ಪುತ್ತೂರು: ನೇಣು ಬಿಗಿದು ಅನ್ಸರ್ ಆತ್ಮಹತ್ಯೆ

ಸುದ್ದಿಗಳು News

Posted by vidyamaana on 2024-07-05 12:22:17 |

Share: | | | | |


ಪುತ್ತೂರು: ನೇಣು ಬಿಗಿದು  ಅನ್ಸರ್  ಆತ್ಮಹತ್ಯೆ

ಪುತ್ತೂರು : ವಿವಾಹಿತ ಯುವಕನೊಬ್ಬ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ವಳತ್ತಡ್ಕ ಸಮೀಪದ ಕೊಪ್ಪಳ ಎಂಬಲ್ಲಿ ಗುರುವಾರ ನಡೆದಿದೆ.

ಮೂಲತಃ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿಯಾಗಿದ್ದು, ಪ್ರಸ್ತುತ ಆರ್ಯಾಪು ಗ್ರಾಮದ ವಳತ್ತಡ್ಕ ಸಮೀಪದ ಕೊಪ್ಪಳ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದ ಸಿದ್ದೀಕ್ ಅನ್ಸರ್(32) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಕೊಪ್ಪಳದಲ್ಲಿರುವ ತನ್ನ ಮಾವನ ಅಡಕೆ ತೋಟದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಡಕೆ ಗಾರ್ಬಲ್‌ನಲ್ಲಿ ದುಡಿಯುತ್ತಿದ್ದ ಸಿದ್ದೀಕ್ ಅನ್ಸರ್ ಸರ್ವೆ ಗ್ರಾಮದ ಕಲ್ಪನೆಯಲ್ಲಿ 10 ಸೆಂಟ್ಸ್ ಜಾಗ ಖರೀದಿಸಿ ಮನೆ ನಿರ್ಮಿಸಲು ಅಡಿಪಾಯ ಹಾಕಿದ್ದರು. ಆರ್ಯಾಪು ಗ್ರಾಮದ ಕೊಪ್ಪಳದಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿ ತಂದೆ, ತಾಯಿ ಹಾಗೂ ಪತ್ನಿ ಮಕ್ಕಳ ಜತೆ ವಾಸ್ತವ್ಯವಿದ್ದರು. ಕಳೆದ ಒಂದೂವರೆ ತಿಂಗಳಿನಿಂದ ವಿಪರೀತ ಹೊಟ್ಟೆನೋವು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಪುತ್ತೂರಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗದ ಅವರು ಗಾರ್ಬಲ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದರು. ಮನೆ ನಿರ್ಮಿಸುವ ಉದ್ದೇಶದಿಂದ ಸಾಲ ಪಡೆದಿದ್ದ ಅವರು ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ಬೆಳ್ತಂಗಡಿ : ಉಜಿರೆ ಎಮ್.ಎಸ್.ಎಸ್ ಲಾಡ್ಜ್ ಮೇಲೆ ದಾಳಿ; ಐದು ಮಂದಿ ಯುವತಿಯರು ಸೇರಿ ಏಳು ಜನ ವಶಕ್ಕೆ.

Posted by Vidyamaana on 2023-02-07 15:06:22 |

Share: | | | | |


ಬೆಳ್ತಂಗಡಿ : ಉಜಿರೆ ಎಮ್.ಎಸ್.ಎಸ್  ಲಾಡ್ಜ್ ಮೇಲೆ ದಾಳಿ; ಐದು ಮಂದಿ ಯುವತಿಯರು ಸೇರಿ ಏಳು ಜನ ವಶಕ್ಕೆ.

ಬೆಳ್ತಂಗಡಿ : ಉಜಿರೆ ಎಂ.ಎಸ್.ಎಸ್ ಲಾಡ್ಜ್ ಮೇಲೆ ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್ ಶೆಟ್ಟಿ ನೇತೃತ್ವದಲ್ಲಿ ತಂಡದ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ.ಉಜಿರೆ ಚಾರ್ಮಾಡಿ ರಸ್ತೆಯಲ್ಲಿರುವ ಸುರೇಶ್ ಪೂಜಾರಿ ಎಂಬಾತ ಬಾಡಿಗೆ ಪಡೆದ ಎಮ್.ಎಸ್.ಎಸ್ ಲಾಡ್ಜ್ ಮೇಲೆ ಫೆ.7 ರಂದು ಸಂಜೆ ದಾಳಿ ವೇಳೆ ದಾಖಲೆಗಳಿಲ್ಲದೆ ರೂಂಗಳಲ್ಲಿ ಐದು ಮಂದಿ ಯುವತಿಯರನ್ನು ಮತ್ತು ಇಬ್ಬರು ಲಾಡ್ಜ್ ಸಿಬ್ಬಂದಿಯನ್ನು ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಬೇಕಾಗಿದೆ.

ಬೆಳ್ತಂಗಡಿ : ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

Posted by Vidyamaana on 2023-12-22 11:45:46 |

Share: | | | | |


ಬೆಳ್ತಂಗಡಿ : ಏಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ

ಬೆಳ್ತಂಗಡಿ : ವೇಣೂರು ಪೊಲೀಸ್ ಠಾಣೆಯಲ್ಲಿ 2016 ರಲ್ಲಿ ದಾಖಲಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ Addl Civil Judge & JMFC ಬೆಳ್ತಂಗಡಿ ನ್ಯಾಯಲಯದಲ್ಲಿ‌ ದಾಖಲಾದ ಸಿ.ಸಿ ನಂಬ್ರ 535/2016 ಮತ್ತು ಸಿ.ಸಿ ನಂಬ್ರ 871/2017 ರಲ್ಲಿ ಸುಮಾರು 6 ರಿಂದ 7 ವರ್ಷಗಳಿಂದ ತನ್ನ ಸ್ವಂತ ವಿಳಾಸದಲ್ಲಿ ವಾಸ ಮಾಡದೆ ವಿವಿಧ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯಾದ ಸುಳ್ಯ ತಾಲೂಕಿನ ಐವತ್ತೋಕ್ಲು ಗ್ರಾಮದ ಪಂಜದ,ನೆಲ್ಲಿಕಟ್ಟೆ ನಿವಾಸಿ ದಿ.ಆದಂ ಮಗನಾದ ಶರೀಫ್ @ ಮಹಮ್ಮದ್  ಶರೀಫ್ (43) ಎಂಬಾತನನ್ನು ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ನಿರ್ದೇಶನದಂತೆ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಶೈಲಾ ಮತ್ತು ಸಬ್ ಇನ್ಸ್ಪೆಕ್ಟರ್ ಆನಂದ್ ಎಮ್ ನೇತೃತ್ವದ ಸಿಬ್ಬಂದಿ ಪ್ರವೀಣ್ ಎಂ ಮತ್ತು ಸಚಿನ್ ರವರು ಡಿ.21 ರಂದು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ವಿಟ್ಲದ ಸಾರಡ್ಕ ಎಂಬಲ್ಲಿ ವಶಕ್ಕೆ ಪಡೆದುಕೊಂಡು ನಂತರ ಬಂಧಿಸಿ ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು  ಮಾನ್ಯ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಅಯ್ಯೋ ದೇವ್ರೇ.. ಆಟವಾಡ್ತಿದ್ದ ಮಗು ಫರ್ಸ್ಟ್ ಫ್ಲೋರಿನಿಂದ ಬಿತ್ತು..

Posted by Vidyamaana on 2023-08-27 10:30:32 |

Share: | | | | |


ಅಯ್ಯೋ ದೇವ್ರೇ.. ಆಟವಾಡ್ತಿದ್ದ ಮಗು ಫರ್ಸ್ಟ್ ಫ್ಲೋರಿನಿಂದ ಬಿತ್ತು..

ಮಂಗಳೂರು: ತಾಯಿ ಜೊತೆ ಬ್ಯಾಂಕಿಗೆ ಬಂದಿದ್ದ ಮಗುವೊಂದು ಹೊರಗಡೆ ಆವರಣದಲ್ಲಿ ಆಟವಾಡುತ್ತಾ ಗ್ರಿಲ್ ಮೇಲೇರಿ ಅಲ್ಲಿಂದ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ನಡೆದಿದೆ. 

ಆ.25ರಂದು ಮಗು ತನ್ನ ತಾಯಿ ಜೊತೆಗೆ ಇಲ್ಲಿರುವ ಬ್ಯಾಂಕಿಗೆ ಬಂದಿದ್ದ ಸಂದರ್ಭದಲ್ಲಿ ತಾಯಿ ಒಳಗಿರುವಂತೆ ಮಗು ಪ್ರಥಮ ಮಹಡಿಯ ಆವರಣದಲ್ಲಿ ಆಟವಾಡುತ್ತಿತ್ತು.

ಬಳಿಕ ಅಲ್ಲೇ ಇದ್ದ ಗ್ರಿಲ್ ಮೇಲೆರಿ ಮುಂದಕ್ಕೆ ಬಾಗಿದ ಸಂದರ್ಭ ಮಗು ತಲೆಕೆಳಗಾಗಿ ಬಿದ್ದಿದೆ.

ಈ ಸಂದರ್ಭದಲ್ಲಿ ಮಗುವನ್ನು ಹುಡುಕುತ್ತಾ ಹೊರಗಡೆ ಬಂದ ಮಗುವಿನ ತಾಯಿ ಕೆಳಗೆ ನೋಡಿ ಮಗು ಬಿದ್ದಿರುವುದನ್ನು ಕಂಡು ಬೊಬ್ಬೆ ಹಾಕಿದಾಗ ಬ್ಯಾಂಕ್ ಒಳಗಿದ್ದವರು ಮತ್ತು ಅಕ್ಕಪಕ್ಕದವರು ಬಂದು ಕೆಳಗೆ ಬಿದ್ದಿದ್ದ ಮಗುವನ್ನು ರಕ್ಷಿಸಿದ್ದಾರೆ.

ಅದೃಷ್ಟವಶಾತ್ ಈ ಮಗು ಪ್ರಾಣಾಪಾಯದಿಂದ ಪಾರಾಗಿದ್ದು,ಕೆಳಗೆ ಬಿದ್ದ ರಭಸಕ್ಕೆ ಮಗುವಿನ ತಲೆ ಮತ್ತು ಕೈಗೆ ಗಾಯಗಳಾಗಿವೆ.

ಮಗುವನ್ನು ದೇರಳಕಟ್ಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದುಅಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಗು ಆಟವಡುತ್ತಾ ಗ್ರಿಲ್ ಮೇಲೆ ಹತ್ತಿ ಕೆಳಗೆ ಬೀಳುತ್ತಿರುವ ದೃಶ್ಯ ಇಲ್ಲಿ ಅಳವಡಿಸಲಾಗಿದ್ದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

ಮುರ: ಹೆದ್ದಾರಿಗೆ ಮುರಿದು ಬಿದ್ದ ಮರದ ಕೊಂಬೆ

Posted by Vidyamaana on 2024-03-12 15:57:41 |

Share: | | | | |


ಮುರ: ಹೆದ್ದಾರಿಗೆ ಮುರಿದು ಬಿದ್ದ ಮರದ ಕೊಂಬೆ

ಪುತ್ತೂರು: ಹೆದ್ದಾರಿ ಮೇಲೆ ಮರದ ಕೊಂಬೆ ಬಿದ್ದು, ದ್ವಿಚಕ್ರ ಸವಾರರು ಸ್ವಲ್ಪದರಲ್ಲೇ ಬಚಾವಾದ ಘಟನೆ ಮುರ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿಯ ಪುತ್ತೂರು - ಕಬಕ ನಡುವಿನ ಮುರ ಜಂಕ್ಷನಲ್ಲೇ ಮರದ ಕೊಂಬೆ ಮುರಿದು ಬಿದ್ದಿದೆ. ಸೋಮವಾರ ಸಂಜೆಯೇ ಕೊಂಬೆ ಮುರಿದು ಬಿದ್ದಿದ್ದರೂ, ಇನ್ನೂ ಸಂಬಂಧಪಟ್ಟವರು ಕೊಂಬೆಯನ್ನು ತೆರವು ಮಾಡಿಲ್ಲ.

ರಾತ್ರಿ ಹೊತ್ತು ವಾಹನ ಸವಾರರ ಗಮನಕ್ಕೆ ಬಾರದೇ, ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಎರಡು ದ್ವಿಚಕ್ರ ವಾಹನ ಸವಾರರು ಸ್ವಲ್ಪದರಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಯಶಸ್ವಿನಿ ಯೋಜನೆಯ ಚಿಕಿತ್ಸಾ ದರ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮೆಡಿಕಲ್‍ ಅಸೋಸಿಯೇಶನ್‍ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ | ಸರಕಾರದ ಗಮನ ಸೆಳೆಯುವಂತೆ ಆಗ್ರಹ

Posted by Vidyamaana on 2023-02-28 10:45:53 |

Share: | | | | |


ಯಶಸ್ವಿನಿ ಯೋಜನೆಯ ಚಿಕಿತ್ಸಾ ದರ ಪರಿಷ್ಕರಣೆ ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮೆಡಿಕಲ್‍ ಅಸೋಸಿಯೇಶನ್‍ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ | ಸರಕಾರದ ಗಮನ ಸೆಳೆಯುವಂತೆ ಆಗ್ರಹ

ಪುತ್ತೂರು: ಯಶಸ್ವಿನಿ ಯೋಜನೆಯಲ್ಲಿ ಚಿಕಿತ್ಸಾ ದರ ಪರಿಷ್ಕರಿಸುವ ಸಹಿತ ವಿವಿಧ ಬೇಡಿಕೆಗಳನ್ನು ಸರಕಾರದ ಗಮನ ಸೆಳೆಯಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ನಿರ್ಧಾರವನ್ನು ಮೆಡಿಕಲ್‍ ಅಸೋಸಿಯೇಶನ್‍ ಕೈಗೊಂಡಿದೆ ಎಂದು ಅಸೋಸಿಯೇಶನ್‍ ಅಧ್ಯಕ್ಷ ಡಾ.ಶ್ರೀಪತಿ ರಾವ್‍ ತಿಳಿಸಿದ್ದಾರೆ..

ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಎಲ್ಲಾ ಹಣವನ್ನು ಕೂಡಲೇ ಸಂದಾಯ ಮಾಡಬೇಕು, ರೋಗಿಗಳು ಆಸ್ಪತ್ರೆಗೆ ಸೇರುವಾಗ ಇರುವ ನಿಬಂಧನೆಗಳನ್ನು ಸಡಿಲಿಕರಣಗೊಳಿಸಬೇಕು ಎಂಬ ವಿವಿಧ ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದರು.

ಪುತ್ತೂರಿನ ಆಸ್ಪತ್ರೆಗಳಲ್ಲಿ ಸರಕಾರಿ ಯೋಜನೆಗಳಾದ ಇಎಸ್‌ಐ, ಯಶಸ್ವಿನಿ ಸಹಿತ ಹಲವಾರು ಯೋಜನೆಗಳನ್ನು ಉತ್ತಮವಾಗಿ ನಿಭಾಯಿಸುತ್ತಿವೆ. ಆದರೆ ಇದೀಗ ಸ್ಥಗಿತಗೊಳಿಸಿದ ಯಶಸ್ವಿ ಯೋಜನೆ ಮರು ಪ್ರಾಂಭಿಸುವಾಗ ಹಲವಾರು ನಿಬಂಧನೆ ಮತ್ತು ರೋಗಿಗಳ ಚಿಕಿತ್ಸಾ ದರವನ್ನು ಕಡಿಮೆ ಗೊಳಿಸಿದ್ದರಿಂದ ನ್ಯಾಯುತವಾಗಿ ಚಿಕಿತ್ಸೆ ಕೊಡಲು ಸಾಧ್ಯವಿಲ್ಲ. ಕೇಂದ್ರ ಸಿ.ಜಿ.ಎಸ್.ಹೆಚ್.ಎಸ್ ನಂತೆ 2014ರ ಇಸವಿಯ ಚಿಕಿತ್ಸಾ ದರವೇ ಈಗಲೂ ಚಾಲ್ತಿಯಲ್ಲಿದೆ. 2014ರ ಚಿಕಿತ್ಸಾ ದರ 2017 ಮತ್ತು 2020ರಲ್ಲಿ ಹಾಗೂ 2023ರಲ್ಲಾದರೂ ಪರಿಷ್ಕರಣೆ ಆಗಬೇಕಾಗಿತ್ತು. ಆದರೆ ಅದನ್ನು ಮಾಡಿಲ್ಲ. ಈ ಹಿಂದೆ ಇದ್ದ ಯಶಸ್ವಿನಿ ಯೋಜನೆ ಉತ್ತಮವಾಗಿತ್ತು. ಆದರೆ ಅದರಲ್ಲೂ ಹಲವು ಆಸ್ಪತ್ರೆಗಳಿಗೆ ಹಣ ಸಂದಾಯ ಬಾಕಿ ಇದೆ. ಈ ನಿಟ್ಟಿನಲ್ಲಿ ಯಸ್ವಿನಿ ಯೋಜನೆಗೆ ಬಹುತೇಕ ಆಸ್ಪತ್ರೆಗೆಳು ಸೇರ್ಪಡೆಗೊಂಡಿಲ್ಲ.ಇತ್ತೀಚೆಗೆ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಸಂದರ್ಭ ಬಂದಿರುವ ಪ್ರಶ್ನೆಗೆ ಜಿಲ್ಲಾಧಿಕಾರಿಗಳು ನಮಗೆ ನೋಟೀಸ್ ನೀಡಿದ್ದಾರೆ. ಈ ನೋಟೀಸ್‌ಗೆ ಸಂಬಂಧಿಸಿ ನಾವು ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಯಲ್ಲಿ ಸೇರಬೇಕಾದರೆ ನಮ್ಮ ಕೆಲವೊಂದು ಬೇಡಿಕೆಗಳಿವೆ. ಅದನ್ನು ಈಡೇರಿಸವಂತೆ ಮನವಿ ಮಾಡಲಿದ್ದೇವೆ. ಖಾಸಗಿ ಕೊಠಡಿಗಳಿಗೂ ರೋಗಿಗಳಿಗೆ ಅನುಮತಿ ನೀಡಬೇಕೆಂದು ಮನವಿ ನೀಡಲಿದ್ದೇವೆ ಎಂದು ತಿಳಿಸಿದ ಅವರು, ಒಟ್ಟಿನಲ್ಲಿ ಉಳುವ ರೈತರ ಹೈನುಗಾರರ ಆರೋಗ್ಯದ ಮೇಲೆ ಕಾಳಜಿ ವಹಿಸಿ ಅವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಸಿಗುವಂತೆ ಮಾಡುವ ಜವಾಬ್ದಾರಿ ಸರಕಾರಕ್ಕೂ ಮತ್ತು ಖಾಸಗಿ ಆಸ್ಪತ್ರೆಗಳ ಮೇಲೆ ಇದೆಯೆಂದು ತಿಳಿದು ಸರಕಾರ ಉತ್ತಮ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ ಎಂದರು.

ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಯಡಿ ಪುತ್ತೂರಿನ ನಾಲ್ಕು ಆಸ್ಪತ್ರೆಗಳಿಗೆ ಹಣ ಸಂದಾಯ ಬಾಕಿ ಇದೆ. ಹಿಂದೆ ಸರಕಾರದಿಂದ ಯೋಜನೆ ಚಾಲ್ತಿಯಲ್ಲಿತ್ತು. ಬಳಿಕ ಅದನ್ನು ಇನ್‌ಶ್ಯುರೆನ್ಸ್ ಕಂಪೆನಿಗೆ ವರ್ಗಾಯಿಸಲಾಯಿತು. ಈ ಸಂದರ್ಭ ಆಸ್ಪತ್ರೆಗಳಿಗೆ ಚಿಕಿತ್ಸಾ ದರ ಪಾವತಿ ಬಾಕಿಯಾಗುತ್ತಿತ್ತು. ಈ ಕುರಿತು ಹಲವು ಬಾರಿ ಪತ್ರ ಬರೆಯಲಾಗಿದೆ. ಯಾವುದೇ ಸ್ಪಂದನೆ ಸಿಕ್ಕಿಲ್ಲ. ಒಟ್ಟು ನಾಲ್ಕು ಆಸ್ಪತ್ರೆಗೆಳಿಗೆ ಸುಮಾರು ರೂ. 22ಲಕ್ಷ ಬಾಕಿ ಇದೆ. ಎಂದು ಅಸೋಸಿಯೇಶನ್‍ ಉಪಾಧ್ಯಕ್ಷ ಡಾ.ಭಾಸ್ಕರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್‌ನ ಕಾರ್ಯದರ್ಶಿ ಡಾ. ಎಸ್.ಎಸ್ ಜೋಶಿ, ಕೋಶಾಧಿಕಾರಿ ಡಾ. ಅಶೋಕ್ ಪಡಿವಾಳ್, ಸದಸ್ಯರಾದ ಡಾ. ಜೆ.ಸಿ.ಅಡಿಗ, ಡಾ. ರವೀಂದ್ರ ಉಪಸ್ಥಿತರಿದ್ದರು.

ಸುಳ್ಯ : ವಾಹನ ಅಡ್ಡ ಗಟ್ಟಿ ಯುವಕರಿಂದ ಹಲ್ಲೆ ಆರೋಪ

Posted by Vidyamaana on 2023-08-13 08:32:23 |

Share: | | | | |


ಸುಳ್ಯ : ವಾಹನ ಅಡ್ಡ ಗಟ್ಟಿ   ಯುವಕರಿಂದ ಹಲ್ಲೆ ಆರೋಪ

ಸುಳ್ಯ : ಪರಿಚಯದ ಯುವತಿಯೋರ್ವಳನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋದ ವಿಷಯವಾಗಿ ಯುವಕರ ತಂಡವೊಂದು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ವ್ಯಕ್ತಿಯೋರ್ವರು ಸುಳ್ಯ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.


ಕೇರಳ ಮಲಪುರಂ ನಿವಾಸಿ ಮೊಹಮ್ಮದ್ ಜಲೀಲ್ (39) ನೀಡಿದ ದೂರಿನ ಮೇರೆಗೆ ಲತೀಶ್ ಗುಂಡ್ಯ, ವರ್ಷಿತ್, ಪುನೀತ್ ಹಾಗೂ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.


ಕೇರಳ ಮಲಪುರಂ ನಿವಾಸಿ ಮೊಹಮ್ಮದ್ ಜಲೀಲ್ ಪ್ರಸ್ತುತ ಸುಳ್ಯ ತಾಲೂಕು ಅರಂತೋಡಿನಲ್ಲಿ ರಬ್ಬರ್ ತೋಟವನ್ನು ಕಳೆದ 3 ತಿಂಗಳ ಹಿಂದೆ ಗುತ್ತಿಗೆ ಪಡೆದು ಅರಂತೋಡಿನಲ್ಲಿ ವಾಸವಾಗಿದ್ದು, ಆ.12 ರಂದು ತನ್ನ ಪರಿಚಯದ ಯುವತಿಯೋರ್ವಳು ತಾನು ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದು, ತನಗೆ ವಿಶ್ರಾಂತಿ ಪಡೆಯಲು ರೂಮ್ ಬೇಕೆಂದು ಕೇಳಿಕೊಂಡ ಮೇರೆಗೆ ಜಲೀಲ್ ಸುಳ್ಯದಲ್ಲಿ ರೂಂ ವ್ಯವಸ್ಥೆ ಮಾಡಿ ಬಳಿಕ ವೈಯಕ್ತಿಕ ಕೆಲಸ ನಿಮಿತ್ತ ಸುಳ್ಯ ತಾಲೂಕು ತೋಡಿಕಾನಕ್ಕೆ ತೆರಳಿದ್ದಾಗ 5 ಜನರು ಕಾರು ಮತ್ತು ಸ್ಕೂಟರ್ ಮೂಲಕ ಜಲೀಲ್ ಕಾರನ್ನು ಪಡೆದು ಜಲೀಲ್ ರವರಿಗೆ ಅವ್ಯಾಚವಾಗಿ ಬೈದು ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ತೆರಳಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಸದರಿ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 87/2023 ಕಲಂ 143, 147, 341, 323, 504, 506, 153(A) ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಆರೋಪಿಗಳ ಪೈಕಿ ಸುಳ್ಯ ಸೊಣಂಗೇರಿ ನಿವಾಸಿ ಪುನೀತ್ ಎಂಬಾತನನ್ನು ಬಂಧಿಸಿದ್ದು, ತನಿಖೆ ನಡೆಸಲಾಗುತ್ತಿದೆ..

Recent News


Leave a Comment: