನಿಚರ್ ಸಹ ಸಂಸ್ಥೆ ದರ್ಬೆ ಬುಶ್ರಾ ಟವರ್‌ನಲ್ಲಿ ವ್ಯವಹರಿಸುತ್ತಿರುವ ನ್ಯೂ ಮಂಗಳೂರು ಇಲೆಕ್ಟೋನಿಕ್ಸ್‌ನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಬಿಗ್ ಸೇಲ್ ಅ.2ರಿಂದ ಆರಂಭಗೊಂಡಿದ್ದು ಅ.7ರಂದು ಕೊನೆಗೊಳ್ಳಲಿದೆ.


ಹಾರ್ಟ್ ಅಟ್ಯಾಕ್ - ಹಾರ್ಟ್ ಫೈಲ್ಯೂರ್ - ಕಾರ್ಡಿಯಾಕ್ ಅರೆಸ್ಟ್: ಏನಿದೆ ವ್ಯತ್ಯಾಸ?

ಬಿಗ್ ಸೇಲ್ ವಾರ್ಷಿಕೋತ್ಸವಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟಿ.ವಿ., ಪ್ರಿಡ್ಜ್ ವಾಷಿಂಗ್ ಮೆಷಿನ್ ಇತ್ಯಾದಿ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಪ್ರತೀ ಖರೀದಿಗೆ ಹಲವು ಆಕರ್ಷಕ ಉಡುಗೊರೆಗಳು ಮತ್ತು ಗಿಫ್ಟ್ ವೋಚರ್ಪಡೆಯುವ ಸುವರ್ಣಾವಕಾಶ, ಪ್ರತಿ ರೂ.3000ದ ಖರೀದಿಗೆ ಕೂಪನ್ ಪಡೆದು ಖಚಿತ ಬಹುಮಾನಗಳನ್ನು ಪಡೆಯುವ ಅವಕಾಶವಿರುತ್ತದೆ.



ಸ್ಕಾಚ್ ಕಾರ್ಡ್‌ನಲ್ಲಿ 10 ಗ್ರಾಂ.ಚಿನ್ನ, ಬೆಳ್ಳಿ, ರೆಫ್ರಿಜರೇಟರ್, ಎ.ಸಿ., 3ಡೋ‌ ವಾರ್ಡ್‌ರೋಬ್‌, ಎಲ್‌ಇಡಿ ಟಿವಿ ಹಾಗೂ ಹಲವು ಖಚಿತ ಬಹುಮಾನಗಳು ಲಭ್ಯವಿರುತ್ತದೆ. ಈ ಎಲ್ಲಾ ಆಫರ್‌ಗಳು ಪುತ್ತೂರಿನ ದರ್ಬೆಯಲ್ಲಿರುವ ಐಕೆ ಮಾಲ್‌ನಲ್ಲೂ ಲಭ್ಯವಿರುತ್ತದೆ. 100ಕ್ಕೂ ಹೆಚ್ಚು ಮಾಡೆಲ್‌ನ ಫ್ಯಾನ್‌ ಗಳು, 75ಕ್ಕೂ ಹೆಚ್ಚು ಮಾಡೆಲ್‌ನ ಮಿಕ್ಸಿಗಳು, 40ಕ್ಕೂ ಹೆಚ್ಚು ಮಾಡೆಲ್‌ ಗ್ಯಾಸ್ ಸ್ಟವ್ ಗಳು, 40ಕ್ಕೂ ಹೆಚ್ಚು ಮಾಡೆಲ್‌ನ ಎಲ್.ಇ.ಡಿ. ಟಿವಿಗಳು, 75ಕ್ಕೂ ಹೆಚ್ಚು ಮಾಡೆಲ್‌ನ ವಾಷಿಂಗ್ ಮೆಷಿನ್, 25ಕ್ಕೂ ಹೆಚ್ಚು ಮಾಡೆಲ್‌ನ ಫ್ರೆಂಡರ್‌ಗಳು, 100ಕ್ಕೂ ಹೆಚ್ಚು ಮಾಡೆಲ್‌ನ ರೆಫ್ರಿಜರೇಟರ್ ಶೇ.40ರವರೆಗೆ ರಿಯಾಯಿತಿಯಲ್ಲಿ ದೊರೆಯುತ್ತದೆ. ಈ ಆಫರ್ ಇನ್ನು ಒಂದು ದಿನ ಮಾತ್ರ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ: ಸೌದಿ ಅರೇಬಿಯಾದಲ್ಲಿ ಮಂಗಳೂರು ಮೂಲದ ಸಿರಾಜುದ್ದೀನ್ ಮೃತ್ಯು

Posted by Vidyamaana on 2023-04-21 11:46:41 |

Share: | | | | |


ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ: ಸೌದಿ ಅರೇಬಿಯಾದಲ್ಲಿ ಮಂಗಳೂರು ಮೂಲದ ಸಿರಾಜುದ್ದೀನ್ ಮೃತ್ಯು

ರಿಯಾದ್: ಸೌದಿ ಅರೇಬಿಯಾದಲ್ಲಿ ಮಸೀದಿಗೆ ತೆರಳಲು ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿಯಾಗಿ ಮಂಗಳೂರಿನ ಯುವಕ ಮೃತಪಟ್ಟಿರೋ ಘಟನೆ ನಡೆದಿದೆ.

ಸಜಿಪದ ಕೋಣೆಕಣಿ ಮೂಲದ ಖಾಸಿಮ್ ಮತ್ತು ಮೈನಬಾ ದಂಪತಿ ಪುತ್ರ ಸಿರಾಜುದ್ದೀನ್ ಮೃತಪಟ್ಟ ಯುವಕ. ಈತ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.



Leave a Comment: