ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ :ರಾಜ್ಯ ಸರ್ಕಾರ ಆದೇಶ

ಸುದ್ದಿಗಳು News

Posted by vidyamaana on 2024-07-05 17:43:40 |

Share: | | | | |


ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ :ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡಿ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ .ಈ ಮೂಲಕ ಆಟೋ, ಕ್ಯಾಬ್ ಚಾಲಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.ಕಳೆದ ವರ್ಷ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವಂತೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗಿತ್ತು.

ಈ ವೇಳೆ ಸರ್ಕಾರದಿಂದ ಎಲ್ಲ ಮಾದರಿಯ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೂ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನಿಷೇಧ ಮಾಡುವಂತೆ ಸಾರಿಗೆ ಸಂಘಟನೆಗಳು ಸರ್ಕಾರಕ್ಕೆ ಹಲವು ಬಾರಿ ಒತ್ತಾಯಿಸಿತ್ತು ಸಾರಿಗೆ ಸಂಘಟನೆಗಳ ಮನವಿ ಬೆನ್ನಲ್ಲೇ ಸಾರಿಗೆ ಇಲಾಖೆ ಅಧಿಕಾರಿಗಳು ಅನಧಿಕೃತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ವಿರುದ್ದ ಕ್ರಮಕ್ಕೆ ಮುಂದಾಗಿದೆ.

ಈ ಹಿನ್ನೆಲೆ ಸಾರಿಗೆ ಅಧಿಕಾರಿಗಳು ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೀಜ್ ಮಾಡಲು ಮುಂದಾಗಿದ್ದು. 11 ತಂಡವನ್ನು ರಚಿಸಿ ಆರ್ಟಿಓ ಅಧಿಕಾರಿಗಳ ನೇತೃತ್ವದಲ್ಲಿ ಸೀಜ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.ರಾಜ್ಯಾದ್ಯಂತ ಜು.5ರಿಂದ ಕಡ್ಡಾಯವಾಗಿ ಎಲೆಕ್ಟ್‌ಇಕ್ ಬೈಕ್ ಟ್ಯಾಕ್ಸಿಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಕಂಡುಬಂದಲ್ಲಿ ಕೂಡಲೇ ಅವುಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

 Share: | | | | |


ಕಂಕನಾಡಿ ರಸ್ತೆಯಲ್ಲೇ ನಮಾಝ್ ವಿಚಾರ - ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಏನಂದ್ರು?

Posted by Vidyamaana on 2024-05-30 22:05:48 |

Share: | | | | |


ಕಂಕನಾಡಿ ರಸ್ತೆಯಲ್ಲೇ ನಮಾಝ್ ವಿಚಾರ - ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಏನಂದ್ರು?

ಮಂಗಳೂರು : ಕಂಕನಾಡಿಯ ಒಳ ರಸ್ತೆಯೊಂದರಲ್ಲಿ ನಾಲ್ಕಾರು ಜನ ಮಸೀದಿಯ ಗೇಟ್ ಬಳಿ ರಸ್ತೆಯಲ್ಲಿ ನಮಾಝ್ ಮಾಡಿದ ಘಟನೆ ಆಕಸ್ಮಿಕವಾಗಿ ನಡೆದಿರುವಂತದ್ದು. ಸಾರ್ವಜನಿಕರಿಗೆ ತೊಂದರೆಯಾಗುವಂತಹ ಯಾವುದೇ ವಿಚಾರವನ್ನೂ ಒಪ್ಪುವಂತದ್ದಲ್ಲ. ಆದರೆ ಈ ಪ್ರಕರಣ ಅಷ್ಟು ಗಂಭೀರವೂ ಅಲ್ಲ.ಪೊಲೀಸರು ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಮುಂದೆ ಈ ರೀತಿ ನಡೆಯದಂತೆ ಜಾಗೃತೆ ವಹಿಸಲು ಸೂಚಿಸಬಹುದಿತ್ತು. ಪೊಲೀಸರೇ ಏಕಾಏಕಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದು ಸರಿಯಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದ್ದಾರೆ.

ನ್ಯೂ ಇಯರ್ ಪಾರ್ಟಿ ಅವಾಂತರ – ಟೈಟ್ ಆಗಿ ಸ್ನೇಹಿತನ ಮೂಗು ಕಚ್ಚಿದ ರಾಕೇಶ್

Posted by Vidyamaana on 2024-01-01 17:51:25 |

Share: | | | | |


ನ್ಯೂ ಇಯರ್ ಪಾರ್ಟಿ ಅವಾಂತರ – ಟೈಟ್ ಆಗಿ ಸ್ನೇಹಿತನ ಮೂಗು ಕಚ್ಚಿದ ರಾಕೇಶ್

ಬೆಳ್ತಂಗಡಿ : ಹೊಸ ವರ್ಷದ ಆಚರಣೆಯ ಪಾರ್ಟಿಯಲ್ಲಿ ಸ್ನೇಹಿತನ ಜೊತೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿ ನಂತರ ಕುಡಿದ ಮತ್ತಿನಲ್ಲಿ ಒಬ್ಬನ ಮೂಗು ಕಚ್ಚಿ ತುಂಡರಿಸಿದ ಘಟನೆ ಬೆಳ್ತಂಗಡಿಯ ಪಿಲ್ಯದಲ್ಲಿ ನಡೆದಿದೆ‌.


ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದ ಉಲ್ಪೆ ಎಂಬಲ್ಲಿನ ನಿವಾಸಿ ದೀಕ್ಷಿತ್ (28) ಎಂಬ ಯುವಕ ಯುವಕ ಮೂಗು ತುಂಡರಿಸಿಕೊಂಡ ಯುವಕನಾಗಿದ್ದಾನೆ.ಮೂಗು ತುಂಡರಿಸಿದ ಆರೋಪಿ ಯುವಕ ರಾಕೇಶ್ ಎಂಬಾತ ಮೂಲತಃ ಮೂಡಿಗೆರೆ ತಾಲೂಕಿನವನಾಗಿದ್ದು , ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಿದ್ದು , ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಡಿಸೆಂಬರ್ 31 ರಂದು ರಾತ್ರಿ ಹೊಸ ವರ್ಷದ ಸಂದರ್ಭದಲ್ಲಿ ಮದ್ಯ ಸೇವಿಸಿ ಕ್ಷುಲ್ಲಕ ವಿಚಾರದಲ್ಲಿ ಸ್ನೇಹಿತನ ಜೊತೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ರಾಕೇಶ್ ಎಂಬಾತ ದೀಕ್ಷಿತ್ ಎಂಬಾತನ ಮೂಗನ್ನು ಕಚ್ಚಿ ತುಂಡರಿಸಿದ್ದಾನೆ. 


ಘಟನೆಯಿಂದ ಗಂಭೀರ ಗಾಯಗೊಂಡ ದೀಕ್ಷಿತ್ ನನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಈ ಪ್ರಕರಣ ಸಂಬಂಧ ವೇಣೂರು ಪೋಲಿಸರಿಗೆ ದೂರು ನೀಡಲಾಗಿದ್ದು , ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ನ 13 : ವಸ್ತ್ರ ವಿತರಣಾ ಕಾರ್ಯಕ್ರ‌ಮ ಟ್ರಾಫಿಕ್ ವ್ಯವಸ್ಥೆಯ ಬಗ್ಗೆ ಸಮಾಲೋಚನೆ

Posted by Vidyamaana on 2023-11-10 09:03:44 |

Share: | | | | |


ನ 13 : ವಸ್ತ್ರ ವಿತರಣಾ ಕಾರ್ಯಕ್ರ‌ಮ ಟ್ರಾಫಿಕ್ ವ್ಯವಸ್ಥೆಯ ಬಗ್ಗೆ ಸಮಾಲೋಚನೆ

ಪುತ್ತೂರು: ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ನ.13 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ‌ನಡೆಯಲಿರುವ ವಸ್ತ್ರ ವಿತರಣೆ ಹಾಗೂ ಸಹಭೋಜನ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಸೇರುವ ನಿರೀಕ್ಷೆ ಇದ್ದು ಟ್ರಾಫಿಕ್ ವ್ಯವಸ್ಥೆಯ ಬಗ್ಗೆ ಟ್ರಸ್ಟ್ ಕಾರ್ಯಾಧ್ಯಕ್ಷರಾದ‌‌ ಸುದೇಶ್ ಶೆಟ್ಟಿಯವರು ಟ್ರಾಫಿಕ್ ಇನ್ಸ್ ಪೆಕ್ಟರ್ ಉದಯ ರವಿ ಅವರ ಜೊತೆ ಸಮಾಲೋಚನೆ ನಡೆಸಿದರು.

ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಇನ್ಸ್ ಪೆಕ್ಟರ್ ರವರು ಕಾರ್ಯಾಧ್ಯಕ್ಷರಿಂದ ಮಾಹಿತಿ ಪಡೆದುಕೊಂಡರು. 50 ಸಾವಿರಕ್ಕೂ‌ಮಿಕ್ಕಿ‌ ಜನರು ಕಾರ್ಯಕ್ರಮದಲ್ಲಿ‌ಭಾಗವಹಿಸುವ ಕಾರಣ ನಗರದಲ್ಲಿ ಟ್ರಾಫಿಕ್ ಜಾಮ್ ಆಗುವ ಸಂಭವ ಇದ್ದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಸುದೇಶ್ ಶೆಟ್ಟಿಯವರು ಮನವಿ ಮಾಡಿದರು.

ಸ್ವಂತ ಮನೆಯೂ ಇಲ್ಲ ಕಾರೂ ಇಲ್ಲ ಇಲ್ಲಿದೆ ಸೋನಿಯಾ ಗಾಂಧಿ ಆಸ್ತಿ ವಿವರ

Posted by Vidyamaana on 2024-02-17 13:31:37 |

Share: | | | | |


ಸ್ವಂತ ಮನೆಯೂ ಇಲ್ಲ  ಕಾರೂ ಇಲ್ಲ  ಇಲ್ಲಿದೆ ಸೋನಿಯಾ ಗಾಂಧಿ ಆಸ್ತಿ ವಿವರ

ಜೈಪುರ; ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆ ಬಯಸಿ ಬುಧವಾರ ನಾಮಪತ್ರ ಸಲ್ಲಿಸಿದ ಸೋನಿಯಾ ಗಾಂಧಿ, ಈ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಆಸ್ತಿ ವಿವರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ತಾವು ಭಾರತದಲ್ಲಿ ಯಾವುದೇ ಮನೆ ಹೊಂದಿಲ್ಲ, ತಮ್ಮ ಬಳಿ ಯಾವುದೇ ವಾಹನ ಕೂಡಾ ಇಲ್ಲ.

ಆದರೆ ಇಟಲಿಯಲ್ಲಿ ಪೂರ್ವಜರಿಂದ ಬಂದ ಒಂದು ಮನೆಯಿದೆ. ತಮ್ಮ ಒಟ್ಟು ಆಸ್ತಿ 12.53 ಕೋಟಿ ರು.ನಷ್ಟಿದೆ ಎಂದು ಘೋಷಿಸಿಕೊಂಡಿದ್ದಾರೆ.

ಏನೇನು ಆಸ್ತಿ?: ಇಟಲಿಯಲ್ಲಿ ನನ್ನ ತಂದೆಯಿಂದ ಬಂದ 27 ಲಕ್ಷ ರೂ. ಮೌಲ್ಯದ ಮನೆ ಇದೆ. ಅದನ್ನು ಹೊರತುಪಡಿಸಿದರೆ ಭಾರತದಲ್ಲಿ ಯಾವುದೇ ಮನೆ, ವಾಹನ ಇಲ್ಲ. 1.07 ಕೋಟಿ ರು. ಮೌಲ್ಯದ 88 ಕೆ.ಜಿ ಬೆಳ್ಳಿ, 49.95 ಲಕ್ಷ ರು. ಮೌಲ್ಯದ 1.267 ಕೆ.ಜಿ. ಚಿನ್ನ, ನವದೆಹಲಿಯ ದೇರಾಮಂಡಿ ಗ್ರಾಮದಲ್ಲಿ 2529.28 ಚದರ ಮೀಟರ್ ವಿಸ್ತೀರ್ಣದ 5.88 ಕೋಟಿ ರು. ಬೆಲೆಬಾಳುವ ಭೂಮಿ ಇದೆ ಎಂದು ಹೇಳಿಕೊಂಡಿದ್ದಾರೆ.

72 ಲಕ್ಷ ರು. ಏರಿಕೆ: 2019ರ ಲೋಕಸಭಾ ಚುನಾವಣೆ ಸಮಯಕ್ಕೆ ಹೋಲಿಸಿದೆ 2024ರಲ್ಲಿ ಸೋನಿಯಾ ಆಸ್ತಿಯಲ್ಲಿ 72 ಲಕ್ಷ ರು. ಏರಿಕೆ ಕಂಡುಬಂದಿದೆ. ಆಗ ಸೋನಿಯಾ ತಮ್ಮ ಬಳಿ 11.82 ಕೋಟಿ ರು. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಇನ್ನು 2014ರಲ್ಲಿ ಸೋನಿಯಾ 9.29 ಕೋಟಿ ರು. ಆಸ್ತಿ ಘೋಷಿಸಿಕೊಂಡಿದ್ದರು.

ಬೆಳ್ತಂಗಡಿ : ಹಳೇಕೋಟೆ ಬೈಕಿಗೆ ಲಾರಿ ಡಿಕ್ಕಿ ಸವಾರ ವಿನೋದ್ ಗೌಡ ಪಾಲಡ್ಕ ಸ್ಥಳದಲ್ಲೇ ಮೃತ್ಯು

Posted by Vidyamaana on 2024-06-01 18:09:41 |

Share: | | | | |


ಬೆಳ್ತಂಗಡಿ : ಹಳೇಕೋಟೆ  ಬೈಕಿಗೆ ಲಾರಿ ಡಿಕ್ಕಿ ಸವಾರ ವಿನೋದ್ ಗೌಡ ಪಾಲಡ್ಕ ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿ: ಹಳೆಕೋಟೆ ಬಳಿ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ   ಘಟನೆ ನಡೆದಿದೆ.

ಬೆಳ್ತಂಗಡಿಯ ಹಳೇಕೋಟೆ ಬಳಿಯ ಪೆಟ್ರೋಲ್ ಪಂಪ್ ಬಳಿ ಮಣ್ಣು ಹೇರಿಕೊಂಡು ಹೋಗುತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಲಾರಿಯಡಿ ಸಿಲುಕಿ ಬೈಕ್ ಸವಾರ ಬೆಳ್ತಂಗಡಿ ತಾಲೂಕಿನ ಮಚ್ಚಿನದ ಕೃಷಿಕ ವಿನೋದ್ ಗೌಡ(45) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 

ಪುತ್ತೂರಿಗೊಂದು ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ

Posted by Vidyamaana on 2023-06-19 11:25:58 |

Share: | | | | |


ಪುತ್ತೂರಿಗೊಂದು ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಹಾಗೂ ರೋಟರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೂಪರ್ ಸ್ಪೆಷಾಲಿಟಿ ರೋಟರಿ ಕಣ್ಣಿನ ಆಸ್ಪತ್ರೆ ಜೂ.21 ಬುಧವಾರ ರೋಟರಿ ಬ್ಲಡ್ಕ ಬ್ಯಾಂಕ್ ಕಟ್ಟಡದ ತಳ ಅಂತಸ್ತಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ರೋಟರಿ ಕ್ಲಬ್ ಕಣ್ಣಿನ ಆಸ್ಪತ್ರೆಯ ಚೆಯರ್ ಮ್ಯಾನ್ ಡಾ.ಭಾಸ್ಕರ ಎಸ್. ತಿಳಿಸಿದ್ದಾರೆ.


ಜೂ 19 ರಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸುಮಾರು 2500  ಚದರ ಅಡಿ ವಿಸ್ತೀರ್ಣ ದಲ್ಲಿ ಆಸ್ಪತ್ರೆ ಕಾರ್ಯಾಚರಿಸಲಿದ್ದು, ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈಗಾಗಲೇ ಉಡುಪಿ ಪ್ರಸಿದ್ಧ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯ ಅವರೊಂದಿಗೆ ಒಪ್ಪಂದ ಮಾಡಲಾಗಿದೆ ಎಂದು ತಿಳಿಸಿದರು.

ರೋಟರಿ ಸಂಸ್ತೆಯೊಂದಿಗೆ ದಿ ರೋಟರಿ ಫೌಂಡೇಶನ್ ಜರ್ಮನಿಯ ಪಾಸ್ ಪೋರ್ಟ್‍ಕ್ಲಬ್, ಅಮೇರಿಕಾದ ಫ್ಲೋರಿಡಾದ ಟೆಂಪನೋನ್ ಕ್ಲಬ್, ರೋಟರಿ ಜಿಲ್ಲೆ 3180, 3150, ರೋಟರಿ ಕ್ಲಬ್ ಪುತ್ತೂರು ಸಿಟಿ, ಇನ್ನರ್ ವೀಲ್ ಕ್ಲಬ್ ಪಾಲುದಾರರಾಗಿ ಸೇರಿಕೊಂಡಿದ್ದಾರೆ. ಈ ಕಣ್ಣಿನ ಆಸ್ಪತ್ರೆ ಅತ್ಯಾಧುನಿಕ ಮೋಡ್ಯುಲರ್ ಒ.ಟಿ ಯನ್ನು ಹೊಂದಿದ್ದು, ಎಲ್ಲಾ ರೀತಿಯ ಆಧುನಿಕ ಮತ್ತು ಸುಸಜ್ಜಿತ ಸೌಲಭ್ಯಗಳನ್ನು ಹೊಂದಿದ್ದು, ರೋಟರಿ ಕ್ಲಬ್‍ಗಳು ನಡೆಸುವ ಕಣ್ಣಿನ ಶಿಬಿರದಲ್ಲಿ ಪಾಲ್ಗೊಂಡವರಿಗೆ ಉಚಿತವಾಗಿ ತಪಾಸಣೆ, ಚಿಕಿತ್ಸೆಗಳನ್ನು ನಡೆಸಲಾಗುವುದು. ಅಪೇಕ್ಷೆ ಪಟ್ಟ ರೋಗಿಗಳಿಗೆ ಪಾವತಿ ಆಧಾರಿತ ಸೇವೆಗಳನ್ನೂ ಒದಗಿಸಲಾಗುವುದು. ಮುಂದಿನ ಒಂದೂವರೆ ತಿಂಗಳಲ್ಲಿ ಆಸ್ಪತ್ರೆ ಸೇವೆಗೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.ಆಸ್ಪತ್ರೆಯ ಉದ್ಘಾಟನೆಯನ್ನು ರೋಟರಿ ಅಂತರಾಷ್ಟ್ರೀಯ ನಿರ್ದೇಶಕ ಮಹೇಶ್ ಕೋಟ್ ಬಾಗಿ ನೆರವೇರಿಸಲಿದ್ದು, ಬಳಿಕ ಮಹಾವೀರ ವೆಂಚುರ್‍ನಲ್ಲಿ ನಡೆಯುವ ಸಮಾರಂಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ದೀಪ ಬೆಳಗಿಸಲಿದ್ದಾರೆ. ರೋಟರಿ ಜಿಲ್ಲಾ 3181 ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮೋಡ್ಯುಲರ್ ಒಟಿಯನ್ನು ಉದ್ಘಾಟಿಸುವರು. ವಿಶ್ವ ರೋಟರಿ ನ್ಯಾಷನಲ್ ರೋಟರ್ಯಾಕ್ಟ್ ಚೆಯರ್ ಮ್ಯಾನ್ ರವಿ ವದೈಮಾಣಿ ಡೇ ಕೇರ್ ಸೆಂಟರನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ರೋಟರಿ ಫೌಂಡೇಶನ್ ಚೆಯರ್ ಮ್ಯಾನ್ ಡಾ.ಕೆ.ಸೂರ್ಯನಾರಾಯಣ, ಪ್ರಸಾದ್ ನೇತ್ರಾಲಯದ ಡಾ.ಕೃಷ್ಣಪ್ರಸಾದ್ ಕೆ., ರೋಟರಿ ಜಿಲ್ಲಾ 3181 ವಲಯದ ಎ.ಜಗಜೀವನ್ ದಾಸ್ ರೈ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ರೋಟರಿ ಕ್ಲಬ್ ಚೆಯರ್ ಮ್ಯಾನ್ ಉಮಾನಾಥ್ ಪಿ.ಬಿ., ಕಾರ್ಯದರ್ಶಿ ಡಾ.ಶ್ರೀಪ್ರಕಾಶ್, ಪ್ರಸಾದ್ ನೇತ್ರಾಲಯದ ಡಾ. ವಿಕ್ರಂ ಜೈನ್, ಝೇವಿಯರ್ ಡಿ’ಸೋಜಾ ಉಪಸ್ಥಿತರಿದ್ದರು

Recent News


Leave a Comment: