ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸುದ್ದಿಗಳು News

Posted by vidyamaana on 2024-07-05 17:03:24 |

Share: | | | | |


ಎಫ್‌ಐಆರ್ ರದ್ದು ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಳ್ತಂಗಡಿ : ಅಕ್ರಮ ಕಲ್ಲು ಕೊರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗೆ ಹೋಗಿ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣ ಹಾಗೂ ಅನುಮತಿ ಪಡೆಯದೆ ಪ್ರತಿಭಟನೆ ಮಾಡಿದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಹಾಕಿದ್ದ ಅರ್ಜಿಯನ್ನು ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ಇಂದು ವಜಾಗೊಳಿಸಿದೆ.

ಎರಡು ಪ್ರಕರಣವನ್ನು ರದ್ದು ಕೋರಿ ಹಾಕಿದ ಅರ್ಜಿಯ ಬಗ್ಗೆ ಜೂ. 5 ರಂದು(ಇಂದು) ಬೆಂಗಳೂರಿನ ಹೈಕೋರ್ಟ್ ನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಕೋರ್ಟ್ ಎರಡು ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದೆ ಹಾಗೂ ಈ ಪ್ರಕರಣದಲ್ಲಿ ಹೈಕೋರ್ಟ್ ಮಧ್ಯಪ್ರದೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

 Share: | | | | |


ಏ1: ಜಿಎಲ್ ವನ್ ಮಾಲ್ ನಲ್ಲಿ ಚೈನೀಸ್ ಮತ್ತು ಅರೇಬಿಯನ್ ಗ್ರಿಲ್ಡ್ ಹಾಗೂ ಜ್ಯೂಸ್ ಮತ್ತು ಶೇಕ್ಸ್ ಶುಭಾರಂಭ

Posted by Vidyamaana on 2023-03-31 12:47:43 |

Share: | | | | |


ಏ1: ಜಿಎಲ್ ವನ್ ಮಾಲ್ ನಲ್ಲಿ  ಚೈನೀಸ್ ಮತ್ತು ಅರೇಬಿಯನ್ ಗ್ರಿಲ್ಡ್ ಹಾಗೂ ಜ್ಯೂಸ್ ಮತ್ತು ಶೇಕ್ಸ್ ಶುಭಾರಂಭ

ಪುತ್ತೂರು: ಅದ್ದೂರಿಯಾಗಿ ಶುಭಾರಂಭಗೊಳ್ಳುತ್ತಿರುವ ಪುತ್ತೂರಿನ ಜಿಎಲ್ ವನ್ ಮಾಲ್ ನಲ್ಲಿ ಏಪ್ರಿಲ್ 1ರಂದು ಚೈನೀಸ್ ಮತ್ತು ಅರೇಬಿಯನ್ ಗ್ರಿಲ್ಡ್, ಜ್ಯೂಸ್ ಮತ್ತು ಶೇಕ್ಸ್ ಉದ್ಘಾಟನೆಗೊಳ್ಳಲಿದೆ. ಇದರೊಂದಿಗೆ ಜೂಸ್ ಮತ್ತು ಗ್ರಿಲ್ಡ್ ಪ್ರಿಯರಿಗಾಗಿ ವೈವಿಧ್ಯಮಯ ಐಟಂ ಗಳ ಲೋಕವೇ ತೆರೆದುಕೊಳ್ಳಲಿದೆ.

ಜಿಎಲ್ ವನ್ ಮಾಲ್ ನ ಭಾರತ್ ಸಿನಿಮಾಸ್ ಪಕ್ಕದಲ್ಲೇ ಇರುವ, ಗ್ರಿಲ್ಡ್ ಸಂಸ್ಥೆಯನ್ನು ಮಾಯಿದೇ  ದೇಸ್ ಚರ್ಚ್ ನ ಧರ್ಮಗುರುಗಳಾದ ವಂದನೀಯ ಫಾದರ್ ಲಾರೆನ್ಸ್ ಮಸ್ಕರೇನ್ಹಸ್ ಮತ್ತು ಜ್ಯೂಸ್ ಮತ್ತು ಶೇಕ್ಸ್ ಸಂಸ್ಥೆಯನ್ನು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂದನೀಯ ಫಾದರ್  ಪ್ರಕಾಶ್ ಮೊಂತೆರೊ ಉದ್ಘಾಟಿಸಲಿದ್ದಾರೆ.

ಪುತ್ತೂರಿನ ಫಾಸ್ಟ್ ಫುಡ್ ಪ್ರಿಯರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಲಿದೆ ಈ ಗ್ರಿಲ್ಡ್, ಜ್ಯೂಸ್ ಮತ್ತು ಶೇಕ್ಸ್. ತನ್ನ ಆಹ್ಲಾದಕರ ಸ್ವಾದದಿಂದ ಜನರ ಮೆಚ್ಚುಗೆ ಗಳಿಸಿದೆ.

ಜ್ಯೂಸ್ ಮತ್ತು ಶೇಕ್ಸ್ :

ಫ್ರೆಶ್ ಜೂಸ್ ಗಳಾದ, ಬಾದಾಮ್, ಮೊಜಿತೊ, ಚಿಕ್ಕು, ಪಂಚ್, ಮಾವು, ಚಾಕೊಲೇಟ್, ಕೋಲ್ಡ್ ಕಾಫಿ, ಸ್ಟ್ರಾಬೆರಿ, ಕಿತ್ತಳೆ, ಅನಾರ್, ಕಾಜು, ಡ್ರೈ ಫ್ರೂಟ್, ಬಟರ್‌ಸ್ಕಾಚ್, ಕಿತ್ತಳೆ, ಮಿಶ್ರಣ,  ಕಾಕ್‌ಟೈಲ್, ಲಸ್ಸಿ, ಅನಾನಸ್ ಜ್ಯೂಸ್‌ಗಳು ಮತ್ತು  ಶೇಕ್‌ಗಳ ವೈವಿಧ್ಯಮಯ ರುಚಿಯನ್ನು ಗ್ರಾಹಕರು ಇಲ್ಲಿ ಆಹ್ಲಾದಿಸಬಹುದು.

ಗ್ರಿಲ್ಡ್ :

ಚಿಕನ್ ಸಲಾಡ್, ಗ್ರಿಲ್ಡ್ ಚಿಕನ್ ಕಬಾಬ್ಸ್, ಬಿರಿಯಾನಿ, ಫ್ರೈಡ್ರೈಸ್, ನೂಡಲ್ಸ್ ನಂತಹ ಫಾಸ್ಡ್ ಫುಡ್ ಐಟಂಗಳು ದೊರೆಯಲಿದ್ದು, ನುರಿತ ಪಾಕ ತಜ್ಞರಿಂದ ಸ್ವಾದಿಷ್ಟಕರ ಫುಡ್ ಐಟಂಗಳು ಇಲ್ಲಿ ತಯಾರಾಗಲಿದೆ ಎಂದು ಸಂಸ್ಥೆಯ ಮ್ಹಾಲಕ ಜೀತನ್ ತಿಳಿಸಿದ್ದಾರೆ.

ಶಾಸಕರ ಐಶಾರಾಮಿ ಕಚೇರಿಗೆ ನಗರಸಭೆಯ ತೆರಿಗೆ ಹಣ ವಿನಿಯೋಗ ಖಂಡನೀಯ

Posted by Vidyamaana on 2023-08-30 02:07:54 |

Share: | | | | |


ಶಾಸಕರ ಐಶಾರಾಮಿ ಕಚೇರಿಗೆ ನಗರಸಭೆಯ ತೆರಿಗೆ ಹಣ ವಿನಿಯೋಗ ಖಂಡನೀಯ

ಪುತ್ತೂರು: ಪುತ್ತೂರಿನಲ್ಲಿ ಶಾಸಕರ ಕಚೇರಿ ಲೋಕಾರ್ಪಣೆ ಆಗಿದೆ. ಇದಕ್ಕೆ ನಾವೆಲ್ಲ ಸಂತೋಷ ಪಡಬೇಕು. ಆದರೆ ಆ ಕಚೇರಿಗೆ ನಗರಸಭೆಯ ತೆರಿಗೆ ಹಣವನ್ನು ವಿನಿಯೋಗಿಸಿದ್ದು ಖಂಡನೀಯ. ಪುತ್ತೂರು ನಗರಸಭೆಯ ರೂ. 31ಲಕ್ಷ ವೆಚ್ಚ ಮಾಡಿ ಶಾಸಕರ ಐಶಾರಾಮಿ ಕಚೇರಿ ನಿರ್ಮಾಣ ಆಗಿದೆ. ಈ ಹಣವನ್ನು ನಗರಸಭೆಗೆ ಜಿಲ್ಲಾಧಿಕಾರಿಗಳು ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನ ಬಿಜೆಪಿ ನೇತೃತ್ವದಲ್ಲಿ ನಗರಸಭೆ ಸದಸ್ಯರೊಂದಿಗೆ ಪುತ್ತೂರು ನಗರಸಭೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಎಚ್ಚರಿಕೆ ನೀಡಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಶಾಸಕ ಅಶೋಕ್ ರೈ ಅವರ ಕಚೇರಿ ಮಾಡಲು ಅನುದಾನ ಎಲ್ಲಿಂದ ಬಂತು ಎಂಬುದನ್ನು ಯಾರು ನೋಡಿರಿಲ್ಲ. ಪುತ್ತೂರಿನ ಇತಿಹಾಸದಲ್ಲಿ ಶಾಸಕರಾಗಿದ್ದ ಸದಾನಂದ ಗೌಡ, ಶಕುಂತಳಾ ಶೆಟ್ಟಿ, ಮಲ್ಲಿಕಾಪ್ರಸಾದ್, ನಾನು ಕೂಡಾ ಸೇರಿದಂತೆ ಯಾರು ಕೂಡಾ ಐಶಾರಾಮದ ಕಚೇರಿ ಮಾಡಿಲ್ಲ. ಜನಾಮಾನ್ಯರ ತೆರಿಗೆ ಹಣದಲ್ಲಿ ಕಚೇರಿ ಮಾಡದೆ ತಾಲೂಕು ಪಂಚಾಯತ್, ತಾಲೂಕು ಆಡಳಿತ ಸೌಧದಲ್ಲೇ ಕಚೇರಿ ಮಾಡಿದ್ದೆವು. ಜನಸಾಮಾನ್ಯರಿಗೆ ಸುಲಭವಾಗಿ ಶಾಸಕರು ಸಿಗಬೇಕೆಂಬ ನಿಟ್ಟಿನಲ್ಲಿ ಎಲ್ಲಾ ಕಡೆ ಸರಕಾರಿ ಕಚೇರಿಯಲ್ಲೇ ಮಾಡಲಾಗಿತ್ತು. ಆದರೆ ಪುತ್ತೂರು ಶಾಸಕರು ತಮ್ಮ ಕಚೇರಿಗೆ ನಗರಸಭೆಯ ರೂ. 31ಲಕ್ಷವನ್ನು ವಿನಿಯೋಗಿಸಿದ್ದಾರೆ. ಪುತ್ತೂರು ನಗರಸಭೆಯ ಜನರ ತೆರಿಗೆ ಹಣದಲ್ಲಿ ಈ ಕಚೇರಿಗೆವಿನಿಯೋಗ ಮಾಡುವ ಕೆಲಸದ ಬದಲು ಅದು ಪುತ್ತೂರಿನ ಅಭಿವೃದ್ಧಿಗೆ ವಿನಿಯೋಗ ಆಗಬೇಕಾಗಿತ್ತು. ನಗರಸಭೆಯ ಸದಸ್ಯರಿಗೆ ಅನುದಾನ ಹಂಚಿಕೆ ಮಾಡಿದಲ್ಲಿ ಅವರು ತಮ್ಮ ತಮ್ಮ ವಾರ್ಡ್‌ಗಳ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದರು. ಆದರೆ ಇಲ್ಲಿ ಶಾಸಕರು ಸೂಚನೆ ಕೊಟ್ಟು ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ನಗರಸಭೆಯ ಜನಪ್ರತಿನಿಧಿಗಳ ಗಮನಕ್ಕೂ ತಾರದೆ ನಿರ್ಣಯ ಮಾಡಿ ಅನುದಾನವನ್ನು ಶಾಸಕರ ಕಚೇರಿಗೆ ವಿನಿಯೋಗಿಸಲು ನೀಡಿರುವುದು ಖಂಡನೀಯ. ಈ ನಡುವೆ ಪುಡಾ ಕಚೇರಿನ್ನು ಖಾಸಗಿ ಕಟ್ಟಡಕ್ಕೆ ವರ್ಗಾವಣೆ ಮಾಡುವ ಮೂಲಕ ನಗರಸಭೆಗೆ ಪುಡಾದ ಬಾಡಿಗೆಯಿಂದ ಬರುವ ಅನುದಾನವು ಕಡಿತವಾಗಿದೆ. ಇದೀಗ ಪುಡಾವು ಹೆಚ್ಚುವರಿ ರೂ. 16ಸಾವಿರ ಬಾಡಿಗೆ ಕೊಡಬೇಕಾಗಿ ಬಂದಿದೆ. ಒಂದು ಶಾಸಕರ ಕಚೇರಿಗಾಗಿ ಎಷ್ಟು ಖರ್ಚನ್ನು ಸರಕಾರದ ಖಜಾನೆಯಿಂದ ಖರ್ಚು ಮಾಡುತ್ತಾರೆ ಎಂಬುದು ಜನಸಾಮಾನ್ಯರು ಯೋಚನೆ ಮಾಡಬೇಕು. ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ಎಲ್ಲಿಂದ ಭ್ರಷ್ಟಾಚಾರ ಆಗುತ್ತಿದೆ. ಎಲ್ಲಿ ಸರಕಾರದ ಹಣ ಪೋಲಾಗುತ್ತಿದೆ. ಇದನ್ನು ಯೋಚನೆ ಮಾಡಬೇಕು. ಅದಕ್ಕಾಗಿ ಪುತ್ತೂರು ನಗರಸಭೆಯ ಜನರು ತೆರಿಗೆ ರೂಪದಲ್ಲಿ ನಗರಸಭೆಗೆ ಕಟ್ಟಿದ ಹಣವನ್ನು ಮತ್ತೆ ನಗರಭೆಗೆ ಜಿಲ್ಲಾಧಿಕಾರಿಯವರು ಕೊಡಿಸಬೇಕು. ಆ ಹಣದಿಂದ ನಗರಸಭೆಯ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಅಭಿವೃದ್ಧಿ ಮಾಡಬಹುದು. ಇಲ್ಲವಾದಲ್ಲಿ ಮುಂದಿನ ದಿನ ಬಿಜೆಪಿಯಿಂದ ನಗರಸಭೆಯ ಮುಂದೆ ಪ್ರತಿಭಟನೆ ಅನಿವಾರ್ಯವಾಗಬಹುದು ಎಂದು ಅವರುಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ನಾನು ಶಾಸಕನಾಗಿದ್ದ ಸಂದರ್ಭ ಲೋಕೋಪಯೋಗಿ ಇಲಾಖೆಯವರು ನೇರ ಸರಕಾರದಿಂದ ನೀಡಿದ ರೂ. 3ಲಕ್ಷದಲ್ಲಿ ನನ್ನ ಕಚೇರಿ ನಿರ್ಮಾಣ ಆಗಿದೆ ಎಂದರು. ಆದರೆ ಈಗಿನ ಶಾಸಕರು ಒಂದು ಕಚೇರಿಗಾಗಿ ಇಷ್ಟೊಂದು ಹೊರೆ ಭರಿಸುವುದು ಅಗತ್ಯವಿತ್ತಾ ಎಂದು ಪ್ರಶ್ನಿಸಿದರು

 ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್.ಶೆಟ್ಟಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಸದಸ್ಯೆ ಗೌರಿ ಬನ್ನೂರು ಉಪಸ್ಥಿತರಿದ್ದರು.

ಬೆಳ್ತಂಗಡಿ ತಾಲೂಕು ಅರೋಗ್ಯ ರಕ್ಷಾ ಸಮಿತಿಗೆ ಆದಿವಾಸಿ ಸಮುದಾಯದ ಶ್ರೀಮತಿ ಸವಿತಾ ಕೊರಗ ನೇಮಕ

Posted by Vidyamaana on 2024-07-06 22:03:35 |

Share: | | | | |


ಬೆಳ್ತಂಗಡಿ ತಾಲೂಕು ಅರೋಗ್ಯ ರಕ್ಷಾ ಸಮಿತಿಗೆ ಆದಿವಾಸಿ ಸಮುದಾಯದ ಶ್ರೀಮತಿ ಸವಿತಾ ಕೊರಗ ನೇಮಕ

ಬೆಳ್ತಂಗಡಿ : ದಕ್ಷಿಣಕನ್ನಡ, ಉಡುಪಿ ಮತ್ತು‌‌ ಕೇರಳದ‌ ಕಾಸರಗೋಡು ಜಿಲ್ಲೆಯ ಮೂಲನಿವಾಸಿಗಳಾದ ಕೊರಗ ಸಮುದಾಯ ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ನಶಿಸಿ ಹೋಗುತ್ತಿರುವ ಭಾರತೀಯ ಸಮುದಾಯಗಳಲ್ಲಿ ಪಟ್ಟಿಯಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಆದಿವಾಸಿ ಸಮುದಾಯವಾಗಿರುವ ಕೊರಗರು ಹೆಚ್ಚಾಗಿ ಅರಣ್ಯದ ಅಂಚಿನಲ್ಲೇ ಬದುಕು ಸಾಗಿಸುತ್ತಿದ್ದವರು.

ಇದೇ ಸಮುದಾಯದ ಶ್ರೀಮತಿ ಸವಿತಾ ಕೊರಗ ಇಂದು ತಾಲೂಕು ಅರೋಗ್ಯ ಸಮಿತಿಗೆ ನಾಮನಿರ್ದೇಶಿತ ವಾಗಿದ್ದರೆ.ಇಂದು ಪಡೆದ ಜವಾಬ್ದಾರಿ ಸಣ್ಣ ಮಟ್ಟದಲ್ಲಿ ಇದ್ದರು ಮುಂದಕ್ಕೆ ದೊಡ್ಡ ಜವಾಬ್ದಾರಿಗಳು ಹುಡುಕಿಕೊಂಡು ಬರಬಹುದು.

ಬೆಳ್ತಂಗಡಿ ಯಲ್ಲಿಯೂ ಈ ಸಮುದಾಯದ ಜನರು ಬೆರಳೆಣಿಕೆಯ ಸಂಖ್ಯೆಯಲ್ಲಿ ಇದ್ದಾರೆ. ಕೆಲ ವರ್ಷದ ಹಿಂದೆ ತಾಲೂಕಿನಲ್ಲಿ ಇದ್ದ ಸಮುದಾಯದ ಸಂಘಟನೆಯು ಈಗ ಸಕ್ರಿಯವಾಗಿ ಇಲ್ಲ ಎಂಬುದು ಕೂಡ ನೋವಿನ ಸಂಗತಿ.

ಕಾಡಿನಲ್ಲಿ ಸಿಗುವ ಬೆತ್ತವನ್ನು ಉಪಯೋಗಿಸಿ ಬುಟ್ಟಿಗಳನ್ನು ಹೆಣೆದು, ಅವುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಕೊರಗರು ಅಲೆಮಾರಿ ಜನಾಂಗದಂತೆಯೂ ಗುರುತಿಸಿಕೊಂಡಿದ್ದಾರೆ. ಅಪೌಷ್ಟಿಕತೆ, ಕಡು ಬಡತನ, ಶಿಕ್ಷಣದ ಕೊರತೆ, ಆರೋಗ್ಯ ಮೊದಲಾದ ಸಮಸ್ಯೆಯಿಂದಾಗಿ ಈ ಸಮುದಾಯದಲ್ಲಿ ಮರಣದ ಪ್ರಮಾಣ ಹೆಚ್ಚಾಗಿರುವ ಕಾರಣದಿಂದಾಗಿ, ಈ ಸಮುದಾಯದ ಜನಸಂಖ್ಯೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಕುಸಿದಿದೆ.

ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ

Posted by Vidyamaana on 2023-12-27 13:57:43 |

Share: | | | | |


ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ

ಪುತ್ತೂರು: ರಾಜ್ಯದ ಎಂಟು ಉಪ ವಿಭಾಗಗಳಿಗೆ ನೂತನ ಸಹಾಯಕ ಆಯಕ್ತರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ದ.ಕ. ಜಿಲ್ಲೆಯ ಪುತ್ತೂರು ಉಪ ವಿಭಾಗದ ಸಹಾಯಕ ಆಯಕ್ತರಾಗಿ ಜುಬಿನ್ ಮಹಾಪಾತ್ರ,  ಕೊಡಗು ಜಿಲ್ಲೆಯ ಮಡಿಕೇರಿ ಉಪ ವಿಭಾಗದ ಸಹಾಯಕ ಆಯಕ್ತರಾಗಿ ನಾರ್ವಡೆ ವಿನಾಯಕ ಕರ್ಭರಿ ಅವರನ್ನು ನೇಮಕಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಹೊಸದಾಗಿ ನೇಮಕಗೊಂಡ ಎಲ್ಲಾ ಎಂಟು ಸಹಾಯಕ ಆಯುಕ್ತರು 2021ನೇ ಬ್ಯಾಚ್ ನ ಐಎಎಸ್‌ ಅಧಿಕಾರಿಗಳಾಗಿದ್ದಾರೆ.

ಇದು ಆರ್​ಸಿಬಿಯ ಹೊಸ ಅಧ್ಯಾಯ; ಹಾಲಿ ಚಾಂಪಿಯನ್​ ಚೆನ್ನೈ ಮಣಿಸಿ ಪ್ಲೇ ಆಫ್​ಗೆ ಲಗ್ಗೆ

Posted by Vidyamaana on 2024-05-19 02:21:51 |

Share: | | | | |


ಇದು ಆರ್​ಸಿಬಿಯ ಹೊಸ ಅಧ್ಯಾಯ; ಹಾಲಿ ಚಾಂಪಿಯನ್​ ಚೆನ್ನೈ ಮಣಿಸಿ ಪ್ಲೇ ಆಫ್​ಗೆ ಲಗ್ಗೆ

ಬೆಂಗಳೂರು : ತೀವ್ರ ಕುತೂಹಲ ಕೆರೆಳಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವಿನ ನಿರ್ಣಾಯಕ ಪಂದ್ಯದಲ್ಲಿ ಆರ್ ಸಿಬಿ ವಿರೋಚಿತ ಗೆಲುವು ಸಾಧಿಸಿ ಪ್ಲೇಆಫ್ ಗೆ ಲಗ್ಗೆ ಇಟ್ಟಿದೆ.ಇಂದು ನಡೆದ ಪಂದ್ಯದಲ್ಲಿ ಆರ್ ಸಿಬಿ ನೀಡಿದ 219 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ ಸೂಪರ್ ಕಿಂಗ್ ತಂಡ ನಿಗಧಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ 27ರನ್ ಗಳ ಅಂತರದಲ್ಲಿ ಸೋಲುಕಂಡಿತು.

ಪಂದ್ಯದ ಪ್ರತೀ ಹಂತದಲ್ಲೂ ಗೆಲುವು ಅತ್ತ-ಇತ್ತ ಚಲಿಸುತ್ತಿತ್ತು. ಅಂತಿಮ ಹಂತದವರೆಗೂ ಚೆನ್ನೈ ತಂಡವೇ ಗೆಲ್ಲುವ ಫೇವರಿಟ್ ಆಗಿತ್ತು. ಆದರೆ ಯಶ್ ದಯಾಳ್ ಎಸೆದೆ ಅಂತಿಮ ಓವರ್ ಚೆನ್ನೈ ಕೈಯಿಂದ ಗೆಲುವು ಕಸಿದು ಆರ್ ಸಿಬಿಗೆ ನೀಡಿತು.

ನಕಲಿ ದಾಖಲೆ ಸೃಷ್ಟಿ ವಂಚನೆ ಬೆಳಕಿಗೆ

Posted by Vidyamaana on 2023-07-11 10:40:21 |

Share: | | | | |


ನಕಲಿ ದಾಖಲೆ ಸೃಷ್ಟಿ ವಂಚನೆ ಬೆಳಕಿಗೆ

ಪುತ್ತೂರು: ಸರ್ಕಾರಿ ದಾಖಲೆಗಳ ನಕಲಿ ಜಾಲವನ್ನು ಬೇಧಿಸಿರುವ ಪುತ್ತೂರು ತಾಪಂ ಇಓ ನೇತೃತ್ವದ ತಂಡ, ನಕಲಿ ದಾಖಲೆ, ನಕಲಿ ಸೀಲ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪುತ್ತೂರಿನ ಪಡೀಲಿನಲ್ಲಿ ಕಾರ್ಯಾಚರಿಸುತ್ತಿದ್ದ ವಿಶ್ವನಾಥ್ ಎಂಬವರಿಗೆ ಸೇರಿದ ಬಿ.ಬಿ ಇಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಸೆಂಟರಿನಲ್ಲಿ ಅಕ್ರಮ ಜಾಲವನ್ನು ಪತ್ತೆ ಹಚ್ಚಲಾಗಿದೆ. ಸರ್ಕಾರದಿಂದ ಅನುಮತಿ‌ ಪಡೆದ ಗುತ್ತಿಗೆದಾರರು ಇವರಾಗಿದ್ದು, ಮೆಸ್ಕಾಂನ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು.


ವಿದ್ಯುತ್ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದ ಈ ಅಂಗಡಿಯಲ್ಲಿ, ಪುತ್ತೂರು ನಗರಸಭೆ, ಕಡಬ ತಾಲೂಕು ಪಂಚಾಯತ್ ಹಾಗೂ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತಿಗಳ ಸೀಲ್ ಗಳನ್ನೇ ಹೋಲುವ ನಕಲಿ ಸೀಲ್ ಗಳು‌ ಪತ್ತೆಯಾಗಿವೆ.

ದಾಖಲೆ ಪತ್ರಗಳಿಗೆ ಫೋರ್ಜರಿ ಸಹಿ‌ ಹಾಕಿ, ಅದಕ್ಕೆ ನಕಲಿ ಸೀಲ್ ಗಳನ್ನು ಹಾಕಲಾಗುತ್ತಿತ್ತು. ಸಾರ್ವಜನಿಕ ದೂರಿನ‌ ಮೇರೆಗೆ ತಾಪಂ ಇಓ ನವೀನ್ ಭಂಡಾರಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲಿಸಿದಾಗ ವಂಚನೆ ಜಾಲ ಬೆಳಕಿಗೆ ಬಂದಿದೆ.

Recent News


Leave a Comment: