ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಗ್ರಾಮೀಣ ರೈತ ಮಹಿಳೆಯರಿಗೆ ನಾಟಿಕೋಳಿ ಮರಿ ಉಚಿತ ವಿತರಣೆ

Posted by Vidyamaana on 2022-12-15 14:01:10 |

Share: | | | | |


ಗ್ರಾಮೀಣ ರೈತ ಮಹಿಳೆಯರಿಗೆ ನಾಟಿಕೋಳಿ ಮರಿ ಉಚಿತ ವಿತರಣೆ

ಪುತ್ತೂರು: ಪೌಷ್ಠಿಕತೆ ಹಾಗೂ ರುಚಿಯ ಜತೆಗೆ ರೋಗ ನಿರೋಧಕ ಶಕ್ತಿ ಹೊಂದಿರುವ ನಾಟಿ ಕೋಳಿ ಮರಿಗಳನ್ನು ಸಾಕುವ ಉದ್ದೇಶದಿಂದ ರಾಜ್ಯ ಸರಕಾರದ ಕುಕ್ಕುಟ ಮಹಾ ಮಂಡಳಿ ನಿಗಮ ಬೆಂಗಳೂರು ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪುತ್ತೂರು ಇದರ ಗ್ರಾಮೀಣ ಭಾಗದ ಅರ್ಹ ರೈತ ಮಹಿಳೆಯರಿಗೆ ಉಚಿತ ನಾಟಿ ಕೋಳಿ ಮರಿಗಳನ್ನು ಪುತ್ತೂರು ಪಶುಸಂಗೋಪನಾ ಇಲಾಖೆಯ ಕಚೇರಿಯಲ್ಲಿ ಉಚಿತವಾಗಿ ವಿತರಿಸಲಾಯಿತು.

ನಾಟಿ ಕೋಳಿ ಮರಿ ವಿತರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಗ್ರಾಮೀಣ ಭಾಗದ ರೈತ ಮಹಿಳೆಯರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆಯಿಂದ ಉಚಿತವಾಗಿ ನಾಟಿಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ. ನೂರಿನ್ನೂರು ಕೋಳಿಮರಿಗಳನ್ನು ಸಾಕಿಕೊಂಡು, ಜೀವನವನ್ನು ಸುಗಮವಾಗಿ ಸಾಗಿಸಬಹುದು ಎಂದು ಹೇಳಿದರು.

ರೈತ ಮಹಿಳೆಯರ ಆದಾಯ ಹೆಚ್ಚಿಸುವ ನಿಟ್ಟನಲ್ಲಿ ಸರಕಾರ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಲ್ಲಿ ಇದು ಕೂಡ ಒಂದು. ಐವತ್ತು ಸಾವಿರ ಕೋಳಿಮರಿಗಳನ್ನು ಸಾಕಿಕೊಂಡು, ಕುಕ್ಕುಟೋದ್ಯಮ ನಡೆಸುವ ಉದ್ಯಮಿಗಳನ್ನು ನಾವು ಕಾಣುತ್ತೇವೆ. ಆದರೆ ನೂರಿನ್ನೂರು ನಾಟಿ ಕೋಳಿ ಮರಿಗಳನ್ನು ಸಾಕಿಕೊಂಡು ಉದ್ಯಮ ನಡೆಸುತ್ತಾ, ಉತ್ತಮ ಜೀವನ ಸಾಗಿಸಬಹುದು ಎಂದು ಅವರು ಹೇಳಿದರು.

ಮೈಸೂರು ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿ ನಿಗಮದ ಜಾನುವಾರು ಅಭಿವೃದ್ಧಿ ಅಧಿಕಾರಿ ಶಿವಮೂರ್ತಿ, ಕಚೇರಿ ಸಿಬ್ಬಂದಿ ಅಮೃತ್ ಉಪಸ್ಥಿತರಿದ್ದರು.

ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಸ್ವಾಗತಿಸಿ, ಜಾನುವಾರು ಅಭಿವೃದ್ಧಿ ಅಧಿಕಾರಿ ಶಿವಪ್ರಸಾದ್ ವಂದಿಸಿದರು.


ಶಾಸಕರ ಇಂದಿನ ಕಾರ್ಯಕ್ರಮ ಆ 12

Posted by Vidyamaana on 2023-08-11 23:13:55 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 12

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 12 ರಂದು


ಬೆಳಿಗ್ಗೆ 10 ಗಂಟೆಗೆ ಪಡ್ನೂರು ಗ್ರಾಮದ ಪರಂಬಾಜೆ ಎಂಬಲ್ಲಿ ತಾಳೆ ಕೃಷಿ ಬಗ್ಗೆ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಕಾರ್ಯಕ್ರಮ ಇದರ ಉದ್ಘಾಟನೆ



11 ಗಂಟೆಗೆ ಸಾಮೆತ್ತಡ್ಕ ಸರಕಾರಿ ಶಾಲೆಯಲ್ಲಿ ಕೊಠಡಿ ಉದ್ಘಾಟನೆ



11.30 ಕ್ಕೆ ಮೌಂಟನ್ ವ್ಯೂ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮ


12.30 ಕ್ಕೆ ಪಾಪೆಮಜಲು ಸರಕಾರಿ ಪ್ರೌಢ ಶಾಲೆಯಲ್ಲಿ ಅಭಿನಂದನಾ  ಕಾರ್ಯಕ್ರಮದ ಲ್ಲಿ ಭಾಗವಹಿಸಲಿದ್ದಾರೆ

ಹಂಡಿ ಗುಂಡಿ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿ ಮರಳಿ ಬರಲು ದಾರಿ ಕಾಣದೆ ಸಿಕ್ಕಿಬಿದ್ದು ಮಹಿಳೆಯರು ಪೊಲೀಸರಿಂದ ರಕ್ಷಣೆ

Posted by Vidyamaana on 2023-12-19 04:52:15 |

Share: | | | | |


ಹಂಡಿ ಗುಂಡಿ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿ ಮರಳಿ ಬರಲು ದಾರಿ ಕಾಣದೆ ಸಿಕ್ಕಿಬಿದ್ದು ಮಹಿಳೆಯರು  ಪೊಲೀಸರಿಂದ ರಕ್ಷಣೆ

ಬೆಂಗಳೂರು: ಆರು ಮಂದಿ ಮಹಿಳೆಯರು ರಾಮನಗರ ಬಳಿಯ ಹಂಡಿ ಗುಂಡಿ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿ ಮರಳಿ ಬರಲು ದಾರಿ ಕಾಣದೆ ಸಿಕ್ಕಿಬಿದ್ದು ಕೊನೆಗೆ ಪೊಲೀಸರು ರಕ್ಷಿಸಿದ ಘಟನೆ ನಡೆದಿದೆ.


ಮಹಿಳೆಯರು ರಾಮನಗರ ಜಿಲ್ಲೆಯ ಬಸವನಪುರ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕಾರು ನಿಲ್ಲಿಸಿ ಅಲ್ಲಿಂದ ಹಂಡಿ ಗುಂಡಿ ಬೆಟ್ಟದ ಕಾಡಿನಲ್ಲಿ ಟ್ರಕ್ಕಿಂಗ್ ತೆರಳಿದ್ದರು. ಸಂಜೆ ವೇಳೆಗೆ ಬೆಟ್ಟದಿಂದ ಇಳಿದು ಬರುತ್ತಿದ್ದಾಗ ರಸ್ತೆ ಸಿಗಲಿಲ್ಲ. ರಾತ್ರಿಯಾದರೂ ಅತ್ತಿತ್ತ ಹುಡುಕಾಡಿ ರಸ್ತೆ ಸಿಗದೇ ಇದ್ದುದರಿಂದ 7.15ರ ಸುಮಾರಿಗೆ 112 ನಂಬರಿಗೆ ಫೋನ್ ಮಾಡಿದ್ದರು.


ಕೂಡಲೇ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಗಸ್ತಿನಲ್ಲಿದ್ದ ರಾಜೇಶ್ ಮತ್ತು ರಮೇಶ್ ಆ ಭಾಗದಲ್ಲೇ ಇದ್ದುದರಿಂದ ಅವರಿಗೆ ಸಂದೇಶ ಹೋಗುತ್ತದೆ. 7.30ರ ಸುಮಾರಿಗೆ ಮಹಿಳೆಯರನ್ನು ಫೋನಲ್ಲಿ ಸಂಪರ್ಕಿಸಿದ ಪೊಲೀಸರು, ನೀವು ಯಾವುದೇ ಆತಂಕ ಪಡುವುದು ಬೇಡ. ನಾವು ಹುಡುಕಿ ಬರುತ್ತೇವೆ ಎಂದು ಹೇಳಿದ್ದಾರೆ. ಆದರೆ ಪೊಲೀಸರ ವಾಹನವನ್ನೂ ಬೆಟ್ಟಕ್ಕೆ ಒಯ್ಯಲಾಗದೆ ಅರ್ಧಕ್ಕೆ ನಿಲ್ಲಿಸಿದ್ದಾರೆ.


ರಾತ್ರಿ 8.30ರ ವೇಳೆಗೆ ಸ್ಥಳೀಯ ಸಾರ್ವಜನಿಕರ ಸಹಾಯ ಪಡೆದು ಪೊಲೀಸರು ಟಾರ್ಚ್ ಲೈಟ್ ಹಿಡಿದು ಕಾಡಿನಲ್ಲಿ ಹುಡುಕಾಡಿದ್ದಾರೆ. ಎರಡು ಕಿಮೀ ಉದ್ದಕ್ಕೆ ಕಾಡಿನಲ್ಲಿ ನಡೆದ ಬಳಿಕ ಮಹಿಳೆಯರು ಸಿಕ್ಕಿದ್ದು, ಮರಳಿ ರಸ್ತೆಗೆ ತಲುಪಿಸಿದ್ದಾರೆ. ಹಂಡಿ ಗುಂಡಿ ಬೆಟ್ಟದಲ್ಲಿ ಕರಡಿ, ಚಿರತೆಗಳಿದ್ದು, ಅದೃಷ್ಟವಶಾತ್ ಮಹಿಳೆಯರಿಗೆ ತೊಂದರೆ ಮಾಡಿಲ್ಲ. 112 ಗೆ ಕರೆ ಮಾಡಲು ಫೋನ್ ನೆಟ್ವರ್ಕ್ ಸಿಕ್ಕಿದ್ದರಿಂದ ಬಚಾವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯರು ಬನ್ನೇರುಘಟ್ಟ ಆಸುಪಾಸಿನಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ.

ಪುತ್ತೂರು : ಇಂದು (ಜು 13) ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ

Posted by Vidyamaana on 2023-07-12 23:15:01 |

Share: | | | | |


ಪುತ್ತೂರು : ಇಂದು (ಜು 13) ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11 ಕೆವಿ ಮತ್ತೂರ ವಿದ್ಯುತ್‌ ಕೇಂದ್ರದಿಂದ ರಾಮಕುಂಜ ಫೀಡರ್‌ನಲ್ಲಿ ಮತ್ತು 33/11 ಕೆವಿ ಕ್ಯಾಂಪೋ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮುಕ್ರಂಪಾಡಿ, ಮುಕ್ವೆಮುಂಡೂರು ಫೀಡರ್‌ಗಳಲ್ಲಿ ಜು.13ರಂದು ಪೂರ್ವಾಹ ಗಂಟೆ 10ರಿಂದ ಅಪರಾಹ್ನ 5ರವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು ಆದುದರಿಂದ, 10/33/11 ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಮತ್ತು 33/11ಕೆಎ ಕ್ಯಾಂಪ್ಕೋ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್ ಗಳಿ೦ದ ವಿದ್ಯುತ್‌ ಸರಬರಾಜಾಗುವ ರಾಮಕು೦ಜ, ಹಿರೇಬಂಡಾಡಿ, ಬೆಳ್ಳಿಪ್ಪಾಡಿ ಕೋಡಿಂಬಾಡಿ, ಕೂರ್ನಡ್ಕ, ಕೆಮ್ಮಿಂಜೆ, ಮರೀಲ್‌, ಮುಕ್ರಂಪಾಡಿ, ಮೊಟ್ಟೆತ್ತಡ ಮುಂಡೂರು ಮತ್ತು ಸಂಪ್ಯ ಪರಿಸರದ ವಿದ್ಯುತ್‌ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಕ್ರೈಸ್ತ ಬಾಂಧವರಿಂದ ಚರ್ಚ್ ಗಳಲ್ಲಿ ಶ್ರದ್ಧಾ ಭಕ್ತಿಯ ಗುಡ್ ಫ್ರೈಡೇ ಆಚರಣೆ

Posted by Vidyamaana on 2023-04-08 06:51:01 |

Share: | | | | |


ಕ್ರೈಸ್ತ ಬಾಂಧವರಿಂದ ಚರ್ಚ್ ಗಳಲ್ಲಿ ಶ್ರದ್ಧಾ ಭಕ್ತಿಯ ಗುಡ್ ಫ್ರೈಡೇ ಆಚರಣೆ

ಪುತ್ತೂರು:ಏ .7 ರಂದು ಪ್ರಭು ಯೇಸುಕ್ರಿಸ್ತರನ್ನು ಶಿಲುಬೆಗೇರಿಸುವ ದಿನವಾದ ಗುಡ್‌ ಫ್ರೈಡೇ(ಶುಭ ಶುಕ್ರವಾರ) ದಿನವನ್ನು ವಿಶ್ವದಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು, ಪುತ್ತೂರು ತಾಲೂಕಿನ ಚರ್ಚ್ಗಳಲ್ಲಿಯೂ ಗುಡ್‌ ಫ್ರೈಡೇ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಅದರಂತೆ ಪುತ್ತೂರಿನ ಮಾಯಿದೆ ದೇವುಸ್ ಚರ್ಚ್, ಮರೀಲಿನ ಸೆಕ್ರೇಡ್ ಹಾರ್ಟ್ ಚರ್ಚ್, ಬನ್ನೂರಿನ ಸಂತ ಅಂತೋನಿ ಚರ್ಚ್, ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯ, ಬೆಳ್ಳಾರೆ ಚರ್ಚ್ ಸಹಿತಿ ಇನ್ನಿತರ ಚರ್ಚ್ ಗಳಲ್ಲಿ ಗುಡ್‌ ಫ್ರೈಡೇ ದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಆಯಾ ಚರ್ಚ್‌ ನ ಪಾಲನಾ ಸಮಿತಿಯ ಉಪಾಧ್ಯಕ್ಷ, ಕಾರ್ಯದರ್ಶಿ, ಚರ್ಚ್ ಪಾಲನಾ ಸಮಿತಿ ಸದಸ್ಯರು, ಸ್ಯಾಕ್ರಿಸ್ಟಿಯನ್, ಗುರಿಕಾರರು, ಧರ್ಮಭಗಿನಿಯರು, ವೇದಿ ಸೇವಕರು, ಗಾಯನ ಮಂಡಳಿ ಸದಸ್ಯರು ಸಹಕರಿಸಿದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಧಾರ್ಮಿಕ ವಿಽವಿಧಾನಗಳಲ್ಲಿ ಪಾಲ್ಗೊಂಡರು.

ಮಾಯಿದೆ ದೇವುಸ್ ಚರ್ಚ್ನಲ್ಲಿ ಗುಡ್‌ ಫ್ರೈಡೇ ದಿನದ ಅಂಗವಾಗಿ ಯೇಸುಕ್ರಿಸ್ತರ ಪೂಜ್ಯ ಶರೀರದೊಂದಿಗೆ ಕ್ರೈಸ್ತ ವಿಶ್ವಾಸಿ ಭಕ್ತರು ಚರ್ಚ್-ಕೋರ್ಟ್ರೋಡ್-ಎಂ.ಟಿರೋಡ್ ಮುಖೇನ ಯೇಸುಕ್ರಿಸ್ತರ ಸ್ಮರಣಾ ಮೆರವಣಿಗೆಯನ್ನು ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಳ್ಳಲಾಯಿತು. ಬನ್ನೂರು ಚರ್ಚ್ನಲ್ಲಿ ಚರ್ಚ್ನಿಂದ ಆನೆಮಜಲು ಕೋರ್ಟ್ ಮುಖೇನ ಸಾಗಿ ಪುನಹ ಚರ್ಚ್ಗೆ ಆಗಮಿಸುವ ಹಾದಿಯಲ್ಲಿ ಯೇಸುಕ್ರಿಸ್ತರ ಶಿಲುಬೆಯ ಹಾದಿಯ 14 ಸ್ಥಳಗಳನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮಾಯಿದೆ ದೇವುಸ್ ಚರ್ಚ್ನಲ್ಲಿ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ ಸೋಜ, ವಂ|‌ಸ್ಟ್ಯಾನಿ ಪಿಂಟೋ, ವಂ|ಅಶೋಕ್ ರಾಯನ್ ಕ್ರಾಸ್ತಾ, ಬನ್ನೂರು ಚರ್ಚ್ ನಲ್ಲಿ ವಂ|ಬಾಲ್ತಜಾರ್ ಪಿಂಟೋ, ಹಿರಿಯ ಧರ್ಮಗುರು ವಂ|ಆಲ್ಪೋನ್ಸ್ ಮೊರಾಸ್, ಮರೀಲು ಚರ್ಚ್ ನಲ್ಲಿ ವಂ|ವಲೇರಿಯನ್ ಫ್ರ್ಯಾಂಕ್, ವಂ|ಡೆನ್ಜಿಲ್ ಲೋಬೊ, ಉಪ್ಪಿನಂಗಡಿ ಚರ್ಚ್‌ ನ ಲ್ಲಿ ವಂ|ಅಬೆಲ್ ಲೋಬೊ ನೇತೃತ್ವದಲ್ಲಿ ನಡೆಯಿತು.

ಶಿಲುಬೆಯ ಮೇಲೆ ಯೇಸುಕ್ರಿಸ್ತರು ಪ್ರಾಣ ಬಿಟ್ಟ ದಿನ ಇಡೀ ವಿಶ್ವಕ್ಕೆ ಬೇಸರದ ದಿನ(ಕಪ್ಪು ದಿನ)ವಾಗಿ ಪರಿಣಮಿಸಿದರೂ, ತನ್ನನ್ನು ತಾನು ಸಮರ್ಪಿಸಿಕೊಂಡು ಜನರಲ್ಲಿ ಪರಸ್ಪರ ಸೌಹಾರ್ದತೆ, ಮಾನವೀಯತೆ, ಪ್ರೀತಿ, ಕ್ಷಮಾಪಣಾ ಗುಣವನ್ನು ಬೋಽಸಿದ್ದು ಕ್ರೈಸ್ತ ಬಾಂಧವರಿಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ. ಯೇಸುಕ್ರಿಸ್ತರ ಶಿಲುಬೆಯು ನಮ್ಮಲ್ಲಿ ಹೊಸ ಜೀವನ, ಸಾಂತ್ವನವುಳ್ಳ, ಸಮಾಧಾನದ ಪ್ರತೀಕವಾಗಿದೆ ಮಾತ್ರವಲ್ಲದೆ ಕುಟುಂಬದ ಪಾವಿತ್ರ‍್ಯತೆಯನ್ನು ಹೆಚ್ಚಿಸುತ್ತದೆ. ಯೇಸುಕ್ರಿಸ್ತರು ಸಾವಿಗೆ ಶರಣಾಗಲಿಲ್ಲ. ಸಾವನ್ನು ಲೆಕ್ಕಿಸದೆ ತಾವು ನಂಬಿದ ಮೌಲ್ಯಗಳಿಗಾಗಿ ನಿಂತರು. ಆತನ ಹಿಂಬಾಲಕರಾದ ನಾವು ಸಹ ನಿಲ್ಲಬೇಕಾದ್ದು ಅವರ ಮೌಲ್ಯಗಳಿಗಾಗಿ, ಸಾಗಬೇಕಾದ್ದು ಅವರದೇ ಗುರಿಯತ್ತ. ಶಿಲುಬೆಯ ಮೇಲೆ ಪ್ರಾಣ ಬಿಟ್ಟ ಪ್ರಭು ಯೇಸುಕ್ರಿಸ್ತರು ನಮ್ಮಲ್ಲಿ ಪರಸ್ಪರ ಕ್ಷಮೆ, ಬೆಳಕು ಚೆಲ್ಲುವ ಮತ್ತು ಅರ್ಪಣಾ ಭಾವದ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ. ಆದ್ದರಿಂದ ಯೇಸುಕ್ರಿಸ್ತರ ಶಿಲುಬೆಯ ಮುಖಾಂತರದ ಪ್ರಾಣ ತ್ಯಾಗ ಮನುಜನ ಪಾಪ ಪರಿಹಾರಕ್ಕಾಗಿದೆ ಎಂಬುದು ಗುಡ್‌ ಫ್ರೈಡೇ ದಿನದ ಸಂದೇಶವಾಗಿದೆ.

ಬಂಟ್ವಾಳ – ಸಿಸಿಟಿವಿಯಲ್ಲಿ ಸೆರೆಯಾದ ಹೆಲ್ಮೆಟ್ ಧರಿಸಿದ ಕಳ್ಳನ ಕರಾಮತ್

Posted by Vidyamaana on 2023-12-11 20:58:42 |

Share: | | | | |


ಬಂಟ್ವಾಳ – ಸಿಸಿಟಿವಿಯಲ್ಲಿ ಸೆರೆಯಾದ ಹೆಲ್ಮೆಟ್ ಧರಿಸಿದ ಕಳ್ಳನ ಕರಾಮತ್

ಬಂಟ್ವಾಳ: ಅಂಗಡಿಗಳಿಗೆ ನುಗ್ಗಿ ಸರಣಿ ಕಳವು ಮಾಡಿದ ಘಟನೆ ಬಿಸಿರೋಡಿನ ಕೈಕಂಬ ಎಂಬಲ್ಲಿ ಆದಿತ್ಯವಾರ ರಾತ್ರಿ ವೇಳೆನಡೆದಿದೆ. ಬಿ.ಸಿ.ರೋಡಿನ ಕೈಕಂಬದಲ್ಲಿ ಒಟ್ಟು 12 ಅಂಗಡಿಗಳಿಗೆ ಕಳ್ಳನೋರ್ವ ನುಗ್ಗಿ ಜಾಲಾಡಿ ಬಳಿಕ ಮೂರು ಅಂಗಡಿಗಳಿಗೆ ನುಗ್ಗಿದ್ದಾನೆ. ಇದರಲ್ಲಿ ಮೂರು ಅಂಗಡಿಗಳಿಂದ ಸುಮಾರು 61 ಸಾವಿರ ರೂ ಕಳವು ಮಾಡಿದ್ದಾನೆ‌.ಇಲ್ಲಿನ ಡಿಶ್ ಟಿ.ವಿ .ರಿಚಾರ್ಜ್ ಅಂಗಡಿಯೊಂದರಲ್ಲಿ ಇಡಲಾಗಿದ್ದ ಸುಮಾರು 52 ಸಾವಿರ ನಗದು, ಸಾಯಿ ಲೀಲಾ ಹೋಟೆಲ್ ನ 6 ಸಾವಿರ ಹಾಗೂ ಇನ್ನೊಂದು ಅಂಗಡಿಯಿಂದ 3 ಸಾವಿರ ರೂ ನಗದು ಕಳವು ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಕಳ್ಳರು ಇಲ್ಲಿನ ಹೊಟೇಲ್, ಸಹಕಾರಿ ಸಂಘಗಳ ಕಚೇರಿ ಸಹಿತ ಮತ್ತಿತರ ಅಂಗಡಿಗಳಿಗೆ ನುಗ್ಗಿ ಜಾಲಾಡಿ ವಾಪಸು ಹೋಗಿದ್ದಾನೆ.ಶನಿವಾರ ರಾತ್ರಿ ವೇಳೆ ಭಾರಿ ಮಳೆ ಇದ್ದು, ಕಳ್ಳ ಇದೇ ಸಮಯವನ್ನು ಬಂಡವಾಳವಾಗಿ ಸಿಕೊಂಡು ಕಳವು ಮಾಡಿರಬೇಕು ಎಂದು ಹೇಳಲಾಗಿದೆ. ಕಳ್ಳ ನೋರ್ವ ಬೈಕಿನಲ್ಲಿ ಬಂದು ಅಬಳಿಕ ಹೆಲ್ಮಟ್ ಧರಿಸಿ ಅಂಗಡಿಗಳಿಗೆ ನುಗ್ಗಿದ ಬಗ್ಗೆ ಇಲ್ಲಿನ ಸಿ.ಸಿ‌.ಟಿವಿಯಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ. ಬಂಟ್ವಾಳ ‌ನಗರ ಠಾಣಾ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ,ಕಳ್ಳ ನಿಗಾಗಿ ಬಲೆ ಬೀಸಿದ್ದಾರೆ.



Leave a Comment: