BREAKING : ಮೈಸೂರಲ್ಲಿ ಮಹಿಳೆಯ ಭೀಕರ ಕೊಲೆ : ಪತಿಯ ವಿಮೆ ಹಣಕ್ಕಾಗಿ ಸಂಬಂಧಿಕರಿಂದಲೇ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-21 22:04:16 |

Share: | | | | |


BREAKING : ಮೈಸೂರಲ್ಲಿ ಮಹಿಳೆಯ ಭೀಕರ ಕೊಲೆ : ಪತಿಯ ವಿಮೆ ಹಣಕ್ಕಾಗಿ ಸಂಬಂಧಿಕರಿಂದಲೇ ಬರ್ಬರ ಹತ್ಯೆ

ಮೈಸೂರು : ಪತಿ ತೀರಿಹೋದ ಬಳಿಕ ಆಕೆಗೆ ಪತಿಯ ವಿಮೆಯಿಂದ ಲಕ್ಷಾಂತರ ರೂಪಾಯಿ ಹಣ ಬಂದಿತ್ತು. ಇದೆ ಆಕೆಯ ಸಂಬಂಧಿಕರ ನಿದ್ದೆಗೆಡಿಸಿದೆ. ಹಾಗಾಗಿ ಮಾರಕಾಸ್ತ್ರಗಳಿಂದ ಮಹಿಳೆಯನ್ನು ಭೀಕರವಾಗಿ ಸಂಬಂಧಿಕರೇ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಚೌಥಿ ಗ್ರಾಮದಲ್ಲಿ ನಡೆದಿದೆ.

ಹೌದು ಭಾಗ್ಯವತಿ(32) ಮೃತ ಮಹಿಳೆ. ಚೌಥಿ ಗ್ರಾಮದ ಬಸವರಾಜು ಹಾಗೂ ಯಶೋಧಮ್ಮ ದಂಪತಿ ಪುತ್ರಿಯಾದ ಇವರಿಗೆ ಸಂಪತ್ ಕುಮಾರ್ ಎಂಬುವವರ ಜೊತೆ ಮದುವೆ ಮಾಡಲಾಗಿತ್ತು. ಇಬ್ಬರು ಗಂಡು ಮಕ್ಕಳು ಕೂಡ ಇದ್ದರು. ಎಲ್ಲವೂ ಚೆನ್ನಾಗಿತ್ತು. ಆದ್ರೆ, 5 ವರ್ಷದ ಹಿಂದೆ ಪತಿ ಸಂಪತ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಪತಿಯನ್ನು ಕಳೆದುಕೊಂಡ ಆಕೆ ಧೈರ್ಯ ಕಳೆದುಕೊಳ್ಳದೆ ಇದ್ದ ಎರಡೂವರೆ ಕೃಷಿ ಜಮೀನಿನಲ್ಲಿ ಕಷ್ಟಪಟ್ಟು ದುಡಿದು ತನ್ನ ಕಾಲುಗಳ ಮೇಲೆ ನಿಂತುಕೊಂಡಿದ್ದಳು.ಜೊತೆಗೆ ಲಕ್ಷಾಂತರ ರೂ. ಹಣ ಸಂಪಾದಿಸಿದ್ದರು. ಇದರ ಜೊತೆಗೆ ಇತ್ತೀಚೆಗೆ ಪತಿಯ ವಿಮೆ ಹಣ ಸುಮಾರು 12 ಲಕ್ಷ ರೂಪಾಯಿ ಬರುವುದಿತ್ತು. ಇದು ಸಹಜವಾಗಿ ಆಕೆಯ ಸಂಬಂಧಿಕರ ಕಣ್ಣು ಕುಕ್ಕಿದೆ.

ಮಹಿಳೆಯ ಏಳಿಗೆಯನ್ನು ಸಹಿಸದೆ ಆಕೆಯ ಸಂಬಂಧಿಕರಾದ ಮುತ್ತುರಾಜ್ ಹಾಗೂ ಇತರರು ಸೇರಿಕೊಂಡು ಭಾಗ್ಯವತಿಯನ್ನು ಬರ್ಬರವಾಗಿ ಕತ್ತರಿಸಿ‌ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮುತ್ತುರಾಜ್ ಹಾಗೂ ಇತರ ಸಂಬಂಧಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 Share: | | | | |


ಕಲ್ಯಾಣ್ ಜ್ಯುವೆಲರ್ಸ್ ಶೋರೂಮ್ ನಲ್ಲಿ ಎಸಿ ಸ್ಫೋಟ

Posted by Vidyamaana on 2024-05-04 08:27:14 |

Share: | | | | |


ಕಲ್ಯಾಣ್ ಜ್ಯುವೆಲರ್ಸ್ ಶೋರೂಮ್ ನಲ್ಲಿ ಎಸಿ ಸ್ಫೋಟ

ಬಳ್ಳಾರಿ, ಮೇ.03: ಬಳ್ಳಾರಿಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ಮಳಿಗೆಯಲ್ಲಿ ಎಸಿ ಸ್ಫೋಟಗೊಂಡ ಪರಿಣಾಮ ಅಲ್ಲಿದ್ದವರ ಪೈಕಿ 6 ಮಂದಿ ಗಾಯಗೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಕಲ್ಯಾಣ್ ಜ್ಯುವೆಲರ್ಸ್ ಅಂಗಡಿಯಲ್ಲಿ ಏರ್ ಕಂಡಿಷನರ್ ಸ್ಫೋಟಗೊಂಡ ಪರಿಣಾಮ 6 ಮಂದಿ ಗಂಭೀರವಾಗಿ ಗಾಯಗೊಂಡು ಘಟನೆ ಗುರುವಾರ ಸಂಜೆ ನಡೆದಿದ್ದು, ಬಳ್ಳಾರಿ ನಗರದ ರಥಬೀದಿಯ ಮಾರ್ಟಿನ್ ರಸ್ತೆಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್‌ ಮಳಿಗೆಯಲ್ಲಿ ಈ ದುರಂತ ಸಂಭವಿಸಿದೆ.

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕತ್ತು ಸೀಳಿ ಬರ್ಬರವಾಗಿ ಕೊಂದ ಪಾಗಲ್ ಪ್ರೇಮಿ ತೇಜಸ್

Posted by Vidyamaana on 2023-11-17 04:34:41 |

Share: | | | | |


ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕತ್ತು ಸೀಳಿ ಬರ್ಬರವಾಗಿ ಕೊಂದ ಪಾಗಲ್ ಪ್ರೇಮಿ ತೇಜಸ್

ಹಾಸನ: ಪ್ರೇಮ ವೈಫಲ್ಯದಿಂದ ಪ್ರಿಯಕರ ತನ್ನ ಪ್ರೇಯಸಿಯ ಕತ್ತು ಕುಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಹಾಸನ ತಾಲೂಕಿನ ಕುಂತಿಗುಡ್ಡದಲ್ಲಿ ನಡೆದಿದೆ.


ಸುಚಿತ್ರಾ (20) ಕೊಲೆಯಾದ ಯುವತಿ. ತೇಜಸ್ (23) ಕೊಲೆ ಮಾಡಿರುವ ಪ್ರಿಯಕರ.


ಸುಚಿತ್ರಾ ಆಲೂರು ತಾಲೂಕಿನ ಕವಳಗೆರೆ ಗ್ರಾಮದವಳಾಗಿದ್ದು, ಮೊಸಳೆಹೊಸಳ್ಳಿ ಎಂಜಿನಿಯರ್ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್ ಪದವಿ ಓದುತ್ತಿದ್ದಳು. ಮೂಲತಃ ಹಾಸನ ತಾಲೂಕಿನ ಶಂಕರನಹಳ್ಳಿ ಗ್ರಾಮದವನಾದ ತೇಜಸ್ ಸುಚಿತ್ರಾಳ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದಿದ್ದಾನೆ.


ಪ್ರೀತಿಸಲು ನಿರಾಕರಿಸಿದ್ದಕ್ಕೆ ತೇಜಸ್ ಸುಚಿತ್ರಾಳನ್ನು ತನ್ನೊಂದಿಗೆ ಕುಂತಿಬೆಟ್ಟಕ್ಕೆ ಕರೆದೊಯ್ದಿದ್ದಾನೆ. ಕರೆದೊಯ್ದು ಬಳಿಕ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಆರೋಪಿ ತೇಜಸ್ ಎಸ್ಕೇಪ್ ಆಗಿದ್ದ.


ತೇಜಸ್ ಕೂಡಾ ಮೊಸಳೆಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆ ದುಬೈನಲ್ಲಿ ಆಗ್ತಿದ್ರೆ ಕಥೆನೇ ಬೇರೆ ಇತ್ತು – ಕೊಲೆಗಾರನಿಗೆ ಮರಣ ದಂಡನೆಯಾಗ್ಬೇಕು

Posted by Vidyamaana on 2023-08-27 01:52:31 |

Share: | | | | |


ಈ ಘಟನೆ ದುಬೈನಲ್ಲಿ ಆಗ್ತಿದ್ರೆ ಕಥೆನೇ ಬೇರೆ ಇತ್ತು – ಕೊಲೆಗಾರನಿಗೆ ಮರಣ ದಂಡನೆಯಾಗ್ಬೇಕು

ಪುತ್ತೂರು: ದೇಶದಲ್ಲಿ ಕಾನೂನು ಕಠಿಣವಾಗಬೇಕಾದ ಅವಶ್ಯಕತೆಯಿದ್ದು ದುಬೈ ಮಾದರಿಯ ಕಾನೂನು ಇಲ್ಲಿ ಜಾರಿಗೆ ಬರಬೇಕಾದ ಅನಿವಾರ್ಯತೆಯಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಎರಡು ದಿನಗಳ ಹಿಂದೆ ಪುತ್ತೂರಿನಲ್ಲಿ ಪದ್ಮರಾಜ ಎಂಬಾತನಿಂದ ಕೊಲೆಯಾದ ವಿಟ್ಲ ಕುದ್ದುಪದವು ಸಮೀಪದ ಗೌರಿ ಅವರ ಮನೆಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರುನಮ್ಮಲ್ಲಿ ನಡೆದಂತಹ ಘಟನೆ ದುಬೈಯಲ್ಲಿ

ನಡೆಯುತ್ತಿದ್ದರೆ ಒಂದು ವಾರದಲ್ಲಿ ಇಲ್ಲವೇ ಹತ್ತು

ವಿಧಿಸುತ್ತಿದ್ದರು. ಕೊಲೆಗಾರರಿಗೆ,

ದಿನದೊಳಗೆ ಅವರಿಗೆ ಮರಣ ದಂಡನೆ ಶಿಕ್ಷೆ ಅತ್ಯಾಚಾರಿಗಳಿಗೆ ಅದೇ ರೀತಿಯ ಶಿಕ್ಷೆ ಇಲ್ಲೂ ಜಾರಿಯಾಗಬೇಕು. ಅಂತಹ ಶಿಕ್ಷೆ ಜಾರಿಯಾದಾಗಲೇ ಇಂತಹ ದುಷ್ಟ ಕೃತ್ಯಗಳನ್ನು, ಸಮಾಜ ವಿದ್ರೋಹಿ ಕೆಲಸಗಳನ್ನು ಮಟ್ಟ ಹಾಕಲು ಸಾಧ್ಯ ಎಂದು ಅವರು ಹೇಳಿದರುಕಾನೂನಿನ ಭಯ ಇಲ್ಲದೆ ಇರುವುದೇ ಎಂದು ಅನೇಕ ಕೆಟ್ಟ ಚಟುವಟಿಕೆಗಳಿಗೆ ಕಾರಣವಾಗುತ್ತಿದೆ. ಕೊಲೆ ಮಾಡಿ ಜೈಲಿಗೆ ಹೋದವರು ವಾಪಸ್ ಬಂದು ರಾಜಾರೋಷವಾಗಿ ತಿರುಗಾಡುತ್ತಾರೆ. ಅವರಿಗೆ ಸಮಾಜದಲ್ಲಿ ವಿಶೇಷ ಗೌರವ ಸಿಗುವ ಕಾರ್ಯಗಳು ಕೆಲವು ನಡೆಯುತ್ತಿದೆ. ಹಾಗಾಗಿ ಇಂತಹ ಕೃತ್ಯ ಎಸಗಿದವರಿಗೆ ಮರಣ ದಂಡನೆ ಶಿಕ್ಷೆ ಆಗಬೇಕು ಎಂದು ಅಶೋಕ್ ರೈ ಹೇಳಿದರು.


ಆರೋಪಿಗೆ ಹೇಗಾದರೂ ಶಿಕ್ಷೆ ಕೊಡಿಸಲೇಬೇಕು, ಆತನನ್ನು ಬಿಟ್ರೆ ಇನ್ನೂ ಹೀಗೆಯೇ ಮಾಡುತ್ತಾನೆ. ಇಷ್ಟು ಸಣ್ಣ ಹುಡುಗಿ ಸತ್ತ ಮೇಲೆ ಆತನೂ ಹೋಗಬೇಕು ಎಂದು ಶಾಸಕರಿಗೆ ಮೃತ ಗೌರಿಯವರತಾಯಿ ಸೀತಾ ಅವರು ಮನವಿ ಸಲ್ಲಿಸಿದರು. ಈ ವೇಳೆ ಅವರಿಗೆ ಉತ್ತರಿಸಿದ ಶಾಸಕರು, ನಮಲ್ಲಿರುವುದು ಹಳೆಯ ಕಾನೂನು. ಕೊಲೆ ಮಾಡಿದವರು 6 ತಿಂಗಳಲ್ಲಿ ಹೊರಗೆ ಬರುತ್ತಾರೆ.ಹಾಗೆ ಬರುವಾಗ ಪದ್ಮರಾಜೆ ಎಂದಿರುವವನು ಪದ್ಮಣ್ಣೆ ಆಗುತ್ತಾನೆ. ಇದು ನಮ್ಮ ಜನರ ಪರಿಸ್ಥಿತಿ. ಇದು ಕಡಿಮೆಯಾಗಬೇಕು. ಒಂದೆರಡು ಜನರಿಗೆ ಮರಣದಂಡನೆ ಶಿಕ್ಷೆಯಾದರೆ ಇದೆಲ್ಲವೂ ನಿಲ್ಲುತ್ತದೆ. ಕೆಲವೊಂದು ಬೇರೆ ಕೇಸ್‌ಗಳಲ್ಲಿ ಶಿಕ್ಷೆ ಆಗಲು 15 ವರ್ಷ ಬೇಕಾಗುತ್ತದೆ. ಆದರೆ ಇಂತಹ ಕೇಸ್‌ಗಳಲ್ಲಿ 1 ವರ್ಷದ ಒಳಗೆ ಶಿಕ್ಷೆ  ನೀಡಿದರೆ ಕಾನೂನಿನ 

ಬಗ್ಗೆ ಭಯ ಬರುತ್ತದೆ. ಕಾನೂನು ಮಾಡುವುದು ನಾವೇ ಜನಪ್ರತಿನಿಧಿಗಳು, ಕಾನೂನು ಬದಲಾವಣೆ ಮಾಡುವ ಅವಶ್ಯ ಕತೆ ಇದೆ ಎಂದು ಶಾಸಕರು ಉತ್ತರಿಸಿದರು


ಈ ಸಂದರ್ಭದಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ.ಎಸ್‌. ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಫಾರೂಕ್ ಪೆರ್ನೆ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ನಝೀರ್ ಮಠ, ಪುತ್ತೂರು ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಕಾಂಗ್ರೆಸ್‌ ಮುಖಂಡರಾದ ಪ್ರಹ್ಲಾದ್ ಬೆಳ್ಳಿಪ್ಪಾಡಿ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಸಿಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷ ಯತ್ನಾಳ್ ವಿಪಕ್ಷ ನಾಯಕ: ಎಚ್.ಡಿ.ದೇವೇಗೌಡ ಅಚ್ಚರಿಯ ಹೇಳಿಕೆ

Posted by Vidyamaana on 2023-07-25 10:44:56 |

Share: | | | | |


ಸಿಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷ ಯತ್ನಾಳ್ ವಿಪಕ್ಷ ನಾಯಕ: ಎಚ್.ಡಿ.ದೇವೇಗೌಡ ಅಚ್ಚರಿಯ ಹೇಳಿಕೆ

ಬೆಂಗಳೂರು, ಜುಲೈ 25: ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಹಾಗೂ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ವಿಳಂಬ ಮಧ್ಯೆ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.


ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಚಿಕ್ಕಮಗಳೂರಿನ ಸಿ.ಟಿ.ರವಿ ಬಿಜೆಪಿ ರಾಜ್ಯ ಅಧ್ಯಕ್ಷರಾಗಲಿದ್ದಾರೆ. ಇನ್ನು ವಿಪಕ್ಷ ನಾಯಕರಾಗಿ ಬಸನಗೌಡ ಪಾಟೀಲ್ ಯತ್ನಾಳ್ ಆಗಲಿದ್ದಾರೆ. ಈ ಬಗ್ಗೆ ಒಂದು ಹಂತದ ಚರ್ಚೆ ಆಗಿದೆ. ಅದೆಲ್ಲ ಅವರ ಪಕ್ಷದ ಆಂತರಿಕ ವಿಚಾರ, ಆ ಬಗ್ಗೆ ನಾನು ಗಮನ ಹೆರಿಸಲ್ಲ" ಎಂದು ಹೇಳಿದರು.ಲೋಕಸಭಾ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ"


ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಇದರಲ್ಲಿ ಯಾವ ಅನುಮಾನ ಬೇಡ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.


"ನಾವು ಯಾವ ಪಕ್ಷದ ಜತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಎಷ್ಟು ಸ್ಥಾನಗಳಲ್ಲಾದರೂ ನಾವು ಗೆಲ್ಲಲಿ, ಅದರ ಬಗ್ಗೆ ಚಿಂತಿಸುವುದಿಲ್ಲ. ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತೇವೆ" ಎಂದು ತಿಳಿಸಿದರು

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟಿಸಿದ ಮಾಜಿ ಸಚಿವ ರಮಾನಾಥ ರೈ

Posted by Vidyamaana on 2024-03-27 12:26:28 |

Share: | | | | |


ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟಿಸಿದ ಮಾಜಿ ಸಚಿವ ರಮಾನಾಥ ರೈ

ಬೆಳ್ತಂಗಡಿ: ಕಾಂಗ್ರೆಸ್ನ ಲೋಕಸಭಾ ಚುನಾವಣಾ ಕಚೇರಿಯನ್ನು ಬೆಳ್ತಂಗಡಿ ಹೇರಾಜೆ ಕಾಂಪ್ಲೆಕ್ಸ್ನಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಮಾನಾಥ ರೈ ಉದ್ಘಾಟಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ನಗರ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಬೆಳ್ತಂಗಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ, ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕೊಕ್ಕಡ, ಬೆಳ್ತಂಗಡಿ ಚುನಾವಣಾ ಉಸ್ತುವಾರಿಗಳಾದ ಧರ್ಣೇಂದ್ರ ಕುಮಾರ್, ರಜತ್ ಗೌಡ, ಸುಭಾಶ್ ರೈ, ಮಾಲಾಡಿ ಗ್ರಾಪಂ ಅಧ್ಯಕ್ಷ ಪುನೀತ್ ಕುಮಾರ್ ಮಾಲಾಡಿ, ವೇಣೂರು ಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್,  ಶೇಖರ್ ಕುಕ್ಯಾಡಿ, ಮನೋಹರ್ ಇಳಂತಿಲ, ಪದ್ಮನಾಭ ಸಾಲ್ಯಾನ್ ಮಾಲಾಡಿ ಸೇರಿದಂತೆ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಡಬ: ಇಚ್ಚಂಪಾಡಿಯಲ್ಲಿ ಕಾಡಾನೆ ದಾಳಿ:ಗಂಭೀರ ಗಾಯಗೊಂಡು ಬಿಜು ಕುಮಾರ್ ಆಸ್ಪತ್ರೆಗೆ ದಾಖಲು

Posted by Vidyamaana on 2023-05-28 13:44:56 |

Share: | | | | |


ಕಡಬ: ಇಚ್ಚಂಪಾಡಿಯಲ್ಲಿ ಕಾಡಾನೆ ದಾಳಿ:ಗಂಭೀರ ಗಾಯಗೊಂಡು ಬಿಜು ಕುಮಾರ್ ಆಸ್ಪತ್ರೆಗೆ ದಾಖಲು

ಕಡಬ : ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟ ಘಟನೆ ಬೆನ್ನಿಗೇ ಮತ್ತೆ ಕಾಡಾನೆ ದಾಳಿ ನಡೆದಿದೆ. ಆದರೆ ವ್ಯಕ್ತಿ ಪವಾಡಸದೃಶ ಪಾರಾಗಿದ್ದು, ಗಂಭೀರ ಗಾಯಗೊಂಡಿದ್ದಾರೆ

ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಮೇ 28ರಂದು ಮಧ್ಯಾಹ್ನ ನಡೆದಿದೆ.

ಇಚ್ಲಂಪಾಡಿ ನಿವಾಸಿ ವಿಜುಕುಮಾರ್ ಕಾಡಾನೆ ದಾಳಿಯಿಂದ ಗಾಯಗೊಂಡವರು. ಇವರು ಮಧ್ಯಾಹ್ನ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಇಚ್ಲಂಪಾಡಿ ಗ್ರಾಮದ ನಡುಮನೆ ಕ್ರಾಸ್ ಬಳಿ ಕಾಡಾನೆ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಗಂಭೀರ ಗಾಯಗೊಂಡಿರುವ ವಿಜುಕುಮಾರ್ ಅವರಿಗೆ ಕಡಬದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಪುತ್ತೂರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಎರಡು ಕಾಡಾನೆಗಳು ಬೀಡು ಬಿಟ್ಟಿವೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.

Recent News


Leave a Comment: