ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ನಿಮ್ಮ ಮೊಬೈಲ್ ಆನ್ ಇದ್ದರೂ ಬೇರೆಯವರಿಗೆ ಸ್ವಿಚ್ ಆಫ್ ಆಗಿದೆ ಎಂದು ತೋರಿಸಬೇಕಾ..? ಇಲ್ಲಿದೆ ಟ್ರಿಕ್ಸ್

Posted by Vidyamaana on 2024-08-17 22:19:24 |

Share: | | | | |


ನಿಮ್ಮ ಮೊಬೈಲ್  ಆನ್ ಇದ್ದರೂ ಬೇರೆಯವರಿಗೆ ಸ್ವಿಚ್ ಆಫ್ ಆಗಿದೆ ಎಂದು ತೋರಿಸಬೇಕಾ..? ಇಲ್ಲಿದೆ ಟ್ರಿಕ್ಸ್

ಯಾವುದೇ ಬ್ಯುಸಿ ಸಮಯದಲ್ಲಿ ನೀವು ಫೋನ್ ಕರೆಗಳಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಇದು ಬಹಳಷ್ಟು ಜನರಿಗೆ ಹೀಗೆ ಆಗುತ್ತದೆ. ನೀವು ಫೋನ್ ಸಂಪರ್ಕವನ್ನು ಕಡಿತಗೊಳಿಸಲು ಅಥವಾ ನಿಮ್ಮ ಕೆಲಸವನ್ನು ನಿಲ್ಲಿಸಲು ಸಾಧ್ಯವಾಗದ ಸಮಸ್ಯೆ ಅನೇಕ ಬಾರಿ ಉದ್ಭವಿಸುತ್ತದೆ.ಆದರೆ ಈಗ ನೀವು ಚಿಂತಿಸಬೇಕಾಗಿಲ್ಲ.

ನಿಮ್ಮ ಫೋನ್ ಆನ್ ಆಗಿದ್ದರೂ ಸಹ, ನಿಮ್ಮ ಫೋನ್ ಸ್ವಿಚ್ ಆಫ್ ಆಗಿದೆ ಎಂದು ನಿಮ್ಮ ಮುಂದೆ ಇರುವ ವ್ಯಕ್ತಿಗೆ ತೋರಿಸಬಹುದು.

ಈ ಟ್ರಿಕ್ಸ್ ಬಳಸಿ

ಇದಕ್ಕಾಗಿ, ಮೊದಲು ಕರೆಗಳ ವಿಭಾಗಕ್ಕೆ ಹೋಗಿ ಮತ್ತು ಪೂರಕ ಸೇವೆಗಳ ಮೇಲೆ ಕ್ಲಿಕ್ ಮಾಡಿ. ಈ ಆಯ್ಕೆಯು ವಿಭಿನ್ನ ಹೆಸರುಗಳೊಂದಿಗೆ ವಿಭಿನ್ನ ಫೋನ್ ಗಳಲ್ಲಿ ಲಭ್ಯವಿರಬಹುದು.ಇದರ ನಂತರ, CALL WAITING ಇಲ್ಲಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಸ್ಮಾರ್ಟ್ ಫೋನ್ ಗಳಲ್ಲಿ ಕಾಲ್ ವೇಟಿಂಗ್ ಆಯ್ಕೆಯನ್ನು ಪೂರ್ವನಿಯೋಜಿತವಾಗಿ ಆನ್ ಮಾಡಲಾಗುತ್ತದೆ. ನಂತರ CALL WAITING ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.

ಜೈಲಿನಲ್ಲೇ 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಮೊಹಮ್ಮದ್ ಅಲಿ ಖಾನ್ ಹತ್ಯೆ

Posted by Vidyamaana on 2024-06-03 08:30:11 |

Share: | | | | |


ಜೈಲಿನಲ್ಲೇ 1993ರ ಮುಂಬೈ ಸರಣಿ ಸ್ಫೋಟದ ಅಪರಾಧಿ ಮೊಹಮ್ಮದ್ ಅಲಿ ಖಾನ್ ಹತ್ಯೆ

ಕೊಲ್ಹಾಪುರ : 1993 ರ ಮುಂಬೈ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಮೊಹಮ್ಮದ್ ಅಲಿ ಖಾನ್ ಅಲಿಯಾಸ್ ಮನೋಜ್ ಕುಮಾರ್ ಭನ್ವರ್ ಲಾಲ್ ಗುಪ್ತಾ ಅವರನ್ನು ಇಲ್ಲಿನ ಕಲಾಂಬಾ ಜೈಲಿನಲ್ಲಿ ಐವರು ಕೈದಿಗಳು ಹತ್ಯೆ ಮಾಡಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದ ಜೈಲಿನಲ್ಲಿ ಈ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, 70 ವರ್ಷದ ಮೊಹಮ್ಮದ್ ಅಲಿ ಖಾನ್ 1993 ರ ಬಾಂಬ್ ಸ್ಫೋಟದಲ್ಲಿ ದೋಷಿ ಎಂದು ಸಾಬೀತಾಗಿದ್ದು, ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಸ್ಫೋಟಕ್ಕೆ ಮೊದಲು ಭಯೋತ್ಪಾದಕರಿಗೆ ಆರ್ಡಿಎಕ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ತಲುಪಿಸಿದ ಆರೋಪ ಮೊಹಮ್ಮದ್ ಮೇಲಿದೆ. ಸದ್ಯ ಕೊಲ್ಹಾಪುರ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಎಸ್.ಆರ್.ಕೆ. ಲ್ಯಾಡರ್ಸ್ ನ ರಜತ ಸಂಭ್ರಮದ ಸಮಾರೋಪ ಸಮಾರಂಭ

Posted by Vidyamaana on 2024-05-22 18:26:12 |

Share: | | | | |


ಎಸ್.ಆರ್.ಕೆ. ಲ್ಯಾಡರ್ಸ್ ನ ರಜತ ಸಂಭ್ರಮದ ಸಮಾರೋಪ ಸಮಾರಂಭ

ಪುತ್ತೂರು; ಕಳೆದ ೨೫ ವರ್ಷಗಳಿಂದ ರೈತರು ನನ್ನನ್ನು ಬೆಳೆಸಿದ್ದಾರೆ. ಅವರಿಗೆ ಕೃತಜ್ಞತೆ ಅರ್ಪಿಸುವ ಕೆಲಸವನ್ನು ರಜತ ಸಂಭ್ರಮದ ಮೂಲಕ ನಡೆಸಲಾಗುವುದು. ಸಂಸ್ಥೆಯ ರಜತ ಸಂಭ್ರಮದ ಅಂಗವಾಗಿ ಹತ್ತು ಹಲವು ಸಾಮಾಜಿಕ ಹಾಗೂ ಶೈಕ್ಷಣಿಕ ಸೇವಾಕಾರ್ಯಗಳನ್ನು ಮಾಡಲಾಗಿದೆ ಎಂದು ಎಸ್‌ಆರ್‌ಕೆ  ಲ್ಯಾಡರ‍್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಕೇಶವ ಅಮೈ ತಿಳಿಸಿದರು.

ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಸಂಸ್ಥೆಯ ೨೫ ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನಲೆಯಲ್ಲಿ ಸರಣಿ ಕಾರ್ಯಕ್ರಮಗಳಾಗಿ ರಕ್ತದಾನ ಶಿಬಿರ, ವಿಶೇಷೆ್ಚÃತನ ಮಕ್ಕಳಿಗೆ ಕೊಡುಗೆ ಮತ್ತು ಗೌರವ ಸನ್ಮಾನ, ಬನ್ನೂರು ಶಾಲಾ ಕಟ್ಟಡದ ಕೊಠಡಿ ದುರಸ್ಥಿ, ಡಾ.ಶಿವರಾಮ ಕಾರಂತ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆರೋಗ್ಯ ಮತ್ತು ಸೈಬರ್ ಕ್ರೆöÊಂ ಮಾಹಿತಿ ಶಿಬಿರ, ಪುತ್ತೂರು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು ಮತ್ತು ಹಣ್ಣು ವಿತರಣೆ, ಎಸ್ ಆರ್ ಕೆ ಸಂಸ್ಥೆಯ ಸಿಬಂದಿಗಳಿಗೆ ಕ್ರೀಡಾಕೂಟ, ಕೊಯಿಲ ಜಾಣುವಾರು ಸಂವರ್ಧನಾ ಕೇಂದ್ರದ ಕಾರ್ಮಿಕರಿಗೆ ಸನ್ಮಾನ, ಕೃಷಿ ವಿಚಾರ ಸಂಕಿರಣ, ಎಸ್ಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಉನ್ನತಶ್ರೇಣಿಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಸನ್ಮಾನ ನಡೆಸಲಾಗಿದೆ.

ಚುನಾವಣಾ ನೀತಿ ಸಂಹಿತೆ ಹಿನ್ನಲೆ : ಸಾಮಾಜಿಕ ಜಾಲ ತಾಣಗಳ ಮೇಲೆ ಪೊಲೀಸ್ ಹದ್ದಿನ ಕಣ್ಣು:ಎಸ್ ಪಿ

Posted by Vidyamaana on 2023-04-07 22:41:25 |

Share: | | | | |


ಚುನಾವಣಾ ನೀತಿ ಸಂಹಿತೆ ಹಿನ್ನಲೆ : ಸಾಮಾಜಿಕ ಜಾಲ ತಾಣಗಳ ಮೇಲೆ ಪೊಲೀಸ್ ಹದ್ದಿನ ಕಣ್ಣು:ಎಸ್ ಪಿ

ಮಂಗಳೂರು : ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಆಕ್ಷೇಪಾರ್ಹ ಪೋಸ್ಟ್ ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು “ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್” ಸ್ಥಾಪಿಸಿ ಸೂಕ್ತ ಕ್ರಮಕ್ಕೆ ಮುಂದಾಗಿದೆ. 

ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ

Posted by Vidyamaana on 2024-03-01 19:43:09 |

Share: | | | | |


ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ

ಪುತ್ತೂರು: ಮಾಜಿ‌ ಶಾಸಕಿ ಶಕುಂತಳಾ ಟಿ. ಶೆಟ್ಟಿ ತನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.

ಪುತ್ತೂರು ಪ್ರಜ್ಞಾ ಆಶ್ರಮದ ವಿಶೇಷ ಚೇತನರೊಂದಿಗೆ ಬೆರೆತು, ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.

ಪುತ್ತೂರು ಕಾಂಗ್ರೆಸ್ ರಕ್ತನಿಧಿಯ ಅಧ್ಯಕ್ಷ ನವೀನ್ ಸಿಟಿಗುಡ್ಡೆ,ಕಲಾವಿದ ಕೃಷ್ಣಪ್ಪ,ಚಂದ್ರಶೇಖರ ನಾಯ್ಕ,ರಾಜೀವ ಗೌಡ,ರಾಮಚಂದ್ರ ನಾಯ್ಕ್ ಮಂಜಲ್ಪಡುಪು,ವಿಕ್ಟರ್ ಪಾಯಸ್,ದಿನೇಶ್ ಶೇವಿರೆ,ಪೂರ್ಣೇಶ್ ಕುಮಾರ್ ಭಂಡಾರಿ ಮೊದಲಾದವರು  ಉಪಸ್ಥಿತರಿದ್ದರು.

ಪಣೋಲಿಬೈಲು ಕ್ಷೇತ್ರದಲ್ಲಿ ಹರಕೆ ಕೋಲ ; ಖಾದರ್ ಗೆಲುವಿಗಾಗಿ ಹೇಳಿಕೊಂಡಿದ್ದ ಹರಕೆ ತೀರಿಸಿದ ಮುಡಿಪು ಕಾಂಗ್ರೆಸ್

Posted by Vidyamaana on 2024-02-06 14:26:13 |

Share: | | | | |


ಪಣೋಲಿಬೈಲು ಕ್ಷೇತ್ರದಲ್ಲಿ ಹರಕೆ ಕೋಲ ; ಖಾದರ್ ಗೆಲುವಿಗಾಗಿ ಹೇಳಿಕೊಂಡಿದ್ದ ಹರಕೆ ತೀರಿಸಿದ ಮುಡಿಪು ಕಾಂಗ್ರೆಸ್

ಮಂಗಳೂರು, : ಚುನಾವಣೆ ಸಂದರ್ಭದಲ್ಲಿ ಯುಟಿ ಖಾದರ್ ಗೆಲುವಿಗಾಗಿ ಹೇಳಿಕೊಂಡ ಹರಕೆ ಕೋಲವನ್ನು ಪಣೋಲಿಬೈಲು ಕ್ಷೇತ್ರದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ಸಮ್ಮುಖದಲ್ಲಿ ನೆರವೇರಿಸಲಾಗಿದೆ.‌


ಬಂಟ್ವಾಳ ತಾಲೂಕಿನ ಕಾರಣಿಕದ ಸ್ಥಳ ಪಣೋಲಿಬೈಲು ಕಲ್ಲುರ್ಟಿ, ಕಲ್ಕುಡ ಕ್ಷೇತ್ರದಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾನುವಾರ ರಾತ್ರಿ ಹರಕೆ ಕೋಲ ನೆರವೇರಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಖಾದರ್ ಗೆಲುವಿಗಾಗಿ ಮುಡಿಪು ಕಾಂಗ್ರೆಸ್ ನಾಯಕರು ಹರಕೆ ಹೇಳಿಕೊಂಡಿದ್ದರು.  


ಭಾನುವಾರ ರಾತ್ರಿ ಕಲ್ಲುರ್ಟಿ, ಕಲ್ಕುಡ ದೈವಗಳಿಗೆ ಹರಕೆ ಕೋಲ ನೆರವೇರಿಸಿದ್ದು ಯು.ಟಿ ಖಾದರ್ ದೈವಗಳ ಕೊರಳಿಗೆ ಹೂಮಾಲೆ ಹಾಕಿ ನಮಿಸಿದ್ದಾರೆ. ಆಮೂಲಕ ಖಾದರ್ ಕಲ್ಲುರ್ಟಿ, ಕಲ್ಕುಡ ದೈವಗಳ ಆಶೀರ್ವಾದ ಪಡೆದಿದ್ದಾರೆ. ಸ್ಪೀಕರ್ ಯು.ಟಿ ಖಾದರ್ ಜೊತೆಗೆ  ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮತ್ತಿತರರು ಭಾಗಿಯಾಗಿದ್ದರು.


ಹರಕೆ ಕೋಲ ನೆರವೇರಿಸಿದ ಯುಟಿ ಖಾದರ್ ವಿರುದ್ಧ ಮುಸ್ಲಿಂ ಧಾರ್ಮಿಕ ಮುಖಂಡನ ಆಕ್ರೋಶ : ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್


ಬಂಟ್ವಾಳ ತಾಲೂಕಿನ ಶ್ರೀ ಕ್ಷೇತ್ರ ಪಣೋಲಿಬೈಲ್‌ನಲ್ಲಿ ನಡೆದ ತುಳುನಾಡಿನ ಕಾರ್ಣಿಕ ದೈವಗಳಾದ ಕಲ್ಲುರ್ಟಿ ಕಲ್ಕುಡ ದೈವಗಳ ಹರಕೆ ಕೋಲದಲ್ಲಿ ವಿಧಾನ ಸಭಾಧ್ಯಕ್ಷ ಯುಟಿ ಖಾದರ್ ಅವರು ಭಾಗವಹಿಸಿ ಕಲ್ಲುರ್ಟಿ ಕಲ್ಕುಡ ದೈವಗಳ ಆಶೀರ್ವಾದ ಪಡೆದರು. ದೈವಗಳ ಹರಕೆ ಕೋಲ ನೆರವೇರಿಸಿದ ಯು.ಟಿ ಖಾದರ್ ವಿರುದ್ಧ ಮುಸ್ಲಿಂ ಮುಖಂಡನೋರ್ವ ವಿರೋಧ ವ್ಯಕ್ತಪಡಿಸಿದ್ದಾರೆ.


ಮುಸ್ಲಿಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಎಂಬುವವರು ಯು.ಟಿ. ಖಾದರ್ ಬಗ್ಗೆ ಆಕ್ಷೇಪಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.


‘ಕೊರಗಜ್ಜನ ಭಕ್ತ ಯು.ಟಿ ಖಾದರ್ ನನ್ನು ಮುಸ್ಲಿಮರು ಬರೀ ರಾಜಕಾರಣಿಯಾಗಿ ಕಂಡರೆ ಸಾಕು. ಧಾರ್ಮಿಕ ಮುಖಂಡರಾಗಿ ಕಾಣುವುದು ಬೇಡ. ಉಲೆಮಾ, ಸಾತ್ವಿಕರು ತುಂಬಿದ ಧಾರ್ಮಿಕ ವೇದಿಕೆಗೆ ಮುಸ್ಲಿಂ ನಾಯಕನಾಗಿ ಹತ್ತಿಸುವುದು ತರವಲ್ಲ. ಅದು ಆತನ ಭೂತಾರಾಧನೆಗೆ ನಾವು ಕೊಡುವ ಅಂಗೀಕಾರವಾಗುತ್ತೆ. ಖಾದರ್ ಕೊರಗಜ್ಜನಿಗೂ ಕಲ್ಲುರ್ಟಿ, ಪಂಜುರ್ಲಿಗೂ ಆರಾಧಿಸಲಿ‌. ಪ್ರಸಾದ ಪಡೆದು ತಲೆಗೆ ಮತ್ತಿಕೊಂಡು ನರಕಕ್ಕೆ ಹೋಗಲಿ‌. ಅದು ಆತನ ವೈಯಕ್ತಿಕ ಸ್ವತಂತ್ರ‌. ಅದು ಭಾರತದಲ್ಲಿ ಎಲ್ಲರಿಗೂ ಇರುವ ಸಂವಿಧಾನಿಕ ಸ್ವಾತಂತ್ರ. ಅದನ್ನು ತಡೆಯುವ ಹಕ್ಕು ನನಗಿಲ್ಲ. ಆದರೆ ಧಾರ್ಮಿಕ ನಾಯಕನಾಗಿ ನಾವು ಅಂಗೀಕರಿಸುವುದು, ಆತನ ಭೂತಾರಾಧನೆಯನ್ನು ನಾವು ಒಪ್ಪಿಕೊಂಡಂತಾಗುತ್ತದೆ. ಉಲಮಾಗಳು ಅವನಿಗೆ ಗೌರವ ಕೊಡುವುದು ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಸಂದೇಶವಾಗಿ ಪರಿಣಮಿಸುತ್ತದೆ’ ಎಂದು ಯು.ಟಿ.ಖಾದರ್ ನಡವಳಿಕೆ ಆಕ್ಷೇಪಿಸಿ ಸಾಲೆತ್ತೂರು ಫೈಝಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.


ಯಾರೋ ಒಬ್ಬ ಗೀಚಿದ್ರೆ , ನೂರು ಜನ ಒಪ್ಪಿಕೊಳ್ಳಲ್ಲ. ಅದಕ್ಕೆಲ್ಲ ನಾವು ಇಂಪಾರ್ಟೆಂಟ್ ಕೊಡಬಾರದು: ಯು ಟಿ ಖಾದರ್


ಹರಕೆ ‌ಕೋಲದಲ್ಲಿ ಭಾಗಿಯಾದ ಸ್ಪೀಕರ್ ಯುಟಿ ಖಾದರ್​ ವಿರುದ್ಧ ಮುಸ್ಲಿಂ ಧಾರ್ಮಿಕ ಮುಖಂಡ ಸಾಲೆತ್ತೂರು ಫೈಝಿ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಬರೆದು ಹಾಕಿದ್ದರು. ಆದರೀಗ ಈ ವಿಚಾರವಾಗಿ ವಿಧಾನಸಭಾ ಅಧ್ಯಕ್ಷ ಸ್ಪಷ್ಟನೆ ಕೊಟ್ಟಿದ್ದಾರೆ.


ಯು.ಟಿ ಖಾದರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಗೀಚುವವರನ್ನು ಇತಿಹಾಸ ನೆನಪಿಟ್ಟುಕೊಳ್ಳಲ್ಲ. ಪ್ರಶ್ನೆ ಕೇಳುವವರನ್ನ ಇತಿಹಾಸ ನೆನಪಿಗೆ ಇಟ್ಟುಕೊಳ್ಳಲ್ಲ. ಯಾರು ಕೆಲ್ಸ ಮಾಡ್ತಾರೆ, ಯಾರು ಉತ್ತರ ಕೊಡ್ತಾರೆ ಅವರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತೆ. ನಮ್ಮ ಪ್ರಾಚೀನ ಆಚರಣೆ ಅನುಗುಣವಾಗಿ ಅವರು ಹರಕೆ ಇಟ್ಟುಕೊಂಡಿದ್ರು. ಅದಕ್ಕೆ ಹೋಗುವುದು, ಗೌರವ ಕೊಡುವುದು ನಮ್ಮ ಸಂಸ್ಕೃತಿ. ಹೀಗಾಗಿ ನಾನು ಹೋಗಿದ್ದೆ. ಯಾರೋ ಒಬ್ಬ ಗೀಚಿದ್ರೆ , ನೂರು ಜನ ಒಪ್ಪಿಕೊಳ್ಳಲ್ಲ. ಅದಕ್ಕೆಲ್ಲ ನಾವು ಇಂಪಾರ್ಟೆಂಟ್ ಕೊಡಬಾರದು ಎಂದು ಹೇಳಿದ್ದಾರೆ.

Recent News


Leave a Comment: