ಉಳ್ಳಾಲ ಖಾಝಿಯಾಗಿ ಇಂಡಿಯನ್ ಗ್ರಾಂಡ್ ಮುಫಿ ಎ.ಪಿ. ಉಸ್ತಾದ್ ನೇಮಕ

ಸುದ್ದಿಗಳು News

Posted by vidyamaana on 2024-07-21 17:41:24 |

Share: | | | | |


ಉಳ್ಳಾಲ ಖಾಝಿಯಾಗಿ ಇಂಡಿಯನ್ ಗ್ರಾಂಡ್ ಮುಫಿ ಎ.ಪಿ. ಉಸ್ತಾದ್ ನೇಮಕ

ಉಳ್ಳಾಲ: ಉಳ್ಳಾಲ ಖಾಝಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ.ಖಾಝಿ ಆಯ್ಕೆಗೆ ಸಂಬಂಧಿಸಿ ಉಳ್ಳಾಲ ದರ್ಗಾ ವಠಾರದ ಮದನಿ ಹಾಲಿನಲ್ಲಿ ರವಿವಾರ ಮಧ್ಯಾಹ್ನ ನಡೆದ ಮಹಾಸಭೆ ಯಲ್ಲಿ ಎ.ಪಿ.ಉಸ್ತಾದ್ ಅವರನ್ನು ಖಾಝಿಯಾಗಿ ನೇಮಕ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.

ಆಗಸ್ಟ್ 5ರಂದು ಅಧಿಕಾರ ಸ್ವೀಕಾರ ನಡೆಯಲಿದೆ ಎಂದು ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಮತ್ತು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 Share: | | | | |


ಬೆಳ್ತಂಗಡಿ : ಹಾವು ರಕ್ಷಣೆ ವೇಳೆ ಸ್ನೇಕ್ ಅಶೋಕ್ ಗೆ ಹಾವು ಕಡಿತ, ಸ್ಥಿತಿ ಗಂಭೀರ

Posted by Vidyamaana on 2023-03-26 03:07:34 |

Share: | | | | |


ಬೆಳ್ತಂಗಡಿ : ಹಾವು ರಕ್ಷಣೆ ವೇಳೆ ಸ್ನೇಕ್ ಅಶೋಕ್ ಗೆ ಹಾವು ಕಡಿತ,  ಸ್ಥಿತಿ ಗಂಭೀರ

ಬೆಳ್ತಂಗಡಿ : ಮನೆಗೆ ಬಂದಿದ್ದ ಹಾವು ರಕ್ಷಣೆ ಮಾಡುವ ವೇಳೆ ನಾಗರ ಹಾವು ಕಚ್ಚಿ ಬೆಳ್ತಂಗಡಿಯ ಸ್ನೇಕ್ ಅಶೋಕ್ ಲಾಯಿಲ ಗಂಭೀರ ಸ್ಥಿತಿಯಲ್ಲಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿದ್ದಾರೆ.


ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬಳಿಯಲ್ಲಿ ಮಾ.25 ರಂದು ರಾತ್ರಿ ಸುಮಾರು 10 ಗಂಟೆ ವೇಳೆ ಮನೆಯಲ್ಲಿ ನಾಗರ ಹಾವು ಇರುವ ಬಗ್ಗೆ ಮಾಹಿತಿ ನೀಡಿದ್ದು ಅದರಂತೆ ರಕ್ಷಣೆ ಮಾಡಲು ಸ್ನೇಕ್ ಅಶೋಕ್ ಲಾಯಿಲ ಹಿಡಿಯುವಾಗ ಬಲ ಕಾಲಿಗೆ ನಾಗರ ಹಾವು ಕಚ್ಚಿದೆ.ಘಟನೆ ಬಳಿಕ ನೇರ ಉಜಿರೆ ಬೆನಕ ಆಸ್ಪತ್ರೆಗೆ ಬಂದಿದ್ದು ಪರೀಕ್ಷಿಸಿದ ವೈದ್ಯರು ಮಂಗಳೂರು ಆಸ್ಪತ್ರೆಗೆ ರವಾನಿಸಲು ಸೂಚಿಸಿದ್ದಾರೆ. ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ನೀಡಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಾಬಾ ಅಂಬುಲೆನ್ಸ್ ಚಾಲಕ ಜಲೀಲ್ ಮತ್ತು ಪತ್ರಕರ್ತ ಪ್ರತೀಕ್ ಕೋಟ್ಯಾನ್ ತಕ್ಷಣ ಮಂಗಳೂರು ಕಂಕನಾಡಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ದಾಖಲಿಸಿದ್ದಾರೆ.ಸ್ನೇಕ್ ಅಶೋಕ್ ಲಾಯಿಲ ಗಂಭೀರ ಸ್ಥಿತಿಯಲ್ಲಿದ್ದು ಸದ್ಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ನೇಕ್ ಅಶೋಕ್ ಅವರಿಗೆ ಈ ಮೊದಲು ನಾಗರ ಹಾವು ಕಚ್ಚಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಪ್ರಸಿದ್ಧ ಹಾವು ರಕ್ಷಕರಲ್ಲಿ ಸ್ನೇಕ್ ಅಶೋಕ್ ಲಾಯಿಲ ಒಬ್ಬರಾಗಿದ್ದಾರೆ.

ಚಂದ್ರಯಾನ-3 ಉಡಾವಣೆ ಕೌಂಟ್‌ಡೌನ್ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ನಿಧನ

Posted by Vidyamaana on 2023-09-04 03:54:48 |

Share: | | | | |


ಚಂದ್ರಯಾನ-3 ಉಡಾವಣೆ ಕೌಂಟ್‌ಡೌನ್ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ನಿಧನ

ಆಂಧ್ರಪ್ರದೇಶ : ಶ್ರೀಹರಿಕೋಟಾದಲ್ಲಿ ರಾಕೆಟ್ ಉಡಾವಣೆ ಕ್ಷಣಗಣನೆ ಸಂದರ್ಭ ಧ್ವನಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ವಲರ್ಮತಿ ಅವರು ಹೃದಯ ಸ್ತಂಭನದಿಂದ ನಿಧನರಾದರು. ಅವರಿಗೆ ಐವತ್ತು ವರ್ಷ ವಯಸ್ಸಾಗಿತ್ತು.



ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -3 ಅನ್ನು ಉಡಾವಣೆ ಮಾಡಲಾಯಿತು. ಈ ವೇಳೆ ವಿಜ್ಞಾನಿ ವಲಮರ್ತಿ ಅವರು ಚಂದ್ರಯಾನ-3 ಉಡಾವಣೆಯ ಸಂದರ್ಭದಲ್ಲಿ ಧ್ವನಿ ನೀಡಿದ್ದರು.


ಇಸ್ರೋದಲ್ಲಿ, ರಾಕೆಟ್ ಉಡಾವಣೆ ಸಮಯದಲ್ಲಿ ಕೌಂಟ್‌ಡೌನ್‌ಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕೌಂಟ್ ಡೌನ್ ಕರ್ತವ್ಯವನ್ನು ತಮ್ಮ ಗಂಭೀರ ಧ್ವನಿಯಿಂದ ನಿರ್ವಹಿಸಿದ ಉದ್ಯೋಗಿ ವಲರ್ಮತಿ ಅವರು ಶನಿವಾರ ರಾತ್ರಿ ಚೆನ್ನೈನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.


ವಲರ್ಮತಿ ಅವರು ಚಂದ್ರಯಾನ-3 ಸೇರಿದಂತೆ ಇಸ್ರೋ ಕೈಗೊಂಡ ಅನೇಕ ಪ್ರಯೋಗಗಳ ಉಸ್ತುವಾರಿ ವಹಿಸಿದ್ದರು. ಆದಾಗ್ಯೂ, ಜುಲೈ 14 ರಂದು ಅತ್ಯಂತ ಯಶಸ್ವಿಯಾದ ಚಂದ್ರಯಾನ-3 ಉಡಾವಣೆಯು ಅವರ ಕೊನೆಯ ಧ್ವನಿಯಾಗಿತ್ತು.ವಲರ್ಮತಿ ಅವರ ನಿಧಾನಕ್ಕೆ ಇಸ್ರೋ ವಿಜ್ಞಾನಿಗಳು ಕಂಬನಿ ಮಿಡಿದಿದ್ದಾರೆ.



ತಮಿಳುನಾಡಿನ ಅರಿಯಲೂರಿನಲ್ಲಿ 1959 ರಲ್ಲಿ ಜನಿಸಿದ ವಲರ್ಮತಿ ,1984 ರಿಂದ ಇಸ್ರೋ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ.


ಇಸ್ರೋದಲ್ಲಿ ಉಡಾವಣೆಯಾದ ರಾಕೆಟ್ ಪ್ರಯೋಗಗಳ ಉಡಾವಣೆ ಕ್ಷಣಗಣನೆಯನ್ನು ಅವರು ಹೇಳುತ್ತಿದ್ದರು. ಹೀಗಾಗಿ ಆಕೆಯ ವಿಶಿಷ್ಟ ಧ್ವನಿ ದೇಶದ ಜನತೆಗೆ ಪರಿಚಿತವಾಯಿತು. ಅವರು 2015 ರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಪಡೆದರು. ಇಸ್ರೋದಿಂದ ನಿವೃತ್ತರಾದ ಅವರು ಶನಿವಾರ ಸಂಜೆ ಹೃದಯಾಘಾತದಿಂದ ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ

Posted by Vidyamaana on 2023-08-12 06:35:27 |

Share: | | | | |


ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ  ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ

ಬೆಳ್ತಂಗಡಿ : ಸೌಜನ್ಯ ಪರ ನ್ಯಾಯದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ ನೀಡಿದ್ದಾರೆ.


ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಭೇಟಿ ನೀಡಿರುವ ಪ್ರಮೋದ್ ಮುತಾಲಿಕ್ ಸೌಜನ್ಯ ಹೋರಾಟದ ಬಗೆಗಿನ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಹೋರಾಟ ಸಾಗಲಿದೆ ಅನ್ನುವ ಬಗೆಗಿನ ಮಾಹಿತಿಯನ್ನು ತಿಮರೋಡಿಯವರಿಂದ ಪಡೆದುಕೊಂಡಿದ್ದಾರೆ. ಅಲ್ಲದೆ ತಿಮರೋಡಿ ಅವರ ಹೋರಾಟಕ್ಕೆ ಬೆಂಬಲ ಸೂಚಿಸುವ ಬಗ್ಗೆಯೂ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

ಸಹಾರಾ ಸಮೂಹ ದ ಸಂಸ್ಥಾಪಕ ಸುಬ್ರತಾ ರಾಯ್ ವಿಧಿವಶ

Posted by Vidyamaana on 2023-11-15 05:47:04 |

Share: | | | | |


ಸಹಾರಾ ಸಮೂಹ ದ ಸಂಸ್ಥಾಪಕ ಸುಬ್ರತಾ ರಾಯ್ ವಿಧಿವಶ

ನವದೆಹಲಿ: ಸಹಾರಾ ಸಮೂಹದ ( Sahara Group ) ಸ್ಥಾಪಕ ಸುಬ್ರತಾ ರಾಯ್ ( Subrata Roy ) ದೀರ್ಘಕಾಲದ ಅನಾರೋಗ್ಯದ ನಂತರ ಮುಂಬೈನಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಭಾನುವಾರ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಕೆಡಿಎಎಚ್) ದಾಖಲಿಸಲಾಗಿತ್ತು.ಆದರೇ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿರೋದಾಗಿ ತಿಳಿದು ಬಂದಿದೆ.


ಈ ಕುರಿತಂತೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವಂತ ಸಹಾರಾ ಇಂಡಿಯಾ ಪರಿವಾರ್ ( Sahara India Pariwar ), ನಮ್ಮ ಗೌರವಾನ್ವಿತ ಸಹರಾಶ್ರೀ ಸುಬ್ರತಾ ರಾಯ್ ಸಹಾರಾ ಅವರ ನಿಧನದ ಬಗ್ಗೆ ಸಹಾರಾ ಇಂಡಿಯಾ ಪರಿವಾರ್ ತೀವ್ರ ದುಃಖದಿಂದ ತಿಳಿಸುತ್ತಿದೆ. ಸ್ಪೂರ್ತಿದಾಯಕ ನಾಯಕ ಮತ್ತು ದೂರದೃಷ್ಟಿಯ ಸಹರಾಶ್ರೀ ಜಿ ಅವರು ಮೆಟಾಸ್ಟಾಟಿಕ್ ಕ್ಯಾನ್ಸರ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಉಂಟಾಗುವ ತೊಡಕುಗಳೊಂದಿಗೆ ದೀರ್ಘಕಾಲದ ಹೋರಾಟದ ನಂತರ ಹೃದಯ ಸ್ತಂಭನದಿಂದಾಗಿ 2023 ರ ನವೆಂಬರ್ 14 ರಂದು ರಾತ್ರಿ 10.30 ಕ್ಕೆ ನಿಧನರಾದರು ಎಂದು ತಿಳಿಸಿದೆ.ಜೂನ್ 10, 1948 ರಂದು ಬಿಹಾರದ ಅರಾರಿಯಾದಲ್ಲಿ ಜನಿಸಿದ ಸುಬ್ರತಾ ರಾಯ್ ಹಣಕಾಸು, ರಿಯಲ್ ಎಸ್ಟೇಟ್, ಮಾಧ್ಯಮ ಮತ್ತು ಆತಿಥ್ಯ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ವ್ಯಾಪಿಸಿದ ವಿಶಾಲ ಸಾಮ್ರಾಜ್ಯವನ್ನು ಸ್ಥಾಪಿಸಿದರು.


ಸುಬ್ರತಾ ರಾಯ್ ಗೋರಖ್ಪುರದ ಸರ್ಕಾರಿ ತಾಂತ್ರಿಕ ಸಂಸ್ಥೆಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದರು. ನಂತರ ಅವರು 1976ರಲ್ಲಿ ಸಹಾರಾ ಫೈನಾನ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ಗೋರಖ್ಪುರದಲ್ಲಿ ವ್ಯವಹಾರಕ್ಕೆ ಕಾಲಿಟ್ಟರು.


1978 ರ ಹೊತ್ತಿಗೆ, ಅವರು ಅದನ್ನು ಸಹಾರಾ ಇಂಡಿಯಾ ಪರಿವಾರ್ ಆಗಿ ಪರಿವರ್ತಿಸಿದರು. ಇದು ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಸಹಾರಾ ಸಮೂಹವು 1992ರಲ್ಲಿ ರಾಷ್ಟ್ರೀಯ ಸಹಾರಾ ಎಂಬ ಹಿಂದಿ ಭಾಷೆಯ ಪತ್ರಿಕೆಯನ್ನು ಪ್ರಾರಂಭಿಸಿತು ಮತ್ತು ನಂತರ ಸಹಾರಾ ಟಿವಿಯೊಂದಿಗೆ ದೂರದರ್ಶನ ಕ್ಷೇತ್ರವನ್ನು ಪ್ರವೇಶಿಸಿತು.

ಪರ್ಲಡ್ಕ : ಮಿನಿ ಪಿಕಪ್ ಗೆ ಆಕ್ಟಿವಾ ಡಿಕ್ಕಿ

Posted by Vidyamaana on 2023-11-24 04:43:28 |

Share: | | | | |


ಪರ್ಲಡ್ಕ : ಮಿನಿ ಪಿಕಪ್ ಗೆ ಆಕ್ಟಿವಾ ಡಿಕ್ಕಿ

ಪುತ್ತೂರು: ಪರ್ಲಡ್ಕ ಜಂಕ್ಷನ್ ನಲ್ಲಿ ರಿಕ್ಷಾವನ್ನು ಹಿಂದಿಕ್ಕಲು ಹೋದ ದ್ವಿಚಕ್ರ ವಾಹನವೊಂದು ಪಿಕಪ್  ಗೆ ಡಿಕ್ಕಿಯಾದ ಘಟನೆ ಮಾಣಿ ಮೈಸೂರು ಹೆದ್ದಾರಿಯ ಪರ್ಲಡ್ಕದಲ್ಲಿ ನ 23 ರಂದು ನಡೆದಿದೆ. ಡಿಕ್ಕಿಯಾದ ರಬಸಕ್ಕೆ   ದ್ವಿಚಕ್ರವಾಹನ ಛಿದ್ರವಾಗಿದ್ದು, ಸವಾರ ಅಪಾಯದಿಂದ ಪಾರಾಗಿದ್ದಾರೆ.


ಹೆದ್ದಾರಿಯ ಬದಿಯಲ್ಲಿ ನಿಲ್ಲಿಸಿ ಹೋದ ನಿಸಾನ್ ಕಾರಿಗೆ ಪೊಲೀಸರು ಲಾಕ್ ಹಾಕಿದ್ದು, ಇದನ್ನು ತಪ್ಪಿಸಲು ರಿಕ್ಷಾ ಹೋಗಿದ್ದು, ಈ ಸಂದರ್ಭ ಹಿಂಭಾಗದಿಂದ ಬರುತ್ತಿದ್ದ ದ್ವಿಚಕ್ರವಾಹನ ರಸ್ತೆಯ ಬಲ ಬದಿಗೆ ಬಂದಿದೆ. ಇದರಿಂದ ಮಡಿಕೇರಿ ಭಾಗದಿಂದ ಬರುತ್ತಿದ್ದ ಮಿನಿ ಪಿಕಪ್ ಗೆ ಡಿಕ್ಕಿಯಾಗಿದೆ.

ನಾಳೆ ಬೆಳಗ್ಗೆ 10.30ಕ್ಕೆ SSLC ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ

Posted by Vidyamaana on 2024-05-08 13:59:51 |

Share: | | | | |


ನಾಳೆ ಬೆಳಗ್ಗೆ 10.30ಕ್ಕೆ SSLC ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿಯು 2024ನೇ ಸಾಲಿನ ಎಸ್‌ಎಸ್‌ಎಲ್ಸಿ ಫಲಿತಾಂಶವನ್ನು ನಾಳೆ ಬೆಳಗ್ಗೆ 10.30 ಗಂಟೆಗೆ ಪ್ರಕಟಿಸಲಿದೆ.ರಾಜ್ಯಾದ್ಯಂತ 10 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೆಎಸ್‌ಇಎಬಿ 10 ನೇ ತರಗತಿ ಫಲಿತಾಂಶಗಳನ್ನು ಕರ್ನಾಟಕ ಫಲಿತಾಂಶಗಳ ಅಧಿಕೃತ ವೆಬ್ಸೈಟ್ನಲ್ಲಿ karresults.nic.in ನಲ್ಲಿ ಪರಿಶೀಲಿಸಬಹುದು.

ನೇರ ಲಿಂಕ್ ಅನ್ನು kseab.karnataka.gov.in ನಲ್ಲಿ ಪರಿಶೀಲಿಸಬಹುದು.ರಾಜ್ಯಾದ್ಯಂತ ಸುಮಾರು 8 ಲಕ್ಷ ಅಭ್ಯರ್ಥಿಗಳು ಕರ್ನಾಟಕ 10 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗಿದ್ದರು.

Recent News


Leave a Comment: