ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ಉಳ್ಳಾಲ :ಸೇವಂತಿಗುಡ್ಡೆ ನಿವಾಸಿ ಮಾಜಿ ರೌಡಿ ಶಮೀರ್ ನೇಣಿಗೆ ಶರಣು

Posted by Vidyamaana on 2023-10-17 16:51:05 |

Share: | | | | |


ಉಳ್ಳಾಲ :ಸೇವಂತಿಗುಡ್ಡೆ ನಿವಾಸಿ  ಮಾಜಿ ರೌಡಿ ಶಮೀರ್ ನೇಣಿಗೆ ಶರಣು

ಉಳ್ಳಾಲ, ಅ.17: ಬಿಸಿ ರಕ್ತದಲ್ಲಿ ಮದ್ಯ, ಗಾಂಜಾ ಸೇದಿ ರೌಡಿಸಂ ನಡೆಸಿದ್ದ ಉಳ್ಳಾಲ ಪೊಲೀಸ್ ಠಾಣೆಯ ಮಾಜಿ ರೌಡಿ ಶೀಟರ್ ಓರ್ವ ಮನೆಯಲ್ಲಿ ಟಿ.ವಿ ನೋಡುತ್ತಲೇ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.


ಸೇವಂತಿಗುಡ್ಡೆ ನಿವಾಸಿ ಶಮೀರ್ (41)ಆತ್ಮಹತ್ಯೆಗೈದ ವ್ಯಕ್ತಿ. ಶಮೀರ್ ಕ್ಯಾನ್ಸರ್ ನಿಂದ ಮೃತಪಟ್ಟ ನಟೋರಿಯಸ್ ರೌಡಿ ಶಬರಿಯ ಸಹಚರನಾಗಿದ್ದು ಉಳ್ಳಾಲ ಠಾಣೆಯಲ್ಲಿ ಹಳೆಯ ರೌಡಿ ಶೀಟರ್ ಆಗಿದ್ದ. ಗಾಂಜಾ, ಮದ್ಯ ವ್ಯಸನಿಯಾಗಿದ್ದ ಶಮೀರ್ ಜೀವನ ನಿರ್ವಹಣೆಗೆ ಇತ್ತೀಚಿಗೆ‌ ಆಟೋ ರಿಕ್ಷಾ ಚಲಾಯಿಸುತ್ತಿದ್ದು ತೊಕ್ಕೊಟ್ಟಿನ ಒಳಪೇಟೆಯ ರಿಕ್ಷಾ ಪಾರ್ಕಲ್ಲಿ ದುಡಿಯುತ್ತಿದ್ದ. 


ನಿನ್ನೆ ಸಂಜೆ ಒಳಪೇಟೆಯ ರಿಕ್ಷಾ ಚಾಲಕರಲ್ಲಿ ಗಲಾಟೆ ನಡೆಸಿದ್ದ ಶಮೀರ್ ಯಾರೊಬ್ಬರಿಗೂ ಪಾರ್ಕಲ್ಲಿ ಆಟೋ ರಿಕ್ಷಾ ಪಾರ್ಕ್ ಮಾಡಲು ಬಿಡುವುದಿಲ್ಲವೆಂದು ಆವಾಝ್ ಹಾಕಿದ್ದನಂತೆ.




ಶಮೀರನ ತಾಯಿ ಒಂದು ತಿಂಗಳ ಹಿಂದಷ್ಟೆ ಮೃತಪಟ್ಟಿದ್ದರಂತೆ. ಮೂರು ದಿನಗಳ ಹಿಂದಷ್ಟೆ ಶಮೀರ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಪಲ್ಟಿ ಹೊಡೆದಿದ್ದು, ರಿಕ್ಷಾದ ಲೋನ್ ಬಾಕಿಯಿದ್ದು ಬ್ಯಾಂಕಿನ ಸೀಝರ್ ಗಳು ದಿನ ನಿತ್ಯವೂ ಶಮೀರ್ ಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದರಂತೆ. ಮೃತ ಶಮೀರ್ ಗೆ ಎರಡು ಹೆಣ್ಣು, ಒಂದು ಗಂಡು ಮಕ್ಕಳಿದ್ದು ಪತ್ನಿಯೂ ಅನಾರೋಗ್ಯದಲ್ಲಿ ಬಳಲುತ್ತಿದ್ದಾರೆ ಎನ್ನಲಾಗಿದೆ. ನವರಾತ್ರಿ ರಜೆ ಸಿಕ್ಕ ಕಾರಣ ಪತ್ನಿ , ಮಕ್ಕಳು ತವರು ಸೇರಿದ್ದು,ಇಂದು ಬೆಳಗ್ಗೆ ಮನೆಯಲ್ಲಿ ಒಂಟಿಯಾಗಿದ್ದ ಶಮೀರ್ ಟಿ.ವಿ ನೋಡುತ್ತಲೇ ‌ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.


ಯೌವನದಲ್ಲಿ ಮದ್ಯ ,ಗಾಂಜಾದ ಅಮಲಿನಲ್ಲಿ ಉಳ್ಳಾಲದಲ್ಲಿ ಪುಡಿ ರೌಡಿಗಳಾಗಿ ಅಟ್ಟಹಾಸ ಮೆರೆದಿದ್ದ ಶಬರಿ, ಶಮೀರ್ ಇಬ್ಬರೂ ಅಕಾಲಿಕ ಸಾವು ಕಂಡಿದ್ದು ವಿಪರ್ಯಾಸ.

ಮಣಿಪಾಲದ ಅಪಾರ್ಟ್‌ಮೆಂಟಿನಲ್ಲಿ ವೇಶ್ಯಾವಾಟಿಕೆ: ಪಯಾಜ್‌ - ಸಚಿನ್‌ ಪರಾರಿ

Posted by Vidyamaana on 2023-06-01 08:12:26 |

Share: | | | | |


ಮಣಿಪಾಲದ ಅಪಾರ್ಟ್‌ಮೆಂಟಿನಲ್ಲಿ ವೇಶ್ಯಾವಾಟಿಕೆ:  ಪಯಾಜ್‌ - ಸಚಿನ್‌ ಪರಾರಿ

ಉಡುಪಿ: ಮಣಿಪಾಲ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹೆರ್ಗದ ಈಶ್ವರ ನಗರದ ಮಹಾಲಸಾ ಎಮರಾಲ್ಡ್ ಅಪಾರ್ಟ್‌ಮೆಂಟಿನ ಕೊಠಡಿ ಸಂಖ್ಯೆ 302ರಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ದಾಳಿ ನಡೆಸಲಾಗಿದೆ.ವೇಶ್ಯಾವಟಿಕೆಯಲ್ಲಿ ತೊಡಗಿದವರನ್ನು ವಶಕ್ಕೆ ಪಡೆದು ವಿಚಾರಿಸಿ ಅವರ ವಶದಲ್ಲಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನೈತಿಕ ಚಟುವಟಿಕೆ ಮಾಡಲು ವ್ಯಕ್ತಿಗಳಿಂದ ಹಣವನ್ನು ಸಂಗ್ರಹಿಸಿ ಕೊಠಡಿಗಳನ್ನು ಒದಗಿಸಿದ ಆರೋಪಿಗಳಾದ ಪಯಾಜ್‌ ಮತ್ತು ಸಚಿನ್‌ ದಾಳಿಯ ಸಮಯ ಸ್ಥಳದಿಂದ ಪರಾರಿಯಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೂ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ನಿಲ್ಲಿಸದಿದ್ದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡುವ ಪರಿಸ್ಥಿತಿ ಬರಲಿದೆ

Posted by Vidyamaana on 2024-04-04 18:33:37 |

Share: | | | | |


ಹಿಂದೂ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ನಿಲ್ಲಿಸದಿದ್ದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡುವ ಪರಿಸ್ಥಿತಿ ಬರಲಿದೆ

ಪುತ್ತೂರು, ಎ.4: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯ ಸರಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಕಳೆದ 2-3 ತಿಂಗಳಿನಿಂದ ಹಿಂದು ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹೇರಿ ಗಡೀಪಾರು ಮಾಡುವ ಕಾರ್ಯಕ್ಕೆ ಕೈಹಾಕಿದೆ. ಇಂಥ ಕೆಲಸವನ್ನು ನಿಲ್ಲಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರಕಾರ ಜವಾಬ್ದಾರಿಯಾಗಲಿದೆ ಎಂದು ಗೋರಕ್ಷಾ ಪ್ರಮುಖ್ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.


ಗುರುವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ನಿಲ್ಲಿಸದಿದ್ದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡುವ ಪರಿಸ್ಥಿತಿ ಬರಲಿದೆ. ಈ ರೀತಿ ಧರ್ಮ ರಕ್ಷಣೆ ಜತೆ ಗೋಹತ್ಯೆ, ಲವ್ ಜಿಹಾದಿ ಮಟ್ಟ ಹಾಕುವ ಕೆಲಸವನ್ನಷ್ಟೇ ನಮ್ಮ ಕಾರ್ಯಕರ್ತರು ಮಾಡುತ್ತಿದ್ದು, ಬೇರೆ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ. ಹಾಗಂತ ಗಡಿಪಾರು ಆದೇಶ ಮಾಡುವುದಾದರೆ ಸಾವಿರ ಹಿಂದೂ ಕಾರ್ಯಕರ್ತರ ಪಟ್ಟಿ ನೀಡುತ್ತೇವೆ. ತಾಕತ್ತಿದ್ದರೆ ಎಲ್ಲರನ್ನೂ ಗಡಿಪಾರು ಮಾಡಲಿ ಎಂದು ಸವಾಲೆಸೆದರು.

ತಮಿಳುನಾಡು: ದರ್ಶನ ಮುಗಿಸಿ ಹೊರಟಿದ್ದ ಭಕ್ತರ ಕಾರು ಬಸ್​​ಗೆ ಡಿಕ್ಕಿ ಸ್ಥಳದಲ್ಲೇ ಏಳು ಮಂದಿ ಸಾವು

Posted by Vidyamaana on 2023-10-25 15:06:16 |

Share: | | | | |


ತಮಿಳುನಾಡು: ದರ್ಶನ ಮುಗಿಸಿ ಹೊರಟಿದ್ದ ಭಕ್ತರ ಕಾರು ಬಸ್​​ಗೆ ಡಿಕ್ಕಿ  ಸ್ಥಳದಲ್ಲೇ ಏಳು ಮಂದಿ ಸಾವು

ತಮಿಳುನಾಡು, ಅ 24: ಅಣ್ಣಾಮಲೈಯರ್​ ದೇವಾಲಯದಲ್ಲಿ ದರ್ಶನ ಮುಗಿಸಿ ಹೊರಟಿದ್ದ ಭಕ್ತರ ಕಾರು ಬಸ್​​ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ.


ಮೃತರೆಲ್ಲರೂ ಅಸ್ಸಾಂ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇವರು ತಿರುವಣ್ಣಾಮಲೈ ಅಣ್ಣಾಮಲೈಯರ್​ ದೇವಸ್ಥಾನದಲ್ಲಿ ದರ್ಶನ ಮುಗಿಸಿ ಹಿಂತಿರುಗುವಾಗ ಅಪಘಾತದ ಸಂಭವಿಸಿದೆ.


ಇಲ್ಲಿನ ಚೆಂಗಾಮ್​ನ ಪಕ್ಕಿರಿಪಾಲಯಂ​ ಬಳಿ ಧರ್ಮಪುರಿಯಿಂದ ತಿರುವಣ್ಣಾಮಲೈಗೆ ತೆರಳುತ್ತಿದ್ದ ಸರ್ಕಾರಿ ಬಸ್​ ಮತ್ತು ತಿರುವಣ್ಣಾಮಲೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಸುಮೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ವೇಳೆ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟಾಟಾ ಸುಮೋದಲ್ಲಿ ಒಟ್ಟು 10 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿದ್ದ 4 ಮಂದಿ ಮತ್ತು ಬಸ್​ನಲ್ಲಿದ್ದ 10 ಮಂದಿ ಸೇರಿ ಒಟ್ಟು 14 ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆ ಮತ್ತು ಚೆಂಗಾಮ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಕಾರಿನಲ್ಲಿದ್ದ ಇಬ್ಬರಲ್ಲಿ ಓರ್ವ ಚೆಂಗಾಮ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಇನ್ನೋರ್ವ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾನರೆ .

ಬಡವರ ಕಣ್ಣೀರು ಒರೆಸುವ ಕೆಲಸ ಮಾಡುವುದೇ ನಿಜವಾದ ಹಿಂದುತ್ವ:ಶಾಸಕ ಅಶೋಕ್ ಕುಮಾರ್ ರೈ

Posted by Vidyamaana on 2024-04-24 04:03:48 |

Share: | | | | |


ಬಡವರ ಕಣ್ಣೀರು ಒರೆಸುವ ಕೆಲಸ ಮಾಡುವುದೇ ನಿಜವಾದ ಹಿಂದುತ್ವ:ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ದೇಶದಲ್ಲಿ ಜಾತಿ ಧರ್ಮಗಳ  ನಡುವೆ ಒಡಕು ಮೂಡಿಸುವ ಬಿಜೆಪಿಯ ಹಿಂದುತ್ವ ದೇಶಕ್ಕೆ ಮಾರಕವಾಗಲಿದೆ. ನಮ್ಮ ನಡುವಿನ ಒಡಕುಗಳ ಕಾರಣದಿಂದ ಇತರ ದೇಶಗಳು ನಮ್ಮ ದೇಶದ ಮೇಲೆ ಆಕ್ರಮಣ ಮಾಡುವ ಸಂದರ್ಭಗಳು ಉಂಟಾಗುವ ಅಪಾಯವಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಸಂಜೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಡವರ ಕಣ್ಣೀರು ಒರೆಸುವ ಕೆಲಸ ಮಾಡುವುದೇ ನಿಜವಾದ ಹಿಂದುತ್ವ. ನಾನು ಓರ್ವ ಹಿಂದೂ ಎಂದು ಎದೆತಟ್ಟಿ ಹೇಳಬಲ್ಲೆ. ನಾನು ೯೦ ಮಂದಿ ಬಡವರಿಗೆ ಮನೆ ನಿರ್ಮಿಸಿ ಕೊಟ್ಟಿದ್ದೇನೆ. ೨೨ ಸಾವಿಕ ಕುಟುಂಬಗಳಿಗೆ ವಿವಿಧ ಬಗೆಯಲ್ಲಿ ಆರ್ಥಿಕ ಸಹಕಾರ ನೀಡಿದ್ದೇನೆ. ಹಲವಾರು ದೇವಾಲಯಗಳ ಜೀರ್ಣೋದ್ಧಾರ ಕಾರ್ಯಕ್ಕೆ ನೇತೃತ್ವ ವಹಿಸಿದ್ದೇನೆ. ನಾನು ಮತ್ತು ಪದ್ಮರಾಜ್ ಪೂಜಾರಿಯನ್ನು

ಮಾ.7 ಪುತ್ತೂರಿನಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಪುತ್ತೂರು ಸಮಾವೇಶ

Posted by Vidyamaana on 2024-03-06 22:32:01 |

Share: | | | | |


ಮಾ.7 ಪುತ್ತೂರಿನಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಪುತ್ತೂರು ಸಮಾವೇಶ

ಪುತ್ತೂರು: ರಾಜ್ಯ ಸರಕಾರದ ಮಹತ್ವಾಕಾಂಕ್ಷಿಯ ಐದು ಗ್ಯಾರಂಟಿ ಯೋಜನೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಫಲಾನುಭವಿಗಳ ಸಮಾವೇಶವು ಮಾ.7ರಂದು ಕಿಲ್ಲೆಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್‌ ಕುಮಾರ್ ರೈ ಶಾಸಕರ ಕಚೇರಿಯಲ್ಲಿ ಮಾ.4ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ರಾಜ್ಯ ಸರಕಾರ ಆಯೋಜಿಸುವ ಫಲಾನುಭವಿಗಳ ಸಮಾವೇಶವು ಇಡೀ ರಾಜ್ಯದಾದ್ಯಂತ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿಯೂ ನಡೆಯಲಿದೆ. ದ.ಕ ಜಿಲ್ಲೆಯಲ್ಲಿ ಮಾ.5ರಿಂದ ಪ್ರಾರಂಭಗೊಂಡು ಮಾ.10ರ ತನಕ ನಡೆಯಲಿದೆ. ಪುತ್ತೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆಗಮಿಸಲಿದ್ದಾರೆ. ರಾಜ್ಯದ ವಿವಿಧ ಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು ಅವರೂ ಭಾಗವಹಿಸುವ ಸಾಧ್ಯತೆಗಳಿವೆ. ಸಮಾವೇಶವು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ.

ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯ ಮೂಲಕ ಮೂಲೆ ಮೂಲೆಗಳಿಂದ ಫಲಾನುಭವಿಗಳು ಆಗಮಿಸಲಿದ್ದು ಸಮಾವೇಶದಲ್ಲಿ ಸುಮಾರು 20,000 ಮಂದಿ ಸೇರುವ ನಿರೀಕ್ಷೆಯಿದೆ.5 ಗ್ಯಾರಂಟಿ ಯೋಜನೆಗಳಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಶಕ್ತಿ ಯೋಜನೆಯ ಮೂಲಕ 81.90ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಇದರ ಒಟ್ಟು ಮೊತ್ತ ರೂ.17.88ಕೋಟಿ ಆಗಿದ್ದು ಅದನ್ನು ಸರಕಾರದಿಂದ ಸಾರಿಗೆ ನಿಗಮಕ್ಕೆ ಪಾವತಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ 59,727 ಮಂದಿ, ಗೃಹಜ್ಯೋತಿಯಲ್ಲಿ 30,000 ಮಂದಿ, ಅನ್ನಭಾಗ್ಯದಲ್ಲಿ 24,948 ಮಂದಿ, ಅಂತ್ಯೋದಯದಲ್ಲಿ 2,944 ಹಾಗೂ ಇತ್ತೀಚೆಗೆ ಆರಂಭಗೊಂಡಿರುವ ಯುವನಿಧಿಯಲ್ಲಿ 356 ಮಂದಿ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಲ್ಲಿ ಶೇ.98 ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ತಾಂತ್ರಿಕ ತೊಂದರೆಗಳಿಂದ ಕೆಲವು ಮಂದಿಗೆ ಬಾಕಿಯಿದೆ. ಫಲಾನುಭವಿಗಳ ಸಮಾವೇಶದಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳಿಗೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಾಗುತ್ತಿದ್ದು ಫಲಾನುಭವಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಚಾರ ವಿಮರ್ಶೆ ಮಾಡಲಾಗುವುದು ಎಂದರು.



Leave a Comment: