ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ಲೋಕಸಭೆ ಭದ್ರತಾ ಲೋಪ: ಮೈಸೂರಿನಲ್ಲಿ ಬಾಡಿಗೆಗೆ 2 ರೂಮ್ ಮಾಡಿಕೊಂಡಿದ್ದ ಮನೋರಂಜನ್

Posted by Vidyamaana on 2023-12-23 21:33:16 |

Share: | | | | |


ಲೋಕಸಭೆ ಭದ್ರತಾ ಲೋಪ: ಮೈಸೂರಿನಲ್ಲಿ ಬಾಡಿಗೆಗೆ 2 ರೂಮ್ ಮಾಡಿಕೊಂಡಿದ್ದ ಮನೋರಂಜನ್

ನವದೆಹಲಿ:ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ದಾಳಿ ನಡೆಸಿದ ಆರೋಪಿ ಮನೋರಂಜನ್ ಬಗ್ಗೆ ಒಂದೊಂದಾಗಿ ಸ್ಪೋಟಕ ಮಾಹಿತಿ ಹೊರ ಬೀಳುತ್ತಿದೆ.ಅವನು ಮೈಸೂರಿನಲ್ಲಿ ಬಾಡಿಗೆಗೆ ಎರಡು ರೂಮ್ ಮಾಡಿಕೊಂಡಿದ್ದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ರೂಮ್ ಮಾಡಿಕೊಳ್ಳಲು ಹಣ ಹೇಗೆ ಹೊಂದಿಸುತ್ತಿದ್ದ ಎಂಬುದೇ ಪೊಲೀಸರಿಗೆ ಅಚ್ಚರಿಯಾಗಿದೆ.ಮನೆಯವರು ಹೇಳುವಂತೆ ಆತನಿಗೆ ನಾವು ಹೆಚ್ಚು ಹಣ ಕೊಡುತ್ತಿರಲಿಲ್ಲ.ದೆಹಲಿಗೆ ಹೋಗಲು, ಮೈಸೂರಿನಲ್ಲಿ ಎರಡು ರೂಮ್ ಬಾಡಿಗೆ ಪಡೆಯಲು ಹಣ ಹೇಗೆ ಹೊಂದಿಸಿದ ಎಂದು ಮನೆಯವರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಮನೋರಂಜನ್ ಮೈಸೂರಿನಲ್ಲಿ ಎರಡು ರೂಮ್ ಮಾಡಿಕೊಳ್ಳುವ ಅಗತ್ಯ ಏನಿತ್ತು? ಸಾಕಷ್ಟು ಸಮಯ ಹಿಂದಿನಿಂದಲೇ ಸಂಸತ್ ಭವನದ ಮೇಲೆ ದಾಳಿಗೆ ಸಂಚು ಹೂಡಲಾಗಿತ್ತೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದ್ದು ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.


ಮೈಸೂರಿನಲ್ಲಿ ಬಾಡಿಗೆ ರೂಮನ್ನು ಪಡೆದ ಬಗ್ಗೆ ಆತನ ಸ್ನೇಹಿತರೇ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

ಕಾರ್ಕಳ : ಪರಶುರಾಮ ಥೀಂ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ನಿಷೇಧ

Posted by Vidyamaana on 2023-06-25 05:25:56 |

Share: | | | | |


ಕಾರ್ಕಳ : ಪರಶುರಾಮ ಥೀಂ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ನಿಷೇಧ

ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಐತಿಹಾಸಿಕ ಪರಶುರಾಮ ಥೀಂ ಪಾರ್ಕ್‌ ನಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆಇಲ್ಲಿ ಪರಶುರಾಮ ಮೂರ್ತಿಯನ್ನು ಬಲಪಡಿಸುವ, ಮೂರ್ತಿಗೆ ಸಿಡಿಲು ನಿರೋಧಕ ಅಳವಡಿಕೆ, ತುಕ್ಕು ನಿರೋಧಕ ಲೇಪನದ ಹಾಗೂ ಇನ್ನಿತರ ಅತೀ ಅಗತ್ಯದ ಕಾಮಗಾರಿಯನ್ನು ಪೂರ್ಣಗೊಳಿಸಲು ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಅಧಿಕಾರಿಗಳು ಕೈಗೊಂಡಿದ್ದಾರೆ.

ಜೂ. 26 ರಿಂದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಪರಶುರಾಮ ರ್ಥೀಂ ಪಾರ್ಕ್‌ಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ ಎಂದು ಕಾರ್ಕಳ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಧಿವೇಶನದಲ್ಲಿ ತುಳುಮಾತನಾಡುವಾಗ ಬೆಂಬಲಿಸಿದ್ದ ಸಚಿವ ಝಮೀರ್ ಅಹ್ಮದ್

Posted by Vidyamaana on 2023-09-05 22:05:57 |

Share: | | | | |


ಅಧಿವೇಶನದಲ್ಲಿ ತುಳುಮಾತನಾಡುವಾಗ ಬೆಂಬಲಿಸಿದ್ದ ಸಚಿವ ಝಮೀರ್ ಅಹ್ಮದ್

ಪುತ್ತೂರು: ನಾನು ವಿಧಾನಸಭೆಯಲ್ಲಿ ತುಳುವಿನಲ್ಲಿ ಮತನಾಡುವಾಗ ನನಗೆ ಬೆಂಬಲ ನೀಡಿದವರು ಸಚಿವ ಝಮೀರ್ ಅಹ್ಮದ್ ರವರು , ನಾನು ಅಧಿವೇಶನದಲ್ಲಿ ಎದ್ದು ನಿಂತು ಮಾತನಾಡುವಾಗ ಕೆಲವರು ಆಕ್ಷೇಪ ಮಾಡಿದ್ದರು ಆ ವೇಳೆ ಪಾತೆರ‍್ಲೆ ಅಶೋಕರೆ  ಪಾತೆರ‍್ಲೆ ಎಂದು ನನಗೆ ಬೆಂಬಲ ನೀಡಿದ್ದಾರೆ ಇದಕ್ಕಾಗಿ ಇಂದು ತುಳುನಾಡಿಗೆ ಬಂದ ಸಚಿವ ಝಮೀರ್ ಅಹ್ಮದ್ ರವರಿಗೆ ನಾನು ತುಳುನಾಡಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಮಿತ್ತೂರು ದಾರುಲ್ ಇರ್ಷಾದ್ ಶಾಲೆಯಲ್ಲಿ ಪ್ರಧಾನಮಂತ್ರಿ ಜನ ವಇಕಾಸ ಯೋಜನೆಯಡಿ ನಿರ್ಮಾಣವಾದ ಪ್ರೌಢ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ತುಳುವನ್ನು ಎಂಟನೇ ಪರಿಚ್ಚೇದ ಮತ್ತು ರಾಜ್ಯದ ದ್ವಿತೀಯ ಭಾಷೆಯಾಗಿ ಪರಿಗಣಿಸಬೇಕು ಎಂಬ ಕಾರಣಕ್ಕೆ ನಾನು ತುಳುವಿನಲ್ಲಿ ಅಧಿವೇಶನದಲ್ಲಿ ಮಾತನಾಡಿದ್ದೆ ಈ ವೇಳೆ ನನಗೆ ಸಚಿವರು ನೀಡಿದ ಪ್ರೋತ್ಸಾಹ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಿದರು.


ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯಿಂದ ಇದ್ದಾರೆ. ಐದು ಗ್ಯಾರಂಟಿಗಳು ಜನರಿಗೆ ಬದುಕು ಕೊಟ್ಟಿದೆ. ಶಕ್ತಿ ಯೋಜನೆ, ಅನ್ನಾಭಾಗ್ಯ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳು ಎಲ್ಲಾ ಮನೆಗಳನ್ನು ಬೆಳಗಿಸಿದೆ. ಯೋಜನೆಯನ್ನು ಅಪಹಾಸ್ಯ ಮಾಡುತ್ತಿದ್ದವರು ತಮ್ಮ ಖಾತೆಗೆ ಹಣ ಜಮಾವಣೆಯಾದಾಗ ಮೌನವಾಗಿದ್ದಾರೆ, ಮನೆಯಲ್ಲಿ ಉಚಿತ ಕರೆಂಟ್ ಉರಿಯುವಾಗಿ ಹಾಸ್ಯ ಮಾಡುತ್ತಿದ್ದವರ ಉರಿ ನಿಂತು ಹೋಗಿದೆ. ರಾಜ್ಯದ ಎಲ್ಲಾ ಜನರಿಗೂ ಸಮಾನ ಅವಕಾಶವನ್ನು ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರು ರಾಜಧರ್ಮ ಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಮಸೀದಿ ಆಡಳಿತದಿಂದ ಉತ್ತಮ ಬಾಂಧವ್ಯ

ಜಿಲ್ಲೆಯಲ್ಲಿ ಪುತ್ತೂರು ಮತ್ತು ಉಳ್ಳಾಲ ಹೊರತುಪಡಿಸಿ ಬೇರೆ ಕಡೆ ಕಾಂಗ್ರೆಸ್ ಅಲ್ಪಮತದಿಂದ ಸೋತಿದೆ ವಿನಾ ಕಾಂಗ್ರೆಸ್ ಗೆ ಹಾನಿಯಾಗಿಲ್ಲ, ಜಿಲ್ಲೆಯಲ್ಲಿ ಕಾಂಗ್ರೆಸ್ ಗಟ್ಟಿಯಾಗಿದ್ದು ಮುಂದಿನ ದಿನಗಳಲ್ಲಿ ಜನ ಕಾಂಗ್ರೆಸ್ಸನ್ನು ಬೆಂಬಲಿಸಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಾತ್ರ ಜನತೆ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ. ಸಿದ್ದರಾಮಯ್ಯ ಸೀಎಂ ಆದ ಬಳಿಕ ರಾಜ್ಯದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. ಕೋಮುವಾದ ಮಾಡುವವರ ಹೆಡೆಮುರಿ ಕಟ್ಟುವಲ್ಲಿ ಸರಕಾರ ಸಫಲವಾಗಿದೆ ಎಂದ ಶಾಸಕರು ಈ ಭಾಗದ ಮಸೀದಿ ಆಡಳಿತ ಕಮಿಟಿಯವರು ಸಮಾಜದಲ್ಲಿ ಸೌಹಾರ್ಧದ ವಾತಾವರಣವನ್ನು ಬೆಂಬಲಿಸುತ್ತಿದ್ದು ಎಲ್ಲರ ಜೊತೆಯೋ ಅನ್ಯೋನ್ಯತೆಯಿಂದ ಇದ್ದು ಇದು ಹೆಮ್ಮೆಯ ವಿಚಾರವಾಗಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.


ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ನನ್ನ ಕ್ಷೇತ್ರದ ಜತೆಗೆ ಹೆಚ್ಚುವರಿಯಗಿ ನೀಡಬೇಕು, ಅನೇಕ ಬೇಡಿಕೆಗಳಿದ್ದು ಎಲ್ಲವನ್ನೂ ತಮ್ಮ ಮುಂದೆ ತರುತ್ತೇನೆ ಸಹಕಾರ ನೀಡಬೇಕು ಎಂದು ಸಚಿವ ಝಮಿರ್ ಅಹ್ಮದ್‌ರವರಿಗೆ ಮನವಿ ಮಾಡಿದರು.


ತುಳುವಿನಲ್ಲೇ ಮಾತು ಆರಂಭಿಸಿದ ಸಚಿವ ಝಮೀರ್


ಸಚಿವ ಝಮೀರ್ ಅಹ್ಮದ್‌ರವರು ತುಳುವಿನಲ್ಲೇ ತನ್ನ ಮಾತು ಆರಂಭಿಸಿ ಎಂಕ್ ಒಂತೆ ತುಳು ಬರ‍್ಪುಂಡು ಜಾಸ್ತಿ ಗೊತ್ತಿಜ್ಜಿ ಎಂದು ಹೇಳುವ ಮೂಲಕ ತುಳುನಾಡಿನ ಭಾಷೆಗೂ ಗೌರವ ನೀಡುವ ಕೆಲಸವನ್ನು ಮಾಡಿದರು.

ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಐಟಿ ದಾಳಿ

Posted by Vidyamaana on 2023-04-24 04:45:02 |

Share: | | | | |


ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಐಟಿ ದಾಳಿ

ಬೆಳ್ತಂಗಡಿ: ಮಾಜಿ ಸಚಿವ ಕೆ.ಗಂಗಾಧರ ಗೌಡ ಅವರ ಮನೆಗೆ ಬೆಳ್ಳಂಬೆಳಗ್ಗೆ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇಂದಬೆಟ್ಟು, ಬೆಳ್ತಂಗಡಿಯಲ್ಲಿರುವ ಮನೆ ಸೇರಿದಂತೆ ಅವರಿಗೆ ಸೇರಿದ ಶಿಕ್ಷಣ ಸಂಸ್ಥೆಗೆ ದಾಳಿ ನಡೆಸಿದೆ.ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಇತ್ತೀಚೆಗೆ ಟಿಕೆಟ್‌ ರಕ್ಷಿತ್ ಶಿವರಾಂ ಅವರಿಗೆ ಲಭಿಸುತ್ತಲೆ ರಾಜಕೀಯ ಓಡಾಟದಿಂದ ಹಿಂದೆ ಸರಿದಿದ್ದರು. ಇದೀಗ ಐಟಿ ದಾಳಿ ಶಾಕ್ ನೀಡಿದೆ.

ಕೆಮ್ಮಾರ ವುಮೆನ್ಸ್ ಶರೀಹತ್ ಕಾಲೇಜಿನಲ್ಲಿ ಮೀಲಾದ್ ಪ್ರಯುಕ್ತ ಹಮ್ಮಿಕೊಂಡ ಮನಾರ ಕಲಾ ಸಾಂಸ್ಕೃತಿಕ ಕಾರ್ಯಕ್ರಮ

Posted by Vidyamaana on 2023-10-17 20:10:42 |

Share: | | | | |


ಕೆಮ್ಮಾರ  ವುಮೆನ್ಸ್ ಶರೀಹತ್ ಕಾಲೇಜಿನಲ್ಲಿ ಮೀಲಾದ್ ಪ್ರಯುಕ್ತ ಹಮ್ಮಿಕೊಂಡ ಮನಾರ ಕಲಾ ಸಾಂಸ್ಕೃತಿಕ ಕಾರ್ಯಕ್ರಮ

ಉಪ್ಪಿನಂಗಡಿ; ಪ್ರತೀ ನಿಮಿಷವು ಜಗತ್ತು ಬದಲಾವಣೆಯತ್ತ ದಾಪುಗಾಲು ಹಾಕುತ್ತಿದ್ದು ಒಂದು ಸಮಾಜವು ಈ ಬದಲಾವಣೆಯನ್ನು ಅರ್ಥ ಮಾಡಿಕೊಂಡು ವಿನೂತನ ಆವಿಷ್ಕಾರಗಳ ಮೂಲಕ ಬದಲಾವಣೆಗೆ ಒಡ್ಡಿಕೊಂಡು ತಮ್ಮ ಸಮಾಜವನ್ನು ರಕ್ಷಿಸಿ ಕೊಳ್ಳಬೆಕಾದ ಅನಿವಾರ್ಯತೆ ನಮ್ಮ ಮುಂದಿದೆ ಎಂದು ಕೆಮ್ಮಾರ ಶಂಸುಲ್ ಉಲಮಾ ಎಜುಕೇಶನ್ ಟ್ರಸ್ಟ್ ಇದರ ಅಧ್ಯಕ್ಷ ಎಸ್ ಬಿ ದಾರಿಮಿ ಅಭಿಪ್ರಾಯ ಪಟ್ಟಿದ್ದಾರೆ.

ಅವರು  ಕೆಮ್ಮಾರ ಶಕ್ತಿ ನಗರದ ವುಮೆನ್ಸ್ ಶರೀಹತ್ ಕಾಲೇಜಿನ ವಿಧ್ಯಾರ್ಥಿನಿಯರಿಗಾಗಿ ಮೀಲಾದ್ ಪ್ರಯುಕ್ತ ಹಮ್ಮಿಕೊಂಡ "ಮನಾರ"ಕಲಾ ಸಾಂಸ್ಕೃತಿಕ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತಾನಾಡಿದರು. 

  ಹಿಂದಿನ ಕಾಲದಲ್ಲಿ ನಮ್ಮ ಮಹಿಳೆಯರು ಅಡಿಗೆ ಮನೆಗೆ ಸೀಮಿತವಾಗಿದ್ದರು.ಆದರೆ ಇಂದು ಸಮಸ್ತ ದ ಉಲಮಾಗಳ ಉತ್ತಮ ಕಾರ್ಯವೈಖರಿಯಿಂದಾಗಿ ಮುಸ್ಲಿಂ ಮಹಿಳೆಯರು ಕೂಡಾ ವೈಧ್ಯಕೀಯ ,ಶೈಕ್ಷಣಿಕ, ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದು ಪ್ರತಿಭಾವಂತರಾಗಿ ಮುಂದಿನ ತಲೆಮಾರನ್ನೂ ವಿದ್ಯಾವಂತರನ್ನಾಗಿಸುವಲ್ಲಿ ಸಫಲರಾಗುತ್ತಿದ್ದಾರೆ.ಇದು ಉತ್ತಮ ಬೆಳವಣಿಗೆಯಾಗಿದ್ದು,

ಮುಸ್ಲಿಮರು ಕಾಲದ ಕರೆಯನ್ನು ಸ್ವೀಕರಿಸುವುದಿಲ್ಲ ಎನ್ನುವವರಿಗೆ ಇದು ತಕ್ಕ ಉತ್ತರ ಕೂಡಾ ಆಗಿದೆ ಎಂದು ನುಡಿದರು.

ಕಾರ್ಯಕ್ರಮವನ್ನು ಪೆರಿಯಡ್ಕ ಖತೀಬರಾದ ಅಬ್ದುಲ್ ರಹಿಮಾನ್ ಪೈಝಿ ಉದ್ಗಾಟಿಸಿದರು.

ಟ್ರಸ್ಟಿ ಸದಸ್ಯರಾದ ಉಮರ್ ಹಾಜಿ ಕೋಡಿಯಾಡಿ,ಬಶೀರ್ ಹಾಜಿ ದಾರಂದಕುಕ್ಕು,ಹಸೈನಾರ್ ಹಾಜಿ ಕೊಯಿಲ,ರಶೀದ್ ಹಾಜಿ ಪರ್ಲಡ್ಕ,ಇಸಾಕ್  ಕೆಮ್ಮಾರ,ಅಬ್ದುಲ್ಲ ಉಸ್ತಾದ್ ಕೆಮ್ಮಾರ,ಇಬ್ರಾಹಿಂ ಬಡಿಲ, ಯುನಿಕ್ ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು,ಕೆ ಎಂ ಎ ಕೊಡುಂಗೈ ಸ್ವಾಗತಿಸಿ, ಕೊನೆಗೆ ವಂದಿಸಿದರು.

ಪುತ್ತೂರು : ವಿವಾಹ ನಿರಾಕರಿಸಿದ ವಿಚ್ಛೇದಿತೆಗೆ ಕಿರುಕುಳ: ಉಡುಪಿ ಮೂಲದ ಪ್ರಶಾಂತ್ ಕೋಟ್ಯಾನ್ ವಿರುದ್ಧ ಪ್ರಕರಣ ದಾಖಲು

Posted by Vidyamaana on 2024-03-20 16:20:44 |

Share: | | | | |


ಪುತ್ತೂರು : ವಿವಾಹ ನಿರಾಕರಿಸಿದ ವಿಚ್ಛೇದಿತೆಗೆ ಕಿರುಕುಳ: ಉಡುಪಿ ಮೂಲದ ಪ್ರಶಾಂತ್ ಕೋಟ್ಯಾನ್ ವಿರುದ್ಧ ಪ್ರಕರಣ ದಾಖಲು

ಪುತ್ತೂರು : ಮಾ 20: ವಿವಾಹ ನಿರಾಕರಿಸಿದಕ್ಕಾಗಿ ಉಡುಪಿಯ ವ್ಯಕ್ತಿಯೊಬ್ಬ ವಿಚ್ಚೇದಿತ ಮಹಿಳೆಯ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು ಹಾಗೂ ಕೊಲ್ಲುವುದಾಗಿ ಬೆದರಿಸಿರುವ ಬಗ್ಗೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂತ್ರಸ್ತ ಮಹಿಳೆಗೆ 7 ವರ್ಷದ ಹಿಂದೆ ಮದುವೆಯಾಗಿ ವಿಚ್ಛೇದನವಾಗಿರುತ್ತದೆ. ಸದ್ಯ ಆಕೆ ಮಗನೊಂದಿಗೆ ತಾಯಿ ಮನೆಯಲ್ಲಿ ವಾಸ್ತವ್ಯವಿದ್ದಾರೆ. ಆಕೆಗೆ 2022ರಲ್ಲಿ ಮೇಟ್ರಿಮೋನಿಯೊಂದರ ಮೂಲಕ ಪ್ರಶಾಂತ್ ಕೋಟ್ಯಾನ್ ಉಡುಪಿ ಎಂಬಾತನ ಪರಿಚಯವಾಗುತ್ತದೆ. ಬಳಿಕ ಅವರಿಬ್ಬರು ವಿವಾಹವಾಗುವ ನಿರ್ಧಾರಕ್ಕೆ ಬರುತ್ತಾರೆ. ಈ ವೇಳೆ ಪ್ರಶಾಂತ್‌ ಪೂರ್ವಾಪರವನ್ನು ಸಂತ್ರಸ್ತೆಯ ಮನೆಯವರು ವಿಚಾರಿಸಿದಾಗ ಉತ್ತಮ ಅಭಿಪ್ರಾಯ ಕಂಡುಬಾರದ ಹಿನ್ನೆಲೆಯಲ್ಲಿ ಮದುವೆ ಮಾತುಕತೆ ಮುರಿದು ಬೀಳುತ್ತದೆ.


ಇದರಿಂದ ಅಸಮಧಾನಗೊಂಡ ಆರೋಪಿಯು ಸಂತ್ರಸ್ತೆಗೆ ಕರೆಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಫೋಟೋ ಗಳನ್ನು ಹಾಕುವುದಾಗಿ ಹಾಗೂ ಕೊಲೆ ಮಾಡುವುದಾಗಿ ಜೀವಬೆದರಿಕೆ ಒಡ್ಡಿರುತ್ತಾನೆ . ಅಷ್ಟು ಮಾತ್ರವಲ್ಲದೇ, ಆ ಮಹಿಳೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುತ್ತಾನೆ.ಈ ಕುರಿತು ಮಹಿಳೆಯು ನೀಡಿದ ದೂರಿನ ಮೇರೆಗೆ ಐಪಿಸಿ ಕಲಂ 354(D),506 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ



Leave a Comment: