ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಎಸ್ ಡಿ ಪಿ ಐ ಕುರಿಯ ಬೂತ್ ಸಮೀತಿ ವತಿಯಿಂದ ರಂಝಾನ್ ಕಿಟ್ ವಿತರಣೆ

Posted by Vidyamaana on 2023-03-24 16:34:11 |

Share: | | | | |


ಎಸ್ ಡಿ ಪಿ ಐ ಕುರಿಯ ಬೂತ್ ಸಮೀತಿ ವತಿಯಿಂದ ರಂಝಾನ್ ಕಿಟ್ ವಿತರಣೆ

ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕುರಿಯ ಬೂತ್ ಸಮೀತಿ ವತಿಯಿಂದ ವರ್ಷಂಪ್ರತಿ ರಂಝಾನ್ ತಿಂಗಳಲ್ಲಿ ದಾನಿಗಳ‌ ನೆರವಿನಿಂದ ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ಗಳನ್ನು ನೀಡುತ್ತಿದ್ದು ಅದೇ ರೀತಿ ಈ ಬಾರಿ ಕೂಡ ಮಾ 24 ರಂದು ಶುಕ್ರವಾರ ಸುಮಾರು 120 ರಷ್ಟು ಆಹಾರ ಕಿಟ್ ಗಳನ್ನು ನೀಡಲಾಯಿತು..

 ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ SDPI ಪುತ್ತೂರು ವಿಧಾನಸಭಾ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಹಾಗೂ SDPI ಹಿರಿಯ ನಾಯಕರಾದ PBK ಮಹಮ್ಮದ್ ಹಾಗೂ ಆರ್ಯಾಪು ಚುನಾವಣಾ ಉಸ್ತುವಾರಿಯಾದ ಅಶ್ರಫ್ ಸಂಟ್ಯಾರ್ ರವರು ಆಗಮಿಸಿ, ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು...

ಹಾಜಿ ಇಬ್ರಾಹಿಂ ಸಾಗರ್ ಮಾತನಾಡಿ ಕುರಿಯ SDPI ಯ ಯುವಕರ ಈ ಉತ್ತಮ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.ಇಂತಹ ಮಾದರಿ ಕಾರ್ಯಗಳು ಹಾಗೂ ಸಾಮಾಜಿಕ ಸೇವೆಗಳು ತಾಲೂಕಿನ ‌ಪ್ರತಿಯೊಂದು ಕಡೆಗಳಲ್ಲಿ ಕೂಡ ನಡೆಯಬೇಕಿದೆ ಕುರಿಯದ ಎಸ್ಡಿಪಿಐ ಸದಸ್ಯರಿಗೆ ಹಾಗೂ ಕಿಟ್ ನೀಡಲು ಸಹಕಾರ ನೀಡಿದ ದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು...

ಈ ಸಂದರ್ಭದಲ್ಲಿ ಸ್ಥಳೀಯ ಎಸ್ಡಿಪಿಐ ಕಾರ್ಯಕರ್ತರಾದ ಅಶ್ರಫ್,ಝೈದ್, ಜಬ್ಬಾರ್ ಕುರಿಯ, ಜಬ್ಬಾರ್ ಅಜ್ಜಿಕಟ್ಟೆ, ಸಾದಿಕ್ ಕುರಿಯ , ಶಾಕಿರ್ ಮುಂಡೂರು,ನಿಝಾಂ ಪಂಜಳ, ಫಾರೂಕ್ ಎಸ್,,ರವುಫ್ ಕುರಿಯ,ಪವಾಝ್ ಕುರಿಯ  ಹಾಗೂ ಪಕ್ಷದ ಅಭಿಮಾನಿಗಳು ಹಾಗೂ, ಹಿತೈಷಿಗಳು ಉಪಸ್ಥಿತರಿದ್ದರು...

ಮಂಜನಾಡಿ ಯುವಕನಿಗೆ ಒಲಿದ ಕೇರಳದ 25 ಕೋಟಿ ಲಾಟರಿ!

Posted by Vidyamaana on 2023-09-22 12:30:15 |

Share: | | | | |


ಮಂಜನಾಡಿ ಯುವಕನಿಗೆ ಒಲಿದ ಕೇರಳದ 25 ಕೋಟಿ ಲಾಟರಿ!

ಉಳ್ಳಾಲ, ಸೆ.21: ಮಂಜನಾಡಿ ನಿವಾಸಿ ಯುವಕನಿಗೆ ಕೇರಳದ 25 ಕೋಟಿ ರೂ. ಲಾಟರಿ  ಒಲಿದಿರುವ ಸುದ್ದಿ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಯುವಕನಿಗೆ ಅಭಿನಂದನೆ ಹೇಳಿ ಸ್ನೇಹಿತರು ಫೋನ್ ಮಾಡಲೆತ್ನಿಸಿದಾಗ ಅಸಲಿಯತ್ತು ಹೊರಬಿದ್ದಿದೆ. 


ಮಂಜನಾಡಿ ಮೊಂಟೆಪದವು ನಿವಾಸಿ ಆಸೀಫ್ ಎಂಬವರಿಗೆ ಸೆ.20ರಂದು ಡ್ರಾಗೊಂಡಿದ್ದ 25 ಕೋಟಿ ಲಾಟರಿ ಒಲಿದಿರುವುದಾಗಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಹರಿದಾಡಿತ್ತು.‌ ಬೆಂಗಳೂರಿನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿರುವ ಆಸೀಫ್, ನಿನ್ನೆ ಊರಿಗೆ ಕಾರಿನಲ್ಲಿ ಬರುತ್ತಿದ್ದಾಗ ಮೊಬೈಲ್ ಗೆ ಕರೆಗಳ ಮೇಲೆ ಕರೆಗಳು ಬರುತ್ತಲೇ ಇತ್ತು. ಕರೆ ಸ್ವೀಕರಿಸುತ್ತಿದ್ದಂತೆ ಶುಭಾಶಯಗಳ ಸರಮಾಲೆಯೇ ಬರುತಿತ್ತು. ಹೆಚ್ಚು ವಿಚಾರಿಸುತ್ತಿದ್ದಂತೆಯೇ, ರೂ. 25 ಕೋಟಿ ಲಾಟರಿ ಟಿಕೆಟ್ ಒಲಿದಿರುವುದಾಗಿ ಸ್ನೇಹಿತರೊಬ್ಬರು ತಿಳಿಸಿದ್ದಾರೆ‌. 


ಕೇರಳ ಲಾಟರಿಯನ್ನೇ ಖರೀದಿಸದ ನನಗೆ ಹೇಗೆ 25 ಕೋಟಿ ಒಲಿಯುವುದು ಎಂದು ತನ್ನಷ್ಟಕ್ಕೆ ಆಸಿಫ್ ಮೌನವಾಗಿದ್ದರು. ಹೀಗೆ ರಾತ್ರಿ ವರೆಗೂ ಕರೆಗಳು ನಿರಂತರವಾಗಿ ಬರುತ್ತಲೇ ಇದ್ದವು. ಇವರ ಮೌನದಿಂದಾಗಿ ಕೋಟಿ ಗೆದ್ದಿರುವುದು ಖಾತ್ರಿಯಾದ ಜನರು ಮೆಸೇಜ್, ಫೋನ್ ಮಾಡುತ್ತಲೇ ಇದ್ದರು. ನಿಜವಾಗಿಯೂ ಲಾಟರಿ ಒಲಿಯುತ್ತಿದ್ದರೆ ಮೊಬೈಲ್ ಸ್ವಿಚ್ ಆಫ್ ಮಾಡಿ ಪೊಲೀಸ್ ಠಾಣೆಯಲ್ಲಿ ಕೂರಬೇಕಿತ್ತು. 


ಈ ಕುರಿತು ಆಸೀಫ್ ಸ್ನೇಹಿತರಲ್ಲಿ ವಿಚಾರಿಸಿದಾಗ, ವಾಟ್ಸ್ ಆ್ಯಪ್ ಲಿಂಕ್ ಬರುತ್ತಿದ್ದು, ಅದನ್ನು ಬಳಸಿ ತಮ್ಮ ಸ್ನೇಹಿತರ ಭಾವಚಿತ್ರ ಹಾಗೂ ಹೆಸರನ್ನು ಹಾಕಿ ಮಜಾ ತೆಗೆದುಕೊಳ್ಳುವ ಪರಿಪಾಠ ನಡೆಯುತ್ತಿರುವುದು ತಿಳಿದುಬಂದಿದೆ. ಈ ಹಿಂದೆಯೂ ಇಂತಹದ್ದೇ ಪ್ರಕರಣ ನಡೆದಿರುವ ಬಗ್ಗೆ ಕೆಲವರು ಹೇಳುತ್ತಿದ್ದಾರೆ.

ಮಂಗಳೂರು ಕಪಿತಾನಿಯೋ ಶಾಲೆಯ ಮತಗಟ್ಟೆ ಹೊರಗಡೆ ಕಮಲ – ಖಾಕಿ ಜಟಾಪಟಿ!

Posted by Vidyamaana on 2024-04-26 11:11:36 |

Share: | | | | |


ಮಂಗಳೂರು ಕಪಿತಾನಿಯೋ ಶಾಲೆಯ ಮತಗಟ್ಟೆ ಹೊರಗಡೆ ಕಮಲ – ಖಾಕಿ ಜಟಾಪಟಿ!

ಮಂಗಳೂರು, ಎ.25: ಕಪಿತಾನಿಯೋ ಶಾಲೆಯ ಮತಗಟ್ಟೆ ಹೊರಗಡೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ. 


ಮತಗಟ್ಟೆ ಹೊರಗೆ ಮಾಧ್ಯಮಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪ್ರತಿಕ್ರಿಯೆ ನೀಡುತ್ತಿದ್ದಾಗ, ಅಲ್ಲಿ ಒಂದಷ್ಟು ಗುಂಪು ಸೇರಿದ್ದರು. ಈ ವೇಳೆ, ಬಿಜೆಪಿ ಕಾರ್ಯಕರ್ತನೊಬ್ಬ ಪ್ರಶ್ನೆ ಮಾಡಲು ಬಂದಿದ್ದಾನೆ. ಮಂಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ಟಿಡಿ ನಾಗರಾಜ್ ಬಳಿ ವಾಯ್ಸ್ ರೈಸ್ ಮಾಡಿ ಮಾತನಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಇನ್ಸ್ ಪೆಕ್ಟರ್, ಬಿಜೆಪಿ ಕಾರ್ಯಕರ್ತನ ಕಾಲರ್ ಹಿಡಿದು ಎಳೆದೊಯ್ದಿದ್ದಾರೆ.

ಕಡಬ : ಬೈಕ್ ಹಾಗೂ ಬಸ್ ನಡುವೆ ಅಪಘಾತ : ದ್ವಿಚಕ್ರ ವಾಹನ ಸವಾರ ಮೃತ್ಯು

Posted by Vidyamaana on 2024-02-19 21:09:04 |

Share: | | | | |


ಕಡಬ : ಬೈಕ್ ಹಾಗೂ ಬಸ್ ನಡುವೆ ಅಪಘಾತ : ದ್ವಿಚಕ್ರ ವಾಹನ ಸವಾರ ಮೃತ್ಯು

ಕಡಬ : ಬೈಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ನಡೆದಿದೆ.

ಮೃತ ಬೈಕ್ ಸವಾರನನ್ನು ಕೊಂಬಾರು ಮಣಿಭಾಂಡ ತೇರೆಬೀದಿ ನಿವಾಸಿ ನೆಟ್ಟಣದಲ್ಲಿ ಮೆಕ್ಯಾನಿಕ್ ಆಗಿದ್ದ ವಾಸುದೇವ ಗೌಡ ಎಂದು ಗುರುತಿಸಲಾಗಿದೆ.

ಕೆಎಸ್ಸಾರ್ಟಿಸಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಎದುರುನಿಂದ ಬಂದ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ವಾಸುದೇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಸಹೋದರರನ್ನು ಅಗಲಿದ್ದಾರೆ.

ರೈಲೇ ರೈಲು ಬಿಟ್ಟಾಗ.. ಚಾಲಕನನ್ನೇ ಬಿಟ್ಟು ಹೋದ ರೈಲು

Posted by Vidyamaana on 2024-02-26 14:19:01 |

Share: | | | | |


ರೈಲೇ ರೈಲು ಬಿಟ್ಟಾಗ.. ಚಾಲಕನನ್ನೇ ಬಿಟ್ಟು ಹೋದ ರೈಲು

ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಅಚ್ಚರಿ ಘಟನೆಯೊಂದು ನಡೆದಿದ್ದು, ಚಾಲಕನಿಲ್ಲದೇ ರೈಲು ಪಂಜಾಬ್ ಗೆ ಚಲಿಸಿದ ಘಟನೆ ನಡೆದಿದೆ.

ಚಾಲಕ ಹ್ಯಾಂಡ್ ಬ್ರೇಕ್ ಹಾಕದೇ ಕೆಳಗೆ ಇಳಿದ ಪರಿಣಾಮ ರೈಲು ಬರೋಬ್ಬರಿ 70 ಕಿಮೀ ಪ್ರಯಾಣಿಸಿದೆ. ನಂತರ ಸಿಬ್ಬಂದಿಗಳು ಮರಳಿನ ಮೂಟೆಯನ್ನು ಅಡ್ಡಹಾಕಿ ರೈಲು ನಿಲ್ಲಿಸಿದ್ದಾರೆ.


ಜಮ್ಮುವಿನ ಕಥುವಾದಿಂದ ಸುಮಾರು 70 ಕಿ.ಮೀ ಪ್ರಯಾಣಿಸಿದ ನಂತರ, ಭಾರತೀಯ ರೈಲ್ವೆಯ ಸರಕು ರೈಲು ಪಂಜಾಬ್ ಹೋಶಿಯಾರ್ಪುರದ ದಸುಹಾದ ಉಚಿ ಬಸ್ಸಿಯನ್ನು ತಲುಪಿತು. ನಂತರ ಹೇಗೋ ಈ ರೈಲನ್ನು ನಿಲ್ಲಿಸಲಾಯಿತು. ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ.


ಜಮ್ಮುವಿನಿಂದ ವಂಜಾಬ್ಗೆ ಚಲಿಸುತ್ತಿದ್ದರೈಲು,ಚಾಲಕನ ಬದಲಾವಣೆಗಾಗಿ ಜಮ್ಮುವಿನ ಕರುವಾನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 7.25ರ ಸುಮಾರಿಗೆ ನಿಂತಿತ್ತು. ರೈಲು ನಿಲ್ಲಿಸಿದ ಚಾಲಕ ಅದರಿಂದ ಕೆಳಗಿಳಿಯುವ ವೇಳೆಗೆ ಹ್ಯಾಂಡ್ ಬ್ರೇಕ್ ಹಾಕಲು ಮರೆತುಬಿಟ್ಟಿದ್ದಾನೆ. ಪರಿಣಾಮ ರೈಲು ಚಲಿಸಲು ಪ್ರಾರಂಭಿಸಿದೆ. ಈ ವೇಳೆ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಯಾರೂ ಕೂಡ ರೈಲಿನಲ್ಲಿ ಇರಲಿಲ್ಲ, ಬಳಿಕ 9 ಗಂಟೆ ವೇಳೆ ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಮರಳಿನ ಚೀಲಗಳನ್ನು ಇಟ್ಟು ರೈಲನ್ನು ನಿಲ್ಲಿಸಲಾಗಿದೆ.


ಇದು ಆತಂಕಕಾರಿ ಘಟನೆಯಾಗಿದ್ದು, ಘಟನೆ ಬಗ್ಗೆ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ. ರೈಲ್ವೆ ಸುರಕ್ಷತಾ ಬಗ್ಗೆ ಕಳವಳ ಹುಟ್ಟುಹಾಕುತ್ತದೆ ಪ್ರಯಾಣಿಕರು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಚಾಲಕನನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ .

ಬೆಳ್ತಂಗಡಿ : ಉಯ್ಯಾಲೆಯಲ್ಲಿ ಆಡುವಾಗ ಕುತ್ತಿಗೆ ಸಿಲುಕಿ ವಿದ್ಯಾರ್ಥಿ ಶ್ರೀಷಾ ಮೃತ್ಯು

Posted by Vidyamaana on 2023-07-16 15:26:15 |

Share: | | | | |


ಬೆಳ್ತಂಗಡಿ : ಉಯ್ಯಾಲೆಯಲ್ಲಿ ಆಡುವಾಗ ಕುತ್ತಿಗೆ ಸಿಲುಕಿ ವಿದ್ಯಾರ್ಥಿ ಶ್ರೀಷಾ  ಮೃತ್ಯು

ಬೆಳ್ತಂಗಡಿ : ರಜೆ ಇದ್ದ ಕಾರಣ ಮನೆಯಲ್ಲಿ ಸಾರಿಯಲ್ಲಿ ಮಾಡಿದ್ದ ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ಸಾವನ್ನಪ್ಪಿದ ಘಟನೆ ದಿಡುಪೆಯಲ್ಲಿ ನಡೆದಿದೆ.


ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಮಂಟಮೆ ನಿವಾಸಿ ಬಾಲಕೃಷ್ಣ ಎಂಬವರ ಮೊದಲ ಮಗ 8 ನೇ ತರಗತಿ ವಿದ್ಯಾರ್ಥಿ ಶ್ರೀಷಾ (14)  ಮನೆಯ ಅಂಗಳದಲ್ಲಿ ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಸಿಲುಕಿ ನೆಲಕ್ಕೆ ಬಿದ್ದಿದ್ದು ತಂಗಿ ನೋಡಿ ತಂದೆಗೆ ಮಾಹಿತಿ ನೀಡಿದ್ದು ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ ಘಟನೆ ಜುಲೈ 16 ರಂದು ಸಂಜೆ ನಡೆದಿದೆ.

ಬಾಲಕನ ಶವ ಶವಪರೀಕ್ಷೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು. ಘಟನೆ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಧನರಾಜ್ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.



Leave a Comment: