ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಸುದ್ದಿಗಳು News

Posted by vidyamaana on 2024-07-03 13:36:16 |

Share: | | | | |


ವಿವಾಹಿತ ಯುವಕನ ಜತೆ ವಿದ್ಯಾರ್ಥಿನಿ ಲವ್, ಕೆರೆಗೆ ಹಾರಿ ಇಬ್ಬರೂ ಆತ್ಮಹತ್ಯೆ!

ಬೆಂಗಳೂರು (ಜು.3): ಇಲ್ಲಿನ ಹೊರವಲಯದ ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಜುಲೈ 1ರಂದು ಪ್ರೇಮಿಗಳು ನಾಪತ್ತೆಯಾಗಿದ್ದರು.

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸ್ತಿದ್ದರು. ಆದರೆ ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿನಿ ತಲಘಟ್ಟಪುರ ಸಮೀಪದ ಅಂಜನಾಪುರ ಬಳಿ ವಾಸವಿದ್ದಳು. ಯುವಕ ಶ್ರೀಕಾಂತ್ ಕೋಣನಕುಂಟೆ ನಿವಾಸಿಯಾಗಿದ್ದ. ಇಬ್ಬರೂ ನಾಪತ್ತೆಯಾಗಿದ್ದರು. ನಾಪತ್ತೆ ಹಿನ್ನಲೆ ಎರಡೂ ಕಡೆಯವರ ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

ಮದುವೆಯಾಗಿದ್ದ ಶ್ರೀಕಾಂತ್!

ಶ್ರೀಕಾಂತ್ ಗೆ ಬೇರೊಬ್ಬರ ಜೊತೆಗೆ ವಿವಾಹವಾಗಿದೆ. ಆದರೂ ಅಂಜನಾಳನ್ನ ಪ್ರೀತಿ ಮಾಡ್ತಿದ್ದ. ಇಬ್ಬರು ಒಟ್ಟಿಗೆ ಬದುಕಲು ಅವಕಾಶ ಇಲ್ಲ ಎಂದು ಸಾಯೋ ನಿರ್ಧಾರ ಮಾಡಿದ್ದಾರೆ. ಮೊದಲು ಶ್ರೀಕಾಂತ್ ಮೃತದೇಹ ಕೆರೆಯಲ್ಲಿ ಕಾಣಿಸಿದೆ. ಆತನನ್ನ ಮೇಲೆತ್ತಿದ್ದ ನಂತರ ಅಂಜನಾ ಮೃತದೇಹ ಕೂಡ ಮೇಲೆ ಬಂದಿದೆ. ಅಂಜನಾ ಮೃತದೇಹದ ಬಗ್ಗೆ ಪೊಲೀಸರಿಗೂ ಮಾಹಿತಿ ಇರುದಿಲ್ಲ. ಇಬ್ಬರು ಕೈಗೆ ಹಗ್ಗ ಕಟ್ಟಿಕೊಂಡಿದ್ದರಿಂದ ಇಬ್ಬರ ಮೃತದೇಹ ಒಟ್ಟಿಗೆ ಸಿಕ್ಕಿದೆ. ಮೊಬೈಲ್ ನಲ್ಲಿ ವೀಡಿಯೊ ಮಾಡಿರುವ ಯುವತಿ ಅಂಜನಾ ಅದನ್ನ ಆಟೋದಲ್ಲಿ ಬಿಟ್ಟು ಶ್ರೀಕಾಂತ್ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮ್ಮ ಸಾವಿಗೆ ಯಾರು ಕಾರಣ ಅಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಆಗಲ್ಲ. ಹಾಗಾಗಿ ಸಾಯ್ತಿದ್ದೇವೆ ಎಂದು ವಿಡಿಯೋ ಮಾಡಿದ್ದಾಳೆ. ಮೊಬೈಲ್ ವಶಕ್ಕೆ ಪಡೆದುಕೊಂಡಿರೊ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 Share: | | | | |


ಸ್ನೇಹಿತನನ್ನು ಕೊಲೆಗೈದು ಗುಹೆಯಲ್ಲಿ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು!

Posted by Vidyamaana on 2024-01-16 04:45:51 |

Share: | | | | |


ಸ್ನೇಹಿತನನ್ನು ಕೊಲೆಗೈದು ಗುಹೆಯಲ್ಲಿ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು!

ಚಿಕ್ಕಬಳ್ಳಾಪುರ, ಜ.16: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಂಧ್ರಪ್ರದೇಶ ಮೂಲದ ತನ್ನ ಸ್ನೇಹಿತನನ್ನೇ ದುಷ್ಕರ್ಮಿಗಳು ಕೊಲೆ (Murder)ಮಾಡಿ ಮೃತದೇಹವನ್ನು ಗುಹೆಯಲ್ಲಿ ಸುಟ್ಟುಹಾಕಿ ತಲೆಮರೆಸಿಕೊಂಡಿದ್ದರು. ಆದರೆ ಆರೋಪಿಗಳು ಚಾಪೆ ಕೆಳಗೆ ತೂರಿದರೆ ಪೊಲೀಸರು ರಂಗೋಲಿ ಕೆಳಗೆ ತೂರುತ್ತಾರೆ ಎಂಬಂತೆ ಆರೋಪಿಯೊಬ್ಬನನ್ನು ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಪಾತಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪೊಲೀಸರ ತನಿಖೆಗೆ ಹೆದರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ.


ನೆರೆರಾಜ್ಯ ಆಂಧ್ರಪ್ರದೇಶದ ದಾದಿವಾರಪಲ್ಲಿ ನಿವಾಸಿ ವೆಂಕಟರಮಣ ನಾಯ್ಕ ಎಂಬಾತ ಕಾಣೆಯಾಗಿದ್ದ. ಈ ಬಗ್ಗೆ ವೆಂಕಟರಮಣನ ತಂದೆ ಜನವರಿ 7 ರಂದು ಅಮ್ಮಡಗೂರು ಪೊಲೀಸ್ ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರಿಗೆ ವೆಂಕಟರಮಣನ ಸ್ನೇಹಿತರಾದ ಸ್ವಗ್ರಾಮದ ಬಾಬು ಮತ್ತು ಪ್ರಭಾಕರ್ ಮೇಲೆ ಅನುಮಾನ ಬಂದಿತ್ತು.ನೆರೆರಾಜ್ಯ ಆಂಧ್ರಪ್ರದೇಶದ ದಾದಿವಾರಪಲ್ಲಿ ನಿವಾಸಿ ವೆಂಕಟರಮಣ ನಾಯ್ಕ ಎಂಬಾತ ಕಾಣೆಯಾಗಿದ್ದ. ಈ ಬಗ್ಗೆ ವೆಂಕಟರಮಣನ ತಂದೆ ಜನವರಿ 7 ರಂದು ಅಮ್ಮಡಗೂರು ಪೊಲೀಸ್ ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರಿಗೆ ವೆಂಕಟರಮಣನ ಸ್ನೇಹಿತರಾದ ಸ್ವಗ್ರಾಮದ ಬಾಬು ಮತ್ತು ಪ್ರಭಾಕರ್ ಮೇಲೆ ಅನುಮಾನ ಬಂದಿತ್ತು.


ಸ್ನೇಹಿತನಿಂದ ಕೊಲೆ ರಹಸ್ಯ ಬಹಿರಂಗ


ಮೃತನ ಸ್ನೇಹಿತ ಬಾಬುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ವೆಂಕಟರಮಣನನ್ನು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ವಂಡಮಾನ್ ಜಲಾಶಯದ ಬಳಿ ನಿರ್ಜನ ಪ್ರದೇಶದಲ್ಲಿ ಕೊಂದು ಶವ ಸುಟ್ಟು ಹಾಕಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಈ ಬಗ್ಗೆ ಪೊಲೀಸರು ಕರ್ನಾಟಕದ ಪಾತಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಾಬುನನ್ನು ವಶಕ್ಕೆ ಪಡೆದು ಸ್ಥಳ ಪರಿಶೀಲನೆ ನಡೆಸಿದ್ದಾರೆ.ಕೊಲೆ ಆರೋಪಿ ಪ್ರಭಾಕರ್ ಆತ್ಮಹತ್ಯೆ


ಆಂಧ್ರದ ಪೊಲೀಸರು ಆರೋಪಿ ಬಾಬುವನ್ನು ವಶಕ್ಕೆ ಪಡೆದು ತನಿಖೆ ಆರಂಬಿಸುತ್ತಿರುವ ವಿಚಾರ ತಿಳಿದ ಮತ್ತೊಬ್ಬ ಆರೋಪಿ ಪ್ರಭಾಕರ್ ಪೊಲೀಸರ ತನಿಖೆಗೆ ಹೆದರಿ ಸ್ವಗ್ರಾಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.


ವೆಂಕಟರಮಣ ನಾಯ್ಕ ಕೊಲೆಗೆ ಕಾರಣ


ವೆಂಕಟರಮಣ ನಾಯ್ಕ, ಬಾಬು, ಪ್ರಭಾಕರ್ ಮೂವರು ಸ್ನೇಹಿರಾಗಿದ್ದರು. ಬಾಬು ಹಾಗೂ ವೆಂಕಟರಮಣ ನಾಯ್ಕ ಮಧ್ಯೆ ಜಮೀನು ವಿವಾದ ಇತ್ತು. ಈ ವಿಚಾರವಾಗಿ ವೆಂಕಟರಮಣ ನಾಯ್ಕ್ ಪದೆ ಪದೆ ಕ್ಯಾತೆ ತೆಗೆಯುತ್ತಿದ್ದನಂತೆ. ಇದರಿಂದ ಕುಪಿತನಾದ ಬಾಬು ವೆಂಕಟರಮಣನನ್ನು ಗಡಿನಾಡು ವಂಡಮಾನ್ ಬಳಿ ಕರೆತಂದು ಮದ್ಯಪಾನ ಮಾಡಿಸಿದ್ದಾರೆ. ನಂತರ ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಆರೋಪಿ ಬಾಬು ಪೊಲೀಸರು ಮುಂದೆ ಬಾಯಿ ಬಿಟ್ಟಿದ್ದಾನೆ.


ಕೊಲೆ ಮಾಡಿದ ಸ್ಥಳ ಕರ್ನಾಟಕ ರಾಜ್ಯಕ್ಕೆ ಸೇರಿರುವ ಕಾರಣ ಆಂಧ್ರ ಪೊಲೀಸರು ಕೊಲೆ ಪ್ರಕರಣವನ್ನು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಪೊಲೀಸರಿಗೆ ವರ್ಗಾವಣೆ ಮಾಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅಳಿಯನಿಂದ ಕೊಲೆಯಾದ ಪುತ್ರ, ಅಗಲಿಕೆ ಸಹಿಸದೆ ತಾಯಿ ಆತ್ಮಹತ್ಯೆ

Posted by Vidyamaana on 2024-07-03 07:49:39 |

Share: | | | | |


ಅಳಿಯನಿಂದ ಕೊಲೆಯಾದ ಪುತ್ರ, ಅಗಲಿಕೆ ಸಹಿಸದೆ ತಾಯಿ ಆತ್ಮಹತ್ಯೆ

ಮೈಸೂರು: ಕೊಲೆಯಾಗಿ (Murder Case) ಹೋದ ಪುತ್ರನ (Son) ಅಗಲಿಕೆಯ ನೋವು ಸಹಿಸದೆ ತಾಯಿಯೊಬ್ಬರು (Mother) ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ಮೈಸೂರಿನ (Mysore News) ಕೂರ್ಗಳ್ಳಿಯಲ್ಲಿ ನಡೆದಿದೆ.ಭಾಗ್ಯಮ್ಮ (46) ಪುತ್ರನ ಸಾವಿನ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡವರು.ನಿನ್ನೆ ಅವರು ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇವರ ಅಳಿಯ, ಅಂದರೆ ಮಗಳ ಗಂಡನಿಂದಲೇ ಮಗ ಅಭಿಷೇಕ್‌ ಕೊಲೆಯಾಗಿದ್ದ. ಈ ಕೊಲೆ ಮೈಸೂರಿನ ಕುವೆಂಪುನಗರದಲ್ಲಿ ಜೂನ್‌ 9ರಂದು ನಡೆದಿತ್ತು.

ಬಾಡಿಗೆ ಆಸೆಗೆ ಬಿದ್ದು ಕೋಟ್ಯಾಂತರ ರೂ ವೆಚ್ಚದ ಮನೆ, ಫ್ಲಾಟ್ ಕಳೆದುಕೊಂಡ ಮಾಲೀಕರು: ವಂಚಿಸಿ ಪರಾರಿಯಾದ ಆಲಿ ಬೇಗ್

Posted by Vidyamaana on 2024-06-25 07:59:41 |

Share: | | | | |


ಬಾಡಿಗೆ ಆಸೆಗೆ ಬಿದ್ದು ಕೋಟ್ಯಾಂತರ ರೂ ವೆಚ್ಚದ ಮನೆ, ಫ್ಲಾಟ್ ಕಳೆದುಕೊಂಡ ಮಾಲೀಕರು: ವಂಚಿಸಿ ಪರಾರಿಯಾದ ಆಲಿ ಬೇಗ್

ಬೆಂಗಳೂರು, ಜೂನ್​ 24: ಬಾಡಿಗೆ ಆಸೆಗೆ ಬಿದ್ಧ ಮನೆ ಮಾಲೀಕರಿಗೆ ಬ್ರೋಕರ್ (broker) ಕಂಪನಿ ಹೆಸರಲ್ಲಿ ಕೋಟಿ ಕೋಟಿ ರೂ. ಪಂಗನಾಮ (cheated) ಹಾಕಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಜಿಯೂ ಹೋಮ್ಸ್ ಎಂಬ ಕಂಪನಿ ಹೆಸರಲ್ಲಿ ಮನೆಗಳು, ಫ್ಲಾಟ್​ಗಳನ್ನು ಡೀಲ್ ಮಾಡಲಾಗಿದೆ. ಬಾಡಿಗೆಗೆ ಕೊಡಿಸುತ್ತೇನೆ ಎಂದು ಮಧ್ಯಸ್ಥಿಕೆ ವಹಿಸಿದ್ದ ಆಸಾಮಿ ಅಹಮದ್ ಆಲಿ ಬೇಗ್, ಮಾಲೀಕರಿಂದ ಮನೆ ಪಡೆದು ನನ್ನದೇ ಅಂತ ನಂಬಿಸಿ ಲಕ್ಷ ಲಕ್ಷ ರೂ. ಹಣ ಪಡೆದು ಲೀಸ್​ಗೆ ಕೊಟ್ಟಿದ್ದಾರೆ.

ಪುತ್ತೂರು : ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ - ರಸ್ತೆ ತಡೆ

Posted by Vidyamaana on 2024-06-21 11:57:43 |

Share: | | | | |


ಪುತ್ತೂರು : ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ - ರಸ್ತೆ ತಡೆ

ಪುತ್ತೂರು: ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಪುತ್ತೂರು ಬಿಜೆಪಿಯಿಂದ ಜೂ. ೨೦ರಂದು ಪುತ್ತೂರು ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಮೆರವಣಿಗೆಯ ನಡುವೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಬಳಿಯ ಗಾಂಧಿಕಟ್ಟೆ ಬಳಿ  ರಸ್ತೆ ತಡೆಯು ನಡೆಯಿತು. ಪೊಲೀಸರು ಬಂದು ಕಾರ್ಯಕರ್ತರನ್ನು ರಸ್ತೆ ತಡೆ ಮಾಡದಂತೆ ಮನವಿ ಮಾಡಿ ರಸ್ತೆಯಲ್ಲಿ ಕುಳಿತ ಕಾರ್ಯಕರ್ತರನ್ನು ಎಬ್ಬಿಸುವ ಪ್ರಯತ್ನ ಮಾಡಿದರು.  ಕೊನೆಗೆ ಪ್ರತಿಭಟನಾಕಾರರು ಕೋರ್ಟ್ ರಸ್ತೆಯ ಮೂಲಕ ತಾಲೂಕು ಆಡಳಿತ ಸೌಧದ ಮುಂದೆ ತಹಸೀಲ್ದಾರ್ ಕಚೇರಿ‌  ಮೂಲಕ ಸರಕಾರಕ್ಕೆ ಉಗ್ರ ಪ್ರತಿಭಟನೆಯ ಎಚ್ಚರಿಕೆಯ ಮನವಿ ಸಲ್ಲಿಸಿದರು.



ಅಕ್ರಮ ಮದ್ಯ ಮಾರಾಟ ಪ್ರಕರಣ: ಆರೋಪಿ ಖುಲಾಸೆ

Posted by Vidyamaana on 2024-01-05 21:23:18 |

Share: | | | | |


ಅಕ್ರಮ ಮದ್ಯ ಮಾರಾಟ ಪ್ರಕರಣ: ಆರೋಪಿ ಖುಲಾಸೆ

ಪುತ್ತೂರು:  ಅಕ್ರಮ ಮಧ್ಯ ಮಾರಾಟ ಮಾಡಿದ್ದಾರೇ ಎನ್ನಲಾದ ಪ್ರಕರಣದ ಆರೋಪಿ ಆಶೋಕ್ ಸುವರ್ಣ ರವರನ್ನು ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಸದ್ರಿ ಪ್ರಕರಣದಿಂದ ಖುಲಾಸೆ ಮಾಡಿರುತ್ತದೆ.


ಪುತ್ತೂರು  ತಾಲೂಕು ಬಲ್ನಾಡು ಗ್ರಾಮದ ನ್ಯೂ ಜನತಾ ಕಾಲೋನಿಯಲ್ಲಿರುವ ಆಶೋಕ್ ಸುವರ್ಣ ಎಂಬವರಿಗೆ ಸೇರಿದ ಮನೆಯ ಒಳಗಡೆ ಅಡಿಗೆ ಕೋಣೆಯಲ್ಲಿ 2 ಗುಂಡಿಗಳನ್ನು ತೆಗೆದು ಅದರ ಒಳಗೆ ಅಕ್ರಮವಾಗಿ ಮಧ್ಯದ ಬಾಟಲಿಗಳನ್ನು ಇಟ್ಟು ಟೈಲ್ಸ್ ಮುಚ್ಚಿರುವುದನ್ನು ಹಾಗೂ ನೈಲಾನ್ ಚೀಲದಲ್ಲಿ ಮಧ್ಯದ ಬಾಟಲಿಗಳನ್ನು ಇಟ್ಟಿರುವುದನ್ನು ಪತ್ತೆ ಹಚ್ಚಿದ್ದು, ಸೊತ್ತುಗಳನ್ನು ವಶಕ್ಕೆ ತೆಗೆದೆಕೊಂಡು ಈ ನಿಟ್ಟಿನಲ್ಲಿ ದೂರು ದಾಖಲಿಸಿಕೊ0ಡ ಅಬಕಾರಿ ಪೊಲೀಸರು ಆಶೋಕ್ ಸುವರ್ಣರವರನ್ನು ಬ0ಧಿಸಿದ್ದರು ಹಾಗೂ ಅವರ ಮೇಲೆ ಕೇಸು ದಾಖಲಿಸಿದ್ದರು ಹಾಗೂ ನ್ಯಾಯಾಲಯಕ್ಕೆ ಅ0ತಿಮ ವರದಿಯನ್ನು ಸಲ್ಲಿಸಿದ್ದರು.  


ಹೀಗಿರುವಲ್ಲಿ ನ್ಯಾಯಾಲಯವು ಈ ಪ್ರಕರಣವನ್ನು ಹ0ತ ಹ0ತವಾಗಿ ತನಿಖೆಗೆ ಕೈಗೆತ್ತಿಕೊ0ಡು ಹಾಗೂ ಪ್ರೋಸಿಕ್ಯೂಷನ್ ಸುಮಾರು 7 ಸಾಕ್ಷಿಗಳನ್ನು ತನಿಖೆ ನಡೆಸಿ ಮತ್ತು 8 ದಾಖಲೆಗಳನ್ನು ಹಾಗೂ ಸುಮಾರು 27 ಮುದ್ದೆ ಮಾಲುಗಳನ್ನು ಪರಿಶೀಲಿಸಿ, ಪ್ರೋಸಿಕ್ಯೂಷನ್ ಈ ಪ್ರಕರಣವನ್ನು ಸ0ಶಯಾತೀತವಾಗಿ ಸಾಭೀತುಪಡಿಸಲು ವಿಫಲವಾಗಿದೆ ಎ0ದೂ ತೀರ್ಮಾನಿಸಿ, ಆರೋಪಿಯನ್ನು ನಿರಪರಾದಿಯೆಂದು ಬಿಡೂಗಡೆಗೊಳಿಸಲು ಮಾನ್ಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧಿಶರಾದ ಶ್ರೀಯುತ ಶಿವಣ್ಣ ಹೆಚ್ ಆರ್ ರವರು ಆದೇಶಿಸಿರುತ್ತಾರೆ.


ಆರೋಪಿಯ ಪರವಾಗಿ ಹಿರಿಯ ವಕೀಲರಾದ ಕಜೆ ಲಾ ಚೇಂಬರ್ಸ್ನ ಶ್ರೀ.ಮಹೇಶ್ ಕಜೆಯವರು ವಾದಿಸಿದ್ದರು.

ಡಿಪ್ಲೋಮಾ ಪದವೀಧರರಿಗೆ ಗುಡ್ ನ್ಯೂಸ್ : ಯುವನಿಧಿ ಜಾರಿಗೆ ಮುಹೂರ್ತ ಫಿಕ್ಸ್

Posted by Vidyamaana on 2023-11-10 12:54:44 |

Share: | | | | |


ಡಿಪ್ಲೋಮಾ ಪದವೀಧರರಿಗೆ ಗುಡ್ ನ್ಯೂಸ್ : ಯುವನಿಧಿ ಜಾರಿಗೆ ಮುಹೂರ್ತ ಫಿಕ್ಸ್

ಬೆಂಗಳೂರು : ರಾಜ್ಯ ಸರ್ಕಾರದ 5 ನೇ ಗ್ಯಾರಂಟಿ ಯೋಜನೆಯಾದ ಡಿಪ್ಲೋಮಾ, ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, 2024 ರ ಜನವರಿಯಿಂದ ಜಾರಿಗೊಳಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.


ಈ ಕುರಿತು ಮಾಹಿತಿ ನೀಡಿರುವ ಮಧು ಬಂಗಾರಪ್ಪ ಅವರು, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಯನ್ನು ಜನವರಿಯಿಂದ ಜಾರಿಗೊಳಿಸಲಾಗುತ್ತಿದ್ದು, ಡಿಪ್ಲೋಮಾ ಪೂರ್ಣಗೊಳಿಸಿದವರಿಗೆ 1,500 ರೂ. ಪದವಿ ಪೂರ್ಣಗೊಂಡವರಿಗೆ 3,000 ರೂ. ಹಣವನ್ನು ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.


ಶಿಕ್ಷಣ ಮುಗಿಸಿ ಕೆಲಸ ಸಿಗದೆ ಮನೆಯಲ್ಲಿರುವ ವಿದ್ಯಾರ್ಥಿಗಳು ತಂದೆ-ತಾಯಿಗಳಿಗೆ ಹೊರೆಯಾಗದಿರಲೆಂದು ಹಾಗೂ ತಮ್ಮ ಸಣ್ಣ ಪುಟ್ಟ ಖರ್ಚುಗಳು, ಉದ್ಯೋಗ ಹುಡುಕಲು ಅನುಕೂಲವಾಗಲೆಂಬ ಉದ್ದೇಶದಿಂದ ಯುವನಿಧಿ ಯೋಜನೆಯನ್ನು ಜನವರಿಯಿಂದ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.



Leave a Comment: