ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಸುಳ್ಯ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಉಪ್ಪಿನಂಗಡಿ ಮೂಲದ ನಿತಿನ್ ಸೆರೆ

Posted by Vidyamaana on 2024-03-15 10:06:00 |

Share: | | | | |


ಸುಳ್ಯ ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಉಪ್ಪಿನಂಗಡಿ ಮೂಲದ ನಿತಿನ್ ಸೆರೆ

ಸುಳ್ಯ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಡೆಕೋಲಿನಲ್ಲಿ ಬುಧವಾರ ರಾತ್ರಿ ನಡೆದಿದೆ.ಮೂಲತಃ ಉಪ್ಪಿನಂಗಡಿಯ ನಿತಿನ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.


ಸುಳ್ಯ-ಮಂಡೆಕೋಲು ಖಾಸಗಿ ಬಸ್‍ನಲ್ಲಿ ನಿರ್ವಾಹಕ ಆಗಿ ಕೆಲಸ ಮಾಡುತ್ತಿದ್ದ ನಿತಿನ್ ಬುಧವಾರ ತಡರಾತ್ರಿ ಬಾಲಕಿಯ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದರು ಎಂದು ತಿಳಿದುಬಂದಿದೆ.ಆರೋಪಿ ನಿತಿನ್ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಿಡುಗಡೆ: ಇಲ್ಲಿದೆ ಕೈ‌ ಗ್ಯಾರೆಂಟಿ ಲಿಸ್ಟ್

Posted by Vidyamaana on 2023-05-02 06:19:40 |

Share: | | | | |


ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಿಡುಗಡೆ: ಇಲ್ಲಿದೆ ಕೈ‌ ಗ್ಯಾರೆಂಟಿ ಲಿಸ್ಟ್

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ‘ಸರ್ವಜನಾಂಗದ ಶಾಂತಿಯ ತೋಟ, ಇದುವೇ ಕಾಂಗ್ರೆಸ್ ಬದ್ಧತೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿ ಮಂಗಳವಾರ ಬಿಡುಗಡೆ ಮಾಡಿದರು. ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವ ಪ್ರಮಾಣ ಸಂಕೇತವಾಗಿ ಪ್ರಣಾಳಿಕೆ ಹೊತ್ತಿಗೆಗೆ ಅರಿಶಿನ-ಕುಂಕುಮ ಹಚ್ಚಿ, ವೀಳ್ಯದೆಲೆ ಅಡಿಕೆ ಇಟ್ಟು ಸಾಂಪ್ರದಾಯಿಕವಾಗಿ ಬಿಡುಗಡೆ ಮಾಡಿದರು.


ಪ್ರಣಾಳಿಕೆಯ ಮುಖ್ಯಾಂಶಗಳು:


ಬಿಪಿಎಲ್‌ ಕುಟುಂಬಕ್ಕೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತದೆ.

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡಲಾಗುತ್ತದೆ.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರವವರನ್ನು ಖಾಯಂ ಕೆಲಸಗಾರರನ್ನಾಗಿ ಮಾಡಲಾಗುತ್ತದೆ. ಆರೋಗ್ಯ & ಕುಟುಂಬ ಕಲ್ಯಾಣದಲ್ಲಿ ಕೆಲಸ ಮಾಡುವ ನೌಕರರ ಉದ್ಯೋಗ ಖಾಯಂ

ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟಿ ವಿದ್ಯುತ್‌ ಉಚಿತವಾಗಿ ನೀಡಲಾಗುತ್ತದೆ.

ಮಹಿಳೆಯರಿಗೆ ಸರ್ಕಾರಿ ಬಸ್‌ ನಲ್ಲಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ

ಆಶಾ ಕಾರ್ಯಕರ್ತೆಯರ ಗೌರವಧನ 8 ರೂ.ಗೆ ಹೆಚ್ಚಳ

ಯುವನಿಧಿ ಯೋಜನೆಯಡಿಯಲ್ಲಿ ನಿರುದ್ಯೋಗ ಯುವಕರಿಗೆ ನೆರವು ( 3 ಸಾವಿರ ರೂ ಸಹಾಯಧನ)

ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನು 1 ವರ್ಷದಲ್ಲಿ ಭರ್ತಿ ಮಾಡಲಾಗುತ್ತದೆ.

ಅಂಗನವಾಡಿ ಕಾರ್ಯಕರ್ತೆಯರ ವೇತನ 15 ರೂ.ಗೆ ಹೆಚ್ಚಿಸಲಾಗುತ್ತದೆ.

ಕೋಮುಗಳ ನಡುವೆ ಯಾವುದೇ ಬಗೆಯ ದ್ವೇಷ ಬಿತ್ತುವ ಬಜರಂಗದಳ,ಪಿಎಫ್‌ ಐ ಸೇರಿದಂತೆ ಇತರ ಯಾವುದೇ ಸಂಘಟನೆಗಳಿದ್ದರೂ ಅದನ್ನು ಕಾನೂನು ಅನುಸಾರವಾಗಿ ನಿಷೇಧ ಮಾಡಲಾಗುವುದು.

ನೀರಾವರಿಗಾಗಿ 5 ವರ್ಷದಲ್ಲಿ 1.50 ಲಕ್ಷ ಕೋಟಿ ರೂ. ಮೀಸಲು

ಬಿಸಿಯೂಟ ನೌಕರರ ಗೌರಧನ 6 ಸಾವಿರ ರೂ.ಗೆ ಹೆಚ್ಚಳ

ರಾತ್ರಿಪಾಳಿಯ ಪೊಲೀಸ್‌ ಸಿಬ್ಬಂದಿ 5000 ರೂ. ವಿಶೇಷ ಭತ್ಯೆ

ಪ್ರತಿ ಜಿಲ್ಲೆಯಲ್ಲಿ ಸೈಬರ್‌ ಠಾಣೆ ನಿರ್ಮಾಣದ ಗುರಿ

ಕನಕಪುರದಲ್ಲಿ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ

ಎನ್‌ ಇಪಿಯನ್ನು ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡಲಾಗುವುದು.

4 ವರ್ಷದಲ್ಲಿ ಎಲ್ಲಾ ಪೊಲೀಸ್‌ ಸಿಬ್ಬಂದಿಗೆ ವಸತಿ ಸೌಲಭ್ಯ

ಮುಸ್ಲಿಂಮರ ಶೇ.4 ರಷ್ಟು ಮೀಸಲಾತಿ ಮರುಸ್ಥಾಪನೆ

ಬೆಂಗಳೂರಿನಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ಬಸ್‌ ಸೌಲಭ್ಯ

ಎಲ್ಲಾ ಪೊಲೀಸರಿಗೆ ವರ್ಷಕ್ಕೆ 1 ತಿಂಗಳ ವೇತನ ಹೆಚ್ಚಳ

ಎಸ್‌ ಟಿ ,ಎಸ್‌ ಸಿ ಮೀಸಲಾತಿ ಹೆಚ್ಚಳ ಮಾಡುವುದಾಗಿ ಭರವಸೆ

ನಾಡದೋಣಿ ಮೀನುಗಾರರಿಗೆ 10 ಸಾವಿರ ಹಣಕಾಸಿನ ನೆರವು

ಮೀನುಗಾರಿಕಾ ಕ್ಷೇತ್ರದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ

ಮೀನುಗಾರಿಕಾ ಮಹಿಳೆಯರಿಗೆ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ

ಎಸ್‌ ಸಿ ಸಮುದಾಯ ಮೀಸಲಾತಿ ಶೇ 17 ಹೆಚ್ಚಿಸುವ ಭರವಸೆ,ಎಸ್‌ ಟಿ ಸಮುದಾಯ ಮೀಸಲಾತಿ ಶೇ. 7 ಹೆಚ್ಚಿಸುವ ಭರವಸೆ

ಆಟೋ, ಟ್ಯಾಕ್ಸಿ ಚಾಲಕರ ಮಂಡಳಿ ಸ್ಥಾಪಿಸುವ ಭರವಸೆ

ಕೋರ್ಟ್‌ ಗಳ ಆಧುನಿಕರಣದ ಭರವಸೆ

ಪತ್ರಕರ್ತರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಭರವಸೆ

ಮಂಗಳಮುಖಿ ಮಂಡಳಿ ಸ್ಥಾಪಿಸುವ ಭರವಸೆಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಡಾ.ಜಿ ಪರಮೇಶ್ವರ್‌ ಹಾಗೂ ಇತರ ಪ್ರಮುಖ ಮುಖಂಡ ಉಪಸ್ಥಿತರಿದ್ದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಡಾ.ಜಿ. ಪರಮೇಶ್ವರ್, ಮಾಜಿ ಸಚಿವೆ ರಾಣಿ ಸತೀಶ್, ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ, ವಕ್ತಾರ ಗೌರವ್ ವಲ್ಲಭ್, ಪ್ರೊ. ರಾಜೀವ್ ಗೌಡ, ಪ್ರೊ ಕೆ ಈ ರಾಧಾಕೃಷ್ಣ, ಮತ್ತಿತರರು ಉಪಸ್ಥಿತರಿದ್ದರು.

ಬೆಂಗಳೂರಿನಲ್ಲಿ ಕಾರಿಗೆ ಡಿಕ್ಕಿಯಾದ ಅಂಬುಲೆನ್ಸ್: ಕ್ಯಾನ್ಸರ್ ರೋಗಿ ಮೃತ್ಯು

Posted by Vidyamaana on 2023-10-24 20:25:27 |

Share: | | | | |


ಬೆಂಗಳೂರಿನಲ್ಲಿ ಕಾರಿಗೆ ಡಿಕ್ಕಿಯಾದ ಅಂಬುಲೆನ್ಸ್: ಕ್ಯಾನ್ಸರ್ ರೋಗಿ ಮೃತ್ಯು

ಬೆಂಗಳೂರು: ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಅಂಬುಲೆನ್ಸ್ ಲಾರಿಗೆ ಡಿಕ್ಕಿಯಾದ ಪರಿಣಾಮ ಅದರಲ್ಲಿದ್ದ ರೋಗಿ ಸಾವನ್ನಪ್ಪಿದ ದುರಂತ  ಘಟನೆ  ನೆಲಮಂಗಲದ ಬೊಮ್ಮನಹಳ್ಳಿಯ ಬಳಿ ನಡೆದಿದೆ.  ಚಿತ್ರದುರ್ಗ ಆಸ್ಪತ್ರೆಯಿಂದ ಬೆಂಗಳೂರಿನ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯುತ್ತಿರುವಾಗ ಈ ದುರಂತ ನಡೆದಿದೆ. ವೇಗವಾಗಿ ಬರುತ್ತಿದ್ದ ಅಂಬುಲೆನ್ಸ್ ಲಾರಿಗೆ ಬಲವಾಗಿ ಗುದ್ದಿದ್ದು, ಅದರಲ್ಲಿದ್ದ ರೋಗಿ ವಿಜಯ್ ಕುಮಾರ್ ಸಾವನ್ನಪ್ಪಿದ್ದಾರೆ.  ಘಟನೆಯಲ್ಲಿ ಅಂಬುಲೆನ್ಸ್ ಚಾಲಕ ಸೇರಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವಿಜಯ್ ಕುಮಾರ್ ರವರನ್ನು ಮಲಗಿಸಿಕೊಂಡ ಅಂಬುಲೆನ್ಸ್ ತುಮಕೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿತ್ತು. ವೇಗವಾಗಿ ಬರುತ್ತಿರುವಾಗ ಕಂಟೈನರ್ ಲಾರಿಗೆ ಅಂಬುಲೆನ್ಸ್ ಡಿಕ್ಕಿಯಾಗಿದೆ. ಪರಿಣಾಮ ವಿಜಯ್ ಕುಮಾರ್ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.

ಮಾನಸಿಕ ಆರೋಗ್ಯ ಸಮಸ್ಯೆ; ಖ್ಯಾತ ನೀಲಿ ಚಿತ್ರತಾರೆ ಆತ್ಮಹತ್ಯೆ

Posted by Vidyamaana on 2024-02-20 14:29:04 |

Share: | | | | |


ಮಾನಸಿಕ ಆರೋಗ್ಯ ಸಮಸ್ಯೆ; ಖ್ಯಾತ ನೀಲಿ ಚಿತ್ರತಾರೆ ಆತ್ಮಹತ್ಯೆ

ನವದೆಹಲಿ: ಆತ್ಮಹತ್ಯೆ ಮಾಡಿಕೊಂಡು ಖ್ಯಾತ ನೀಲಿ ಚಿತ್ರತಾರೆಯೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.ಕಾಗ್ನಿ ಲಿನ್ ಕಾರ್ಟರ್(36)  ಆತ್ಮಹತ್ಯೆ ಮಾಡಿಕೊಂಡು ಪ್ರಾಣತೆತ್ತಿರುವುದನ್ನು ಅವರ ಸ್ನೇಹಿತರು ಸೋಶಿಯಲ್‌ ಮೀಡಿಯಾದಲ್ಲಿ ವಿಚಾರವನ್ನು ಅಧಿಕೃತವಾಗಿ ಹೇಳಿದ್ದಾರೆ. ಅವರು ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಸ್ನೇಹಿತರು ಹೇಳಿದ್ದಾರೆ.

2000 ಇಸವಿಯಲ್ಲಿ ನೀಲಿ ಚಿತ್ರದ ಲೋಕಕ್ಕೆ ಕಾಲಿಟ್ಟ ಅವರು ತನ್ನ ಕೆಲಸಕ್ಕಾಗಿ ಹಲವು ಅಮೇರಿಕನ್‌ ಅಡಲ್ಟ್‌ ವಿಡಿಯೋ ಪ್ರಶಸ್ತಿ(AVN Awards) ಗಳನ್ನು ಪಡೆದಿದ್ದಾರೆ. ಇದಲ್ಲದೆ ಅವರು ಗಾಯಕಿಯಾಗಿ, ಕ್ಲಬ್‌ ನಲ್ಲಿ ನೃತ್ಯಗಾರ್ತಿಯಾಗಿಯೂ ಹಾಗೂ ಮಾಡೆಲ್‌ ಆಗಿಯೂ ಅನೇಕ ವರ್ಷ ಮನರಂಜಿಸಿದ್ದರು.

2019 ರಲ್ಲಿ ಅವರು ಲಾಸ್ ಏಂಜಲೀಸ್‌ನಿಂದ ಮರಳಿ ಪೋಲ್ ಡ್ಯಾನ್ಸ್‌ನಲ್ಲಿ ತೊಡಗಿಕೊಂಡಿದ್ದರು. ಇದಾದ ನಂತರ ಅವರು ತಮ್ಮದೇ ಆದ ಸ್ಟುಡಿಯೋ ತೆರೆದು ವಯಸ್ಕ ಚಿತ್ರಗಳ ಬದಲು ಪೋಲ್ ಡ್ಯಾನ್ಸ್‌ನತ್ತ ಹೆಚ್ಚಿನ ಗಮನ ಹರಿಸಿದ್ದರು.ಕಳೆದ ಕೆಲ ಸಮಯದಿಂದ ಕಾಗ್ನಿಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ಅವರ ಸ್ನೇಹಿತು ಹೇಳಿರುವುದಾಗಿ ವರದಿ ತಿಳಿಸಿದೆ.ಅವರ ಸ್ನೇಹಿತರು ʼಗೋ ಫಂಡ್‌ ಮಿʼ ಮೂಲಕ ನಟಿಯ ನೆನಪಿಗೆ ಹಾಗೂ ಅವರ ತಾಯಿಯ ನೆರವಿಗೆ ಹಣ ಸಂಗ್ರಹಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ

ಕರ್ತವ್ಯದಲ್ಲಿರುವಂತೆಯೇ ದಿಡೀರ್ ಅಸ್ವಸ್ಥಗೊಂಡು ಧರ್ಮಗುರು ಅಬ್ದುಲ್ ರಹಿಮಾನ್ ಮುಸ್ಲಿಯಾರ್ ನಿಧನ

Posted by Vidyamaana on 2023-10-16 19:59:35 |

Share: | | | | |


ಕರ್ತವ್ಯದಲ್ಲಿರುವಂತೆಯೇ ದಿಡೀರ್ ಅಸ್ವಸ್ಥಗೊಂಡು ಧರ್ಮಗುರು ಅಬ್ದುಲ್ ರಹಿಮಾನ್ ಮುಸ್ಲಿಯಾರ್ ನಿಧನ

ಬೆಳ್ತಂಗಡಿ; ವೇಣೂರು ಹಿದಾಯಾತುಲ್ ಇಸ್ಲಾಂ ಮದ್ರಸ  ಇಲ್ಲಿನ ಮುಖ್ಯ ಅಧ್ಯಾಪಕರಾಗಿದ್ದ ಕಾರ್ಕಳ ಹೊಸ್ಮಾರು ನಿವಾಸಿ ಧರ್ಮಗುರು ಅಬ್ದುಲ್ ರಹಿಮಾನ್ ಮುಸ್ಲಿಯಾರ್ (ಅದ್ದು ಉಸ್ತಾದ್) (43) ಅವರು ಕರ್ತವ್ಯದಲ್ಲಿರುವಂತೆಯೇ ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥತಗೊಂಡು ಅ.15 ರಂದು ಕೊನೆಯುಸಿರೆಳೆದಿದ್ದಾರೆ.


ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮದರಸಗಳಲ್ಲಿ ಇಂದು ಅಂತಿಮ‌ ಪರೀಕ್ಷೆ ನಡೆದಿದ್ದು, ತನ್ನ ಕರ್ತವ್ಯ ಮುಗಿಸಿ ಬೆಳಗ್ಗಿನ‌ ಉಪಹಾರ ಮಾಡುತ್ತಿದ್ದಾಗ ತಲೆತಿರುಗಿದಂತಾಗಿ ವಾಂತಿ ಮಾಡಿದ್ದರು.‌ತಕ್ಷಣ ಅವರನ್ನು ಸ್ಥಳೀಯ ಕ್ಲಿನಿಕ್‌ನಲ್ಲಿ, ಬದ್ಯಾರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗುರುವಾಯನಕೆರೆಯ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರು ಮೃತರಾಗಿರುವುದಾಗಿ ವೈದ್ಯರು ಪ್ರಕಟಿಸಿದರು.


ಎಸ್ಸೆಸ್ಸೆಫ್ ಸಂಘಟನೆಯಲ್ಲಿ ಕಾರ್ಕಳ ಡಿವಿಷನ್ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿದ್ದರು. ಪ್ರಸ್ತುತ ಎಸ್‌ವೈಎಸ್ ಸ್ವಯಂ ಸೇವಾ ಸಂಘಟನೆ "ಟೀಮ್ ಹಿಸಾಬಾ" ಇದರ ಕ್ಯಾಪ್ಟನ್ ಆಗಿದ್ದರು.

ಹಲವೆಡೆ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ಅವರು ಎರಡು ವಾರಗಳ ಹಿಂದಷ್ಟೇ ವೇಣೂರಿನ ಮದರಸಕ್ಕೆ ಕರ್ತವ್ಯಕ್ಕೆ ಸೇರಿದ್ದರು. ಕಾರ್ಕಳದ ಅಜೆಕಾರು ಶಿರ್ಲಾಲಿನಲ್ಲಿ ಕರ್ತವ್ಯ ದಲ್ಲಿದ್ದ ವೇಳೆ ಅಲ್ಲಿ ಮಸೀದಿ ನಿರ್ಮಾಣವಾಗುವಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದರು.

ಬುರ್ದಾ ಸಂಘಟನೆ, ಮಕ್ಕಳ ಪ್ರತಿಭಾ ಕಾರ್ಯಕ್ರಮಗಳ ತೀರ್ಪುಗಾರಿಕೆ, ಮದ್ಹ್ ಹಾಡುಗಾರರಾಗಿ, ಪ್ರಿಂಟಿಂಗ್, ವಿನ್ಯಾಸ, ಪ್ರತಿಭಾ ವೇದಿಕೆ, ಮೀಲಾದ್ ವೇದಿಕೆ ವಿನ್ಯಾಸ, ಮಸೀದಿ ಮದರಸಗಳಲ್ಲಿ ಸಾಮೂಹಿಕ ಅಡುಗೆ ತಯಾರಿಕೆ, ಸುನ್ನೀ ಸಂಘಟನೆಗಳು ಹಾಗೂ ಮುಅಲ್ಲಿಮ್ ಸಂಘಟನೆಗಳ ಕಾರ್ಯಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಅರ್ಹ ಕುಟುಂಬದ ಹೆಣ್ಣುಮಕ್ಕಳ ವಿವಾಹಕ್ಕಾಗಿ ಸಹಾಯಧನ ಸಂಗ್ರಹಿಸಿ ನೀಡುವುದು ಹಾಗೂ ಝಿಯಾರತ್ ಟೂರ್ ಗಳನ್ನು ಸಂಘಟಿಸುವುದು ಹೀಗೆ ಎಲ್ಲಾ ರೀತಿಯಿಂದ ಜನರ ಮೆಚ್ಚುಗೆ ಗಳಿಸಿದ್ದರು. ಹೊಸ ಮನೆ ನಿರ್ಮಿಸಿದ್ದು ಮೂರು ವಾರಗಳ ಹಿಂದಷ್ಟೇ ಗೃಹ ಪ್ರವೇಶ ನಡೆದಿತ್ತು.ಇದೀಗ ಮನೆಯ ಯಜಮಾನನ ಈ ದಿಢೀರ್ ಸಾವಿನಿಂದ ಮನೆ ಮಂದಿ ಶೋಕದಲ್ಲಿ‌ ಮುಳುಗಿದ್ದಾರೆ.

ಮೃತರು ತಾಯಿ ನೆಫೀಸಮ್ಮ, ಪತ್ನಿ ರಂಳತ್, ಮೂವರು ಹೆಣ್ಣು ಮಕ್ಕಳಾದ ಮಾಶಿತಾ, ಅನ್ಸೀರಾ ಮತ್ತು ಬಿಶಾರಾ, ಸಹೋದರಾದ ಅಬ್ಬಾಸ್, ಇಸ್ಮಾಯಿಲ್ ಮತ್ತು ಹುಸೈನ್ ಸ‌ಅದಿ, ಸಹೋದರಿ ಬೀಫಾತಿಮಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಭೂಗತ ಪಾತಕಿ ರವಿಪೂಜಾರಿ ಕಲಿ ಯೋಗೇಶ್ ಸಹಚರನಾಗಿದ್ದ ಅಲಿ ಮುನ್ನಾ ಬಂಧನ

Posted by Vidyamaana on 2023-10-23 21:00:36 |

Share: | | | | |


ಭೂಗತ ಪಾತಕಿ ರವಿಪೂಜಾರಿ ಕಲಿ ಯೋಗೇಶ್ ಸಹಚರನಾಗಿದ್ದ ಅಲಿ ಮುನ್ನಾ ಬಂಧನ

ಉಳ್ಳಾಲ, ಅ.23: ಭೂಗತ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೋಗೇಶನ ಸಹಚರ, ಜಿಲ್ಲೆಯ ಹಲವು ಠಾಣೆಗಳಲ್ಲಿ ಬಂಧನ ವಾರಂಟ್ ಎದುರಿಸುತ್ತಿದ್ದ ನಟೋರಿಯಸ್ ಶಾರ್ಪ್ ಶೂಟರ್ ಕೇರಳದ ಮಂಜೇಶ್ವರ, ಪೈವಳಿಕೆ ನಿವಾಸಿ ಮೊಹಮ್ಮದ್ ಹನೀಫ್ ಯಾನೆ ಅಲಿ ಮುನ್ನಾನನ್ನು ಮಂಗಳೂರು ದಕ್ಷಿಣ ಉಪವಿಭಾಗ ಎಸಿಪಿ ಧನ್ಯಾ ನಾಯಕ್ ನೇತೃತ್ವದ ತಂಡ ಬಂಧಿಸಿದೆ. 


ನಟೋರಿಯಸ್ ಶಾರ್ಪ್ ಶೂಟರ್ ಹನೀಫ್ ಯಾನೆ ಅಲಿ ಮುನ್ನಾ ಭೂಗತ ಪಾತಕಿ ರವಿ ಪೂಜಾರಿಯ ಕುಕೃತ್ಯಗಳಿಗೆ ಕರಾವಳಿಯ ಪ್ರತಿನಿಧಿಯಾಗಿದ್ದು ಹಲವು ಶೂಟೌಟ್, ದರೋಡೆ, ಬೆದರಿಕೆ ಪ್ರಕರಣದಲ್ಲಿ ರಾಜ್ಯದ ಅನೇಕ ಠಾಣೆಗಳಿಂದ ಬಂಧನ ವಾರಂಟ್ ಎದುರಿಸುತ್ತಿದ್ದ. ಈತನ ವಿರುದ್ಧ ಕೊಣಾಜೆ, ಮಂಗಳೂರು ಉತ್ತರ, ಪುತ್ತೂರು, ಬರ್ಕೆ, ವಿಟ್ಲ, ಉಳ್ಳಾಲ, ಬೆಂಗಳೂರು ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣಗಳಿವೆ. 


2010 ಮತ್ತು 2013ರಲ್ಲಿ  ಕಾಸರಗೋಡು ಜಿಲ್ಲೆಯ ಬೇವಿಂಜ ಪಿಡಬ್ಲ್ಯುಡಿ ಗುತ್ತಿಗೆದಾರರ ಶೂಟೌಟ್ ಪ್ರಕರಣ, ಮಂಜೇಶ್ವರದಲ್ಲಿ ಕಳ್ಳತನ, 

ಕುಂಬಳೆ ಹಾಗೂ ವಿದ್ಯಾನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಸಂಜೀವ ಶೆಟ್ಟಿ ಸಿಲ್ಕ್ಸ್ ಮಳಿಗೆ ಮತ್ತು ಪುತ್ತೂರು ರಾಜಧಾನಿ ಜ್ಯುವೆಲ್ಲರ್ಸ್ ನಲ್ಲಿ ಈತ ನಡೆಸಿದ ಶೂಟೌಟ್ ಪ್ರಕರಣ ಜಿಲ್ಲೆಯಲ್ಲಿ ಸದ್ದು ಮಾಡಿತ್ತು.


ಕರ್ನಾಟಕದಲ್ಲಿ ರವಿ ಪೂಜಾರಿಯ ಅಂಡರ್ ವರ್ಲ್ಡ್ ಮಾಫಿಯಾವನ್ನು ಅಲಿ ಮುನ್ನಾ ಮತ್ತು ಮನೀಷ್ ಕಂಟ್ರೋಲ್ ಮಾಡುತ್ತಿದ್ದರು. ಕರಾವಳಿಯ ಭೂಗತ ವ್ಯವಹಾರವನ್ನು ಅಲಿ ಮುನ್ನಾನೇ ನಿರ್ವಹಿಸುತ್ತಿದ್ದ. ಕಾರ್ಕಳದ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿ ಕೋಡಿಕೆರೆ ಮನೋಜ್ ಗ್ಯಾಂಗಿನಿಂದ ಬೆಂಗಳೂರಲ್ಲಿ ಮನೀಷ್ ಕೊಲೆಯಾಗಿದ್ದ. ಆಪ್ತ ಸಹಚರ ಮನೀಷ್ ಕೊಲೆಯಾದ ನಂತರ ಅಲಿ ಮುನ್ನಾ ಕಂಗಾಲಾಗಿ ಮುಂಬೈ, ಬೆಂಗಳೂರಲ್ಲೇ ತಲೆಮರೆಸಿಕೊಂಡಿದ್ದ. ಆನಂತರವೂ ಹಫ್ತಾ ವಸೂಲಿಯಲ್ಲಿ ತೊಡಗಿಸಿದ್ದ ಅಲಿ ಮುನ್ನಾನನ್ನು ಎಸಿಪಿ ಧನ್ಯ ನಾಯಕ್ ನೇತೃತ್ವದ ತಂಡ ಮತ್ತು ಕೊಣಾಜೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೇರಳದಲ್ಲಿ ಬಂಧಿಸಿದ್ದಾರೆ.



Leave a Comment: