ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


ನ್ಯೂಸ್ ಕ್ಲಿಕ್ ಸಂಸ್ಥಾಪಕ ಪ್ರಬೀರ್ ಏಳು ದಿನ ಪೊಲೀಸ್ ಕಸ್ಟಡಿಗೆ

Posted by Vidyamaana on 2023-10-04 15:32:43 |

Share: | | | | |


ನ್ಯೂಸ್ ಕ್ಲಿಕ್ ಸಂಸ್ಥಾಪಕ ಪ್ರಬೀರ್ ಏಳು ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿ: ಆನ್ಲೈನ್ ಸುದ್ದಿತಾಣ ನ್ಯೂಸ್ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಅವರನ್ನು 7 ದಿನಗಳ ಕಾಲ ಪೊಲೀಸರ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯುಎಪಿಎ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬಂಧಿತರಾಗಿರುವ ನ್ಯೂಸ್ ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಸಂಸ್ಥೆಯ ಎಚ್ ಆರ್ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಸುದ್ದಿತಾಣವು ಚೀನಾ ಪರ ಪ್ರಚಾರಾಂದೋಲನ ನಡೆಸಲು ಹಣ ಪಡೆದಿದೆ ಎಂಬ ಆರೋಪದ ಅಡಿಯಲ್ಲಿ ಅದರ ವಿರುದ್ಧ ಅಕ್ರಮ ಚಟುವಟಿಕೆಗಳ (ನಿಯಂತ್ರಣ) ಕಾಯ್ದೆಯ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಭೀಕರ ಅಪಘಾತದಲ್ಲಿ ಲಾಸ್ಯ ನಂದಿತಾ ದುರ್ಮರಣ; 10 ದಿನಗಳ ಹಿಂದೆ ನಡೆದ ಅವಘಡದಲ್ಲಿ ಪಾರಾಗಿದ್ದರು!

Posted by Vidyamaana on 2024-02-24 11:39:31 |

Share: | | | | |


ಭೀಕರ ಅಪಘಾತದಲ್ಲಿ ಲಾಸ್ಯ ನಂದಿತಾ ದುರ್ಮರಣ; 10 ದಿನಗಳ ಹಿಂದೆ ನಡೆದ ಅವಘಡದಲ್ಲಿ ಪಾರಾಗಿದ್ದರು!

ಹೈದರಾಬಾದ್ ಫೆಬ್ರುವರಿ 24: ಹೈದರಾಬಾದ್​​ (Hyderab

non

)ನಲ್ಲಿ ಎಸ್‌ಯುವಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತೆಲಂಗಾಣ ಶಾಸಕಿ ಲಾಸ್ಯ ನಂದಿತಾ (Lasya Nanditha) ಸಾವಿಗೀಡಾಗಿದ್ದಾರೆ. 37ರ ಹರೆಯದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕಿ, 10 ದಿನಗಳ ಹಿಂದೆಯಷ್ಟೇ ನರ್ಕಟ್‌ಪಲ್ಲಿಯಲ್ಲಿ ಅಪಘಾತದಲ್ಲಿ ಬದುಕುಳಿದಿದ್ದರು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾಷಣ ಮಾಡುತ್ತಿದ್ದ ರ‍್ಯಾಲಿಗೆ ತೆರಳುತ್ತಿದ್ದ ವೇಳೆ ಪಾನಮತ್ತ ಚಾಲಕನೊಬ್ಬ ಆಕೆಯ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಲ್ಲಿ ಆಕೆಯ ಹೋಮ್ ಗಾರ್ಡ್ ಸಾವಿಗೀಡಾಗಿದ್ದು, ಆಕೆಗೆ ಸಣ್ಣಪುಟ್ಟ ಗಾಯಗಳಾಗಿತ್ತು.ಹೈದರಾಬಾದ್‌ನ ಹೊರ ವರ್ತುಲ ರಸ್ತೆಯಲ್ಲಿ ಆಕೆಯ ವಾಹನ ಮಾರುತಿ ಎಕ್ಸ್‌ಎಲ್ 6 ಚಾಲಕನ ನಿಯಂತ್ರಣ ತಪ್ಪಿ ಲೋಹದ ಡಿವೈಡರ್‌ಗೆ ಡಿಕ್ಕಿ ಹೊಡೆದು ಶುಕ್ರವಾರ ಭೀಕರ ಅಪಘಾತ ಸಂಭವಿಸಿದೆ. ಲಾಸ್ಯ ನಂದಿತಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮುಂಜಾನೆ 5.30ಕ್ಕೆ ಈ ಘಟನೆ ನಡೆದಿದೆ.

ಎರಡೂ ಅಪಘಾತಗಳ ಕುರಿತು ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


37 ವರ್ಷ ವಯಸ್ಸಿನ ಸಿಕಂದರಾಬಾದ್ ಕಂಟೋನ್ಮೆಂಟ್ (SC) ಶಾಸಕರಾಗಿದ್ದ ಲಾಸ್ಯ ಅವರನ್ನು ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಗೆ ಬರುವಾಗಲೇ ಶಾಸಕಿ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದ್ದಾರೆ. 1986 ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದ ಲಾಸ್ಯ ನಂದಿತಾ ಸುಮಾರು ಒಂದು ದಶಕದ ಹಿಂದೆ ರಾಜಕೀಯಕ್ಕೆ ಕಾಲಿಟ್ಟರು. 2023 ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕಂಟೋನ್ಮೆಂಟ್‌ನಿಂದ ಶಾಸಕರಾಗಿ ಆಯ್ಕೆಯಾಗುವ ಮೊದಲು ಅವರು ಕವಾಡಿಗುಡ ವಾರ್ಡ್‌ನಲ್ಲಿ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದ್ದರು.


ತೆಲಂಗಾಣ ಮುಖ್ಯಮಂತ್ರಿ, ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್, ರಾಜ್ಯ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಮತ್ತು ತೆಲಂಗಾಣದ ಹಲವಾರು ಸಚಿವರು ಮತ್ತು ಮುಖಂಡರು ಯುವ ಶಾಸಕರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


ಲಾಸ್ಯ ನಂದಿತಾ ಅವರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ ರೇವಂತ್ ರೆಡ್ಡಿ, ಆಕೆಯ ತಂದೆ ಜಿ ಸಾಯಣ್ಣ ಅವರೊಂದಿಗಿನ ನಿಕಟ ಒಡನಾಟವನ್ನು ಸ್ಮರಿಸಿದರು. ಕಳೆದ ವರ್ಷ ಫೆಬ್ರವರಿಯಲ್ಲಿ ಸಾಯಣ್ಣ ಮೃತಪಟ್ಟಿದ್ದು ಅದೇ ತಿಂಗಳಲ್ಲಿ (ಒಂದು ವರ್ಷದ ಅವಧಿಯಲ್ಲಿ) ಲಾಸ್ಯ ನಂದಿತಾ ಸಾವಿಗೀಡಾಗಿದ್ದಾರೆ.

ಉಳ್ಳಾಲದಲ್ಲಿ ಸೈಟ್ ಅಭಿವೃದ್ಧಿ ಹೆಸರಲ್ಲಿ ಬಿಲ್ಡರ್‌ನಿಂದ 86 ಲಕ್ಷ ಹಣ ಪಡೆದು ವಂಚನೆ ; ಮಂಗಳೂರಿನ ಬ್ಯಾಂಕ್‌ ಮ್ಯಾನೇಜರ್‌ ಸೇರಿ ನಾಲ್ವರ ಮೇಲೆ ಕೇಸು ದಾಖಲು

Posted by Vidyamaana on 2024-05-29 05:56:24 |

Share: | | | | |


ಉಳ್ಳಾಲದಲ್ಲಿ ಸೈಟ್ ಅಭಿವೃದ್ಧಿ ಹೆಸರಲ್ಲಿ ಬಿಲ್ಡರ್‌ನಿಂದ 86 ಲಕ್ಷ ಹಣ ಪಡೆದು ವಂಚನೆ ; ಮಂಗಳೂರಿನ ಬ್ಯಾಂಕ್‌ ಮ್ಯಾನೇಜರ್‌ ಸೇರಿ ನಾಲ್ವರ ಮೇಲೆ ಕೇಸು ದಾಖಲು

ಮಂಗಳೂರು, ಮೇ.27: ಸೈಟ್ ಅಭಿವೃದ್ಧಿ ಪಡಿಸುವ ನೆಪದಲ್ಲಿ ಬಿಲ್ಡರ್‌ ಒಬ್ಬರಿಂದ 86 ಲಕ್ಷ ರೂ. ಹಣ ಪಡೆದು ವಂಚಿಸಿ, ಲೇಔಟ್‌ ವ್ಯವಹಾರಕ್ಕೆ ಅಡ್ಡಿಪಡಿಸಿ,  ಜೀವ ಬೆದರಿಕೆಯೊಡ್ಡಿದ ಆರೋಪದಲ್ಲಿ ರಾಷ್ಟ್ರೀಕೃತ ಬ್ಯಾಂಕೊಂದರ ಮ್ಯಾನೇಜರ್‌ ಸಹಿತ ಬ್ರೋಕರ್‌, ಸಿವಿಲ್‌ ಗುತ್ತಿಗೆದಾರನ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್‌ ಆಗಿರುವ ಜೆಪ್ಪಿನಮೊಗರು ನಿವಾಸಿ ಪವನ್‌ ಕುಮಾರ್‌, ಬ್ರೋಕರ್‌ ಆಗಿರುವ ಗುರುರಾಜ್‌, ಸಿವಿಲ್‌ ಗುತ್ತಿಗೆದಾರ ಜಗದೀಶ್‌ ಹಾಗೂ ಅವರ ಸಹಚರ ಜಯಪ್ರಕಾಶ್‌ ಜೆ.ಪಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಳ್ಳಾಲದ ಪುಷ್ಪರಾಜ್ ಎಂಬವರು ಬೆಂಗಳೂರು ಮೂಲದ ವೆಂಕಟೇಶ್ ಮತ್ತು ಮಹೇಶ್ ಕುಮಾರ್ ಎಂಬಿಬ್ಬರು ಬಿಲ್ಡರ್‌ ಗಳ ಜೊತೆಗೂಡಿ ಮಂಗಳೂರಿನಲ್ಲಿ ಲೇಔಟ್‌ ನಿರ್ಮಿಸಿ ಸಾರ್ವಜನಿಕವಾಗಿ ಸೈಟ್‌ ಮಾರಾಟ ಮಾಡಲು ಯೋಜನೆ ಹಾಕಿದ್ದರು. ಇದೇ ಸಂದರ್ಭ ಬ್ಯಾಂಕ್‌ ಮ್ಯಾನೇಜರ್‌ ಪವನ್‌ ಕುಮಾರ್‌ ಎಂಬಾತ ಪರಿಚಯವಾಗಿದ್ದು ತನ್ನ ಮೂಲಕ ಉಳ್ಳಾಲದಲ್ಲಿ ನಾಲ್ಕು ಎಕ್ರೆ ಜಮೀನನ್ನು ಕ್ರಯಕ್ಕೆ ಕೊಡಿಸಿದ್ದರು. 2022ರ ಫೆಬ್ರವರಿ ತಿಂಗಳಲ್ಲಿ ನಿವೇಶನಗಳನ್ನು ವಿಂಗಡಿಸಿ ಮಾರಾಟ ಮಾಡಲು ಆರಂಭಿಸಿದ್ದರು. ಈ ಬಗ್ಗೆ ಪವನ್‌ ಕುಮಾರ್‌, ಬಿಲ್ಡರ್‌ ಅವರಲ್ಲಿ  ಲೇಔಟ್‌ನ ಡ್ರೈನೇಜ್‌ ಇನ್ನಿತರ ಕೆಲಸಗಳನ್ನು ತಾನೇ ಮಾಡಿಸುತ್ತೇನೆಂದು ಹೇಳಿ ಮಾತುಕತೆ ನಡೆಸಿದ್ದರು.

ಶಾಸಕರ ಇಂದಿನ ಕಾರ್ಯಕ್ರಮ ಆ 27

Posted by Vidyamaana on 2023-08-26 23:18:35 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 27

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 27 ರಂದು

ಬೆಳಿಗ್ಗೆ 10 ಕ್ಕೆತುಳು ಅಪ್ಪೆ ಕೂಟದ ವತಿಯಿಂದ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ತುಳು ಕಾರ್ಯಕ್ರಮ

11 ಗಂಟೆಗೆ ಮುರದಲ್ಲಿ‌ಶಿವ ಸದನ‌ಲೋಕಾರ್ಪಣೆ

12 ಗಂಟೆಗೆ ಬಿರ್ವೆರ್ ಸಂಘದಿಂದ ಕೆಸರುಗೊಬ್ಬು‌ ಮಂಜಲ್ಪಡ್ಪುವಿನಲ್ಲಿ

ಅಕ್ಷಯ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅಕ್ಷಯ ಗುರು ಪುರಸ್ಕಾರ ಕಾರ್ಯಕ್ರಮ

Posted by Vidyamaana on 2023-09-14 17:50:42 |

Share: | | | | |


ಅಕ್ಷಯ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅಕ್ಷಯ ಗುರು ಪುರಸ್ಕಾರ ಕಾರ್ಯಕ್ರಮ

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಆಯೋಜನೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಅಕ್ಷಯ ಗುರು ಪುರಸ್ಕಾರ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಡಿ ಮಹೇಶ್ ರೈ,ನಿವೃತ್ತ ಕನ್ನಡ ಪ್ರಾಧ್ಯಾಪಕರು ವಿವೇಕಾನಂದ ಕಾಲೇಜು ಪುತ್ತೂರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ, ಯಾವಾಗ ತಾನೇ ಕಲಿಸಿದ ವಿದ್ಯಾರ್ಥಿ ಶಿಕ್ಷಕನನ್ನು ಮೀರಿ ಬೆಳೆದು ಉನ್ನತಸ್ಥಾನಕ್ಕೇರುತ್ತಾನೋ, ಅಂದು ಶಿಕ್ಷಕನ ಜೀವನ ಸಾರ್ಥಕ ಎಂದರು.


ಅಕ್ಷಯ ಗುರು ಪುರಸ್ಕಾರವನ್ನು ದಯಾನಂದ ರೈ ಕರ‍್ಮಂಡ, ರಾಜ್ಯ ಪ್ರಶಸ್ತಿ ವಿಜೇತರು,ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಕೋಟಿಯಪ್ಪ ಪೂಜಾರಿ ಸೇರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ನಾರಾಯಣ ಕೆ ನಿವೃತ್ತ ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಉಪ್ಪಳಿಗೆ, ರವೀಶ್ ಪಡುಮಲೆ ಸಹಪ್ರಾಧ್ಯಾಪಕರು, ಎಸ್ ಡಿ ಎಂ ಎಂಜಿನಿಯರಿಂಗ್ ಕಾಲೇಜು ಉಜಿರೆ, ಶುಭಲತಾ ಹಾರಾಡಿ,ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು,ಮುಖ್ಯಗುರುಗಳು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ, ಸಂಧ್ಯಾ ರವೀಶ್ಚಂದ್ರ, ನಿವೃತ್ತ ಅಂಗನವಾಡಿ ಕರ‍್ಯರ‍್ತೆ ಸಂಪ್ಯ, ಉದಯಕುಮಾರ್ ರೈ ಎಸ್, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು, ಸಹ ಶಿಕ್ಷಕರು ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಡಾಕ್ಟರ್ ರವೀಶ್ ಪಡುಮಲೆಯವರು ತಮ್ಮ ಸನ್ಮಾನವನ್ನು ಗುರುಗಳಾದ ರಘುನಾಥ ರೈ ಅವರಿಗೆ ಅರ್ಪಿಸಿದರು.

ಶುಭಲತಾ ಹಾರಾಡಿಯವರು ಶಾಶ್ವತವಾದ ಆನಂದ ನಮ್ಮೊಳಗೆ ಇದೆ ಅದನ್ನು ನಾವು ಕಂಡುಕೊಳ್ಳಬೇಕು ಎಂದು ಹೇಳಿದರು.

ಕೋಟಿಯಪ್ಪ ಪೂಜಾರಿ ಸೇರ ಅವರು ತಮ್ಮ ಒಕ್ಕಣೆಯ ಮೂಲಕ ಕಾಲೇಜಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಅತಿಥಿಗಳಾಗಿ ಆಗಮಿಸಿದ ವಿದ್ಯಾಮಾತಾ ಅಕಾಡೆಮಿ ನಿರ್ದೆಶಕ ಭಾಗ್ಯೇಶ್ ರೈ  ಮಾತನಾಡಿ ನಿಮ್ಮ ಬದುಕನ್ನ ಪ್ರೀತಿಸಿ, ಇನ್ನೊಬ್ಬರ ಬದುಕನ್ನ ಗೌರವಿಸಿ ಎಂದು ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳನ್ನು ತಿಳಿಸಿದರು.


ಅಧ್ಯಕ್ಷ ನೆಲೆಯಲ್ಲಿ ಮಾತನಾಡಿದ, ಜಯಂತ ನಡುಬೈಲು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಗೌರವಿಸುವುದು ನಮ್ಮ ಭಾಗ್ಯ ಎಂದರು.


ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ನಾಯಕ ವಿನೋದ್ ಕೆ ಸಿ ಹಾಗೂ ಕಾರ್ಯದರ್ಶಿ ಶೈಲಾಶ್ರೀ ಉಪಸ್ಥಿತರಿದ್ದರು. ಅಕ್ಷಯ ಗುರುಪುರಸ್ಕಾರದ ಸನ್ಮಾನ ಪತ್ರವನ್ನು ಕುಮಾರಿ ಭವ್ಯಶ್ರೀ ಬಿ, ಓದಿದರು. ರಶ್ಮಿ ಕೆ,ಮತ್ತು ಕಿಶನ್ ರಾವ್, ಪ್ರಕೃತಿ ಮತ್ತು ಬಳಗದಿಂದ ಪ್ರಾರ್ಥನೆ ನಡೆಯಿತು.


ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ಸ್ವಾಗತಿಸಿ, ಆಡಳಿತಾಧಿಕಾರಿ ಅರ್ಪಿತ್ ಟಿಎ ವಂದಿಸಿದರು. ಪ್ರಾಂಶುಪಾ ಸಂಪತ್ ಪಕ್ಕಳ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕಿ ಆಶಿಕಾ ಕಾರ್ಯಕ್ರಮ ನಿರೂಪಿಸಿದರು

ಇಂದು (ಆ 11)ದ.ಕ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

Posted by Vidyamaana on 2023-08-11 01:57:38 |

Share: | | | | |


ಇಂದು (ಆ 11)ದ.ಕ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಮಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಆ.11ರಂದು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.

ವಿಮಾನದ ಮೂಲಕ ಅವರು ಆ.11ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಮಧ್ಯಾಹ್ನ 12.30ಕ್ಕೆ ಪುತ್ತೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವರು.


 ಮಧ್ಯಾಹ್ನ 2 ಗಂಟೆಗೆ ಪುತ್ತೂರು ನಿರೀಕ್ಷಣಾ ಮಂದಿರಲ್ಲಿ ವಾಸ್ತವ್ಯ ಮಾಡಿ, ಮಧ್ಯಾಹ್ನ 3 ಗಂಟೆಗೆ ಪುತ್ತೂರು ಸಾರ್ವಜನಿಕ ಆಸ್ಪತ್ರೆ ತಪಾಸಣೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು.


ಸಂಜೆ 6 ಗಂಟೆಗೆ  ದರ್ಭೆಯಲ್ಲಿರುವ ಪುತ್ತೂರು ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಮತ್ತು ಕಾರ್ಯಕರ್ತರ ಅಹವಾಲು ಸ್ವೀಕರಿಸಿ, ಕಾರ್ಯಕರ್ತರೊಂದಿಗೆ ವಿಚಾರ ವಿನಿಮಯ ಮಾಡುವರು. ರಾತ್ರಿ 8.30ಕ್ಕೆ ಮಂಗಳೂರಿಗೆ ಆಗಮಿಸಿ, 9.50ಕ್ಕೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Recent News


Leave a Comment: