ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಸುದ್ದಿಗಳು News

Posted by vidyamaana on 2024-07-25 06:35:41 |

Share: | | | | |


ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ ನಗರದ ಕಂಠಿ ಸರ್ಕಲ್ ಬಳಿ ತ್ರಿಬಲ್ ರೈಡ್ ನಲ್ಲಿ ಬಂದ ಯುವಕರಿಗೆ ಪಿಎಸ್ ಐ ಬುದ್ದಿವಾದ ಹೇಳಿದ ಘಟನೆ ನಡೆದಿದೆ. ತ್ರಿಬಲ್ ರೈಡ್ ಮೂಲಕ ಕಾಲೇಜ್ ಅಡ್ಮಿಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಇಳಕಲ್ ನಗರ ಠಾಣಾ ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ್ ಎಂಬವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು.

ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ. ಅದನ್ನೇ ತಗೆದುಕೊಳ್ಳಿ ಎಂದು ಅಳುತ್ತ ದುಡ್ಡು ಕೊಟ್ಟಿದ್ದಾನೆ.

ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್‌ಐ ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್‌ಐ ಹೇಳಿದ್ದಾರೆ.

 Share: | | | | |


ಕರ್ನಾಟಕ ಟೈಲರ್‍ಸ್ ಎಸೋಸಿಯೇಶನ್ ಪುತ್ತೂರು ಕ್ಷೇತ್ರದ ಮಹಾಸಭೆ

Posted by Vidyamaana on 2023-07-31 03:13:10 |

Share: | | | | |


ಕರ್ನಾಟಕ ಟೈಲರ್‍ಸ್ ಎಸೋಸಿಯೇಶನ್ ಪುತ್ತೂರು ಕ್ಷೇತ್ರದ ಮಹಾಸಭೆ

ಪುತ್ತೂರು: ಆಧುನಿಕ ಜಗತ್ತಿನಲ್ಲಿ ಫ್ಯಾಷನ್ ಉಡುಗೆ ಬಂದರೂ ಜನರು ಮಾತ್ರ ತಮ್ಮ ಹಳೆಯ ಶೈಲಿಯ ಬಟ್ಟೆ ಧರಿಸುವುದನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದು ಇದು ಭಾರತೀಯ ಸಂಸ್ಕೃತಿಯ ಮೆರುಗಾಗಿದೆ, ಅನಾಧಿ ಕಾಲದಿಂದಲೂ ಟೈಲರಿಂಗ್ ವೃತ್ತಿ ಮಾಡಿಕೊಂಡೇ ಬದುಕನ್ನು ಕಟ್ಟಿದ ಅನೇಕರು ನಮ್ಮ ಸಮಾಜದಲ್ಲಿ ಇದ್ದಾರೆ. ಟೈಲರಿಂಗ್ ವೃತ್ತಿಯನ್ನು ಮಾಡಿಕೊಂಡು ಬಡತನದಲ್ಲೇ ಜೀವನ ಸಾಗಿಸುವ ಕುಟುಂಬಗಳೂ ಇದೆ, ಟೈಲರಿಂಗ್ ವೃತ್ತಿ ಮಾಡುವ ಬಡ ಟೈಲರ್‌ಗಳಿಗೆ ಜೀವನಕ್ಕೆ ಭದ್ರತೆ ನೀಡಬೇಕದ ಅವಶ್ಯಕತೆ ಇದ್ದು ನಿಮ್ಮ ಬೇಡಿಕೆಗಳ ಬಗ್ಗೆ ವಿಧಾನಸಭೆಯನ್ನು ಧ್ವನಿ ಎತ್ತುವ ಮೂಲಕ ಸರಕಾರದ ಗಮನಕ್ಕೆ ತರುತ್ತೇನೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಜು.3೦ ರಂದು ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಸ್ಟೇಟ್ ಟೈಲರ್‍ಸ್ ಎಸೋಸಿಯೇಶನ್ ಇದರ ಪುತ್ತೂರು ಕ್ಷೇತ್ರ ಸಮಿತಿಯ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಟೈಲರಿಂಗ್ ವೃತ್ತಿಗೆ ಇಂದು ಆಧುನಿಕತೆಯ ಟಚಪ್ ದಾಳಿ ಮಾಡಿದೆ. ಹೊರ ಜಿಲ್ಲೆಗಳಿಂದ ಬರುವ ಫ್ಯಾಷನ್ ಡಿಸೈನ್ ವೃತ್ತಿಯವರು ದುಬಾರಿ ಬೆಲೆಗೆ ಟೈಲರಿಂಗ್ ಕೆಲಸವನ್ನು ಮಾಡುತ್ತಿದ್ದಾರೆ, ಟೈಲರಿಂಗ್ ವೃತ್ತಿಯಲ್ಲೇ ಜೀವನ ಕಟ್ಟಿಕೊಂಡ ಅನೇಕರೂ ಇದ್ದಾರೆ. ಆದರೆ ಬಡ ಟೈಲರ್‌ಗಳು ಅಂದಿನಿಂದ ಇಂದಿನ ತನಕ ಬಡವನಾಗಿಯೇ ತನ್ನ ಕಸುಬನ್ನು ಮಾಡುತ್ತಿದ್ದು ಅವರಿಗೆ ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಟೈಲರಿಂಗ್ ಕಾರ್ಮಿಕರನ್ನು ಸೇರಿಸುವ ಬಗ್ಗೆ ತಾನು ಆ ಇಲಾಖೆಯ ಸಚಿವರ ಜೊತೆ ಮಾತುಕತೆ ನಡೆಸಿ ತನ್ನಿಂದಾಗುವ ಎಲ್ಲಾ ಸಹಾಯವನ್ನು ಮಾಡುವುದಾಗಿ ಶಾಸಕರು ಸಭೆಯಲ್ಲಿ ಭರವಸೆ ನೀಡಿದರು.

ಕಳೆದ ೨೪ ವರ್ಷಗಳಿಂದ ತಮ್ಮ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದರೂ ಇದುವರೆಗೂ ಅದನ್ನು ಯಾವುದೇ ಸರಕಾರ ಪರಿಗಣಿಸಿಲ್ಲ ಎಂದು ಸಮಿತಿಯ ಪ್ರಮುಖರು ಶಾಸಕರ ಗಮನಕ್ಕೆ ತಂದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಶಾಸಕರು ಸಭೆಯಲ್ಲಿ , ಸಾರ್ವಜನಿಕ ವೇದಿಕೆಯಲ್ಲಿ ನಾವು ಬೊಬ್ಬೆ ಹೊಡೆದರೆ ಯಾವುದೇ ಪ್ರಯೋಜನವಿಲ್ಲ ಮಾತನಾಡುವಲ್ಲಿ ಮಾತನಾಡಬೇಕು, ಕೇಳುವವರಲ್ಲಿ ಕೇಳಿದರೆ ಅದಕ್ಕೆ ಪರಿಹಾರ ಸಿಗಬಹುದು ಮತ್ತು ಬೇಡಿಕೆಯನ್ನು ಈಡೇರಿಸಿಕೊಳ್ಳಬಹುದು ಈ ನಿಟ್ಟಿನಲ್ಲಿ ತನು ಖಂಡಿತಾ ಪ್ರಯತ್ನ ಪಡುವುದಾಗಿ ಶಾಸಕರು ಹೇಳಿದರು.

ಪುತ್ತೂರು ಕ್ಷೆತ್ರ ಸಮಿತಿಯ ಅಧ್ಯಕ್ಷರಾದ ಜಯರಾಮ ಬಿ ಎನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೆಎಸ್‌ಟಿ ರಾಜ್ಯ ಸಮಿತಿ ಅಧ್ಯಕ್ಷರಾದ ಬಿ ಎ ನಾರಾಯಣ, ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎ ಪ್ರಜ್ವಲ್‌ಕುಮಾರ್, ಜಿಲ್ಲಾ ಸಮಿತಿ ಅಧ್ಯಕ್ಷರಾದ ಜಯಂತ ಉರ್ಲಾಂಡಿ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಲಿಗೋಧರ ಆಚಾರ್ಯ, ಜಿಲ್ಲಾ ಸಮಿತಿ ಕೋಶಾಧಿಕಾರಿ ಈಶ್ವರಕುಲಾಲ್,ಪುತ್ತೂರು ಸಮಿತಿ ಕಾರ್ಯದರ್ಶಿ ಉಮಾ ಯು ನಾಯ್ಕ್, ಕೋಶಾಧಿಕಾರಿ ಸುಜಾತಾ ಮಂದಾರ, ಪ್ರೇಮಲತಾ ಶೆಟ್ಟಿ, ದಾಮೋದರ ಶೆಟ್ಟಿಗಾರ್, ಕೇಶವ ಕದ್ರಿ, ಯಶೋಧರ್ ಜೈನ್, ನಾಗೇಶ್ ಕುಲಾಲ್  ಉಪಸ್ಥಿತರಿದ್ದರು. ರಾಜ್ಯ ಸಮಿತಿ ಆಂತರಿಕ ಲೆಕ್ಕಪರಿಸೋಧಕರಾದ ಬಿ ರಘುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಉಮಾನಾಯ್ಕ್ ವಂದಿಸಿದರು. ಶಂಭು ಬಲ್ಯಾಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕೆಎಸ್‌ಟಿ ವತಿಯಿಂದ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಮಂಗಳೂರು :ಕೊಣಾಜೆ ಮೂಲದ ಯುವತಿ ಅಫ್ರಿನಾ ನಾಪತ್ತೆ; ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Posted by Vidyamaana on 2023-11-01 14:13:15 |

Share: | | | | |


ಮಂಗಳೂರು :ಕೊಣಾಜೆ ಮೂಲದ ಯುವತಿ ಅಫ್ರಿನಾ ನಾಪತ್ತೆ; ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು: ಕೊಣಾಜೆ ಗ್ರಾಮದ ನಡುಪದವಿನ ಯುವತಿ ಕಾಣೆಯಾದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಾಣೆಯಾದ ಯುವತಿ ಅಫ್ರಿನಾ (20). ಈಕೆ ಅ.30ರಂದು ಸಂಜೆ 3.30 ಗಂಟೆಗೆ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ ನಡುಪದವು ಎಂಬಲ್ಲಿಂದ ಕಾಣೆಯಾಗಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


ಅಫ್ರಿನಾ ಪತ್ತೆಯಾದಲ್ಲಿ ಪೊಲೀಸ್ ಆಯುಕ್ತರ ಕಛೇರಿಯ ಮಂಗಳೂರು ನಗರ ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ 0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಯ 0824-2220536, 9480802350 ನೇ ಸಂಖ್ಯೆಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.

ಪುತ್ತೂರು: ಅನಿತಾ ಬೀಡಿ ವರ್ಕ್ ಕಂಪೆನಿ ಮಾಲೀಕ ಮಹಮ್ಮದ್ ಆಲಿ ಮನೆ ಮೇಲೆ ಐಟಿ ದಾಳಿ

Posted by Vidyamaana on 2023-10-10 15:03:12 |

Share: | | | | |


ಪುತ್ತೂರು: ಅನಿತಾ ಬೀಡಿ ವರ್ಕ್ ಕಂಪೆನಿ ಮಾಲೀಕ ಮಹಮ್ಮದ್ ಆಲಿ ಮನೆ ಮೇಲೆ ಐಟಿ ದಾಳಿ

ಉಪ್ಪಿನಂಗಡಿ ಸಮೀಪದ ಪೆರ್ನೆ ಎಂಬಲ್ಲಿರುವ ಅನಿತಾ ಬೀಡಿ ವರ್ಕ್ಸ್ ಮಾಲೀಕರ ಮಹಮ್ಮದ್ ಆಲಿ ಯಾನೆ ಮಮ್ಮು ಅವರ ಮನೆ ಮೇಲೆ ಐಟಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಪೆರ್ನೆ ಸಮೀಪ ಇರುವ ಅವರ ಮನೆ ಬಳಿಯೇ ಅನಿತಾ ಬೀಡಿ ಕಂಪೆನಿ ಕಾರ್ಯ ನರ್ವಹಿಸುತ್ತಿದೆ. ಆದಾಯ ತೆರಿಗೆ ಇಲಾಖೆಯ ಹಲವು ಅಧಿಕಾರಿಗಳಿಂದ ಮನೆ ಮತ್ತು ವರ್ಕ್ ಶಾಪ್ ಗೆ ಏಕ ಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಹಾಸನದಲ್ಲಿ ನಿರೂಪಕನ ಮೇಲೆ ಗರಂ ಆದ ಸಿಎಂ ಸಿದ್ದರಾಮಯ್ಯ. ಕಾರಣವೇನು ಗೊತ್ತಾ

Posted by Vidyamaana on 2023-11-08 08:30:41 |

Share: | | | | |


ಹಾಸನದಲ್ಲಿ ನಿರೂಪಕನ ಮೇಲೆ ಗರಂ ಆದ ಸಿಎಂ ಸಿದ್ದರಾಮಯ್ಯ. ಕಾರಣವೇನು ಗೊತ್ತಾ

ಹಾಸನ : ಹಾಜರಿದ್ದವರಿಗೆ ಮಾತ್ರ ಸ್ವಾಗತ ಕೋರು, ಹಾಜರು ಇಲ್ಲದವರಿಗೆ ಯಾಕೆ ಸ್ವಾಗತ ಕೋರುತ್ತೀಯಾ..? ಎಂದು ಹಾಸನದಲ್ಲಿ ನಿರೂಪಕನ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.ಹಾಸನದ ಹಾಸನಾಂಬೆ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ನಂತರ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾರೆ.ಈ ವೇಳೆ ಈ ಘಟನೆ ನಡೆದಿದೆ.


ಸ್ವಾಗತ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಗರಂ ಆಗಿದ್ದಾರೆ. ಕಾರ್ಯಕ್ರಮಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಇನ್ನಿತರ ಶಾಸಕರುಗಳು ಗೈರಾಗಿದ್ದರು. ಈ ವೇಳೆ ಅವರ ಅನುಪಸ್ಥಿತಿಯಲ್ಲೂ ಅವರಿಗೆ ಸ್ವಾಗತ ಎಂದು ನಿರೂಪಕ ಹೇಳಿದ್ದ. ಈ ಹಿನ್ನಲೆ ಇಲ್ಲಿ ಹಾಜರಿರುವವರಿಗೆ ಮಾತ್ರ ಸ್ವಾಗತ ಕೋರು ಎಂದು ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಹಾರೂನ್ ಹಾಜಿ ಪುರುಷರಕಟ್ಟೆ ನಿಧನ

Posted by Vidyamaana on 2024-02-29 18:58:56 |

Share: | | | | |


ಹಾರೂನ್ ಹಾಜಿ ಪುರುಷರಕಟ್ಟೆ ನಿಧನ

ಪುತ್ತೂರು :ಇಲ್ಲಿನ ಪುರುಷರಕಟ್ಟೆ ನಿವಾಸಿ ಪುರುಷರಕಟ್ಟೆ ಹಿಮಾಯತ್ತುಲ್ ಇಸ್ಲಾಂ ಮದ್ರಸದ ಸ್ಥಾಪಕಾಧ್ಯಕ್ಷ  ಮರೀಲ್ ದಿ.ಮೂಸಾ ಹಾಜಿಯವರ ಮಗ ಹಾರೂನ್ ಪುರುಷರಕಟ್ಟೆ (65ವರ್ಷ )ಅಲ್ಪ ಕಾಲದ ಸೌಖ್ಯದಿಂದ  ಫೆ 29 ರಂದು ಸ್ವಗೃಹದಲ್ಲಿ ನಿಧಾನರಾದರು.


ಮೃತರು ಪುರುಷರಕಟ್ಟೆ ಹಿಮಾಯತ್ತುಲ್ ಇಸ್ಲಾಂ ಮದ್ರಸದಲ್ಲಿ ಸುದೀರ್ಘ 20 ವರ್ಷಕ್ಕಿಂತ ಅಧಿಕ ವರ್ಷ ಅಧ್ಯಕ್ಷರಾಗಿ, ಮುಕ್ವೆ ರೆಹ್ಮನಿಯ ಜುಮಾ ಮಸೀದಿಯ ಕಾರ್ಯದರ್ಶಿ ಮತ್ತು ಮುಕ್ವೆ ದರ್ಗಾ ಶರೀಪ್ ಇದರ ಊರೂಸ್ ಕಮಿಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪತ್ನಿ, ಮಗಳು, ಅಳಿಯ ಹಾರಾಡಿಯ ಇಂಜಿನಿಯರ್ ಆತೀಶ್,ಸಹೋದರರಾದ  ಅದಂಕುಂಞ, ಶೇಕಾಲಿ,ಮತ್ತು ಇಸ್ಮಾಯಿಲ್  ರವರನ್ನು ಅಗಲಿದ್ದಾರೆ.

ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಶರಣಾದ ಸಿಟಿ ಬಸ್ ಚಾಲಕ

Posted by Vidyamaana on 2023-12-20 09:53:04 |

Share: | | | | |


ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಶರಣಾದ ಸಿಟಿ ಬಸ್ ಚಾಲಕ

ಮಂಗಳೂರು : ಸಿಟಿ ಬಸ್ ಚಾಲಕನೊಬ್ಬ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಮೃತರನನ್ನು ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ (39) ಎಂದು ಗುರುತಿಸಲಾಗಿದೆಇವರು ಸ್ಟೇಟ್ ಬ್ಯಾಂಕ್ ಕಿನ್ಯಾ ನಡುವೆ ಚಲಿಸುವ ಸಿಟಿ ಬಸ್ ನಲ್ಲಿ ಚಾಲಕರಾಗಿದ್ದ ಇವರು, ಇಂದು ನಸುಕಿನ ಜಾವ ಸೋಮೇಶ್ವರ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೃತ್ಯ ಎಸಗುವ ಮುನ್ನ ಸಮುದ್ರ ತೀರದಲ್ಲಿ ಬೈಕನ್ನು ಇಟ್ಟು ಟವಲೊಂದರಲ್ಲಿ ಬೈಕ್ ಕೀ, ಪರ್ಸ್‌ ಚಪ್ಪಲಿಗಳನ್ನು ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ಅವಿವಾಹಿತರಾಗಿರುವ ಜಗದೀಶ್ ಅವರ ಪಸ್೯ನಲ್ಲಿ ಚಿನ್ನ ಅಡವಿಟ್ಟ ಚೀಟಿ, ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ ಚೀಟಿಗಳು ಪತ್ತೆಯಾಗಿವೆ.

Recent News


Leave a Comment: