ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಕರಾವಳಿ ಜಿಲ್ಲೆಗಳಲ್ಲಿ ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ

Posted by Vidyamaana on 2023-07-06 07:04:55 |

Share: | | | | |


ಕರಾವಳಿ ಜಿಲ್ಲೆಗಳಲ್ಲಿ ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಚರ್ಚೆ

ಬೆಂಗಳೂರು: ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿ ಸಂಭವಿಸಿದ್ದು ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮಂಕಾಳ ವೈದ್ಯ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ.


ಮಳೆ ಹಾನಿ ಕುರಿತು ಮುಖ್ಯ ಕಾರ್ಯದರ್ಶಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಪರಿಹಾರ ಕಾಮಗಾರಿಗಳಿಗೆ ಅಧಿಕಾರಿಗಳನ್ನು ತುರ್ತಾಗಿ ಸಜ್ಜುಗೊಳಿಸುವಂತೆ ಆದೇಶಿಸಿದ್ದಾರೆ.

ಶಬರಿಮಲೆ ಅಯ್ಯಪ್ಪ ಭಕ್ತರಿದ್ದ ಕಾರು ಅಪಘಾತ - ಓರ್ವ ಮೃತ್ಯು, ಮೂವರು ಗಂಭೀರ

Posted by Vidyamaana on 2023-12-28 11:58:58 |

Share: | | | | |


ಶಬರಿಮಲೆ ಅಯ್ಯಪ್ಪ ಭಕ್ತರಿದ್ದ ಕಾರು ಅಪಘಾತ - ಓರ್ವ ಮೃತ್ಯು, ಮೂವರು ಗಂಭೀರ

ಮಡಿಕೇರಿ: ಶಬರಿಮಲೆ ಅಯ್ಯಪ್ಪ ಭಕ್ತರಿದ್ದ ಕಾರು ಅಪಘಾತವಾಗಿ ಓರ್ವ ಮೃತಪಟ್ಟಿದ್ದು ಮೂವರು ಗಂಭೀರ ಗಾಯಗೊಂಡ ಘಟನೆ ಅಂಗಮಾಲಿ ಪೆರುಂಬುರ್ ಬಳಿ ನಡೆದಿದೆ.ಶಬರಿಮಲೆಯಿಂದ ಹಿಂದಿರುಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರದ ಹಾರಂಗಿ ದೊಡ್ಡತ್ತೂರು ನಿವಾಸಿ ಚಂದ್ರ ಮೃತಪಟ್ಟವರು ಎಂದು ತಿಳಿದು ಬಂದಿದೆ.ಘಟನೆಯಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.


ಗಾಯಾಳುಗಳನ್ನು ಕುಶಾಲನಗರದ ಲಿಂಗಂ, ಹರೀಶ್ ಹಾಗೂ ಸಂತೋಷ್ ಎಂದು ಗುರುತಿಸಲಾಗಿದೆ

ಮಗನ ಸಾವಿನ ನೋವಲ್ಲಿ ತಾಯಿ ಸಹೋದರಿ ಆತ್ಮಹತ್ಯೆ ; ದೀಪಾವಳಿ ಮಧ್ಯೆ ಕುಟುಂಬಕ್ಕೆ ಆಘಾತ

Posted by Vidyamaana on 2023-11-15 05:50:17 |

Share: | | | | |


ಮಗನ ಸಾವಿನ ನೋವಲ್ಲಿ ತಾಯಿ ಸಹೋದರಿ ಆತ್ಮಹತ್ಯೆ ; ದೀಪಾವಳಿ ಮಧ್ಯೆ ಕುಟುಂಬಕ್ಕೆ ಆಘಾತ

ಕಾರವಾರ, ನ.15: ದೀಪಾವಳಿ ಸಂಭ್ರಮದ ನಡುವೆ ಒಂದೇ ಮನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಪುತ್ರನ ಸಾವಿನ ನೋವಿನಲ್ಲಿ ತಾಯಿ ಹಾಗೂ ಸಹೋದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಸಿ ತಾಲೂಕಿನ ತಾರಗೋಡು ಬೆಳಲೆ ಗ್ರಾಮದಲ್ಲಿ ನಡೆದಿದೆ. 


ಅನಾರೋಗ್ಯದ ಹಿನ್ನೆಲೆ ಉದಯ ಬಾಲಚಂದ್ರ ಹೆಗಡೆ (22) ಎಂಬ ಯುವಕ ಮನೆಯಲ್ಲೇ ಮೃತಪಟ್ಟಿದ್ದರು.‌ ಪುತ್ರನ ಮೃತದೇಹದ ಪಕ್ಕದಲ್ಲೇ ಕುಳಿತು ಕಣ್ಣೀರು ಹಾಕುತ್ತಿದ್ದ ಆತನ ತಾಯಿ ಹಾಗೂ ಸಹೋದರಿ ಬಳಿಕ ತಾವು ಕೂಡ ಸಾವಿಗೆ ಶರಣಾಗಿದ್ದಾರೆ.‌‌ ತಾಯಿ ನರ್ಮದಾ ಬಾಲಚಂದ್ರ ಹೆಗಡೆ (50) ಹಾಗೂ ಸಹೋದರಿ ದಿವ್ಯಾ ಬಾಲಚಂದ್ರ ಹೆಗಡೆ (25) ಆತ್ಮಹತ್ಯೆ ಮಾಡಿಕೊಂಡವರು.‌


ಕೊರೊನಾ ಸಂದರ್ಭದಲ್ಲಿ ಆನಾರೋಗ್ಯ ಕಾಡಿದ್ದರಿಂದ ಊರಿಗೆ ಹಿಂತಿರುಗಿದ್ದ ಉದಯ ಬಾಲಚಂದ್ರ ಹೆಗಡೆ ಮನೆಯಲ್ಲಿದ್ದಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮಗನ ಚಿಕಿತ್ಸೆಗಾಗಿ ಆಸ್ಪತ್ರೆ- ಮನೆ ಅಂತ ಅಲೆದಾಡುತ್ತಿದ್ದರು. ಅನಾರೋಗ್ಯ ತೀವ್ರಗೊಂಡ ಹಿನ್ನೆಲೆ‌ ಮಂಗಳವಾರ ಬೆಳಗ್ಗೆ ಮಗ ಸಾವಿಗೀಡಾಗಿದ್ದ.‌ ಮನೆ ಮಗನ ಸಾವಿನ ನೋವಿನಿಂದ ತಾಯಿ ಹಾಗೂ ಸಹೋದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 


ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

ವಿಟ್ಲ: ಬೊರ್ ವೆಲ್ ಲಾರಿ ಹಾಗೂ ದ್ವಿಚಕ್ರ ವಾಹನ ಮಧ್ಯೆ ಭೀಕರ ಅಪಘಾತ - ಸವಾರ ರಂಜಿತ್ ಮೃತ್ಯು

Posted by Vidyamaana on 2023-03-18 10:49:06 |

Share: | | | | |


ವಿಟ್ಲ: ಬೊರ್ ವೆಲ್ ಲಾರಿ ಹಾಗೂ ದ್ವಿಚಕ್ರ ವಾಹನ ಮಧ್ಯೆ ಭೀಕರ ಅಪಘಾತ - ಸವಾರ ರಂಜಿತ್ ಮೃತ್ಯು

ವಿಟ್ಲ:ಮಾ 18 ಕಡೂರು ಕಾಂಞಗಾಡ್ ಅಂತರಾಜ್ಯ ಹೆದ್ದಾರಿಯವಿಟ್ಲ ಸಮೀಪದ ಕಾಶಿ ಮಠ ಬಳಿ ಕೊಳವೆ ಬಾವಿ ಕೊರೆಯುವ ಯಂತ್ರ ಹೊತ್ತ ವಾಹನ ಹಾಗೂ ದ್ವಿಚಕ್ರ ವಾಹನ ನಡುವೆ ಬೀಕರ ಅಪಘಾತ ಸಂಭವಿಸಿದ್ದು, ವಾಹನ ಸಹ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮಾ 18 ರಂದು ಮಧ್ಯಾಹ್ನ ದುರ್ಘಟನೆ ನಡೆದಿದೆ.ಅಲಂಗಾರು ಬ್ರಾಣ ಪಾದೆ ನಿವಾಸಿ ರಂಜಿತ್ (19) ಸ್ಥಳದಲ್ಲೆ ಮೃತಪಟ್ಟ ಯುವಕ. ಸವಾರ ನಿತಿನ್ (28) ಗಂಭೀರವಾಗಿ ಗಾಯಗೊಂಡಿದ್ದಾರೆ ಕೊಳವೆ ಬಾವಿ ಕೊರೆಯುವ ಯಂತ್ರವಿದ್ದ ಲಾರಿಯ ಚಾಲಕ ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ, ಘನ ವಾಹನವೆಂದು ಲೆಕ್ಕಿಸದೆ ಚಲಾಯಿಸಿದೆ ಅಪಘಾತಕ್ಕೆ ಕಾರಣವೆಂದು ಸ್ಥಳೀಯರು ಅರೋಪಿಸಿದ್ದಾರೆ.ಢಿಕ್ಕಿಯ ಬಳಿಕ ಲಾರಿಯು ಬೈಕ್ ಸವಾರರನ್ನು ಕೆಲ ಮೀಟರುಗಳ ದೂರ ಎಳೆದೊಯ್ದಿದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರನ ತಲೆ ಛಿದ್ರವಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ನಿರ್ವಹಣಾಗಾರರ ಸಭೆ ನಡೆಸಿದ ಅಶೋಕ್ ಕುಮಾರ್ ರೈ

Posted by Vidyamaana on 2023-04-21 22:44:15 |

Share: | | | | |


ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ನಿರ್ವಹಣಾಗಾರರ ಸಭೆ ನಡೆಸಿದ ಅಶೋಕ್ ಕುಮಾರ್ ರೈ

ಪುತ್ತೂರು: ಕಾಂಗ್ರೆಸ್ ಪಕ್ಷದ  ಸಾಮಾಜಿಕ ಜಾಲತಾಣವನ್ನು ಇನ್ನಷ್ಟು ಸಮರ್ಥವಾಗಿ ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಚುನಾವಣಾ ಕಚೇರಿಯಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣೆಗಾರರ ಸಭೆ ಏ 21 ರಂದು ಪಕ್ಷದ ಚುನಾವಣಾ ಕಚೇರಿಯಲ್ಲಿ ನಡೆಯಿತು.

ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸಾಮಾಜಿಕ ಜಾಲತಾಣ ನಿರ್ವಹಣಾಗಾರರಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು. ಸುಮಾರು 50ಕ್ಕೂ ಅಧಿಕ ಸಾಮಾಜಿಕ ಜಾಲತಾಣ ನಿರ್ವಹಣಾಗಾರರು ಸಭೆಯಲ್ಲಿ ಭಾಗವಹಿಸಿದ್ದರು.

ಅಶೋಕ್ ರೈ ಅವರ ಪರ ಹಾಗೂ ವಿರೋಧವಾಗಿ ಪ್ರಕಟವಾಗುವ ಸಂದೇಶ, ವರದಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಅಪಪ್ರಚಾರ ನಡೆಸುವ ಸಂದೇಶಗಳನ್ನು ಯಾವ ರೀತಿ ನಿರ್ವಹಿಸಬೇಕು ಎನ್ನುವುದರ ಬಗ್ಗೆ ಅವರಿಗೆ ತಿಳಿಸಲಾಯಿತು.

ವರ್ಕ್​ ಫ್ರಮ್​​ ಹೋಮ್ ಮೂಲಕ ಹೆಚ್ಚು ಹಣ ಗಳಿಸಬಹುದೆಂದು ಆಸೆ ತೋರಿಸಿ 158 ಕೋಟಿ ರೂ. ವಂಚಿಸಿದ್ದ ಆರೋಪಿಗಳು ಅರೆಸ್ಟ್​

Posted by Vidyamaana on 2024-01-31 11:32:42 |

Share: | | | | |


ವರ್ಕ್​ ಫ್ರಮ್​​ ಹೋಮ್ ಮೂಲಕ ಹೆಚ್ಚು ಹಣ ಗಳಿಸಬಹುದೆಂದು ಆಸೆ ತೋರಿಸಿ 158 ಕೋಟಿ ರೂ. ವಂಚಿಸಿದ್ದ ಆರೋಪಿಗಳು ಅರೆಸ್ಟ್​

ಬೆಂಗಳೂರು, : ವರ್ಕ್​ ಫ್ರಾಮ್​​ ಹೋಮ್​ (ಮನೆಯಲ್ಲೇ ಕುಳಿತು ಕೆಲಸ) ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದೆಂಬ ಆಮಿಷ ಒಡ್ಡಿ ಜನರ ಖಾತೆಗಳಿಂದ 158 ಕೋಟಿ ರೂ.ದೋಚಿದ್ದ ಅತಿ ದೊಡ್ಡ ಸೈಬರ್​ ವಂಚಕರ (Cyber Crime) ಜಾಲವನ್ನು ಕೇಂದ್ರ ಅಪರಾಧ ವಿಭಾಗದ (CCB) ಅಧಿಕಾರಿಗಳು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈನಲ್ಲಿ ಕೂತು ವಂಚಿಸುತ್ತಿದ್ದ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.


ಕರ್ನಾಟಕ ಸೇರಿದಂತೆ 28 ರಾಜ್ಯಗಳಲ್ಲಿ 2,143 ಸೈಬರ್​ ವಂಚನೆ ಕೃತ್ಯ ಎಸಗಿದ್ದಾರೆ. ರಾಜ್ಯದಲ್ಲಿ 265 ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳ ಬರೊಬ್ಬರಿ 30 ಬ್ಯಾಂಕ್ ಖಾತೆಗಳು ಪರಿಶೀಲನೆ ನಡೆಸಿದಾಗ 158 ಕೋಟಿ ರೂ. ಮೊತ್ತದ ವಹಿವಾಟು ನಡೆದಿದೆ. ಆರೋಪಿಗಳಿಂದ 11 ಮೊಬೈಲ್ ಫೋನ್‌ಗಳು ಮತ್ತು 15 ಸಿಮ್ ಕಾರ್ಡ್‌ ಸೇರಿದಂತೆ 62.8 ಲಕ್ಷ ರೂ. ಅನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 14 ಪೊಲೀಸ್ ಠಾಣೆಗಳಲ್ಲಿ 135 ದೂರು ದಾಖಲಾಗಿವೆ. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ನಗರದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ವಿದ್ಯಾರಣ್ಯಪುರದ ಬಿಇಎಲ್ ಲೇಔಟ್‌ನ ನಿವಾಸಿಯಾಗಿರುವ ಭವ್ಯಾ ಎಂಬುವರಿಗೆ ಟ್ರೇಡ್​ ಸ್ಟೇಷನ್​ ಕಂಪನಿ ಹೆಸರಿನಲ್ಲಿ ಆರೋಪಿಗಳು ಸಂಪರ್ಕಿಸಿದ್ದಾರೆ. ಬಳಿಕ ಹಣ ಹೂಡಿಕೆ ಮಾಡಿದರೆ ಮನೆಯಲ್ಲೇ ಕುಳಿತು ಹೆಚ್ಚು ಹಣ ಸಂಪಾದಿಸಬಹುದು ಎಂದು ಭರವಸೆ ನೀಡಿದ್ದಾರೆ. ಇದನ್ನು ನಂಬಿದ ಭವ್ಯಾ ಅವರು ಹಂತ-ಹಂತವಾಗಿ ಹೂಡಿಕೆ ಮಾಡಿದ್ದು, ಬರೊಬ್ಬರಿ 18.75 ಲಕ್ಷ ರೂ. ವಂಚಿಸಿದ್ದಾರೆ. ಈ ಸಂಬಂಧ ಭವ್ಯಾ ಅವರು ನೀಡಿದ ದೂರಿನ ಮೇರೆಗೆ ಉಪ ಪೊಲೀಸ್ ಆಯುಕ್ತ ಅಬ್ದುಲ್ ಅಹದ್ ನೇತೃತ್ವದ ಸಿಸಿಬಿ ಅಧಿಕಾರಿಗಳು ಪ್ರಕರಣದ ಜಾಡನ್ನು ಭೇದಿಸಿದ್ದು, ಆರೋಪಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳು ವಾಟ್ಸಾಪ್ ಮತ್ತು ಟೆಲಿಗ್ರಾಮ್ ಅಪ್ಲಿಕೇಶನ್‌ಗಳಲ್ಲಿ ಅಪರಿಚಿತರಿಗೆ ಸಂದೇಶಗಳನ್ನು ಕಳುಹಿಸುತ್ತಾರೆ. ಬಳಿಕ ವರ್ಕ್​ ಫ್ರಾಮ್​ ಹೋಮ್​ ಆಮಿಷ ಒಡ್ಡುತ್ತಾರೆ. ಇವರ ಬಲೆಗೆ ಬಿದ್ದ ನಾಗರಿಕರಿಗೆ “ನಮ್ಮ ಸಿಬ್ಬಂದಿ ಹೆಚ್ಚುವರಿ ಆದಾಯಕ್ಕಾಗಿ ಮನೆಯಿಂದ ಕೆಲಸ ಮಾಡಿದ್ದಾರೆ. ಈ ಅಧಿಕ ಹಣ ಗಳಿಸುತ್ತಿದ್ದಾರೆ” ಎಂದು ಹೇಳುತ್ತಾರೆ. ಅಲ್ಲದೆ ಬಲೆಗೆ ಬಿದ್ದ ಜನರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಖಾತೆಗಳು ಮತ್ತು ಯೂಟ್ಯೂಬ್ ವೀಡಿಯೊಗಳನ್ನು ಕಳಸಿ ನಂಬಿಸುತ್ತಾರೆ. ಬಳಿಕ ಹೂಡಿಕೆ ಮಾಡುವಂತೆ ಮಾಡುತ್ತಾರೆ. ಮೊದಲಿಗೆ ಸಣ್ಣ ಪ್ರಮಾಣದ ಹಣವನ್ನು ಹೂಡಿಕೆ ಮಾಡಿಸಿಕೊಳ್ಳುತ್ತಾರೆ. ಹೂಡಿಕೆ ಮಾಡಿದ ಹಣಕ್ಕಿಂತ ಡಬಲ್​ ಹಣವನ್ನು ಹೂಡಿಕೆದಾರರಿಗೆ ನೀಡುತ್ತಾರೆ.


ನಂತರ ರೇಟಿಂಗ್​, ಗೂಗಲ್​ ರೇಟಿಂಗ್​ ನೆಪದಲ್ಲಿ ನಾಗರಿಕರ ಬಳಿ ಹಣ ಹೂಡಿಕೆ ನೆಪದಲ್ಲಿ ಅವರ ಬ್ಯಾಂಕ್​ ಖಾತೆಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಾರೆ. ಬಳಿಕ ಜಾಲಕ್ಕೆ ಸಿಲುಕಿದವರ ಬ್ಯಾಂಕ್​ ಖಾತೆಗಳಲ್ಲಿನ ಕೋಟ್ಯಾಂತರ ಹಣವನ್ನು ದೋಚಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದರು. ಹೀಗೆ ದೇಶದ ಸಾಕಷ್ಟು ಜನರಿಗೆ ಮೋಸ ಮಾಡಿದ್ದಾರೆ. ಇನ್ನು ಪ್ರಕರಣ ಕಿಂಗ್​ಪಿಂಗ್​ಗಳು ವಿದೇಶದಲ್ಲಿದ್ದು ಅವರ ಬಂಧನಕ್ಕಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.



Leave a Comment: