ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಸುದ್ದಿಗಳು News

Posted by vidyamaana on 2024-07-22 23:30:36 |

Share: | | | | |


ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ   ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಪುತ್ತೂರು: ಲಾರಿಯೊಂದರ ಟಯರ್ ಜೋಡಣೆ ವೇಳೆ ಟಯ‌ರ್ ರಿಂಗ್ ಚಿಮ್ಮಿ ಟಯರ್ ಸಮೇತ ಎಸೆಯಲ್ಪಟ್ಟ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಜು.22ರಂದು ರಾತ್ರಿ ನಡೆದಿದೆ.

ಲಾರಿಯೊಂದು ಟಯರ್ ಪಂಚರ್ ಆಗಿ ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ನಿಲ್ಲಿಸಲಾಗಿತ್ತು. ಅದರ ಚಾಲಕ ಕರಾಯಕ್ಕೆ ಹೋಗಿ ಟಯರ್ ಪಂಚರ್ ಮಾಡಿಸಿಕೊಂಡು ಆಟೋ ರಿಕ್ಷಾದಲ್ಲಿ ಟಯ‌ರ್ ತಂದಿದ್ದರು. ಟಯರ್ ಜೋಡಣೆ ಮಾಡಲು ಕರಾಯದಿಂದಲೇ ಬಂದ ಟಯರ್ ಕಾರ್ಮಿಕ ಜೋಡಣೆ ವೇಳೆ ಟಯರ್‌ನ ರಿಂಗ್ ಹೊರಚಿಮ್ಮಿದ ರಭಸಕ್ಕೆ ಟಯರ್‌ ಸಮೇತ  ಕರಾಯ ಜನತಾ ಕಾಲೋನಿ ಕರೀಂ ರವರ ಮಗ ರಶೀದ್ ತುಸು ದೂರ ಎಸೆಯಲ್ಪಟ್ಟಿದ್ದಾರೆ. ತಕ್ಷಣ ತೀವ್ರ ಗಾಯಗೊಂಡ ಕಾರ್ಮಿಕನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

 Share: | | | | |


ಪುತ್ತೂರು :ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಮಚಂದ್ರ ಸೇವೆಯಿಂದ ಅಮಾನತು

Posted by Vidyamaana on 2024-05-04 20:42:20 |

Share: | | | | |


ಪುತ್ತೂರು :ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಮಚಂದ್ರ ಸೇವೆಯಿಂದ ಅಮಾನತು

ಪುತ್ತೂರು ಮೇ 04 : ವರ್ಗಾವಣೆ ಆದೇಶಕ್ಕೆ ಕೆಎಟಿಯಿಂದ ತಡೆಯಾಜ್ಞೆ ತಂದು ಮತ್ತೆ ಕೆಲಸಕ್ಕೆ ಸೇರಿದ ದಿನವೇ ಮತ್ತೆ ಅಮಾನಾತಾದ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಪುತ್ತೂರಿನ ಎಪಿಎಂಸಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿದ್ದ ರಾಮಚಂದ್ರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕರ್ನಾಟಕ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಎಂ.ಗಂಗಾಧರ ಸ್ವಾಮಿ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.ವರ್ಗಾವಣೆ ವಿರುದ್ಧ ಕೆಎಟಿಯಿಂದ ತಡೆಯಾಜ್ಞೆ ತಂದು ಗುರುವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ರಾಮಚಂದ್ರ ಅವರಿಗೆ ಮಧ್ಯಾಹ್ನ ವೇಳೆ ಅಮಾನತು ಆದೇಶ ನೀಡಲಾಗಿದೆ.

ರಾಮಚಂದ್ರ ಅವರು ತರಕಾರಿ ವ್ಯಾಪಾರಸ್ಥರಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ತರಕಾರಿ ವಾಹನಗಳ ಒಳಪ್ರವೇಶವನ್ನು ನಿರಾಕರಿಸುತ್ತಿದ್ದು, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಪರವಾನಗಿ ನೀಡದೆ ಇರುವುದರಿಂದ ವ್ಯಾಪಾರದಲ್ಲಿ ನಷ್ಟ ಆಗಿದೆ ಎಂದು ಎಪಿಎಂಸಿ ಪ್ರಾಂಗಣದ ತರಕಾರಿ ವ್ಯಾಪಾರಸ್ಥರು ಜನವರಿ 4ರಂದು ಕೃಷಿ ಮಾರಾಟ ಇಲಾಖೆ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು.

ಪುಂಜಾಲಕಟ್ಟೆ ; ಲಾರಿ ಪಲ್ಟಿಯಾಗಿ ಫರಂಗಿಪೇಟೆ ನಿವಾಸಿ ಕಾರ್ತಿಕ್ ಸ್ಥಳದಲ್ಲಿಯೇ ಮೃತ್ಯು, ಇಬ್ಬರು ಚಿಂತಾಜನಕ

Posted by Vidyamaana on 2024-07-19 12:13:59 |

Share: | | | | |


ಪುಂಜಾಲಕಟ್ಟೆ ;  ಲಾರಿ ಪಲ್ಟಿಯಾಗಿ ಫರಂಗಿಪೇಟೆ ನಿವಾಸಿ ಕಾರ್ತಿಕ್ ಸ್ಥಳದಲ್ಲಿಯೇ ಮೃತ್ಯು, ಇಬ್ಬರು ಚಿಂತಾಜನಕ

ಬಂಟ್ವಾಳ : ಲಾರಿಯೊಂದು ಪಲ್ಟಿಯಾಗಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟು ಇಬ್ಬರು ತೀವ್ರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಪುಂಜಾಲಕಟ್ಟೆಯಲ್ಲಿ ಶುಕ್ರವಾರ ನಡೆದಿದೆ.

   ಫರಂಗಿಪೇಟೆ ನಿವಾಸಿ ಕಾರ್ತಿಕ್ ಎಂಬಾತ ಮೃತಪಟ್ಟಿದ್ದಾರೆ. ಉಳಿದಂತೆ ಗಾಯಗೊಂಡವರ ಹೆಸರು ಮಾಹಿತಿ ಲಭ್ಯವಾಗಿಲ್ಲ.

ಶಿವಮೊಗ್ಗ : 1 ಗಂಟೆಯಾದರು ಬಾರದ ಈಶ್ವರಪ್ಪ : ಕಾದು ಸುಸ್ತಾಗಿ ತೆರಳಿದ ಕೇಂದ್ರ ನಾಯಕರು

Posted by Vidyamaana on 2024-03-17 20:42:07 |

Share: | | | | |


ಶಿವಮೊಗ್ಗ : 1 ಗಂಟೆಯಾದರು ಬಾರದ ಈಶ್ವರಪ್ಪ : ಕಾದು ಸುಸ್ತಾಗಿ ತೆರಳಿದ ಕೇಂದ್ರ ನಾಯಕರು

ಶಿವಮೊಗ್ಗ, ಮಾ.17: ಬಂಡಾಯ ಎದ್ದಿರುವ ಕೆ.ಎಸ್. ಈಶ್ವರಪ್ಪ ಸಿಟ್ಟು ಶಮನಕ್ಕೆ ಬಿಜೆಪಿ ಹೈಕಮಾಂಡ್​ ನಾಯಕರು ಮುಂದಾಗಿದ್ದು ಆದರೆ ಮಾತುಕತೆ ವಿಫಲವಾಗಿದೆ. ಮಾರ್ಚ್​ 18ರಂದು ಶಿವಮೊಗ್ಗದಲ್ಲಿ ನಡೆಯುವ ಪ್ರಧಾನಿ ಮೋದಿ ಸಮಾವೇಶಕ್ಕೆ ಕೆಎಸ್​ ಈಶ್ವರಪ್ಪ ಅವರನ್ನು ಆಹ್ವಾನಿಸಿ, ಸಿಟ್ಟು ಶಮನಗೊಳಿಸಲು ಕೇಂದ್ರ ನಾಯಕರು ಆಗಮಿಸಿದ್ದರು. ಆದರೆ ಈಶ್ವರಪ್ಪ ಕೇಂದ್ರ ನಾಯಕರನ್ನು ಮನೆಯಲ್ಲೇ ಬಿಟ್ಟು ಹೊರನಡೆದಿದ್ದಾರೆ. 


ಬಂಡಾಯ ಶಮನ ಮತ್ತು ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಹೇಳಲು ಇಂದು ಬೆಳಗ್ಗೆ ಕೆ.ಎಸ್​ ಈಶ್ವರಪ್ಪ ಮನೆಗೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್​ ಅಗರ್ವಾಲ್​, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್, ವಿಧಾನ ಪರಿಷತ್​ ಸದಸ್ಯ ಡಿ.ಎಸ್.ಅರುಣ್​ ಆಗಮಿಸಿದ್ದರು. 


ಆದರೆ ಕೆಎಸ್​ ಈಶ್ವರಪ್ಪ ಮಾತುಕತೆ ನಡುವೆಯೇ ಎದ್ದು ಹೊರ ನಡೆದಿದ್ದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ನಗರದ ಗೋಪಾಳದಲ್ಲಿ ಆಯೋಜಿಸಿದ್ದ ದೇವಸ್ಥಾನ ಮತ್ತು ಹೋಮದಲ್ಲಿ ಭಾಗಿಯಾಗಿದ್ದ ಕೆಎಸ್​ ಈಶ್ವರಪ್ಪ ಒಂದು ಗಂಟೆ ಕಳೆದರೂ, ಮನೆಗೆ ಬರಲಿಲ್ಲ. ಹೀಗಾಗಿ ಕೇಂದ್ರ ನಾಯಕರು ಕೆ.ಎಸ್​.ಈಶ್ವರಪ್ಪ ಅವರನ್ನು ಕಾದು ಮನೆಯಿಂದ ತೆರಳಿದರು. 


ಇದಕ್ಕೂ ಮುನ್ನ ಹೈಕಮಾಂಡ್ ಸೂಚನೆ ಮೇರೆಗೆ ಈಶ್ವರಪ್ಪ ನಿವಾಸಕ್ಕೆ ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿಎಸ್ ಅರುಣ್ ಮತ್ತು ರವಿಕುಮಾರ್ ಭೇಟಿ ನೀಡಿದ್ದರು. ಈಶ್ವರಪ್ಪ ಜೊತೆ ಒಂದು ಗಂಟೆ ಮಾತುಕತೆ ನಡೆಸಿ ಸಂಧಾನಕ್ಕೆ ಯತ್ನಿಸಿದ್ದರು. ಜಿಲ್ಲೆಗೆ ಮೋದಿ ಆಗಮಿಸುತ್ತಿದ್ದು, ಸಮಾವೇಶಕ್ಕೆ ಆಗಮಿಸುವಂತೆ ಆಹ್ವಾನವನ್ನೂ ನೀಡಿದ್ದರು. ಆದರೆ, ಸಂಧಾನಕಾರರ ಮನವಿಗೆ ಈಶ್ವರಪ್ಪ ಸ್ಪಂದಿಸಿಲ್ಲ. ಹೀಗಾಗಿ ಬಿಜೆಪಿ ನಾಯಕರು ಈಶ್ವರಪ್ಪ ನಿವಾಸದಿಂದ ವಾಪಸ್ ತೆರಳಿದ್ದರು.

VIDEO 4 ಅಡಿ ಜಾಗದಲ್ಲಿ ಮೂರು ಅಂತಸ್ತಿನ ಕಟ್ಟಡ; ಇಂಜಿನಿಯರ್ ಎಲ್ಲಿದ್ದೀಯಪ್ಪಾ ಎಂದ ನೆಟ್ಟಿಗರು

Posted by Vidyamaana on 2023-11-05 16:41:27 |

Share: | | | | |


VIDEO  4 ಅಡಿ ಜಾಗದಲ್ಲಿ ಮೂರು ಅಂತಸ್ತಿನ ಕಟ್ಟಡ; ಇಂಜಿನಿಯರ್ ಎಲ್ಲಿದ್ದೀಯಪ್ಪಾ ಎಂದ ನೆಟ್ಟಿಗರು

ನವದೆಹಲಿ: ಸ್ವಂತ ಮನೆ ಕಟ್ಟುವುದು ಎಲ್ಲರ ಕನಸು. ಆದರೆ ಹಲವರಿಗೆ ಕನಸಾಗಿಯೇ ಉಳಿದಿದೆ. ಯಾಕೆಂದರೆ.. ಜಾಗ ದುಬಾರಿ, ಇಂತಹ ಪರಿಸ್ಥಿತಿಯಲ್ಲಿ ಕೆಲವರು ಚಿಕ್ಕ ಜಾಗದಲ್ಲಿಯೂ ಅದ್ಭುತವಾದ ಮನೆ ಕಟ್ಟುತ್ತಾರೆ. ಇಷ್ಟು ಚಿಕ್ಕ ಪ್ರದೇಶದಲ್ಲಿ ಮನೆ ನಿರ್ಮಾಣ ಎಷ್ಟು ಚೆನ್ನಾಗಿ ನಡೆದಿದೆ ಎಂದು ಯೋಚಿಸಿದರೆ ನೋಡುಗರಿಗೂ ಆಶ್ಚರ್ಯವಾಗುತ್ತದೆಯೇ?ಇಂತಹ ಎರಡು ಮನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ.

VIDEO 4 ಅಡಿ ಜಾಗದಲ್ಲಿ ಮೂರು ಅಂತಸ್ತಿನ ಕಟ್ಟಡ; ಇಂಜಿನಿಯರ್ ಎಲ್ಲಿದ್ದೀಯಪ್ಪಾ ಎಂದ ನೆಟ್ಟಿಗರು

ಮೊದಲ ಮನೆ ನಿರ್ಮಾಣವಾಗಿದ್ದು, ಕೇವಲ 4 ಅಡಿ ಜಾಗದಲ್ಲಿ ಮೂರು ಅಂತಸ್ತಿನ ಕಟ್ಟಡ. ಎರಡನೇ ಮನೆ ಎರಡು ಅಂತಸ್ತಿನದ್ದಾಗಿದ್ದು, ಎರಡು ಅಡಿ ಜಾಗದಲ್ಲಿ. ಈ ಕಟ್ಟಡದಲ್ಲಿ ಅಂಗಡಿಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡಗಳ ವಿಡಿಯೋ ವೈರಲ್​​ ಆಗಿದೆ. ಆದರೆ ಈ ಕಟ್ಟಡ ಎಲ್ಲವೆ ಎನ್ನುವ ಮಾಹಿತಿ ಮಾತ್ರ ಖಚಿತವಾದ ಮಾಹಿತಿಲ್ಲ.ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಈ ವಿಶಿಷ್ಟ ಮನೆಯನ್ನು ತೋರಿಸಿ ಹೇಳುತ್ತಾನೆ. ನಾಲ್ಕು ಅಡಿ ಜಾಗದಲ್ಲಿ ಮೂರಂತಸ್ತಿನ ಮನೆ ಕಟ್ಟಿದ್ದಾರೆ. ಇಷ್ಟು ಚಿಕ್ಕ ಜಾಗದಲ್ಲಿ ನಿರ್ಮಿಸಿರುವ ಮನೆಯ ಮೇಲಕ್ಕೆ ಹೋಗಲು ಮೆಟ್ಟಿಲುಗಳೂ ಇವೆ. ಹೊರಗಿನಿಂದ ಬಾಗಿಲೂ ಇದೆ. ಇದೇ ರೀತಿಯ ಇನ್ನೊಂದು ಮನೆಯೂ ಈ ವಿಡಿಯೋದಲ್ಲಿ ಕಾಣಿಸುತ್ತಿದೆ. ಇದು ಅನೇಕ ಜನರನ್ನು ಆಶ್ಚರ್ಯಗೊಳಿಸುತ್ತದೆ. 2 ಅಡಿ ಅಗಲದ ಕಟ್ಟಡದಲ್ಲಿ ಹಲವು ಅಂಗಡಿಗಳೂ ಇವೆ. ಅದರ ಮೇಲೆ ಎರಡು ಅಂತಸ್ತಿನ ಮನೆಯನ್ನೂ ನಿರ್ಮಿಸಲಾಗಿದೆ.


ಈ ಎರಡು ಮನೆಗಳನ್ನು ನೋಡಿ ನೆಟ್ಟಿಗರು ಹಾಗೂ ಸ್ಥಳೀಯರು ಶಾಕ್ ಆಗಿದ್ದಾರೆ. ಅಂತಹ ಕಟ್ಟಡವನ್ನು ನಿರ್ಮಿಸಿದವರು ಯಾರು? ಇಂಜಿನಿಯರ್ ಎಲ್ಲಿದ್ಯಪ್ಪಾ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ಮೂಡಬಿದಿರೆ : ಕಾಲೇಜು ಸಿಬ್ಬಂದಿ ಹನುಮಂತಪ್ಪ ಹಾಸ್ಟೆಲ್ ನಲ್ಲೇ ಆತ್ಮಹತ್ಯೆಗೆ ಶರಣು

Posted by Vidyamaana on 2023-10-10 15:33:54 |

Share: | | | | |


ಮೂಡಬಿದಿರೆ : ಕಾಲೇಜು ಸಿಬ್ಬಂದಿ ಹನುಮಂತಪ್ಪ ಹಾಸ್ಟೆಲ್ ನಲ್ಲೇ ಆತ್ಮಹತ್ಯೆಗೆ ಶರಣು

ಮೂಡಬಿದಿರೆ : ಮೂಡಬಿದಿರೆಯ ಖಾಸಗಿ ಕಾಲೇಜಿನಲ್ಲಿ ಉದ್ಯೋಗಿಯಾಗಿರುವ ಯುವಕನೊಬ್ಬ ಹಾಸ್ಟೇಲ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಬಾಗಲಕೋಟೆಯ ನಿವಾಸಿ ಹನುಮಂತಪ್ಪ (24) ಎಂದು ಗುರುತಿಸಲಾಗಿದೆ. 


ಯುವಕ ಜನವರಿಯಲ್ಲಿ ಖಾಸಗಿ ಕಾಲೇಜಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಹನುಮಂತಪ್ಪನ ಹೆತ್ತವರು ಮೂಡುಬಿದಿರೆಗೆ ಬಂದ ನಂತರ ಮೃತದೇಹವನ್ನು ಅವರು ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ಮೂಡಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

4 ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪಡೆದು ತರಕಾರಿ ಮಾರಿಯೇ ಜೀವನ ಸಾಗಿಸುವ ಡಾ ಸಂದೀಪ್ ಸಿಂಗ್

Posted by Vidyamaana on 2024-01-01 12:37:27 |

Share: | | | | |


4 ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪಡೆದು ತರಕಾರಿ ಮಾರಿಯೇ ಜೀವನ ಸಾಗಿಸುವ ಡಾ ಸಂದೀಪ್ ಸಿಂಗ್

ಚಂಡಿಗಢ: ನಮ್ಮಲ್ಲಿ ಎಷ್ಟೇ ಉನ್ನತಮಟ್ಟದ ಶಿಕ್ಷಣವನ್ನು ಪಡೆದರೂ ಅದಕ್ಕೆ ತಕ್ಕ ಉದ್ಯೋಗ ಸಿಗುವುದು ತುಸು ಕಷ್ಟ. ಸಿಕ್ಕರೂ ಶಿಕ್ಷಣ ಪಡೆದ ಎಲ್ಲರಿಗೂ ಅದೇ ಕ್ಷೇತ್ರದಲ್ಲಿ ಕೆಲಸ ಸಿಗುವುದು ಇನ್ನೂ ಕಷ್ಟ. ನಾಲ್ಕು ಸ್ನಾತಕೋತ್ತರ ಪದವಿಗಳು ಮತ್ತು ಪಿಎಚ್‌ಡಿಗಳನ್ನು ಪಡೆದಿರುವ ವ್ಯಕ್ತಿಯೊಬ್ಬರು ದಿನನಿತ್ಯದ ಜೀವನ ಸಾಗಿಸಲು ರಸ್ತೆ ಬದಿ ತರಕಾರಿ ಮಾರುವ ಸ್ಥಿತಿಗೆ ಬಂದಿದ್ದಾರೆ.


ಪಂಜಾಬ್‌ ಮೂಲದ 39 ವರ್ಷದ ಡಾ. ಸಂದೀಪ್ ಸಿಂಗ್ 11 ವರ್ಷಗಳ ಕಾಲ ಪಂಜಾಬ್ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಪ್ರಾಧ್ಯಾಪಕರಾಗಿದ್ದರು. ಎಲ್ಲವೂ ಅಂದುಕೊಂಡಂತೆ ಇದ್ದಿದ್ದರೆ ಅವರಿಂದು ತರಕಾರಿ ಮಾರುವ ಸ್ಥಿತಿಗೆ ಬರುತ್ತಿರಲಿಲ್ಲ.ಕಾನೂನು ವಿಷಯದಲ್ಲಿ ಪಿಎಚ್‌ಡಿ ಮಾಡಿದ್ದಾರೆ ಮತ್ತು ಪಂಜಾಬಿ, ಪತ್ರಿಕೋದ್ಯಮ ಮತ್ತು ರಾಜಕೀಯ ವಿಜ್ಞಾನ ಸೇರಿದಂತೆ ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದು, ಈಗಲೂ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ.


ಗುತ್ತಿಗೆ ಆಧಾರದಲ್ಲಿ ಪ್ರಾಧ್ಯಾಪಕರಾಗಿದ್ದ ಸಂದೀಪ್‌ ಅವರಿಂದು ತರಕಾರಿಯನ್ನು ಮಾರುತ್ತಿದ್ದಾರೆ. ʼಪಿಎಚ್‌ ಡಿ ಸಬ್ಜಿವಾಲಾʼ ಎನ್ನುವ ತಳ್ಳುಗಾಡಿಯಲ್ಲಿ ರಸ್ತೆಬದಿಯಲ್ಲಿ ತರಕಾರಿ ಮಾರುತ್ತಿದ್ದಾರೆ.ಇದರ ಹಿಂದಿನ ಕಾರಣದ ಬಗ್ಗೆ ಮಾತನಾಡುವ ಅವರು, “ಸಂಬಳ ಕಡಿತ ಮತ್ತು ಸರಿಯಾದ ಸಮಯಕ್ಕೆ ವೇತನ ನೀಡುತ್ತಿರಲಿಲ್ಲ. ಇದರಿಂದ ಜೀವನ ಸಾಗಿಸುವುದು ಕಷ್ಟವಾಯಿತು. ಆ ಕಾರಣದಿಂದ ಕೆಲಸ ಬಿಡಬೇಕಾದ ಅನಿವಾರ್ಯತೆ ಎದುರಾಯಿತು. ನಿತ್ಯ‌ ಜೀವನ ಸಾಗಿಸಲು ತರಕಾರಿ ಮಾರುವ ವ್ಯಾಪಾರವನ್ನು ಆರಂಭಿಸಿದೆ. ಪ್ರೊಫೆಸರ್ ಆಗಿದ್ದಕ್ಕಿಂತ ತರಕಾರಿ ಮಾರಾಟ ಮಾಡಿ ಹೆಚ್ಚು ಹಣ ಗಳಿಸುತ್ತಿದ್ದೇನೆ. ನಿತ್ಯದ ವ್ಯಾಪಾರದ ಬಳಿಕ ಮನೆಗೆ ಹೋಗಿ ಪರೀಕ್ಷೆಗಾಗಿ ಓದುತ್ತೇನೆ. ಒಂದಲ್ಲ ಒಂದು ದಿನ ಹಣ ಉಳಿಸಿ ತನ್ನದೇ ಆದ ಟ್ಯೂಷನ್‌ ಸೆಂಟರ್‌ ನ್ನು ಆರಂಭಿಸಬೇಕೆನ್ನುವುದು ನನ್ನ ಉದ್ದೇಶ” ಎಂದು ಹೇಳುತ್ತಾರೆ.

Recent News


Leave a Comment: