ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಹಾರೂನ್ ಹಾಜಿ ಪುರುಷರಕಟ್ಟೆ ನಿಧನ

Posted by Vidyamaana on 2024-02-29 18:58:56 |

Share: | | | | |


ಹಾರೂನ್ ಹಾಜಿ ಪುರುಷರಕಟ್ಟೆ ನಿಧನ

ಪುತ್ತೂರು :ಇಲ್ಲಿನ ಪುರುಷರಕಟ್ಟೆ ನಿವಾಸಿ ಪುರುಷರಕಟ್ಟೆ ಹಿಮಾಯತ್ತುಲ್ ಇಸ್ಲಾಂ ಮದ್ರಸದ ಸ್ಥಾಪಕಾಧ್ಯಕ್ಷ  ಮರೀಲ್ ದಿ.ಮೂಸಾ ಹಾಜಿಯವರ ಮಗ ಹಾರೂನ್ ಪುರುಷರಕಟ್ಟೆ (65ವರ್ಷ )ಅಲ್ಪ ಕಾಲದ ಸೌಖ್ಯದಿಂದ  ಫೆ 29 ರಂದು ಸ್ವಗೃಹದಲ್ಲಿ ನಿಧಾನರಾದರು.


ಮೃತರು ಪುರುಷರಕಟ್ಟೆ ಹಿಮಾಯತ್ತುಲ್ ಇಸ್ಲಾಂ ಮದ್ರಸದಲ್ಲಿ ಸುದೀರ್ಘ 20 ವರ್ಷಕ್ಕಿಂತ ಅಧಿಕ ವರ್ಷ ಅಧ್ಯಕ್ಷರಾಗಿ, ಮುಕ್ವೆ ರೆಹ್ಮನಿಯ ಜುಮಾ ಮಸೀದಿಯ ಕಾರ್ಯದರ್ಶಿ ಮತ್ತು ಮುಕ್ವೆ ದರ್ಗಾ ಶರೀಪ್ ಇದರ ಊರೂಸ್ ಕಮಿಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪತ್ನಿ, ಮಗಳು, ಅಳಿಯ ಹಾರಾಡಿಯ ಇಂಜಿನಿಯರ್ ಆತೀಶ್,ಸಹೋದರರಾದ  ಅದಂಕುಂಞ, ಶೇಕಾಲಿ,ಮತ್ತು ಇಸ್ಮಾಯಿಲ್  ರವರನ್ನು ಅಗಲಿದ್ದಾರೆ.

ಎನ್ ಆರ್ ಸಿ ಸಿ- ಅಮ್ಮುಂಜ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

Posted by Vidyamaana on 2024-06-16 17:20:11 |

Share: | | | | |


ಎನ್ ಆರ್ ಸಿ ಸಿ- ಅಮ್ಮುಂಜ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಪುತ್ತೂರು: ಕಳೆದ ಲೋಕಸಭಾ ಚುನಾವಣೆಯ ಮೊದಲು ಶಿಲಾನ್ಯಾಸಗೈದ ಕಾಮಗಾರಿಗಳು ಆರಂಭಗೊಂಡಿದೆ, ಶೀಘ್ರದಲ್ಲೇ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಕುರಿಯ ಗ್ರಾಮದ ಎನ್ ಆರ್ ಸಿ ಸಿ - ಅಮ್ಮುಂಜ ರಸ್ತೆಯು ರೂ ೧೦ ಲಕ್ಷದಲ್ಲಿ ಕಾಂಕ್ರೀಟ್ ಆಗಿದ್ದು ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಅಧ್ಯತೆ ಮೇರೆಗೆ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಮಾಡಲಾಗುವುದು. ರಸ್ತೆ ಕಾಂಕ್ರೀಟ್ ಆಗಿಲ್ಲವೆಂದು ಬೇಜಾರುಮಾಡಬೇಡಿ ಮುಂದಿನ ದಿನಗಳಲ್ಲಿ ಅಗತ್ಯ ಬೇಡಿಕೆ ಇರುವ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಮಾಡಲಾಗುವುದು ಎಂದು ಹೇಳಿದರು. ಪಾಲಿಂಜೆ ಶ್ರೀ ಮಹಾವಿಷ್ಣು ದೇವಸ್ಥಾನದ ಅಭಿವೃದ್ದಿಗೆ ೧೦ ಲಕ್ಷ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಕ್ರಿಕೆಟ್​ ಆಡಿ ಬಂದು ತಕ್ಷಣ ನೀರು ಕುಡಿದ ಬಾಲಕ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಸಾವು

Posted by Vidyamaana on 2023-12-31 16:02:08 |

Share: | | | | |


ಕ್ರಿಕೆಟ್​ ಆಡಿ ಬಂದು ತಕ್ಷಣ ನೀರು ಕುಡಿದ ಬಾಲಕ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಸಾವು

ಲಕ್ನೋ: ಕ್ರಿಕೆಟ್‌ ಆಡಿ ನೀರು ಕುಡಿದ ಬಳಿಕ ಬಾಲಕನೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಅಲ್ಮೋರಾ ಜಿಲ್ಲೆಯಲ್ಲಿ ನಡೆದಿದೆ.ಶನಿವಾರ(ಡಿ.30 ರಂದು) ನಡೆದಿದ್ದು, ಹಸನ್‌ಪುರದ ಕಾಯಸ್ತಾನ್‌ನ 10ನೇ ತರಗತಿ ವಿದ್ಯಾರ್ಥಿ ಪ್ರಿನ್ಸ್ ಸೈನಿ ಎಂಬ ಬಾಲಕ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.ಬಾಲಕ ಸೈನಿ ಕ್ರಿಕೆಟ್‌ ಆಡಿದ ಬಳಿಕ ನೀರು ಕುಡಿಯಲು ಬಂದಿದ್ದಾನೆ. ಕೋಲ್ಡ್‌ ನೀರು ಕುಡಿದಿದ್ದಾನೆ. ನೀರು ಕುಡಿದ ತಕ್ಷಣವೇ ಆತ ಪ್ರಜ್ಞೆ ತಪ್ಪಿದ್ದಾನೆ.


ಪ್ರಿನ್ಸ್‌ ಅವರ ಸ್ನೇಹಿತರು ವಿಚಾರವನ್ನು ಮನೆಯವರಿಗೆ ತಿಳಿಸಿದ್ದು,ಬಾಲಕನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಪರೀಕ್ಷೆ ಮಾಡಿದ ವೈದ್ಯರು ಆದಾಗಲೇ ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ.ಬಾಲಕನ ಸಾವಿಗೆ ಹೃದಯಾಘಾತವೇ ಕಾರಣವಿರಬಹದೆಂದು ಶಂಕಿಸಲಾಗಿದೆ. ಸದ್ಯ ಈ ಬಗ್ಗೆ ಪೋಷಕರು ದೂರು ದಾಖಲಿಸಿಲ್ಲ ಎಂದು ವರದಿ ತಿಳಿಸಿದೆ.

62ನೇ ವಯಸ್ಸಿನಲ್ಲಿ 46 ವರ್ಷದ ಮಹಿಳೆಯನ್ನು ಮದುವೆಯಾದ ಖತರ್ನಾಗ್ ಗ್ಯಾಂಗ್ ಸ್ಟರ್

Posted by Vidyamaana on 2024-03-21 15:39:55 |

Share: | | | | |


62ನೇ ವಯಸ್ಸಿನಲ್ಲಿ 46 ವರ್ಷದ ಮಹಿಳೆಯನ್ನು ಮದುವೆಯಾದ ಖತರ್ನಾಗ್ ಗ್ಯಾಂಗ್ ಸ್ಟರ್

ಬಿಹಾರ: ಲೋಕಸಭೆ ಚುನಾವಣೆಗೆ ಟಿಕೆಟ್​ ಆಕಾಂಕ್ಷಿಯಾಗಿದ್ದ ಕಿಮಿನಲ್​​ ಹಿನ್ನೆಲೆ ಇರುವ ಕುಖ್ಯಾತ ರೌಡಿಯೊಬ್ಬ ಚುನಾವಣೆಗೆ ನಿಲ್ಲುವ ಉದ್ದೇಶದಿಂದ ರಾತ್ರೋರಾತ್ರಿ ಮದುವೆ ಆಗಿದ್ದಾನೆ. ಮದುವೆಗೂ, ಚುನಾವಣೆಗೂ ಏನು ಸಂಬಂಧ ಎಂದು ನಿಮಗೆ ಪ್ರಶ್ನೆ ಮೂಡುತ್ತಿರಬಹುದು..

ಆದರೆ ಈ ಕುರಿತಾದ ಇಂಟ್ರಸ್ಟಿಂಗ್​ ಕಹಾನಿ ಇಲ್ಲಿದೆ…

ಅಶೋಕ್ ಮಹ್ತೋ ಬಿಹಾರದ ನವಾಡ ಪ್ರದೇಶದಲ್ಲಿ ದೊಡ್ಡ ಗ್ಯಾಂಗ್​ಸ್ಟರ್​. ನಾವಡ ಜೈಲ್ ಬ್ರೇಕ್ ಘಟನೆಯಲ್ಲೂ ಭಾಗಿಯಾಗಿದ್ದ. ಕೆಲವು ಕ್ರಿಮಿನಲ್​ ಹಿನ್ನೆಲೆ ಹೊಂದಿರುವ ಈತ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸಬೇಕು ಎಂದುಕೊಂಡಿದ್ದಾನೆ. ಈ ಕುರಿತಾಗಿ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಈ ಹಿಂದೆ ಭೇಟಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

2001ರಲ್ಲಿ ನವಾಡ ಜೈಲಿನಿಂದ ತಪ್ಪಿಸಿಕೊಂಡ ಪ್ರಕರಣದಲ್ಲಿ 17 ವರ್ಷ ಸೆರೆಮನೆವಾಸಕ್ಕೆ ಗುರಿಯಾದ ಅಶೋಕ್ ಮಹ್ತೋ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಒಳಗಾದವರಿಗೆ ಜೈಲಿನಿಂದ ಬಿಡುಗಡೆಯಾಗಿ ಆರು ವರ್ಷ ಕಾಲ ಚುನಾವಣೆಗೆ ಸ್ಪರ್ಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಹೀಗಾಗಿ ನೀನು ಮದುವೆ ಆಗು, ಪತ್ನಿಯನ್ನೇ ಚುನಾವಣೆಯಲ್ಲಿ ಕಣಕ್ಕಿಳಿಸುವಂತೆ ಆರ್‌ಜೆಡಿ ಹಿರಿಯ ನಾಯಕರೊಬ್ಬರು ಸಲಹೆ ನೀಡಿದ್ದಾರೆ. ಈ ಗ್ಯಾಂಗ್​ಸ್ಟರ್​​ ಮಾಸ್ಟರ್​ ಪ್ಲ್ಯಾನ್​​ ಮಾಡಿದ್ದಾನೆ.

ಅಶೋಕ್ ಮಹ್ತೋ ಬಿಹಾರದ ಮುಂಗೇರ್ ಕ್ಷೇತ್ರದಿಂದ ಆರ್‌ಜೆಡಿ ಟಿಕೆಟ್‌ನಲ್ಲಿ ಸ್ಪರ್ಧಿಸಲು ಬಯಸಿದ್ದಾರೆ. ಆದರೆ, ಕ್ರಿಮಿನಲ್ ಹಿಸ್ಟರಿ ಇರುವ ಕಾರಣ ಟಿಕೆಟ್ ಸಿಗದಿದ್ದರೆ ಪತ್ನಿ ಮೂಲಕವಾಗಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾನೆ ಎನ್ನಲಾಗಿದೆ.

ಗ್ಯಾಂಗಸ್ಟರ್​ ಅಶೋಕ್ ಮಹ್ತೋ 62 ನೇ ವಯಸ್ಸಿನಲ್ಲಿ 46 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾನೆ. ಕೆಲವೇ ಮಂದಿ ಅತಿಥಿಗಳು ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮತ್ತೋ ವಿವಾಹ ಸಮಾರಂಭ ನೆರವೇರಿದೆ. ಅಶೋಕ್ ಮಹತೋ ಮದುವೆಯಾದ ಹುಡುಗಿಯ ಹೆಸರು ಕುಮಾರಿ ಅನಿತಾ. ಆಕೆಗೆ 46 ವರ್ಷ ಮತ್ತು ದೆಹಲಿಯ ಆರ್‌ಕೆ ಪುರಂ ನಿವಾಸಿ. ಪಾಟ್ನಾ ಜಿಲ್ಲೆಯ ಸೇಲಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕರೌಟದಲ್ಲಿರುವ ಮಾ ಜಗದಂಬಾ ಸ್ಥಾನ ದೇವಸ್ಥಾನದಲ್ಲಿ ಮಂಗಳವಾರ ವಿವಾಹವಾದರು.

ವಿವಾಹದ ನಂತರ, ಅಶೋಕ್ ಮಹ್ತೋ ಪತ್ನಿ ಅನಿತಾ ಜತೆ ಮಾಜಿ ಸಿಎಂ ರಾಬಿದೇವಿಯವರ ನಿವಾಸಕ್ಕೆ ತೆರಳಿ ಆರ್ ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಅವರ ಆಶೀರ್ವಾದ ಪಡೆದರು. ಬಿಹಾರದ ಮುಂಗೇರ್ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣದಲ್ಲಿ ಪತ್ನಿಯನ್ನು ಕಣಕ್ಕಿಳಿಸುವ ಮೂಲಕ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಅವರು ವಿವಾಹವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪತ್ನಿಯನ್ನು ಚುನಾವಣಾ ಕಣಕ್ಕೆ ಇಳಿಸುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಇನ್ನೂ ಯಾವುದೂ ನಿರ್ಧಾರವಾಗಿಲ್ಲ ಎಂದ ಮತ್ತೋ, ಪತ್ನಿಗೆ ಟಿಕೆಟ್ ನೀಡುವ ಬಗ್ಗೆ ಲಾಲೂ ಯಾವುದೇ ಖಚಿತ ಭರವಸೆ ನೀಡಿಲ್ಲ.

ಕಳೆದ ವರ್ಷ ಜೈಲಿನಿಂದ ಬಿಡುಗಡೆಯಾಗಿದ್ದ ಈತನ ವಿರುದ್ಧ ಪ್ರಸ್ತುತ ನ್ಯಾಯಾಲಯಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ನಡೆಯುತ್ತಿವೆ ಎನ್ನಲಾಗಿದೆ.

ನವದೆಹಲಿಯಲ್ಲಿ ಬಿಜೆಪಿ ಹಿರಿಯ ಮುಖಂಡರನ್ನು ಭೇಟಿ ಮಾಡಿದ ಸಂಸದ ಬ್ರಿಜೇಶ್ ಚೌಟ

Posted by Vidyamaana on 2024-06-09 16:20:13 |

Share: | | | | |


ನವದೆಹಲಿಯಲ್ಲಿ ಬಿಜೆಪಿ ಹಿರಿಯ ಮುಖಂಡರನ್ನು ಭೇಟಿ ಮಾಡಿದ ಸಂಸದ ಬ್ರಿಜೇಶ್ ಚೌಟ

ನವದೆಹಲಿ: ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನವದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ.

ಮಾಜಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಜನರಲ್ ವಿ.ಕೆ. ಸಿಂಗ್ ಅವರನ್ನು ಸೌಹಾರ್ದ ಭೇಟಿ ಮಾಡಿದ ಬ್ರಿಜೇಶ್ ಚೌಟ ಕೆಲವು ಹೊತ್ತು ಮಾತುಕತೆ ನಡೆಸಿದ್ದಾರೆ.

ಮನೆಯೊಂದರಲ್ಲಿ ಮಹಿಳೆಯೊಂದಿಗೆ ಪೊಲೀಸ್​ ಕಾನ್ಸ್​ಟೇಬಲ್​ ನೇಣಿಗೆ ಶರಣು

Posted by Vidyamaana on 2024-05-21 21:20:10 |

Share: | | | | |


ಮನೆಯೊಂದರಲ್ಲಿ ಮಹಿಳೆಯೊಂದಿಗೆ ಪೊಲೀಸ್​ ಕಾನ್ಸ್​ಟೇಬಲ್​ ನೇಣಿಗೆ ಶರಣು

ಹುಬ್ಬಳ್ಳಿ; ಪೊಲೀಸ್ ಪೇದೆಯೊಬ್ಬರು ಮನೆಯೊಂದರಲ್ಲಿ ಮಹಿಳೆಯೊಬ್ಬರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾತೆ.. ಹುಬ್ಬಳ್ಳಿಯ ನವನಗರದ ಗಾಮನಗಟ್ಟಿ ಎಂಬಲ್ಲಿ ಈ ಘಟನೆ ನಡೆದಿದೆ..ಧಾರವಾಡ ಸಂಚಾರಿ ಠಾಣೆ ಪೇದೆ ಮಹೇಶ್ ಹೆಸರೂರು ಹಾಗೂ ವಿಜಯಲಕ್ಷ್ಮಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು..



Leave a Comment: